ಅಭಿಪ್ರಾಯ / ಸಲಹೆಗಳು

ಸ್ಟೇಷನ್‌ ಬಜಾರ ಪೊಲೀಸ್‌ ಠಾಣೆ :- ನಾನು ಅಂಜಲಿ ಗಂಡ ಹಣಮಂತರಾವ್ ಕುಲಕರ್ಣಿ ವಯಸ್ಸು 64 ವರ್ಷ, ಜಾ : ಬ್ರಾಹ್ಮಣ, ಉ : ನಿವೃತ ಶಿಕ್ಷಕಿ, ಸಾ:ಮನೆ ನಂ, 2-278, ಏಕ್ ಕಮಾನ್ ಮಸೀಧಿ ಹತ್ತಿರ ಜಗತ್ತ ಕಲಬುರಗಿ ನಗರ ಆಗಿದ್ದು. ನಾನು ಸುಮಾರು 4 ವರ್ಷಗಳಿಂದ ಪ್ರೌಡ ಶಾಲಾ ಶಿಕ್ಷಕಿ ವೃತ್ತಿಯಿಂದ ನಿವೃತ್ತಿ ಹೊಂದಿ ಈಗ ಮನೆಯಲ್ಲಿ ವಿಶ್ರಾಂತಿ ಜೀವನ ಮಾಡಿಕೊಂಡಿರುತ್ತೇನೆ, ನಾನು ನನ್ನ ಗಂಡ ಹಣಮಂತರಾವ್ ಕುಲಕರ್ಣಿ, ಇಬ್ಬರು ಕೂಡಿಕೊಂಡು ಜೇವರಗಿ ಕಾಲೋನಿಯಲ್ಲಿರುವ ರಾಯರ ಮಠಕ್ಕೆ ಹೋಗುವ ಸಲ್ಲುವಾಗಿ ಈ ದಿವಸ ಬೆಳಿಗ್ಗೆ 07-30 ಗಂಟೆ ಸುಮಾರಿಗೆ ನಮ್ಮ ಮನೆಯಿಂದ HONDA ACTIV REG NO KA-32 EA-4726-ವಾಹನದಲ್ಲಿ ಹೊರಟು ಸರ್ದಾರ್ ವಲ್ಲಾಬಾಯಿ ಪಟೇಲ ವೃತ್ತ ಹತ್ತಿರ ಹಾದೂ ಮೋಹನ ಲಾಡ್ಜ್ ಕ್ರಾಸ್ ಹತ್ತಿರದಿಂದ ಹಳೇ ಜೇವರಗಿ ರಸ್ತೆಯ ಮುಖಾಂತರ ಬೆಳಿಗ್ಗೆ 07-45 ಗಂಟೆಯಲ್ಲಿ ಹಳೆ ಜೇವರಗಿ ರಸ್ತೆಯ ರಾಠಿ ಆಸ್ಪತ್ರೆಯ ಎದುರುಗಡೆ ಹೋಗುತ್ತ್ತಿದ್ದಾಗ ಯಾರೋ ಒಬ್ಬನು ನಮ್ಮ ಹಿಂದಿನಿಂದ ಕಪ್ಪು ಬಣ್ಣದ ದ್ವಿ ಚಕ್ರ ವಾಹನದಲ್ಲಿ ಬಂದು ನಮಗೆ ನಿಲ್ಲಿಸಿ. ನಾನು ಶಿಟಿ ಹೊಡೆದರು ನಿಮಗೆ ಕೇಳುಸುತ್ತಿಲ್ಲಾ ಎಂದು ಹೇಳಿ ನಮ್ಮ ವಾಹನ ನಿಲ್ಲಿಸಿ ಈ ಕಡೆಗೆ ಬನ್ನಿ ಎಂದು ಹೇಳಿ ರೋಮನ್ ಕೆಫೆ ಮುಂದುಗಡೆ ಕರೆದುಕೊಂಡು ಹೋಗಿ ನಾವು ಕ್ರೈಂಬ್ರಾಂಚ ಪೊಲೀಸರು ಇದಿವಿ ಎಂದು ಪೊಲೀಸ್ ಐಡಿ ಕಾರ್ಡ ತೋರಿಸಿ. ನಿನ್ನೆ ದಿನ ಈ ರಸ್ತೆಯಲ್ಲಿ ಚಾಕು ಹಾಕಿದ್ದಾರೆ ಎಂದು ಭಯ ಹುಟ್ಟಿಸಿ ಬಂಗಾರದ ಆಭರಣಗಳು  ಈ ರೀತಿಯಾಗಿ ಮೈ ಮೇಲೆ ಹಾಕಿಕೊಂಡು ಓಡಾಡಿದರೆ. ಹೇಗೆ ಎಂದು ಹೇಳಿ ನನ್ನ ಕೈಯಲ್ಲಿದ್ದ ೧) 40 ಗ್ರಾಂ ಬಂಗಾರದ ಪಾಟ್ಲಿಗಳು ಒಂದು ಜೊತೆ ಅ,ಕಿ 1,60,000/-ರೂ ೨) 40 ಗ್ರಾಂ ಬಂಗಾರದ ಬಿಲ್ವಾರಗಳು ಎರಡು ಜೊತೆ ಅ,ಕಿ 1,60,000೧೬೦೦೦೦/- ರೂ ಹಾಗೂ ನನ್ನ ಕತ್ತಿನಲ್ಲಿರುವ ೩) 10 ಗ್ರಾಂ ಬಂಗಾರದ ಲಾಕೇಟ್ ಅ,ಕಿ 40,000/-ರೂ ಹೀಗೆ ಒಟ್ಟು 2,60,000/-ರೂ ಬೆಲೆ ಬಾಳುವ ಬಂಗಾರದ ಆಭರಣಗಳನ್ನು ತೆಗೆಯಿಸಿ ಪರ್ಸನಲ್ಲಿ ಹಾಕಿ ಕೊಡುತ್ತೇನೆ ತೆಗೆದುಕೊಂಡು ಅದರಲ್ಲಿ ಹಾಕಿ ನಮ್ಮ ಯಜಮಾನರ ಹತ್ತಿರ ಇರುವ ಕೈ ಚೀಲದಲ್ಲಿ ಹಾಕುತ್ತೇನೆ ಎಂದು ಹೇಳಿರುತ್ತಾನೆ. ಅದೆ ವೇಳೆಗೆ ಇನ್ನೋಬ್ಬ ವ್ಯಕ್ತಿ ಬಂದು ನಿಂತುಕೊಂಡಿದ್ದನು. ಅಲ್ಲಿಂದ ಒಂದೆ ಮೋಟಾರ್ ಸೈಕಲ್ ಮೇಲೆ ಹೋಗಿರುತ್ತಾರೆ. ನಂತರ ನಾವು ಇಬ್ಬರು ಜೇವರಗಿ ಕಾಲೋನಿಯಲ್ಲಿರುವ ರಾಯರ ಮಠದ ಹತ್ತಿರ ಹೋಗಿ ನಮ್ಮ ಕೈ ಚೀಲ ತೆಗೆದು ನೋಡಿದಾಗ ಬಂಗಾರದ ಆಭರಣಗಳು ಬ್ಯಾಗನಲ್ಲಿ ಇರಲಿಲ್ಲ. ಆಗ ನಾವು ಮೋಸ ಹೋಗಿದ್ದೇವೆ ಎಂದು ಗೊತ್ತಾಗಿ ನಾವು ಪೊಲೀಸ್ ಠಾಣೆಗೆ ಬಂದು ನಮಗೆ ಸಹಾಯ ಮಾಡುವ ನೆಪದಲ್ಲಿ ಗಮನ ಸೆಳೆದು ಮೋಸದಿಂದ ಬಂಗಾರದ ಆಭರಣಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಎಂದು ಫಿರ್ಯಾದಿ ಕೊಟ್ಟ ಅರ್ಜಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಸಿ.ಇ.ಎನ್‌ ಪೊಲೀಸ್‌ ಠಾಣೆ :-  ದಿನಾಂಕ: 06/01/2023 ರಂದು 18:00 ಗಂಟೆಗೆ ಫಿರ್ಯಾಧಿ ಶ್ರೀ ಸಿದ್ದೇಶ್ವರ ತಂದೆ ವೀರಪ್ಪಾ ಅನಂತಪೂರ ವಯ|| 52 ವರ್ಷ ಜಾತಿ|| ಲಿಂಗಾಯತ ಉ|| ಗುಡ್ಡಾಂಬೆ ಎಲೆಕ್ಟ್ರಾನಿಕ್ ಅಂಗಡಿಯ ಮಾಲಿಕ ಸಾ|| ಪ್ಲಾಟ್ ನಂ: 18, ರಾಜೀವಗಾಂಧಿ ಫಾರ್ಮಸಿ ಕಾಲೇಜ್ ಹಿಂದುಗಡೆ ಹಳೇ ಜೇವರ್ಗಿ ರಸ್ತೆ ಕಲಬುರಗಿ 9986511949 ಇವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ, ದಿನಾಂಕ: 06/08/2022 ರಂದು 10:30 ಗಂಟೆಗೆ ನಾನು ನನ್ನ ಗುಡ್ಡಾಂಬೆ ಎಲೆಕ್ಟ್ರಾನಿಕ್ ಅಂಗಡಿಯಲ್ಲಿ ಇದ್ದಾಗ ನನ್ನ ಮೋಬೈಲ್ ನಂಬರಗೆ ಪ್ರಣಾಭ್ ಚೌಧರಿ ಪೋನ್ ನಂ: 7477620737 ನೇದ್ದರಿಂದ ಪೋನ್ ಮಾಡಿ ನೀವು “ ಏಥರ್ ಎಲೆಕ್ಟ್ರಾನಿಕ್ ಸ್ಕೂಟರ್ ಡಿಲರ್ ಶಿಪ್‌ಗೆ ಅಪ್ಲೈ ಮಾಡಿದ್ದಿರಾ ಅಂತಾ ಕೇಳಿದ್ದಾಗ,  ಹೌದು ನಾನು ಅಪ್ಲೈ ಮಾಡಿರುತ್ತೇನೆ ಅಂತಾ ತಿಳಿಸಿದೆನು. ನಿಮ್ಮ ಮೇಲ್ ಐಡಿ guddambe123@gmail.com ನೇದ್ದಕ್ಕೆ 01 ಅಪ್ಲೀಕೇಶನ್ ಕಳುಹಿಸಿರುತ್ತೇನೆ ಅದನ್ನು ಭರ್ತಿ ಮಾಡಿ ಕಳುಹಿಸಿ ಅಂತಾ ಹೇಳಿದರು. ಸದರಿ ಅಪ್ಲೀಕೇಶನಲ್ಲಿ ಕೇಳಿರುವಂತ ಎಲ್ಲಾ ದಾಖಲಾತಿಗಳನ್ನು ಭರ್ತಿ ಮಾಡಿ ಮರಳಿ info@atherenergys.com  ನೇದ್ದಕ್ಕೆ ಕಳುಹಿಸಿದೆನು. ದಿನಾಂಕ: 09/08/2022 ರಂದು ಮಧ್ಯಹ್ನಾ 3:11 ಗಂಟೆಗೆ ರಾಕೇಶ ಎನ್ನುವ ವ್ಯಕ್ತಿ ತನ್ನ ಮೋಬೈಲ್ ನಂ: 9903747139 ನಿಂದ ಪೋನ್ ಮಾಡಿ ನಾನು ವೇರಿಫಿಕೇಶ್‌ನ್ ಡಿರ್ಪಾಟಮೆಂಟ್ ನಿಂದ ಕಾಲ್ ಮಾಡುತ್ತಿದ್ದೆನೆ ನಿಮ್ಮ ಅಪ್ಲೀಕೇಶನ್ ಚಕ್ ಮಾಡಿರುತ್ತೇನೆ, ಎಲ್ಲಾ ಸರಿಯಾಗಿರುತ್ತದೆ, ನಿಮಗೆ ಒಂದು ಲೇಟರ್ ಆಫ್ ಇಂಟೆಂಟ್ ಕಳುಹಿಸಿಕೊಡುತ್ತೇನೆ ಅಂತಾ ಹೇಳಿರುತ್ತಾರೆ, ನಂತರ ದಿನಾಂಕ: 10/08/2022 ರಂದು ನನ್ನ ಈ-ಮೇಲ್ ಐಡಿಗೆ ಲೇಟರ್ ಆಫ್ ಇಂಟೆಂಟ್ ಬಂದಿರುತ್ತದೆ ಅದರಲ್ಲಿ ಇದ್ದಂತೆ ನಾನು “ಡಿಲರ್ ಶಿಪ್ ರಿಜಿಸ್ಟರೇಶನ್ ಕುರಿತು ಏಥರ್ ಎನರ್ಜಿ ಪ್ರೈವೇಟ್ ಲಿಮೀಟೆಡ್ ಹೆಸರಿನ ಬ್ಯಾಂಕ ಖಾತೆ ಸಂಖ್ಯೆ: 7205169975 ಐ,ಎಫ,ಎಸ್,ಸಿ ಕೋಡ್ IDBI 000B009 ಬೆಂಗಳೂರು ಬ್ರಾಯಂಚ್ ನೇದಕ್ಕೆ 1,55,500/- ರೂಪಾಯಿಗಳನ್ನು ನನ್ನ ಎಸ್,ಬಿ,ಐ ಬ್ಯಾಂಕ ಖಾತೆ ಸಂಖ್ಯೆ: 10635209452 ಸುಪರ್ ಮಾರ್ಕೆಟ ಬ್ರಾಯಂಚ್ ಕಲಬುರಗಿ ನೇದ್ದರಲ್ಲಿ ನನ್ನ ಚಕ್ ನಂಬರ 363043 ನೇದ್ದರಿಂದ ನೇಫ್ಟ್ ಮೂಲಕ ಹಣವನ್ನು ಸಂದಾಯ ಮಾಡಿರುತ್ತೇನೆ, ದಿನಾಂಕ: 12/08/2022 ರಂದು ನನ್ನ ಮೇಲ್‌ಗೆ ಎನ್,ಓ,ಸಿ ಅಪ್ಲೀಕೇಶನ್ ಕಳುಹಿಸಿದ್ದು ಅದನ್ನು ಭರ್ತಿ ಮಾಡಿ ಕಳುಹಿಸಿ ಅಂತಾ ಹೇಳಿ ಎನ್,ಓ,ಸಿ ಪ್ರಮಾಣ ಪತ್ರ ನೀಡಲು ನೀವು ಒಟ್ಟು 7,75,000/- ಹಣವನ್ನು ಜಮಾ ಮಾಡಲು ತಿಳಿಸಿದ್ದರಿಂದ ನಾನು ಆರ್,ಟಿ,ಜಿ,ಎಸ್ ನಿಂದ ಚಕ್ ನಂ: 363045 ನೇದ್ದರ ಮೂಲಕ ಏಥರ್ ಎನರ್ಜಿ ಪ್ರೆöÊವೇಟ್ ಲಿಮೀಟೆಡ್ ಹೆಸರಿನ ಇಂಡಿಯನ್ ಬ್ಯಾಂಕ ಖಾತೆ ಸಂಖ್ಯೆ: 7205169975 ಐ,ಎಫ,ಎಸ್,ಸಿ ಕೋಡ್ IDBI000B009 ಬೆಂಗಳೂರು ನೇದ್ದಕ್ಕೆ 7,75,000/- ಹಣವನ್ನು ಜಮಾ ಮಾಡಿರುತ್ತೇನೆ. ದಿನಾಂಕ: 13/08/2022 ರಂದು ಪ್ರಣಾಭ ಚೌದರಿ ಮತ್ತು ರಾಕೇಶ ರವರು ಕೂಡಿಕೊಂಡು ನನಗೆ ಪೋನ್ ಮಾಡಿ ಇನ್ನೂ 18,75,000/- ಹಣ ಜಮಾ ಮಾಡಿ ಅಂತಾ ಹೇಳಿದ್ದರು ನಾನು ಬ್ಯಾಂಕ ಮುಚ್ಚಿದ್ದರಿಂದ ನಾನು ಹಣ ಜಮಾ ಮಾಡಿರುವುದಿಲ್ಲಾ ನಂತರ ಅದೆ ದಿವಸ ನಾನು ಅವರಿಗೆ ಪೋನ್ ಮಾಡಿ ನಿಮ್ಮ ಕಂಪನಿಯ ಜಿ,ಎಸ್,ಟಿ ಹಾಗೂ ಕಂಪನಿಯ ಮಾಲಿಕರ ಬಗ್ಗೆ ಮಾಹಿತಿ ಕೇಳಿದಾಗ ಅದರ ಅವಶ್ಯಕತೆ ಇರುವುದಿಲ್ಲ ಅಂತಾ ಹೇಳಿದರು. ನಂತರ ನಾನು ಗೂಗಲ್ ನಲ್ಲಿ ಸದರಿ ಏಥರ್ ಕಂಪನಿಯ ಬಗ್ಗೆ ನೋಡಿದಾಗ ಅದರಲ್ಲಿ ನಮ್ಮ ಕಂಪನಿಯ ಬಗ್ಗೆ ಯಾರೋ ಕೆಲವರು ಮೋಸ ಮಾಡುತ್ತಿದ್ದಾರೆ ಎಲ್ಲರೂ ಎಚ್ಚರದಿಂದ ಇರಬೇಕು ಅಂತಾ ವಿಷಯವನ್ನು ನೋಡಿ ನನಗೂ ಕೂಡಾ ಮೋಸ ವಂಚನೆ ಮಾಡಿರುತ್ತಾರೆ ಅಂತಾ ತಿಳಿದು ಗಾಬರಿಗೊಂಡು ದಿನಾಂಕ: 14/08/2022 ರಂದು ಸಿ,ಇ,ಎನ್ ಪೊಲೀಸ್ ಠಾಣೆಗೆ ಬಂದು ಅರ್ಜಿಯನ್ನು ನೀಡಿರುತ್ತೇನೆ. ಅದರಂತೆ ನನಗೆ ಎಲ್,ಪಿ,ಟಿ ನಂ: 208/2022 ನೇದ್ದರಲ್ಲಿ ಸ್ವೀಕರಿಸಿಕೊಂಡು ನನಗೆ ಸ್ವೀಕೃತಿ ನೀಡಿರುತ್ತಾರೆ. ನಂತರ ನಾನು ನನ್ನ ಎಸ್ ಬಿ, ಐ ಬ್ಯಾಂಕ ಬ್ರಾಯಂಚ್ ಹಾಗೂ ಇಂಡಿಯನ್ ಬ್ಯಾಂಕ ವಿರುದ್ದ “ಓಂಬುಡ್ಸ್ಮನ್” ಬೆಂಗಳೂರು ಅವರಿಗೆ ಕಂಪ್ಲೇಂಟ್ ನೀಡಿರುತ್ತೆನೆ, ನಾನು ನೀಡಿದ ಕಂಪ್ಲೇಂಟ್‌ನನ್ನು ರೀಜೇಕ್ಟ್ ಮಾಡಿರುತ್ತಾರೆ. ಈ ಬಗ್ಗೆ ನಾನು “ಓಂಬುಡ್ಸ್ಮನ್” ಬೆಂಗಳೂರು ರವರಲ್ಲಿ ಕಂಪ್ಲೇಂಟ್‌ನಲ್ಲಿ ಮಾಡಿ ಹಾಗೂ ಮನೆಯಲ್ಲಿ ಸಮಾಲೋಚನೆ ಮಾಡಿಕೊಂಡು ಪೊಲೀಸ್ ಠಾಣೆಗೆ ಬಂದು ಎಫ್,ಐ,ಆರ್ ದಾಖಲಿಸಲು ತಡವಾಗಿರುತ್ತದೆ. ಕಾರಣ ನನಗೆ ಫ್ರಣಾಬ್ ಚೌಧರಿ ಮತ್ತು ರಾಕೇಶ ರವರು ಕೂಡಿಕೊಂಡು “ಏಥರ್ ಎಲೆಕ್ಟ್ರಾನಿಕ್ ಸ್ಕೂಟರ್ ಡೀಲರ್‌ಶಿಪ್ ನೀಡುವುದಾಗಿ ಹೇಳಿ ನಂಬಿಸಿ, ವಂಚನೆ ಮಾಡುವ ಉದ್ದೇಶದಿಂದ ಅಪ್ರಮಾಣಿಕತೆಯಿಂದ ನನ್ನಿಂದ ಒಟ್ಟು 9,30,500/- ಹಣವನ್ನು ಪಡೆದುಕೊಂಡವರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಫಿರ್ಯಾಧಿ ನೀಡಿದ ಹೇಳಿಕೆ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

ಅಶೋಕ ನಗರ ಪೊಲೀಸ್‌ ಠಾಣೆ :-  ದಿನಾಂಕ:06/01/2023 ರಂದು  11:00 ಎ.ಎಂಕ್ಕೆ ಫಿರ್ಯಾದಿ ಶ್ರೀ ಲಕ್ಷ್ಮೀಕಾಂತ ತಂದೆ ಮಲ್ಲಿಕಾರ್ಜುನ ಹಡಗಲಿ ವಯ: 28 ವರ್ಷ ಜಾ: ಎಸ್.ಸಿ.(ಹೊಲೆಯ) ಉ: ಖಾಸಗಿ ಕೆಲಸ ಸಾ|| ಮನೆ ನಂ.136, ಹಳೇ ಜೇವರ್ಗಿ ರೋಡ್, ಪಂಚಶೀಲ ನಗರ, ಬುದ್ದ ಮಂದಿರ ಹತ್ತಿರ, ಕಲಬುರಗಿ ಇವರು ಠಾಣೆಗೆ ಹಾಜರಾಗಿ ಕೊಟ್ಟ ಫಿರ್ಯಾದಿ ಅರ್ಜಿಯ ಸಾರಾಂಶವೆನೆಂದರೆ. ನಾನು ನನ್ನ ದಿನ ನಿತ್ಯದ ಕೆಲಸಕ್ಕೆ ಓಡಾಡುವ ಸಲುವಾಗಿ 2017ನೇ ಸಾಲಿನಲ್ಲಿ ಒಂದು ಹೊಂಡಾ ಡಿಯೋ ಮೋಟಾರ ಸೈಕಲ್ ನಂ. ಕೆ.ಎ-32 ಇ.ಎನ್.-5332 ಕಪ್ಪು ಮತ್ತು ಬಿಳಿ ಬಣ್ಣದ್ದು ಇಂಜನ್ ನಂಬರ್  JF39EU1138678 ಚೆಸ್ಸಿ ನಂಬರ್ ME4JF399MGU101434 ಅ.ಕಿ.30,000/-ರೂ ನೇದ್ದು ಖರೀದಿಸಿದ್ದು ಇರುತ್ತದೆ. ಹೀಗಿದ್ದು ದಿನಾಂಕ:18.12.2022 ರಂದು ಮಧ್ಯಾನ್ಹ 01:00 ಗಂಟೆಗೆ ನಾನು ನನ್ನ ಮೋಟರ್ ಸೈಕಲನ್ನು ಜೆ.ಕೆ. ಫಂಕ್ಷನ್ ಹಾಲ್ ಹೊರಗಡೆ ನಿಲ್ಲಿಸಿ ಒಳಗಡೆ ಹೋಗಿ ದಿನಾಂಕ: 18.12.2022 ರಂದು ಮಧ್ಯಾನ್ಹ 01:30 ಗಂಟೆಗೆ ನಾನು ಹೊರಗಡೆ ಬಂದು ನೋಡಲಾಗಿ ನನ್ನ ವಾಹನ ಇದ್ದಿರುವುದಿಲ್ಲ. ನಾನು ಇಲ್ಲಿಯ ವರೆಗೆ ಕಲಬುರಗಿ ನಗರದಲ್ಲಿ ಮತ್ತು ಹೊರ ವಲಯಗಳಲ್ಲಿ ಎಲ್ಲಾ ಕಡೆಗಳಲ್ಲಿ ಹುಡುಕಾಡಿದರು ನನ್ನ ವಾಹನ ನನಗೆ ಸಿಕ್ಕಿರುವುದಿಲ್ಲ. ಈ ಬಗ್ಗೆ ಮನೆಯಲ್ಲಿ ವಿಚಾರಿಸಿ ಇಂದು ತಡವಾಗಿ ಠಾಣೆಗೆ ಬಂದು ದೂರು ಸಲ್ಲಿಸುತ್ತಿದ್ದು, ಕಳವುವಾದ ನನ್ನ ಮೋಟಾರ ಸೈಕಲನ್ನು ಪತ್ತೆ ಮಾಡಿ ಕಳ್ಳತನ ಮಾಡಿದವರ ವಿರುದ್ದ ಕಾನೂನು ರೀತಿ ಕ್ರಮ ಜರುಗಿಸಬೇಕೆಂದು ಫಿರ್ಯಾದಿ ಕೊಟ್ಟ ಅರ್ಜಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

ರಾಘವೇಂದ್ರ ನಗರ ಪೊಲೀಸ ಠಾಣೆ :- ದಿನಾಂಕ: 06.01.2023 ರಂದು ಶ್ರೀ ಆನಂದಕುಮಾರ ತಂದೆ ಹಣಮಯ್ಯ ಗುತ್ತೆದಾರ ವಯ-37 ವರ್ಷ ಜಾ||ಈಡಿಗಾ ಉ||ಕಾಂಟ್ರಾಕ್ಟ ರ್ಸಾ|| ಭರತ ಕಾಲೋನಿ ಕಲಬುರಗಿರವರು ಠಾಣೆಗೆ ಹಾಜರಾಜಿ ಈ- ತಂತ್ರಾಂಶದಲ್ಲಿ ದೂರು ದಾಖಲಿಸಿ ಠಾಣೆಗೆ ಹಾಜರಾಗಿ ದೂರು ಅರ್ಜಿ ನೀಡಿದ್ದು ಸಾರಾಂಶವೆನೆಂದರೆ ನಾನು ಸುಮಾರು 2014ನೇ ಸಾಲಿನಲ್ಲಿ ಒಂದು ಹೋಂಡಾಶೈನ್ಮೋಟಾರಸೈಕಲನ್ನು ಕೆಎ-32 ಇಎಫ್-5505 ನೇದ್ದನ್ನು ಖರಿದಿಮಾಡಿದ್ದು ಇರುತ್ತದೆ, ಸದರಿ ಮೋಟಾರಸೈಕಲನ್ನು ನಾನು ಉಪಯೋಗ ಮಾಡುತ್ತಾ ಬಂದಿರುತ್ತಾನೆ. ಹೀಗೆ ಇರುವಾಗ ದಿನಾಂಕಃ23.12.2022 ರಂದು ನಾನು ಬೇಳ್ಳಿಗೆ 10-00ಗಂಟೆ ಸುಮಾರಿಗೆ ನಾನು ನನ್ನ ಮೋಟಾರ ಸೈಕಲನ್ನು ನೇದ್ದನ್ನು ಶ್ರೀ ಶರಣ ಬಸವೇಶ್ವರ ದೇವಾಸ್ಥಾನದ ಆವರಣದಲ್ಲಿ ನಿಲ್ಲಿಸಿ ದರ್ಶನಕ್ಕೆ ಹೋಗಿ ಮರಳಿ ಬೇಳ್ಳಿಗೆ 11-00 ಗಂಟೆ ಸುಮಾರಿಗೆ ಮರಳಿ ಬಂದು ನೋಡಲಾಗಿ ನನ್ನ ಹೋಂಡಾಶೈನ್ಮೋಟಾರಸೈಕಲನ್ನು ಕೆಎ-32 ಇಎಫ್-5505 ಅ||ಕಿ|| 40,000/- ರೂ ನೇದ್ದು ಇರಲಿಲ್ಲಾ ಯಾರೋ ಕಳ್ಳರು ನನ್ನ ಮೊಟಾರ ಸೈಕಲನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು ನಂತರ ಗಾಬರಿಗೊಂಡು ನಾನು ಮತ್ತು ನನ್ನ ಗೆಳೆಯರು ಕೂಡಿಕೊಂಡು ನನ್ನ ಮೋಟಾರ ಸೈಕಲನ್ನು ಎಲ್ಲಾ ಕಡೆ ಹುಡಕಾಡಿದ್ದು ಇಲ್ಲಿಯವರಿಗೂ ಸಿಕ್ಕಿರುವದಿಲ್ಲ ಯಾರೋ ಕಳ್ಳರು ನನ್ನ ಮೊಟಾರ ಸೈಕಲನ್ನು ಕಳ್ಳತನ ಮಾಡಿಕೊಂಡು ಹೊಗಿರುತ್ತಾರೆ. ಕಳೆದುಹೋದ ನನ್ನ ಮೋಟಾರಸೈಕಲನ್ನು ಪತ್ತೆಮಾಡಿ ಕೊಡಬೇಕೆಂದು ವಿನಂತಿ ಅಂತಾ ಇತ್ಯಾದಿ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

ವಿಶ್ವವಿದ್ಯಾಲಯ ಪೊಲೀಸ್‌ ಠಾಣೆ :- ದಿನಾಂಕ. 04/01/2023 ರಂದು ಸಂಜೆ 5-30 ಪಿ.ಎಂ. ದಿಂದ ದಿನಾಂಕ.5/01/2023 ರಂದು ಬೆಳಗ್ಗೆ 9:30 ಎ.ಎಂ ಮಧ್ಯದ ಅವಧಿಯಲ್ಲಿ ಸದರಿ ಫಿರ್ಯಾದಿದಾರರು ಇ.ಎಸ್.ಐ. ಅಸ್ಪತ್ರೆಗೆ ಬಂದು ಕ್ಯಾಜುವಲಿಟಿ ಬಿಲ್ಡಿಂಗ ಪಕ್ಕದಲಿ ಹೊಂಡಾ ಎಕ್ಟೀವ ಮೋಟಾರ ಸೈಕಲ್ ನಂ.ಕೆ.ಎ.39 ಕೆ.0224 ನೆದ್ದನ್ನು ಅ.ಕಿ 25,000/- ನೇದ್ದು ಹಚ್ಚಿದ್ದು ನಂತರ ಬಂದು ನೋಡಲು ಯಾರೋ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಕಳ್ಳತನ ಮಾಡಿದವರ ವಿರುದ್ದ ಕಾನೂನು ರೀತಿ ಕ್ರಮ ಜರುಗಿಸಿ ನನ್ನ ವಾಹನ ನನಗೆ ದೊರಕಿಸಿ ಕೊಡಬೇಕೆಂದು ಫಿರ್ಯಾದಿ ಕೊಟ್ಟ ಹೇಳಿಕೆ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

ಸಂಚಾರಿ ಪೊಲೀಸ್‌ ಠಾಣೆ-2 :-  ದಿನಾಂಕ 06/01/2023 ರಂದು 06:30 ಪಿ.ಎಮ್ ಕ್ಕೆ  ಶ್ರೀಮತಿ ಶರಣಮ್ಮ ಗಂಡ ಶಾಮರಾಯ ಗೌಂಡಿ ಸಾ; ಕಲ್ಲಬೆನ್ನೂರ ತಾ;ಜಿ; ಕಲಬುರಗಿ ಇವರು ಪೊಲೀಸ್ ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಟೈಪ್ ಮಾಡಿದ ಫಿರ್ಯಾದಿ ಅರ್ಜಿಯನ್ನು ಹಾಜರು ಪಡಿಸಿದ್ದುಸಾರಂಶವೆನೆಂದರೆ,  ದಿನಾಂಕ 18-12-2022 ರಂದು ಮದ್ಯಾಹ್ನ 12:00 ಗಂಟೆ ಸುಮಾರಿಗೆ ಫಿರ್ಯಾದಿ ಮತ್ತು ಅವರ ಗ್ರಾಮದ ಅನುಸೂಬಾಯಿ ಗಂಡ ಶಿವಶರಣಪ್ಪ ಕಲಬುರಗಿಗೆ ಬರುವ ಸಲುವಾಗಿ ಇಟಗಾ ಅಹ್ಮದಾಬಾದ ಕಡೆಯಿಂದ ಒಂದು ಟಂಟಂ ವಾಹನ ನಂ KA-32 A-6169 ನೇದ್ದರಲ್ಲಿ ಕುಳಿತುಕೊಂಡು ಹಾಗರಗಾ ಮಾರ್ಗವಾಗಿ ಬರುವಾಗ ಅದ್ನಾನಖಾನ್ ತೋಟದ ಮನೆ ಹತ್ತಿರ ಒಂದು ಬಸ್ ನಂ KA-32 F-1925 ನೇದ್ದರ ಚಾಲಕ ಫಿರ್ಯಾಧಿ ಕುಳಿತುಕೊಂಡ ಹೊರಟ ಟಂ ಟಂ ವಾಹನಕ್ಕೆ ಹಿಂದಿಕ್ಕಲು ಹೋಗಿ ರಬಸವಾಗಿ ಹಿಂದಿನಿಂದ ಡಿಕ್ಕಿ ಪಡಿಸಿ ಅಪಘಾತ ಮಾಡಿ  ಫಿರ್ಯಾಧಿ ಹಾಗೂ ಅನುಸೂಬಾಯಿಗೆ ಭಾರಿಗಾಯಗೊಳಿಸಿ ಇನ್ನಿತರಿಗೆ ಗಾಯಗೊಳಿಸಿದ್ದು ಮನೆಯವರೊಂದಿಗೆ ವಿಚಾರಿಸಿ ಇಂದು ತಡ ಮಾಡಿ ದೂರು ಸಲ್ಲಿಸಿದ್ದು ಇರುತ್ತದೆ,  ಬಸ್ ಚಾಲಕನ ವಿರುದ್ದ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಇತ್ಯಾದಿ ಕೊಟ್ಟ ಫಿರ್ಯಾದಿ ಸಾರಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

ಇತ್ತೀಚಿನ ನವೀಕರಣ​ : 09-01-2023 12:09 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080