ಅಭಿಪ್ರಾಯ / ಸಲಹೆಗಳು

ಚೌಕ ಪೊಲೀಸ್‌ ಠಾಣೆ :-  ದಿನಾಂಕಃ 05-08-2022   ರಂದು ಬೆಳಿಗ್ಗೆ ೧೦.೧೫ ಎಎಂಕ್ಕೆ ಫಿರ್ಯಾದಿದಾರರಾದ ಶ್ರೀಮತಿ ಅಂಬಿಕಾ ಗಂಡ ರೇವಣಸಿದ್ದಪ್ಪಾ ಕುಂಬಾರ ವ:೩೫ ವರ್ಷ ಉ:ಖಾಸಗಿ ಶಾಲೆಯಲ್ಲಿ ಟೀಚರ ಕೆಲಸ ಜಾ:ಕುಂಬಾರ ಸಾ:ಕಿಣ್ಣೀ ಸುಲ್ತಾನಗ್ರಾಮ ತಾ:ಆಳಂದ ಹಾ:ವಾ:ಸಿದ್ರಾಮಪ್ಪಾ ಕುಂಬಾರ ಇವರ ಮನೆಯಲ್ಲಿ ಬಾಡಿಗೆ ಹನುಮಾನ ಗುಡಿಯ ಹತ್ತಿರ ಭವಾನಿ ನಗರ ಕಲಬುರಗಿ ಇವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಗಣಕೀಕೃತ ಮಾಡಿಸಿದ ಫಿರ್ಯಾದಿ  ಅರ್ಜಿಯನ್ನು ಹಾಜರ ಪಡಿಸಿದ್ದು ಸದರಿ ಫಿರ್ಯಾದಿ ಅರ್ಜಿಯ ಸಾರಾಂಶ ಈ ಕೆಳಗಿನಂತೆ ಇರುತ್ತದೆ. ಈ ಮೂಲಕ ತಮ್ಮಲ್ಲಿ ದೂರು ಸಲ್ಲಿಸುವುದೇನೆಂದರೆ ನಾನು ನಮ್ಮೂರಿನ ಕಿಣ್ಣಿಸುಲ್ತಾನ ಗ್ರಾಮದಲ್ಲಿ ಖಾಸಗಿ ಶಾಲೆಯಲ್ಲಿ ಟೀಚರ ಕೆಲಸ ಮಾಡಿಕೊಂಡು ಕುಟುಂಬದೊಂದಿಗೆ ವಾಸವಾಗಿರುತ್ತೇನೆ. ನನಗೆ ಸದ್ಯ ೦೨ ಜನ ಗಂಡು ಮಕ್ಕಳು ಇರುತ್ತಾರೆ. ನನ್ನ ಗಂಡ ರೇವಣಸಿದ್ದಪ್ಪಾ ತಂದೆ ನಿಂಗಣ್ಣಾ ಕುಂಬಾರ ವ:೩೫ ರ‍್ಷದವರಿದ್ದು ಇವರು ಕಲಬುರಗಿ ನಗರದ ಕೆಎಂಎಫಸಿ ಹಾಲಿನ ಡೈರಿಯಲ್ಲಿ ಕಾರಚಾಲಕ ಕೆಲಸ ಮಾಡಿಕೊಂಡು ಇರುತ್ತಾರೆ. ನನ್ನ ಗಂಡನು ಸದ್ಯ ಕಲಬುರಗಿ ನಗರದ ಶ್ರೀ ಸಿದ್ರಾಮಪ್ಪ ಕುಂಬಾರ ಇವರ ಮನೆಯಲ್ಲಿ ಒಂದು ರೂಮ ಬಾಡಿಗೆಯಿಂದ ಪಡೆದುಕೊಂಡು ಇರುತ್ತಾರೆ. ನಾನು ಕೂಡಾ ಆಗಾಗ್ಗೆ ಕಲಬುರಗಿಗೆ ನನ್ನ ಗಂಡನ ಮನೆಗೆ ಬಂದು ಹೋಗುವುದು ಮಾಡುತ್ತಿರುತ್ತೇನೆ. ನನ್ನ ಗಂಡ ರೇವಣಸಿದ್ದಪ್ಪಾ ಕುಂಬಾರ ಇವರು ಕಳೆದ ೦೧ ವರ್ಷದ ಹಿಂದೆ ತನ್ನ ಕುಡಿಯುವುದು, ತಿನ್ನುವುದು ಇತರೆ ಕೇಟ ಚಟಗಳಿಗಾಗಿ ಬೇರೆಯವರಿಂದ ಸುಮಾರು ೨-೩ ಲಕ್ಷ ರೂಪಾಯಿಗಳನ್ನು ಸಾಲ ಮಾಡಿಕೊಂಡಿರುತ್ತಾನೆ. ಈ ಸಾಲ ಹೇಗೆ ತೀರಿಸಬೇಕು ಅಂತಾ ನನ್ನ ಗಂಡನು ಮಾನಸೀಕವಾಗಿ ನೊಂದಿಕೊಂಡಿದ್ದು ಈ ವಿಷಯ ಗೊತ್ತಾಗಿ ನಾನು ಮತ್ತು ನನ್ನ ಅತ್ತೆ ಇಬ್ಬರೂ ನನ್ನ ಗಂಡನಿಗೆ ನೀನು ಮಾಡಿರುವ ಸಾಲ ಹೇಗಾದರೂ ನಾವು ತೀರಿಸುತ್ತೇವೆ. ನೀನು ಯಾವುದಕ್ಕೂ ಚಿಂತೆ ಮಾಡಬೇಡಾ ಅಂತಾ ಹೇಳಿ ಸಮಾದಾನ ಮಾಡಿದ್ದರೂ ಸಹ ಅವರು ಮಾನಸೀಕವಾಗಿ ನೊಂದಿದ್ದರು. ನಾನು ಮೊನ್ನೆ ದಿನಾಂಕ:೦೩.೦೮.೨೦೨೨ ರಂದು ನಮ್ಮೂರಿನಿಂದ ಬೆಳಿಗ್ಗೆ ೯.೦೦ ಗಂಟೆಗೆ ನಮ್ಮ ಮಕ್ಕಳಿಗೆ ಆರಾಮ ಇಲ್ಲದ ಪ್ರಯುಕ್ತ ಅವರಿಗೆ ಆಸ್ಪತ್ರೆಗೆ ತೋರಿಸಿಕೊಂಡು ಹೋಗಲು ಮತ್ತು ನನ್ನ ಗಂಡನ ಯೋಗಕ್ಷೇಮ ವಿಚಾರಿಸಿಕೊಂಡು ಹೋಗುವ ಕುರಿತು ನಾನು ನನ್ನ ಎರಡು ಮಕ್ಕಳಿಗೆ ಕರೆದುಕೊಂಡು ನಮ್ಮ ಗಂಡ ವಾಸವಾಗಿರುವ ಭವಾನಿ ನಗರದ ಬಾಡಿಗೆ ಮನೆಗೆ ಬಂದಿದ್ದು ಆ ವೇಳೆಯಲ್ಲಿ ಬೆಳಿಗ್ಗೆ ನನ್ನ ಗಂಡ ನನ್ನ ಎರಡನೇ ಮಗ ಧನುಶ ಇತನಿಗೆ ಡಾ:ಪ್ರಹ್ಲಾದ ರವರ ಹತ್ತಿರ ತೋರಿಸಿಕೊಂಡು ಮರಳಿ ಮನೆಗೆ ಬಂದು ರಾತ್ರಿ ಅಲ್ಲಿಯೇ ಉಳಿದುಕೊಂಡು ನಿನ್ನೆ ದಿನಾಂಕ:೦೪.೦೮.೨೦೨೨ ರಂದು ಬೆಳಿಗ್ಗೆ ೭.೦೦ ಗಂಟೆಗೆ ನನ್ನ ಮನೆಯಿಂದ ಆಳಂದ ಚಕ್ ಪೋಸ್ಟ ಹತ್ತಿರ ಬಂದು ನನ್ನ ಗಂಡ ನನಗೆ ನಮ್ಮೂರಿಗೆ ಕಳುಹಿಸಿಕೊಟ್ಟಿದ್ದು ನಾನು ಊರಿಗೆ ಬಂದಿರುತ್ತೇನೆ. ನಾನು ರಾತ್ರಿ ೮.೦೦ ಗಂಟೆಗೆ ನನ್ನ ಗಂಡನಿಗೆ ಫೋನ ಮಾಡಿ ಎಲ್ಲಿದ್ದೀರಿ ಅಂತಾ ಕೇಳಿದಾಗ್ ನಾನು ಕೆಲಸದ ಮೇಲೆ ಇದ್ದೇನೆ. ನಂತರ ಊಟ ಮಾಡಿ ಮನೆಗೆ ಹೋಗುತ್ತೇನೆ. ನೀವು ಕೂಡಾ ಊಟ ಮಾಡಿ ಮಲಗಿಕೊಳ್ಳಿರಿ ಅಂತಾ ಫೋನನಲ್ಲಿ ಮಾತನಾಡಿರುತ್ತಾರೆ. ಹೀಗಿದ್ದು ಇಂದು ದಿನಾಂಕ:೦೫.೦೮.೨೦೨೨ ರಂದು ಬೆಳಿಗ್ಗೆ ೭.೦೦ ಗಂಟೆಗೆ ನಮ್ಮೂರಿನ ಕಿಣ್ಣಿಸುಲ್ತಾನ ಗ್ರಾಮದ ಮನೆಯಲ್ಲಿದ್ದಾಗ ಭವಾನಿ ನಗರದ ನಮ್ಮ ಮನೆಯ ಮಾಲೀಕರಾದ ಸಿದ್ರಾಮಪ್ಪಾ ಕುಂಬಾರ ಇವರು ನನಗೆ ಫೋನ ಮಾಡಿ ವಿಷಯ ತಿಳಿಸಿದೇನೆಂದರೆ ನಿಮ್ಮ ಗಂಡ ರೇವಣಸಿದ್ದಪ್ಪಾ ಕುಂಬಾರ ಇವರೂ ಮನೆಯ ಒಳಗಿನಿಂದ ಬಾಗಿಲು ಕೊಂಡಿ ಹಾಕಿಕೊಂಡು ಮನೆಯಲ್ಲಿ ಉರುಲು ಹಾಕಿಕೊಂಡು ನೇತಾಡುವ ಸ್ಥಿತಿಯಲ್ಲಿ ಇರುತ್ತಾರೆ ನೀವು ಬಂದು ನೋಡಿರಿ ಅಂತಾ ಹೇಳಿದ್ದರಿಂದ  ನಾನು ಗಾಭರಿಯಾಗಿ ಈ ವಿಷಯವನ್ನು ನಮ್ಮ ಅತ್ತೆ ಅಣ್ಯೆಮ್ಮಾ ಗಂಡ ನಿಂಗಣ್ಣಾ ಕುಂಬಾರ ಮತ್ತು ನಮ್ಮ ಸಂಬಂಧಿಕರಿಗೆ ವಿಷಯ ತಿಳಿಸಿ ನಾವೆಲ್ಲರೂ ಒಂದು ಕ್ರೂಜರ ಬಾಡಿಗೆ ಪಡೆದುಕೊಂಡು ಬೆಳಿಗ್ಗೆ ೮.೩೦ ಗಂಟೆಗೆ ಕಲಬುರಗಿ ನಗರದ ಭವಾನಿ ನಗರಕ್ಕೆ ನನ್ನ ಗಂಡನು ಬಾಡಿಗೆಯಿಂದ ವಾಸವಾಗಿರುವ ಮನೆಗೆ ಬಂದು ನೋಡಿದಾಗ ನನ್ನ ಗಂಡನು ವಾಸವಾಗಿರುವ ಮನೆಯ ಬಾಗಿಲು ಒಳಗಿನಿಂದ ಕೊಂಡಿ ಹಾಕಿಕೊಂಡಿದ್ದು ನೋಡಿ ಮನೆಯ ಹಿಂಭಾಗದಲ್ಲಿ ವಾಸವಾಗಿರುವ ಚಂದ್ರಕಾಂತ ನಾಗೂರೆ ಇವರ ಮನೆಯ ಹಿಂಭಾಗದಲ್ಲಿ ಮನೆಯ ಕೀಟಕಿಯಿಂದ ಇಣುಕಿ ನೋಡಲಾಗಿ ನನ್ನ ಗಂಡ ರೇವಣಸಿದ್ದಪ್ಪಾ ಕುಂಬಾರ ಇತನು ತಾನು ವಾಸವಾಗಿರುವ ಕೋಣೆಯ ದೇವರ ಜಗ್ಲಿ ಮೂಲಿಗೆ ಇರುವ ಛತ್ತಿನ ಕೊಂಡಿಗೆ ಕರಿಯ ಬಣ್ಣದ ದಪ್ಪ ನೂಲಿನ ಹಗ್ಗದಿಂದ ಕುತ್ತಿಗೆಗೆ ಉರುಲು ಹಾಕಿಕೊಂಡು ಮೃತಪಟ್ಟಿದ್ದು ಈ ವಿಷಯವನ್ನು ಪೊಲೀಸನವರಿಗೆ ತಿಳೀಸಿ ಅವರು ಬಂದ ನಂತರ ಪೊಲೀಸರ ಸಮಕ್ಷಮದಲ್ಲಿಯೇ ಮತ್ತು ಅಲ್ಲಿದ ಜನರ ಸಮಕ್ಷಮದಲ್ಲಿ ಮನೆಯ ಬಾಗಿಲಿನ ಹೊರಗಿನ ಕೊಂಡಿ ಮುರಿದು ಮನೆಯ ಒಳಗಡೆ ಹೋಗಿ ನೋಡಲಾಗಿ ನನ್ನ ಗಂಡನು ಉರುಲು ಹಾಕಿಕೊಂಡು ಮೃತಪಟ್ಟಿದ್ದು ಇರುತ್ತದೆ. ನನ್ನ ಗಂಡ ರೇವಣಸಿದ್ದಪ್ಪಾ ಕುಂಬಾರ ಇವರು ಕಳೆದ ೦೧ ವರ್ಷದ ಹಿಂದೆ ತನ್ನ ಕುಡಿಯುವುದು, ತಿನ್ನುವುದು ಇತರೆ ಕೇಟ ಚಟಗಳಿಗಾಗಿ ಬೇರೆಯವರಿಂದ ಸುಮಾರು ೨-೩ ಲಕ್ಷ ರೂಪಾಯಿಗಳನ್ನು ಸಾಲ ಮಾಡಿಕೊಂಡಿರುತ್ತಾನೆ. ಈ ಸಾಲ ಹೇಗೆ ತೀರಿಸಬೇಕು ಅಂತಾ ಆ ವಿಷಯದಲ್ಲಿ ಮನಃಹ ನೊಂದು ನಿನ್ನೆ ದಿನಾಂಕ:೦೪.೦೮.೨೦೨೨ ರಂದು ರಾತ್ರಿ ೧೧.೦೦ ಗಂಟೆಗೆ ಮನೆಗೆ ಬಂದು ದಿನಾಂಕ:೦೫.೦೮.೨೦೨೨ ರಂದು ಬೆಳಿಗ್ಗೆ ೬.೦೦ ಗಂಟೆಯ ಮಧ್ಯದ ಅವಧಿಯಲ್ಲಿ ಮನೆಯಲ್ಲಿ ಕುತ್ತಿಗೆಗೆ ಉರುಲು ಹಾಕಿಕೊಂಡು ಮೃತಪಟ್ಟಿರುತ್ತಾನೆ. ಸದರಿಯವನ ಸಾವಿನಲ್ಲಿ ನಮ್ಮದು ಯಾವುದೇ ರೀತಿಯ ಸಂಶಯ ದೂರು ಫಿರ್ಯಾದಿ ಇರುವುದಿಲ್ಲಾ.  ಮುಂದಿನ ಕಾನೂನು ಕ್ರಮ ಜರೂಗಿಸಿ ನನ್ನ ಗಂಡನ ಶವವನ್ನು ನನಗೆ ಅಂತ್ಯಕ್ರಿಯೆಗಾಗಿ ಕೊಡಲು ವಿನಂತಿ ಅಂತಾ ಕೊಟ್ಟ ದೂರು ಫಿರ್ಯಾದಿ ಅರ್ಜಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

ಫರಹತಾಬಾದ ಪೊಲೀಸ ಠಾಣೆ :-  ದಿನಾಂಕ 05-08-2022  ರಂದು ೦೮:೩೦ ಎಎಮ್ ಕ್ಕೆ ಶ್ರೀ ಸಗರಪ್ಪ ಸಿಪಿಸಿ ೩೨೬ ಫರಹತಾಬಾದ ಪೊಲೀಸ್ ಠಾಣೆ ರವರ ಜಿಜಿಹೆಚ್ ಕಲಬುರಗಿಯಲ್ಲಿ ಶ್ರೀ ಶಿವಾನಂದ ತಂದೆ ಹಣಮಂತ್ರಾಯ ಹಡಪದ ವಯ:೫೦ ವರ್ಷ ಉ: ಕಟಿಂಗ್ ಕೆಲಸ ಜಾತಿ: ಹಡಪಾದ ಸಾ: ಕಡಣಿ ತಾ:ಜಿ: ಕಲಬುರಗಿ ನೀಡಿದ ಹೇಳಿಕೆಯನ್ನು ಹಾಜರುಪಡಿಸಿದ್ದರ ಸಾರಾಂಶದವೆನೆಂದರೆ, ನನಗೆ ೧) ಶರಣಬಸಪ್ಪಾ ೨೩ ವರ್ಷ, ೨) ರೇಣುಕಾ ೧೩ ವರ್ಷ, ೩) ಹಣಮಂತ ೧೦ ವರ್ಷ ದ ೩ ಜನ ಮಕ್ಕಳಿರುತ್ತಾರೆ ಹಿರಿಯ ಮಗನಾದ ಶರಣಪ್ಪಾ ಮತ್ತು ನಾನು ಕಟಿಂಗ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದೆವೆ.ನನ್ನ ಹಿರಿಯ ಮಗನಾದ ಶರಣಬಸಪ್ಪಾ ಈತನು ಪ್ರತಿದಿವಸ ಸರಾಯಿ ಕುಡಿಯುವ ಚಟದವನಾಗಿರುತ್ತಾನೆ. ಹೀಗಿದ್ದು ದಿನಾಂಕ: ೨೬.೦೭.೨೦೨೨ ರಂದು ಸಾಯಂಕಾಲ ೦೬:೩೦ ಪಿಎಮ್ಕ್ಕೆ ನನ್ನ ಮಗನು ಸರಾಯಿ ಕುಡಿದು ಮನೆಯಲ್ಲಿ ಬಂದು  ಮಲಗಿಕೊಂಡಿರುತ್ತಾನೆ. ಆದರೆ ರಾತ್ರಿ ಏಕೋ ಬೇಹೋಸ್ ಆದಂತ್ತೆ ಮಾಡಿ ತ್ರಾಸ ಮಾಡಿಕೊಳ್ಳುತ್ತಿದ್ದರಿಂದ ರಾತ್ರಿ ಆಸ್ಪತ್ರೆಗೆ ಬರಲು ಆಗದಿದ್ದರಿಂದ ದಿನಾಂಕ: ೨೭.೦೭.೨೦೨೨ ರಂದು ಉಪಚಾರ ಕುರಿತು ಜಿಜಿಹೆಚ್ಗೆ ತಂದು ಸೇರಿಕೆ ಮಾಡಿರುತ್ತೆವೆ. ಆಸ್ಪತ್ರೆಯ ವೈದ್ಯರು ಚಿಕಿತ್ಸೆ ನೀಡಿ ನನ್ನ ಮಗನು ವಿಷ ಸೇವನೆ ಮಾಡಿರುತ್ತಾನೆಂದು ತಿಳಿಸಿದರುತ್ತಾರೆ. ನನ್ನ ಮಗನು ಸರಾಯಿ ಕುಡಿದು ನಶೆಯಲ್ಲಿ ಮನೆಯಲ್ಲಿದ್ದ ಕ್ರಿಮೀನಾಶಕ ಸೇವನೆ ಮಾಡಿದ್ದರಿಂದ ಉಪಚಾರಕ್ಕಾಗಿ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿರುತ್ತೆವೆ. ಆದರೆ ಉಪಚಾರ ಪಲಿಸದೆ. ದಿನಾಂಕ: ೦೪.೦೮.೨೦೨೨ ರಂದು ೧೦:೩೫ ಪಿ,ಎಮ್ ಕ್ಕೆ ಮೃತಪಟ್ಟಿರುತ್ತಾನೆ. ಆತನ ಮರಣದಲ್ಲಿ ಯಾವುದೇ ಸಂಶಯೆ ಇರುವುದಿಲ್ಲ ಮುಂದಿನ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ನೀಡಿದ ಹೇಳಿಕೆ ಸಾರಾಂಶದ ಮೇಲೀಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

ಸಂಚಾರಿ ಪೊಲೀಸ್‌ ಠಾಣೆ-2  :-  ದಿನಾಂಕ 05-08-2022  ರಂದು ರಾತ್ರಿ ೧೦:೩೦ ಗಂಟೆಗೆ  ಫಿರ್ಯಾದಿ  ಶ್ರೀ.ನಾರಾಯಣ ತಂದೆ ದಾಮು ಪವಾರ ಸಾ; ಶ್ರೀನಿವಾಸ ಸರಡಗಿ  ಇವರು ಠಾಣೆಗೆ ಹಾಜರಾಗಿ ಒಂದು  ಕನ್ನಡದಲ್ಲಿ ಕೈಬರಹದಿಂದ ಲಿಖಿತ ಫಿರ್ಯಾದಿ ಅರ್ಜಿ ಸಲ್ಲಿಸಿದೆನೆಂದರೆ, ದು ದಿನಾಂಕ-೦೫/೦೮/೨೦೨೨ ರಂದು ಸಾಯಂಕಾಲ ೫-೩೦ ಗಂಟೆ ಸುಮಾರಿಗೆ ರಘು ತಂದೆ ಸುಭಾಸ ಆಡೆ ಈತನು ಮೋಟಾರ ಸೈಕಲ ನಂ ಕೆಎ-೩೨ ಇ.ಎಮ್-೮೬೬೭ ಇದರ ಮೇಲೆ ಶ್ರೀನಿವಾಸ ಸರಡಗಿ ಕ್ರಾಸ್ ದಿಂದ ದಾರು ನಾಯಕ ತಾಂಡಾ ಹತ್ತಿರ ಹೋಗುವಾಗ ಇನ್ನೊಂದು ಮೋಟಾರ ಸೈಕಲ ನಂ ಕೆಎ-೩೨ ಇ.ಎಕ್ಸ್ ೮೬೯೫ ಇದರ ಸವಾರನು ಅಪಘಾತ ಪಡಿಸಿದ್ದು ಇದರಿಂದ ರಘು ಈತನ ತೆಲೆಗೆ ಭಾರಿ ರಕ್ತಗಾಯ, ಬಲಭುಜಕ್ಕೆ ಭಾರಿಗಾಯ ಹಾಗೂ ಅಲಲ್ಲಿ ಗಾಯವಾಗಿದ್ದು ಅಪಘಾತ ಪಡಿಸಿದ ಮೋಟಾರ ಸೈಕಲ ಸವಾರನಿಗೂ ಕೂಡಾ ರಕ್ತಗಾಯವಾಗಿದ್ದು ಘಟನೆಯನ್ನು ಶಿವುಕುಮಾರ ಮತ್ತು ಬಾಬು ಇವರು ನೋಡಿದ್ದು ರಘು ಈತನಿಗೆ ಬಸವೇಶ್ವರ ಆಸ್ಪತ್ರೆಯಲ್ಲಿ ಅಪಘಾತ ಪಡಿಸಿದವನಿಗೆ ಮಣ್ಣೂರ ಆಸ್ಪತ್ರೆಯಲ್ಲಿ ಉಪಚಾರ ಪಡಯುತ್ತಿದ್ದು ನಂತರ ರಘು ಈತನಿಗೆ ಹಚ್ಚಿನ ಪಚಾರಕ್ಕಾಗಿ ಹೈದ್ರಾಬಾದಿಗೆ ಅವರ ತಂದೆ ಸುಭಾಸ ಈತನು ತೆಗೆದುಕೊಂಡು ಹೋಗಿರುತ್ತಾನೆ, ಈ ಬಗ್ಗೆ ಕಾನೂನು ಕ್ರಮ  ಕೈಕೊಳ್ಳಬೇಕೆಂದು ಕೊಟ್ಟ ಲಿಖಿತ ಫಿರ್ಯಾದಿ ಅರ್ಜಿ ಸಾರಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

ಇತ್ತೀಚಿನ ನವೀಕರಣ​ : 19-08-2022 12:27 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080