ಅಭಿಪ್ರಾಯ / ಸಲಹೆಗಳು

ಎಂ.ಬಿ.ನಗರ ಪೊಲೀಸ ಠಾಣೆ :- ದಿನಾಂಕ 04-01-2023 ರಂದು ಪಿರ್ಯಾದಿದಾರರು ನಿಡಿದ  ಫಿರ್ಯಾದಿ ಸಾರಾಂಶವೇನೆಂದರೆ, ದಿನಾಂಕ ೦೨-೦೧-೨೦೨೩ ರಂಧು ಫಿರ್ಯಾಧಿದಾರರು ತಮ್ಮ ಮನೆಯಲ್ಲಿರುವ ಬಿಳಿ ಬಣ್ಣದ ಆಕಳು ಮತ್ತು ಗೋದಿ ಬಣ್ಣದ ಆಕಳು ಕರುವಿಗೆ ರಾತ್ರಿ ೧೦.೦೦ ಗಂಟೆ ಮನೆಯ ಮುಂದೆ ಇರುವ ಸಿಮೆಂಟಿನ ಕಂಬಕ್ಕೆ ಕಟ್ಟಿ ಮೇವು ಹಾಕಿ ಮಲಗಿದ್ದು ದಿನಾಂಕ ೦೩/೦೧/೨೦೨೩ ರಂದು ಬೆಳಿಗ್ಗೆ ೦೫:೦೦ ಗಂಟೆಗೆ ಎದ್ದು ನೋಡುವಷ್ಟರಲ್ಲಿ ಆಕಳಿಗೆ ಮತ್ತು ಕರುವಿಗೆ ಕಟ್ಟಿದ ಹಗ್ಗವನ್ನು ಕಡಿದು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೊಗಿದ್ದಾರೆ ಎಂದು ಫಿರ್ಯಾದಿ ಕೊಟ್ಟ ಹೇಳಿಕೆ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಬ್ರಹ್ಮಪೂರ ಪೊಲೀಸ್‌ ಠಾಣೆ :- ದಿನಾಂಕ:05-01-2023 ರಂದು ಸಾಯಂಕಾಲ ೦೭:೧೦ ಕ್ಕೆ ಫಿರ್ಯಾದಿದಾರರಾದ ಶ್ರೀ ದೇವಿಂದ್ರ ತಂದೆ ಹಣಮಂತ ಧನ್ನಿ ವಯ:೩೬ವರ್ಷ ಜಾ:ಎಸ್.ಸಿ ಉ:ಕೂಲಿ ಕೆಲಸ ಸಾ//ಕುಮಸಿ ತಾಲ್ಲೂಕು ಮತ್ತು ಜಿಲ್ಲೆ ಕಲಬುರಗಿ ರವರು ಠಾಣೆಗೆ ಹಾಜರಾಗಿ ಪಿರ್ಯಾದಿ ನೀಡಿದರ ಸಾರಾಂಶವೆನೆಂದರೆ ನನ್ನದೊಂದು ಸ್ವಂತ ಹಿರೋ ಸ್ಪ್ಲೇಂಡರ್ ಪ್ಲಸ್ ಮೋಟರ್ ಸೈಕಲ್ ನಂ: KA-28-EL-1327 ನೇದ್ದು ಇದ್ದು ಸದರಿ ಮೋಟಾರ್ ಸೈಕಲ್‌ವು ನನ್ನ ಹೆಸರಿನಲ್ಲಿರುತ್ತದೆ. ಸದರಿ ಮೋಟಾರ್ ಸೈಕಲವು ದಿನಾಂಕ:೦೧/೦೧/೨೦೨೩ ರಂದು ರಾತ್ರಿ ೦೮:೦೦ ಗಂಟೆಗೆ ಕಲಬುರಗಿ ನಗರದ ಜಿಮ್ಸ್ ಆಸ್ಪತ್ರೆಯ ವಾಹನ ನಿಲ್ಲಿಸುವ ಸ್ಥಳದಲ್ಲಿ ನಿಲ್ಲಿಸಿ ಒಳಗಡೆ ಹೋಗಿ ಚಿಕಿತ್ಸೆ ಪಡೆಯುತ್ತಿದ್ದ ನನ್ನ ಹೆಂಡತಿಯನ್ನು ವಿಚಾರಿಸಿಕೊಂಡು ರಾತ್ರಿ ಅಲ್ಲೇ ಉಳಿದುಕೊಂಡು ಮರುದಿನ ದಿನಾಂಕ:೦೨/೦೧/೨೦೨೩ ರಂದು ಬೆಳಿಗ್ಗೆ ೭:೦೦ ಗಂಟೆಗೆ ಬಂದು ನಾನು ನಿಲ್ಲಿಸಿದ ಸ್ಥಳದಲ್ಲಿ ಮೋಟಾರ್ ಸೈಕಲ್ ನೋಡಲಾಗಿ ನನ್ನ ಮೋಟಾರ್ ಸೈಕಲ್ ಇರಲಿಲ್ಲಾ, ಮೋಟಾರ್ ಸೈಕಲ್ ಪತ್ತೆ ಕುರಿತು ಎಲ್ಲಾ ಕಡೆ ಹುಡುಕಾಡಿದರೂ ಮೋಟಾರ್ ಸೈಕಲ್ ಸಿಕ್ಕಿರುವುದಿಲ್ಲಾ ಆದರಿಂದ ಠಾಣೆಗೆ ಬಂದು ಅರ್ಜಿ ಕೊಡಲು ತಡವಾಗಿರುತ್ತದೆ. ಕಾರಣ ಕಳುವಾದ ನನ್ನ ಮೋಟಾರ್ ಸೈಕಲನ್ನು ಪತ್ತೆ ಹಚ್ಚಿ ಸೂಕ್ತ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಕೊಟ್ಟ ದೂರು ಅರ್ಜಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಬ್ರಹ್ಮಪೂರ ಪೊಲೀಸ್‌ ಠಾಣೆ :-  ದಿನಾಂಕ:- 05-01-2023 ರಂದು ರಾತ್ರಿ  ೦೮:  ಕ್ಕೆ ಫಿರ್ಯಾದಿದಾರರಾದ ಶ್ರೀ ನಟರಾಜ ತಂದೆ ಅಂಬಣ್ಣಾ ಕಿಣಗಿಕರ್ ವಯ:೩೯ವರ್ಷ ಜಾ:ಮಾದಿಗ ಉ:ಸ್ಟಾಪ್ ನರ್ಸ ಸಾ//ಮನೆ ನಂ ೧೧-೨೫೪೮ ನೀರಿನ ಟ್ಯಾಂಕ ಹತ್ತಿರ ವಿಜಯನಗರ ಬ್ರಹ್ಮಪೂರ ಕಲಬುರಗಿ ನಗರ ರವರು ಠಾಣೆಗೆ ಹಾಜರಾಗಿ ಪಿರ್ಯಾದಿ ನೀಡಿದರ ಸಾರಾಂಶವೆನೆಂದರೆ ನನ್ನದೊಂದು ಸ್ವಂತ ಹಿರೋ ಸ್ಪ್ಲೇಂಡರ್ ಪ್ಲಸ್ ಮೋಟರ್ ಸೈಕಲ್ ನಂ: KA-32-EG-2551 ನೇದ್ದು ಇದ್ದು ಸದರಿ ಮೋಟಾರ್ ಸೈಕಲ್‌ವು ನನ್ನ ಹೆಸರಿನಲ್ಲಿರುತ್ತದೆ. ಸದರಿ ಮೋಟಾರ್ ಸೈಕಲವು ದಿನಾಂಕ:೩೦/೧೨/೨೦೨೨ ರಂದು ಸಾಯಂಕಾಲ ೪:೩೦ ಗಂಟೆಗೆ ಕಲಬುರಗಿ ನಗರದ ಜಿಮ್ಸ್ ಆಸ್ಪತ್ರೆಯ ಆವರಣದಲ್ಲಿ ವಾಹನ ನಿಲ್ಲಿಸುವ ಸ್ಥಳದಲ್ಲಿ ನಿಲ್ಲಿಸಿ ಎಂದಿನಂತೆ ಕರ್ತವ್ಯಕ್ಕೆ ಹೋಗಿ ಕರ್ತವ್ಯ ಮುಗಿಸಿಕೊಂಡು ಮರಳಿ ಅದೇ ದಿನ ಸಾಯಂಕಾಲ ೫:೪೫ ಗಂಟೆಗೆ ಬಂದು ನಾನು ನಿಲ್ಲಿಸಿದ ಸ್ಥಳದಲ್ಲಿ ಮೋಟಾರ್ ಸೈಕಲ್ ನೋಡಲಾಗಿ ನನ್ನ ಮೋಟಾರ್ ಸೈಕಲ್ ಇರಲಿಲ್ಲಾ, ಮೋಟಾರ್ ಸೈಕಲ್ ಪತ್ತೆ ಕುರಿತು ಎಲ್ಲಾ ಕಡೆ ಹುಡುಕಾಡಿದರೂ ಮೋಟಾರ್ ಸೈಕಲ್ ಸಿಕ್ಕಿರುವುದಿಲ್ಲಾ ಆದರಿಂದ ಠಾಣೆಗೆ ಬಂದು ಅರ್ಜಿ ಕೊಡಲು ತಡವಾಗಿರುತ್ತದೆ. ಕಾರಣ ಕಳುವಾದ ನನ್ನ ಮೋಟಾರ್ ಸೈಕಲನ್ನು ಪತ್ತೆ ಹಚ್ಚಿ ಸೂಕ್ತ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಕೊಟ್ಟ ದೂರು ಅರ್ಜಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಸ್ಟೇಷನ್‌ ಬಜಾರ ಪೊಲೀಸ್‌ ಠಾಣೆ :-  ದಿನಾಂಕ: 04.01.2023 ರಂದು ರಾತ್ರಿ 8.30 ಗಂಟೆಗೆ ಕೆ,ಬಿ,ಎನ್ ಆಸ್ಪತ್ರೆಯಿಂದ ಅಸಾಲ್ಟ್ ಅಂತ ಎಮ್ ಎಲ್ ಸಿ ವಸುಲಾಗಿದ್ದು ಆಸ್ಪತ್ರೆಗೆ ಹೋಗಿ ಎಮ್.ಎಲ್.ಸಿ ದಾರನಾದ ಶ್ರೀ ಮಹ್ಮದ ಇಸಾಮೊದ್ದೀನ ತಂದೆ ಮಹ್ಮದ ದಸ್ತಗಿರ ವಯ|| 27 ವರ್ಷ ಜಾ|| ಮುಸ್ಲಿಂ ಉ|| ವ್ಯಾಪಾರ ಸಾ|| ವಿದ್ಯಾನಗರ ಕಲಬುರಗಿ ಈತನಿಗೆ ವಿಚಾರಣೆ ಮಾಡಿ ಫಿರ್ಯಾದಿ ಹೇಳಿಕೆ ಪಡೆದುಕೊಂಡು ಮರಳಿ ಠಾಣೆಗೆ ರಾತ್ರಿ 10.30 ಗಂಟೆಗೆ ಬಂದಿದ್ದು, ಫಿರ್ಯಾದಿ ಹೇಳಿಕೆಯ ಸಾರಾಂಶವೇನೆಂದರೆ, ನಾನು ರಿಯಲ್ ಎಸ್ಟೇಟ್ ವ್ಯಾಪಾರ ಮಾಡಿಕೊಂಡು ಕುಟುಂಬದೊಂದಿಗೆ ವಾಸವಾಗಿರುತ್ತೆನೆ. ಹೀಗಿದ್ದು ದಿನಾಂಕ: 04.01.2023 ರಂದು ಮದ್ಯಾಹ್ನ 3 ಗಂಟೆಗೆ ವಿದ್ಯಾನಗರದ ಫಯಾಜ್ ಇತನಿಗೆ ಯಾರೋ ಜಗಳ ತೆಗೆದಿರುತ್ತಾರೆ. ಬಾ ಅಂತಾ ವಿದ್ಯಾನಗರದ ನಮ್ಮ ಹುಡುಗರು ತಿಳಿಸಿದ್ದರಿಂದ ನಾನು ಪಿಡಿಎ ಇಂಜಿನಿಯರಿಂಗ್ ಕಾಲೇಜು ಹತ್ತಿರ ಹೋಗಿ ಎರಡೂ ಪಾರ್ಟಿಯವರಿಗೆ ತಿಳಿ ಹೇಳಿ ಕಳುಹಿಸಿದ್ದು ನಂತರ ನಾನು ರೈಲ್ವೇ ಸ್ಟೇಷನ ಎದುರುಗಡೆ ಇರುವ ತಾಜ್ ಹೊಟೆಲನಲ್ಲಿ ಸುಲೇಮಾನ ಅಲಿಯೊಂದಿಗೆ ಮಾತನಾಡುತ್ತಾ ಕುಳಿತಾಗ ಅಂದಾಜು ಮದ್ಯಾಹ್ನ 4 ಗಂಟೆಗೆ ವಾಜೀದ ನಮ್ಮ ಓಣಿಯವನು ಇತನು ಅಲ್ಲಿಗೆ ಬಂದು ನನಗೆ ಫೋನ ಮಾಡಿ ಹೊರಗೆ ಕರೆದಾಗ ನಾನು ಹೊರಗೆ ಬಂದೆನು. ಆಗ ಅಲ್ಲಿ ವಾಜೀದ ಹಾಗೂ ಆತನೊಂದಿಗೆ ಇನ್ನೂ 3-4 ಜನರು ನಿಂತಿದ್ದರು. ಆಗ ವಾಜೀದ ಇತನು ನಮ್ಮ ಓಣಿಯ ಫಯಾಜ್ ಇತನೊಂದಿಗೆ ಜಗಳ ತೆಗೆದವರನ್ನು ರಾಜಿ ಏಕೆ ಮಾಡಿಸಿರುತ್ತಿ ರಾಂಡ್ ಕೆ ಬಚ್ಚೆ, ತೆರೆಕೋ ಖಲ್ಲಾಸ ಕರ್ತು ಅಂತಾ ಅವಾಚ್ಯವಾಗಿ ಬೈಯ್ಯುವಾಗ ನಾನು ಸುಮ್ಮನೆ ಬಂದಿರುತ್ತೆನೆ ಜಗಳ ರಾಜಿ ಮಾಡಿರುವುದಿಲ್ಲಾ ಅಂತಾ ಅಂದರೂ ಸಹಿತ ಅವಾಚ್ಯವಾಗಿ ಬೈದು ಆತನ ಸೊಂಟದ ಬಲಭಾಗದಲ್ಲಿಟ್ಟಿದ ಮಚ್ಚು ತೆಗೆದು ನನ್ನ ಹೊಟ್ಟೆಯ ಎಡಭಾಗದಲ್ಲಿ ಚುಚ್ಚಿ ಮತ್ತೆ ನನ್ನ ಎಡಗೈ ರಟ್ಟಿಗೆ ಹೊಡೆಯುವಾಗ ನಾನು ತಪ್ಪಿಸಿಕೊಂಡಿದ್ದು ಸ್ವಲ್ಪ ತರುಚಿದ ಗಾಯವಾಗಿರುತ್ತದೆ. ಮತ್ತೊಮ್ಮೆ ಮಚ್ಚಿನಿಂದ ಹೊಡೆಯಲು ಬಂದಾಗ ಅಲ್ಲಿನ ಎಲ್ಲಾ ಜನರು ನೋಡಿ ಓಡಿ ಹೋದರು. ಅಷ್ಟರಲ್ಲಿ ಸುಲೇಮಾನ್ ಅಲಿ ಮತ್ತು ಮುಸ್ತಫಾ ತಂದೆ ಉಸ್ಮಾನ್ ಪಟೇಲ್ ಇವರು ತಾಜ್ ಹೊಟೆಲ್ ಒಳಗಿನಿಂದ ಓಡಿ ಬಂದು ಜಗಳ ಬಿಡಿಸಿದರು. ನಂತರ ವಾಜೀದ ಇತನು ಮಚ್ಚು ಅಲ್ಲಿಯೇ ಬಿಸಾಕಿ ಓಡಿಹೋದನು. ನಂತರ ನನಗೆ ಹೊಟ್ಟೆ ಮೇಲೆ ಮಚ್ಚಿನಿಂದ ಹೊಡೆದಿರುವುದರಿಂದ ನನಗೆ ನೋವಾಗುತ್ತಿರುವುದರಿಂದ ಸುಲೇಮಾನ್ ಅಲಿಯೊಂದಿಗೆ ಉಪಚಾರ ಕುರಿತು ಕೆ,ಬಿ,ಎನ್ ಆಸ್ಪತ್ರೆ ಕಲಬುರಗಿಗೆ ಬಂದು ಸೇರಿಕೆಯಾಗಿರುತ್ತೆನೆ ಮತ್ತು ಭಾರಿ ರಕ್ತಗಾಯವಾಗಿದೆ. ಕಾರಣ ನನಗೆ ಅವಾಚ್ಯ ಶಬ್ದದಿಂದ ಬೈದು ಮಚ್ಚಿನಿಂದ ಸೊಂಟದ(ಹೊಟ್ಟೆಯ) ಎಡಭಾಗಕ್ಕೆ ಚುಚ್ಚಿ ಜೀವದ ಭಯ ಹಾಕಿ ಓಡಿ ಹೋದ ವಾಜೀದ ಇತನ ವಿರುದ್ದ ಕಾನೂನು ರೀತಿ ಕ್ರಮ ಕೈಕೊಳ್ಳಬೇಕು ಅಂತಾ ಹಿಂದಿಯಲ್ಲಿ ಹೇಳಿ ಕನ್ನಡದಲ್ಲಿ ಬರೆಯಿಸಿದ ಹೇಳಿಕೆಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಬ್ರಹ್ಮಪೂರ ಪೊಲೀಸ್‌ ಠಾಣೆ :- ದಿನಾಂಕ 05/01/2023 ರಂದು 9-30 ಪಿ.ಎಂಕ್ಕೆ ಸರಕಾರಿ ತರ್ಪೇ ಪಿರ್ಯಾದಿದಾರರಾಗಿ ಶ್ರೀ ಎ.ವಾಜೀದ್ ಪಟೇಲ ಪಿ.ಐ ಸಿ.ಸಿ.ಬಿ ಘಟಕ ಕಲಬುರಗಿ ನಗರ ರವರು ವರದಿ ಮತ್ತು ಜಪ್ತಿ ಪಂಚನಾಮೆ ಆರೋಫಿ ಹಾಗೂ ಮುದ್ದೇಮಾಲಿನೊಂದಿಗೆ ಠಾಣೆಗೆ ಬಂದು ಪಿರ್ಯಾದಿ ಸಲ್ಲಿಸಿದ ಸಾರಾಂಶವೆನೆಂದರೇ,    ಇಂದು ದಿನಾಂಕ:05-01-2023 ರಂದು ಸಾಯಂಕಾಲ 7-00 ಗಂಟೆಗೆ ನಾನು ಸಿ.ಸಿ.ಬಿ. ಕಛೇರಿಯಲ್ಲಿದ್ದಾಗ ಕಲಬುರಗಿ ನಗರದ ಮೆಡಿಕಲ ಕಾಲೇಜ ಕಂಪೌಂಡ ಹತ್ತಿರ ವಿರೇಶ ನಗರ ಕಾಲೋನಿಗೆ ಹೋಗುವ ಸಾರ್ವಜನಿಕ ರಸ್ತೆಯ ಮೇಲೆ ಒಬ್ಬ ವ್ಯಕ್ತಿ ತಮ್ಮ ಲಾಭಗೋಸ್ಕರ ಸಾರ್ವಜನಿಕರಿಂದ ಹಣ ಪಡೆದು 01 ರೂಪಾಯಿಗೆ 80 ರೂಪಾಯಿ ಕೊಡುವುದಾಗಿ ಹೇಳಿ ಕಲ್ಯಾಣ ಮತ್ತು ಬಾಂಬೆ ಮಟಕಾ ಅಂಕಿ ಸಂಖ್ಯೆಗಳ ಚೀಟಿಯನ್ನು ಬರೆದುಕೊಳ್ಳುತ್ತಿದ್ದಾನೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ಸದರಿ ವಿಷಯವನ್ನು ಮೇಲಾಧಿಕಾರಿಗಳಿಗೆ ತಿಳಿಸಿ ಅವರ ಮಾರ್ಗದರ್ಶನದಲ್ಲಿ ದಾಳಿ ಮಾಡುವ ಕುರಿತು ಇಬ್ಬರೂ ಪಂಚರಾದ 1) ಶ್ರೀ ವಿಜಯಕುಮಾರ ತಂದೆ ಸಿದ್ರಾಮ ಬಡಿಗೇರ, ವ:24 ವರ್ಷ, ಜಾತಿ:ಲಿಂಗಾಯತ, ಉ:ಗ್ಯಾರೇಜ ಮೆಕ್ಯಾನಿಕ, ಸಾ:ಬಸವೇಶ್ವರ ಕಾಲೋನಿ, ಕಲಬುರಗಿ ಮೊ.ನಂ.7795553143, 2) ಮಹ್ಮದ ಮದರಸಾಬ ತಂದೆ ಖಾಜಾ ಹುಸೇನ ಸಾಬ, ವ:44 ವರ್ಷ, ಜಾತಿ:ಮುಸ್ಲಿಂ, ಉ:ಕಾರ ಡ್ರೈವರ್, ಸಾ:ಅಹೆಮದ ನಗರ ಕಾಲೋನಿ, ಆಜಾದಪೂರ ರೋಡ, ಕಲಬುರಗಿ ಮೊ.ನಂ.9945821736 ಇವರನ್ನು ಸಿ.ಸಿ.ಬಿ. ಘಟಕಕ್ಕೆ ಸಾಯಂಕಾಲ 7-20 ಗಂಟೆಗೆ ಬರಮಾಡಿಕೊಂಡು ಸದರಿ ಪಂಚರಿಗೆ ವಿಷಯ ತಿಳಿ ಹೇಳಿ ಪಂಚನಾಮೆಗೆ ಸಹಕರಿಸುವಂತೆ ಕೇಳಿಕೊಂಡ ಮೇರೆಗೆ ಉಭಯ ಪಂಚರು ಒಪ್ಪಿಕೊಂಡಿರುತ್ತಾರೆ.  ನಂತರ ನಾನು, ಪಂಚರು, ಮತ್ತು ಸಿ.ಸಿ.ಬಿ ಘಟಕ ಸಿಬ್ಬಂದಿಯವರಾದ 1) ರವೀಂದ್ರಕುಮಾರ ಹೆಚ್.ಸಿ-48, 2) ಸುನೀಲಕುಮಾರ ಹೆಚ್ಸಿ-167, 3) ಅಂಬಾಜಿ ಸಿಪಿಸಿ-131, 4) ಅರವಿಂದ ಸಿಪಿಸಿ-955, 5) ವಿಶ್ವನಾಥ ಸಿಪಿಸಿ-686, 6) ನಾಗರಾಜ ಸಿಪಿಸಿ-1257 ಎಲ್ಲರೂ ಕೂಡಿ ಸರ್ಕಾರಿ ಜೀಪ ನಂ.ಕೆಎ-32-ಜಿ-1249 ನೇದ್ದರಲ್ಲಿ ಹಾಗೂ ಕೆಲವು ಸಿಬ್ಬಂದಿಯವರು ತಮ್ಮ ತಮ್ಮ ಮೋಟಾರಸೈಕಲಗಳ ಮೇಲೆ ಸಾಯಂಕಾಲ 7-30 ಗಂಟೆಗೆ ಸಿ.ಸಿ.ಬಿ. ಕಛೇರಿಯಿಂದ ಹೊರಟು ಬಾತ್ಮಿ ಬಂದ ಸ್ಥಳವಾದ ಕಲಬುರಗಿ ನಗರದ ಮೆಡಿಕಲ ಕಾಲೇಜ ಕಂಪೌಂಡ ಹತ್ತಿರ ವಿರೇಶ ನಗರ ಕಾಲೋನಿಗೆ ಹೋಗುವ ರಸ್ತೆಯ ಹತ್ತಿರ ಸಾಯಂಕಾಲ 7-45 ಗಂಟೆಗೆ ತಲುಪಿ ಸ್ವಲ್ಪ ದೂರದಲ್ಲಿ ವಾಹನಗಳನ್ನು ನಿಲ್ಲಿಸಿ ಎಲ್ಲರೂ ವಾಹನದಿಂದ ಇಳಿದು ಅಲ್ಲಿಯೇ ಮರೆಯಲ್ಲಿ ನಿಂತು ನೋಡಲಾಗಿ ಅಲ್ಲಿ ಒಬ್ಬ ವ್ಯಕ್ತಿ ಸಾರ್ವಜನಿಕ ರಸ್ತೆಯ ಮೇಲೆ ನಿಂತುಕೊಂಡು ಅಲ್ಲಿ ಹೋಗಿ ಬರುವ ಸಾರ್ವಜನಿಕರಿಂದ 1 ರೂ.ಗೆ 80 ರೂ. ಕೊಡುವುದಾಗಿ ಕಲ್ಯಾಣ ಮತ್ತು ಬಾಂಬೆ ಮಟಕಾ ಅಂಕಿ ಸಂಖ್ಯೆಗಳ ಚೀಟಿ ಬರೆದುಕೊಳ್ಳುವುದನ್ನು ನಾನು ಮತ್ತು ಪಂಚರು ನೋಡಿ ಖಚಿತಪಡಿಸಿಕೊಂಡು, ಪಂಚರ ಸಮಕ್ಷಮ ರಾತ್ರಿ 8-00 ಗಂಟೆಗೆ ಸಿಬ್ಬಂದಿಯವರ ಸಹಾಯದಿಂದ ಒಮ್ಮಲ್ಲೇ ಎಲ್ಲರೂ ಕೂಡಿ ಸದರಿ ವ್ಯಕ್ತಿಗೆ ಹಿಡಿದಿದ್ದು, ನಂತರ ಸದರಿಯವನ ಆತನ ಹೆಸರು ವಿಳಾಸ ವಿಚಾರಿಸಲು ರುಪೇಶ ತಂದೆ ಶಿವಲಿಂಗಪ್ಪ ಧರೆನೂರ, ವ:33 ವರ್ಷ, ಜಾತಿ:ಮಾದಿಗ, ಉ:ಪೆಂಟಿಂಗ್ ಕೆಲಸ, ಸಾ:ವಿರೇಶನಗರ ಕಲಬುರಗಿ ಅಂತಾ ತಿಳಿಸಿದನು. ನಂತರ ಸದರಿ ಆರೋಪಿಯ ಅಂಗ ಶೋಧನೆ ಮಾಡಲಾಗಿ ಈತನ ಹತ್ತಿರ ಮಟಕಾ ಜೂಜಾಟಕ್ಕೆ ಸಂಬಂಧಿಸಿದ ರೂ.4,900/- ನಗದು ಹಣ, ಮತ್ತು ಮಟಕಾ ಚೀಟಿ ಅ.ಕಿ.ರೂ.00/-, ಒಂದು ಬಾಲ ಪೆನ್ ಅ.ಕಿ.ರೂ.00/-, ಮತ್ತು ರೆಡಮಿ ಮೊಬೈಲ್ ಅ.ಕಿ. ರೂ.2500/- ದೊರೆತಿದ್ದು, ಅದರ ನಂಬರ ವಿಚಾರಿಸಲು 9972536426 ಅಂತಾ ತಿಳಿಸಿದ್ದು, ಅದರ ಐ.ಎಂ.ಇ.ಐ ನಂಬರ ಪರಿಶೀಲಿಸಲು (861269056337339/01, 861269056337347/01) ಅಂತಾ ಇರುತ್ತದೆ. ನಂತರ ಸದರಿಯವನಿಗೆ ಮಟಕಾ ಚೀಟಿಗಳನ್ನು ಯಾರಿಗೆ ಕೊಡುತ್ತೀಯಾ ಅಂತಾ ವಿಚಾರಿಸಿದಾಗ ಮುನೀರ, ಸಾ:ದರ್ಗಾ ಹತ್ತಿರ ಕಲಬುರಗಿ (ಮೊ.ನಂ.7090839999) ಈತನಿಗೆ ಕೊಡುತ್ತೇನೆ ಅಂತಾ ತಿಳಿಸಿದನು. ಸದರಿ ಜಪ್ತುಪಡಿಸಿಕೊಂಡ ಮುದ್ದೇಮಾಲುಗಳಿಗೆ ಪಂಚರು ಸಹಿ ಮಾಡಿದ ಚೀಟಿಯನ್ನುಅಂಟಿಸಿ ಒಂದು ಕವರನಲ್ಲಿ ಹಾಕಲಾಯಿತು. ಸದರಿ ಜಪ್ತಿ ಪಂಚನಾಮೆಯನ್ನು ರಾತ್ರಿ 8-00 ಗಂಟೆಯಿಂದ 9-00 ಗಂಟೆಯವರೆಗೆ ಸ್ಥಳದಲ್ಲಿ ಕುಳಿತು ಪಂಚರ ಸಮಕ್ಷಮದಲ್ಲಿ ಜಪ್ತಿಪಡಿಸಿಕೊಂಡು ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಚೌಕ ಪೊಲೀಸ್‌ ಠಾಣೆ :-  ದಿನಾಂಕ 05/01/2023 ರಂದು ರಾತ್ರಿ 8-30 ಗಂಟೆಗೆ  ಶ್ರೀ ರಾಜಶೇಖರ ವಿ. ಹಳಗೋಧಿ ಪಿ.ಐ ಚೌಕ ಪೊಲೀಸ್ ಠಾಣೆ ಕಲಬುರಗಿ ನಗರ ಇವರು ಠಾಣೆಗೆ ಹಾಜರಾಗಿ ತಮ್ಮದೊಂದು ಕನ್ನಡದಲ್ಲಿ ಗಣಕೀಕೃತ ಮಾಡಿಸಿದ ಸರಕಾರಿ ತರ್ಫೇ ದೂರು ಕೊಟ್ಟಿದ್ದರ ಸಾರಾಂಶವೆನೆಂದೆರೆ,   ನಾನು, ರಾಜಶೇಖರ ವಿ. ಹಳಗೋಧಿ ಪಿ.ಐ ಚೌಕ ಪೊಲೀಸ್ ಠಾಣೆ ಕಲಬುರಗಿ ನಗರ,  ಸರಕಾರಿ ತರ್ಫೇಯಿಂದ ಫಿರ್ಯಾದಿ ಸಲ್ಲಿಸುವ ಸಾರಾಂಶವೆನೆಂದರೆ,  ದಿನಾಂಕ 01/02/2022 ರಿಂದ ಇಲ್ಲಿಯವರೆಗೆ ಚೌಕ ಪೊಲೀಸ ಠಾಣೆಯಲ್ಲಿ ಪಿ.ಐ ಅಂತ ಕರ್ತವ್ಯ ನಿರ್ವಹಿಸಿಕೊಂಡು ಬಂದಿರುತ್ತೇನೆ.  ನಿನ್ನೆ ದಿನಾಂಕ 04/01/2023 ರಂದು ಮಧ್ಯಾಹ್ನ 01-00 ಗಂಟೆ ಸುಮಾರಿಗೆ ಫಿರ್ಯಾದಿ ಜಗದೀಶನ ತಮ್ಮನಾದ ಪ್ರಶಾಂತ @ ಪಿಂಟ್ಯಾ ತಂದೆ ಐರಾವಣ ಕುಂಬಾರ ವ:30 ವರ್ಷ ಸಾ: ಧನ್ನೂರ (ಅರ್) ಗ್ರಾಮ ಹಾ:ವ: ಚನ್ನವೀರ ನಗರ ಕಲಬುರಗಿ ಇತನು ಆಪಾದಿತನಾದ  ಮಂಜುನಾಥ ತಂದೆ ಶಿವುಕುಮಾರ ಮಠಪತಿ ಸಾ: ಚನ್ನವೀರ ನಗರ ಕಲಬುರಗಿ ಇತನ ಹೆಂಡತಿಯೊಂದಿಗೆ ಅನೈತಿಕ ಸಂಬಂಧ ಇಟ್ಟುಕೊಂಡಿರುತ್ತಾನೆ ಎಂದು ಸಂಶಯ ಪಟ್ಟು ಅದೇ ದ್ವೇಷದಿಂದ ಫಿರ್ಯಾದಿ ತಮ್ಮನಾದ ಪ್ರಶಾಂತ @ ಪಿಂಟ್ಯಾ ಇತನಿಗೆ ಮಚ್ಚು ಮತ್ತು ಕಲ್ಲುಗಳಿಂದ ಕಲಬುರಗಿ ನಗರದ ಹುಮನಾಬಾದ ರಿಂಗ ರೋಡಿಗೆ ಇರುವ ಭವಾನಿ ನಗರ ಪೂಜಾರಿ ಚೌಕ ಹತ್ತಿರ ಇರುವ ದತ್ತು ಗಾಂಜಲೆ ಇವರ ಮನೆ ಎದುರುಗಡೆ ಟೆಂಗಿನ ಅಂಗಡಿ ಎದುರುಗಡೆ ಇರುವ ಖುಲ್ಲಾ ಜಾಗೆಯಲ್ಲಿ ತಲೆ ಮೇಲೆ ಹೊಡೆದು ಭಾರಿ ರಕ್ತಗಾಯಗೊಳಿಸಿ ಕೊಲೆ ಮಾಡಿರುತ್ತಾನೆ. ಅಂತಾ ಶ್ರೀ ಜಗದೀಶ ತಂದೆ ಐರಾವಣ ಕುಂಬಾರ ಸಾ; ಚನ್ನವೀರ ನಗರ ಕಲಬುರಗಿ ಇವರು ಕೊಟ್ಟ ಹೇಳಿಕೆ ಫಿರ್ಯಾದಿ ಮೇಲಿಂದ ನಮ್ಮ ಚೌಕ ಪೊಲೀಸ ಠಾಣೆ ಗುನ್ನೆ ನಂಬರ 02/2023 ಕಲಂ 302 ಐಪಿಸಿ ಪ್ರಕಾರ ಪ್ರಕರಣ ದಾಖಲಾಗಿದ್ದು ಇರುತ್ತದೆ.  ಈ ಪ್ರಕರಣದಲ್ಲಿ ತನಿಖೆ ಕೈ ಕೊಂಡು ಶವ ಪಂಚನಾಮೆ ಹಾಗೂ  ಗುನ್ನೆ ಜಾಗೆ ಪಂಚನಾಮೆ,  ಇತರೇ ತನಿಖೆ ಕೈ ಕೊಂಡು ಸಾಕ್ಷಿದಾರರ  ಹೇಳಿಕೆ ಪಡೆದುಕೊಂಡು,  ಇಂದು ದಿನಾಂಕ 05/01/2023 ರಂದು ಬೆಳಿಗ್ಗೆ 08-15 ಗಂಟೆಗೆ ಆರೋಪಿ ಪತ್ತೆ ಕುರಿತು ನಮ್ಮ ಠಾಣೆಯ ಶ್ರೀ ಹುಸೇನಬಾಷಾ ಎ.ಎಸ್.ಐ., ಸಿಹೆಚಸಿ 226 ಸಿದ್ರಾಮಯ್ಯ, ಸಿಪಿಸಿ 328 ಫಿರೋಜ, ಸಿಪಿಸಿ 196 ಸೈಯ್ಯದ ತೌಸೀಫ ಹುಸೇನ, ಸಿಪಿಸಿ 299 ಮೋಸಿನ ಇವರಿಗೆ ನೇಮಿಸಿ ಕಳುಹಿಸಿದ್ದು, ಸದರಿಯವರು ಆರೋಪಿತನಾದ ಮಂಜುನಾಥ ಇತನು ಕಲಬುರಗಿ ನಗರ ರೇಲ್ವೆ ನಿಲ್ದಾಣದ ಹತ್ತಿರ ಇರುವ ಬಗ್ಗೆ ಮಾಹಿತಿ ಪಡೆದುಕೊಂಡು ಬೆಳಿಗ್ಗೆ 11-00 ಗಂಟೆಗೆ ವಶಕ್ಕೆ ಪಡೆದುಕೊಂಡು ಬೆಳಿಗ್ಗೆ 11-30 ಗಂಟೆಗೆ ಚೌಕ ಪೊಲೀಸ ಠಾಣೆಯ ಉಕ್ಕಡ ಠಾಣೆಯಲ್ಲಿ ನನ್ನ ಮುಂದೆ ತಂದು ಹಾಜರಪಡಿಸಿದ್ದು, ನಾನು, ಸದರಿ ಅರೋಪಿತನಿಗೆ ಕುಲಂಕುಶವಾಗಿ ವಿಚಾರಣೆ ಮಾಡಲು ಅವನು ತನ್ನ ಹೆಸರು ಮಂಜುನಾಥ ತಂದೆ   ಶಿವುಕುಮಾರ ಮಠಪತಿ @ ಸ್ಥಾವರ ಮಠ ವ:26 ವರ್ಷ ಉ: ಕಾರ ಚಾಲಕ ಜಾತಿ ಜಂಗಮ  ಸಾ: ಎಕಲವ್ಯ ಶಾಲೆ ಹತ್ತಿರ ಚನ್ನವೀರ ನಗರ  ಕಲಬುರಗಿಅಂತಾ ಹೇಳಿದ್ದು,  ಪ್ರಶಾಂತ @ ಪಿಂಟ್ಯಾ ಇತನಿಗೆ ಕೊಲೆ ಮಾಡಿರುವ ಬಗ್ಗೆ ತಪ್ಪು ಒಪ್ಪಿಕೊಂಡಿದ್ದು, ಸದರಿ ಆರೋಪಿತನಿಗೆ ದಸ್ತಗಿರಿ ಮಾಡಿ ದಸ್ತಗಿರಿ ಕ್ರಮ ಜರುಗಿಸಿದೆನು.  ಮತ್ತು ಅವನ ವಿವರವಾದ ಸ್ವಖುಷಿ ಹೇಳಿಕೆ ಪಡೆದುಕೊಂಡೆನು. ನಂತರ ಆರೋಪಿತನ ಸ್ವಖುಷಿ ಹೇಳಿಕೆಯಂತೆ ಮತ್ತು ಆರೋಪಿತನ ತೋರಿಕೆಯಂತೆ ಕೃತ್ಯ ಸ್ಥಳ ಮತ್ತು ಕೃತ್ಯಕ್ಕೆ ಉಪಯೋಗಿಸಿದ ಮಚ್ಚು, ಅವನ ಧರಿಸಿದ ರಕ್ತ ಹತ್ತಿದ ಬಟ್ಟೆಗಳ ಮತ್ತು  ಜಪ್ತಿ/ ಪಂಚನಾಮೆ ಇತರೇ ತನಿಖೆ ಕುರಿತು ಪಂಚರಾದ 1)ಶ್ರೀ ಪ್ರಶಾಂತ ತಂದೆ ಅಶೋಕ ಬಗಲಿ ಸಾ:ಸೈಯ್ಯದ ಚಿಂಚೋಳಿ ಕ್ರಾಸ ಶಿವಶಕ್ತಿ ನಗರ ಕಲಬುರಗಿ 2)ಶ್ರೀ ಅಶೋಕ ತಂದೆ ಗೋಪಿ ರಾಠೋಡ ಸಾ:ಸೈಯ್ಯದ ಚಿಂಚೋಳಿ ಕ್ರಾಸ ಆಟೋ ನಗರ ಕಲಬುರಗಿ ಇವರುಗಳನ್ನು ಬರಮಾಡಿಕೊಂಡು ಆರೋಪಿ ಮಂಜುನಾಥನೊಂದಿಗೆ ನಮ್ಮ ಠಾಣೆಯ ಜೀಪು ಕೆಎ32 ಜಿ 874 ರಲ್ಲಿ ನಾನು ಮತ್ತು ಪಂಚರು ಹಾಗೂ ಸಿಬ್ಬಂದಿಯವರಾದ ಶ್ರೀ ಹುಸೇನಬಾಷಾ ಎ.ಎಸ್.ಐ., ಶ್ರೀ ಸಿದ್ರಾಮಯ್ಯ ಸಿಹೆಚಸಿ 226, ಸಿಪಿಸಿ 196 ಸೈಯ್ಯದ ತೌಸೀಫ ಹುಸೇನ ಇವರೊಂದಿಗೆ ಕುಳಿತುಕೊಂಡು ಉಕ್ಕಡ ಠಾಣೆಯಿಂದ ಹೊರಟಿದ್ದು, ಜೀಪು ಎಪಿಸಿ 07 ಮಾಳಪ್ಪ ಇವರು ಜೀಪು ಚಾಲನೆ ಮಾಡುತ್ತಿದ್ದು, ಆರೋಪಿ ಮಂಜುನಾಥ ತೋರಿಸಿದಂತೆ ಸರಾಯಿ ಕುಡಿಯಲು ಹೋದ ಸ್ಥಳ ಸಮರ್ಥ ವೈನ ಶಾಪ್, ಕೊಲೆ ಮಾಡಿದ ಸ್ಥಳ ದತ್ತು ಗಾಂಜಲೆ ಮನೆ ಎದುರುಗಡೆ ಇರುವ ಟೆಂಗಿನ ಅಂಗಡಿ ಎದುರಿನ ಖುಲ್ಲಾ ಜಾಗೆ, ಮಚ್ಚು ಮುಚ್ಚಿಟ್ಟ ಸ್ಥಳ, ತನ್ನ ತಲೆ ಕೂದಲು ಬೊಳಿಸಿಕೊಂಡು ಮಂಜುನಾಥ ಹೇರ ಡ್ರೆಸಸ ಕಟ್ಟಿಂಗ ಶಾಪ್ ಹೋಗಿ ಸ್ಥಳ ಪರಿಶೀಲನೆ ಮತ್ತು ಜಪ್ತಿ ಪಂಚನಾಮೆ ಕೈಕೊಂಡು ಆರೋಪಿ ಮಂಜುನಾಥ ನಿನ್ನೆ ಕೃತ್ಯ ಎಸಗುವ ಕಾಲಕ್ಕೆ ಮಂಜುನಾಥ ಧರಿಸಿದ ಬಟ್ಟೆಗಳಿಗೆ ರಕ್ತ ಹತ್ತಿದ್ದು, ಅವುಗಳನ್ನು ಕೂಡಾ ಜಪ್ತ ಪಡಿಸಿಕೊಳ್ಳುವ ಕುರಿತು ಆರೋಪಿ ಮಂಜುನಾಥ ಇತನ  ತೋರಿಕೆಯಂತೆ ದುಬೈ ಕಾಲನಿಯ, ಯುನಾನಿ ಆಸ್ಪತ್ರೆ ಹತ್ತಿರ ಇರುವ ಹಾಳು ಬಿದ್ದ ಹಳೆಯ ಲೆಫರಿಸಿ ಆಸ್ಪತ್ರೆಯ ಕಟ್ಟಡದಲ್ಲಿ ಮುಚ್ಚಿಟಿರುವ ಬಗ್ಗೆ ತಿಳಿಸಿದಾಗ ಜೀಪಿನಿಂದ ಕೆಳೆಗೆ ಇಳಿದು ಅವನ ಮುಂದೆ ಹೋಗುತ್ತಿದ್ದಾಗ ಅವನಿಗೆ ಹಿಂಬಾಲಿಸುತ್ತಾ ನಾನು ಮತ್ತು ಈ ಮೇಲಿನ ಸಿಬ್ಬಂದಿಯವರು ಹಾಗೂ ಪಂಚರು ಹೋದಾಗ, ಆರೋಪಿ ಮಂಜುನಾಥ ಹಳೆಯ ಕಟ್ಟಡ ಒಳಗೆ ಹೋಗಿ ಮತ್ತೊಂದು ರೂಮು ಇದ್ದು, ಅಲ್ಲಿ ಒಳಗಡೆ ಹೋಗಿ ಏಕಿ ಮಾಡುವ ಸ್ಥಳದಲ್ಲಿ ಬಟ್ಟೆಗಳು ಇಟ್ಟಿರುತ್ತೇನೆ ತೋರಿಸುತ್ತಾ ಕೆಳಗಡೆ ಬಗ್ಗಿ ಬಟ್ಟೆಯಲ್ಲಿ ಮುಚ್ಚಿಟ್ಟ ಒಂದು ಚಾಕು ಒಮ್ಮೇಲೆ ತೆಗೆದುಕೊಂಡು, ಆರೋಪಿತನ ಬೆಂಗಾವಲಿಗೆ ಹಿಂದೆ ಇದ್ದ ನಮ್ಮ ಸಿಬ್ಬಂದಿಯಾದ ಸಿದ್ರಾಮಯ್ಯ ಸಿಹೆಚಸಿ 226 ಇತನ ಮೇಲೆ ಹಲ್ಲೆ ಮಾಡಲು ಮುಂದಾಗ ನಾನು ಪೊಲೀಸರ ಹಲ್ಲೆ ಮಾಡಬೇಡಾ ಅಂತಾ ಹೇಳಿದಾಗೂ ಸಹಾ ಆರೋಪಿತನು ತನ್ನ ಕೈಯಲ್ಲಿದ್ದ ಚಾಕುವಿನಿಂದ ಸಿದ್ರಾಮಯ್ಯ ಸಿಹೆಚಸಿ 226 ಇವರ ಕುತ್ತಿಗೆ ಹೊಡೆದು ಕೊಲೆ ಮಾಡಲು ಪ್ರಯತ್ನಿಸಿದಾಗ, ಸಿದ್ರಾಮಯ್ಯ ಆತ್ಮರಕ್ಷಣೆಗಾಗಿ ಎಡಮುಂಗೈಮುಂದೆ ತಂದಿದ್ದು ಎಡಗೈ ಮಚ್ಚು ತಾಗಿ ರಕ್ತಗಾಯ ವಾಗಿರುತ್ತದೆ.ಅವನಿಗೆ ನಾನು ಮತ್ತು ಉಳಿದ ಸಿಬ್ಬಂದಿಯವರು ಅವನಿಗೆ ಹಿಡಿಯಲು ಮುಂದಾದಾಗ ಮತ್ತೆ ಮಂಜುನಾಥ ಇತನು ತನ್ನ ಕೈಯಲ್ಲಿದ್ದ ಚಾಕುನಿಂದ ನಮ್ಮ ಮೇಲೆ ಹಲ್ಲೆ ಮಾಡಲು ಮುಂದಾದಾಗ ಅವನಿಗೆ ಪೊಲೀಸ ಕರ್ತವ್ಯದಲ್ಲಿ ಅಡೆ ತಡೆ ಮಾಡಬೇಡಾ ಶರಣಾಗು ಅಂತಾ ಎಚ್ಚರಿಕೆ ಮಾಡಿದರೂ ಕೂಡಾಅವನು ಮತ್ತೆ ನಮ್ಮ ಮೇಲೆ ಹಲ್ಲೆ ಮಾಡಲು ಮುಂದಾದಾಗ ನನ್ನ ಮತ್ತು ಸಿಬ್ಬಂದಿಯವರ ಪ್ರಾಣ ಮತ್ತುಆತ್ಮ ರಕ್ಷಣೆ ಕುರಿತು ನನ್ನ ಹತ್ತಿರವಿದ್ದ ಸವರ್ಿಸ ಪಿಸ್ತೂಲದಿಂದ ಒಂದು ಸುತ್ತು ಗುಂಡು ಕಿಡಿಕಿಯಿಂದ ಗಾಳಿಯಲ್ಲಿ ಹಾರಿಸಿ ಎಚ್ಚರಿಕೆ ಕೊಟ್ಟರು ಸಹಾ ಆರೋಪಿ ಮಂಜುನಾಥ ಇತನು ಮತ್ತೆ ತನ್ನ ಕೈಯಲ್ಲಿದ್ದ ಚಾಕುನಿಂದ ಸಿದ್ರಾಮಯ್ಯ ಹೆಚಸಿ ಕುತ್ತಿಗಿಗೆ ಹಲ್ಲೆ ಮಾಡಲು ಮುಂದಾದಾಗ, ಅವನು ಮತ್ತೆ ತನ್ನ ಎಡಗೈ ಮುಂಗೈ ಅಡ್ಡ ತಂದಾಗ ಚಾಕು ಏಟು ಸಿದ್ರಾಮಯ್ಯನ ಕೈ ಕೆಳೆಗೆ ಬೀಳಲು ಮಂಜುನಾಥ ಇತನು ಸಿದ್ರಾಮಯ್ಯ ಮತ್ತು ಇನ್ನುಳಿದ ನನಗೆ ಮತ್ತು ನಮ್ಮ ಸಿಬ್ಬಂದಿಯವರಿಗೆ ಕೊಲೆ ಮಾಡುತ್ತಾನೆ ಎಂದು ತಿಳಿದು ಪ್ರಾಣ ಮತ್ತು ಆತ್ಮರಕ್ಷಣೆಗಾಗಿ ಸರ್ವೀಸ ಪಿಸ್ತೂಲನಿಂದ ಒಂದು ಸುತ್ತು ಗುಂಡು ಮಂಜುನಾಥ ಇತನ ಬಲಗಾಲ ಮೊಳಕಾಲ ಹತ್ತಿರ ಹೊಡೆದಾಗ ಅವನು ನೆಲಕ್ಕೆ ಕುಸಿದು ಬಿದ್ದನು. ಕೂಡಲೇ ನಾನು ಮತ್ತು ಸಿಬ್ಬಂದಿಯವರು ಮಂಜುನಾಥನಿಗೆ ವಶಕ್ಕೆ ತೆಗೆದುಕೊಂಡೇವು. ಈ ವಿಷಯವನ್ನು ಕಂಟ್ರೋಲ ರೂಮ ಮುಖಾಂತರ ನಮ್ಮ ಮೇಲಾಧಿಕಾರಿಯವರಿಗೆ ಮಾಹಿತಿ ತಿಳಿಸಿದನು. ಈ ಘಟನೆಯ ಇಂದು ದಿನಾಂಕ 05/01/2023 ರಂದು ಸಂಜೆ 4-45 ಗಂಟೆಯಿಂದ ಸಂಜೆ 4-50 ಗಂಟೆಯ ಅವಧಿಯಲ್ಲಿ ಜರುಗಿರುತ್ತದೆ. ಆರೋಪಿ ಮತ್ತು ಗಾಯಗೊಂಡ ಸಿಬ್ಬಂದಿ ಸಿದ್ರಾಮಯ್ಯ ಹೆಚಸಿ 226 ಇವರಿಗೆ ರಕ್ತಸ್ರಾವ ಆಗುತ್ತಿರುವುದರಿಂದ ಅವರಿಗೆ ಉಪಚಾರ ಕುರಿತು ಕೂಡಲೇ 108 ಅಂಬುಲೈನ್ಸಗೆ ಕರೆ ಮಾಡಿದಾಗ, ಸ್ವಲ್ಪ ಸಮಯದಲ್ಲಿ 108 ಅಂಬುಲೈನ್ಸ ಬಂದು ನಂತರ ಗಾಯಗೊಂಡ ಇಬ್ಬರಿಗೂ ಉಪಚಾರ ಕುರಿತು ಕಲಬುರಗಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ತಂದು ಆರೋಪಿ ಮಂಜುನಾಥನಿಗೆ ಸರಕಾರಿ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿ, ನಮ್ಮ ಸಿಬ್ಬಂದಿಯಾದ ಸಿದ್ರಾಮಯ್ಯ ಇತನಿಗೆ ಯುನೈಟೆಡ ಆಸ್ಪತ್ರೆ ಉಪಚಾರ ಕುರಿತು ಸೇರಿಕೆ ಮಾಡಿರುತ್ತೇನೆ. ತದನಂತರ ಇಬ್ಬರು ಗಾಯಗಳುದಾರರನ್ನು ಉಪಚಾರ ಮಾಡಿಸಿದ ನಂತರ ಠಾಣೆಗೆ ಬಂದು ದೂರು ಕೊಟ್ಟಿರುತ್ತೇನೆ. ನಾವು ಸರಕಾರಿ ಕರ್ತವ್ಯ ನಿರ್ವಹಿಸಿದ್ದನ್ನು ತಡೆದು ಚಾಕುನಿಂದ ಹಲ್ಲೆ ಮತ್ತು ಬಲ ಪ್ರಯೋಗ ಮಾಡಿ ನಮ್ಮ ಸಿಬ್ಬಂದಿ ಜನರಿಗೆ ಗಂಭೀರ ಸ್ವರೂಪದ ಗಾಯ ಮಾಡಿ ಮಾರಣಾಂತಿಕ ಹಲ್ಲೆ ಮಾಡಿ ಕೊಲೆ ಮಾಡಲು ಪ್ರಯತ್ನಿಸಿ ಆರೋಪಿತನಾದ ಮಂಜುನಾಥ ತಂದೆ ಶಿವುಕುಮಾರ ಮಠಪತಿ @ ಸ್ಥಾವರ ಮಠ ವ:26 ವರ್ಷ ಉ: ಕಾರ ಚಾಲಕ ಜಾತಿ ಜಂಗಮ  ಸಾ:ಎಕಲವ್ಯ ಶಾಲೆ ಹತ್ತಿರ ಚನ್ನವೀರ ನಗರ  ಕಲಬುರಗಿ ಇತನ  ಮೇಲೆ ಕಾನೂನು ಕ್ರಮ ಕೈಕೊಳ್ಳಲು ಕೋರಿಕೆ. ಎಂದು ಕೊಟ್ಟ ಸರಕಾರಿ ತರ್ಫೇ ದೂರಿನ ಆಧಾರದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ. 

ಇತ್ತೀಚಿನ ನವೀಕರಣ​ : 07-01-2023 12:36 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080