ಅಭಿಪ್ರಾಯ / ಸಲಹೆಗಳು

ಬ್ರಹ್ಮಪೂರ ಪೊಲೀಸ್‌ ಠಾಣೆ :- ದಿನಾಂಕ 06/02/2023 ರಂದು 00-30 ಎ.ಎಂಕ್ಕೆ ಸರಕಾರಿ ತರ್ಪೇ ಪಿರ್ಯಾದಿದಾರರಾಗಿ ಶ್ರೀ ವಾಹೀದ ಹುಸೇನ ಕೊತ್ವಾಲ್ ಆರಕ್ಷಕ ಉಪ ನಿರೀಕ್ಷಕರು ಚೌಕ ಪೊಲೀಸ್ ಠಾಣೆ ಕಲಬುರಗಿ ನಗರ ವಯ: 40 ವರ್ಷ ಉ: ಆರಕ್ಷಕ ಉಪ ನಿರೀಕ್ಷಕರು ಸಾ: ಕಲಬುರಗಿ ನಗರ ರವರು ಠಾಣೆಗೆ ಬಂದು ಪಿರ್ಯಾದಿ ಹೇಳಿಕೆ ಸಲ್ಲಿಸಿದ ಸಾರಾಂಶವೆನೆಂದರೆ, ಇಂದು ದಿನಾಂಕ: 05/02/2023 ರಂದು ಸಾಯಾಂಕಾಲ ನಾನು ಠಾಣಾ ಕರ್ತವ್ಯದಲ್ಲಿದ್ದಾಗ ಕಲಬುರಗಿ ನಗರದ ಕಂಟ್ರೋಲ್ ರೂಮದಿಂದ ಜನತಾ ಬಜಾರದ ಹತ್ತಿರ ಒಬ್ಬ ವ್ಯಕ್ತಿ ಕೈಯಲ್ಲಿ ಚಾಕು ಹಿಡಿದುಕೊಂಡು ಹೋಗಿ ಬರುವ ಸಾರ್ವಜನಿಕರಿಗೆ ಹೊಡೆಯಲು ಪ್ರಯತ್ನ ಮಾಡುತ್ತಿದ್ದು ಕೂಡಲೇ ಘಟನಾ ಸ್ಥಳಕ್ಕೆ ಹೋಗಿರಿ ಅಂತ ತಿಳಿಸಿದ ಮೇರೆಗೆ ನಮ್ಮ ಠಾಣೆಯಲ್ಲಿದ್ದ ಅಪರಾಧ ವಿಭಾಗದ ಸಿಬ್ಬಂದಿಯವರಾದ ಮೋಸಿನ್ ಪಿಸಿ-285, ಸುರೇಶ ಪಿಸಿ-130 ಇವರಿಗೆ ಕಳುಹಿಸಿಕೊಟ್ಟಿದ್ದು ಇರುತ್ತದೆ. ನಂತರ ಅಂದಾಜು 9:00 ಗಂಟೆ ಸುಮಾರಿಗೆ ಅಪರಾಧ ವಿಭಾಗದ ಸಿಬ್ಬಂದಿಯವರಾದ ಮೋಸಿನ್ ಪಿಸಿ-285 ಇವರು ನನ್ನ ಮೊಬೈಲಗೆ ಕರೆ ಮಾಡಿ ಜನತಾ ಬಜಾರ ಕ್ರಾಸ್ದ ಹತ್ತಿರ ಒಬ್ಬ ವ್ಯಕ್ತಿ ತನ್ನ ಎರಡು ಕೈಯಲ್ಲಿ ಹರಿತವಾದ ಚಾಕು ಹಿಡಿದುಕೊಂಡು ಸಾರ್ವಜನಿಕರಿಗೆ ಹೆದರಿಸುತ್ತಾ ಯಾರಿಗಾದರೂ ಒಬ್ಬರಿಗೆ ಇಂದು ಚಾಕುವಿನಿಂದ ಹೊಡೆದು ಕೊಲ್ಲುತ್ತೇನೆ ಅಂತ ಓಡಾಡುತ್ತಿದ್ದಾನೆ, ಇಲ್ಲಿ ಬ್ರಹ್ಮಪೂರ ಪೊಲೀಸ್ ಠಾಣೆಯಿಂದಲೂ ಸಹ ಸಿಬ್ಬಂದಿಯವರು ಬಂದಿದ್ದು ನಾವೆಲ್ಲರೂ ಕೂಡಿ ಅವನಿಗೆ ಚಾಕು ಕೆಳಗಡೆ ಬಿಸಾಕು ಅಂತ ಎಚ್ಚರಿಕೆ ಕೊಟ್ಟಾಗಲೂ ಸಹ ಅವನು ನಮ್ಮ ಮೇಲೆ ಹಾಗೂ ಸಾರ್ವಜನಿಕರ ಮೇಲೆ ಚಾಕುವಿನಿಂದ ಹೊಡೆಯಲು ಪ್ರಯತ್ನಿಸುತ್ತಿದ್ದು ನೀವು ಕೂಡಲೇ ಬನ್ನಿರಿ ಅಂತ ತಿಳಿಸಿದರು. ನಾನು ಕೂಡಲೇ ಸಿಬ್ಬಂದಿಯವರಾದ ಅಶೋಕ ಪಿಸಿ-06 ರವರಿಗೆ ಕರೆದುಕೊಂಡು ಮೊಟರ ಸೈಕಲ ಮೇಲೆ ಜನತಾ ಬಜಾರ ಕಡೆಗೆ ಹೋಗಿದ್ದು ಅಲ್ಲಿ ರಸ್ತೆಯ ಬದಿಯಲ್ಲಿ ಎರಡು ಕಡೆ ಸಾಕಷ್ಟು ಸಾರ್ವಜನಿಕರು ನೆರೆದಿದ್ದು ನಾನು ಜನರನ್ನು ಬದಿಗೆ ಸರಿಸಿ ಒಳಗೆ ಹೋಗಲು ಅಲ್ಲಿ ಒಬ್ಬ ವ್ಯಕ್ತಿ ತನ್ನ ಬಲಗೈಯಲ್ಲಿ ಹರಿಯವಾದ ಉದ್ದನೆಯ ಚಾಕು ಹಾಗೂ ಎಡಗೈಯಲ್ಲಿ ಇನ್ನೊಂದು ಚೂಪಾದ ಚಾಕುವನ್ನು ಹಿಡಿದುಕೊಂಡು ಜೋರಾಗಿ ಜನರಿಗೆ ಬೈಯುತ್ತಾ ನಿಂತಿದ್ದನು. ನಾನು ಅವನಿಗೆ ನಿನ್ನ ಕೈಯಲ್ಲಿರುವ ಚಾಕುವನ್ನು ಕೆಳಗಡೆ ಬಿಸಾಕು ಅಂತ ಹೇಳಿದ್ದು, ಅವನು ಚಾಕು ಬಿಸಾಕದೇ ಇವತ್ತು ಯಾರಿಗಾದರೂ ಚಾಕುವಿನಿಂದ ಹೊಡೆದೆ ತೀರುತ್ತೇನೆ ಅಂತ ಸಾರ್ವಜನಿಕರತ್ತ ಚಾಕು ತೋರಿಸುತ್ತಿದ್ದನು. ಆಗ ಸ್ಥಳದಲ್ಲಿದ್ದ ಬ್ರಹ್ಮಪೂರ ಪೊಲೀಸ್ ಠಾಣೆಯ ಸಿಬ್ಬಂದಿ ಬಸವರಾಜ ಸಿಪಿಸಿ-249 ರವರು ಸಮವಸ್ತ್ರದಲ್ಲಿದ್ದು ಚಾಕು ಕೆಳಗಡೆ ಬೀಸಾಕು ಅಂತ ಹೇಳಿ ಅವನತ್ತ ಎರಡು ಹೆಜ್ಜೆ ಮುಂದೆ ಹೋಗಲು ಅವನು ಕೂಡಲೇ ಅವರ ಮೈಮೇಲೆ ಏರಿ ಬಂದು ಕುತ್ತಿಗೆ ಹತ್ತಿರ ಬಲಗೈಯಿಂದ ಚಾಕು ಬೀಸಿ ಕೊಲೆ ಮಾಡಲು ಪ್ರಯತ್ನಿಸಿದ್ದು, ಸಿಬ್ಬಂದಿ ಕೂಡಲೇ ಹಿಂದೆ ಸರಿದರು. ಅಲ್ಲದೇ ಅಲ್ಲಿ ನೆರೆದಿದ್ದ ಸಾರ್ವಜನಿಕರಿಗೆ ಹಾಗೂ ಪೊಲೀಸ್ರಿಗೆ ಚಾಕು ತೋರಿಸುತ್ತಾ ಮುಂದೆ ಓಡುವದು ಮಾಡುತ್ತಿದ್ದನು. ಸಾಕಷ್ಟು ಬಾರಿ ಅವನಿಗೆ ಚಾಕುವನ್ನು ಕೆಳಗೆ ಬೀಸಾಕುವಂತೆ ಸೂಚನೆ ನೀಡಿದಾಗ್ಯೂ ಅವನು ನಮ್ಮ ಮಾತು ಕೇಳದೇ ನಮ್ಮ ಮೇಲೆ ದಾಳಿ ಮಾಡಿ ಕೊಲೆ ಮಾಡಲು ಪ್ರಯತ್ನಿಸಿದ್ದು ಇವನಿಗೆ ಹೀಗೆ ಬಿಟ್ಟಲ್ಲಿ ಇವನು ಮಾರ್ಕೆಟದಲ್ಲಿದ್ದ ಸಾರ್ವಜನಿಕರಿಗೆ ಅಥವಾ ಸ್ಥಳದಲ್ಲಿ ಹಾಜರಿದ್ದ ಪೊಲೀಸ್ ಸಿಬ್ಬಂದಿಯವರಿಗೆ ಚಾಕುವಿನಿಂದ ಹೊಡೆದು ಪ್ರಾಣ ಹಾನಿ ಉಂಟು ಮಾಡುವ ಸಂಭವ ಕಂಡು ಬಂದಿದ್ದರಿಂದ ನನ್ನ ಸರ್ವಿಸ್ ಪಿಸ್ತೂಲದಿಂದ ಮೂರು ಸುತ್ತು ಗುಂಡು ಹಾರಿಸಿರುತ್ತೇನೆ. ಆಗ ಅವನು ನೆಲಕ್ಕೆ ಉರುಳಿ ಬಿದ್ದಿದ್ದು ಇರುತ್ತದೆ. ಬಲಗಾಲಿಗೆ ರಕ್ತಗಾಯವಾಗಿದ್ದು ಇರುತ್ತದೆ. ನಾನು ಕೂಡಲೇ ಅವನಿಗೆ ಚಿಕಿತ್ಸೆ ಕುರಿತು ಅಲ್ಲೇ ಇದ್ದ ಸರ್ಕಾರಿ ಪೊಲೀಸ್ ಜೀಪದಲ್ಲಿ ಸಿಬ್ಬಂದಿಯವರಾದ ಶಿವಪ್ರಕಾಶ ಹೆಚ್.ಸಿ-150 ರವರೊಂದಿಗೆ ಜಿಮ್ಸ್ ಆಸ್ಪತ್ರೆಗೆ ಕರೆದುಕೊಂಡು ಉಪಚಾರಕ್ಕೆ ದಾಖಲು ಮಾಡಿರುತ್ತೇನೆ. ಕರ್ತವ್ಯ ನಿರತ ವೈದ್ಯರು ಅವನಿಗೆ ಸೂಕ್ತ ಚಿಕಿತ್ಸೆ ನೀಡಿದ್ದು ನಂತರ ಹೆಚ್ಚಿನ ಚಿಕಿತ್ಸೆಗಾಗಿ ಬಸವೇಶ್ವರ ಆಸ್ಪತ್ರೆಗೆ ಕರೆದುಕೊಂಡು ಹೋಗಲು ತಿಳಿಸಿದ ಮೇರೆಗೆ ನಾನು ಗಾಯಾಳುವಿಗೆ ಬಸವೇಶ್ವರ ಆಸ್ಪತ್ರೆಗೆ ತೆಗೆದುಕೊಂಡು ಚಿಕಿತ್ಸೆಗೆ ದಾಖಲಿಸಿದ್ದು ಇರುತ್ತದೆ. ಆಗ ಅವನಿಗೆ ಹೆಸರು ವಿಚಾರಿಸಲು ತನ್ನ ಹೆಸರನ್ನು ಮಹ್ಮದ ಫಜಲ್ ತಂದೆ ಮಹ್ಮದ ಜಾಫರಸಾಬ್ ಹಿಪ್ಪರಗಾ ವಯ: 28 ವರ್ಷ ಅಂತ ತಿಳಿಸಿದನು. ನಂತರ ಅಲ್ಲಿಂದ ಮರಳಿ ಬ್ರಹ್ಮಪೂರ ಪೊಲೀಸ್ ಠಾಣೆಗೆ ಬಂದು ಗಣಕಯಂತ್ರದಲ್ಲಿ ಹೇಳಿ ಟೈಪ್ ಮಾಡಿಸಿದ್ದು, ಸಾರ್ವಜನಿಕರಿಗೆ ಹಾಗೂ ಪೊಲೀಸರಿಗೆ ಕೊಲೆ ಮಾಡಲು ಪ್ರಯತ್ನಿಸಿದ ಹಾಗೂ ಪೊಲೀಸ್ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪಿತನ ವಿರುದ್ದ ನನ್ನ ದೂರನ್ನು ನೀಡುತ್ತಿದ್ದು ಸೂಕ್ತ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಕೊಟ್ಟ ಹೇಳಿಕೆ ಪಿರ್ಯಾದಿ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

ಫರಹತಾಬಾದ ಪೊಲೀಸ ಠಾಣೆ :-  ದಿನಾಂಕ:06.02.2023 ರಂದು ಸಾಯಂಕಾಲ 6 ಗಂಟೆಗೆ ಫಿರ್ಯಾದಿ ಶ್ರೀ ಭೀಮರಾಯ ತಂದೆ ಶರಣಪ್ಪಾ ಕೊಳ್ಳೂರ ಕಾರ್ಯದರ್ಶಿಗಳು ಸಿದ್ದೇಶ್ವರ ದೇವಸ್ಥಾನದ ಕಮಿಟಿ ಸಾ: ಮೇಳಕುಂದಾ (ಬಿ) ತಾ:ಜಿ:ಕಲಬುರಗಿ ಇವರು  ಠಾಣೆಗೆ ಹಾಜರಾಗಿ ದೂರು ಸಲ್ಲಿಸಿದ್ದರ ಸಾರಾಂಶವೇನೆಂದರೆ, ಶ್ರೀ ಸಿದ್ದೇಶ್ವರ ದೇವಸ್ಥಾನದ ಕಮಿಟಿಯವರಿಗೆ ಮಾನ್ಯ ನ್ಯಾಯಾಲಯ ತಡೆಯಾಜ್ಞೆ ನೀಡಿದ್ದು ಹಾಗೂ ದೇವಸ್ಥಾನದಲ್ಲಿ ಮಾಳಿಂಗರಾಯ ಕಮಿಟಿಯವರು ಯಾವುದೇ ಅನಧೀಕೃತ ಕೃತ್ಯ ಮಾಡಬಾರದೆಂದು ಆದೇಶ ನೀಡಲಾಗಿದೆ. ಮಾನ್ಯರೆ ಶ್ರೀ ಮಾಳಿಂಗರಾಯ ಟ್ರಸ್ಟ್ ಕಮಿಟಿಗೆ ಶ್ರೀ ಸಿದ್ದೇಶ್ವರ ದೇವಸ್ಥಾನದ ಪೂಜೆ ಮಾಡಲು ಮಾನ್ಯ ನ್ಯಾಯಾಲಯದಿಂದ ಯಾವುದೇ ಆದೇಶವಿಲ್ಲ, ಆದರೆ ಅವರ ಕೃತ್ಯ ಅನಧೀಕೃತ ಇದ್ದರೂ ಸಹ ಪೊಲೀಸರು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಹಾಗೂ ಈಗಾಗಲೇ ಮಾಳಿಂಗರಾಯ ಟ್ರಸ್ಟ್ ಕಮಿಟಿಯವರ ವಿರುದ್ದ ಮಾನ್ಯ ನ್ಯಾಯಾಲಯದಲ್ಲಿ ಕಂಟೆಂಪ್ಟ್ ಆಫ್ ಕೋರ್ಟ ಆರ್ಡರ್ ಇನ್ ಮಿಸ್ ನಂ 1 ಆಫ್ 2023 ಹಾಕಲಾಗಿದೆ .     ದಿನಾಂಕ:05.02.2023 ರಂದು ಬೆಳಗ್ಗೆ 5 ಗಂಟೆಗೆ ಈ ಕೆಳಕಂಡ ವ್ಯಕ್ತಿಗಳು ದೇವಸ್ಥಾನದ ಕೀಲಿ ಮುರಿದು ದೇವಸ್ಥಾನದಲ್ಲಿ ಅನಧೀಕೃತ ಕೃತ್ಯ ಕಾರ್ಯ ಮಾಡುತ್ತಿದ್ದಾರೆ, ಅವರುಗಳ ಹೆಸರು 1)  ಹಣಮಂತ ತಂದೆ ಬಾಬು ಪೂಜಾರಿ 2) ಶಿವಪು ತ್ರಪ್ಪ ತಂದೆ ಹಣಮಂತ ಪೂಜಾರಿ 3) ಶಿವಯೋಗಪ್ಪಾ ತಂದೆ ಜಕೊಲ್ಲಿ ಪೂಜಾರಿ 4) ರವಿ ತಂದೆ ಭೀಮಪ್ಪಾ ಪೂಜಾರಿ 5) ಅನೀಲ ತಂದೆ ಮಲ್ಲಣ್ಣ ಪೂಜಾರಿ 6) ಸುನೀಲ ತಂದೆ ಮಲ್ಲಣ್ಣ ಪೂಜಾರಿ 7) ಶ್ಯಾಮರಾಯ ತಂದೆ ಶಿವರಾಯ ವಡೆಯರ 8) ರಮೇಶ ತಂಧೆ  ಶಿವರಾಯ ವಡೆಯರ 9) ಸೋಮನಾಥ ತಂದೆ ಮನಗೆನಸಿದ್ದ ವಡೆಯರ 10) ಲಕ್ಷ್ಮೀಕಾಂತ ತಂದೆ ವಿಠ್ಠಲ ಪೂಜಾರಿ 11) ಮಹಾಳಿಂಗ ತಂದೆ ಹಣಮಂತ ಪೂಜಾರಿ 12) ಮಹೇಶ ತಂದೆ ಹಣಮಂತ ಪೂಜಾರಿ 13) ರಾಜಕುಮಾರ ತಂದೆ ಭೀರಣ್ಣಾ ಪೂಜಾರಿ 14) ಶಿವರಾಯ ತಂದೆ ಸಿದ್ದಣ್ಣ ವಡೆಯರ 15) ಮಲ್ಲಪ್ಪ ತಂದೆ ಬೀರಣ್ಣ ಪೂಜಾರಿ 16) ಸಿದ್ದಣ್ಣ ತಂದೆ ರಾಮಚಂದ್ರ ಪೂಜಾರಿ 17) ಮಾಳಪ್ಪ ತಂದೆ ಶಿವಪುತ್ರಪ್ಪ ಪೂಜಾರಿ 18) ಭೀಮಾಶಂಕರ ತಂದೆ ಸಿದ್ದಣ ಪೂಜಾರಿ 19) ಬಸಣ್ಣ ತಂದೆ ಶರಣಪ್ಪ ಪೂಜಾರಿ 20) ಲಕ್ಷ್ಮಣ ತಂದೆ ಬೀರಣ್ಣ ಪೂಜಾರಿ 21) ತುಕ್ಕಪ್ಪ ತಂದೆ ಸಿದ್ದಪ್ಪ ವಡೆಯರ 22) ಸುನೀಲ ತಂದೆ ಮಲ್ಲಣ್ಣ ಅವರಳ್ಳಿ 23)ಸಿದ್ದಣ್ಣ ತಂದೆ ಶಿವಪುತ್ರಪ್ಪ ಪೂಜಾರಿ 24) ಬರಗಲ್ಲಿ ತಂದೆ ಭೀಮಪ್ಪ ಪೂಜಾರಿ 25) ಮೈನೊದ್ದಿನ ತಂದೆ ದಸ್ತಗಿರ ನದಾಫ್ 26) ಹೂವಣ್ಣ ತಂದೆ ಸಾಯಬಣ್ಣ ಪೂಜಾರಿ 27) ಬೀರಲಿಂಗ ತಂದೆ ಮಾಳಪ್ಪ ವಡೆಯರ 28) ಶಿವಾನಂದ ತಂದೆ ಮಾಳಪ್ಪ ವಡೆಯರ 29) ಸುನೀಲ ತಂದೆ ಸಿದ್ದಣ್ಣ 30) ಅಪ್ಪಾರಾಯ ತಂದೆ ಸಿದ್ದಣ್ಣ 31) ಜಗದೇವಪ್ಪ ತಂದೆ ಸಿದ್ರಾಮಪ್ಪಾ ಪೂಜಾರಿ 32) ಅಣ್ಣಾರಾಯ ತಂದೆ ಬಾಬಣ್ಣ 33) ಮಲ್ಲೇಶ ತಂದೆ ಮಾಳಪ್ಪ ಪೂಜಾರಿ 34) ಮಲ್ಲಣ್ಣ ತಂದೆ ಬಾಬು 35) ಸಾಮಣ್ಣ ತಂದೆ ಸಿದ್ರಾಮಪ್ಪ ಪೂಜಾರಿ ಸದರಿಯವರೆಲ್ಲರ ವಿರುದ್ದ ಕಾನೂನಿನ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಹಾಗೂ ಶ್ರೀ ಸಿದ್ದೇಶ್ವರ ಟ್ರಸ್ಟ್ ಕಮಿಟಿಗೆ ರಕ್ಷಣೆ ನೀಡಲು ಆದೇಶ ನೀಡಬೇಕೆಂದು ಮನವಿ ಮಾಡಿಕೊಳುತ್ತಿದ್ದೆನೆ ಅಂತಾ ಇತ್ಯಾದಿ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

ಎಂ.ಬಿ.ನಗರ ಪೊಲೀಸ್‌ ಠಾಣೆ :-  ದಿನಾಂಕ 06-02-2023 ರಂದು 02.15 ಪಿ.ಎಮ್ ಕ್ಕೆ ಫಿರ್ಯಾದಿದಾರರಾದ ಶ್ರೀ ಆಸೀಫ ತಂದೆ ಅಹೇಮದ್ ಅಲಿ ವ|| 25 ವರ್ಷ ಜಾತಿ|| ಮುಸ್ಲಿಂ ಉ|| ಟೇನಿಸ್ ಕೊಚ್|| ಭರತ ನಗರ ತಾಂಡಾ ಕಲಬುರಗಿ ರವರು ಠಾಣೆಗೆ ಹಾಜರಾಗಿ ಒಂದು ದೂರು ಅರ್ಜಿ ಹಾಜರು ಪಡಿಸಿದ್ದು ಸದರಿ ದೂರು ಅರ್ಜಿಯ ಸಾರಾಂಶವೆನೇಂದರೆ, ಇಂದು ದಿನಾಂಕ 06-02-2023 ರಂದು ಬೇಳಿಗ್ಗೆ 10.00 ಗಂಟೆಗೆ ವಿಜಯಲಕ್ಷೀ ಕಲ್ಯಾಣ ಮಂಟಪದ ಪಕ್ಕದ ರಸ್ತೆಯಿಂದ ಹೋಗುತ್ತಿರುವಾಗ ಅಲ್ಲಿ ಚಿಕ್ಕ ಚಿಕ್ಕ ಮಕ್ಕಳು ಪತಂಗ ಹಾರಿಸಲು ಹೋದಾಗ ನಾನು ಸಹ ಅಲ್ಲಿ ಹೋಗಿ ನೋಡಲು ಹಾಳು ಬಿದ್ದ ಖಾಲಿ ಜಾಗದಲ್ಲಿ ಅಂದಾಜು ಹಸೂಗೂಸು ಒಂದು ಗಂಡು  ಶವ ಬಿದ್ದಿದ್ದು ನಾನು ನೋಡಲು ಅದರ ತಲೆ ಭಾಗ ಮತ್ತು ಬಲಗೈ ಇರುವುದಿಲ್ಲ. ಸದರಿ ಹಸೂಗೂಸು ಅಂದಾಜು 1 ರಿಂದ 2 ದಿವಸದ್ದು ಇರಬಹುದು. ನಂತರ ನಾನು 112 ಪೊಲೀಸ ಜೀಪಗೆ ಫೋನ ಮಾಡಿದಾಗ ಅಲ್ಲಿ ಪೊಲೀಸ ಗಾಡಿ 112 ಬಂದಿರುತ್ತದೆ. ಆಗ ನಾನು ಅವರಿಗೆ ಸದರಿ ವಿಷಯ ತಿಳಿಸಿದಾಗ ಅವರು ಸಹ ನೋಡಿರುತ್ತಾರೆ. ನಂತರ ನನ್ನ ಗೆಳೆಯ ಮಹಮದ್ ಇಮರಾನ್ ಇವರು ಹೋಗುತ್ತಿರುವಾಗ ಅವರಿಗೂ ಕರೆಯಿಸಿ ಸದರಿ ವಿಷಯ ತಿಳಿಸಿದೆನು. ಸದರಿ ಹಸೂಗೂಸುವಿನ ಮೇಲೆ ಯಾವುದೇ ಬಟ್ಟೆ ಇರುವುದಿಲ್ಲ. ಯಾರೋ ಅಪರಿಚಿತರು ಜನಿಸಿದ ಗಂಡು ಮಗು ಜನನಕ್ಕೆ ಮುಂಚೆ ಅಥವಾ ತರುವಾಯ ಅಥವಾ ಜನನ ಕಾಲದಲ್ಲಿ ಮತೃ ಪಟ್ಟಿದ್ದರಿಂದ ಅಂತಹ ಮಗೂವಿನ ಜನನವನ್ನು ಬಚ್ಚಿಡುವ ಉದ್ದೇಶದಿಂದ ಎಸೆದು ಹೋಗಿರುತ್ತಾರೆ. ಅಂತಾ ತಿಳಿದು ಬಂದಿರುತ್ತದೆ. ಕಾರಣ ಮಾನ್ಯರವರು ಯಾರೋ ಅಪರಿಚಿತ ಜನರನ್ನು ಪತ್ತೆ ಹಚ್ಚಿ ಅವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ತಮ್ಮಲ್ಲಿ ಕೋರುತ್ತೆನೆ ಎಂದು ನೀಡಿರುವ ದೂರು ಅರ್ಜಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

ವಿಶ್ವವಿದ್ಯಾಲಯ ಪೊಲೀಸ ಠಾಣೆ :-  ದಿನಾಂಕ 06.02.2023 ರಂದು 1:45 ಪಿ.ಎಮ್ ಕ್ಕೆ ಫಿರ್ಯಾದಿದಾರರಾದ ಶ್ರೀ ಗೋಪಾಲ ತಂದೆ ದೇವಿಂದ್ರಪ್ಪಾ ವಯ: 32 ವರ್ಷ, ಉ: ಕೂಲಿ, ಜಾತಿ: ಎಸ್.ಟಿ ಬೇಡರ್, ಸಾ: ಇಟಗಾ ಅಹ್ಮದಾಬಾದ ತಾ:ಜಿ: ಕಲಬುರಗಿ ಇವರು ಯುನೈಟೆಡ್ ಆಸ್ಪತ್ರೆಯಲ್ಲಿ ಹೇಳಿಕೆ ನೀಡಿದ್ದು, ಸದರಿ ಹೇಳಿಕೆ ಪಡೆದುಕೊಂಡು ಮರಳಿ ಠಾಣೆಗೆ ಬಂದು 2:10 ಪಿ.ಎಮ್ ಕ್ಕೆ ಬಂದು ಸದರಿ ಹೇಳಿಕೆ ಸಾರಾಂಶ ಏನೆಂದರೆ, ನಾನು ಕೂಲಿ ಕೆಲಸ ಮಾಡಿಕೊಂಡು ಹೆಂಡತಿ ಇಬ್ಬರ ಮಕ್ಕಳ ಜೋತೆಗೂಡಿ ಇಟಗಾ ಅಹ್ಮದಾಬಾದ ಗ್ರಾಮದಲ್ಲಿ ಉಪ-ಜೀವನ ಮಾಡುತ್ತಿದ್ದೆನೆ. ಹೀಗಿದ್ದು, ದಿನಾಂಕ 04.01.2023 ರಂದು ನಾನು ನಮ್ಮೂರಿನ ಕನಕದಾಸ ಕಟ್ಟೆಯ ಹತ್ತಿರ ಇರುವ ಹೊಟೆಲ ಹತ್ತಿರ ಬೇಳಿಗ್ಗೆ 9:00 ಗಂಟೆ ಸುಮಾರಿಗೆ ನನ್ನ ಗೆಳೆಯ ರವಿಯ ಜೊತೆ ಮಾತನಾಡುತ್ತಾ ನಿಂತುಕೊಂಡಿದ್ದೆ ಆ ಸಮಯದಲ್ಲಿ ನಮ್ಮೂರಿನ ಲೈನ್ ಮೆನ್ ಕಾಶಿನಾಥ ಬಂದು ಇಲ್ಲೆ ಊರ ಹೊರಗೆ ರೋಡಿನ ಕಂಬದ ಕರೆಂಟ್ ಹೋಗಿದೆ ನೋಡಿ ಬರೋಣ ನಡೆ ಎಂದು ಕರೆದುಕೊಂಡು ಹೋದನು. ನಾನು ಮತ್ತು ಕಾಶಿನಾಥ ಆತನ ಹಿರೋ ಹಒಂಡಾ ದ್ವೀಚಕ್ರ ವಾಹನದ ಮೇಲೆ ಹೋದೇವು. ಅಲ್ಲಿ ಹೋದ ನಂತರ ಊರಿನ ಟಿ.ಸಿ ಕರೆಂಟ್ ನಾನು ಬಂದ್ ಮಾಡಿದ್ದೇನೆ ನೀನು ಈ ಲೈಟಿನ ಕಂಬ ಏರು ಅಂತಾ ಹೇಳಿದನು. ನಾನು ಆತನ ಮಾತು ನಂಬಿ ರೋಡಿಗಿರುವ ಲೈಟಿನ ಕಂಬ ಏರಿ ಜಿಯೋಸ್ ಆಫ್ ಮಾಡುವಾಗ ನನ್ನ ಬಲಗೈಗೆ ಕರೆಂಟ್ ಹೊಡೆದು ದಪ್ಪನೆ ಕೆಳಗಡೆ ಬಿದ್ದಿರುತ್ತೇನೆ ಬೇವೂಸ್ ಆಗಿ ಬಿದ್ದಿರುವುದನ್ನು ನೀಡಿದ ಕಲ್ಲಬೇನೂರಿನ ರಾಯಪ್ಪಾ ಓಡಿ ಬಂದು ಏ ಬೇಗ ನೀರು ತಗೊಂಡ ಬರ್ರಿ ಅಂತಾ ಚೀರಿದನು. ಅದೇ ಊರಿನ ಒಬ್ಬ ಹುಡುಗ ನನ್ನ ಬಾಯಲ್ಲಿ ನೀರು ಹಾಕಿ ಕುಡಿಸಿರುತ್ತಾನೆ. ಇದೆಲ್ಲಾ ಬೆಳಿಗ್ಗೆ 10:00 ಗಂಟೆ ಸುಮಾರಿಗೆ ಆಗಿದೆ. ನನ್ನ ಬಲಗೈ ಮುಂಗೈ ಹತ್ತಿರ ಸುಟ್ಟು ಇಡಿ ಕೈ ಸುಂದ್ ಆಗಿದೆ. ಎಡಗೈ ಮುಂಡಿ ಭುಜ ಸುಟ್ಟಿದೆ ರಕ್ಷಣಕ್ಕೆ ಲೈನ್ ಮಎನ್ ಕಾಶಿನಾಥ ತನ್ನ ಹಿರೋ ಹೊಂಡಾ ಗಾಡಿ ಮೇಲೆ ಕೂಡಿಸಿಕೊಂಡು ಸರಕಾರಿ ಆಸ್ಪತ್ರೆ ಹೆಬ್ಬಾಳಕ್ಕೆ ಕರೆದುಕೊಂಡು ಹೋದನು. ಅಲ್ಲಿನ ವೈದ್ಯರು ಎರಡು ಇಂಜೆಕ್ಷನ್ ಮಾಡಿ ಇಲ್ಲಾ ನಾವು ಹಿಡಿಯುವುದಿಲ್ಲ ನೀವು ಜಯದೇವ ಆಸ್ಪತ್ರೆ ಕಲಬುರಗಿಗೆ ಹೋಗಿ ಎಂದರು. ಆಗ ಸಮಯ 11:00 ಎ.ಎಮ್ ಆಗಿರಬಹುದು. ನಂತರ ಲೈನ್ ಮೆನ್ ಕಾಶಿನಾಥ ತನ್ನ ಗಾಡಿಯಮೇಲೆ ಕೂಡಿಸಿಕೊಂಡು ಸರಕಾರಿ ಆಸ್ಪತ್ರೆ ಕಲಬುರಗಿಗೆ ತಂದು ಚಿಕಿತ್ಸೆಗೆಂದು ದಾಖಲಿಸಿರುತ್ತಾನೆ. ಆಗ ಸಮಯ 12:30 ಪಿ.ಎಮ್ ಆಗಿರಬಹುದು. ಅಲ್ಲಿನ ವೈದ್ಯರು ಏನಾಗಿದೆ ಅಂತಾ ಕೇಳಿದಾಗ ನಾನು ಹಿರೋ ಹೊಂಡಾ ಗಾಡಿಯ ಮೇಲೆ ಬಿದ್ದಿರುತ್ತೇನೆ. ಅಂತಾ ಸುಳ್ಳು ಹೇಳಿದ್ದೇನೆ. ಲೈನ್ ಮೆನ್ ಕಾಶಿನಾಥ ಬೇಳಿಗ್ಗೆಯಿಂದಲೆ ನೀನು ಯಾರೇ ಕೇಳಿದರೂ ಗಾಡಿಯ ಮೇಲಿಂದ ಬಿದ್ದಿರುತ್ತೇನೆ ಅಂತಾ ಹೇಳು ಇಲ್ಲದಿದ್ದರೆ ನನಗೆ ಮತ್ತು ನಿನಗೆ ನಿಮ್ಮ ತಂದೆ ತಾಯಿ ಬಯ್ಯುತ್ತಾರೆ ಅಂತಾ ಹೇಳಿದನು. ನಿನಗೆ ದವಾಖಾನೆಗೆ ತೋರಿಸುತ್ತೇನೆ ಯಾರೇ ಕೇಳಿದರೂ ಲೈಟಿನ ಕಂಬದ ಮೇಲಿಂದ ಬಿದ್ದಿದ್ದೇನೆ. ಅಂತಾ ಹೇಳಬ್ಯಾಡ ಗಾಡಿ ಮೇಲಿಂದ ಬಿದ್ದಿದ್ದೇನೆ ಅಂತಾ ಸುಳ್ಳು ಹೇಳು ಅಂತಾ ಕಲಿಸಿಕೊಟ್ಟ ಮೇರೆಗೆ ನಾನು ಅದೇ ರೀತಿ ವೈದ್ಯರಿಗೆ ಹೇಳಿದ್ದೇನೆ. ಅಲ್ಲಿನ ವೈದ್ಯರು ಸುಳ್ಳು ಹೇಳಬ್ಯಾಡ ಎಂದು ಜೋರಾಗಿ ಕೇಳಿದಾಗ ನಾನು ಇರುವ ನಿಜಸ್ಥಿತಿಯನ್ನು ತಿಳಿಸಿದ್ದೆನೆ. ನಿನ್ನೆ ಒಂದು ರಾತ್ರಿ  ಜಯದೇವ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ  ಪಡೆದುಕೊಂಡಿದ್ದೇನೆ. ಅಲ್ಲಿ ನನ್ನ ಹೊಟ್ಟೆ ಉಬ್ಬುವುದು, ಎದೆ ಒಮ್ಮೇಲೆ ಜೋರಾಗಿ ಗಟ್ಟಿಯಾಗಿ ಹಿಡಿದುಕೊಂಡಂಗೆ ಆಗುತ್ತಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ನಿನ್ನೆ ದಿನಾಂಕ 05.02.2023 ರಂದು 10:30 ಎ.ಎಮ್ ಸುಮಾರಿಗೆ ಯುನೈಟೆಡ್ ಆಸ್ಪತ್ರೆಗೆ ಬಂದು ಚಿಕಿತ್ಸೆಗೆಂದು ದಾಖಲಾಗಿದ್ದೇನೆ. ಸದ್ಯ ಯುನೈಟೆಡ್ ಆಸ್ಪತ್ರೆಯಲ್ಲಿ ಐ.ಸಿ.ಯು ನಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದೇನೆ. ವೈದ್ಯರು ಇನ್ನೂ 4-5 ದಿವಸ ನಾಣು ಏನು ಗ್ಯಾರಂಟಿ ಹೇಳುವುದಿಲ್ಲ ಎನ್ನುತ್ತಿದ್ದಾರೆ ಇಷ್ಟಾದರೂ ಲೈನ್ ಮೆನ್ ನಮ್ಮ ತಂದೆ ತಾಯಿ ಹೆಂಡತಿಗೆ ವಿಷಯ ತಿಳಿಸಿರುವುದಿಲ್ಲ. ನಮ್ಮೂರಿನ ಜನ ನಮ್ಮ ತಂದೆಗೆ ವಿಷಯ ಹೇಳಿದ್ದರಿಂದ ಹುಡುಕಿಕೊಂಡು ಯುನೈಟೆಡ್ ಆಸ್ಪತ್ರೆಗೆ ಬಂದಿದ್ದಾರೆ ಆದ್ದರಿಂದ ಲೈನ್ ಮೆನ್ ಕಾಶಿನಾಥ ಮೇಲೆ ಕಾನೂನು ಪ್ರಕಾರ ಕ್ರಮ ಕೈಕೊಳ್ಳಬೇಕೆಂದು ನೀಡಿದ ಹೇಳಿಕೆ ದೂರಿನ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

ಇತ್ತೀಚಿನ ನವೀಕರಣ​ : 06-02-2023 08:06 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080