ಅಭಿಪ್ರಾಯ / ಸಲಹೆಗಳು

ಸಂಚಾರಿ ಪೊಲೀಸ ಠಾಣೆ -2 :-  ದಿನಾಂಕ 05/12/2022 ರಂದು ರಾತ್ರಿ 8:00 ಗಂಟೆಗೆ ಮಣ್ಣೂರ ಆಸ್ಪತ್ರೆಯಿಂದ ಶ್ರೀ ಅಂಬರೀಶ ತಂದೆ ಸಂಗಣ್ಣ ಗೌನಳ್ಳಿ, ಶಿವಲಿಂಗ ತಂದೆ ಬಸವರಾಜ ಪೂಜಾರಿ ಎಂಬುವರ ಆರ್.ಟಿ.ಎ ಎಮ್.ಎಲ್.ಸಿ ವಸೂಲಾಗಿರುತ್ತದೆ ಅಂತಾ ಮಾಹಿತಿ ತಿಳಿಸಿದ್ದಕ್ಕೆ ನಾನು ಮಣ್ಣೂ ಆಸ್ಪತ್ರೆಗೆ ಹೋಗಿ ಗಾಯಾಳು ಇಬ್ಬರನ್ನು ವಿಚಾರಿಸಿ ಇವರಲ್ಲಿ ಶ್ರೀ ಅಂಬರೀಶ ತಂದೆ ಸಂಗಣ್ಣ ಗೌನಳ್ಳಿ ಇವರು ಫಿರ್ಯಾದಿ ಹೇಳಿಕೆ ನೀಡಿದ್ದೆನೆಂದರೆ, ಇಂದು ದಿನಾಂಕ 05/12/2022 ರಂದು ಫಿರ್ಯಾದಿ, ಅವರ ಗೆಳೆಯರಾದ ಶಿವಲಿಂಗ ಪೂಜಾರಿ, ಸಾಗರ ಕಡಗಂಚಿ ಮೂವರು ಕೂಡಿಕೊಂಡು ಪ್ಯಾಶನ ಪ್ಲಸ್ ಮೋಟರ ಸೈಕಲ ಚಸ್ಸಿ ನಂ. MBLHA10EL8GC53339 ನೇದ್ದರ ಮೇಲೆ ಕಲಬುರಗಿಯಿಂದ ಮಹಾಗಾಂವಕ್ಕೆ ಮರಳಿ ಕಲಬುರಗಿಗೆ ಬರುವಾಗ ಮೋಟರ ಸೈಕಲನ್ನು ಶಿವಲಿಂಗ ತಂದೆ ಬಸವರಾಜ ಈತನು ನಡೆಸುತ್ತಿದ್ದನು. ತಾವಿಬ್ಬರು ಹಿಂದೆ ಕುಳಿತುಕೊಂಡಿದ್ದು, ಸಾಯಂಕಾಲ 6:45 ಗಂಟೆ ಸುಮಾರಿಗೆ ತಾವರಗೇರಾ ಕ್ರಾಸಿನ ಸಮೀಪ ದಾಭಾದ ಎದುರುಗಡೆ ಬರುತ್ತಿರುವಾಗ ಅದೆ ವೇಳೆಗೆ ಕಲಬುರಗಿ ರೋಡಿನ ಕಡೆಯಿಂದ ಒಂದು ಲಾರಿ ಟ್ಯಾಂಕರ ನಂ. ಕೆಎ 56-2679 ನೇದ್ದರ ಚಾಲಕನು ಅತಿವೇಗದಿಂದ ಮತ್ತು ಅಲಕ್ಷತನದಿಂದ ನಡೆಯಿಸಿ ಡ್ರೈವರನ ಮೂಲಯ ಭಾಗಕ್ಕೆ ಡಿಕ್ಕಿ ಹೊಡೆದ ಪರಿಣಾಮ ಫಿರ್ಯಾದಿ ಮತ್ತು ಶಿವಲಿಂಗ ಇವರು ಹೊರಗಡೆ ಬಿದ್ದಿದ್ದು, ಸಾಗರ ಈತನು ಮೋಟರ ಸೈಕಲ ಸಮೇತ ಲಾರಿಯ ಒಳಗಡೆ ಸಿಲುಕಿಕೊಂಡು ತಲೆಯ ಭಾಗಕ್ಕೆ, ಮುಖದ ಭಾಗಕ್ಕೆ ಹಾಗು ತೊರಡಿನ ಭಾಗಕ್ಕೆ ಭಾರಿ ಪ್ರಮಾಣದ ಹಾಗು ಇತರೆ ಕಡೆಗಳಲ್ಲಿ ಭಾರಿಗಾಯವಾಗಿ ಮೃತ ಪಟ್ಟಿದ್ದು, ಶಿವಲಿಂಗನಿಗೆ ಎರಡು ಕಾಲುಗಳ ಪಾದದ ಮೇಲೆ ಕಾಲು ಮುರದಿದ್ದು ಹಾಗು ಇತರೆ ಕಡೆಗಳಲ್ಲಿ ರಕ್ತಗಾಯವಾಗಿದ್ದು ಮತ್ತು ಫಿರ್ಯಾದಿಗೆ ತಲೆಗೆ ಹಾಗು ಕೈ ಕಾಲುಗಳಿಗೆ ರಕ್ತಗಾಯವಾಗಿದ್ದು, ಲಾರಿ ಚಾಲಕನ ಹೆಸರು ರಾಕೇಶ ತಂದೆ ರಾಮು ಪವಾರ ಸಾಃ ನಂದೂರ ಅಂತಾ ಗೊತ್ತಾಗಿದ್ದು, ಘಟನೆಯನ್ನು ಅಣ್ಣಪ್ಪಾ ಕಡಬೂರ ಇವರು ನೋಡಿರುತ್ತಾರೆ. ಲಾರಿ ಟ್ಯಾಂಕರ ಚಾಲಕನು ಘಟನೆ ನಂತರ ಓಡಿ ಹೋಗಿರುತ್ತಾನೆ ಆತನ ಮೆಲೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು ಅಂತಾ ಇತ್ಯಾದಿ ಕೊಟ್ಟ ಫಿರ್ಯಾದಿ ಸಾರಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಎಂ.ಬಿ.ನಗರ ಪೊಲೀಸ ಠಾಣೆ :-  ದಿನಾಂಕ 05-12-2022 ರಂದು ೦೭.೪೫ ಪಿ ಎಮ್ ಕ್ಕೆ ನಾನು ಠಾಣೆಯಲ್ಲಿದ್ದಾಗ ಫಿರ್ಯಾಧಿಯಾದ ಶ್ರೀ ಡಾ|| ವಿಜಯಕುಮಾರ ತಂದೆ ಪಂಡರಿನಾಥ ರಾಠೋಡ ವ|| ೭೦ ಜಾ|| ರಜಪೂತ ಉ|| ನಿವೃತ್ತ ಪ್ರೋಪೆಸರ ಸಾ|| ಮ.ನಂ.೨-೯೦೭/೭೯/೧೮, ಗುಮ್ಮಜ ಎದುರುಗಡೆ ಇಲೈಟ್ ಸ್ಕೂಲ ಹತ್ತೀರ ಗುಬ್ಬಿ ಕಾಲೋನಿ ಕಲಬುರಗಿ ಇವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಟೈಪಮಾಢಿಸಿದ ದೂಉರ ಅರ್ಜಿ ಸಲ್ಲಿಸಿದ್ದು ಸದರಿ ದೂರಿನ ಸಂಕ್ಷಿಪ್ತ ಸಾರಾಂಶವೆನೆಂದರೆ  ನನ್ನ ಕುಟುಂಬದೊಂದಿಗೆ ಸ್ವಂತ ಮನೆ ಮಾಡಿಕೊಂಡು ಸದರಿ ವಿಳಾಸದಲ್ಲಿ ವಾಸವಾಗಿರುತ್ತೆವೆ. ಹೀಗಿದ್ದು ದಿನಾಂಕ ೦೪/೧೨/೨೦೨೨ ರಂದು ಬೆಳೆಗ್ಗೆ ೦೫.೪೦ ಗಂಟೆಯ ಸುಮಾರಿಗೆ ಹೈದ್ರಾಬಾದನಲ್ಲಿರುವ ನಮ್ಮ ಮಕ್ಕಳಿಗೆ ಹಾಗೂ ನಮ್ಮ ಹೆಂಡತಿಯ ತಾಯಿಗೆ ಮಾತನಾಡಿಸಿಕೋಂಡು ಬರುವದಕ್ಕಾಗಿ ನಾನು,ನನ್ನ ಹೆಂಡತಿಯಾದ ಶ್ರೀಮತಿ ಡಾ|| ವಂದನಾ ರಾಠೋಡ ವ|| ೬೨ ಇಬ್ಬರೂ ಕೂಡಿ ಮನೆಯ ಮೂಖ್ಯಧ್ವಾರಕ್ಕೆ ಸೆಂಟರ ಲಾಕ ಹಾಕಿಕೊಂಡು ಹೈದರಾಬಾದಗೆ ಹೋಗಿ ನಮ್ಮ ಮಕ್ಕಳಿಗೆ ಮತ್ತು ನನ್ನ ಹೆಂಡತಿಯ ತಾಯಿಗೆ ಮಾತನಾಡಿಸಿಕೊಂಡು ಇಂದು ದಿನಾಂಕ ೦೫/೧೨/೨೦೨೨ ರಂದು ಮಧ್ಯಾಹ್ನ ೦೨.೦೦ ಗಂಟೆಯ ಸುಮಾರಿಗೆ ಬಂದು ನೋಡಲು ನಮ್ಮ ಮನೆಯ ಮುಖ್ಯ ದ್ವಾರದ ಸೆಂಟರ ಲಾಕ ಮತ್ತು ಬಾಗಿಲು ಮುರಿದ್ದು ಕಂಡು ನಂತರ ಗಾಭರಿಯಾಗಿ ಮನೆಯ ಹೋಳಗಡೆ ಹೋಗಿ ನೋಡಿದರೆ ಬೆಡರೂಮಗಳಲ್ಲಿರುವ ಅಲಮಾರಿ ಗಳು ತೆರೆದಿದ್ದು ಬಟ್ಟೆಗಳು ಹಾಗೂ ಸಾಮಾನುಗಳು ಚೆಲ್ಲಾಪಿಲ್ಲಾಯಾಗಿ ಬಿದ್ದಿದ್ದನ್ನು ಅಲಮಾರಿಗಳು ಚೆಕ್ ಮಾಡಿದಾಗ ಅಲಮಾರಿಗಳಲ್ಲಿ ನನ್ನ ಹೆಂಡತಿಗೆ ಸಂಬಂಧಿಸಿದ ಬಂಗಾರದ ಆಭರಣಗಾಳಾದ ೧] ೮೦ ಗ್ರಾಮ ಬಂಗಾರದ ೪ ಬಳೆಗಳು ಅಂ.ಕಿ. ೩,೨೦,೦೦೦/- ರೂ  ೨] ೩೦ ಗ್ರಾಮ ಬಂಗಾರದ ೩ ಬೆರಳು ಉಂಗರಗಳು ಅಂ.ಕಿ.೧,೨೦,೦೦೦/- ರೂ, ೩] ೪೦ ಗ್ರಾಮ ಬಂಗಾರದ ಒಂದು ನೆಕ್ಲೆಸ್ ಅಂ.ಕಿ. ೧,೬೦,೦೦೦/- ರೂ ಹೀಗೆ ಒಟ್ಟು 6,೦೦,೦೦೦/- ರೂ ಕಿಮ್ಮತ್ತನ ಆಭರಣಗಳು ಇರಲಿಲ್ಲ ಯಾರೋ ಕಳ್ಳರ ಕೆಲಸ ಅಂತಾ ಗೊತ್ತಾಯಿತು. ಸದರಿ ಬಂಗಾರದ ಆಭರಣಗಳು ಸುಮಾರು ೪೦ ವರ್ಷಗಳ ಹಳೆಯದಾಗಿದ್ದು ಯಾವುದೇ ರೀತಿಯಾದ ರಷಿದಿ ಇರುವದಿಲ್ಲಾ.  ಕಾರಣ ದಿನಾಂಕ ೦೪/೧೨/೨೦೨೨ ರಂದು ಬೆಳೇಗ್ಗೆ ೦೫.೪೦ ಗಂಟೆಯಿಂದ ದಿನಾಂಕ ೦೫/೧೨/೨೦೨೨ ರಂದು ಮಧ್ಯಾಹ್ನ ೦೨.೦೦ ಗಂಟೆಯ ಮಧ್ಯದಲ್ಲಿ ನಾನು, ನನ್ನ ಹೆಂಡತಿಯಾದ ಶ್ರೀಮತಿ ಡಾ|| ವಂದನಾ ರಾಠೋಡ ವ|| ೬೨ ಇಬ್ಬರೂ ಕೂಡಿ ಹೈದರಾಬಾದಿಗೆ ಹೋಗಿ ನಮ್ಮ ಮಕ್ಕಳಿಗೆ ಹಾಗೂ ನಮ್ಮ ಹೆಂಡತಿಯ ತಾಯಿಗೆ ಮಾತನಾಡಿಸಿಕೋಂಡು ಬರುವಷ್ಠರಲ್ಲಿ ನಮ್ಮ ಮನೆಯ ಮುಖ್ಯಧ್ವಾರದ ಬಾಗಿಲಿಗೆ ಹಾಕಿದ ಸೆಂಟರ ಲಾಕ ಮತ್ತು ಬಾಗಿಲು ಮುರಿದು ಮನೆಯ ಮನೆಯ ಒಳಗಡೆ ಪ್ರವೇಶ ಮಾಡಿ ಬೆಡರೂಮಗಳಲ್ಲಿರುವ ಅಲಮಾರಿಗಳಗನ್ನು ಯಾವುದೋ ವಸ್ತುವಿನಿಂದ ಲಾಕಗಳನ್ನು ಮುರಿದು ಅದರೋಳಗಿದ್ದ  ೧] ೮೦ ಗ್ರಾಮ ಬಂಗಾರದ ೪ ಬಳೆಗಳು ಅಂ.ಕಿ.೩,೨೦,೦೦೦/- ರೂ  ೨] ೩೦ ಗ್ರಾಮ ಬಂಗಾರದ ೩ ಬೆರಳು ಉಂಗರಗಳು ಅಂ.ಕಿ.೧,೨೦,೦೦೦/- ರೂ, ೩] ೪೦ ಗ್ರಾಮ ಬಂಗಾರದ ಒಂದು ನೆಕ್ಲೆಸ್ ಅಂ.ಕಿ. ೧,೬೦,೦೦೦/- ರೂ ಹೀಗೆ ಒಟ್ಟು ೬,೦೦,೦೦೦/- ರೂ ಕಿಮ್ಮತ್ತನ ಆಭರಣಗಳು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು, ಆದ್ದರಿಂದ ನನ್ನ ಮನೆಯಲ್ಲಿ ಕಳ್ಳತನವಾಗಿರುವ ಬಂಗಾರದ ಆಭರಣಗಳು ಪತ್ತೆ ಮಾಡಿ ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ತಮ್ಮಲ್ಲಿ ವಿನಂತಿ ಅರ್ಜಿ ಇರುತ್ತದೆ  ಅಂತಾ ನೀಡಿದ ದೂರು ಅರ್ಜಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ವಿಶ್ವವಿದ್ಯಾಲಯ ಪೊಲೀಸ್‌ ಠಾಣೆ :- ದಿನಾಂಕ 04-12-2022  ರಂದು ೬.೦೦ ಪಿ.ಎಮ್ ಸುಮಾರಿಗೆ ಸದರಿ ಆರೋಪಿತರು ಕ್ರಮ ಕೂಟ ಕಟ್ಟಿಕೊಂಡು ಫಿರ್ಯಾದಿಗೆ ಮತ್ತು ಇತರರಿಗೆ ಕಂಕರ ಮಶೀನ್‌ಗೆ ಕಲ್ಲು ಹಾಕಿದ ಹಣದ ಬಗ್ಗೆ ಮತನಾಡೋಣ ಅಂತಾ ಕರೆಯಿಸಿ ಆರೋಪಿತರು ಫಿರ್ಯಾದಿಗೆ ಮತ್ತು ಇತರರಿಗೆ ಹೊಡೆಬಡೆ ಮಾಡಿ ಫಿರ್ಯಾದಿಗೆ ಕೂದಲು ಹಿಡಿದು ಎಳೆದಾಡಿ ಅವಾಚ್ಯ ಶಬ್ದಗಳಿಂದ ಬೈದು ಜತಿ ನಿಂದನೆ ಮಾಡಿರುತ್ತಾರೆ ಎಂದು ಫಿರ್ಯಾದಿ ಕೊಟ್ಟ ಹೇಳಿಕೆ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಸಂಚಾರಿ ಪೊಲೀಸ್‌ ಠಾಣೆ -2 :-  ದಿನಾಂಕ 05/12/2020 ರಂದು  ಮುಂಜಾನೆ 10:30 ಗಂಟೆಗೆ ಶ್ರೀ. ರಾಘವೆಂದ್ರ ತಂದೆ ಅಮರಣ್ಣ ಸಜ್ಜನ ಸಾಃ ಬಿದ್ದಾಪೂರ ಕಾಲೋನಿ ಕಲಬುರಗಿ ಇವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಕೈ ಬರಹದಿಂದ ಬರೆದ ಫಿರ್ಯಾದಿಯನ್ನು ಹಾಜರು ಪಡಿಸಿದ್ದು ಸಾರಂಶವೆನೆಂದರೆ, ನಿನ್ನೆ ದಿನಾಂಕ 04/12/2022 ರಂದು ರಾತ್ರಿ 7:00 ಗಂಟೆ ಸುಮಾರಿಗೆ  ತಮ್ಮ ಕಾರಿನಲ್ಲಿ ರಾಜಾಪೂರ ಕ್ರಾಸ್ ಕಡೆಯಿಂದ ರಾಮ ಮಂದಿರ ಕಡೆಗೆ ಸರ್ವಿಸ ರೋಡಿನ ಮುಖಾಂತರ ಹೋಗುತ್ತಿರುವಾಗ ಅದೆ ವೇಳೆಗೆ ಎದುರುಗಡೆ ರೋಡಿನಿಂದ ಸರಾಯಿ ಕುಡಿದ ನಶೆಯಲ್ಲಿ ಮೋಟರ ಸೈಕಲ ನಂ. ಕೆಎ 03 ಹೆಚ್.ಎಫ್ 1620 ನೇದ್ದರ ಮೇಲೆ ಅತಿವೇಗದಿಂದ ಮತ್ತು ಅನಿಷ್ಕಾಳಜಿತನದಿಂದ ನಡೆಯಿಸಿಕೊಂಡು ಬಂದು ಫಿರ್ಯಾದಿ ಕಾರಿಗೆ ಡಿಕ್ಕಿ ಪಡಿಸಿ ವಾಹನ ಜಖಂಗೊಳಿಸಿರುತ್ತಾರೆ. ಅವರ ಮೇಲೆ ಕಾನೂನು ಪ್ರಕಾರ ಕ್ರಮ ಕೈಕೊಳ್ಳಬೇಕೆಂದು ಅಂತಾ ಇತ್ಯಾದಿ ಕೊಟ್ಟ ಫಿರ್ಯಾಧಿ ಅರ್ಜಿ ಸಾರಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

ಫರಹತಾಬಾದ ಪೊಲೀಸ್‌ ಠಾಣೆ :- ದಿನಾಂಕ:05-12-2022 ರಂದು 2:15 ಪಿಎಮ್ ಕ್ಕೆ ಶ್ರೀಮತಿ ದುಂಡಮ್ಮ ಗಂಡ ಗುಂಡಪ್ಪ ಹಚ್ಚಡ ವಯ: 34 ವರ್ಷ ಜಾ: ಗಾಣಿಗ ಸಾ: ಮೈನಾಳ ತಾಜಿ: ಕಲಬುರಗಿ ರವರು ಠಾಣೆಗೆ ಹಾಜರಾಗಿ ನೀಡಿದ ಹೇಳಿಕೆ ಪಿರ್ಯಾದಿಯ ಸಾರಾಂಶವೇನೆಂದರೆ , ಮೈದುನನಾದ ಶರಣು ಮತ್ತು ಅತ್ತೆಯಾದ ಚನ್ನಬಸಮ್ಮ ನಮ್ಮೊಂದಿಗೆ ವಾಸವಾಗಿರುತ್ತಾರೆ. ಭಾವನಾದ ಚಂದ್ರಶ ಈತನು ತನ್ನಹೆಂಡತಿಯ ಊರಾದ ಅರಳಗುಂಡಗಿಯಲ್ಲಿ ಹೆಂಡತಿ ಮಕ್ಕಳೊಂದಿಗೆ ವಾಸವಾಗಿರುತ್ತಾನೆ. ನಮಗೆ ಸಂಬಂಧಿಸಿದ ಪಿತ್ರಾರ್ಜಿತ ಜಮೀನು ಸರ್ವೇ ನಂ:26 27-ಎಕರೆ 9-ಗುಂಟೆ ಜಮೀನು ಭಾವನಾದ ಚಂದ್ರಶ ಈತನ ಹೆಸರಿನಲ್ಲಿರುತ್ತದೆ. ಸದರಿ ಜಮೀನಿನ ವಿಷಯಕ್ಕೆ ಸಂಬಂಧಿಸಿದ ಓ.ಎಸ್. ನಂ:107/22 ನೇದ್ದು ನ್ಯಾಯಾಲಯದ ವಿಚಾರಣೆಯಲ್ಲಿ ಇರುತ್ತದೆ. ಹೀಗಿದ್ದು ದಿನಾಂಕ:02-12-2022 ರಂದು 1:09 ಪಿಎಮ್ ಕ್ಕೆ ನಾನು ಮತ್ತು ನನ್ನ ಗಂಡ ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ ಭಾವನಾದ 1) ಚಂದ್ರಶಾ ಆತನ ಹೆಂಡತಿ 2) ಕಲ್ಲಮ್ಮ ಮಗಳಾದ 3) ತಾರಾಬಾಯಿ , ಅಳಿಯಂದಿರರಾದ 4) ರಾಜು ತಂದೆ ಹಣಮಂತ ಅವಂಟಿ 5) ಶರಣು ತಂದೆ ಹಣಮಂತ ಅವಂಟಿ 6) ಹಣನಂತ ತಂದೆ ಚಿನ್ನಪ್ಪಅವಂಟಿ ಸಂಗಡ 10-12 ಜನರು ಸಾ: ಎಲ್ಲರು ಅರಳಗುಂಡಗಿ ನಮ್ಮ ಹೊಲಕ್ಕೆ ಬಂದವರೆ ನನ್ನ ಗಂಡನಾದ ಗುಂಡಪ್ಪ ತನಿಗೆ ಚಂದ್ರಶಾ ತನ್ನ ಕೈಯಲ್ಲಿದ್ದ ಬಡಿಗೆಯಿಂದ ತಲೆಗೆ ಹೊಡೆದು ರಕ್ತ ಗಾಯಪಡಿಸಿರುತ್ತಾನೆ. ಕಲ್ಲಮ್ಮ & ತಾರಾಬಾಯಿ ಇವರು ನನಗೆ & ನನ್ನ ಗಂಡನಿಗೆ ಅವಾಚ್ಯ ಶಬ್ದಗಳಿಂದ ಬೈಯಿದು ಕಲ್ಲಿನಿಂದ ನನ್ನ ಬೆನ್ನಿನ ಮೇಲೆ ಹೊಡೆದು ಈ ಹೊಲದಲ್ಲಿ ಏಕೆ ಇದ್ದಿರಿ ಸೂಳೆ ಮಕ್ಕಳೆ, ರಂಡಿ ಮಕ್ಕಳೆ, ಬೋಸಡಿ ಅಂತ ಅವಾಚ್ಯ ಶಬ್ದಗಳಿಂದ ಬೈದಿರುತ್ತಾರೆ. ಅವರೊಂದಿಗೆ ಬಂದಿದ್ದ ರಾಜು, ಶರಣು ಮತ್ತು ಹಣಮಂತ ಇವರು ಸಹ ನಮಗೆ ಅವಾಚ್ಯ ಶಬ್ದಗಳಿಂದ ಬೈದು ನಿಮಗೆ ಜೀವಸಹಿತ ಬಿಡುವುದಿಲ್ಲ ಮಕ್ಕಳೆ ಅಂತ ಜೀವದ ಬೆದರಿಕೆ ಹಾಕುತ್ತಿದ್ದಾಗ ಪಕ್ಕದ ಹೊಲದಲ್ಲಿ ಕೆಲಸ ಮಾಡುತ್ತಿದ ಇಕ್ಬಾಲಸಾಬ ದರ್ಗಾ & ರುಕ್ಮವ್ವ ಗಂ/ಪೀರಪ್ಪ ಕಟ್ಟಿಮನಿ ಸಾ: ಮೈನಾಳ ರವರು ಜಗಳ ಬಿಡಿಸಿರುತ್ತಾರೆ. ನನಗೆ & ನನ್ನ ಗಂಡಿನಿಗೆ ರಕ್ತ ಗಾಯವಾಗಿದ್ದರಿಂದ ನಮ್ಮ ಸಂಬಂಧಿಕನಾದ ಶರಣು ತಂದೆ ನಿಂಗಣ್ಣ ದೇಸಾಯಿ ಈತನು ನಮಗೆ ಜಿಜಹೆಚ್ ಕಲಬುರಗಿಗೆ ಕರೆದುಕೊಂಡು ಹೋಗಿ ಪಚಾರಕ್ಕೆ ಸೇರಿಕೆ ಮಾಡಿರುತ್ತಾನೆ. ಇಂದು ಗುಣಮುಖರಾಗಿ ಠಾಣೆಗೆ ಬಂದಿರುತ್ತೇವೆ.ಕಾರಣ ನನಗೆ ಮತ್ತು ನನ್ನ ಗಂಡನಿಗೆ ಜಮೀನಿನ ವಿಷಯದಲ್ಲಿ ಹೊಲಕ್ಕೆ ಬಂದು ನಮಗೆ ಅವಾಚ್ಯವಾಗಿ ಬೈದು , ಬಡಿಗೆ, ಕಲ್ಲಿನಿಂದ ಹೊಡೆದು ರಕ್ತಗಾಯಪಡಿಸಿ ಜೀವದ ಬೆದರಿಕೆ ಹಾಕಿದ ಮೇಲ್ಕಂಡ ವ್ಯಕ್ತಿಗಳ ವಿರುದ್ದ ಕಾನೂನು ಕ್ರಮ ಕೈಕೊಳ್ಳಬೇಕು ಅಂತ ಹೇಳಿ ಬರೆಯಿಸಿದ ಹೇಳಿಕೆ ನಿಜವಿದೆ ಅಂತ ಇತ್ಯಾದಿ  ಸಾರಾಂಶದ ಮೇಲಿಂದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

ಇತ್ತೀಚಿನ ನವೀಕರಣ​ : 06-12-2022 04:56 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080