ಅಭಿಪ್ರಾಯ / ಸಲಹೆಗಳು

ರಾಘವೇಂದ್ರ ನಗರ ಪೊಲೀಸ ಠಾಣೆ :- ದಿನಾಂಕ: 06-03-2023 ರಂದು ಬೆಳಿಗ್ಗೆ 11:30 ಗಂಟೆಯಿಂದ ಮದ್ಯಾಹ್ನ 12:00 ಗಂಟೆಯ ಮದ್ಯದ ಅವಧಿಯಲ್ಲಿ ಎರಡು ಜನ ಅಪರಿಚಿತ ಕಳ್ಳರು ನಮ್ಮ ಮನೆಗೆ ಅತಿಕ್ರಮ ಪ್ರವೇಶ ಮಾಡಿ ಮನೆಯಲ್ಲಿಟ್ಟಿರುವ 1) 50 ಗ್ರಾಂ ಎರಡು ಬಂಗಾರ ಪಾಟಲಿಗಳು ಅಂ||ಕಿ|| 75000/-ರೂ 2) 35 ಗ್ರಾಂ ಬಂಗಾರದ ಮೂರು ಎಳೆ ಸರ ಚಪಲ್ಲಾರ ಅ||ಕಿ||50000/-ರೂ 3) 20 ಗ್ರಾಂ ಬಂಗಾರದ ಎರಡೆಳೆ ಚಪಲಾರ ಅ||ಕಿ||30000/-ರೂ 4) 45 ಗ್ರಾಂ ಬಂಗಾರದ ಎರಡೆಳೆ ಸರ ಅ||ಕಿ||67500/-ರೂ 5) 10 ಗ್ರಾಂ ಬಂಗಾರದ ಒಂದು ಲಾಕೇಟ್ ಅ||ಕಿ||15000/-ರೂ 6) ಒಂದು ತೊಲೆಯ 4 ಬಂಗಾರ  ಸುತ್ತುಂಗುರಗಳು 40ಗ್ರಾಂ ಅ||ಕಿ||60000/-ರೂ 7) 3 ಗ್ರಾಂ ಬಂಗಾರ ಒಂದು ವಂಕಿ ಉಂಗುರ ಅ||ಕಿ||8000/-ರೂ  8) 6 ಗ್ರಾಂ ಬಂಗಾರದ ಎರಡು ಹರಳಿನ ಕಿವಿಯೋಲೆ ಅ||ಕಿ||10,000/-ರೂ ಹೀಗೆ ಒಟ್ಟು 209 ಗ್ರಾಂ ಬಂಗಾರದ ಆಭರಣಗಳು ಅ||ಕಿ||3,15,500/-ನೇದ್ದು ಹಾಗೂ 50,000/-ರೂ ನಗದು ಇರಲಿಲ್ಲಾ. ಹೀಗೆ ಒಟ್ಟು 3,65,500/-ರೂ ಬೆಲೆ ಬಾಳುವ ಬಂಗಾರ ಮತ್ತು ನಗದು ಹಣವನ್ನು ಎರಡು ಜನ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಎಂದು ಫಿರ್ಯಾದಿ ಕೊಟ್ಟ ಹೇಳಿಕೆ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

ಎಂ.ಬಿ. ನಗರ ಪೊಲೀಸ ಠಾಣೆ :- ದಿನಾಂಕ: 04-03-2023 ರಂದು ಮಧ್ಯಹ್ನ 1:00 ಗಂಟೆಯಿಂದ ದಿನಾಂಕ: 06-03-2023 ರಂದು ಬೆಳಿಗ್ಗೆ 08:00 ಗಂಟೆಯ ಮದ್ಯದ ಅವಧಿಯಲ್ಲಿ ಮನೆಯಲ್ಲಿ ಇರದೇ ಇರುವಾಗ ಯಾರೋ ಕಳ್ಳರು ಮನೆಯ ಬಾಗಿಲಿನ ಇನ್ನರ ಲಾಕ್ ಮುರಿದು ಒಳಗೆ ಪ್ರವೇಶ ಮಾಡಿ ಬೆಡರೂಮದಲ್ಲಿರುವ ಅಲಮಾರಿಯನ್ನು ಯಾವುದೋ ವಸ್ತವಿನಿಂದ ಮುರಿದು ಅದರಲ್ಲಿದ್ದ 25 ಗ್ರಾಂ ಬಂಗಾರದ ಲಾಕೇಟ ಅ.ಕಿ. 1,12,500/- ಹಾಗು ಒಂದು ಸಾವಿರ ಗ್ರಾಮ ಬೆಳ್ಳಿಯ ಒಂದು ಪ್ಲೇಟ ಮತ್ತು ಎರಡು ಗ್ಲಾಸಗಳು ಅ.ಕಿ. 50,000/- ನೆದ್ದು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಎಂದು ಫಿರ್ಯಾದಿ ಕೊಟ್ಟ ಹೇಳಿಕೆ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

ಸ್ಟೇಷನ್‌ ಬಜಾರ ಪೊಲೀಸ ಠಾಣೆ :- ದಿನಾಂಕ: 17-02-2023 ರಂದು ಕಲಬುರಗಿ ನಗರದ ವೆಂಕಟೇಶ ನಗರದಲ್ಲಿರುವ ನನ್ನ ಮಗನಾದ ಆನಂದ ರವರ ಹತ್ತಿರ ಬಂದಿರುತ್ತೇನೆ. ದಿನಾಂಕ: 23-02-2023 ರಂದು ನನ್ನ ಮಗನಾದ ಆನಂದ ರವರು ಬೆಂಗಳೂರಿಗೆ ಹೋಗುವ ಸಲ್ಲುವಾಗಿ ಅವನಿಗೆ ನಾನು ರೇಲ್ವೆ ನಿಲ್ದಾಣಕ್ಕೆ ಬಿಟ್ಟು ಬರಲು ಬಂದಿರುತ್ತೇನೆ. ನಂತರ ನಾನು ನನ್ನ ಮಗನಿಗೆ ರೇಲ್ವೆ ನಿಲ್ದಾಣಕ್ಕೆ ರಾತ್ರಿ ೦೮-೩೦ ಗಂಟೆಗೆ ಬಿಟ್ಟು  ನಾನು ವಾಪಸ್ಸು ಮನೆಗೆ ಹೋಗುವಾಗ ಸರ್ದಾರ ವಲ್ಲಾಬಾಯಿ ಪಟೇಲ್ ವೃತ್ತದ ಹತ್ತಿರ ಇರುವ ಪೂಜಾ ವೈನ್ ಶಾಫ್ ಕ್ಯಾಸ್ ಕೌಂಟರ್ ಹತ್ತಿರ ಹೋಗಿ ಸದರಿ ವೈನ್ ಶಾಫ್ ನಲ್ಲಿ  ರಾತ್ರಿ ೦೮-೫೦ ಗಂಟೆಗೆ ಮದ್ಯಪಾನ ಸೇವನೆ ಮಾಡಲು ಹೋಗಿರುತ್ತೇನೆ. ನಾನು ಮದ್ಯಪಾನ ಮಾಡಿ ರಾತ್ರಿ ೦೯-೪೦ ಗಂಟೆಗೆ ಹೋರಗೆ ಬಂದಿರುತ್ತೇನೆ. ನಾನು ವಿಪರೀತ ಮದ್ಯಪಾನ ಮಾಡಿದ್ದರಿಂದ ನಾನು ಮನೆಗೆ ಹೋಗದೆ ಸ್ಟೇಷನ್ ಮಸೀಧಿ ಕಡೆಗೆ ಬಂದು ಅತಿಥಿ ಲಾಡ್ಜ್ ಮುಂದೆ ಪಾದಿಚಾರಿಗಳ ರಸ್ತೆ ಮೇಲೆ ಪ್ರಜ್ಞೆ ತಪ್ಪಿ ಬಿದ್ದಿರುತ್ತೇನೆ. ನಂತರ ದಿನಾಂಕ: ೨೪-೦೨-೨೦೨೩ ರಂದು ಬೆಳಗಿನ ಜಾವ ೦೫-೩೦ ಗಂಟೆಯಲ್ಲಿ ನನ್ನ ಸೊಸೆಯಾದ ಶ್ರೀಮತಿ ಸುಸಮ್ಮಾ ರವರು ನನ್ನನ್ನು ಹುಡುಕಿಕೊಂಡು ಬಂದು ನನಗೆ ಆಟೋದಲ್ಲಿ ಕರೆದುಕೊಂಡು ಮನೆಗೆ ಹೋಗಿರುತ್ತಾರೆ. ನಂತರ ನನ್ನ ಕೈಯಲ್ಲಿದ್ದ ೧) ೫ ಗ್ರಾಂ ಬಂಗಾರದ ಉಂಗುರ ಅ,ಕಿ ೨೫೦೦೦/-ರೂ ೨) ೫ ಗ್ರಾಂ ಬಂಗಾರದ ಉಂಗುರ ಅ,ಕಿ ೨೫೦೦೦/-ರೂ ಹಾಗೂ ೩) ಕತ್ತಿನಲ್ಲಿರುವ ೧೫ ಗ್ರಾಂ ಬಂಗಾರ ಚೈನ್ ಅ,ಕಿ ೬೦೦೦೦/-ರೂ ಮತ್ತು ನನ್ನ ಜೇಬಿನಲ್ಲಿದ್ದ ೪) ನಗದು ಹಣ ೧೦೦೦೦/-ರೂ ೫) ಕೈಯಲ್ಲಿದ್ದ ಟೈಟಾನ ಗಡಿಯಾರ ಅ.ಕಿ ೨೦೦೦/-ರೂ ೬) ಸ್ಯಾಮ್ ಸಂಗ್ ಕಂಪನಿ ಕೀ ಪಾಡ್ ಮೊಬೈಲ್ ಪೋನ್ ಅ,ಕಿ ೧೨೦೦/-ರೂ ಹೀಗೆ ಒಟ್ಟು 1,23,200/-ರೂ ಬೆಲೆ ಬಾಳೂವುದನ್ನು ಇರಲಿಲ್ಲ. ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಎಂದು ಫಿರ್ಯಾದಿ ಕೊಟ್ಟ ಹೇಳಿಕೆ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

ಸ್ಟೇಷನ್‌ ಬಜಾರ ಪೊಲೀಸ ಠಾಣೆ :- ಶ್ರೀ ಪಾರುಲ್ ನಾರ್ದಾ ಗಂಡ ಸೈಯದ ಮುಸ್ತಾಕ್ ಸೈಯಿದ್ ಉ|| ವೈದ್ಯಕೀಯ ಸಂಶೋಧಕರು ಸಾ|| ಓರಿಯಂಟಲ್ ಲಾಡ್ಜ್ ಹಿಂದುಗಡೆ ಸ್ಟೇಷನ ಬಜಾರ ಕಲಬುರಗಿ ಇವರು ಸಲ್ಲಿಸಿದ ಖಾಸಗಿ ದೂರು ಅರ್ಜಿ ಸಂಖ್ಯೆ 68/2023 ನೇದ್ದರ ಸಾರಾಂಶವೆನೆಂದರೆ, ಫಿರ್ಯಾದಿದಾರರು ಸ್ಟೇಷನ ಬಜಾರ ಏರಿಯಾದಲ್ಲಿರುವ ಮನೆ ನಂ.1-512 ವಿಸ್ತೀರ್ಣ 392 ಚ.ಕೀ.ಮಿ ನೇದ್ದನ್ನು ದಿನಾಂಕ: 29-12-2022 ರಂದು ಮೂಲ ಮಾಲೀಕರಾದ ಶ್ರೀಮತಿ ರೂಹಿ ಫಾತೀಮಾ ಗಂಡ ಸೈಯ್ಯದ ಖಾಲೀದ ಅಜೀಜ ಇವರಿಂದ ಉಪನೊಂದಣಾಧಿಕಾರಿಗಳ ಕಛೇರಿಯಲ್ಲಿ ನೊಂದಣೀ ದಸ್ತಾವೇಜು ಸಂಖ್ಯೆ‌ 18261/2022-23 ಪ್ರಕಾರ ಖರಿದಿಸಿದ್ದು ಸದರಿ ಆಸ್ತಿಯ ಮಾಲೀಕರು ಫಿರ್ಯಾದಿದಾರರು ಇರುತ್ತಾರೆ. ಖರಿದೀಸಿದ ಆಸ್ತಿಯನ್ನು ಪುನರನಿರ್ಮಾಣ ಮಾಡುವ ಸಲುವಾಗಿ ಕಾರ್ಮಿಕರಿಗೆ ಸಂಬಳ ಕೊಡುವುದಕ್ಕಾಗಿ 50.000/- ರೂ.ಗಳನ್ನು ಅಂಗಡಿಯ ಒಳಗಡೆ ಇಟ್ಟಿದ್ದು ಇರುತ್ತದೆ. ಬಿಲ್ಡಿಂಗ್ ನಲ್ಲಿ ಲೀಫ್ಟ್ ಕೂಡಿಸುವ ಉದ್ದೇಶದಿಂದ ಅಂದಾಜು 9,00,000/- ರೂಪಾಯಿ ಬೆಲೆಬಾಳುವ ಲೀಫ್ಟ್ ಮಶೀನರಿ ಸಾಮಾನುಗಳನ್ನು ಬಿಲ್ಡಿಂಗ್ ಒಳಗಡೆ ಇಟ್ಟಿದ್ದು ಇರುತ್ತದೆ. ದಿನಾಂಕ: 28.01.2023 ರಂದು ರಾತ್ರಿ 12.40 ಗಂಟೆಗೆ ಫಿರ್ಯಾದಿದಾರರ ಮನೆಯ ಅಕ್ಕ-ಪಕ್ಕದವರು ಫೋನ ಮಾಡಿ ಕೀಲಿ ಮುರಿಯುವುದನ್ನು ತಿಳಿಸಿದ್ದಲ್ಲದೇ ಫಿರ್ಯಾದಿದಾರರು ಮನೆಯಲ್ಲಿದ್ದಾಗ ಅವರಿಗೂ ಕೂಡಾ ಮೇಲ್ಕಂಡ ಅಂಗಡಿಯ ಕೀಲಿ ಮುರಿಯುವ ಶಬ್ದ ಕೇಳಿ ಫಿರ್ಯಾದಿ ಮತ್ತು ಅವಳ ಗಂಡ ಸೈಯ್ಯದ ಮುಸ್ತಾಖ ಇಬ್ಬರು ಕೂಡಿ ಅಂಗಡಿಯ ಹತ್ತಿರ ಹೋಗಿ ನೋಡಲು ಕೀಲಿ ಮುರಿದಿದ್ದನ್ನು ಕಂಡು ಒಳಗೆ ಹೊಗುತ್ತಿದ್ದಂತೆ ಅಲ್ಲಿ ನಿಂತಿರುವ ಅಪಾದಿತರಾದ 1) ಸೈಯ್ಯದ ಹಮೀದ ನೀಸಾರ ತಂದೆ ಸೈಯ್ಯದ ಗುಲಾಮ ಹಬೀಬ 2) ಸೈಯ್ಯದ ಸೋಹೆಲ್ ಖುಸ್ರೋ ತಂದೆ ಸೈಯ್ಯದ ಗುಲಾಮ ಹಬೀಬ ಇಬ್ಬರು ಸಾ|| ಓರಿಯಂಟಲ್ ಲಾಡ್ಜ್ ಹಿಂದುಗಡೆ ಸ್ಟೇಷನ ಏರಿಯಾ ಕಲಬುರಗಿ 3) ಮಹ್ಮದ ಇರ್ಮಾನ್ ತಂದೆ ಅಬ್ದುಲ್ ಗಫಾರ್  4) ಮಹ್ಮದ ಇರ್ಮಾನ್ ತಂದೆ ಅಬ್ದುಲ್ ಗಫಾರ್  ಸಂಗಡ ನ್ನೂ 4-5 ಜನರು ಕೂಡಿ ನನ್ನ ಗಂಡನಿಗೆ ಗನ್ ಇಟ್ಟು ಇನಕೋ ಜಾನ್ ಸೇ ಮಾರದೋ ಇನಕೋ ಖಲ್ಲಾಸ ಕರದೋ ಅಂತಾ ಜೀವ ಬೇದರಿಕೆ ಹಾಕಿದಾಗ ಫಿರ್ಯಾದಿ ಮತ್ತು ಅವರ ಗಂಡ ಓಡಿಕೊಂಡು ಮನೆಗೆ ಹೋಗಿ ಜೀವ ಉಳಿಸಿಕೊಂಡಿರುತ್ತಾರೆ. ಅದೇ ದಿನ ಬೆಳಿಗ್ಗೆ 9 ಗಂಟೆಗೆ ಅಂಗಡಿಯ ಹಿಂಭಾಗ ತೆಗೆದು ಒಳಗಡೆ ಹೋಗಿ ನೊಡಲು ಅಲ್ಲಿ ಇಟ್ಟಿರುವ 50,000/- ರೂಗಳನ್ನು ತೆಗೆದುಕೊಂಡು ಹೋಗಿದ್ದಲ್ಲದೇ ಲೀಫ್ಟ್ ಸಲುವಾಗಿ ಇಟ್ಟಿರುವ ಎಲೆಕ್ಟ್ರಾನೀಕ್ ಸಾಮಾನುಗಳನ್ನು ಅಂದಾಜು 75,000/- ರೂ.ಗಳ ಮೌಲ್ಯದ ವಸ್ತುಗಳನ್ನು ಕಳುವು ಮಾಡಿಕೊಂಡು ಹೋಗಿರುತ್ತಾರೆ ಎಂದು ಫಿರ್ಯಾದಿ ಕೊಟ್ಟ ಅರ್ಜಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

ಸಂಚಾರಿ ಪೊಲೀಸ ಠಾಣೆ- 1 :- ದಿನಾಂಕ: 06-03-2023 ರಂದು ಮದ್ಯಾಹ್ನ 02:10 ಪಿ.ಎಂ ಕ್ಕೆ  ಶ್ರೀ. ಗುರುರಾಜ ತಂದೆ  ಶಂಕರ ಕಟ್ಟೊಳ್ಳಿ, ಸಾ: ಖಾಜಾ ಕೋಟನೂರ,ತಾ:ಜಿ:ಕಲಬುರಗಿ ಇವರು ಖುದ್ದಾಗಿ ಠಾಣೆಗೆ ಹಾಜರಾಗಿ ಗುರುರಾಜ ತಂದೆ ಪ್ರಭುಲಿಂಗ ಇವರ ಒಂದು ಕನ್ನಡದಲ್ಲಿ ಟೈಪ್ ಮಾಡಿಸಿ ಸಹಿ ಮಾಡಿದ ಫಿರ್ಯಾದಿ ಅರ್ಜಿಯನ್ನು ಹಾಜರುಪಡಿಸಿದ್ದು ಸದರಿ ಫಿರ್ಯಾದಿ ಅರ್ಜಿ ಸಾರಾಂಶವೇನೆಂದರೆ ನಾನು ಗುರುರಾಜ ತಂದೆ ಪ್ರಭುಲಿಂಗ್ ವಯ: 38 ವರ್ಷ, ಜಾ:ಮರಾಠ ಉ: ಲಾರಿ ಚಾಲಕ ಸಾ: ಶಿವಾಜಿ ನಗರ, ಕಲಬುರಗಿ ಈ ಮೂಲಕ ನಾನು ದೂರು ಸಲ್ಲಿಸುವದೇನೆಂದರೆ. ದಿನಾಂಕ 04-03-2023 ರಂದು ಸಾಯಂಕಾಲ ನಾನು ಮತ್ತು ನನ್ನ ಜೋತೆಗೆ ಕ್ಲಿನರ್ ಕೆಲಸ ಮಾಡುವ ಸೂರ್ಯಕಾಂತ ತಂದೆ ಗುಂಡಪ್ಪ ಇಬ್ಬರು ಕೂಡಿಕೊಂಡು ಬೆಂಗಳೂರಿನಲ್ಲಿ ಇರುವ ಶ್ರೀ, ಕರ್ನಾಟಕ ಟ್ರಾನ್ಸ್ ಪೊರ್ಟ್ ದಿಂದ ಲಾರಿ ನಂಬರ ಎಂ.ಹೆಚ್-12/ಎಫ್.ಝಡ್-9359 ನೇದ್ದರಲ್ಲಿ ತಂಪುಪಾನಿಯಗಳನ್ನು ತುಂಬಿಕೊಂಡು ಕಲಬುರಗಿಗೆ ಬರುವ ಕುರಿತು ಜೇವರ್ಗಿ ಮುಖಾಂತರ ರಸ್ತೆ ಬದಿಯಿಂದ ಲಾರಿ ಚಲಾಯಿಸಿಕೊಂಡು ನಿಧಾನವಾಗಿ ಬರುವಾಗ ನಿನ್ನೆ ದಿನಾಂಕ: 05-03-2023 ರಂದು ಬೆಳಿಗ್ಗೆ 8:45 ಗಂಟೆ ಸುಮಾರಿಗೆ ಜೇವರ್ಗಿ ಕಲಬುರಗಿ ರಸ್ತೆಯಲ್ಲಿ ಬರುವ ಶಹಬಾದ್ ಕ್ರಾಸ್ ಹತ್ತಿರ ರಸ್ತೆ ಮೇಲೆ ಒಂದು ಕೆ.ಕೆ.ಆರ್.ಟಿ.ಸಿ ಬಸ್ ಚಾಲಕನು ಕಲಬುರಗಿ ಕಡೆಯಿಂದ ಜೇವರ್ಗಿ ಕಡೆಗೆ ಹೋಗುವ ಕುರಿತು ತನ್ನ ಬಸ್ಸನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಒಂದು ವಾಹನಕ್ಕೆ ಓವರ್ಟೆಕ್ ಮಾಡಲು ಹೊಗಿ ಒಮ್ಮೇಲೆ ಎಡಕ್ಕೆ ಕಟ್ ಹೋಡೆದನು ಆಗ ಸದರಿ ಬಸ್ಸಿನ ಹಿಂದಿನ ಭಾಗಬಂದು ನಮ್ಮ ಲಾರಿಯ ನಾನು ಕುಂತಿದ್ದ ಸೈಡಿಗೆ ಡಿಕ್ಕಿಯಾಯಿತು, ಅದನ್ನು ನೋಡಿದ ಅಲ್ಲಿಯೇ ಹೋಗುತ್ತಿದ್ದ ನಮ್ಮ ಪರಿಚಯದ ವಿರೇಂದ್ರ ಮೂಲಿ ಇವರು ಬಂದು ನನಗೆ ಲಾರಿಯಿಂದ ಕೆಳಗೆ ಇಳಿಯಿಸಿ ರಸ್ತೆ ಬದಿಯಲ್ಲಿ ಕೂಡಿಸಿ ನೋಡಲು ಸದರಿ ಘಟನೆಯಿಂದ ನನ್ನ ಬಲಗಾಲಿನ ಮೊಳಕಾಲಿನ ಕೆಳಗೆ ಭಾರಿ ರಕ್ತಗಾಯ & ಗುಪ್ತಗಾಯವಾಗಿದ್ದು ಮತ್ತು ಅಲ್ಲಲ್ಲಿ ತರಚಿದ ಗಾಯವಾಗಿದ್ದು ನನ್ನ ಜೋತೆಗಿದ್ದ ಸೂರ್ಯಕಾಂತ ಇತನಿಗೆ ಯಾವುದೇ ಗಾಯಗಳು ಕಂಡು ಬಂದಿರುವುದಿಲ್ಲ ನಮ್ಮ ಲಾರಿಯ ಎದುರಿನ ಬಲಭಾಗ ಡ್ಯಾಮೇಜ್ ಆಗಿದ್ದು ಸದರಿ ಬಸ್ಸಿನ ಹಿಂದಿನ ಬಲಭಾಗಕ್ಕೆ ಕೂಡ ಡ್ಯಾಮೇಜ್ ಆಗಿದ್ದು ಇರುತ್ತದೆ. ಸದರಿ ಬಸ್ಸಿನಲ್ಲಿದ್ದ ಪ್ರಯಾಣಿಕರಿಗೆ ಹಾಗೂ ಚಾಲಕನಿಗೆ ಯಾವುದೇ ಗಾಯಗಳು ಆಗಿರುವುದಿಲ್ಲ ಅಂತ ಗೋತ್ತಾಗಿರುತ್ತದೆ. ಸದರಿ ಬಸ್ಸಿನ ನಂಬರ ನೋಡಲು ಕೆ.ಎ-32/ಎಫ್-2283 ನೇದ್ದು ಇದ್ದು ಅದರ ಚಾಲಕನ ಹೆಸರು ಗುಡಿಯಪ್ಪ ಅಂತ ಗೋತ್ತಾಗಿದ್ದು ಇರುತ್ತದೆ. ತನ್ನ ಬಸ್ಸನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನಮ್ಮ ಲಾರಿಗೆ ಡಿಕ್ಕಿಪಡಿಸಿ ಅಪಘಾತ ಮಾಡಿ ನನಗೆ ಭಾರಿ ಗಾಯಗೊಳಿಸಿದ್ದು ಕಾರಣ ಸದರಿ ಬಸ್ ಚಾಲಕ ಗುಡಿಯಪ್ಪ ಇತನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಎಂದು  ಫಿರ್ಯಾದಿ ಕೊಟ್ಟ ಅರ್ಜಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

ಸಂಚಾರಿ ಪೊಲೀಸ ಠಾಣೆ- 1 :- ದಿನಾಂಕ: 06-03-2023 ರಂದು ಮದ್ಯಾಹ್ನ 02:50 ಪಿ.ಎಂ ಕ್ಕೆ  ಶ್ರೀ. ಸಿದ್ದು ತಂದೆ ರಾಮಚಂದ್ರ ಕಟ್ಟಿಮನಿ ಇವರು ಖುದ್ದಾಗಿ ಠಾಣೆಗೆ ಹಾಜರಾಗಿ ಸಿದ್ದು ತಂದೆ ರಾಮಚಂದ್ರ ಕಟ್ಟಿಮನಿ ವಯ: 30 ವರ್ಷ, ಜಾ: ಪ.ಜಾ ( ಹೋಲೆಯ) ಉ: ಖಾಸಗಿ ಕೆಲಸ ಸಾ: ಹೈಕೋರ್ಟ್ ಹತ್ತಿರ, ಖರ್ಗೆ ಕಾಲೋನಿ, ಕಲಬುರಗಿ ಈ ಮೂಲಕ ನಾನು ದೂರು ಸಲ್ಲಿಸುವದೇನೆಂದರೆ. ದಿನಾಂಕ 05-03-2023 ರಂದು ರಾತ್ರಿ ನಾನು ಮತ್ತು ನಮ್ಮ ಪರಿಚಯದ ಭೀಮಾಶಂಕರ ತಂದೆ ಸಿದ್ದಣ್ಣ ಕುಂಬಾರ ಇಬ್ಬರು ಆನಂದ ಹೋಟೇಲ್ ಕ್ರಾಸ್ ಹತ್ತಿರ ಮಾತನಾಡುತ್ತ ನಿಂತಿರುವಾಗ ರಾತ್ರಿ 11:30 ಗಂಟೆ ಸುಮಾರಿಗೆ ಒಂದು ಕಾರ್ ಚಾಲಕನು ರಂಗಮಂದಿರ ಕಡೆಯಿಂದ ಎಸ್.ಬಿ.ಕಾಲೇಜ ಕಡೆಗೆ ಹೋಗುವ ಕುರಿತು ಇನ್ನೊಂದು ಕಾರ್ ಚಾಲಕನು ಎಸ್.ವಿ.ಪಿ ಸರ್ಕಲ್ ಕಡೆಯಿಂದ ಗೋವಾ ಹೊಟೇಲ್ ಕಡೆಗೆ ಹೋಗುವ ಕುರಿತು ಎರಡು ಕಾರ ಚಾಲಕರು ತಮ್ಮ ಕಾರುಗಳನ್ನು  ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಆನಂದ ಹೋಟೆಲ್ ಕ್ರಾಸ್ ಹತ್ತಿರ ರಸ್ತೆ ಮೇಲೆ ಒಬ್ಬರಿಗೊಬ್ಬರು ಕಾರುಗಳು ಡಿಕ್ಕಿಪಡಿಸಿಕೊಂಡರು ಅದನ್ನು ನೋಡಿದ  ನಾನು ಮತ್ತು  ಭಿಮಾಶಂಕರ ಇಬ್ಬರೂ ಸೇರಿ ಹೋಗಿ ನೋಡಲು ರಂಗಮಂದಿರ ಕಡೆಯಿಂದ ಬಂದ ಕಾರ ನಂಬರ ನೋಡಲು ಕೆ.ಎ-03 ಎಂ.ಟಿ-0274 ನೇದ್ದ ಇದ್ದು ಅದರ ಚಾಲಕನ ಹೆಸರು ವಿಚಾರಿಸಲು ವಿರೇಶ  ತಾಡಪಳ್ಳಿ ಅಂತಾ ಗೊತ್ತಾಗಿದ್ದು ಸದರಿ ಕಾರ್ ನ ಎಡಭಾಗಕ್ಕೆ ಡ್ಯಾಮೇಜ್ ಆಗಿದ್ದು ಇರುತ್ತದೆ. ಎಸ್.ವಿ.ಪಿ ಸರ್ಕಲ್ ಕಡೆಯಿಂದ ಬಂದ ಕಾರ ನಂಬರ ನೋಡಲು ಕೆ.ಎ-32 ಪಿ-8780 ನೇದ್ದು ಇದ್ದು ಅದರ ಚಾಲಕನ ಹೆಸರು ವಿಚಾರಿಸಲು ರುಕ್ಮೋದ್ದಿನ್ ಸುತಾರ್ ಅಂತಾ ಗೋತ್ತಾಗಿದ್ದು ಸದರಿ ಕಾರಿನ ಎದುರಿನ ಭಾಗ ಡ್ಯಾಮೇಜ್ ಆಗಿದ್ದು ಇರುತ್ತದೆ. ಸದರಿ ಇಬ್ಬರು ಚಾಲಕರಿಗೆ ಮಾತನಾಡಿಸಿ ನೋಡಲು ಅವರು ಮಧ್ಯಪಾನ  ಕುಡಿದ ಅಮಲಿನಲ್ಲಿ ಇದ್ದು ಅವರ ಬಾಯಿಂದ ಮದ್ಯ ಸೇವನೆ ಮಾಡಿದ ವಾಸನೆ ಬಂದಿರುತ್ತದೆ. ಸದರಿ ಅಪಘಾತದಿಂದ ಇಬ್ಬರೂ ಚಾಲಕರಿಗೆ ಯಾವುದೇ ಗಾಯಗಳು ಆಗಿರುವುದಿಲ್ಲ. ಇಬ್ಬರು ಚಾಲಕರ ವಿರುದ್ದ ಕಾನೂನು ಕ್ರಮ ಕೈಕೊಳ್ಳಬೇಕು ಎಂದು ಫಿರ್ಯಾದಿ ಕೊಟ್ಟ ಅರ್ಜಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

ಸಂಚಾರಿ ಪೊಲೀಸ ಠಾಣೆ- 2 :-  ದಿನಾಂಕ: 06-03-2023 ರಂದು ಸಾಯಂಕಾಲ 6-30 ಗಂಟೆಗೆ ಶ್ರೀ ಶರಣಪ್ಪಾ ತಂದೆ ವೀರಭದ್ರಪ್ಪಾ ಇವರು ಠಾಣೆಗೆ ಹಾಜರಾಗಿ ಅವರ ಸಂಬಂದಿ ಶ್ರೀ ಶಂಕರಗೌಡ ತಂದೆ ಮಲ್ಲಿಕಾರ್ಜುನ ಇವರ ದೂರು ಅರ್ಜಿಯನ್ನು ಹಾಜರಪಡಿಸಿದ್ದರ ಸಾರಂಶವೆನೆಂದರೆ ದಿನಾಂಕ: 03-03-2023 ರಂದು ಸಾಯಂಕಾಲದ ಸಮಯದಲ್ಲಿ ನಾನು ಕುಸನೂರ ಗ್ರಾಮದಿಂದ ಕಲಬುರಗಿ ಸುಪರ ಮಾರ್ಕೆಟನಿಂದ ಮನೆಯ ಸಾಮಾನುಗಳನ್ನು ತರುವ ಸಲುವಾಗಿ ಮೋಟಾರ ಸೈಕಲ ನಂಬರ ಕೆಎ-32/ಹೆಚ್-5565 ನೇದ್ದನ್ನು ಚಲಾಯಿಸಿಕೊಂಡು ಹೋಗಿ ಮನೆಯ ಸಾಮಾನುಗಳನ್ನು ತಗೆದುಕೊಂಡು ಸುಪರ ಮಾರ್ಕೆಟನಿಂದ ಟೌನಹಾಲ, ಹಳೆ ಆರ.ಟಿ.ಓ ಕ್ರಾಸ, ಸೇಡಂ ರಿಂಗ ರೋಡ ಮುಖಾಂತರವಾಗಿ ನಾನು ಕುಸನೂರ ಗ್ರಾಮದ ಕಡೆಗೆ ಹೋಗುವಾಗ ದಾರಿ ಮದ್ಯ ಜಯ ನಗರ ಕ್ರಾಸ ಹತ್ತೀರ ರೋಡ ಮೇಲೆ ಒಬ್ಬ ಮೋಟಾರ ಸೈಕಲ ಸವಾರನು ತಾನು ಚಲಾಯಿಸುತ್ತೀರುವ ಮೋಟಾರ ಸೈಕಲ ಹಿಂದುಗಡೆ ಒಬ್ಬನ್ನು ಕೂಡಿಸಿಕೊಂಡು ಓಂ ನಗರ ಕಡೆಯಿಂದ ಸೇಡಂ ರಿಂಗ ರೋಡ ಕಡೆಗೆ ಹೋಗುವ ಕುರಿತು ರಾಂಗ ಸೈಡನಿಂದ ತನ್ನ ಮೋಟಾರ ಸೈಕಲನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ  ಚಲಾಯಿಸಿಕೊಂಡು ಬಂದು ನನ್ನ ಮೋಟಾರ ಸೈಕಲಕ್ಕೆ ಡಿಕ್ಕಿಪಡಿಸಿ ಅಪಘಾತ ಮಾಡಿದನು. ನಾನು ನನ್ನ ಮೋಟಾರ ಸೈಕಲದೊಂದಿಗೆ  ಕೆಳಗಡೆ ಬಿದ್ದೆನು. ನನಗೆ ಡಿಕ್ಕಿಪಡಿಸಿ ಅಪಘಾತ ಮಾಡಿದ ಮೋಟಾರ ಸೈಕಲ ಸವಾರ ಹಾಗೂ ಹಿಂದುಗಡೆ ಕುಳಿತವ ಇಬ್ಬರೂ ಮೋಟಾರ ಸೈಕಲದೊಂದಿಗೆ ಬಿದ್ದರು. ಸದರಿ ಘಟನೆ ನೋಡಿದ ನಮ್ಮೂರಿನ ಸಿದ್ರಾಮಪ್ಪಾ ತಂದೆ ಬಸವರಾಜ ಹಾಗೂ ಅಭಿಷೇಕ ತಂದೆ ರಾಜಕುಮಾರ ರವರು ಬಂದು ನನಗೆ ಎಬ್ಬಿಸಿ ರೋಡ ಪಕ್ಕದಲ್ಲಿ ಕೂಡಿಸಿದರು. ಆಗ ನಾನು ನನ್ನ ಮೋಟಾರ ಸೈಕಲಕ್ಕೆ ಡಿಕ್ಕಿಪಡಿಸಿ ಅಪಘಾತ ಮಾಡಿದ ಮೋಟಾರ ಸೈಕಲ ನಂಬರ ನೋಡಲು ಎಪಿ-04/ಎಡಬ್ಲೂ-8376 ಇದ್ದಿತ್ತು. ಅದರ ಸವಾರ ಮತ್ತು ಹಿಂದುಗಡೆ ಕುಳಿತವ ಎದ್ದು ನನ್ನ ಕಡೆಗೆ ನೋಡುತ್ತಾ ಮೋಟಾರ ಸೈಕಲ ಚಾಲು ಮಾಡಿಕೊಂಡು ಸೇಡಂ ರಿಂಗ ರೋಡ ಕಡೆಗೆ ಓಡಿ ಹೋದರು. ಸದರಿ ಘಟನೆ ಜರುಗಿದಾಗ ರಾತ್ರಿ ಅಂದಾಜು 8-30 ಗಂಟೆ ಸಮಯವಾಗಿತ್ತು. ಸದರ ಘಟನೆಯಿಂದ ನನ್ನ ಬಲಗೈ ಮುಂಗೈ ಹತ್ತೀರ ಭಾರಿ ರಕ್ತಗಾಯ ಹಾಗೂ ಎಡಗಾಲಿನ ಪಾದದ ಮೇಲ್ಭಾಗದಲ್ಲಿ ರಕ್ತಗಾಯವಾಗಿ ನನಗೆ ತ್ರಾಸ ಆಗುತ್ತಿದ್ದರಿಂದ ಸಿದ್ರಾಮಪ್ಪಾ ಮತ್ತು ಅಭೀಷೇಕ ಇಬ್ಬರೂ ಸೇರಿಕೊಂಡು ನನ್ನ ಉಪಚಾರ ಕುರಿತು ಪಕ್ಕದ್ದ ಎಕ್ಸಾನ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಕೆ ಮಾಡಿದರು. ನನಗೆ ಭಾರಿಗಾಯಗೊಳಿಸಿ ತನ್ನ ಮೋಟಾರ ಸೈಕಲ ಸಮೇತ ಓಡಿ ಹೋಗಿರುವವರ ವಿರುದ್ದ ಕಾನೂನು ಕ್ರಮ ಜರುಗಿಸಬೇಕು ಎಂದು ಫಿರ್ಯಾದಿ ಕೊಟ್ಟ ಅರ್ಜಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

ಅಶೋಕ ನಗರ ಪೊಲೀಸ ಠಾಣೆ :- ದಿನಾಂಕ: 06.03.2023 ರಂದು 01:00 ಪಿ.ಎಂ.ಕ್ಕೆ ಫಿರ್ಯಾದಿ ಶ್ರೀ ರಾಜಕುಮಾರ ತಂದೆ ಶಾಂತಾರಾಮ ಹೂಡಿಕರ್ ವಯ: 25 ವರ್ಷ ಜಾ: ತಳವಾರ ಉ: ವ್ಯಾಪಾರ ಸಾ|| ಶರಣ ಸಿರಸಗಿ ಮಡ್ಡಿ, ಕಲಬುರಗಿ ಇವರು ಠಾಣೆಗೆ ಹಾಜರಾಗಿ ಕೊಟ್ಟ ಫಿರ್ಯಾದಿ ಅರ್ಜಿಯ ಸಾರಾಂಶವೆನೆಂದರೆ, ನಾನು ನನ್ನ ದಿನ ನಿತ್ಯದ ಕೆಲಸಕ್ಕೆ ಓಡಾಡುವ ಸಲುವಾಗಿ 2016ನೇ ಸಾಲಿನಲ್ಲಿ ಒಂದು ಹಿರೋ ಸ್ಪ್ಲೇಂಡರ್ ಪ್ಲಸ್ ಮೋಟಾರ ಸೈಕಲ್ ನಂ ಕೆ.ಎ-32 ಇ.ಎಲ್.-5793 ಕಪ್ಪು ಬಣ್ಣದ್ದು ಇಂಜನ್ ನಂಬರ್ HA10EWGHC09629 ಚೆಸ್ಸಿ ನಂಬರ್ MBLHA10BWGHC09629 ಅ.ಕಿ.20,000/-ರೂ ನೇದ್ದು ಖರೀದಿಸಿದ್ದು ಇರುತ್ತದೆ. ಹೀಗಿದ್ದು ದಿನಾಂಕ: 17.02.2023 ರಂದು ರಾತ್ರಿ 10:00 ಗಂಟೆಗೆ ನಾನು ನನ್ನ ಕೆಲಸವನ್ನು ಮುಗಿಸಿಕೊಂಡು ಬಂದು ಮನೆಯ ಹತ್ತಿರ ನಿಲ್ಲಿಸಿದ ನನ್ನ ದ್ವಿಚಕ್ರ ವಾಹನವನ್ನು ದಿನಾಂಕ: 18.02.2023 ರಂದು ಬೆಳಿಗ್ಗೆ 07:00 ಗಂಟೆಗೆ ನಾನು ಎದ್ದು ನೋಡಲಾಗಿ ನನ್ನ ದ್ವಿಚಕ್ರ ವಾಹನ ಇದ್ದಿರುವುದಿಲ್ಲ. ಕಳವುವಾದ ನನ್ನ ಮೋಟಾರ ಸೈಕಲನ್ನು ಪತ್ತೆ ಮಾಡಿ ಕಳ್ಳತನ ಮಾಡಿದವರ ವಿರುದ್ದ ಕಾನೂನು ರೀತಿ ಕ್ರಮ ಜರುಗಿಸಬೇಕೆಂದು ಫಿರ್ಯಾದಿ ಕೊಟ್ಟ ಅರ್ಜಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

ಎಂ.ಬಿ.ನಗರ ಪೊಲೀಸ ಠಾಣೆ :- ಫಿರ್ಯಾದಿ ಶ್ರೀಮತಿ ಭಾಗ್ಯಶ್ರೀ ಗಂಡ ಧನರಾಜ ಶೇಳಗಿ ವ|| 21 ವರ್ಷ ಉ|| ಮನೆ ಕೆಲಸ ಜಾ|| ಸಮಗಾರ ಸಾ|| ಭೂಪಾಲ ತೆಗನೂರ ಹಾ|| ವ|| 3ನೇ ಹಂತ ವಿರೇಂದ್ರ ಪಾಟೀಲ ಬಡಾವಣೆ ಕಲಬುರಗಿ  ಇವಳಿಗೆ ಆರೋಪಿ ಅವನ ಮೋಬೈಲ್ ನಂ 7204467505 ದಿಂದ ಫಿರ್ಯಾದಿ ಮೋಬೈಲ್ ನಂ 9148578050 ನೆದಕ್ಕೆ ವಾಟ್ಸಾಪ ಕಾಲ ಮಾಡಿ ಅವಾಚ್ಯ ಶಬ್ದಳಿಂದ ಬೈದು ಜೀವ ಬೆದರಿಕೆ ಹಾಕಿರುತ್ತಾನೆ ಎಂದು ಫಿರ್ಯಾದಿ ಕೊಟ್ಟ ಹೇಳಿಕೆ ಸಾರಾಂಶದ  ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

ರೋಜಾ ಪೊಲೀಸ ಠಾಣೆ :- ದಿನಾಂಕ: 06/03/2023 ರಂದು ಮಧ್ಯಾನ 02:30 ಗಂಟೆಗೆ ಶ್ರೀ ಲಾಲಅಹ್ಮದ ತಂದೆ ಖಾಸಿಮ ಸಾಬ  ಸಾಃ ಬಜಾರ ರೋಡ ನಿಚ್ಛೆ ಗಲ್ಲಿ ಅಪ್ಝಲಪುರ ರವರು ಠಾಣೆಗೆ ಹಾಜರಾಗಿ ದೂರು ನೀಡಿದ್ದೆನೆಂದರೆ ದಿನಾಂಕ: 18/02/2023 ರಂದು ರಾತ್ರಿ 10:00 ಗಂಟೆಗೆ ನಮಾಜ ಮಾಡುವ ಸಲುವಾಗಿ ಖಾಜಾ ಕಾಲೋನಿಯ ನನ್ನ ಸಂಭಂದಿಕರ ಮನೆಯ ಹತ್ತಿರವಿರುವ ಹುಸೇನಿ ಆಲಮ್ ಮಸ್ಜೀದ ಹತ್ತಿರ ರಾತ್ರಿ 10:30 ಗಂಟೆಗೆ ನನ್ನ ಹೀರೊ ಸ್ಪ್ಲೆಂಡರ ಮೊಟಾರ ಸೈಕಲ ನಂ ಕೆಎ 32-EP-9306 ನೇದ್ದು ಅಃಕಿಃ 25.000/- ನೇದ್ದನ್ನು ಸೈಡಲಾಕ್ ಮಾಡಿ ನಿಲ್ಲಸಿದ ಗಾಡಿಯನ್ನ ಯಾರೋ ಕಳ್ಳರು ಕಳುವುಮಾಡಿರುತ್ತಾರೆ. ಕಳುವಾದ ನನ್ನ ಮೋಟಾರ್ ಸೈಕಲ್ ಹುಡುಕಿಕೊಟ್ಟು, ಕಳವು ಮಾಡಿದವರ ಮೇಲೆ ಕಾನೂನು ಕ್ರಮ ಕೈಕೊಳ್ಳಬೇಕೆಂದು ಫಿರ್ಯಾದಿ ಕೊಟ್ಟ ಹೇಳಿಕೆ ಸಾರಾಂಶದ  ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

ವಿಶ್ವವಿದ್ಯಾಲಯ ಪೊಲೀಸ ಠಾಣೆ :- ದಿನಾಂಕ: 06-03-2023 ರಂದು ಮಧ್ಯಾಹ್ನ 2:00 ಪಿ,.ಎಮ ದಿಂದ 3:20 ಪಿ.ಎಮ್ ಸುಮಾರಿಗೆ ಕಲಬುರಗಿಯ ಪಾಳಾ ಗ್ರಾಮದ ಕಿರಾಣಿ ಅಂಗಡಿ ಖುಲ್ಲಾ ಜಾಗದಲ್ಲಿ ಬಾತ್ಮಿ ಬಂದ ಮೇರೆಗೆ ಸದರಿ ಆರೋಪಿಯು ಅಕ್ರಮವಾಗಿ ಯಾವುದೇ ಪರವಾನಿಗೆ ಇಲ್ಲದೇ ಮಧ್ಯ ಮಾರಾಟ ಮಾಡುತ್ತಿದ್ದ ಸಮಯದಲ್ಲಿ ಸದರಿಯವನಿಂದ ದಾಳಿ ಮಾಡಿ ಒಟ್ಟು 33,889/- ರೂ ಕಿಮ್ಮತ್ತಿನ ಮಧ್ಯ ಹಾಗೂ ಮತ್ತು ನಗದು ಹಣ 120/- ರೂ ಜಪ್ತಿ ಪಡಿಸಿಕೊಂಡು ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

ಸಬ್‌ ಅರ್ಬನ್‌ ಪೊಲೀಸ ಠಾಣೆ :- ದಿನಾಂಕ: 19-02-2023 ರಂದು ಫಿರ್ಯಾದಿಯು ಸಂಜೆ 05:00 ಗಂಟೆಗೆ ತಮ್ಮ ಬೈಕ್ ನಂ ಕೆಎ ೧೮ ಇಸಿ ೮೫೫೯ ಅನ್ನು ತಾವು ವಾಸವಾಗಿರುವ ತಮ್ಮ ಮನೆಯ ಮುಂದೆ ನಿಲ್ಲಿಸಿದ್ದು ತನ್ನ ಸಂಬಂಧಿಕರ ಊರಾದ ಚಿಕ್ಕಮಂಗಳೂರಿಗೆ ಹೋಗಿ ದಿನಾಂಕ: ೨೪/೦೨/೨೦೨೩ ರಂದು ೦೬.೦೦ ಗಂಟೆಗೆ ಹೋಗಿ ಬಂದು ನೋಡಲು ನಾನು ನಿಲ್ಲಿಸಿದ ಜಾಗದಲ್ಲಿ ನನ್ನ ಬೈಕ್ ಇರದ ಕಾರಣ ಅದನ್ನು ಎಲ್ಲಾ ಕಡೆ ಹುಡುಕಾಡಿದರೂ ಅದು ದೊರೆಯದ ಕಾರಣ ಅದನ್ನು ಹುಡುಕಿಕೊಡಬೇಕೆಂದು ಫಿರ್ಯಾದಿ ಕೊಟ್ಟ ಹೇಳಿಕೆ ಸಾರಾಂಶದ  ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

ಸಬ್‌ ಅರ್ಬನ್‌ ಪೊಲೀಸ ಠಾಣೆ :- ದಿನಾಂಕ: ೦03-03-2023 ರಂದು ಜುಬೇರ ಆರೋಪಿತನು ಫಿರ್ಯಾದಿಯ ಗಂಡನಿಗೆ ಕರೆದುಕೊಂಡು ಹೋಗಿದ್ದು ಶಿವಾನಿ ಬಾರಿನ ಹತ್ತಿರ ನನ್ನ ಹಣವನ್ನು ಕೊಡು ಎಂದು ಕೇಳಿದಾಗ ಅದಕ್ಕೆ ಫರ‍್ಯಾದಿಯ ಗಂಡನು ನನ್ನ ಹತ್ತಿರ ಹಣ ಇಲ್ಲಾ ನಾನು ಹಣವನ್ನು ಒಂದೆರಡು ದಿನಗಳ ನಂತರ ಕೊಡುತ್ತೇನೆಂದು ಹೇಳಿದ್ದು ಅದಕ್ಕೆ ಸದರಿ ಆರೋಪಿತರು ಕೊಲೆ ಮಾಡುವ ಉದ್ದೇಶದಿಂದ ಚಾಕುದಿಂದ ಕುತ್ತಿಗೆಗೆ ಚುಚ್ಚಿದ್ದು ಸದರಿ ಆರೋಪಿತರ ವಿರುದ್ದ ಕ್ರಮ ಕೈಗೊಳ್ಳಬೇಕೆಂದು ಫಿರ್ಯಾದಿ ಕೊಟ್ಟ  ಹೇಳಿಕೆ ಸಾರಾಂಶದ  ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಸಬ್‌ ಅರ್ಬನ್‌ ಪೊಲೀಸ ಠಾಣೆ :- ಫಿರ್ಯಾದಿಯು ದಿನಾಂಕಃ-೧೮/೦೨/೨೦೨೩ ರಂದು ೦೮.೩೦ ಕ್ಕೆ ಆಳಂದ ಚೆಕ್ ಪೋಸ್ಟ್ ಗೆ ಇರುವ ರಾಮತೀರ್ಥ ದೇವಸ್ಥಾನದ ಹತ್ತಿರ ನನ್ನ ಸ್ಪ್ಲೇಂಡರ್ ಪ್ಲಸ್ ಬೈಕ್ ನಂ ಏಂ ೩೨ ಇಒ ೪೨೯೦ ನಿಲ್ಲಿಸಿ ದೇವರ ದರ್ಷನ ಪಡೆದು ಬಂದು ೦೮.೪೫ ಕ್ಕೆ ನೋಡಲು ನಾನು ನಿಲ್ಲಿಸಿದ ಜಾಗದಲ್ಲಿ ನನ್ನ ಬೈಕ್ ಇರಲಿಲ್ಲಾ ನಾನು ಸುತ್ತಾ ಮುತ್ತಾ ಹುಡುಕಾಡಿದರು ಅದು ನನಗೆ ಎಲ್ಲಿಯೂ ಪತ್ತೆಯಾಗಿರುವುದಿಲ್ಲಾ ಸದರಿ ನನ್ನ ಬೈಕ್ ಅನ್ನು ಯಾರೋ ಕಳ್ಳರು ಕಳವು ಮಾಡಿದ್ದು ಅದನ್ನು ಹುಡುಕಿಕೊಡಬೇಕೆಂದು ಫಿರ್ಯಾದಿ ಕೊಟ್ಟ ಹೇಳಿಕೆ ಸಾರಾಂಶದ  ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

ಚೌಕ ಪೊಲೀಸ ಠಾಣೆ :-   ದಿನಾಂಕ 06/03/2023 ರಂದು ರಾತ್ರಿ 9-30  ಗಂಟೆಗೆ ಶ್ರೀ ಅಬ್ದುಲ ಲತೀಫ ತಂದೆ ಅಬ್ದುಲ ರಜಾಕ ಖುರೇಷಿ ವಯಸ್ಸು 56 ವರ್ಷ ಉ: ವ್ಯವಹಾರ  ಸಾ: ಖಾಜಾ ಕಾಲೋನಿ ರೋಜಾ (ಬಿ) ಶಾಲಿಮಾರ ಫಂಕ್ಷನ ಹಾಲ್ ಹತ್ತಿರ ಕಲಬುರಗಿ  ಇವರು ಠಾಣೆಗೆ ಹಾಜರಾಗಿ ತಮ್ಮದೊಂದು ಕನ್ನಡದಲ್ಲಿ ಗಣಕೀಕೃತ ಮಾಡಿಸಿದ ದೂರು  ಕೊಟ್ಟಿದ್ದರ  ಸಾರಾಂಶವೆನೆಂದೆರೆ,  ನಾನು, ಅಬ್ದುಲ ಲತೀಫ ತಂದೆ ಅಬ್ದುಲ ರಜಾಕ ಖುರೇಷಿ ವಯಸ್ಸು 56 ವರ್ಷ ಉ: ವ್ಯವಹಾರ  ಸಾ: ಖಾಜಾ ಕಾಲೋನಿ ರೋಜಾ (ಬಿ) ಶಾಲಿಮಾರ ಫಂಕ್ಷನ ಹಾಲ್ ಹತ್ತಿರ ಕಲಬುರಗಿ ನಿವಾಸಿಯಾಗಿದ್ದೆನೆ.ಹೀಗಿರುವಾಗ ನಾನು ಗುಲಬರ್ಗಾ ನಗರದ ಸರ್ವೆ ನಂಬರ 109 (ಶೇಖ್ ರೋಜಾ) ರಲ್ಲಿ 30*40 ರ ಅಳತೆಯ ಸುಮಾರು 4 ಪ್ಲಾಟುಗಳನ್ನು ದಿನಾಂಕ 18/05/2022 ರಂದು ಮಹ್ಮದ ಹಜಿಮ್ ತಂದೆ ಮಹ್ಮದ ಮಶಾಖ್ ಎನ್ನುವರಿಂದ ರೂ. 5,50,000/- ಗಳಂತೆ  ಪ್ಲಾಟ ನಂಬರ 67 ಕಾರ್ಪೋರೇಷನ ಮನೆ ನಂಬರ 9-587/109/67 ಪ್ಲಾಟ ನಂಬರ 82 ಕಾರ್ಪೋರೇಷನ ಮನೆ ನಂಬರ 9-587/109/82 ಮತ್ತು ನನ್ನ ಹೆಂಡತಿ  ಝೀನತ ಪರ್ವಿನ್  ರವರ ಹೆಸರಿನಿಂದ ಪ್ಲಾಟ ನಂಬರ 68, ಕಾರ್ಪೋರೇಷನ್ ಮನೆ ನಂಬರ 9-587/109/68 ಮತ್ತು ಪ್ಲಾಟ ನಂ.69 ಕಾರ್ಪೋರೇಷನ ಮನೆ ನಂ.9-587/109/69 ನ್ನು ಖರೀದಿಸಿ ಗುಲಬರ್ಗಾದ ನೋಂದಣಿ ಕಛೇರಿಯಲ್ಲಿ ಕಾನೂನು ಬದ್ಧವಾಗಿ ಖರೀದಿ ಪತ್ರ ಮಾಡಿಕೊಂಡು ನಿವೇಶನದ ಕಬ್ಜಾದಲ್ಲಿ ಇದ್ದಿದ್ದೇನೆ.ನಾನು ಖರೀದಿಸಿದ ನಿವೇಶನವು ದೊಡ್ಡ ಕಂದಕದಂತ್ತಿದ್ದು ಅದನ್ನು ವರ್ಷ ಪೂರ್ತಿ ಸಾವಿರಾರು ಲಾರಿಗಟ್ಟಲೇ ಮುರಮ್ ತುಂಬಿ ಸಮತೊಟ್ಟು ಮಾಡಿದ್ದೆನೆ. ಅಲ್ಲಿ ಮನೆಯ ಕಟ್ಟಡ ಸಾಮಾನುಗಳನ್ನು ಮತ್ತಿತ್ತರ ವಸ್ತುಗಳನ್ನು ಇಡುವುದಕ್ಕಾಗಿ ಕಟ್ಟಿದ 2 ಕೋಣೆಗಳನ್ನು ದಿನಾಂಕ 19/02/2023 ರಂದು  ರಾತ್ರಿ 12-00 ಗಂಟೆಯ ನಂತರ ಧ್ವಂಸಗೊಳಿಸಲಾಗಿತ್ತು. ನಂತರ ಧ್ವಂಸಗೊಳಿಸಿದ ಕಟ್ಟಡವನ್ನು ಪುನರ ನಿರ್ಮಿಸಿ, ಮನೆ ಸುರಕ್ಷತೆಗಾಗಿ ಹಾಕಿದ್ದ ತಂತಿ ಬೇಲಿಯನ್ನು ಕೂಡಾ ಸರಿ ಪಡಿಸಿದ್ದೆ ದಿನಾಂಕ 02/03/2023 ರಮದು ರಾತ್ರಿ 12-00 ಗಂಟೆಯ ನಂತರ ಮನೆಯ ಬಾಗಿಲುಗಳನ್ನು ಮುಚ್ಚಿ ನಮ್ಮ ಮನೆಗೆ ಹೋಗಿದ್ದಾಗ ಸುಮಾರು 7-8 ಜನರು ನನ್ನ ನಿವೇಶನದಲ್ಲಿ ಅನಧಿಕೃತ ಪ್ರವೇಶ ಮಾಡಿ ಮನೆಯ ವಿದ್ಯುತ ಮೀಟರನ್ನು ಕಿತ್ತು ಬಿಸಾಡಿ ಮನೆಯ ಮೇಲಿನ ಪತ್ರಾಗಳನ್ನು ಮುರಿದು ಹಾಳುಗೆಡವಿ ನೀರಿನ ಪ್ಲಾಸ್ಟಿಕ ಬ್ಯಾರಲ್ ಮುರಿದು  ಹಾಕಿ ಮನೆಯಲ್ಲಿನ  ಒಂದು ಟೇಬಲ್ 6  ಖುರ್ಚಿಗಳು ಹಾಗೂ ಒಂದು ಟೇಬಲ್ ಫ್ಯಾನ ಮನೆ ನಿರ್ಮಾಣದ ಗೋಡೆಗಳನ್ನು ಸಂಪೂರ್ಣ ಧ್ವಂಸ ಮಾಡಿದ್ದಾರೆ.ಈ ಕೃತ್ಯದ ಪ್ರಮುಖ ರೂವಾರಿ ಬಂಡೆಪ್ಪ ತಂದೆ ಬಸವಂತಪ್ಪ ಎನ್ನುವವನು ಕಾರಣನಾಗಿದ್ದು, ಈತನ ಗೂಂಡಾ ಪಡೆಯಿಂದ ನನಗೆ ಅಪಾರ ಪ್ರಮಾಣದ ಆರ್ಥಿಕ ನಷ್ಟವನ್ನುಂಟು ಮಾಡಿದ್ದಾರೆ. ಈ ಜಾಗದ ರಕ್ಷಣೆ ಮತ್ತು ಸುರಕ್ಷತೆಗಾಗಿ ಇದ್ದ ಸಲಾವೋದ್ದಿನ ತಂದೆ ಖಾಜಾ ಮೈನೋದ್ದಿನ ರವರು ನೋಡಿದ್ದು, ಬಂಡೆಪ್ಪ ಮತ್ತು ಆತನ 7-8 ಜನ ಜನರು ಕೂಡಿಕೊಂಡು ನಮ್ಮ ಜಾಗೆ ಅತಿಕ್ರಮಣ ಪ್ರವೇಶ ಮಾಡಿ ಮನೆಯ ವಿದ್ಯುತ ಮೀಟರನ್ನು ಕಿತ್ತು ಬಿಸಾಡಿ ಮನೆಯ ಮೇಲಿನ ಪತ್ರಾಗಳನ್ನು ಮುರಿದು ಹಾಳುಗೆಡವಿ ನೀರಿನ ಪ್ಲಾಸ್ಟಿಕ ಬ್ಯಾರಲ್ ಮುರಿದು  ಹಾಕಿ ಮನೆಯಲ್ಲಿನ  ಒಂದು ಟೇಬಲ್ 6  ಖುರ್ಚಿಗಳು ಹಾಗೂ ಒಂದು ಟೇಬಲ್ ಫ್ಯಾನ ಮನೆ ನಿರ್ಮಾಣದ  ಗೋಡೆಗಳನ್ನು ಸಂಪೂರ್ಣ ಧ್ವಂಸ ಮಾಡಿದ್ದನ್ನು ನೋಡಿ ಅವರಿಗೆ ಹೆದರಿ ಓಡಿ ಬಂದು ನನಗೆ ಈ ವಿಷಯ ತಿಳಿಸಿದ್ದಾನೆ. ಕಾರಣ ಬಂಡೆಪ್ಪ ಮತ್ತು ಆತನ 7-8 ಜನರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಫಿರ್ಯಾದಿ ಕೊಟ್ಟ ಅರ್ಜಿಯ ಸಾರಾಂಶದ  ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

ಫರಹತಾಬಾದ ಪೊಲೀಸ ಠಾಣೆ :-  ದಿನಾಂಕ:06-03-2023 ರಂದು 6:15 ಪಿಎಮ್ ಕ್ಕೆ ಶ್ರೀ ಚಂದ್ರಶೇಖರ ಮಠಪತಿ, ಪಿಐ ಫರಹತಾಬಾದ ಠಾಣೆ ರವರು ಠಾಣೆಗೆ ಹಾಜರಾಗಿ ಮುದ್ದೆ ಮಾಲು, ಜಪ್ತಿ ಪಂಚನಾಮೆ, 4 ಜನ ಆರೋಪಿತರೊಂದಿಗೆ ಮುಂದಿನ ಕ್ರಮಕ್ಕಾಗಿ ವರದಿ ಹಾಜರ ಪಡಿಸಿದ್ದರ ಸಾರಾಂಶವೇನೆಂದರೆ, ದಿನಾಂಕ: 06-03-2023 ರಂದು ಸಾಯಂಕಾಲ 3:30 ಗಂಟೆಯ ಸುಮಾರಿಗೆ ನಾನು ಪೊಲೀಸ್ ಠಾಣೆಯಲ್ಲಿದ್ದಾಗ ಭಾತ್ಮಿ ಬಂದಿದ್ದೇನೆಂದರೆ, ನಮ್ಮ ಠಾಣೆಯ ವ್ಯಾಪ್ತಿಯ ಕೊಳ್ಳೂರು ಗ್ರಾಮದ ಎಡಿಪೈ ಶಾಲೆಯ ಹಿಂದುಗಡೆ ಇರುವ ಸರ್ಕಾರಿ ನಾಲಾದಲ್ಲಿ ಸಾರ್ವಜನಿಕ ಸ್ಥಳದ ಖುಲ್ಲಾ ಜಾಗೆಯಲ್ಲಿ ಕೆಲವು ಜನರು ಇಸ್ಪೀಟ ಜೂಜಾಟ ಆಡುತ್ತಿದ್ದಾರೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ಮಾನ್ಯ ನ್ಯಾಯಾಲಯದ ಅನುಮತಿ ಪಡೆದುಕೊಂಡು ನಮ್ಮ ಠಾಣಾ ಸಿಬ್ಬಂದಿ ಜನರಾದ 1) ಧರ್ಮಣ್ಣ ಹೆಚ್.ಸಿ:219, 2) ರಾಜಕುಮಾರ ಪಿಸಿ:476, 3) ಸಗರಪ್ಪ ಪಿಸಿ:311 ರವರಿಗೆ ಜೂಜಾಟದ ಬಗ್ಗೆ ಮಾಹಿತಿ ತಿಳಿಸಿ ನಂತರ ನಮ್ಮ ಎಸಿಪಿ ಸಬ-ಅರ್ಬನ ಉಪ-ವಿಭಾಗ ಕಲಬುರಗಿ ರವರಿಗೆ  ಮಾಹಿತಿ ತಿಳಿಸಿ ಅವರ ಮಾರ್ಗದರ್ಶನದಲ್ಲಿ ಸಿಬ್ಬಂದಿ ಜನರಿಗೆ ಖಾಸಗಿ ವಾಹನದಲ್ಲಿ ಕರೆದುಕೊಂಡು ಠಾಣೆಯಿಂದ ಸಾಯಂಕಾಲ 4:15 ಗಂಟೆಗೆ ಹೊರಟು, ಭಾತ್ಮಿ ಸ್ಥಳಕ್ಕೆ ಹೊರಡುವಾಗ ಮಾರ್ಗಮಧ್ಯೆ ದಾರಿ ಹೊಕ್ಕ ಇಬ್ಬರೂ ಪಂಚರನ್ನು ಬರಮಾಡಿಕೊಂಡು ಅವರಿಗೂ ಭಾತ್ಮಿ ಬಂದ ವಿಷಯ ತಿಳಿಸಿ ಅವರು ನಮ್ಮೊಂದಿಗೆ ದಾಳಿ ಕಾಲಕ್ಕೆ ಹಾಜರಿರಲು ಒಪ್ಪಿದ ಮೇರೆಗೆ ಅವರನ್ನು ನಮ್ಮೊಂದಿಗೆ ಖಾಸಗಿ ವಾಹನದಲ್ಲಿ ಕರೆದುಕೊಂಡು ಹೊರಟು ಭಾತ್ಮೀ ಸ್ಥಳದ ಹತ್ತಿರ ಸಾಯಂಕಾಲ 4.30 ಗಂಟೆಗೆ ಗಿಡಗಳ ಮರೆಯಲ್ಲಿ ನಿಂತು ನೋಡಲು ನಾಲಾದಲ್ಲಿ ಗಿಡದ ಕೆಳಗೆ ಕೆಲವು ಜನರು ಜನರು ದುಂಡಾಗಿ ಇಸ್ಪೇಟ ಎಲೆಗಳ ಸಹಾಯದಿಂದ ಅಂದರ ಬಾಹರ ಜೂಜಾಟ ಆಡುತ್ತಿರುವದನ್ನು ನೋಡಿ ಖಚಿತ ಪಡಿಸಿಕೊಂಡು ಸಾಯಂಕಾಲ 4.35 ಗಂಟೆಗೆ ಏಕಕಾಲಕ್ಕೆ ಪಂಚರ ಸಮಕ್ಷಮದಲ್ಲಿ ದಾಳಿ ಮಾಡಲಾಗಿ ಜೂಜಾಟದಲ್ಲಿ ತೊಡಗಿದ ಕೆಲವು ಜನರು ಓಡಿ ಹೋಗಿದ್ದು ಇನ್ನೂ ಕೆಲವು ಜನರು ಸಿಕ್ಕಿದ್ದು ಸಿಕ್ಕ ಜನರಿಗೆ ಹಿಡಿದು ಅವರಿಗೆ ಅಂಗಶೋಧ ಮಾಡಿ ಹೆಸರು ವಿಳಾಸ ಕೇಳಲು 1) ಮೋಹನ ತಂದೆ ಮಚೇಂದ್ರ ಠಕಲೆರ ವಯ|| 36 ವರ್ಷ ಉ|| ಒಕ್ಕಲುತನ ಜಾ|| ಮರಾಠ ಸಾ|| ಇಟಗಾ ತಾ||ಜೇವರ್ಗಿ ಜಿ|| ಕಲಬುರಗಿ 2) ರಾಮಚಂದ್ರ ತಂದೆ ಗುರುಪಾದ ನಾಗಾವಿ ವಯ: 46 ವರ್ಷ ಉ: ಗೌಂಡಿ ಕೆಲಸ ಸಾ: ಇಟಗಾ ತಾ: ಜೇವರ್ಗಿ  3) ಬಸೀರ ತಂದೆ ಮೈಬೂಬಸಾಬ ಪಟೇಲ ವಯ: 43 ವರ್ಷ ಉ: ಹಳೆ ಟೈಯರ ಶಾಪ  ಸಾ: ಇಸ್ಲಾಮಾಬಾದ ಕಾಲೋನಿ ಕಲಬುರಗಿ 4) ದಶರಥ ತಂದೆ ದುರ್ಗಪ್ಪ ಸಾಳೋಂಕಿ  ವಯ: 41 ವರ್ಷ ಉ: ಸೆಂಟ್ರಿಂಗ ಕೆಲಸ ಸಾ: ಸಿಐಬಿ ಕಾಲೋನಿ ಕಲಬುರಗಿ ಓಡಿ ಹೋದ ವ್ಯಕ್ತಿಗಳ ಹೆಸರು ಮತ್ತು ವಿಳಾಸ ಅವರಿಗೆ ವಿಚಾರಿಸಲಾಗಿ, ಅವರು ತಿಳಿಸಿದ್ದೆನೆಂದರೆ, ಒಬ್ಬನ ಹೆಸರು ನಾಗರಾಜ ಕಲ್ಲಶೆಟ್ಟಿ ಕಲಬುರಗಿ ಮತ್ತೊಬ್ಬನ ಹೆಸರು ಮುಜೀಬ@ಮುಜ್ಜಾ ಕಲಬುರಗಿ ಅಂತ ತಿಳಿಸಿರುತ್ತಾರೆ. ಸದರಿ ಸ್ಥಳದಲ್ಲಿ 52 ಇಸ್ಪೀಟ ಎಲೆಗಳು ಹಾಗೂ 3080/- ನಗದು ಹಣ ಸಿಕ್ಕಿದ್ದು ಇವುಗಳನ್ನು ಪಂಚರ ಸಮಕ್ಷಮ ಜಪ್ತಿಪಡಿಸಿಕೊಂಡು ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

ಇತ್ತೀಚಿನ ನವೀಕರಣ​ : 07-03-2023 11:57 AM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080