ಅಭಿಪ್ರಾಯ / ಸಲಹೆಗಳು

ಸಂಚಾರಿ ಪೊಲೀಸ್‌ ಠಾಣೆ -2 :-  ದಿನಾಂಕ 05/07/2022 ರಂದು ಸಾಯಂಕಾಲ 06:00 ಗಂಟೆಗೆ ಶ್ರೀ ಬಸವರಾಜ ತಂದೆ ಲಕ್ಷ್ಮಣ ಬಿರಾದಾರ ವ; 35 ವರ್ಷ ಜಾ; ಲಿಂಗಾಯತ ಉ; ಆಟೋರಿಕ್ಷಾ ಚಾಲಕ ಸಾ; ಉದನೂರ ತಾ; ಜಿ; ಕಲಬುರಗಿ ಇವರು ಖುದ್ದಾಗಿ ಠಾಣೆಗೆ ಹಾಜರಾಗಿ ಒಂದು ಕನ್ನಡಲ್ಲಿ ಟೈಪ ಮಾಡಿದ ಫಿರ್ಯಾಧಿ ಅರ್ಜಿಯನ್ನು ಹಾಜರುಪಡಿಸಿದ್ದು ಸದರಿ ಅರ್ಜಿ ಸಾರಾಂಶವೆನೆಂದರೆ, ಇಂದು ದಿನಾಂಕ-05/07/2022 ರಂದು ಬೆಳಿಗ್ಗೆ ನಾನು ಮನೆಯಲ್ಲಿರುವಾಗ ನಮ್ಮ ತಂದೆಯಾದ ಲಕ್ಷ್ಮಣ ತಂದೆ ಅವಣ್ಣಾ ಬಿರಾದಾರ ಇವರು ಮಹಾನಗರ ಪಾಲಿಕೆ ಕಸ ಹಾಕುವ ಸ್ಥಳದ ಹತ್ತಿರ ಇರುವ ನಮ್ಮ ಹೊಲಕ್ಕೆ ಹೋಗಿ ಬರುತ್ತೇನೆ ಅಂತಾ ಹೇಳಿ ಹೋಗಿದ್ದು ನಂತರ ನಾನು ನನ್ನ ಕೆಲಸದ ಕುರಿತು ಕಲಬುರಗಿಗೆ ಬಂದಿದ್ದು ನಾನು ಕೆಲಸದಲ್ಲಿ ಇರುವಾಗ ಮದ್ಯಾಹ್ನ 02:00 ಗಂಟೆ ಸುಮಾರಿಗೆ ನಮ್ಮ ಪರಿಚಯದ ವಿಠಲ ತಂದೆ ಹರಿಶ್ಚಂದ್ರ ಚವ್ಹಾಣ ಇವರು ನನಗೆ ಪೋನ್ ಮಾಡಿ ನಾನು ಮತ್ತು ಗುರುಶಾಂತಪ್ಪಾ ತಂದೆ ಬಸವಣ್ಣಾ ರೆಡ್ಡಿ ಇಬ್ಬರೂ ಸೇರಿ ನಮ್ಮ ಮೋಟಾರ ಸೈಕಲ ಮೇಲೆ ಕಣ್ಣಿ ಕಡೆಯಿಂದ ಉದನೂರ ಕಡೆಗೆ ಹೋಗುವಾಗ ನೀರಿನ ಟಾಕಿ ಬಾಗವಾನ ಹೊಲದ ಹತ್ತಿರ ನಮ್ಮ ಎದುರಿಗೆ ಒಬ್ಬ ವ್ಯಕ್ತಿ ರಸ್ತೆಯ ಬದಿಯಿಂದ ನಡೆದುಕೊಂಡು ಹೋಗುವಾಗ ಮದ್ಯಾಹ್ನ 01:30 ಗಂಟೆ ಸುಮಾರಿಗೆ ಒಬ್ಬ ಮೋಟಾರ ಸೈಕಲ ಸವಾರನು ಉದನೂರ ಕಡೆಯಿಂದ ಕಣ್ಣಿ ಕಡೆಗೆ ಹೋಗುವ ಕುರಿತು ತನ್ನ ಮೋಟಾರ ಸೈಕಲನ್ನು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಎಡಬಲ ಕಟ್ ಹೊಡೆಯುತ್ತಾ ಬಂದು ನಮ್ಮ ಎದುರಿಗೆ ಹೋಗುತ್ತಿದ್ದ  ವ್ಯಕ್ತಿಗೆ ಎದುರಿನಿಂದ ಡಿಕ್ಕಿ ಪಡಿಸಿದನು. ಆಗ ಸದರಿ ವ್ಯಕ್ತಿಯು ಪುಟ್ಟಿದು ರಸ್ತೆಯ ಮೇಲೆ ಬಿದ್ದನು. ಅದನ್ನು ನೋಡಿ ನಾನು ಮತ್ತು ಗುರುಶಾಂತಪ್ಪಾ ರೆಡ್ಡಿ ಇಬ್ಬರೂ ನಮ್ಮ ಮೋಟಾರ ಸೈಕಲ ಸೈಡಿಗೆ ಹಚ್ಚಿ ಹೋಗಿ ನೋಡಲು ಸದರಿ ವ್ಯಕ್ತಿ ನಿಮ್ಮ ತಂದೆಯವರಾದ ಲಕ್ಷ್ಮಣ ಬಿರಾದಾರ ಇದ್ದು ಸದರ ಘಟನೆಯಿಂದ ಅವರ ಎದೆಯ ಎಡಭಾಗದಲ್ಲಿ ಭಾರಿ ಒಳಪೆಟ್ಟು ಹಾಗೂ ಗುಪ್ತಾಂಗದ ಹತ್ತಿರ ಬಲಗಾಲಿನ ತೊಡೆಯ ಭಾರಿ ಒಳಪೆಟ್ಟು ಬಲಗಾಲಿನ ಪಾದದ ಮೇಲ್ಬಾಗದಲ್ಲಿ ತರಚಿದ ರಕ್ತಗಾಯ ಆಗಿ ನಿಮ್ಮ ತಂದೆಯವರು ಮಾತನಾಡುವ ಸ್ಥಿತಿಯಲ್ಲಿ ಇಲ್ಲಾ ನಿಮ್ಮ ತಂದೆಯವರಿಗೆ ಡಿಕ್ಕಿ ಪಡಿಸಿದ ಮೋಟಾರ ಸೈಕಲ ನಂ ಕೆಎ-32 ಇಎ-2366 ನೇದ್ದು ಇದ್ದು ಅದರ ಸವಾರನಿಗೆ ನೋಡಲು ಆತನು ತನ್ನ ಮೋಟಾರ ಸೈಕಲ ಸ್ಥಳದಲ್ಲಿಯೇ ಬಿಟ್ಟು ನಮ್ಮ ಕಡೆಗೆ ನೋಡುತ್ತಾ ಓಡಿ ಹೋಗಿರುತ್ತಾನೆ. ಆತನಿಗೆ ನೋಡಿರುತ್ತೇವೆ ಆತನಿಗೆ ಮುಂದೆ ನೋಡಿದರೆ ಗುತರ್ಿಸುತ್ತೇವೆ, ನಾವು ನಿಮ್ಮ ತಂದೆಯವರಿಗೆ ಉಪಚಾರ ಕುರಿತು ಒಂದು ಆಟೋರಿಕ್ಷಾದಲ್ಲಿ ಹಾಕಿಕೊಂಡು ಅವರಿಗೆ ಕಲಬುರಗಿ ನಗರದ ಪಿ.ಜಿ.ಶಹಾ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದೇವೆ ನೀವು ಅಲ್ಲಿಗೆ ಬರಬೇಕು ಅಂತಾ ಹೇಳಿದ ಮೇರೆಗೆ ನಾನು ಪಿ.ಜಿ ಶಹಾ ಆಸ್ಪತ್ರೆಗೆ ಹೋಗಿ ನೋಡಲು ವಿಠಲ ಚವ್ಹಾಣ ಇವರು ಮೇಲೆ ಹೇಳಿದಂತೆ ಗಾಯಗಳಾಗಿ ನಮ್ಮ ತಂದೆಯವರು ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲಾ ನಾವು ನಮ್ಮ ತಂದೆಯ ಚಿಕಿತ್ಸೆಯಲ್ಲಿರುವಾಗ ಮದ್ಯಾಹ್ನ 03:26 ಗಂಟೆ ಸುಮಾರಿಗೆ ಆಸ್ಪತ್ರೆಯ ವೈದ್ಯರು ನಿಮ್ಮ ತಂದೆಯವರು ರಸ್ತೆ ಅಪಘಾತದಿಂದ ಆದ ಗಾಯದ ಬಾದೆಯಿಂದ ಉಪಚಾರ ಪಡೆಯುತ್ತಾ ಮರಣ ಹೊಂದಿರುತ್ತಾರೆ ಅಂತಾ ತಿಳಿಸಿದ್ದು ಇರುತ್ತದೆ. ಮೋಟಾರ ಸೈಕಲ ನಂ ಕೆಎ-32 ಇಎ-2366 ನೇದ್ದರ ಸವಾರನು ತನ್ನ ಮೋಟಾರ ಸೈಕಲನ್ನು ಉದನೂರ ಕಡೆಯಿಂದ ಕಣ್ಣಿ ಕಡೆಗೆ ಹೋಗುವ ಕುರಿತು ತನ್ನ ಮೋಟಾರ ಸೈಕಲನ್ನು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಎಡಬಲ ಕಟ್ ಹೊಡೆಯುತ್ತಾ ರಸ್ತೆ ಬದಿಯಿಂದ ನಡೆದುಕೊಂಡು ಹೋಗುತ್ತಿದ್ದ ನಮ್ಮ ತಂದೆ ಲಕ್ಷ್ಮಣ ಬಿರಾದಾರ ಇವರಿಗೆ ಡಿಕ್ಕಿ ಪಡಿಸಿ ಅಪಘಾತ ಮಾಡಿ ಭಾರಿಗಾಯಗೊಳಿಸಿದ್ದು ನಮ್ಮ ತಂದೆಯವರು ಉಪಚಾರ ಹೊಂದುತ್ತಾ ಪಿ.ಜಿ.ಶಹಾ ಆಸ್ಪತ್ರೆಯಲ್ಲಿ ಮೃತ ಪಟ್ಟಿದ್ದು ಕಾರಣ ಸದರಿ ಮೋಟಾರ ಸೈಕಲ ನಂ ಕೆಎ-32 ಇಎ-2366 ನೇದ್ದರ ಸವಾರನ ಮೇಲೆ ಕಾನೂನು ಕ್ರಮ  ಕೈಗೊಳ್ಳಬೇಕೆಂದು  ಕೊಟ್ಟ ಅರ್ಜಿ ಸಾರಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ. 

 

ಬ್ರಹ್ಮಪೂರ ಪೊಲೀಸ್‌ ಠಾಣೆ :-  ದಿನಾಂಕ: 05-07-2022  ರಂದು ೦೬:೩೦  ಪಿಎಮ್ ಕ್ಕೆ ಫಿರ್ಯಾದಿದಾರರಾದ ತಾರಾಸಿಂಗ್ ತಂದೆ ಜೈರಾಮ್ ಜಾದವ ವಯ:೪೫ವರ್ಷ ಜಾ:ಲಂಬಾಣಿ ಉ:ಮಹಾನಗರ ಪಾಲೀಕೆಯಲ್ಲಿ ಕೂಲಿ ಕೆಲಸ ಸಾ//ನಂದೂರ ಕೆ ಪೈಲ್ ತಾಂಡಾ ತಾ ಮತ್ತು ಜಿ ಕಲಬುರಗಿ. ಈ ಮೂಲಕ ವಿನಂತಿ ದೂರು ಅರ್ಜಿ ಸಲ್ಲಿಸುವುದೆನೆಂದರೆ, ನನ್ನದೊಂದು ಸ್ವಂತ ಹೀರೊ ಸ್ಪ್ಲೆಂಡರ್ ಮೋಟಾರ ಪ್ಲಸ್ ಸೈಕಲ್ ನಂ: ಏಂ-೧೬-ಇಊ-೨೨೦೬ ನೇದ್ದು ಇದ್ದು ಸದರಿ ಮೋಟಾರ್ ಸೈಕಲ್‌ವು ನನ್ನ ಹೆಸರಿನಲ್ಲಿರುತ್ತದೆ. ಸದರಿ ಮೋಟಾರ್ ಸೈಕಲವು ದಿನಾಂಕ: ೦೧/೦೬/೨೦೨೨ ರಂದು ಸಾಯಂಕಾಲ ೦೪:೦೦ ಪಿಎಮ್ ಗಂಟೆಗೆ ಕಲಬುರಗಿ ನಗರದ ಸುಪರ್ ಮಾರ್ಕೆಟದ ದತ್ತ ಮಂದಿರದ ಹತ್ತಿರ ನಿಲ್ಲಿಸಿ ಮಾರ್ಕೆಟ ಒಳಗೆ ಹೋಗಿ ತಾರಕಾರಿ ತೆಗೆದುಕೊಂಡು ಮರಳಿ ಅದೆ ದಿನ ಸಾಯಂಕಾಲ ೦೪:೩೦ ಪಿಎಮ್ ಗಂಟೆಗೆ ಬಂದು ನಾನು ನಿಲ್ಲಿಸಿದ ಸ್ಥಳದಲ್ಲಿ ಮೋಟಾರ್ ಸೈಕಲ್ ನೋಡಲಾಗಿ ನನ್ನ ಮೋಟಾರ್ ಸೈಕಲ್ ಇರಲಿಲ್ಲಾ, ಮೋಟಾರ್ ಸೈಕಲ್ ಪತ್ತೆ ಕುರಿತು ಎಲ್ಲಾ ಕಡೆ ಹುಡುಕಾಡಿದರೂ ಮೋಟಾರ್ ಸೈಕಲ್ ಸಿಕ್ಕಿರುವುದಿಲ್ಲಾ ಆದರಿಂದ ಠಾಣೆಗೆ ಬಂದು ಅರ್ಜಿ ಕೊಡಲು ತಡವಾಗಿರುತ್ತದೆ. ಕಾರಣ ಕಳುವಾದ ನನ್ನ ಮೋಟಾರ್ ಸೈಕಲನ್ನು ಪತ್ತೆ ಹಚ್ಚಿ ಸೂಕ್ತ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಕೊಟ್ಟ ದೂರು ಅರ್ಜಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

ಎಂ.ಬಿ.ನಗರ ಪೊಲೀಸ್‌ ಠಾಣೆ :- ಫಿರ್ಯಾದಿದಾರಳ ಪತಿ ರಾಜು ರಾಠೋಡ ಈತನು ದಿನಾಂಕ: ೦೨/೦೭/೨೦೨೨ ರಂದು ಹೊರಗಡೆ ಹೋಗಿ ಬರುತ್ತೇನೆ ಎಂದು ಹೋದವರು ಮನೆಗೆ ಮರಳಿ ಮನೆಗೆ ಬರದೇ ಕಾಣೆಯಾಗಿರುತ್ತಾನೆ  ಅಂತಾ ಕೊಟ್ಟ ದೂರು ಅರ್ಜಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

ಎಂ.ಬಿ.ನಗರ ಪೊಲೀಸ್‌ ಠಾಣೆ :- ಆರೋಪಿತರು ಅನಧೀಕೃತವಾಗಿ ಸೆಂಚುರಿ ಫ್ಲೈವುಡ್ ಲೋಗೊ ಬಳಸಿಕೊಂಡು ಅಕ್ರಮವಾಗಿ‌ ಫ್ಲೈವುಡ್ ಮಾರಾಟ ಮಾಡುತ್ತಿದ್ದು ಇದರಿಂದ ಕಂಪನಿಗೆ ನಷ್ಟ ಮಾಡಿರುತ್ತಾರೆ ಆರೋಪಿತರ ಮೇಲೆ ಕಾನೂನು ಕ್ರಮ ಕುರಿತು ದೂರು ಅರ್ಜಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

ವಿಶ್ವವಿದ್ಯಾಲಯ ಪೊಲೀಸ್‌ ಠಾಣೆ :- ದಿನಾಂಕ 17-06-2022 ರಂದು ೦೭:೦೦ ಪಿ.ಎಮ್ ಸುಮಾರಿಗೆ ಮನೆಯ ಮುಂದುಗಡೆ ನನ್ನ ಕೆ.ಎ ೩೨ ಈಬಿ ೮೮೯೯ ಮೋಟಾರ ಸೈಕಲ್ ನಿಲ್ಲಿಸಿ ಊಟ ಮಾಡಿ ಮಲಗಿಕೊಂಡು ೧೮,೦೬,೨೦೨೨ ರಂದು ಬೆಳಿಗ್ಗೆ ೦೭:೦೦ ಎ.ಎಮ್ ಸುಮಾರಿಗೆ ಎದ್ದು ನೋಡಿದಾಗ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಕೊಟ್ಟ ದೂರು ಅರ್ಜಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

ಇತ್ತೀಚಿನ ನವೀಕರಣ​ : 16-07-2022 07:14 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080