ಅಭಿಪ್ರಾಯ / ಸಲಹೆಗಳು

ಸಂಚಾರಿ-೦೨ ಪೊಲೀಸ ಠಾಣೆ:- ಇಂದು ಮಾನ್ಯರವರಲ್ಲಿ ಅರಿಕೆ ಮಾಡಿಕೊಳ್ಳುವುದೆನೆಂದರೆ, ಇಂದು ದಿನಾಂಕ 05/11/2021 ರಂದು ರಾತ್ರಿ 9:00 ಪಿ.ಎಮ್ ಕ್ಕೆ ಯುನೈಟೆಡ ಆಸ್ಪತ್ರೆಯಿಂದ ಭಾಗೇಶ ತಂದೆ ಈರಣ್ಣ ಚಿಕಬಸ್ತಿ ಈತನ ಆರ್.ಟಿ.ಎ ಎಮ್.ಎಲ್.ಸಿ ಹಾಗು ಜಿ.ಜಿ.ಹೆಚ್ ಕಲಬುರಗಿಯಿಂದ ಸಿದ್ದಪ್ಪಾ ತಂದೆ ಮಚೆಂದ್ರ ಪಾಟೀಲ, ಸಿದ್ದಾರಾಮ ತಂದೆ ಶರಣಬಸಪ್ಪಾ ಖ್ಯಾಮದಿ ಇವರುಗಳ ಆರ್.ಟಿ.ಎ ಡೆತ್ ಎಮ್.ಎಲ್.ಸಿ ವಸೂಲಾಗಿರುತ್ತವೆ ಅಂತಾ ತಿಳಿಸಿದಕ್ಕೆ ನಾನು ಮೊದಲು ಸರಕಾರಿ ಆಸ್ಪತ್ರೆ ಕಲಬುರಗಿಗೆ ಭೇಟಿ ಕೊಟ್ಟು ಡೆತ್ ಎಮ್.ಎಲ್.ಸಿ ಪಡೆದುಕೊಂಡು ವಿಚಾರಿಸಿ ನಂತರ ಯುನೈಟೆಡ ಆಸ್ಪತ್ರೆಗೆ ಭೇಟಿ ಕೊಟ್ಟು ಗಾಯಾಳು ಭಾಗೇಶ ತಂದೆ ಈರಣ್ಣ ಚಿಕಬಸ್ತಿ ಇವರ ಎಮ್.ಎಲ್.ಸಿ ಪಡೆದುಕೊಂಡು ಗಾಯಾಳುವಿಗೆ ವಿಚಾರಿಸಲಾಗಿ ಹೇಳಿಕೆ ಫಿರ್ಯಾದಿ ನೀಡಿದ್ದೆನೆಂದರೆ, ತಾನು ತನ್ನಅಕ್ಕಳಿಗೆ ತಮ್ಮೂರಿನಿಂದ ಕಲಬುರಗಿಗೆ ಕರೆದುಕೊಂಡು ಬಂದು ಅವಳ ಗಂಡನ ಮನೆಯಲ್ಲಿ ಬಿಟ್ಟು ಮರಳಿ ಊರಿಗೆ ಹೋಗುವ ಕುರಿತು ಆಳಂದ ಚಕ್ ಪೋಸ್ಟಕ್ಕೆ ಹೋದಾಗ ಸಿದ್ದಪ್ಪಾ ತಂದೆ ಮಚೆಂದ್ರ ಪಾಟೀಲ ಈತನು ಮೋಟರ ಸೈಕಲ ನಂ. ಕೆಎ 32 ಇ.ಜೆ 1371 ನೇದ್ದರ ಮೇಲೆ ಸಿದ್ದಾರಾಮ ತಂದೆ ಶರಣಬಸಪ್ಪಾ ಖ್ಯಾಮದಿ ಈತನನ್ನು ಕೂಡಿಸಿಕೊಂಡು ಬಂದಿದ್ದು, ಊರಿಗೆ ಹೋಗುವುದಾಗಿ ತಿಳಿಸಿದಕ್ಕೆ ಆ ಮೋಟರ ಸೈಕಲ ಮೇಲೆ ಫಿರ್ಯಾದಿಯು ಕುಳಿತುಕೊಂಡು ಹೋಗುವಾಗ ಸಿದ್ದಪ್ಪಾ ಪಾಟೀಲ ಈತನು ಮೋಟರ ಸೈಕಲನ್ನು ಅತಿವೇಗದಿಂದ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಹೋಗುವಾಗ ರಾತ್ರಿ 7:00 ಗಂಟೆ ಸುಮಾರಿಗೆ ಆಳಂದ ರೋಡಿನ ಬೆಣ್ಣೂರ ಪೆಟ್ರೋಲ ಪಂಪದ ಎದುರುಗಡೆ ಮುಂದೆ ಹೋಗುತ್ತಿರುವ ಟ್ರ್ಯಾಕ್ಟರ ನಂ. ಕೆಎ 25 ಟಿ.ಎ 7237 ಟ್ರ್ಯಾಲಿ ನಂ. ಕೆಎ 24 ಟಿ 4648 ನೇದ್ದರ ಚಾಲಕನು ಒಮ್ಮೇಲೆ ತನ್ನ ಟ್ರ್ಯಾಕ್ಟರಗೆ ಯಾವುದೆ ಮುನ್ಸುಚನೆ ತೊರಿಸದೆ ಬ್ರೆಕ ಹಾಕಿ ನಿಧಾನ ಮಾಡಿದಕ್ಕೆ ಅತಿವೇಗದಿಂದ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಹೋದ ಸಿದ್ದಪ್ಪಾನು ಟ್ರ್ಯಾಕ್ಟರದ ಹಿಂಭಾಗಕ್ಕೆ ಡಿಕ್ಕಿ ಹೊಡೆದ ಪರಿಣಾಮ ಮೋಟರ ಸೈಕಲದ ಮೇಲೆ ಹಾರಿ ಬಿದ್ದಿದ್ದರಿಂದ ಫಿರ್ಯಾದಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಸಿದ್ದಪ್ಪ ಪಾಟೀಲನಿಗೆ ಗಟಬಾಯಿಗೆ ಹಾಗು ಮೂಗಿಗೆ ಭಾರಿ ಪ್ರಮಾಣದ ಗಾಯವಾಗಿದ್ದು, ಅಲ್ಲದೆ ಸಿದ್ದಾರಾಮ ಖ್ಯಾಮದಿ ಈತನಿಗೆ ಮೂಗಿನಿಂದ ಮತ್ತು ಕಿವಿಯಿಂದ ರಕ್ತ ಬಂದು ಇಬ್ಬರು ಬೆಹೋಶ ಸ್ಧಿತಿಯಲ್ಲಿದ್ದು, ಘಟನೆಯನ್ನು ಶಂಕರ ಹರಳಯ್ಯ, ಸಂದೀಪ ಪಾಟೀಲ ಇವರು ನೋಡಿದ್ದು, ಮುಂದೆ 108 ಅಂಬುಲೇನ್ಸದಲ್ಲಿ ಯುನೈಟೆಡ ಆಸ್ಪತ್ರೆ ಹತ್ತೀರ ಬಂದಾಗ 8:30 ಪಿ.ಎಮ್. ಸುಮಾರಿಗೆ ಸಿದ್ದಪ್ಪಾ ಪಾಟೀಲ ಮತ್ತು ಸಿದ್ದಾರಾಮ ಖ್ಯಾಮದಿ ಇವರು ಭಾರಿಗಾಯಗ ಬಾಧೆಯಿಂದ ಮೃತ ಪಟ್ಟಿರುತ್ತಾರೆ ಟ್ರ್ಯಾಕ್ಟರ ಚಾಲಕನು ಘಟನೆ ನಂತರ ಓಡಿ ಹೋಗಿದ್ದು, ಈ ಘಟನೆಗೆ ಸಿದ್ದಪ್ಪಾ ಮತ್ತು ಟ್ರ್ಯಾಕ್ಟರ ಚಾಲಕ ಇವರಿಬ್ಬರ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕೆಂದು ಇತ್ಯಾದಿ ಕೊಟ್ಟ ಫಿರ್ಯಾದಿ ಹೇಳಿಕೆ ಸಾರಂಶದ ಮೇಲಿಂದ  ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

ಇತ್ತೀಚಿನ ನವೀಕರಣ​ : 07-11-2021 10:23 AM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080