ಅಭಿಪ್ರಾಯ / ಸಲಹೆಗಳು

ಬ್ರಹ್ಮಪೂರ ಪೊಲೀಸ್ ಠಾಣೆ :-  ದಿನಾಂಕ 06-03-2022 ರಂದು ಸಾಯಾಂಕಾಲ ೭:೦೦ ಪಿಎಮ  ಗಂಟೆಯ ಸುಮಾರಿಗೆ ಪಿರ್ಯಾದಿ ಶ್ರೀಮತಿ ಮಹಾದೇವಿ ಗಂಡ ದಿ. ಲಕ್ಷ್ಮಣ ನಾಟೀಕರ್ ವಯ: ೪೦ ವರ್ಷ ಜಾ: ಎಸ್.ಸಿ. (ಮಾದಿಗ) ಉ: ಮಹಾನಗರ ಪಾಲಿಕೆಯಲ್ಲಿ ಪೌರ ಕಾರ್ಮಿಕ ಸಾ: ಮನೆ ನಂ. ೧೧-೫೧೧ ಬಸ್ ಸ್ಟ್ಯಾಂಡ್ ರೋಡ್ ವಡ್ಡರ ಶಾಲೆ ಹತ್ತಿರ ಬೋರಾಬಾಯಿ ನಗರ ಬ್ರಹ್ಮಪೂರ ಕಲಬುರಗಿ ಇವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರು  ಅರ್ಜಿಯ ಸಾರಾಂಶವೆನೆಂದರೆ,  ನನ್ನ ತಾಯಿಯಾದ ರಾಣವ್ವ ಗಂಡ ಲಕ್ಕಪ್ಪ ನಾಟೀಕರ್‌ಗೆ ನಾನು ಒಬ್ಬಳೆ ಮಗಳಿದ್ದು, ನಮ್ಮ ತಾಯಿಯ ಹೆಸರಿನಲ್ಲಿ ಕಲಬುರಗಿ ತಾಲೂಕಿನ ಬ್ರಹ್ಮಪೂರ ಬಡಾವಣೆಯ ಸರ್ವೇ ನಂ. ೬೮/೨ಎ ವಿಸ್ತಿರ್ಣ ೦೦ ಎಕರೆ ೨ ಗುಂಟೆ ಮತ್ತು ವಿಸ್ತೀರ್ಣ ೦೦ ಎಕರೆ ೩೦ ಗುಂಟೆ ಜಮೀನು ಇದ್ದು, ಅದನ್ನು ನಾನೆ ಅನುಭವಿಸುತ್ತಿದ್ದು, ದಿನಾಂಕ: ೧೯/೧೨/೨೦೨೧ ರಂದು ಮಾನ್ಯ ಗ್ರಾಮ ಲೆಕ್ಕಾಧಿಕಾರಿಗಳಾದ ಶ್ರೀ ರಾಜ್ ಅಹ್ಮದ ಅವರು ನಮ್ಮ ಮನೆಗೆ ಸಾಯಾಂಕಾಲ ೪:೦೦ ಗಂಟೆಗೆ ಬಂದು ನಿಮ್ಮ ಜಮೀನಿನ ಮ್ಯುಟೇಶನ್ ಅರ್ಜಿ ಹಾಕಿದ್ದು ನಾಳೆ ಅಂದರೆ ದಿನಾಂಕ: ೨೦/೧೨/೨೦೨೧ ರಂದು ಜಗತ್ ಹತ್ತಿರ ಇರುವ ನಮ್ಮ ಕಛೇರಿಗೆ ಬಂದು ಭೇಟ್ಟಿಯಾಗಿ ಎಂದು ತಿಳಿಸಿರುತ್ತಾರೆ. ಆಗ ನಾನು ಅವರಿಗೆ ನಾನು ಯಾವುದೇ ರೀತಿಯ ಅರ್ಜಿ ಹಾಕಿರುವದಿಲ್ಲ ಎಂದು ತಿಳಿಸಿದಾಗ ಆಗ ಅವರು ಆಯಿತು ನಾಳೆ ನನ್ನ ಆಫೀಸಗೆ ಬನ್ನಿ ಹಾಗೂ ನಿಮ್ಮ ಆಧಾರ ಕಾರ್ಡ ತೆಗೆದುಕೊಂಡು ಬನ್ನಿ ಅಲ್ಲಿ ಪರಿಶಿಲನೆ ಮಾಡೋಣ ಅಂತ ತಿಳಿಸಿದರು. ತದ ನಂತರ ನಾನು ಹಾಗೂ ನನ್ನ ಸಂಬಂದಿಕನಾದ ಶಿವಪುತ್ರ ತಂದೆ ಮಾರ್ತಾಂಡಪ್ಪ ಕೋಬಾಳ್ಕರ್ ಜಿಲ್ಲಾ ಉಪಾದ್ಯಕ್ಷರು ಬಹುಜನ ಸಮಾಜ ಪಕ್ಷ ಕಲಬುರಗಿ ಇವರನ್ನು ಕರೆದುಕೊಂಡು ದಿನಾಂಕ: ೨೦/೧೨/೨೦೨೧ ರಂದು ಮಧ್ಯಾಹ್ನ ೩:೦೦ ಗಂಟೆಗೆ ಮಾನ್ಯ ಲೆಕ್ಕಾಧಿಕಾರಿಗಳಾದ ರಾಜ್ ಅಹ್ಮದ ಅವರ ಕಂದಾಯ ಇಲಾಖೆ ಕಛೇರಿಗೆ ಹೋಗಿ ವಿಚಾರಿಸಲಾಗಿ ಅಂದು ಅವರು ನಮಗೆ ಕೆಲವು ದಾಖಲಾತಿಗಳನ್ನು ತೋರಿಸಿದರು. ಅದರಲ್ಲಿ ಒಂದು ಆಧಾರ ಕಾರ್ಡನ್ನು ತೋರಿಸಿದರು. ಆ ಆಧಾರ ಕಾರ್ಡನಲ್ಲಿ ಹೆಸರು ಮಾತ್ರ ನನ್ನದಿತ್ತು. ಆದರೆ ಭಾವಚಿತ್ರ ಮತ್ತು ಮೊಬೈಲ ನಂಬರ ನನ್ನದಾಗಿರಲಿಲ್ಲ. ಹಾಗೂ ಸಲ್ಲಿಸಿರುವ ಅರ್ಜಿಯಲ್ಲಿ ಸಹಿ ಕೂಡ ನನ್ನದಾಗಿರಲಿಲ್ಲ. ಅಲ್ಲಿ ತೋರಿಸಿರುವ ಆಧಾರ ಕಾರ್ಡನ ಭಾವಚಿತ್ರ ನಮ್ಮ ಸಂಬಂದಿಕರಾದ ಮಲ್ಲಮ್ಮ ಗಂಡ ಲಕ್ಷ್ಮಣ ಹರಿಗೆನವರದಾಗಿತ್ತು. ಇದಾದ ನಂತರ ನಾವು ಮನೆಗೆ ಬರುವಾಗ ರಸ್ತೆ ಮಧ್ಯೆ, ಕಾಮಾಕ್ಷಿ ಸಾರಿ ಸೆಂಟರ್ ಎದುರಿಗೆ ಬಂದು ನಮ್ಮನ್ನು ತಡೆದು ಈ ಮೇಲೆ ಹೆಸರಿಸಲಾದ ಆರೋಪಿಗಳಾದ ಮಲ್ಲಮ್ಮ ಗಂಡ ಲಕ್ಷö್ಮಣ ಜಾ: ಮಾದಿಗ ಸಾ: ಬ್ರಹ್ಮಪೂರ ಕಲಬುರಗಿ ಹಾಗೂ ಇಠಾಬಾಯಿ ಗಂಡ ರಾಘವೇಂದ್ರ ಕುಲ್ಕರ್ಣಿ ಜಾ: ಬ್ರಾಹ್ಮಣ ಸಾ: ಬೋರಾಬಾಯಿ ನಗರ ಬ್ರಹ್ಮಪೂರ ಮತ್ತು ಲಕ್ಷ್ಮಿ ಗಂಡ ಬಸವರಾಜ ಸಾ: ಬ್ರಹ್ಮಪೂರ ತಾ: ಕಲಬುರಗಿ ಹಾಗೂ ನಾಗಮ್ಮ ಗಂಡ ಶರಣಪ್ಪ ಇವರು ಅಕ್ರಮ ಕೂಟ ರಚಿಸಿಕೊಂಡು ನನಗೆ ಎ ರಂಡಿ ಸೂಳೆ ಮಗಳೇ ನಮ್ಮ ಮೇಲೆ ಏನಾದರೂ ಸುಳ್ಳು ದಾಖಲಾತಿ ಸೃಷ್ಠಿ ಮಾಡಿರುವ ವಿಷಯವಾಗಿ ಏನಾದರೂ ಪೊಲೀಸರಿಗೆ ದೂರು ನೀಡಿದರೆ ನಿನ್ನನ್ನು ಕೊಲೆ ಮಾಡುವದಾಗಿ ಜೀವ ಬೆದರಿಕೆ ಹಾಕಿರುತ್ತಾರೆ. ಹಾಗೂ ನನ್ನ ಸಂಬಂದಿಕರಾದ ಶಿವಪುತ್ರ ಕೋಬಾಳ್ಕರವರಿಗೆ ಸದರಿ ಮೊಬೈಲ ನಂಬರಗಳಾದ ೮೦೫೦೨೫೯೦೯೬ ಮತ್ತು ೬೩೬೧೯೬೩೨೩೫ ಇದರಿಂದ ಜೀವ ಬೆದರಿಕೆ ಹಾಕಿರುತ್ತಾರೆ. ಈ ಎಲ್ಲದಕ್ಕೂ ನನ್ನ ಸೊದರ ಅತ್ತೆಯ ಮೊಮ್ಮಗಳಾದ ಇಠಾಬಾಯಿಯ ಗಂಡನಾದ ರಾಘವೇಂದ್ರ  ಕುಲ್ಕರ್ಣಿ ಇತನೆ ಈ ಎಲ್ಲಾ ಸುಳ್ಳು ದಾಖಲೆಗಳನ್ನು ಸೃಷ್ಠಿ ಮಾಡಲು ಮೂಲ ಕಾರಣಿಕರ್ತನಾಗಿರುತ್ತಾನೆ. ಇತನು ಕೂಡ ನಮಗೆ ಏ ಮಾದಿಗ ಸೂಳೆ ಮಗಳೆ ನೀನು ಏನಾದರೂ ನಮ್ಮ ವಿರುದ್ದ ದೂರು ನೀಡಿದರೆ ಕೊಲೆ ಮಾಡುತ್ತೇನೆ ಎಂದು ಜೀವ ಬೆದರಿಕೆ ಹಾಕಿರುತ್ತಾನೆ. ಸದರಿ ಘಟನೆಯ ಬಗ್ಗೆ ನಮ್ಮ ಮನೆಯಲ್ಲಿ ನಮ್ಮ ಸಂಬಂದಿಕರಲ್ಲಿ ವಿಚಾರ ಮಾಡಿ ಅರ್ಜಿ ಕೊಡಲು ತಡವಾಗಿರುತ್ತದೆ. ಅದ ಕಾರಣ ನನ್ನ ಆಸ್ತಿ ಕಬಳಿಸುವ ಉದ್ದೇಶದಿಂದ ಸುಳ್ಳು ದಾಖಲಾತಿಗಳನ್ನು ಸೃಷ್ಠಿಸಿ ಕಲಬುರಗಿ ತಹಸೀಲ್ ಕಛೇರಿಗೆ ಸಲ್ಲಿಸಿರುವ ಮತ್ತು ನನಗೆ ಅವಾಚ್ಯ ಶಬ್ದಗಳಿಂದ ಬೈದು ಜಾತಿ ನಿಂದನೆ ಮಾಡಿದವರ ವಿರುದ್ದ ಕಾನೂನು ರೀತಿ ಕ್ರಮಕೈಕೊಳ್ಳಬೇಕಾಗಿ ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ. ಅಂತಾ ಕೊಟ್ಟ ಲಿಖಿತ ದೂರು ಅರ್ಜಿ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

ಇತ್ತೀಚಿನ ನವೀಕರಣ​ : 19-03-2022 02:37 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080