ಅಭಿಪ್ರಾಯ / ಸಲಹೆಗಳು

ಸಂಚಾರಿ ಪೊಲೀಸ್‌ ಠಾಣೆ -2 :- ನಾನು ಹಮಾಲಿ ಕೆಲಸ ಮಾಡಿಕೊಂಡು ಉಪಜೀವನ ಮಾಡಿಕೊಂಡಿರುತ್ತೆನೆ. ನಮ್ಮ ತಂದೆಯವರು ಸುಮಾರು 20 ವರ್ಷಗಳ ಹಿಂದೆ ತೀರಿಕೊಂಡಿದ್ದು, ನಮ್ಮ ತಾಯಿ ನಾಗಮ್ಮ ಅಂತಾ ಇದ್ದು, ಅವಳು ಕೂಲಿ ಕೆಲಸ ಮಾಡಿಕೊಂಡಿರುತ್ತಾಳೆ. ಅವರಿಗೆ ನಾವು ಇಬ್ಬರು ಗಂಡು ಮಕ್ಕಳಿದ್ದು, ನಾನು ಸಣ್ಣವನಿದ್ದು, ದೊಡ್ಡಣ್ಣನಾದ ಆಕಾಶ ವಯಃ 25 ವರ್ಷದವನಿದ್ದು, ಈತನು ಅಟೋವನ್ನು ಬಾಡಿಗೆಯಿಂದ ನಡೆಯಿಸಿಕೊಂಡಿದ್ದನು. ಹೀಗಿದ್ದು, ನಿನ್ನೆ ದಿನಾಂಕ 04/03/2023 ರಂದು ಅಣ್ಣ ಆಕಾಶ ಈತನು ನಮ್ಮ ಸ್ವಂತ ಊರಾದ ದಸ್ತಾಪೂರದಲ್ಲಿ ಗೋಧಿಯ ರಾಶಿ ಇರುವುದರಿಂದ ಅಲ್ಲಿಗೆ ಹೋಗಿ ರಾಶಿ ಮಾಡಿಕೊಂಡು ಬರುತ್ತೆನೆಂದು ತಾನು ಬಾಡಿಯಿಂದ ಹೊಡೆಯುತ್ತಿರುವ ಅಟೋ ನಂ. ಕೆಎ 32 ಬಿ 6549 ನೇದ್ದರಲ್ಲಿ ಹೋದನು. ಮುಂದೆ ರಾತ್ರಿ 9:30 ಗಂಟೆ ಸುಮಾರಿಗೆ ನಮ್ಮ ಪರಿಚಯದ ರಾಘವೆಂದ್ರ ತಂದೆ ಭೀಮಾಶಂಕರ ಬಳುಂಡಗಿ ಮತ್ತು ಮಲ್ಲಿಕಾಜರ್ುನ ಕಲ್ಯಾಣಕರ ಇವರು ಮಾಹಿತಿ ತಿಳಿಸಿದ್ದೆನೆಂದರೆ, ಈಗ ರಾತ್ರಿ 9:15 ಗಂಟೆ ಸುಮಾರಿಗೆ ಹುಮ್ನಾಬಾದ ಕಲಬುರಗಿ ರೋಡಿನ ಆಲಗೂಡ ಕ್ರಾಸಿನ ಸಮೀಪ ಸಣ್ಣ ಬ್ರಿಡ್ಜಿನ ಹತ್ತೀರ ನಿಮ್ಮ ಅಣ್ಣ ಆಕಾಶ ಈತನು ಅಟೋ ನಂ. ಕೆಎ 32 ಬಿ 6549 ನೇದ್ದರಲ್ಲಿ ಹುಮ್ನಾಬಾದ ರೋಡ ಕಡೆಯಿಂದ ಕಲಬುರಗಿ ರೋಡ ಕಡೆಯಿಂದ ಕಲಬುರಗಿ ಕಡೆಗೆ ಬರುವಾಗ ಅದೆ ವೇಳೆಗೆ ಕಲಬುರಗಿ ರೋಡಿನ ಕಡೆಯಿಂದ ಹುಮ್ನಾಬಾದ ರೋಡಿನ ಕಡೆಗೆ ಒಂದು ಲಾರಿ ನಂ. ಎಪಿ 07 ಟಿ.ಜೆ 0898 ನೇದ್ದರ ಚಾಲಕನು ಅತಿವೇಗದಿಂದ ಮತ್ತು ಅಲಕ್ಷತನದಿಂದ ಬಂದು ತನ್ನ ಮುಂದೆ ಹೋಗುತ್ತಿರುವ ಯಾವುದೋ ವಾಹನಕ್ಕೆ ಓವರ ಟೇಕ ಮಾಡಲು ಹೋಗಿ ನೇರವಾಗಿ ಅಟೋಕ್ಕೆ ಬಂದು ಡಿಕ್ಕಿ ಹೊಡೆದ ಪರಿಣಾಮ ಮುಂದಿನ ಭಾಗ ಪೂರ್ತಿಯಾಗಿ ಜಖಂಗೊಂಡು ಆಕಾಶನಿಗೆ ತಲೆಯ ಭಾಗಕ್ಕೆ, ಮುಖದ ಭಾಗಕ್ಕೆ ಹಾಗು ಎರಡು ಕಾಲಿನ ತೊಡೆಯ ಭಾಗಕ್ಕೆ ಭಾರಿ ಪ್ರಮಾಣದ ಗಾಯವಾಗಿದ್ದು, ಅಲ್ಲದೆ ಅಲ್ಲಲ್ಲಿ ಕೂಡಾ ತರಚಿದಗಾಯಗಳಾಗಿ ಸ್ಧಳದಲ್ಲಿಯೇ ಮೃತ ಪಟ್ಟಿರುತ್ತಾನೆ ಅಂತಾ ತಿಳಿಸಿ, ಕಲಬುರಗಿ ಸರಕಾರಿ ಆಸ್ಪತ್ರೆ ಕಡೆಗೆ ಯಾವುದೋ ಖಾಸಗಿ ಅಂಬುಲೇನ್ಸದಲ್ಲಿ ತರುತ್ತೆವೆ ಅಂತಾ ತಿಳಿಸಿದಕ್ಕೆ ನಾನು ಮತ್ತು ನನ್ನ ತಾಯಿ ನಾಗಮ್ಮ ಕೂಡಿಕೊಂಡು ಸರಕಾರಿ ಆಸ್ಪತ್ರೆಗೆ ಹೋಗಲಾಗಿ ಸ್ವಲ್ಪ ಹೊತ್ತಿನಲ್ಲಿಯೇ ಅಣ್ಣ ಆಕಾಶ ಈತನಿಗೆ ಅಂಬುಲೇನ್ಸದಲ್ಲಿ ಕರೆದುಕೊಂಡು ಬಂದಿದ್ದು, ನೋಡಲಾಗಿ ಮೇಲಿನಂತೆ ಗಾಯಗಳಾಗಿ ಮೃತ ಪಟ್ಟಿದ್ದು ಇರುತ್ತದೆ. ಅಪಘಾತ ಪಡಿಸಿದ ಲಾರಿ ಚಾಲಕನು ಘಟನೆ ನಂತರ ಲಾರಿಯನ್ನು ಅಲ್ಲಿಯೇ ಬಿಟ್ಟು ಓಡಿ ಹೋಗಿರುವುದಾಗಿ ಮತ್ತು ಆತನ ಹೆಸರು ವಿಚಾರಣೆಯಲ್ಲಿ ಸುರೇಶ ತಂದೆ ರಾಮಲು ಅಂತಾ ತಿಳಿದು ಬಂದಿರುತ್ತದೆ. ಕಾರಣ ನನ್ನ ಅಣ್ಣ ಆಕಾಶನು ತನ್ನ ರೋಡಿಗೆ ತಾನು ಅಟೋದಲ್ಲಿ ಕಲಬುರಗಿ ಕಡೆಗೆ ಬರುತ್ತಿರುವಾಗ ಎದುರುಗಡೆ ರೋಡಿನಿಂದ ಲಾರಿ ನಂ. ಎಪಿ 07 ಟಿ.ಜೆ 0898 ನೇದ್ದರ ಚಾಲಕ ಸುರೇಶ ತಂದೆ ರಾಮಲು ಈತನು ಅತಿವೇಗದಿಂದ ಮತ್ತು ಅಲಕ್ಷತನದಿಂದ ನಡೆಯಿಸಿ ಅಣ್ಣನ ಅಟೋಕ್ಕೆ ಡಿಕ್ಕಿ ಹೊಡೆದ ಪರಿಣಾಮ ಆತನು ಸ್ಧಳದಲ್ಲಿಯೇ ಮೃತ ಪಟ್ಟಿದ್ದು, ಈ ವಿಷದಯಲ್ಲಿ ಲಾರಿ ಚಾಲಕನ ಮೇಲೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು ಅಂತಾ ಕೊಟ್ಟ ಹೇಳಿಕೆ ಫಿರ್ಯಾದಿ ಸಾರಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಸಂಚಾರಿ ಪೊಲೀಸ್‌ ಠಾಣೆ -2 :-  ದಿನಾಂಕ 05/03/2023 ರಂದು ಬೆಳಿಗ್ಗೆ 8:15 ಗಂಟೆಗೆ ಶ್ರೀ. ಸೈಯದ ಫರೀದ ಪಟೇಲ ತಂದೆ ಸೈಯದ ನಬಿ ಪಟೇಲ ವಯಃ 37 ವರ್ಷ ಜಾತಿಃ ಮುಸ್ಲಿಂ ಉಃ ಗೌಂಡಿ ಕೆಲಸ ಸಾಃ ನಬಿ ಮೊಹಲ್ಲಾ ಎಮ್.ಎಸ್.ಕೆ ಮಿಲ್ ಕಲಬುರಗಿ ಹಾ.ವಃ ಕಾಟೆದಾಮ್ ಸಪ್ನಾ ಥೇಟರ ಹತ್ತೀರ ಹೈದ್ರಾಬಾದ ತೆಲಂಗಾಣ ರಾಜ್ಯ ಇವರು ಠಾಣೆಗೆ ಹಾಜರಾಗಿ ಫಿರ್ಯಾದಿ ಹೇಳಿಕೆ ನೀಡಿದ್ದು ಸಾರಂಶವೆನೆಂದರೆ,  ನಾನು ಗೌಂಡಿ ಕೆಲಸ ಮಾಡಿಕೊಂಡಿರುತ್ತೆನೆ. ನಮ್ಮ ತಂದೆ ಸೈಯದ ನಬಿ ಪಟೇಲ ಇವರು ಡಿಸಿಎಮ್ ವಾಹನದ ಡ್ರೈವರ ಕೆಲಸ ಮಾಡಿಕೊಂಡಿರುತ್ತಾರೆ. ನಮ್ಮ ತಂದೆಯವರ ತಾಯಿಯಾದ ಮನ್ನಾಬೀ ಇವರು ಕಲಬುರಗಿಯ ಮನೆಯಲ್ಲಿ ವಾಸವಾಗಿರುತ್ತಾರೆ. ಅವರಿಗೆ ಸರಿಯಾಗಿ ಆರಾಮ ಇರುವುದಿಲ್ಲಾ.  ಹೀಗಿದ್ದು, ನಿನ್ನೆ ದಿನಾಂಕ 04/03/2023 ರಂದು ನಮ್ಮ ತಂದೆ ಸೈಯದ ನಬಿ ಪಟೇಲ ಇವರು ಹೈದ್ರಾಬಾದಿನಿಂದ ಕಲಬುರಗಿಯ ನಮ್ಮ ಅಜ್ಜಿಯ ಹತ್ತೀರ ಹೋಗಿ ಮಾತನಾಡಿ ಅವಳ ಖರ್ಚಿಗೆ ಹಣ ಕೊಟ್ಟು ಬರುತ್ತೆನೆಂದು ನಮ್ಮ ಎಕ್ಟಿವಾ ಮೋಟರ ಸೈಕಲ ನಂ. ಟಿ.ಎಸ್ 07 ಜೆ.ಕ್ಯೂ 2575 ನೇದ್ದರ ಮೇಲೆ ಮಧ್ಯಾಹ್ನ 12:00 ಗಂಟೆ ನಂತರ ಅಲ್ಲಿಂದ ಬಿಟ್ಟಿದ್ದು, ಮುಂದೆ ರಾತ್ರಿ 9:15 ಗಂಟೆ ನಂತರ ನಮ್ಮ ತಂದೆಯವರ ಫೋನಿನಿಂದ ಒಬ್ಬರು ಫೋನ್ ಮಾಡಿ, ಈಗ ರಾತ್ರಿ 9:00 ಗಂಟೆ ಸುಮಾರಿಗೆ ಈ ಮೊಬೈಲ ನಂಬರ ಇರುವರು ಸೇಡಂ ಕಲಬುರಗಿ ರೋಡಿನ ಕಾಳನೂರ ಕ್ರಾಸಿನ ಹತ್ತೀರ ರೋಡಿನ ಎಡಭಾಗದಲ್ಲಿ ಮೋಟರ ಸೈಕಲದ ಮೇಲೆ ಅತಿವೇಗದಿಂದ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ತಾವೆ ತಾವಾಗಿ ಬಿದ್ದು, ತಲೆಯ ಭಾಗಕ್ಕೆ, ಬಲಭುಜಕ್ಕೆ ಹಾಗು ಎಡಗಾಲಿಗೆ ಮತ್ತು ಎಡಗೈಗೆ ಗಾಯಗಳಾಗಿ, ಅಲ್ಲದೆ ಮೋಟರ ಸೈಕಲ ನಂ. ಟಿ.ಎಸ್ 07 ಜೆ.ಕ್ಯೂ 2575 ನೇದ್ದು ಕೂಡಾ ಸ್ವಲ್ಪ ಜಖಂ ಆಗಿ ಬಿದ್ದು ಮೃತ ಪಟ್ಟಿರುತ್ತಾರೆ. ಅವರ ಹೆಸರು ವಿಚಾರಿಸಲು ವಿಜಯಕುಮಾರ ತಂದೆ ಗನ್ನು ರಾಠೋಡ ಅಂತಾ ತಿಳಿಸಿದ್ದು, ಅಲ್ಲದೆ ಅಂಬುಲೇನ್ಸದಲ್ಲಿ ಆಸ್ಪತ್ರೆಯಲ್ಲಿ ಕಳುಹಿಸುತ್ತೆನೆ ಅಂತಾ ತಿಳಿಸಿದಕ್ಕೆ, ನಾನು ಕೂಡಲೆ ನಮ್ಮ ಕಾಕನ ಮಗನಾದ ಸೈಯದ ಇಸ್ತೆಸಾನ ಇವರಿಗೆ ಆಸ್ಪತ್ರೆ ಕಡೆಗೆ ಕಳುಹಿಸಿ, ನಾನು ಮತ್ತು ನನ್ನ ತಾಯಿ ಹೈದ್ರಾಬಾದಿನಿಂದ ಈಗ ಬೆಳಗಿನ ಜಾವಾ ಕಲಬುರಗಿಗೆ ಬಂದು ಆಸ್ಪತ್ರೆಗೆ ಹೋಗಿ ನಮ್ಮ ತಂದೆಗೆ ನೋಡಿದ್ದು, ಅವರು ಮೇಲಿನಂತೆ ಗಾಯಗಳಾಗಿ ಮೃತ ಪಟ್ಟಿದರು. ನನ್ನ ತಂದೆ ಸೈಯದ ನಬಿ ಪಟೇಲ ಇವರು ನಮ್ಮ ಮೋಟರ ಸೈಕಲ ನಂ. ಟಿ.ಎಸ್ 07 ಜೆ.ಕ್ಯೂ 2575 ನೇದ್ದರ ಮೇಲೆ ಹೈದ್ರಾಬಾದಿನಿಂದ ಕಲಬುರಗಿಗೆ ಬರುವಾಗ ಕಾಳನೂರ ಕ್ರಾಸಿನ ಹತ್ತೀರ ವೇಗದಲ್ಲಿ ಬಂದು ರೋಡಿನ ಬದಿಗೆ ಆಕಸ್ಮಿಕವಾಗಿ ಬಿದ್ದು, ಗಾಯಗೊಂಡು ಮೃತ ಪಟ್ಟಿದ್ದು, ಈ ಬಗ್ಗೆ ಮುಂದಿನ ಕ್ರಮ ಕೈಗೊಳ್ಳಬೆಕೆಂದು ಕೊಟ್ಟ ಹೇಳಿಕೆ ಫಿರ್ಯಾದಿ ಸಾರಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

ವಿಶ್ವವಿದ್ಯಾಲಯ ಪೊಲೀಸ ಠಾಣೆ :- ದಿನಾಂಕ: 04-03-2023  ರಂದು ಸಾಯಂಕಾಲ ೪:೩೦ ಗಂಟೆ ಸುಮಾರಿಗೆ ನನ್ನ ಮೋಟಾರ ಸೈಕಲ್ ಮೇಲೆ ಸೇಡಂ ರೋಡಿಗೆ ಇರುವ ಬ್ರಹ್ಮಕುಮಾರಿ ಆಶ್ರಮ ನೋಡಲು ಹೋಗಿದ್ದು ನಂತರ ಬ್ರಹ್ಮಕುಮಾರಿ ಆಶ್ರಮ ನೋಡಿ ಮರಳಿ ಬರುತ್ತಿರುವಾಗ ಬ್ರಹ್ಮಕುಮಾರಿ ಆಶ್ರಮ ದಾಟಿ ಮುಂದೆ ಸೇಡಂ ರೋಡ ಕಡೆ ಹೋಗುವ ರಸ್ತೆಯ ಪಕ್ಕದಲ್ಲಿ ನಿಂತಿದ್ದು, ಆಗ ನಮ್ಮ ಎದುರಿನಿಂದ ಒಂದು ಮೊಟಾರ ಸೈಕಲ್ ಮೇಲೆ ಇಬ್ಬರು ಅಪರಿಚಿತರು ಬಂದು  ನೀವು ಇಲ್ಲಿ ಯಾಕೇ ನಿಂತಿದ್ದಿರಿ ನಾವು ಆಶ್ರಮಕ್ಕೆ ಬಂದಿದ್ದಿವಿ ಅಂತಾ ಅಂದಾಗ ಆಗ ಅವರು ನೀವು ಲರ‍್ಸ್ ಇದ್ದಿರಾ ಏನು ಅಂತಾ ಕೇಳಿದಾಗ ಆಗ ನಾವು ನಮಗೆ ಎಂಗೇಜ್ ಮೆಂಟ್ ಆಗಿದೆ ಅಂತಾ ಹೇಳಿದಾಗ ಆಮೇಲೆ ಅವರು ಅವರು ನಮಗೆ ನೀವು ಎಂಗೇಜ್ ಮೆಂಟ್ ಆದ ಬಗ್ಗೆ ಫೊಟೋ ತೋರಿಸಿರಿ ಎಂದಾಗ ನಾವು ನನ್ನ ಮೊಬೈಲ್ ದಲ್ಲಿದ್ದ ನಮ್ಮ ಎಂಗೇಜ್ ಮೆಂಟ್ ಫೊಟೋ ತೋರಿಸಿದಾಗ ಆ ಮೇಲೆ ಅವರು ನಿಮ್ಮ ಹತ್ತಿರ ಎಷ್ಟು ಹಣ ಇಟ್ಟಿದ್ದಿರಿ ತೆಗೆಯಿರಿ ಅಂತಾ ಅಂದಾಗ ಆಗ ನಾವು ನೀವು ಯಾರೂ ಯಾವ ಪೊಲೀಸ ಸ್ಟೇಷನದವರು ಸುಮ್ಮನೆ ಪೊಲೀಸ ಅಂತಾ ಹೇಳುತ್ತೀರಿ ಅಂತಾ ಅಂದವರೆ ಅವರಲ್ಲಿ ಒಬ್ಬನು ನನಗೆ ಚಾಕು ತೋರಿಸಿ ನನ್ನ ಹತ್ತಿರ ಪ್ಯಾಂಟಿನಲ್ಲಿದ್ದ ನನ್ನ ಪರ್ಸ ಕಸಿದುಕೊಂಡನು ಮತ್ತು ೧) ಪರ್ಸ ಅದರಲ್ಲಿದ್ದ ನಗದು ಹಣ ೪೦೦೦/-ರೂ, ೨) ೫ ಗ್ರಾ ಬಂಗಾರದ ಉಂಗುರ ಅ.ಕಿ-೨೫೦೦೦/-ರೂ, ೩) ರೆಡ್ಮಿ ನೋಟ್ ೯ ಪ್ರೋ ಮೊಬೈಲ್ ಅ.ಕಿ-೧೯೦೦೦/-ರೂ, ೪) ೧೦ ಗ್ರಾಂ ಬಂಗಾರದ ಚೈನ್ ಅ.ಕಿ-೫೦,೦೦೦/-ರೂ, ೫) ವಿವೋ ಟಿ-೧ ಮೊಬೈಲ್ ಅ.ಕಿ-೧೮೦೦೦/-ರೂ ಹೀಗೆ ಒಟ್ಟು 116000/- ರೂ ಕಿಮ್ಮತ್ತಿನ ನೇದ್ವುಗಳನ್ನು ಕಸಿದುಕೊಂಢು ಹೋಗಿರುತ್ತಾರೆ ಎಂದು ಫಿರ್ಯಾದಿ ಕೊಟ್ಟ ಹೇಳಿಕೆ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

ಸಂಚಾರಿ ಪೊಲೀಸ್‌ ಠಾಣೆ -1 :-  ಪರಶುರಾಮ ತಂದೆ ಭೀಮಶ್ಯಾ ಡೋಣಿ ವಯ:60 ವರ್ಷ ಜಾ: ಹೋಲೆಯ (ಎಸ್.ಸಿ) ಉ: ಒಕ್ಕಲೂತನ ಸಾ: ಉಪಳಾಂವ ತಾ:ಜಿ:ಕಲಬುರಗಿ ಈ ಮೂಲಕ ನಾನು ದೂರು ಸಲ್ಲಿಸುವದೇನೆಂದರೆ ನಿನ್ನೆ ದಿನಾಂಕ 04-03-2023 ರಂದು ಬೆಳಿಗ್ಗೆ ನನ್ನ ತಂದೆಯಾದ ಭೀಮಶ್ಯಾ ತಂದೆ ಹಣಮಂತ ಡೋಣಿ ಇವರು ಬೆಳಿಗ್ಗೆ ನಮ್ಮ ಊರಿನಿಂದ ವೈಯಕ್ತಿಕ ಕೆಲಸದ ಕುರಿತು ಕಲಬುರಗಿಗೆ ಹೋಗಿ ಬರುತ್ತೆನೆ ಅಂತಾ ಹೇಳಿ ಕಲಬುರಗಿಗೆ ಹೋದರು ನಾನು ಮನೆಯಲ್ಲಿ ಇರವಾಗ ಮದ್ಯಾಹ್ನಾ ನಮ್ಮ ಊರಿನ ಹಣಮಂತ ತಂದೆ ಮಲಕಪ್ಪಾ ಕಾಳನೂರ ಇವರು ಫೋನ್ ಮಾಡಿ ನಾನು ಮತ್ತು ಶಿವಕುಮಾರ ತಂದೆ ಅಜರ್ುನ ಸುತಾರ ಎಂಬುವವರು ಹುಮನಾಬಾದ ರಿಂಗ್ ರೊಡ ಸರ್ಕಲ್ ಹತ್ತಿರ ಮಾತನಾಡುತಾ ನಿಂತಿರುವಾಗ ಒಬ್ಬ ವಯಾಸ್ಸಾದ ವ್ಯಕ್ತಿಯು ಕಲಬುರಗಿ ಸೀಟಿ ಕಡೆಯಿಂದ ಕಪನೂರ ಕಡೆಗೆ ಹೋಗುವ ಕುರಿತು ಎಡ ಬಲ ನೋಡುತ್ತಾ ನಡೆದುಕೊಂಡು ಹುಮನಾಬಾದ ರಿಂಗೆ ಸರ್ಕಲ್ ಮೇಲೆ ರಸ್ತೆ ದಾಟುವಾಗ ಮದ್ಯಾಹ್ನಾ 1-30 ಪಿ.ಎಮ್ ಸುಮಾರಿಗೆ ಸಿಮೆಂಟ್ ಬಲ್ಕರ್ ಲಾರಿ ನೇದ್ದರ ಚಾಲಕನು ಸೇಡಂ ರಿಂಗ್ ರೋಡ ಕಡೆಯಿಂದ ಆಳಂದ ರಿಂಗ್ ರೋಡ ಕಡೆಗೆ ಹೋಗುವ ಕುರಿತು ತನ್ನ ವಾಹನವನ್ನು ಅತೀ ವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಸದರಿ ವಯಸ್ಸಾದ ವ್ಯಕ್ತಿಗೆ ಡಿಕ್ಕಿ ಪಡಿಸಿ ಆತನ ಪಾದದಗಳ ಮೇಲಿಂದ ತನ್ನ ವಾಹನ ಚಲಾಯಿಸಿದನು, ಆಗ ಸದರಿ ವ್ಯಕ್ತಿ ರಸ್ತೆ ಮೇಲೆ ಬಿದ್ದು ಚಿರಾಡಿದನು ಅದನ್ನು ನೋಡಿ ನಾನು ಮತ್ತು ಶಿವಕುಮಾರ ಸುತಾರ ಹೋಗಿ ಸದರಿ ವ್ಯಕ್ತಿ ಎಬ್ಬಿಸಿ ರಸ್ತೆಯ ಬದಿಯಲ್ಲಿ ಕೂಡಿಸಿ ನೋಡಲು ಅವರು ನಿಮ್ಮ ತಂದೆಯಾದ ಭೀಮಶ್ಯಾ ಡೋಣಿ ಇದ್ದು ಸದರಿ ಘನೆಯಿಂದ ಅವರ ಬಲಗಾಲಿನ ಹಿಮ್ಮಡಿ ಹಾಗೂ ಪಾದದ ಜ್ಯೋಯಿಂಟ್ ಹತ್ತಿರ ಭಾರಿ ರಕ್ತಗಾಯ ಹಾಗೂ ಎಡಗಾಲಿನ ಪಾದ ಮೇಲ್ಬಾಗಕ್ಕೆ ಭಾರಿ ರಕ್ತಗಾಯವಾಗಿದ್ದು, ನಿಮ್ಮ ತಂದೆಗೆ ಡಿಕ್ಕಿ ಪಡಿಸಿ ಅಪಘಾತ ಮಾಡಿದ ವಾಹನ ನಂಬರ ನೋಡಲು ಸಿಮೆಂಟ್ ಬಲ್ಕರ್ ಲಾರಿ ನಂ.ಎಮ್.ಹೆಚ್-12/ಆರ್.ಎನ್-5483 ನೇದ್ದು ಇದ್ದು, ಅದರ ಚಾಲಕನಿಗೆ ನೋಡಲು ಆತನ ಹೆಸರು ಸೂರ್ಯಕಾಂತ ರಾಠೋಡ ಅಂತಾ ಗೋತ್ತಾಗಿದ್ದು, ಸದರ ವಿಷಯ ಗೋತ್ತಾಗಿ ಸ್ಥಳಕ್ಕೆ ಅಂಬುಲೇನ್ಸ ವಾಹನ ಬಂದಿದ್ದು, ನಾನು ಮತ್ತು ಶಿವಕುಮಾರ ಸೇರಿ ನಿಮ್ಮ ತಂದೆಗೆ ಸದರಿ ಅಂಬುಲೇನ್ಸನಲ್ಲಿ ಹಾಕಿಕೊಂಡು ಉಪಚಾರ ಕುರಿತು ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದು ನೀವು ಅಲ್ಲಿಗೆ ಬರಬೇಕು ಅಂತಾ ತಿಳಿಸಿದ ಮೇರೆಗೆ ನಾನು ಜಿಲ್ಲಾ ಆಸ್ಪತ್ರೆಗೆ ಹೋಗಿ ನಮ್ಮ ತಂದೆಯವರಿಗೆ ನೋಡಲು ಹಣಮಂತ ಇವರು ಮೇಲೆ ತಿಳಿಸಿದಂತೆ ಗಾಯಗಳಾಗಿದ್ದು, ನಾನು ನಮ್ಮ ತಂದೆಯವರ ಹೇಚ್ಚಿನ ಉಪಚಾರ ಕುರಿತು ಜಿಲ್ಲಾ ಸರಕಾರಿ ಆಸ್ಪತ್ರೆಯಿಂದ ಎ.ಎಸ್.ಎಮ್ ಆಸ್ಪತ್ರೆಗೆ ಸೇರಿಕೆ ಮಾಡಿದ್ದು, ನಾನು ನಮ್ಮ ತಂದೆಯವರ ಚಿಕಿತ್ಸೆಯಲ್ಲಿ ಇದ್ದು, ಇಂದು ಅವರು ಶಸ್ರ್ತಚಿಕಿತ್ಸೆಗೆ ಒಳಗಾಗಿದ್ದು, ನಾನು ನಮ್ಮ ಮನೆಯವರೊಂದಿಗೆ ವಿಚಾರಿಸಿ ಇಂದು ಠಾಣೆಗೆ ಬಂದು ದೂರು ನೀಡಲು ತಡವಾಗಿರುತ್ತದೆ. ಕಾರಣ ಸಿಮೆಂಟ್ ಬಲ್ಕರ್ ಲಾರಿ ನಂ.ಎಮ್.ಹೆಚ್-12/ಆರ್.ಎನ್-5483 ನೇದ್ದರ ಚಾಲಕ ಸೂರ್ಯಕಾಂತ ರಾಠೋಡ ಇತನು ಸೇಡಂ ರಿಂಗ್ ರೋಡ ಕಡೆಯಿಂದ ಆಳಂದ ರಿಂಗ್ ರೋಡ ಕಡೆಗೆ ಹೋಗುವ ಕುರಿತು ತನ್ನ ವಾಹನವನ್ನು ಅತೀ ವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನಡೆದುಕೊಂಡು ರಸ್ತೆ ದಾಟುತ್ತಿದ ನಮ್ಮ ತಂದೆಗೆ ಡಿಕ್ಕಿ ಪಡಿಸಿ ಅಪಘಾತ ಮಾಡಿ ಭಾರಿಗಾಯಗೊಳಿಸಿದ್ದು ಕಾರಣ ಸದರಿ ಸಿಮೆಂಟ್ ಬಲ್ಕರ್ ಲಾರಿ ಚಾಲಕ ಸೂರ್ಯಕಾಂತ ಇತನ ಮೇಲೆ ಕಾನೂನು ಕ್ರಮ ಕೈಗೊಳ್ಳಬೆಕೆಂದು ಫಿರ್ಯಾದಿ ಕೊಟ್ಟ ಅರ್ಜಿ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಸಂಚಾರಿ ಪೊಲೀಸ್‌ ಠಾಣೆ -2 :- ದಿನಾಂಕ 05/03/2023 ರಂದು ಮದ್ಯಾಹ್ನ 12-15 ಗಂಟೆಗೆ ಶ್ರೀಮತಿ ಶೀಲಾ ಗಂಡ ಸುಧಾಕರ ಚವ್ಹಾಣ ರವರು ಠಾಣೆಗೆ ಹಾಜರಾಗಿ ಸುಧಾಕರ ತಂದೆ ವಿಠಲ ಚವ್ಹಾಣ ರವರು ನೀಡಿರುವ ಈ ಫಿರ್ಯಾದಿ ಅರ್ಜಿಯನ್ನು ಹಾಜರಪಡಿಸಿದ್ದರ ಸಾರಂಶವೆನೆಂದರೆ ನಾನು ಸುಧಾಕರ ತಂದೆ ವಿಠಲ ಚವ್ಹಾಣ ವಯಃ 32 ವರ್ಷ ಜಾತಿಃ ಲಂಬಾಣಿ ಉಃ ಕೂಲಿ ಕೆಲಸ ಮುಕ್ಕಾಃ ಮಡಿಹಾಳ ತಾಂಡಾ ಶ್ರಿನಿವಾಸ ಸರಡಗಿ ಫಿರ್ಯಾದಿ ಸಲ್ಲಿಸುವುದೆನೆಂದರೆ, ದಿನಾಂಕ 03/03/2023 ರಂದು ನಾನು ನನ್ನ ಕೆಲಸಕ್ಕಾಗಿ ನನ್ನ ಮೋಟರ ಸೈಕಲ ನಂ. ಕೆಎ 32 ಇ.ವಾಯಿ 1997  ನೇದ್ದರ ಮೇಲೆ ತಾಂಡಾದಿಂದ ಶ್ರೀನಿವಾಸ ಸರಡಗಿ ಕ್ರಾಸಿನ ಕಡೆಗೆ ಬರುತ್ತಿರುವಾಗ ಬೆಳಿಗ್ಗೆ 11:40 ಗಂಟೆ ಸುಮಾರಿಗೆ ಕಲಬುರಗಿ ರೋಡಿನ ಕಡೆಯಿಂದ ಕಾರ ನಂ. ಕೆಎ 32 ಝಡ್ 3364 ಇದರ ಚಾಲಕನು ಭಾರಿ ಅತಿವೇಗದಿಂದ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದವನೆ ತನ್ನ ಮುಂದಿನ ಯಾವುದೋ ವಾಹನಕ್ಕೆ ಓವರ ಟೇಕ ಮಾಡಲು ಹೋಗಿ ನೇರವಾಗಿ ಬಂದು ನನ್ನ ಮೋಟರ ಸೈಕಲಗೆ ಡಿಕ್ಕಿ ಹೊಡೆದಿದ್ದರಿಂದ ಮೋಟರ ಸೈಕಲ ಸಮೇತವಾಗಿ ರೋಡಿಗೆ ಬಿದ್ದಾಗ ಘಟನೆಯನ್ನು ಕಂಡಿರುವ ಬಸವನ ಗೌಡ ತಂದೆ ಶಂಕ್ರಪ್ಪಾ ಯಳಮೇಲಿ, ಪ್ರೇಮ ತಂದೆ ಸುರೇಶ ರಾಠೋಡ ಇವರು ನೋಡಿ ನನಗೆ ಎಬ್ಬಿಸಿದ್ದು, ಇದರಿಂದ ಟೊಂಕಕ್ಕೆ ಗುಪ್ತಗಾಯವಾಗಿ ನೋವು ಆಗುತ್ತಿದ್ದು, ಬಲಗೈ ಮುಂಗೈಗೆ ರಕ್ತಗಾಯವಾಗಿದ್ದು, ಬಲಗಾಲಿನ ಮೊಳಕಾಲಿಗೆ ಕೂಡಾ ರಕ್ತಗಾಯವಾಗಿರುತ್ತದೆ. ಕಾರ ಚಾಲಕನು ಸ್ವಲ್ಪ ನಿಂತಂತೆ ಮಾಡಿದ್ದು, ಆತನ ಹೆಸರು ವಿಚಾರಿಸಿದ್ದು ವಿರೇಶ ತಂದೆ ಗೌಡಪ್ಪಾ ಬಸ್ತೆ ಸಾಃ ಕೊಡಲಹಂಗರಗಾ ಅಂತಾ ತಿಳಿಸಿ, ಅಲ್ಲಿಯೇ ನಿಂತಂತೆ ಮಾಡಿ ಕಾರು ಬಿಟ್ಟು ಓಡಿ ಹೋಗಿರುತ್ತಾನೆ. ಮುಂದೆ ಪ್ರೇಮ ರಾಠೋಡ ಈತನು ಉಪಚಾರಕ್ಕಾಗಿ ಸುಬೇದಾರ ಆಸ್ಪತ್ರೆಯಲ್ಲಿ ತಂದು ಸೇರಿಕೆ ಮಾಡಿರುತ್ತಾನೆ. ನಾನು ಆಸ್ಪತ್ರೆಯಲ್ಲಿ ಉಪಚಾರ ಪಡೆಯುತ್ತಿರುವುದರಿಂದ ಈ ಸ್ವಲ್ಪ ಗುಣಮುಖವಾಗಿದ್ದಕ್ಕೆ ಮತ್ತು ಕೇಸು ಮಾಡುವ ಬಗ್ಗೆ ವಿಚಾರಿಸಿ ಈ ಫಿರ್ಯಾದಿಯನ್ನು ಈಗ ಕಳುಹಿಸಿಕೊಡುತ್ತಿದ್ದು, ಕಾರ ನಂ. ಕೆಎ 32 ಝಡ್ 3364 ನೇದ್ದರ ಚಾಲಕ ವಿರೇಶ ತಂದೆ ಗೌಡಪ್ಪಾ ಬಸ್ತೆ ಈತನ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಬೇಕು ಅಂತಾ ಕೊಟ್ಟ ಫಿರ್ಯಾದಿ ದೂರು ಅರ್ಜಿ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

ಫರಹತಾಬಾದ ಪೊಲೀಸ ಠಾಣೆ :-  ದಿನಾಂಕ:05-01-2023 ರಂದು 8:10 ಪಿಎಮ್ ಕ್ಕೆ ಶ್ರೀ ರಾಜಕುಮಾರ ಎಸ್.ಆಳಂದ ವಯ||47 ವರ್ಷ || ಒಕ್ಕಲುತನ ಜಾ|| ಲಿಂಗಾಯತ ಸಾ||ನೃಪತುಂಗ ಕಾಲೋನಿ ಹಾ.ವ ನದಿಸಿನ್ನೂರ ಸವೇ ನಂ:115/1 ತೋಟದಲ್ಲಿ ತಾಜಿ|| ಕಲಬುರಗಿ ರವರು ಠಾಣೆಗೆ ಹಾಜರಾಗಿ ಕೈ ಬರಹದಿಂದ ಬರೆದು ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ, ತನಗೆ ಸಂಬಂಧಿಸಿದ ನದಿಸಿನ್ನೂರ ಸೀಮಾಂತರದಲ್ಲಿರುವ ಜಮೀನು ಸರ್ವೇ ನಂ:115/1 ತೋಟದಲ್ಲಿ 2018 ರಿಂದ ಇಲ್ಲಿಯವರೆಗೆ ಏಳು ಬಾರಿ ಕಳ್ಳತನವಾಗಿದ್ದು ನಾವು ಉಪಜೀವನ ಮಾಡುವುದು ಹೇಗೆ ಎನ್ನುವಂತ್ತಾಗಿದೆ.  ತಾವುಗಳು ಇದರ ಬಗ್ಗೆ ವಿಶೇಷ ಕಾಳಜಿಯನ್ನು ಹಾಗೂ ಮುತುವರ್ಜಿಯನ್ನು ವಹಿಸಿ ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಮಟ್ಟದ ಕಳ್ಳತನ ವಾಗುವುದನ್ನು ತಡೆಗಟ್ಟಲು ತಾವುಗಳು ಕಾರ್ಯಪ್ರವೃತ್ತರಾಗಿ ಮುಂದಿನ ಅನಾಹುತವನ್ನು ತಪ್ಪಿಸಿದಂತಾಗುತ್ತದೆ. ದಿನಾಂಕ:01-03-2023 ಸಂಜೆ 10:000 ರಿಂದ ದಿನಾಂಕ:02-03-2023 ರ ಬೆಳೆಗ್ಗೆ 8:00 ರ ಳಗಡೆ ನನ್ನ ತೋಟದಲ್ಲಿನ 1) ಬೋರವೆಲ್ (ಸಬ್ಮರ್ಷಿಬಲ) ಮಷಿನ, ಕೇಬಲ್, ಹಗ್ಗ ಕಳ್ಳತನವಾಗಿದ್ದು ಇದರ ಅಂದಾಜು ಮೌಲ್ಯ 25000 ರಿಂದ 30000 ಬೆಲೆಬಾಳುವ ವಸ್ತುಗಳು ಕಳ್ಳತನವಾಗಿರುತ್ತವೆ. ಇದರ ಬಗ್ಗೆ ದಿನಾಂಕ:02-03-2023 ರಂದು ಮಧ್ಯಹ್ನ 1:45 ಕ್ಕೆ ಕರೆ ಮಾಡಲಾಗಿ ಸದರಿ ಅಧಿಕಾರಿಗಳು ಮಧ್ಯಾಹ್ನ 3:00ರ ಸುಮಾರಿಗೆ ಸ್ಥಳದ ಮೇಲೆ ಬಂದು ಪರಿಶೀಲಿಸಿರುತ್ತಾರೆ. ಪ್ರಯುಕ್ತ ಸದರಿ ಅಧಿಕಾರಿಯ ವರದಿಯಂತೆ ತಾವುಗಳು ಎಫ್.ಐ.ಆರ್ ದಾಖಲೆಮಾಡಬೇಕೆಂದು ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ. ಅದರಂತೆ ತಮ್ಮ ಠಾಣೆಯ ರಾಜಕುಮಾರ ನ್ನುವ ಅಧಿಕಾರಿಯು ಪರಿಶೀಲನೆ ಮಾಡಿ ಹೋಗಿರುತ್ತಾರೆ. ಅದನ್ನು ಸಹ ಗಣನೆಗೆ ತೆಗೆದುಕೊಂಡು ಸದರಿ ಕಳ್ಳರನ್ನು ಹಿಡಿದು ಸೂಕ್ತ ಕ್ರಮ ವಹಿಸಿ ನನ್ನ ಕಳುವಾದ ಸಾಮಾನುಗಳನ್ನು ಮರಳಿಸಬೇಕಾಗಿ ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ ಅಂತ ನೀಡಿದ ದೂರಿನ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

ಇತ್ತೀಚಿನ ನವೀಕರಣ​ : 06-03-2023 11:04 AM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080