ಅಭಿಪ್ರಾಯ / ಸಲಹೆಗಳು

ಸ್ಟೇಷನ್‌ ಬಜಾರ್‌ ಪೊಲೀಸ್‌ ಠಾಣೆ :- ದಿನಾಂಕ: 04/02/2023 ರಂದು ಮದ್ಯಾಹ್ನ 03:30 ಗಂಟೆ ಸುಮಾರಿಗೆ ನಾನು ಪಿ.ಎನ್.ಟಿ ಕಾಲೋನಿಯಲ್ಲಿರುವ ರಾಯಲ್ ಫೈನಾನ್ಸನಲ್ಲಿ ಕೆಲಸ ಮಾಡುತ್ತಿರುವಾಗ ಕಿರಣ ಇತನು ಬಂದು ನನ್ನ ಮೇಲೆ ಜಗಳಕ್ಕೆ ಬಿದ್ದು ಅವಾಚ್ಯ ಶಬ್ದಗಳಿಂದ ಬೈಯುತ್ತ ರಂಡಿ, ನೀನು ನನ್ನನ್ನು ಬಿಟ್ಟು ಹೇಗೆ ಸಂಸಾರ ಮಾಡುತ್ತಿ ನಾನು ನೋಡುತ್ತೇನೆ ಅಂತ ಹೇಳುತ್ತಾ ಕೈಯಿಂದ ನನ್ನ ಎಡಗಡೆ ಕಪಾಳದ ಮೇಲೆ ಹೊಡೆದ ನನ್ನ ಹತ್ತಿರವಿದ್ದ ಓಪೋ 015S ಮೊಬೈಲ್ ಫೋನ್ ಅ.ಕಿ: 3,000/- ರೂ ನೇದ್ದನ್ನು ಜಬರದಸ್ತಿಯಿಂದ ಕಸಿದುಕೊಂಡರುತ್ತಾನೆ, ಆಗ ನಾನು ಚಿರಾಡುವುದನ್ನು ಕೇಳಿ ಅಕ್ಕ ಪಕ್ಕದವರು ಬರುತ್ತಿರುವುದು ನೋಡಿ ಕಿರಣ್ ಇತನು ಅಲ್ಲಿಂದ ಓಡಿ ಹೋಗುವಾಗ ಈ ಬಗ್ಗೆ ಯಾರಿಗಾದರು ಹೇಳಿದರೆ ನಿನಗೆ ಜೀವ ಸಹಿತ ಬಿಡುವುದಿಲ್ಲ ಅಂತ ಜೀವ ಬೆದರಿಕೆ ಹಾಕಿ ಹೋಗಿರುತ್ತಾನೆ. ಕೀರಣ್ ಇತನು ನನಗೆ ಕೈಯಿಂದ ಹೊಡೆದಿರುವುದರಿಂದ ನನಗೆ ಅಷ್ಟೇನು ಗಾಯ ಆಗಿರುವುದಿಲ್ಲ ಆದ್ದರಿಂದ ನಾನು ಆಸ್ಪತ್ರೆಗೆ ಹೋಗಿರುವುದಿಲ್ಲ. ಈ ಬಗ್ಗೆ ನಾನು ನಮ್ಮ ಮನೆಯಲ್ಲಿ ವಿಚಾರಿಸಿ ಇಂದು ತಡವಾಗಿ ಠಾಣೆಗೆ ಬಂದು ದೂರು ಸಲ್ಲಿಸುತ್ತಿದ್ದೇನೆ. ನನಗೆ ಹೆದರಿಸಿ ನನಗೆ ಕೈಯಿಂದ ಹೊಡೆ ಬಡೆ ಮಾಡಿ ನನ್ನ ಹತ್ತಿರವಿದ್ದ ಮೊಬೈಲ್ ಫೋನ್ ಕಸಿದುಕೊಂಡು ನನಗೆ ಜೀವ ಬೆದರಿಕೆ ಹಾಕಿ ಹೋದ ಕಿರಣ ಬಿರಾದಾರ ಇತನ ವಿರುದ್ದ ಕಾನೂನು ಕ್ರಮ ಜರುಗಿಸಬೇಕೆಂದು ಫಿರ್ಯಾದಿ ಕೊಟ್ಟ ಅರ್ಜಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಸಂಚಾರಿ ಪೊಲೀಸ್‌ ಠಾಣೆ-2 :- ದಿನಾಂಕ: 05-02-2023 ರಂದು ಸಾಯಂಕಾಲ 6-00 ಖಾಸಗಿ ಪಿ.ಜಿ  ಶಹಾ ಆಸ್ಪತ್ರೆಯ ಸಿಬ್ಬಂದಿಯವರು ಠಾಣೆಗೆ ಪೋನ ಮಾಡಿ ಅಶೋಕ ಇವರು ರಸ್ತೆ ಅಪಘಾತ ಹೊಂದಿ ಉಪಚಾರ ಕುರಿತು ಬಂದು ಸೇರಿಕೆಯಾಗಿರುತ್ತಾರೆ ಅಂತಾ ತಿಳಿಸಿದ್ದರಿಂದ ನಾನು ಆಸ್ಪತ್ರೆಗೆ ಬೇಟಿಕೊಟ್ಟು ಗಾಯಾಳು ಶ್ರೀ ಅಶೋಕ ಇವರನ್ನು ವಿಚಾರಿಸಿ ಸಾಯಂಕಾಲ 6:15 ಗಂಟೆಯಿಂದ 7:15 ಗಂಟೆಯವರೆಗೆ ಹೇಳೀಕೆಯನ್ನು ಪಡೆದುಕೊಂಡು ಮರಳಿ ಸಾಯಂಕಾಲ 7:30 ಗಂಟೆಗೆ ಠಾಣೆಗೆ ಬಂದು ಫಿರ್ಯಾದಿ ಹೇಳಿಕೆ ಸಾರಂಶವೆನೆಂದರೆ ಇಂದು ದಿನಾಂಕ 05-02-2023 ರಂದು ಮದ್ಯಾಹ್ನ ಅಂದಾಜು 1:00 ಗಂಟೆ ಸುಮಾರಿಗೆ ನಾನು ಠಾಕೂರ ಡಾಕ್ಟರ ರವರ ನಿರ್ಮಾಣ ವಾಗುತ್ತೀರುವ ಮನೆ ಹತ್ತೀರ ವಾಚಮನ ಕೆಲಸದಿಂದ ಡಾಕ್ಟರ ಮನೆ ಎದುರುಗಡೆ ಬರುವ ನಮ್ಮ ಕೋಣೆ ಕಡೆಗೆ ಊಟಕ್ಕೆ ಹೋಗುವ ಕುರಿತು ನಡೆದುಕೊಂಡು ಹೋಗುತ್ತೀರುವಾಗ ಠಾಕೂರ ಡಾಕ್ಟರ ರವರ ಮನೆ ಎದುರಿನ ರೋಡ ಮೇಲೆ ಮೋಟಾರ ಸೈಕಲ ನಂಬರ ಕೆಎ-32/ಇಕೆ-5737 ನೇದ್ದರ ಸವಾರಳು ಕುಸನೂರ ರೋಡ ಕಡೆಯಿಂದ  ಓಂ ನಗರ ಕಡೆಗೆ ಹೋಗುವ ಕುರಿತು ತನ್ನ ಮೋಟಾರ ಸೈಕಲನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನಡೆದುಕೊಂಡು ರಸ್ತೆ ದಾಟುತ್ತೀರುವ ನನಗೆ ಡಿಕ್ಕಿಪಡಿಸಿ ಅಪಘಾತ ಮಾಡಿ ನನಗೆ ಭಾರಿಗಾಯಗೊಳಿಸಿ ತನ್ನ ವಾಹನ ಸಮೇತ ಓಡಿ ಹೋಗಿದ್ದು ಅವಳ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಫಿರ್ಯಾದಿ ಕೊಟ್ಟ ಹೇಳಿಕೆ ಸಾರಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

ಸಂಚಾರಿ ಪೊಲೀಸ್‌ ಠಾಣೆ-1 :- ದಿನಾಂಕ: 05-02-2023 ರಂದು ಮದ್ಯಾಹ್ನ 12:30 ಗಂಟೆಗೆ ಶ್ರೀ. ಸೈಫಾನಸಾಬ್ ತಂದೆ ಮಹಿಬೂಬಸಾಬ್ ಸಾ: ಜಿದ್ದಾ ಕಾಲೋನಿ, ಕಲಬುರಗಿ ಇವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಗಣಕಿಕೃತ ಮಾಡಿದ ದೂರು ಅರ್ಜಿಯನ್ನು ಹಾಜರುಪಡಿಸಿದ್ದರ ಸಾರಾಂಶವೇನೆಂದರೆ ನಿನ್ನೆ ದಿನಾಂಕ: 04/02/2023 ರಂದು ರಾತ್ರಿ ಜಯದೇವ ಆಸ್ಪತ್ರೆಯ ಓಳ ರೋಗಿ ನಂಬರ 033779 ಅಬ್ದುಲ್ ಹಮೀದ್ ಇವರಿಗೆ ಸ್ಕ್ಯಾನಿಂಗ್ ಮಾಡಿಸಿಕೊಂಡು ವಾಪಸ್ ಬರುವಾಗ ನಾನು ಜಿ.ಜಿ.ಹೆಚ್ ಸರ್ಕಲ್ ಹತ್ತಿರ ವಾಹನವನ್ನು ನಿಧಾನವಾಗಿ ಚಲಾಯಿಸಿ ಬಲಕ್ಕೆ ಇಂಡಿಕೆಟರ್ ಹಾಕಿ ಆಸ್ಪತ್ರೆಯ ಮೇನ್ ಗೇಟ್‌ನಲ್ಲಿ ಹೋಗುವಾಗ ದಿನಾಂಕ: 05-02-2023 ರಂದು 01:00 ಎ.ಎಂ ಕ್ಕೆ ಸುಮಾರಿಗೆ ಒಬ್ಬ ಕಾರ್ ಚಾಲಕನು ಸೇಡಂ ರಿಂಗ್ ರೋಡ್ ಕಡೆಯಿಂದ ಟೌನ್ ಹಾಲ್ ಕಡೆಗೆ ಹೋಗುವ ಕುರಿತು ತನ್ನ ಕಾರನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನಮ್ಮ ಅಂಬೂಲೆನ್ಸ್ ವಾಹನದ ಎಡ ಭಾಗಕ್ಕೆ ಡಿಕ್ಕಿಪಡಿಸಿ ಅಪಘಾತ ಮಾಡಿದನು. ಆಗ ನಾನು ಒಮ್ಮೇಲೆ ಗಾಡಿ ನಿಲ್ಲಿಸಿ ಕೆಳಗೆ ಇಳಿದು ನೋಡಲು ಕಾರ್ ಚಾಲಕನು ತನ್ನ ಕಾರನ್ನು ರೋಡ್ ಪಕ್ಕದಲ್ಲಿ ನಿಲ್ಲಿಸಿ ನಿಂತಿದ್ದನು ಆತನ ಕಾರ್ ನೋಡಲು ಇನ್ನೋವಾ ಕಾರ ನಂಬರ ನೋಡಲು ಕೆಎ-32/ಜೆಡ್-3426 ಇದ್ದಿತ್ತು, ಕಾರ್ ಚಾಲಕನ ಬಗ್ಗೆ ವಿಚಾರಿಸಲು ಆತನ ಹೆಸರು ಮುಜಾಹೀದ್ ಪರವೇಜ್ ತಂದೆ ಮನಸೂರ ಅಹಮದ್ ಅಂತಾ ಗೋತ್ತಾಗಿದ್ದು. ಸದರ ಘಟನೆಯಿಂದ ನನ್ನ ಅಂಬ್ಯೂಲನ್ಸ್ ವಾಹನದ ಎಡಗಡೆ ಡಿಸೇಲ್ ಟ್ಯಾಂಕ್ ಒಡೆದಿದ್ದು ಹಾಗೂ ಎಡಗಡೆ ಭಾಗ ಜಖಂಗೊಂಡಿದ್ದು ನಮ್ಮ ವಾಹನಕ್ಕೆ ಡಿಕ್ಕಿಪಡಿಸಿ ಅಪಘಾತ ಮಾಡಿದನ್ನು ಅಲ್ಲೆ ಇದ್ದ ಅಂಬ್ರೀಷ ಹಾಗೂ ಮಹಾಲಿಂಗ್ ಇವರು ನೋಡಿರುತ್ತಾರೆ. ಅಪಘಾತ ಪಡಿಸಿದ ಕಾರಿನ ಎದರಿನ ಭಾಗ ಜಖಂಗೊಂಡಿದ್ದು ಇರುತ್ತದೆ. ಸದರ ಘಟನೆಯಿಂದ ಯಾರಿಗೂ ಯಾವುದೇ ಗಾಯಗಳು ಆಗಿರುವುದಿಲ್ಲ. ಕಾರಣ ಇನ್ನೋವಾ ಕಾರ್ ಚಾಲಕ ಮುಜಾಹೀದ್ ಇತನ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಫಿರ್ಯಾದಿ ಕೊಟ್ಟ ಹೇಳಿಕೆ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಚೌಕ್‌ ಪೊಲೀಸ್‌ ಠಾಣೆ :- ದಿನಾಂಕ: 05/02/2023 ರಂದು ರಾತ್ರಿ 9-30 ಗಂಟೆಗೆ  ಶ್ರೀ  ಸಮೀರ ಹೆಚ್. ಮುಲ್ಲಾ ಪಿ.ಐ. ಸಿಸಿಬಿ ಘಟಕ ಕಲಬುರಗಿ ನಗರ ರವರು ಠಾಣೆಗೆ ಹಾಜರಾಗಿ  ಕನ್ನಡದಲ್ಲಿ ಗಣಕೀಕೃತ ಮಾಡಿಸಿದ  ಇಸ್ಪೇಟ ಜೂಜಾಟ ದಾಳಿ ಜಪ್ತಿ ಪಂಚನಾಮೆ ಮತ್ತು ಮುದ್ದೆಮಾಲು ಹಾಗೂ 06 ಜನ  ಆರೋಪಿತರನ್ನು ಹಾಜರಪಡಿಸಿ ತಮ್ಮದೊಂದು ಕನ್ನಡದಲ್ಲಿ ಗಣಕೀಕೃತ ಮಾಡಿಸಿದ ಸರ್ಕಾರಿ ತರ್ಫೇ  ದೂರು ಕೊಟ್ಟಿದ್ದರ ಸಾರಾಂಶವೆನೆಂದೆರೆ, ನಾನು ಸಮೀರ್. ಹೆಚ್.ಮುಲ್ಲಾ ಪಿ.ಐ., ಸಿ.ಸಿ.ಬಿ. ಘಟಕ ಕಲಬುರಗಿ ನಗರ ಈ ಮೂಲಕ ಸರಕಾರಿ ತರ್ಪೇ  ವರದಿ ಸಲ್ಲಿಸುವುದೇನಂದರೆ, ಇಂದು ದಿನಾಂಕ:05-02-2023 ರಂದು ಸಾಯಂಕಾಲ 5-00 ಗಂಟೆಗೆ ನಾನು ಕಛೇರಿಯಲ್ಲಿದ್ದಾಗ ಗಂಜ ಏರಿಯಾ ಕಾಟನ್ ಮಾರ್ಕೆಟ್  ಶ್ರೀ ಸಿದ್ದೀವಿನಾಯಕ ಟ್ರೇಡಿಂಗ್ ಕಂಪನಿ ಎದುರುಗಡೆ ಲೈಟಿನ ಕಂಬದ ಹತ್ತಿರ ಕೆಳಗಡೆ ಲೈಟಿನ ಬೆಳಕಿನಲ್ಲಿ ಖುಲ್ಲಾ ಜಾಗೆಯಲ್ಲಿ ಅಕ್ರಮವಾಗಿ ಅಂದರ ಬಾಹರ ಜೂಜಾಟ ನಡೆದಿದೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ಸದರಿ ವಿಷಯವನ್ನು ನಾನು ಮೇಲಾಧಿಕಾರಿಗಳಿಗೆ ಮಾಹಿತಿ ತಿಳಿಸಿ, ಅವರ ಮಾರ್ಗದರ್ಶನದಲ್ಲಿ ದಾಳಿ ಕುರಿತು ಇಬ್ಬರೂ ಪಂಚರಾದ 1) ಶ್ರೀ ಮಹಾಂತೇಶ ತಂದೆ ಶಿವನಾಗಯ್ಯ ಕಡಬೂರ, ವ:26 ವರ್ಷ, ಜಾತಿ:ಲಿಂಗಾಯತ, ಉ:ಅಟೋ ಡ್ರೈವರ್, ಸಾ:ಸೈಯದ ಚಿಂಚೋಳಿ ಕ್ರಾಸ್ ಹತ್ತಿರ ಆಶ್ರಯ ಕಾಲೋನಿ, ಕಲಬುರಗಿ ಮೊ.ನಂ.7760591043 2) ಶ್ರೀ ಮುಖೀಂ ತಂದೆ ರುಕ್ಮೋದ್ದಿನ ಶೇಖ, ವ:20 ವರ್ಷ, ಜಾತಿ:ಮುಸ್ಲಿಂ, ಉ:ಅಟೋ ಚಾಲಕ, ಸಾ:ಶೇಖ ರೋಜಾ ಆಶ್ರಯ ಕಾಲೋನಿ ಕಲಬುರಗಿ ಮೊ.ನಂ.7892150168 ರವರಿಗೆ ಸಾಯಂಕಾಲ 5-30 ಗಂಟೆಗೆ ಸಿ.ಸಿ.ಬಿ. ಕಛೇರಿಗೆ ಬರಮಾಡಿಕೊಂಡು ಅವರಿಗೆ ವಿಷಯ ತಿಳಿಸಿ ದಾಳಿ ಪಂಚನಾಮೆ ಸಹಕರಿಸಲು ಕೇಳಿಕೊಂಡ ಮೇರೆಗೆ ಉಭಯ ಪಂಚರು ಒಪ್ಪಿಕೊಂಡಿರುತ್ತಾರೆ. ನಂತರ ನಾನು, ಪಂಚರು, ಮತ್ತು ಸಿ.ಸಿ.ಬಿ. ಘಟಕದ ಸಿಬ್ಬಂದಿಯವರಾದ 1) ಅಂಬಾಜಿ ಸಿಪಿಸಿ-131, 2) ವಿಶ್ವನಾಥ ಸಿಪಿಸಿ-686, 3) ಯಲ್ಲಪ್ಪ ಸಿಪಿಸಿ-220, 4) ಶ್ರೀಶೈಲ ಸಿಪಿಸಿ-692, 5) ಅಶೋಕ ಕಟಕೆ ಸಿಪಿಸಿ-966, 6) ಶಿವಕುಮಾರ ಸಿಪಿಸಿ-16715, 7) ಅರವಿಂದ ಸಿಪಿಸಿ-955, 8) ಅಶೋಕ ಸಿಪಿಸಿ-647, 9) ನಾಗರಾಜ ಪಿಸಿ-1257, 10) ಸುನೀಲಕುಮರ ಸಿಹೆಚ್ಸಿ-167 ರವರು ಕೂಡಿಕೊಂಡು ಎಲ್ಲರೂ ತಮ್ಮ ತಮ್ಮ ಮೋಟಾರಸೈಕಲಗಳ ಮೇಲೆ ಸಾಯಂಕಾಲ 5-45 ಗಂಟೆಗೆ ಹೊರಟು ಚೌಕ ಪೊಲೀಸ್ ಠಾಣೆಗೆ ಭೇಟಿ ಕೊಟ್ಟು ಚೌಕ ಪೊಲೀಸ್ ಠಾಣೆಯ ನಿರೀಕ್ಷಕರಿಗೆ ಮಾಹಿತಿ ನೀಡಿ ಠಾಣೆಯಲ್ಲಿರುವ ಸಿಬ್ಬಂದಿಯವರಾದ 1) ಅಶೋಕ ಸಿಪಿಸಿ-06, 2) ಸುರೇಶ ಸಿಪಿಸಿ-130, 3) ರೇವಣಸಿದ್ದ ಸಿಪಿಸಿ-219 ರವರಿಗೆ ನಮ್ಮೊಂದಿಗೆ ದಾಳಿ ಕುರಿತು ಕಳುಹಿಸಿಕೊಟ್ಟಿದ್ದು, ನಂತರ ಬಾತ್ಮಿ ಬಂದ ಸ್ಥಳವಾದ ಕಲಬುರಗಿ ನಗರದ ಗಂಜ ಏರಿಯಾ ಕಾಟನ್ ಮಾರ್ಕೆಟ್ ಶ್ರೀ ಸಿದ್ದೀವಿನಾಯಕ ಟ್ರೇಡಿಂಗ್ ಕಂಪನಿ ಹತ್ತಿರ ಸಾಯಂಕಾಲ 6-20 ಗಂಟೆಗೆ ತಲುಪಿ ಮೋಟಾರಸೈಕಲಗಳನ್ನು ಸ್ವಲ್ಪ ದೂರದಲ್ಲಿ ನಿಲ್ಲಿಸಿ ಅಲ್ಲಿಯೇ ಮರೆಯಲ್ಲಿ ನಿಂತು ನೋಡಲಾಗಿ ಸದರಿ ಖುಲ್ಲಾ ಜಾಗೆಯಲ್ಲಿ 06 ಜನರು ದುಂಡಾಗಿ ಕೆಳಗಡೆ ನೆಲದ ಮೇಲೆ ಕುಳಿತುಕೊಂಡು ಅಂದರ್ 500 ರೂ ಮತ್ತು ಬಾಹರ್ 500 ರೂಪಾಯಿಯಂತೆ ಅಂದರ ಬಾಹರ ಎನ್ನುವ ಇಸ್ಪೀಟ್ ಜೂಜಾಟ ಆಡುವುದನ್ನು ಪಂಚರ ಸಮಕ್ಷಮ ಖಚಿತಪಡಿಸಿಕೊಂಡು ಸಾಯಂಕಾಲ 6-30 ಗಂಟೆಗೆ ಸಿಬ್ಬಂದಿಯವರೊಂದಿಗೆ ದಾಳಿ ಮಾಡಿ ಆಪಾದಿತರಿಗೆ ಹಿಡಿದು ವಿಚಾರಿಸಲು ಅವರು ಹಣ ಪಣಕ್ಕೆ ಹಚ್ಚಿ ಇಸ್ಪೇಟ್ ಎಲೆಗಳ ಸಹಾಯದಿಂದ ಅಂದರಬಾಹರ ಎಂಬ ಜೂಜಾಟ ಆಡುವ ಬಗ್ಗೆ ತಪ್ಪೊಪ್ಪಿಕೊಂಡ ಬಳಿಕ ಸ್ವಾಧೀನಕ್ಕೆ ಪಡೆದುಕೊಂಡು ಅವರ ಹೆಸರು ವಿಳಾಸ ವಿಚಾರಿಸಿ ಅಂಗ ಶೋಧನೆ ಮಾಡಲಾಗಿ   1) ಚನ್ನಬಸಪ್ಪ ತಂದೆ ಮಾಣಿಕಪ್ಪ ವರನಾಳ, ವ:41 ವರ್ಷ, ಜಾತಿ:ಲಿಂಗಾಯತ, ಉ:ಇಟ್ಟಂಗಿ ಭಟ್ಟಿ ವ್ಯಾಪಾರ, ಸಾ:ಕಮಲನನಗರ, ಸುಲ್ತಾನಪೂರ ಕ್ರಾಸ್ ಹತ್ತಿರ ಕಲಬುರಗಿ, ಅಂತಾ ತಿಳಿಸಿದ್ದು, ಸದರಿಯವನಿಗೆ ಅಂಗ ಶೋಧನೆ ಮಾಡಲು ನಗದು ಹಣ 42,000/- ರೂ.ಗಳು ದೊರೆತಿರುತ್ತವೆ. 2) ಕಲ್ಯಾಣಪ್ಪ ತಂದೆ ಶಿವರುದ್ರಪ್ಪ ಸಂಗೋಳಗಿ, ವ:41 ವರ್ಷ, ಜಾತಿ:ಲಿಂಗಾಯತ, ಉ:ವ್ಯಾಪಾರ, ಸಾ:ಸೈಯದ ಚಿಂಚೋಳಿ, ತಾ:ಜಿ:ಕಲಬುರಗಿ ಅಂತಾ ತಿಳಿಸಿದ್ದು ಸದರಿಯವನಿಗೆ ಅಂಗ ಶೋಧನೆ ಮಾಡಲು ನಗದು ಹಣ 18,000/- ರೂ.ಗಳು ದೊರೆತಿರುತ್ತವೆ. 3) ಗಣೇಶ ತಂದೆ ಪಾಂಡು ಪವಾರ, ವ:44 ವರ್ಷ, ಜಾತಿ:ಲಂಬಾಣಿ, ಉ:ಕೂಲಿ ಕೆಲಸ, ಸಾ:ಪ್ರಶಾಂತ ನಗರ ಕಲಬುರಗಿ ಅಂತಾ ತಿಳಿಸಿದ್ದು ಸದರಿಯವನಿಗೆ ಅಂಗ ಶೋಧನೆ ಮಾಡಲು ನಗದು ಹಣ 9,000/-ರೂಗಳು ದೊರೆತಿರುತ್ತವೆ. 4) ಸಿದ್ದರಾಮ ತಂದೆ ಶಾಂತಪ್ಪ ವಾಡಿ, ವ:32 ವರ್ಷ, ಜಾತಿ:ಲಿಂಗಾಯತ, ಉ:ಖಾಸಗಿ ಕೆಲಸ, ಸಾ:ವಾಡಿ, ತಾ:ಚಿತ್ತಾಪೂರ, ಹಾವ:ದೇವಿನಗರ ಕಲಬುರಗಿ ಅಂತಾ ತಿಳಿಸಿದ್ದು ಸದರಿಯವನಿಗೆ ಅಂಗ ಶೋಧನೆ ಮಾಡಲು ನಗದು ಹಣ 8,000/- ರೂ.ಗಳು ದೊರೆತಿರುತ್ತವೆ. 5) ಸೇನಾಪತಿ ತಂದೆ ಶಾಮರಾವ ರಾಠೋಡ, ವ:44 ವರ್ಷ, ಜಾತಿ;ಲಂಬಾಣಿ, ಉ:ಖಾಸಗಿ ಕೆಲಸ, ಸಾ:ಶಹಾಬಜಾರ ನಾಕಾ ಕಲಬುರಗಿ ಅಂತಾ ತಿಳಿಸಿದ್ದು ಸದರಿಯವನಿಗೆ ಅಂಗ ಶೋಧನೆ ಮಾಡಲು ನಗದು ಹಣ 11,000/- ರೂ.ಗಳು ದೊರೆತಿರುತ್ತವೆ. 6) ಲಕ್ಷ್ಮಣ ತಂದೆ ಲಾಲು ಆಡೇ. ವ:47 ವರ್ಷ, ಜಾತಿ:ಲಂಬಾಣಿ, ಉ:ಇಟ್ಟಂಗಿ ಭಟ್ಟಿ ಕೆಲಸ, ಸಾ:ಶಹಾಬಜಾರ ನಾಕಾ ಕಲಬುರಗಿ ಅಂತಾ ತಿಳಿಸಿದ್ದು ಸದರಿಯವನಿಗೆ ಅಂಗ ಶೋಧನೆ ಮಾಡಲು ನಗದು ಹಣ 7,000/-ರೂ.ಗಳು ದೊರೆತಿರುತ್ತವೆ. ಕೆಳಗಡೆ ನೆಲದ ಮೇಲೆ ಒಟ್ಟು ನಗದು ಹಣ ರೂ.12,630/- ಗಳು ದೊರೆತಿದ್ದು, ಮತ್ತು 52 ಇಸ್ಪೀಟ್ ಎಲೆಗಳು ದೊರೆತಿರುತ್ತವೆ. ಹೀಗೆ ಒಟ್ಟು ರೂ.1,07,630/- ನಗದು ಹಣ ದೊರೆತಿದ್ದು ಇರುತ್ತದೆ. ಸದರಿ ಸ್ಥಳವು ಕಲಬುರಗಿ ನಗರದ ಗಂಜ ಏರಿಯಾ ಕಾಟನ್ ಮಾರ್ಕೆಟ್ ಶ್ರೀ ಸಿದ್ದೀ ವಿನಾಯಕ ಟ್ರೇಡಿಂಗ್ ಕಂಪನಿ ಎದುರುಗಡೆ ಲೈಟಿನ ಕಂಬದ ಹತ್ತಿರ ಕೆಳಗಡೆ ಲೈಟಿನ ಬೆಳಕಿನಲ್ಲಿ ಖುಲ್ಲಾ ಜಾಗೆಯಲ್ಲಿ ಅಕ್ರಮವಾಗಿ ಜೂಜಾಟ ಆಡುತ್ತಿದ್ದು ಇರುತ್ತದೆ. ಈ ಬಗ್ಗೆ ಜಪ್ತಿ ಪಂಚನಾಮೆಯನ್ನು ಇಂದು ದಿನಾಂಕ: 05-02-2023 ರಂದು ಸಾಯಂಕಾಲ 6-30 ಗಂಟೆಯಿಂದ 7-30 ಗಂಟೆಯವರೆಗೆ ಸ್ಥಳದಲ್ಲಿ ಪಂಚರ ಸಮಕ್ಷಮದಲ್ಲಿ ಲ್ಯಾಪಟ್ಯಾಪನಲ್ಲಿ ಲೈಟಿನ ಬೆಳಕಿನಲ್ಲಿ ಟೈಪ ಮಾಡಿಸಿ ಪೋರ್ಟಬಲ್ ಪ್ರಿಂಟರ್ ಮೂಲಕ ಪ್ರಿಂಟ್ ತೆಗೆಯಲಾಯಿತು. ಜಪ್ತಿ ಮಾಡಿದ ಮುದ್ದೇಮಾಲುಗಳನ್ನು ಪಂಚರು ಸಹಿ ಮಾಡಿದ ಚೀಟಿಯನ್ನು ಅಂಟಿಸಿ ತಾಭೆಗೆ ತೆಗೆದುಕೊಂಡಿದ್ದು ಇರುತ್ತದೆ.  ನಂತರ ಸದರಿ ಒಟ್ಟು 06 ಆಪಾದಿತರನ್ನು ಚೌಕ್ ಪೊಲೀಸ್ ಠಾಣೆಗೆ ಬಂದು ಜಪ್ತಿ ಪಂಚನಾಮೆ ಮತ್ತು ಮುದ್ದೆಮಾಲಿನೊಂದಿಗೆ ತಂದು ಹಾಜರುಪಡಿಸಿದ್ದು ಅವರ ವಿರುದ್ದ ಮುಂದಿನ ಕಾನೂನು ಕ್ರಮ ಕೈಕೊಳ್ಳಬೇಕೆಂದು ಫಿರ್ಯಾದಿ ಕೊಟ್ಟ ಅರ್ಜಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಅಶೋಕ ನಗರ ಪೊಲೀಸ್‌ ಠಾಣೆ :- ದಿನಾಂಕ: 05/02/2023 ರಂದು 11:00  ಎ.ಎಂ. ಕ್ಕೆ ಫಿರ್ಯಾದಿ ಶ್ರೀ ಅಂಬ್ರೀಷ ತಂದೆ ಶರಣಯಯ್ಯ ಗುತ್ತೇದಾರ ವಯ: 24 ವರ್ಷ ಜಾ: ಇಳಿಗೇರ ಉ: ಕೂಲಿ ಕೆಲಸ ಸಾ|| ಶರಣ ಸಿರಸಗಿ ಮಡ್ಡಿ ಕಲಬುರಗಿ, ಇವರು ಠಾಣೆಗೆ ಹಾಜರಾಗಿ ಕೊಟ್ಟ ಫಿರ್ಯಾದಿ ಅರ್ಜಿಯ ಸಾರಾಂಶವೆನೆಂದರೆ. ನಾನು ನನ್ನ ದಿನ ನಿತ್ಯದ ಕೆಲಸಕ್ಕೆ ಓಡಾಡುವ ಸಲುವಾಗಿ 2022 ನೇ ಸಾಲಿನಲ್ಲಿ ಒಂದು ಹೊಂಡಾ ಶೈನ್ ದ್ವಿ-ಚಕ್ರ ವಾಹನ ಸಂ. ಕೆಎ-32 ಹೆಚ್.ಸಿ-6851 ಗ್ರೇ ಬಣ್ಣದ್ದು ಚೆಸ್ಸಿ ನಂ ME4JC85EGND139260 ಇಂಜಿನ್ ನಂ JC85ED2217084  ಅ.ಕಿ. 74,177 ನೇದ್ದನ್ನು  ನನ್ನ ಖರೀದಿಸಿದ್ದು ಇರುತ್ತದೆ. ಹೀಗಿದ್ದು ದಿನಾಂಕ: 14-12-2022 ರಂದು ರಾತ್ರಿ 10:00 ಗಂಟೆ ಸುಮಾರಿಗೆ ನಾನು ಎಂದಿನಂತೆ ನನ್ನ ಕೆಲಸ ಮುಗಿಸಿಕೊಂಡು ಮನೆಗೆ ಬಂದು ನಮ್ಮ ಮನೆಯ ಮುಂದೆ ನನ್ನ ದ್ವಿಚಕ್ರ ವಾಹನವನ್ನು ನಿಲ್ಲಿಸಿರುತ್ತೇನೆ. ಮರುದಿವಸ ಅಂದರೆ ದಿನಾಂಕ: 15-12-2022 ರಂದು ಬೆಳಿಗ್ಗೆ 07:00 ಗಂಟೆಗೆ ಎದ್ದು ನೋಡಲಾಗಿ ನನ್ನ ಮೋಟರ್ ಸೈಕಲ್ ನಾನು ನಿಲ್ಲಿಸಿರುವ ಸ್ಥಳದಲ್ಲಿ ಇದ್ದಿರುವುದಿಲ್ಲ. ಯಾರೋ ಕಳ್ಳರು ನನ್ನ ಮೋಟರ್ ಸೈಕಲ್ ಕಳುವು ಮಾಡಿಕೊಂಡು ಹೋಗಿದ್ದು ಇರುತ್ತದೆ. ನಂತರ ನಾನು ಇಲ್ಲಿಯ ವರೆಗೆ ಕಲಬುರಗಿ ನಗರದಲ್ಲಿ ಎಲ್ಲಾ ಕಡೆಗಳಲ್ಲಿ ಹುಡುಕಾಡಿದರು ನನ್ನ ವಾಹನ ನನಗೆ ದೊರಕಿರುವುದಿಲ್ಲ. ಇಲ್ಲಿಯ ವರೆಗೆ ನನ್ನ ವಾಹನ ಹುಡುಕಾಡಿ ಇಂದು ತಡವಾಗಿ ಠಾಣೆಗೆ ಬಂದು ದೂರು ಸಲ್ಲಿಸುತ್ತಿದ್ದು, ಕಳವುವಾದ ನನ್ನ ಮೋಟಾರ ಸೈಕಲನ್ನು ಪತ್ತೆ ಮಾಡಿ ಕಳ್ಳತನ ಮಾಡಿದವರ ವಿರುದ್ದ ಕಾನೂನು ಕ್ರಮ ಕೈಕೊಳ್ಳಬೇಕೆಂದು ಫಿರ್ಯಾದಿ ಕೊಟ್ಟ ಅರ್ಜಿಯ ಸಾರಾಂಶದ ಮೇಲಿಂದ ಗುನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

ಇತ್ತೀಚಿನ ನವೀಕರಣ​ : 06-02-2023 07:15 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080