ಅಭಿಪ್ರಾಯ / ಸಲಹೆಗಳು

ಚೌಕ ಪೊಲೀಸ ಠಾಣೆ :-  ದಿನಾಂಕ 05/09/2022 ರಂದು ಸಾಯಂಕಾಲ 4-15 ಗಂಟೆಗೆ ಚೌಕ ಪೊಲೀಸ ಠಾಣೆಯಲ್ಲಿ ನನಗೆ ಬಾತ್ಮಿ ಬಂದಿದ್ದೇನೆಂದರೆ, ಕಲಬುರಗಿ ನಗರದ ಶಹಾಬಜಾರ ನಾಕಾ ಹತ್ತಿರ ಇರುವ ಶಂಕರ ಕೋಡ್ಲಾ ಶಾಲೆ ಮುಂದುಗಡೆ ಖುಲ್ಲಾ ಜಾಗೆಯಲ್ಲಿ  ಕೆಲವು ಜನರು ಕಾನೂನು ಬಾಹಿರ ಅಂದರ ಬಾಹರ ಎಂಬ ದೈವಲೀಲೆಯ ಇಸ್ಪೇಟ ಜೂಜಾಟ ಆಡುತ್ತಿದ್ದಾರೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ  ಈ ವಿಷಯವನ್ನು ಮೇಲಾಧಿಕಾರಿಗಳಿಗೆ ತಿಳಿಸಿ, ಅವರ ಮಾರ್ಗದರ್ಶನದಲ್ಲಿ ದಾಳಿ ಮಾಡುವ ಕುರಿತು ಇಬ್ಬರೂ ಪಂಚರಾದ 1)ಶ್ರೀ ಮಾಹಾದೇವ ತಂದೆ ಶ್ರೀಪತರಾವ ಮೇತ್ರೆ ವ:32 ವರ್ಷ ಉ: ಕಂಬಾರ ಕೆಲಸ ಜಾತಿ ಗೀಸಾಡಿ ಸಾ: ಸಿಟಿ ಬಸಸ್ಟ್ಯಾಂಡ ಹತ್ತಿರ  ಜೋಪಡಪಟ್ಟಿ ಕಲಬುರಗಿ 2) ಶ್ರೀ ಶರಣಪ್ಪ ತಂದೆ ಹಣಮಂತಪ್ಪ  ಡೊರನಳ್ಳಿ  ವ:52 ವರ್ಷ ಉ:ಗೌಂಡಿ ಕೆಲಸ ಜಾತಿ ಕಬ್ಬಲೀಗ ಸಾ: ಗಂಗಾ ನಗರ ಕಲಬುರಗಿ  ಸಾಯಂಕಾಲ 04-45 ಗಂಟೆಗೆ ಬರಮಾಡಿಕೊಂಡು  ಸಿಹೆಚಸಿ 226 ಸಿದ್ರಾಮಯ್ಯ, ಸಿಪಿಸಿ 08 ಅಶೋಕ , ಸಿಪಿಸಿ 136 ಸುರೇಶ ರವರಿಗೆ ಪಂಚರಿಗೆ ಪರಿಚಯಿಸಿ ದಾಳಿ ಮಾಡಿ ಪಂಚನಾಮೆಗೆ ಸಹಕರಿಸಬೇಕೆಂದು ತಿಳಿ ಹೇಳಿದ ಮೇರೆಗೆ ಉಭಯ ಪಂಚರು ಒಪ್ಪಿಕೊಂಡಿರುತ್ತಾರೆ. ಅದರಂತೆ ಈ ಮೇಲಿನ ಸಿಬ್ಬಂದಿಯವರಿಗೆ ನನ್ನ ಜೊತೆಯಲ್ಲಿ ದಾಳಿ ಬರುವಂತೆ ತಿಳಿಸಿದೆನು.ನಂತರ  ನಾನು ಮತ್ತು ಪಂಚರು ಹಾಗೂ ನಮ್ಮ ಠಾಣೆಯ ಈ ಮೇಲಿನ ಸಿಬ್ಬಂದಿಯವರು ಸರ್ಕಾರಿ ಜೀಪು ಕೆಎ 32 ಜಿ 874 ರಲ್ಲಿ ಕುಳಿತುಕೊಂಡೇವು. ಜೀಪು ಸಿಪಿಸಿ 08 ಅಶೋಕ ಇವರು ಚಾಲನೆ ಮಾಡುತ್ತಿದ್ದು, ಸಾಯಂಕಾಲ 5-00 ಗಂಟೆಗೆ ಚೌಕ ಪೊಲೀಸ ಠಾಣೆಯಿಂದ ಹೊರಟು ಬಾತ್ಮಿ ಬಂದ ಕಲಬುರಗಿ ನಗರದ ಶಹಾಬಜಾರ ನಾಕಾ ಹತ್ತಿರ ಇರುವ ಶಂಕರ ಕೋಡ್ಲಾ ಶಾಲೆ ಮುಂದುಗಡೆ ಖುಲ್ಲಾ ಜಾಗೆ ಹತ್ತಿರ ಸಾಯಂಕಾಲ 5-20 ಗಂಟೆಗೆ ತಲುಪಿ ಸ್ವಲ್ಪ ದೂರದಲ್ಲಿ ಜೀಪು ನಿಲ್ಲಿಸಿ ಎಲ್ಲರೂ ಜೀಪಿನಿಂದ ಇಳಿದು ಮರೆಯಲ್ಲಿ ನಾನು ಮತ್ತು ಪಂಚರು ಹಾಗೂ ಈ ಮೇಲಿನ ಸಿಬ್ಬಂದಿಯವರೆಲ್ಲರೂ  ನಿಂತು ನೋಡಲಾಗಿ ಕಲಬುರಗಿ ನಗರದ ಶಹಾಬಜಾರ ನಾಕಾ ಹತ್ತಿರ ಇರುವ ಶಂಕರ ಕೋಡ್ಲಾ ಶಾಲೆ ಮುಂದುಗಡೆ ಖುಲ್ಲಾ ಜಾಗೆಯಲ್ಲಿ  07 ಜನರು ದುಂಡಾಗಿ ಕುಳಿತು ಇಸ್ಪೇಟ ಎಲೆಗಳ ಸಹಾಯದಿಂದ  ಹಣವನ್ನು ಪಣಕ್ಕೆ ಹಚ್ಚಿ ಅಂದರ ಬಾಹರ ಎಂಬ ದೈವಲೀಲೆಯ ಇಸ್ಪೇಟ ಜೂಜಾಟ ಆಡುತ್ತಿದ್ದು, ಅವರಲ್ಲಿ ಒಬ್ಬನು ಎಲೆಗಳು ಪೀಸ್ ಮಾಡಲು ಮತ್ತೋಬ್ಬನು ಅರ್ಧ ಕಟ್ ಮಾಡಿ ಒಂದು ಎಲೆ ಅಂಗಾತವಾಗಿಡಲು ಎಲೆ ಪೀಸ್ ಮಾಡಿದವನು ಎಲೆಗಳನ್ನು ಅಂದರ್-ಬಾಹರ್ ಅನ್ನುತ್ತಾ ಅಂಗಾತವಾಗಿ ಒಗೆಯುತ್ತಿದ್ದನು. ಉಳಿದವರೆಲ್ಲರೂ ಅಂದರಕ್ಕೆ-ಬಾಹರಕ್ಕೆ ಅಂತಾ ಹಣವನ್ನು ಪಣಕ್ಕೆ ಹಚ್ಚುತ್ತಿದ್ದರು & ಆಡುತ್ತಿರುವುದನ್ನು ನೋಡಿ ಖಾತ್ರಿ ಪಡಿಸಿಕೊಂಡು ಪಂಚರ ಸಮಕ್ಷಮದಲ್ಲಿ ನನ್ನ  ನಿರ್ದೇಶನದಂತೆ ಈ ಮೇಲಿನ ಸಿಬ್ಬಂದಿಯವರ ಸಹಾಯದಿಂದ ಸುತ್ತುವರೆದು ಸಾಯಂಕಾಲ 5-30 ಗಂಟೆಗೆ ಒಮ್ಮಲ್ಲೇ ದಾಳಿ ಮಾಡಿ ಜೂಜಾಟ ಆಡುತ್ತಿರುವ ಒಟ್ಟು 07 ಜನರಿಗೆ ಹಿಡಿಡಿದ್ದು, ಅವರ ಹೆಸರು ವಿಳಾಸ ವಿಚಾರಿಸಲೂ ಅವರಲ್ಲಿ ಒಬ್ಬನು ತನ್ನ ಹೆಸರು 1)ಮಹ್ಮದ ನಿಜಾಮೋದ್ದಿನ ತಂದೆ ಮಹ್ಮದ ರುಕ್ಕನೋದ್ದಿನ ವ:50 ವರ್ಷ ಉ: ಟೇಲರಿಂಗ ಕೆಲಸ ಜಾತಿ ಮುಸ್ಲಿಂ ಸಾ: ಮನೆ ನಂಬರ 7-826 ನಿಯರ ಹಜ್ಜ ಕಮೀಟಿ ನಯಾ ಮೊಹಲ್ಲಾ ಕಲಬುರಗಿ ಹಾ:ವ: ಜುಬೇರ ಕಾಲನಿ ಮಿಲನ ಫಂಕ್ಷನ ಹಾಲ ಹಿಂದೆ ಕಲಬುರಗಿ ಅಂತಾ ತಿಳಿಸಿದನು. ಇತನ ಎದುರುಗಡೆ ನಗದು ಹಣ 5600/- ರೂ. ಮತ್ತು ಕೆಲವು ಇಸ್ಪೇಟ ಎಲೆಗಳು ದೊರೆತವು. 2)ರವಿಚಂದ್ರ ತಂದೆ ಸೋಮೇಶ ಜಾಗೀರದಾರ ವ:32 ವರ್ಷ ಉ: ಕೋರಿಯರ ಕೆಲಸ ಜಾತಿ ಪ. ಪಂ(ಬೇಡರ) ಸಾ: ಮನೆ ನಂಬರ 63/ಬಿ ವೆಂಕಟೇಶ ನಗರ ನೋಬಲ್ ಶಾಲೆ ಹಿಂದೆ ಕಲಬುರಗಿ ಅಂತಾ ತಿಳಿಸಿದನು. ಇತನ ಎದುರುಗಡೆ ನಗದು ಹಣ 7200/- ರೂ. ದೊರೆತವು 3) ರಮೇಶ ತಂದೆ ಮಲ್ಲಪ್ಪ ದೊಡ್ಡಮನಿ ವ:36 ವರ್ಷ ಉ:ಆಟೋ ಚಾಲಕ ಜಾತಿ ಪ.ಜಾತಿ. (ಹೊಲೆಯ) ಸಾ: ಅವರಾದ (ಕೆ) ಗ್ರಾಮ ತಾ:ಜಿ: ಕಲಬುರಗಿ ಹಾ:ವ: ವಸಂತ ನಗರ ಕಲಬುರಗಿ ಅಂತಾ ತಿಳಿಸಿದನು. ಇತನ ಎದುರುಗಡೆ ನಗದು ಹಣ 10,200/- ರೂ.ದೊರೆತವು 4) ಮಹ್ಮದ ಖದೀರೋದ್ದಿನ ತಂದೆ ಮಹ್ಮದ ಹುಸೇನ ವ:38 ವರ್ಷ ಉ: ವೇಲ್ಡಂಗ ಕೆಲಸ ಜಾತಿ ಮುಸ್ಲಿಂ ಸಾ: ಬಡಾರೋಜಾ ಕಲಬುರಗಿ ಅಂತಾ ತಿಳಿಸಿದನು. ಇತನ ಎದುರುಗಡೆ ನಗದು ಹಣ 9600/-ರೂ. ದೊರೆತವು 5)ಮಹ್ಮದ ಶಫೀ ತಂದೆ ಅಬ್ದುಲ ಅಜೀಜ ವ:30 ವರ್ಷ ಉ:ಖಾಸಗಿ ಕೆಲಸ ಜಾತಿ ಮುಸ್ಲಿಂ ಸಾ : ಇಸ್ಲಾಂಬಾದ ಕಾಲನಿ ಕಲಬುರಗಿ ಅಂತಾ ತಿಳಿಸಿದನು. ಇತನ ಎದುರುಗಡೆ ನಗದು ಹಣ 2500/-ರೂ. ದೊರೆತವು 6)ಶಂಕರ ತಂದೆ ಜಗನಾಥ ಠಾಕೂರ ವ;32 ವರ್ಷ ಉ:ಖಾಸಗಿ ಕೆಲಸ ಜಾತಿ ರಜಪೂತ ಸಾ; ಕಟಗರಪುರ ಶಹಾಬಜಾರ ಕಲಬುರಗಿ ಅಂತಾ ತಿಳಿಸಿದನು. ಇತನ ಎದುರುಗಡೆ ನಗದು ಹಣ 4200/- ರೂ. ದೊರೆತವು 7) ಮಸೂದ ಆಲಂ ತಂದೆ ಗನಿ ಆಲಂ ವ:55 ವರ್ಷ ಉ:ರಿಯಲ್ ಎಸ್ಟೇಟ್ ವ್ಯಾಪರ ಜಾತಿ ಮುಸ್ಲಿಂ ಸಾ: ಶಹಾಬಜಾರ ಕಲಬುರಗಿ ಅಂತಾ ತಿಳಿಸಿದನು. ಇತನ ಎದುರುಗಡೆ ನಗದು ಹಣ 3700/- ರೂ. ದೊರೆತವು ಮತ್ತು ಜೂಜಾಟದಲ್ಲಿ ತೊಡಗಿಸಿದ  ಕೆಳಗಡೆ ಇದ್ದ ಹಣ 57,300 ರೂ ಇದ್ದವು. ಮೊದಲು ಎಲ್ಲಾ ಇಸ್ಪೇಟ ಎಲೆಗಳು ಒಟ್ಟುಗೂಡಿಸಿ ಎಣಿಕೆ ಮಾಡಲಾಗಿ 52  ಇಸ್ಪೇಟ ಎಲೆಗಳು ಇದ್ದವು. ತದನಂತರ ಎಲ್ಲಾ ಹಣ ಒಟ್ಟುಗೂಡಿಸಿ ಎಣಿಕೆ ಮಾಡಲಾಗಿ  ಒಟ್ಟು ನಗದ ಹಣ 1,00,300/-ರೂ  ಇದ್ದವು.  ಪಿ.ಐ. ಚೌಕ ರವರು ಹಣ ಮತ್ತು ಇಸ್ಪೇಟಗಳನ್ನು ಕೇಸಿನ ಪುರಾವೆಗೋಸ್ಕರ ಒಂದು ದಸ್ತಿಯಲ್ಲಿ ಹಾಕಿ ಗಂಟು ಕಟ್ಟಿ ಅದಕ್ಕೆ ನಾವು ಪಂಚರು ಸಹಿ ಮಾಡಿದ ಚೀಟಿ ಅಂಟಿಸಿ ತಮ್ಮ ವಶಕ್ಕೆ ತೆಗೆದುಕೊಂಡು ಜಪ್ತ ಪಡಿಸಿಕೊಂಡರು. ಈ ಮೇಲಿನ ಎಲ್ಲಾ ಜನರು ಅಂದರ ಬಾಹರ ಎಂಬ ದೈವಲೀಲೆಯ ಇಸ್ಪೇಟ ಜೂಜಾಟದಲ್ಲಿ ನಿರತರಾಗಿದ್ದರಿಂದ ಸದರಿಯವರಿಗೆ ನಾನು ಮತ್ತು ದಾಳಿಗೆ ಬಂದ ಅಧಿಕಾರಿ ಮತ್ತು  ಸಿಬ್ಬಂದಿವಯರು ತಮ್ಮ ವಶಕ್ಕೆ ತೆಗೆದುಕೊಂಡೇವು.ಸದರಿ ಜಪ್ತಿಪಂಚನಾಮೆಯನ್ನು ದಿನಾಂಕ.05/09/2022 ರಂದು ಸಾಯಂಕಾಲ 5-30 ಗಂಟೆಯಿಂದ 6-30 ಗಂಟೆಯವರೆಗೆ ಸ್ಥಳದಲ್ಲಿ ಲ್ಯಾಪಟ್ಯಾಪನಲ್ಲಿ ಜಪ್ತಿಪಂಚನಾಮೆಯನ್ನು ಬೆರಳಚ್ಚು ಮಾಡಿಸಿದ್ದು ಇರುತ್ತದೆ. ನಂತರ ಚೌಕ ಪೊಲೀಸ್ ಠಾಣೆಗೆ ಬಂದು ಸರ್ಕಾರಿ ತರ್ಫೇ  ತಯಾರಿಸಿ ಜಪ್ತಿ ಪಂಚನಾಮೆ, ಮತ್ತು ಮುದ್ದೇಮಾಲು ಹಾಗೂ 07 ಜನ ಆರೋಪಿತರನ್ನು ಹಾಜರಪಡಿಸಿದ್ದು, ಸದರಿಯವರ ವಿರುದ್ದ ಕಾನೂನು ಕ್ರಮ ಜರುಗಿಸಲು ಎಸ್.ಎಚ.ಓ. ರವರಿಗೆ ಸೂಚಿಸಿದೆನು ಎಂದು ಕೊಟ್ಟ ಸರ್ಕಾರ ತರ್ಫೇ ಮತ್ತು ಇಸ್ಪೇಟ್ ಜೂಜಾಟ ದಾಳಿ ಜಪ್ತಿ ಪಂಚನಾಮೆ  ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಸಬ್‌ ಅರ್ಬನ್‌ ಪೊಲೀಸ ಪೊಲೀಸ್‌ ಠಾಣೆ :-   ನನಗೆ ಒಂದು ಕಿರಣಿ ಅಂಗಡಿಯಿದ್ದು ದಿನಾಂಕ ೧೩/೦೭/೨೦೨೨ ರಂದು ಸಂಜೆ ೦೬.೩೦ ಗಂಟೆ ಸುಮಾರಿಗೆ ಅಂಗಡಿಯ ಚಾವಿ ಹಾಕಿಕೊಂಡು ಹೋಗಿದ್ದು ದಿನಾಂಕ ೧೪/೦೭/೨೦೨೨ ರಂದು ಬೆಳಗ್ಗೆ ೮.೦೦ ಗಂಟೆಗೆ ಬಂದು ನೋಡಲು ಕಿರಣೆ ಅಂಗಡಿಯಲ್ಲಿ ಡ್ರಲ್ಲಿಂಗ್ ಮಿಶಿನ್,ವಾಲ್ ಕಟರ್ ಮಶಿನ್,ಕಾಂಕ್ರಿಟ್ ಮಿಶಿನ್‌ಗಳನ್ನು ಒಟ್ಟು ೧೫೦೦೦ ರೂ  ಮೌಲ್ಯದ ವಸ್ತುಗಳನ್ನು ಯಾರೋ ಕಳ್ಳರು ಕದ್ದಿದ್ದಾರೆ ಎಂದು ಫಿರ್ಯಾದಿ ಕೊಟ್ಟ ಹೇಳಿಕೆ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ವಿಶ್ವವಿದ್ಯಾಲಯ ಪೊಲೀಸ ಠಾಣೆ :- ದಿನಾಂಕ: ೦೪.೦೯.೨೦೨೨ ರಂದು ಬೆಳಿಗ್ಗೆ ೧೦:೦೦ ಗಂಟೆಯ ಸುಮಾರಿಗೆ ಫಿರ್ಯಾದಿಯ ಮಗನಾಧ  ದರ್ಶನ ಈತನು ನಮ್ಮ ಮನೆಯಿಂದ ಕೋಟನೂರದಲ್ಲಿ ಗಣಪತಿ ನೋಡಿ ಬರುತ್ತೇನೆ ಅಂತಾ ಮನೆಯಿಂದ ಹೇಳಿ ಹೋದನು. ನಂತರ ಮದ್ಯಾಹ್ನವಾದರು ಮನೆಗೆ ಬರದೆ ಇದ್ದಾಗ ಕೋಟನೂರದಲ್ಲಿ ಪರಿಚಯದ ಖನಯ್ಯ ಇವರ ಮನೆಗೆ ಹೋಗಿರಬಹುದು ಅಂತಾ ತಿಳಿದು ಸುಮ್ಮನಿದ್ದು, ನಂತರ ನನ್ನ ಮಗನಾದ ದರ್ಶನ ಈತನು ಸಾಯಂಕಾಲವಾದರೂ ಮನೆಗೆ ಬರದೆ ಇದ್ದಾಗ ಠಾಣೆಗೆ ಬಂದು ದೂರು ನೀಡಿದ್ದು ಇರುತ್ತದೆ.

 

 

ವಿಶ್ವವಿದ್ಯಾಲಯ ಪೊಲೀಸ ಠಾಣೆ  :- ದಿನಾಂಕ ೦೪-೦೯-೨೦೨೨ ರಂದು ೪:೩೦ ಪಿ.ಎಮ್ ಸುಮಾರಿಗೆ ಸದರಿ ಆರೋಪಿತರು ಫಿರ್ಯಾದಿಯು ಕೆಲಸ ಮಾಡುವಾಗ ಶಹಾಬಾದ ರಸ್ತೆ ಕೆ.ಇ.ಎನ್ ಬ್ರಿಡ್ಜ ಶಾಲೆ ಎದುರುಗಡೆ ಇರುವ ನಮ್ಮ ವಿಶ್ವಕರ್ಮ ಶಿಲ್ಪಕಲಾ ಕೇಂದ್ರ(ಸೆಡ್ಡ) ನಲ್ಲಿ ಮೂರ್ತಿ ಕೆಲಸ ಮಾಡುವಾಗ ದಿಡೀರನೇ ಆಟೋ ರಿಕ್ಷಾದಲ್ಲಿ ಬಂದು ಸದರಿ ಆರೋಪಿತರು ಹೊಡೆಬಡೆ ಜೀವದ ಬೇದರಿಕೆ ಹಾಕಿದ ಬಗ್ಗೆ ದೂರು ಇರುತ್ತದೆ.

ಇತ್ತೀಚಿನ ನವೀಕರಣ​ : 16-09-2022 07:00 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080