ಅಭಿಪ್ರಾಯ / ಸಲಹೆಗಳು

ಅಶೋಕ ನಗರ ಪೊಲೀಸ ಠಾಣೆ :-  ದಿನಾಂಕ:05.10.2022 ರಂದು 10:30 ಪಿ.ಎಂ.ಕ್ಕೆ ಫಿರ್ಯಾದಿದಾರರಾದ ಶ್ರೀಮತಿ ಪ್ರೀತಿ ಗಂಡ ಲಕ್ಷ್ಮೀಪುತ್ರ ಜಮಜೇನವರ ವಯ:34 ವರ್ಷ ಜಾ: ಲಿಂಗಾಯತ ಉ: ಮನೆ ಕೆಲಸ ಸಾ|| ನಂದಿಕೊರ ಹಾ|| ವ|| ಸಂತೋಷ ಕಾಲೋನಿ ಉದನೂರ ರೋಡ ಕಲಬುರಗಿ ಇವರು ಠಾಣೆಗೆ ಹಾಜರಾಗಿ ಹೇಳಿಕೆ ಫಿರ್ಯಾದಿ ನೀಡಿದ್ದರ ಸಾರಾಂಶವೆನೆಂದರೆ,  ನಮ್ಮ ತಂದೆ ತಾಯಿಗೆ ನಾವು ಒಟ್ಟು 2 ಜನ ಗಂಡು ಮಕ್ಕಳು ಮತ್ತು 2 ಜನ ಹೆಣ್ಣು ಮಕ್ಕಳು ಇರುತ್ತೇವೆ. ಮೊದಲನೆಯವನು ಪ್ರಶಾಂತ, ಎರಡನೆಯವನು ಶಿವಶಾಂತ ಮೂರನೆಯವಳು ನಾನು ಮತ್ತು ನಾಲ್ಕನೆಯವಳು ಭಾರತಿ ಅಂತ ಇರುತ್ತಾಳೆ. ನನಗೆ 2006 ನೇ ಸಾಲಿನಲ್ಲಿ ಕಲಬುರಗಿಯ ಶಿವಾಜಿ ನಗರದ ಹಣಮಂತರಾಯ ಕಲ್ಲೂರ ಎಂಬುವರೊಂದಿಗೆ ಲಗ್ನವಾಗಿದ್ದು ಅವರಿಂದ ನನಗೆ ಸಂಪ್ರೀಯಾ ಎಂಬ 15 ವರ್ಷದ ಹೆಣ್ಣು ಮಗಳು ಇರುತ್ತಾಳೆ. ನಂತರ ನನ್ನ ಗಂಡ ಹಣಮಂತರಾಯ ಇತನೊಂದಿಗೆ ಕೌಟುಂಬಿಕ ವಿಷಯದಲ್ಲಿ ತಕರಾರು ಆಗಿದ್ದರಿಂದ ಅವರಿಂದ ದೂರವಾಗಿದ್ದು ಮಗಳು ಸಂಪ್ರೀಯಾ ಇವಳು ಅವರ ಹತ್ತಿರವೆ ಇರುತ್ತಾಳೆ. 2015 ನೇ ಸಾಲಿನಲ್ಲಿ ನಂದಿಕೂರ ಗ್ರಾಮದ ಲಕ್ಷ್ಮೀಪುತ್ರ ಎಂಬುವರೊಂದಿಗೆ ಪ್ರೀತಿಸಿ ಲಗ್ನವಾಗಿದ್ದು ಇರುತ್ತದೆ.  ನನ್ನ ಗಂಡ ಲಕ್ಷ್ಮೀಪುತ್ರ ಇವರು ಕಲಬುರಗಿ ನಗರದ ಊದನೂರ ಕ್ರಾಸ್ ಹತ್ತಿರ ಶಿವಾ ಎಂಬ ಹೆಸರಿ ಟೆಂಟಹೌಸ್ ಇಟ್ಟುಕೊಂಡಿರುತ್ತಾರೆ. ನಮಗೆ ಸುಪ್ರೀಯಾ ಅಂತ 6 ವರ್ವ ಮತ್ತು ಶ್ರೀಪ್ರೀಯಾ ಅಂತ 4 ವರ್ಷದ ಇಬ್ಬರು ಹೆಣ್ಣು ಮಕ್ಕಳು ಇರುತ್ತಾರೆ. ನನ್ನ ಮೊದಲನೆ ಗಂಡ ಹಣಮಂತ್ರಾಯ ಇತನು 2017 ನೇ ಸಾಲಿನಲ್ಲಿ ಮೃತಪಟ್ಟಿರುವ ಬಗ್ಗೆ ಗೊತ್ತಾಗಿರುತ್ತದೆ. ನನ್ನ ತಂಗಿ ಭಾರತಿ ಇವಳಿಗೆ ಇನ್ನೂ ಲಗ್ನವಾಗಿರುವುದಿಲ್ಲ.ಕಳೆದ 3 ವರ್ಷಗಳ ಹಿಂದೆ ನನ್ನ ಅಣ್ಣಂದಿರಾದ ಪ್ರಶಾಂತ ತಂದೆ ಲಕ್ಷ್ಮಣಗೌಡ ಮೂಲಗೆ ಮತ್ತು ಶಿವಶಾಂತ ತಂದೆ ಲಕ್ಷ್ಮಣಗೌಡ ಮೂಲಗೆ ಇವರು ಏಳೆನೀರಿನ ವ್ಯಾಪಾರ ಮಾಡುತ್ತೇವೆ ನಮ್ಮ ದುಡ್ಡಿನ ಸಹಾಯ ಮಾಡಿ ಅಂತ ನಮ್ಮ ಬಳಿಗೆ ಬಂದಾಗ ನಾವಿಬ್ಬರು ಗಂಡ ಹೆಂಡತಿ ಇಬ್ಬರೂ ಕೂಡಿ ಮಾತಾಡಿಕೊಂಡು ಅವರಿಗೆ ಒಟ್ಟು 8 ಲಕ್ಷ ಹಣವನ್ನು ಕೈಗಡ ರೂಪದಲ್ಲಿ ನೀಡಿರುತ್ತೇವೆ. ಸದರಿ ಹಣವನ್ನು ಅವರು ತಮ್ಮ ಜಮೀನು ಮಾರಾಟ ಮಾಡಿ ಹಣವನ್ನು ಮರಳಿ ಕೊಡುತ್ತೇವೆ ಅಂತ ಹೇಳಿರುತ್ತಾರೆ. ಆದರೆ ಇಲ್ಲಿಯ ವರೆಗೆ ಅವರು ನಮಗೆ ಹಣ ನೀಡಿರುವುದಿಲ್ಲ. ನಾವು ಸದರಿ ಹಣವನ್ನು ಮರಳಿ ನೀಡುವಂತೆ ಕಳೆದ 3 ತಿಂಗಳ ಹಿಂದೆ ನಮ್ಮ ಅಣ್ಣಂದಿರರು ಏಳೆನೀರು ವ್ಯಾಪಾರ ಮಾಡುವ ಬಿದ್ದಾಪೂರ ಕಾಲೋನಿ ಹನುಮಾನ ಮಂದಿರ ಹತ್ತಿರ ಇರುವ ಅಂಗಡಿ ಹತ್ತಿರ ನಾನು ಮತ್ತು ನನ್ನ ಗಂಡ ಇಬ್ಬರೂ ಕೂಡಿಕೊಂಡು ನಮ್ಮ ಹಣವನ್ನು ಕೇಳಲು ಹೋದಾಗ ನನ್ನ ಇಬ್ಬರೂ ಅಣ್ಣಂದಿರರು ನಮ್ಮೊಂದಿಗೆ ತಂಟೆ ತಕರಾರು ಮಾಡಿ ನನ್ನ ಗಂಡನಿಗೆ ಅವಾಚ್ಯವಾಗಿ ಬೈದು ಕೈಯಿಂದ ಹೊಡೆದು ಕಳುಹಿಸಿರುತ್ತಾರೆ. ಅಂದಿನಿಂದಲೂ ಸಹ ನನ್ನ ಅಣ್ಣಂದಿರರು  ನಮ್ಮ ಮೇಲೆ ವೈಮನಸ್ಸು ಸಾಧಿಸುತ್ತಾ ಬಂದಿರುತ್ತಾರೆ. ನಂತರ ಈ ವಿಷಯದ ಬಗ್ಗೆ ನಾಲ್ಕು ಜನರ ಮದ್ಯೆ ಪಂಚಾಯತಿ ಮಾಡಿದ್ದು ಹಣವನ್ನು 3 ತಿಂಗಳ ನಂತರ ಕೊಡುವುದಾಗಿ ಮಾತುಕತೆ ಆಗಿದ್ದು ಇರುತ್ತದೆ.ಹೀಗಿದ್ದು ಇಂದು ದಿನಾಂಕ:05.10.2022 ರಂದು 07:00 ಪಿ.ಎಂ. ಸುಮಾರಿಗೆ ನಾನು ಮತ್ತು ನನ್ನ ಗಂಡ ಲಕ್ಷ್ಮೀಪುತ್ರ ಇಬ್ಬರು ಕೂಡಿಕೊಂಡು ಕಲಬುರಗಿ ನಗರದ ಬಸಂತ ನಗರದಲ್ಲಿರುವ ನಮ್ಮ ದೂರದ ಸಂಬಂಧಿಕರಾದ ಅಣ್ಣಾರಾಯ ಅವದೆ ಇವರ ಮನೆಗೆ ದಸರಾ ಹಬ್ಬದ ನಿಮಿತ್ಯ ಬನ್ನಿ (ಬೆಳ್ಳಿ ಬಂಗಾರ) ನೀಡಲು ಹೋಗಿರುತ್ತೇವೆ. ಇದೇ ವೇಳೆಗೆ ನನ್ನ ಅಣ್ಣಂದಿರರಾದ ಪ್ರಶಾಂತ ಮತ್ತು ಶಿವಶಾಂತ ಇಬ್ಬರೂ ಕೂಡಿಕೊಂಡು ನಮ್ಮ ಸಂಬಂಧಿಕರ ಮನೆಗೆ ಬಂದವರೆ, ನನ್ನ ಗಂಡನೊಂದಿಗೆ  ಹಣದ ವಿಷಯದಲ್ಲಿ ತಂಟೆ ತಕರಾರು ಮಾಡುತ್ತಾ ಅವಾಚ್ಯವಾಗಿ ಬೈಯುತ್ತಾ ಇಬ್ಬರು ತಮ್ಮ ಕೈಯಲ್ಲಿ ಹಿಡಿದುಕೊಂಡು ಬಂದಿದ್ದ ಏಳೆನೀರು ಕತ್ತರಿಸುವ ಮಚ್ಛಿನಿಂದ ನನ್ನ ಗಂಡನ ಕುತ್ತಿಗೆ ಇಬ್ಬರು ಒಬ್ಬರ ನಂತರ ಒಬ್ಬರು ಹೊಡೆದಾಗ ನನ್ನ ಗಂಡನು ಚಿರಾಡುತ್ತಾ ರಕ್ತದ ಮಡುವಿನಲ್ಲಿ ಬಿದ್ದು ಸ್ಥಳದಲ್ಲೇ ಮೃತ ಪಟ್ಟಿರುತ್ತಾನೆ. ನಾವು ಅವರಿಗೆ ನನ್ನ ಗಂಡನಿಗೆ ಏಕೆ ಹೊಡೆಯುತ್ತಿರುವಿರಿ ಅಂತ ಕೇಳುತ್ತಿದ್ದರು ಸಹ ಅವರು ನನಗೆ ನೂಕಿ ಅಲ್ಲಿಂದ ಓಡಿ ಹೋಗಿರುತ್ತಾರೆ.ಕಾರಣ ನಾನು ಮತ್ತು ನನ್ನ ಗಂಡ ಲಕ್ಷ್ಮೀಪುತ್ರ ಇಬ್ಬರೂ ಕೂಡಿಕೊಂಡು ನಮ್ಮ ಅಣ್ಣಂದಿರರಾದ ಪ್ರಶಾಂತ ಮತ್ತು ಶಿವಶಾಂತ ಇವರಿಗೆ ನೀಡಿದ ಹಣದ ವಿಷಯದಲ್ಲಿ ಇಂದು ದಿನಾಂಕ:05.10.2022 ರಂದು 07:15 ಪಿ.ಎಂ. ಸುಮಾರಿಗೆ ನಮ್ಮ ಸಂಬಂಧಿಕರಾದ ಅಣ್ಣಾರಾಯ ಅವದೆ ಇವರ ಬಸಂತ ನಗರದ ಮನೆಯಲ್ಲಿ ಮಚ್ಛಿನಿಂದ ಕೊಚ್ಚಿ ಕೊಲೆಮಾಡಿದ್ದು ಇವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತ ಇತ್ಯಾದಿಯಾಗಿದ್ದ ಹೇಳಿಕೆ ಫಿರ್ಯಾದಿ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಸಬ್‌ ಅರ್ಬನ್‌ ಪೊಲೀಸ ಠಾಣೆ :- ದಿನಾಂಕಃ-05-10-2022 ರಂದು ಫರ‍್ಯಾದಿ ಠಾಣೆಗೆ ಹಾಜರಾಗಿ ನೀಡಿದ ಫರ‍್ಯಾದಿಯೇನೆಂದರೆ ಸದರಿ ಆರೋಪಿತನು ಅವರಾದದಿಂದ ಮಿಜಗುರಿ ಕಸಾಯಿ ಖಾನೆಗೆ ಅಕ್ರಮವಾಗಿ ಒಂದು ಹಸುವನ್ಮ್ನ ಹತ್ಯೆ ಮಾಡುವ ಉದ್ದೇಶದಿಂದ ಸಾಗಿಸುತ್ತಿದ್ದಾಗ ಫರ‍್ಯಾದಿದಾರರು ಅವನನ್ಮ್ನ ಹಿಡಿದು ವಿಚಾರಿಸಲು ಅವನ ಹತ್ತಿರ ಯಾವ್ಯದೇ ಕಾಗದ ಪತ್ರಗಳಿರುವುದಿಲ್ಲ ಗೋಹತ್ಯಾ ನಿಷ್ಭೆಧವಿರುವ್ಯದರಿಂದ ಸದರಿ ಆರೋಪಿತನ ವಿರುದ್ದ ಪ್ರಕರಣ ದಾಖಲಿಸಿಕೊಂಡ ಬಗ್ಗೆ ವರದಿ.

 

 

ರೋಜಾ ಪೊಲೀಸ್‌ ಠಾಣೆ :- ಮಹ್ಮದ್ ಶಫೀ ತಂದೆ ಅಬ್ದುಲ್ ಖಾದರ್ ವಯಾ: 24 ವರ್ಷ,ಉ: ಅಂಬಿಕಾ ಕಂನ್ಸಷ್ಟ್ರಕ್ಷನ್ ಕಂಪನಿಯಲ್ಲಿ ಸಿವಿಲ್ ಇಂಜಿನಿಯರ್ ಜಾತಿ: ಮುಸ್ಲಿಂ ಸಾ: ಸಿರಾಜ್ ಮೆಡಿಕಲ್ ಹತ್ತಿರ ಮೆಹಬೂಬ ನಗರ ಕಲಬುರಗಿ.ಮೊ ನಂ: 8951312475  ಇದ್ದು ಈ ದೂರಿನ ಮೂಲಕ ತಮಗೆ ತಿಳಿಯಪಡಿಸುವುದೇನೆಂದರೆ ನಾನು ಕಳೆದ 05.09.2022 ರಂದು ಮೈಸೂರಿನಿಂದ ಒಂದು ಹೊಂಡಾ ಸಿಬಿ ಶೈನ್ ಮೊ.ಸೈಕಲ ನಂ KA 55 EA 2316 ಅಕಿ 45000 ರೂ ನೇದ್ದನ್ನು  ಸ್ವಂತ ಉಪಯೋಗಕ್ಕೆ ಖರೀದಿ ಮಾಡಿರುತ್ತೆನೆ ಅದರ ENGGIN NO JC65EG0039521 & CHESIS NO ME4JC65DEKG026372 ನೆದ್ದು ಇರುತ್ತದೆ. ಇದನ್ನು ನಾನು ಇಲ್ಲಿಯವರೆಗೆ ಚಲಾಯಿಸಿಕೊಂಡು ಬಂದಿರುತ್ತೇನೆ.  ಹೀಗಿರುವಾಗ ದಿನಾಂಕ 14.09.2022 ರಂದು ರಾತ್ರಿ 12.30 ಎಎಮ್  ಗಂಟೆಗೆ ಕೆಲಸದಿಂದ ಬಂದು ಮನೆಯ ಮುಂದೆ ನಿಲ್ಲಿಸಿ ಸೈಡ್ ಲಾಕ್ ಮಾಡಿ ಮನೆಯಲ್ಲಿ ಊಟ ಮಾಡಿ ನಂತರ ರಾತ್ರಿ 01.30 ಎಎಮ್ ಗಂಟೆಗೆ ಹೊರಗೆ ಬಂದು ನೋಡಲಾಗಿ ನನ್ನ ಮೋ.ಸೈಕಲ್ ಇದ್ದು, ನೋಡಿ ಹೋಗಿ ಮನೆಯಲ್ಲಿ ಮಲಗಿಕೊಂಡಿರುತ್ತೇನೆ. ಬೆಳಗಿನ ಜಾವ 05.30 ಎಎಮ್ ಗಂಟೆಗೆ ನಮಾಜ್ ಮಾಡಲು ಎದ್ದು ಹೊರಗಡೆ ಬಂದು ನೋಡಲಾಗಿ ನನ್ನ ಮೋ. ಸೈಕಲ ಕಾಣಲಿಲ್ಲ. ಆಗ ನನ್ನ ಮೋ.ಸೈಕಲನ್ನು ನಾನು ಎಲ್ಲಾ ಕಡೆ ಹುಡುಕಾಡಿದ್ದು, ಎಲ್ಲಿಯೂ ಕಾಣಲಿಲ್ಲ. ನಂತರ ನನ್ನ ಗೆಳೆಯರಾದ ಸೈಫ್ ಪಟೇಲ್ ಮತ್ತು ಮಹ್ಮದ್ ಇಸ್ಮಾಯಿಲ್ ಇವರಿಗೆ ಕರೆದು ವಿಷಯ ತಿಳಿಸಿದ್ದು, ಅವರು ಸಹ ನನ್ನ ಮೋ.ಸೈಕಲನ್ನು ಎಲ್ಲಾ ಕಡೆ ಹುಡುಕಾಡಿದ್ದು, ಸಿಕ್ಕಿರುವುದಿಲ್ಲಾ. ನನ್ನ ಮೋ ಸೈಕಲನ್ನು ಯಾರೋ ಕಳ್ಳರು ಕಳ್ಳತನಮಾಡಿಕೊಂಡು ಹೋಗಿರುತ್ತಾರೆ.  ನಾನು ಅಂದಿನಿಂದ ಇಲ್ಲಿಯವರೆಗೆ  ಹುಡಕಲಾಗಿ  ನನ್ನ ಮೋ/ ಸೈಕಲ ಸಿಕ್ಕಿರುವುದಿಲ್ಲಾ.  ಹುಡುಕಾಡಿ  ತಡವಾಗಿ ಪೋಲಿಸ ಠಾಣೆಗೆ ಬಂದು ನನ್ನ ಮೋ ಸೈಕಲನ್ನು  ಕಳ್ಳತನ ವಾದ ಬಗ್ಗೆ ದೂರು ನೀಡಿದ ಇಂದು ದಿನಾಂಕ 05.10.2022 ರಂದು 13.27  ಗಂಟೆಗೆ ಫಿರ್ಯಾದಿಯ ದೂರನ್ನು ಠಾಣೆಯಲ್ಲಿ ಪಡೆದುಕೊಂಡಿದ್ದು, ಸದರಿ ದೂರಿನ ಸಾರಾಂಶದ ಮೇಲಿಂದಾ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

ಇತ್ತೀಚಿನ ನವೀಕರಣ​ : 31-10-2022 06:50 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080