ಅಭಿಪ್ರಾಯ / ಸಲಹೆಗಳು

ಸಂಚಾರಿ ಪೊಲೀಸ್‌ ಠಾಣೆ -2 :-  ದಿನಾಂಕ 05/11/2022 ರಂದು  10:30 AM ಕ್ಕೆ  ಶ್ರೀ. ರೇವಣಸಿದ್ದಪ್ಪಾ ತಂದೆ ಅಪ್ಪಾರಾವ ಹೆಬ್ಬಾಳ ವಯಃ 40 ವರ್ಷ ಜಾತಿಃ ಲಿಂಗಾಯತ ಉಃ ಹೊಟೇಲದಲ್ಲಿ ಕೆಲಸ ಸಾಃ ಚೊಂಚಿ ತಾಃ ಕಾಳಗಿ ಹಾ.ವಃ ಪಟ್ಟಣ ಕ್ರಾಸ್ ಕಲಬುರಗಿ ಇವರು ಠಾಣೆಗೆ ಹಾಜರಾಗಿ ಒಂದು ಫಿರ್ಯಾದಿ ಹೇಳಿಕೆ ನೀಡಿದ್ದು ಸಾರಂಶವೆನೆಂದರೆ, ಇಂದು ದಿನಾಂಕ 05/11/2022 ರಂದು ಬೆಳಗಿನ ಜಾವಾ 4:50 ಗಂಟೆ ಸುಮಾರಿಗೆ ನನ್ನ ತಮ್ಮ ದೇವಿಂದ್ರ ಹೆಬ್ಬಾಳ ಈತನು ಹೊಟೇಲದಿಂದ ಎದ್ದು ಏಕಿಗೆ ಹೋಗಬೇಕೆಂದು ರೋಡು ದಾಟುತ್ತಿರುವಾಗ ಆಳಂದ ರೋಡಿನ ಕಡೆಯಿಂದ ಒಂದು ಯಾವುದೋ ಲಾರಿಯ ಚಾಲಕನು ಅತಿವೇಗದಿಂದ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ನನ್ನ ತಮ್ಮನಿಗೆ ಡಿಕ್ಕಿ ಹೊಡೆದಿದ್ದನ್ನು ಭೀಮಾಶಂಕರ ಮರಾಠಾ & ಶರಣು ನಂದಿ ಇವರು ನೋಡಿ ನನಗೆ ತಿಳಿಸಿದಾಗ ನಾವೆಲ್ಲರೂ ನೊಡಲಾಗಿ ತಮ್ಮನ ತಲೆಯ ಹಿಂಭಾಗಕ್ಕೆ ಭಾರಿ ಪ್ರಮಾಣದ ರಕ್ತಗಾಯವಾಗಿದ್ದು, ಎಡಭಾಗದ ಭುಜಕ್ಕೆ ತರಚಿದಗಾಯವಾಗಿ, ಅಲ್ಲಲ್ಲಿ ಭಾರಿಗಾಯಗಳಾಗಿದ್ದು, ಲಾರಿ ಚಾಲಕನು ಕಲಬುರಗಿ ಕಡೆಗೆ ಓಡಿಸಿಕೊಂಡು ಬಂದಿರುತ್ತಾನೆ. ಅದರ ನಂಬರ ಅಲ್ಪ ಸ್ವಲ್ಪ ನೋಡಿದ್ದು, ಮುಂದೆ ತಮ್ಮನು ರಸ್ತೆ ಅಪಘಾತದಲ್ಲಿ ಆದ ಭಾರಿಗಾಯದಿಂದ ಬಿಕ್ಕುತ್ತಿರುವಾಗ ತಮ್ಮನಿಗೆ ಟೋಲನಾಕಾದಲ್ಲಿಯ ಅಂಬುಲೇನ್ಸದಲ್ಲಿ ಹಾಕಿಕೊಂಡು ಉಪಚಾರ ಕುರಿತು ಕಲಬುರಗಿ ಸರಕಾರಿ ಆಸ್ಪತ್ರೆ ಕಡೆಗೆ ತರುವಾಗ ಬೆಳಿಗ್ಗೆ 5:35 ಗಂಟೆ ಸುಮಾರಿಗೆ ಕಲಬುರಗಿ ಸರಕಾರಿ ಆಸ್ಪತ್ರೆ ಹತ್ತೀರ ತಮ್ಮನಿಗೆ ಆದ ಭಾರಿಗಾಯದಿಂದ ಮೃತ ಪಟ್ಟಿರುತ್ತಾನೆ. ಕಾರಣ ನನ್ನ ತಮ್ಮನಿಗೆ ಅಪಘಾತ ಪಡಿಸಿದ ಲಾರಿ ಮತ್ತು ಲಾರಿ ಚಾಲಕನನ್ನು ಪತ್ತೆ ಮಾಡಿ ಕಾನೂನು ಕ್ರಮ ಕೈಗೊಳ್ಳಬೇಕು ಅಂತಾ ಕೊಟ್ಟ ಹೇಳಿಕೆ ಫಿರ್ಯಾದಿ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

ಸಂಚಾರಿ ಪೊಲೀಸ್‌ ಠಾಣೆ -2 :- ದಿನಾಂಕ 05/11/2022 ರಂದು ಸಾಯಂಕಾಲ 4:30 ಗಂಟೆಗೆ ಶ್ರೀ. ಸಿದ್ದರಾಜ ತಂದೆ ದಿಲೀಪಕುಮಾರ ಬೇಲಿ ವಯಃ 32 ವರ್ಷ ಜಾತಿಃ ಹಟಗಾರ ಉಃ ಖಾಸಗಿ ಕೆಲಸ ಸಾಃ ಚಿಂಚನ್ಸೂರ ತಾಃ ಆಳಂದ ಜಿಲ್ಲಾಃ ಕಲಬುರಗಿ ಇವರು ಪೊಲೀಸ್ ಠಾಣೆಗೆ ಹಾಜರಾಗಿ ಹೇಳಿಕೆ ಫಿರ್ಯಾದಿಯನ್ನು ನೀಡಿದ್ದು ಸಾರಂಶವೆನೆಂದರೆ, ಇಂದು ದಿನಾಂಕ 05/11/2022 ರಂದು ನಮ್ಮ ತಂದೆಯವರು ಬೆಳಿಗ್ಗೆ 11:00 ಗಂಟೆ ನಂತರ ಈ ಹಿರೊ ಪುಕ ಮೋಟರ ಸೈಕಲ ನಂ. ಕೆಎ 32 ಎಲ್ 8832 ನೇದ್ದರ ಮೇಲೆ ಕಲಬುರಗಿಗೆ ತೊಗರಿಗೆ ಹೊಡೆಯುವ ಜೌಷಧಿಯನ್ನು ಕಲಬುರಗಿಯಿಂದ ತರುತ್ತೆನೆಂದು ಕಲಬುರಗಿಗೆ ಬಂದಿದ್ದು, ಮುಂದೆ ಮಧ್ಯಾಹ್ನ 2:30 ಗಂಟೆ ನಂತರ ನಮ್ಮ ಪರಿಚಯದ ಸುರೇಶ ಸಂಗೊಳಗಿ ಹಾಗು ಶರಣಬಸಯ್ಯ ಮಠ ಇವರು ನನಗೆ ಮಾಹಿತಿ ತಿಳಿಸಿದ್ದೆನೆಂದರೆ, ಈಗ ತಾನೆ ಮಧ್ಯಾಹ್ನ 2:15 ಗಂಟೆ ಸುಮಾರಿಗೆ ನಿಮ್ಮ ತಂದೆಯವರಾದ ದಿಲೀಪಕುಮಾರ ಇವರು ಹಿರೊ ಪುಕ ಮೋಟರ ಸೈಕಲ ನಂ. ಕೆಎ 32 ಎಲ್ 8832 ಇದರ ಮೇಲೆ ಸುಲ್ತಾನಪೂರ ರಿಂಗರೋಡ ಕಡೆಯಿಂದ ಸುಲ್ತಾನಪೂರ ರೋಡಿನ ಕಡೆಗೆ ಬರುತ್ತಿರುವಾಗ ಕಮಲನಗರ ಕಮಾನದ ಹತ್ತೀರ ಸುಲ್ತಾನಪೂರ ರೋಡಿನ ಕಡೆಯಿಂದ ಒಂದು ಲಾರಿ ನಂ. ಎಪಿ 29 ವಿ 7539 ಇದರ ಚಾಲಕನು ಅತಿವೇಗದಿಂದ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ಅಪಘಾತವಾಗಿದ್ದರಿಂದ ನಿಮ್ಮ ತಂದೆಯವರು ಮೋಟರ ಸೈಕಲ ಸಮೇತ ಲಾರಿಯ ಮುಂಭಾಗದಲ್ಲಿ ಸಿಲುಕಿಕೊಂಡು ತಲೆಯ ಭಾಗಕ್ಕೆ, ಹಣೆ ಭಾಗಕ್ಕೆ ಭಾರಿಗಾಯವಾಗಿದ್ದು, ಅಲ್ಲದೆ ಇತರೆ ಕಡೆಗಳಲ್ಲಿ ತರಚಿದಗಾಯವಾಗಿ ಸ್ಧಳದಲ್ಲಿಯೇ ಮೃತ ಪಟ್ಟಿರುತ್ತಾರೆ. ಲಾರಿ ಚಾಲಕನು ಲಾರಿ ಬಿಟ್ಟು ಓಡಿ ಹೋಗಿರುತ್ತಾನೆ. ಶವವನ್ನು ಕಲಬುರಗಿ ಸರಕಾರಿ ಆಸ್ಪತ್ರೆ ಕಡೆಗೆ ತೆಗೆದುಕೊಂಡು ಹೋಗುತ್ತಿರುತ್ತೆವೆ ಅಂತಾ ತಿಳಿಸಿದಕ್ಕೆ ನಾನು ಗಾಬರಿಗೊಂಡು ಸರಕಾರಿ ಆಸ್ಪತ್ರೆಗೆ ಹೋಗಿ ತಂದೆಯವರಿಗೆ ನೋಡಲಾಗಿ ಮೇಲಿನಂತೆ ಗಾಯವಾಗಿ ಮೃತ ಪಟ್ಟಿದ್ದು ಇದ್ದು, ಮೇಲಿನ ವಿಷಯವನ್ನು ಖಾತ್ರಿ ಪಡೆಸಿಕೊಂಡೆನು. ಕಾರಣ ಲಾರಿ ನಂ. ಎಪಿ 29 ವಿ 7539  ನೇದ್ದರ ಮೇಲೆ ಮತ್ತು ಚಾಲಕನ ಮೇಲೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು ಅಂತಾ ಕೊಟ್ಟ ಫಿರ್ಯಾದಿ ಹೇಳಿಕೆ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

ಎಂ.ಬಿ.ನಗರ ಪೊಲೀಸ್‌ ಠಾಣೆ :- ದಿನಾಂಕ: 05-11-2022 ರಂದು ೧೨:೧೫ ಎಎಮ್ ಕ್ಕೆ ಫಿರ್ಯಾಧಿದಾರರು ಠಾಣಾ ವ್ಯಾಪ್ತಿಯಲ್ಲಿ ರಾತ್ರಿ ಗಸ್ತು ಚಕ್ಕಿಂಗ ಕರ್ತವ್ಯದಲ್ಲಿದ್ದಾಗ ಓಂ ನಗರ ೨ನೇ ಹಂತದಲ್ಲಿ ಬಸವರಾಜ ಇವರ ಇಸ್ತ್ರೀ ಅಂಗಡಿ ಮುಂದೆ ಸಾರ್ವಜನಿಕ ಖುಲ್ಲಾ ಸ್ಥಳದಲ್ಲಿ ಕೆಲವು ಜನರು ಇಸ್ಪೀಟ ಜೂಜಾಟ ಆಡುತ್ತಿದ್ದಾರೆ ಅಂತಾ ಖಚಿತ ಭಾತ್ಮಿ ಬಂದಿದ್ದು, ಸದರಿ ಸ್ಥಳಕ್ಕೆ ಪಂಚರನ್ನು ಹಾಗೂ ಸಿಬ್ಬಂದಿಯವರನ್ನು ಕರೆದುಕೊಂಡು ಹೋಗಿ ದಾಳಿ ಮಾಡಿ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ರೋಜಾ ಪೊಲೀಸ್‌ ಠಾಣೆ :- ದಿನಾಂಕ 05/11/2022 ರಂದು 18:00 ಗಂಟೆಗೆ ರೋಜಾ ಪೊಲೀಸ ಠಾಣೆಯಿಂದ ಕೋರ್ಟ ಕರ್ತವ್ಯ ನಿರ್ವಹಿಸುತ್ತಿರುವ ಶ್ರೀ ಮೇಘರಾಜ ಪಿ ಸಿ ರವರು ಮಾನ್ಯ ನ್ಯಾಯಾಲಯದ ಪಿ ಸಿ ಆರ್ ನಂ 550/2022 ನೇದ್ದು ಪ್ರಕರಣ ಧಾಖಲಿಸಿ ತನಿಖೆ ಕೈಕೊಂಡು ಅಂತಿಮ ವರಧಿ ಸಲ್ಲಿಸುವಂತೆ ನೀಡಿದ ಆದೇಶದ ಖಾಸಗಿ ಅರ್ಜಿಯನ್ನು ಪಡೆದುಕೊಂಡು ಬಂದು ಹಾಜರು ಪಡಿಸಿದ್ದರ ಸಾರಾಂಶ ವೇನೆಂದರೆ, ಕಲಬುರಗಿ ನಗರದ ರೋಜಾ (ಬಿ) ಬಡಾವಣೆ ಯಲ್ಲಿರುವ ಮದನಿ ಲಾಡ್ಜನ ಮಾಲಿಕ ಫಿರ್ಯಾದಿ ಮಹ್ಮದ ಅಮ್ಜಾದ ತಂದೆ ಮಹ್ಮದ ಅಬ್ಬಾಸ ಅಲಿ ವಯ: 41 ವರ್ಷ ಉದ್ಯೋಗ: ಖಾಸಗಿ ನೌಕರ ವಾಸ: H.NO. 6-3-1179/2 ಪಂಜಾಗುಟ್ಟಾ ಹೈದರಾಬಾದ ಸದ್ಯ ವಾಸ: ಬಡಿ ಖಾನಾ ರೋಜಾ (ಬಿ) ಕಲಬುರಗಿ. ಇವರ ಮದನಿ ಲಾಡ್ಜಿನ ಪಕ್ಕದಲ್ಲಿ ಆರೋಪಿತರಾದ 01) ಹಾರೂನ ಪಟೇಲ @ ಅತಿಕ್ 02) ಮೊಹ್ಮದ ಖಲೀಲ 03) ಮುಮ್ತಾಜ್ 04) ಅಯ್ಯುಬ್ @ ಅಲಿ ಶೇರ್ ಇವರೆಲ್ಲರು ಆಶೀಯಾನಾ ಲಡ್ಜಿನ ಮಾಲೀಕರು ಮತ್ತು ಬಾಡಿಗೆ ದಾರರು ಎಲ್ಲರೂ ವಾಸ: ಬಡಿ ಖಾನಾ ರೋಜಾ (ಬಿ) ಕಲಬುರಗಿ. ಇವರುಗಳು ತಮ್ಮ ಆಶಿಯಾನಾ ಲಾಡ್ಜ ಕಮ್ ಗೆಸ್ಟ ಹೌಸಿನ  ಗ್ರಾಹಕರಿಂದ ಪಾನ ಗುಟ್ಕಾವನ್ನು ತಿಂದು ಫಿರ್ಯಾದಿಯ ಮದನಿ ಲಾಡ್ಜ ಗೋಡೆಯ ಮೇಲೆ ಉಗುಳಿದಕ್ಕೆ ಫಿರ್ಯಾದಿಯು ಅರ್ಜಿ ಮಾಡಿದ್ದರಿಂದ ಇವರು ಫಿರ್ಯಾದಿಯ ಮೇಲೆ ದ್ವೇಷ ಸಾಧಿಸಲು ಪ್ರಾರಂಬಿಸಿದರು, ಅಲ್ಲದೆ ಫಿರ್ಯಾದಿಯ ಮದನಿ ಲಾಡ್ಜ ಕಡೆಗೆ ಆರೋಪಿತರ ಮೇಲ್ವಿಚಾರಣೆಯಲ್ಲಿ ಗುಟ್ಕಾ, ಗಾಂಜಾ,ಕೋಕಿನ್,ಇತ್ಯಾದಿ ವಸ್ತುಗಳು ತಿಂದು ಫಿರ್ಯಾದಿಯ ಮದನಿ ಲಾಡ್ಜನ ಗೋಡೆಯ ಮೇಲೆ ಉಗುಳುವುದು ಮತ್ತು ಕಾನೂನು ಭಾಹೀರ ಚಟುವಟಿಕೆ ನಡೆಸುತ್ತಿರುತ್ತಾರೆ. ಮತ್ತು ಆರೋಪಿತರ ಲಾಡ್ಜನ ಪದಾದಿಕಾರಿಗಳ ಸಹಾಯದಿಂದ ಈ ಎಲ್ಲ ಚಟುವಟಿಕೆಗಳು ನಡೆಸುತ್ತಾರೆ. ಈ ಘಟನೆಯನ್ನು ಅಶೋಕ ಕುಮಾರ ಬಿರಾದಾರ ಮತ್ತು ಸಂತೋಷ ಇವರು ಕಣ್ಣಾರೆ ಕಂಡಿರುತ್ತಾರೆ. ಕಾರಣ ಫಿರ್ಯಾದಿದಾರರು ಆರೋಪಿತರಿಗೆ ಇಂತಹ  ಕಾನೂನು ಭಾಹೀರ ಚಟುವಟಿಕೆಗಳು ನಡೆಸದಂತೆ ಮನವಿ ಮಾಡಿದರೂ ಆರೋಪಿತರು ಕೇಳಿರುವುದಿಲ್ಲ. ಅಂತ ಖಾಸಗಿ ಅರ್ಜಿ ಸಾರಾಂಶ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ವಿಶ್ವವಿದ್ಯಾಲಯ ಪೊಲೀಸ್‌ ಠಾಣೆ :- ದಿನಾಂಕ: 05-11-2022   ರಂದು ಮದ್ಯಾನ ೨-೩೦ ಗಂಟೆಯ ಸುಮಾರಿಗೆ  ಸದರಿ ಪಿರ್ಯಾದಿದಾರರಿಗೆ ತಮ್ಮ  ಅಂಗಡಿ, ಹೊಟೆಲದಲ್ಲಿ ಮಾಡಿದ ಉದ್ದರಿ ಕೇಳಿದಕ್ಕೆ ಸದರಿ ಆರೋಪಿತರು ಹಳೆ ವೈಷಮ್ಯದಿಂದ ಕೊಲೆ ಮಾಡುವ ಉದ್ದೇಶದಿಂದ ಚಾಕು ತೆಗೆದುಕೊಂಡು ಬಂದು ನಮ್ಮೊಂದಿಗೆ ಜಗಳ ತೆಗೆದು ಹೊಡೆದು ಗಾಯಗೊಳಿಸಿ ಕೊಲೆ ಮಾಡಲು ಪ್ರಯತ್ನಿಸಿ ಜೀವ ಬೆದರಿಕೆ ಹಾಕಿರುತ್ತಾರೆ ಎಂದು ಫಿರ್ಯಾದಿ ಕೊಟ್ಟ ಹೇಳಿಕೆ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

ಇತ್ತೀಚಿನ ನವೀಕರಣ​ : 22-11-2022 01:27 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080