ಅಭಿಪ್ರಾಯ / ಸಲಹೆಗಳು

ಸಂಚಾರಿ-೦೨ ಪೊಲೀಸ ಠಾಣೆ :- ಇಂದು ಮಾನ್ಯರವರಲ್ಲಿ ಅರಿಕೆ ಮಾಡಿಕೊಳ್ಳುವುದೆನೆಂದರೆ,  ಇಂದು ದಿನಾಂಕ ೦೪/೧೦/೨೦೨೧ ರಂದು ಬೆಳಿಗ್ಗೆ ೬-೦೦ ಎ.ಎಮ್ ಕ್ಕೆ ಶ್ರೀ ಪಂಡರಿನಾಥ ತಂದೆ ಕಾಶಣ್ಣ ಕುನಾಳೆ ವಯಃ ೪೮  ವರ್ಷ ಜಾತಿಃ ಬೇಡರ ಉಃ ಒಕ್ಕಲುತನ ಸಾಃ ಕೊಹಿನೂರ ವಾಡಿ ತಾಃ ಬಸವಕಲ್ಯಾಣ ಜಿಲ್ಲಾಃ ಬೀದರ ಇವರು ಠಾಣೆಗೆ ಹಾಜರಾಗಿ ಹೇಳಿಕೆ ಫರ‍್ಯಾಧಿ ನೀಡಿದ್ದು ಸಾರಂಶವೆನೆಂದರೆ, ನಿನ್ನೆ ದಿನಾಂಕ ೦೩/೧೦/೨೦೨೧ ರಂದು ನಮ್ಮ ಅಣ್ಣನ ಮಗ ಹುಸೇನಿ ಈತನು ತನ್ನ ಹೆಂಡತಿಯ ಕಾಕನಾದ ಮಲ್ಲಿಕರ‍್ಜುನ ತಂದೆ ಕಾಶಿರಾಯ ಮಂಡಲಿ ಈತನಿಗೆ ಕಲಬುರಗಿ ಬಸ ಸ್ಟ್ಯಾಂಡಿಗೆ ಬಿಡುವ ಕುರಿತು ಮಲ್ಲಿಕರ‍್ಜುನ ಈತನ ಮೋಟರ ಸೈಕಲ ಹೊಂಡಾ ಶೈನ್ ಮೋಟರ ಸೈಕಲ ನಂ. ಕೆಎ ೫೬ ಇ ೩೧೫೭ ನೇದ್ದರ ಮೇಲೆ ನಮ್ಮೂರಿನಿಂದ ಮಧ್ಯಾಹ್ನ ಕಲಬುರಗಿ ಕಡೆಗೆ ಬಂದಿದ್ದು, ಮುಂದೆ ರಾತ್ರಿ ೧೦:೦೦ ಗಂಟೆ ಸುಮಾರಿಗೆ ನಮ್ಮೂರಿನ ಕಲಬುರಗಿಯಲ್ಲಿರುವ ರಾಜಕುಮಾರ ತಂದೆ ಶಂಕರ ಪೂಜಾರಿ ಈತನು ಫೋನ್ ಮಾಡಿ ತಿಳಿಸಿದ್ದೆನೆಂದರೆ, ಕಲಬುರಗಿ ಹುಮ್ನಾಬಾದ ರೋಡಿನ ಕಪನೂರದ ಅಪ್ಪಾವಿಲ್ಸದ ಹತ್ತೀರ ಹುಸೇನಿ ಕುನಾಳೆ ಈತನು ಮೋಟರ ಸೈಕಲ ಮೇಲೆ ಹೋಗುವಾಗ ಇನ್ನೊಂದು ಮೋಟರ ಸೈಕಲ ಅಪಘಾತವಾಗಿ ಭಾರಿಗಾಯವಾಗಿ ಮುಖಕ್ಕೆ, ತಲೆಗೆ ಮತ್ತು ಕೈಗೆ ರಕ್ತಗಾಯವಾಗಿ ಬಿದ್ದಿದ್ದು, ಬಿದ್ದವನಿಗೆ ಕಲಬುರಗಿ ಸರಕಾರಿ ಆಸ್ಪತ್ರೆಗೆ ಅಂಬುಲೇನ್ಸದಲ್ಲಿ ಕಳುಹಿಸಿಕೊಡುತ್ತಿರುತ್ತೆವೆ. ಸದರಿ ಘಟನೆಯು ರಾತ್ರಿ ೮:೫೦ ಗಂಟೆ ಸುಮಾರಿಗೆ ಸಂಭವಿಸಿರುತ್ತದೆ ಅಂತಾ  ವಿಷಯವನ್ನು ಆತನ ಫೋನಿನಿಂದ ಯಾರೋ ಫೋನ್ ಮಾಡಿ ತಿಳಿಸಿರುತ್ತಾರೆ ಅಂತಾ ಅವರಿಗೆ ತಿಳಿಸಿದ್ದು, ಕೂಡಲೇ ನಾನು ಗಾಬರಿಗೊಂಡು ನನ್ನ ಅಣ್ಣ ಸುಭಾಷ ಹಾಗು ನಮ್ಮೂರಿನ ಸುನೀಲಕುಮಾರ ಅಡೆಪಗೋಳ ಇವರೊಂದಿಗೆ ಸರಕಾರಿ ಆಸ್ಪತ್ರೆ ಕಲಬುರಗಿಗೆ ಬಂದು ಮಗನನ್ನು ನೋಡಲಾಗಿ ಮುಖಕ್ಕೆ, ತಲೆಗೆ, ಕೈಗೆ ರಕ್ತಗಾಯವಾಗಿ ಮೃತ ಪಟ್ಟಿದ್ದು ಇರುತ್ತದೆ. ವಿಚಾರಣೆಯಲ್ಲಿ ವಿಷಯಗೊತ್ತಾಗಿದ್ದೆನೆಂದರೆ, ನಮ್ಮ ಮಗ ಹುಸೇನಿ ಈತನು ಅವರ ಚಿಕ್ಕ ಮಾಮಾ ಮಲ್ಲಿಕಾಜರ್ುನ ಮಂಡಲಿ ಈತನಿಗೆ ಕಲಬುರಗಿಗೆ ಬಿಟ್ಟು ರಾತ್ರಿ ೮:೪೦ ಗಂಟೆ ಸುಮಾರಿಗೆ ನಮ್ಮೂರಿನ ಕಡೆಗೆ ಹೋಗುವಾಗ ಕಪನೂರದ ಅಪ್ಪಾವಿಲ್ಸದ ಹತ್ತೀರ ಮೆಸ್ಟ್ರೊ ಮೋಟರ ಸೈಕಲ ನಂ. ಕೆಎ ೩೨ ಇ.ಕೆ ೮೨೩೪ ನೇದ್ದರ ಸವಾರನು ಎದುರುಗಡೆಯಿಂದ ಅತಿವೇಗ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ನಮ್ಮ ಮಗನ ಮೋಟರ ಸೈಕಲಗೆ ಅಪಘಾತ ಪಡಿಸಿದ್ದು, ಇದರಿಂದ ಮಗನು ಭಾರಿಗಾಯಗೊಂಡು ಸ್ಧಳದಲ್ಲಿ ಮೃತ ಪಟ್ಟಿದ್ದು, ಘಟನೆಯನ್ನು ನೋಡಿದವರ ಬಗ್ಗೆ ನಂತರ ತಿಳಿಸುತ್ತೆವೆ. ಈ ವಿಷಯದಲ್ಲಿ ಮೋಸ್ಟ್ರೊ ಮೋಟರ ಸೈಕಲ ನಂ. ಕೆಎ ೩೨ ಇ.ಕೆ ೮೨೩೪ ನೇದ್ದರ ಸವಾರನು ಅಪಘಾತ ಪಡಿಸಿ ಹಾಗೆ ಅಲ್ಲಿಂದ ಓಡಿ ಹೋಗಿದ್ದು, ಆತನ ವಿರುದ್ಧ ಕಾನುನು ಕ್ರಮ ಕೈಗೊಳ್ಳಬೇಕೆಂದು ಕೊಟ್ಟ ಫರ‍್ಯಾಧಿ  ಹೇಳಿಕೆ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.    

 ಅಶೋಕ  ನಗರ ಪೊಲೀಸ್ :- ಇಂದು ದಿನಾಂಕ:೦೪.೧೦.೨೦೨೧ ರಂದು   ೧೦:೦೦  ಎ.ಎಂ.ಕ್ಕೆ ಫರ‍್ಯಾದಿ ಶ್ರೀಮತಿ ವನಿತಾ ಗಂಡ ಪ್ರಲ್ಹಾದ ತಾಂದಳೆ ವಯ: ೫೫ ವರ್ಷ ಜಾ: ಹೊಲೆಯ ಉ: ಮನೆ ಕೆಲಸ ಸಾ|| ಸಿ.ಐ.ಬಿ ಕಾಲೋನಿ ಕಲಬುರಗಿ ಇವರು ಠಾಣೆಗೆ ಹಾಜರಾಗಿ  ಲಿಖಿತ ಫರ‍್ಯಾದಿ ರ‍್ಜಿ ಸಲ್ಲಿಸಿದ್ದರ ಸಾರಾಂಶವೆನೆಂದರೆ,  ದಿನಾಂಕ:೨೭.೦೭.೨೦೨೧ ರಂದು ೦೩:೦೦ ಪಿ.ಎಂ.ಕ್ಕೆ ನಾನು ಠಾಣೆಗೆ ಹಾಜರಾಗಿ ಲಿಖಿತ ದೂರು ಸಲ್ಲಿಸಿದ್ದು, ಸದರಿ ದೂರಿನ ಸಾರಾಂಶವೆನೆಂದರೆ,  ನಾನು ಮನೆ ಕೆಲಸ ಮಾಡಿಕೊಂಡು ಕುಟುಂಬದೊಂದಿಗೆ ವಾಸವಾಗಿರುತ್ತೇನೆ. ನನ್ನ ಗಂಡ ಪ್ರಲ್ಹಾದ ಇವರು ನಿವೃತ್ತ ಸೈನಿಕರಿದ್ದು ಅವರಿಗೆ ಪಾಶ್ರ‍್ವ ವಾಯು ಆಗಿದ್ದು ಮನೆಯಲ್ಲಿ ಇರುತ್ತಾರೆ. ನಮಗೆ ಒಟ್ಟು ೫ ಜನ ಗಂಡು ಮಕ್ಕಳು ಮತ್ತು ಒಬ್ಬಳು ಹೆಣ್ಣು ಮಗಳು ಇರುತ್ತಾರೆ. ನಮ್ಮ ಹಿರಿಯ ಮಗ ಅನೀಲ ಇತನು ಕೆ.ಎಸ್.ಆರ್.ಪಿ. ಪೆದೆಯಿದ್ದು  ಬೆಂಗಳೂರಿನಲ್ಲಿ ವಾಸವಾಗಿರುತ್ತಾನೆ. ಎರಡನೇ ಮಗ ಅರುಣ ಇತನು ಆಟೋ ಚಾಲನೆ ಮಾಡಿಕೊಂಡು ಬೆಂಗಳೂರಿನಲ್ಲಿಯೇ ವಾಸವಾಗಿರುತ್ತಾನೆ. ೩ನೇ ಮಗ ಅಂಬರೀಷ ಇತನು ಗೌಂಡಿ ಕೆಲಸ ಮಾಡಿಕೊಂಡು ಬೀದರ ಪಟ್ಟಣದಲ್ಲಿ ವಾಸವಾಗಿರುತ್ತಾನೆ. ಆಶೀಶ ಮತ್ತು ಅಭಿಷೇಕ ಇವರಿಬ್ಬರು ಕಲಬುರಗಿ ನಗರದ ಕೇಂದ್ರ ಬಸ್ ನಿಲ್ದಾಣದ ಹತ್ತಿರ ಎಳೆ ನೀರಿನ ವ್ಯಾಪಾರ ಮಾಡಿಕೊಂಡು ಇರುತ್ತಾರೆ. ಆಶೀಶ ಮತ್ತು ಅಭಿಷೇಕ ಹಾಗೂ ನಮ್ಮ ಹೆಣ್ಣು ಮಗಳಾದ ಅಕ್ಷತಾ ಇವರುಗಳ ಲಗ್ನ ಆಗಿರುವುದಿಲ್ಲ. ದಿನಾಂಕ:೨೬.೦೭.೨೦೨೧ ರಂದು ರಾತ್ರಿ ೦೮:೦೦ ಗಂಟೆ ಸುಮಾರಿಗೆ ಅಭಿಷೇಕ ಇತನು ಕೇಂದ್ರ ಬಸ್ ನಿಲ್ದಾಣದ ಹತ್ತಿರ ಹೋಗಿ ಬರುತ್ತೇನೆ ಅಂತ ಮನೆಯಿಂದ ಹೋದವನು ಇಲ್ಲಿಯ ವರೆಗೆ ಮರಳಿ ಮನೆಗೆ ಬರದೆ  ಕಾಣೆಯಾಗಿರುತ್ತಾನೆ ಮತ್ತು ಅವನ ಮೊಬೈಲ್ ನಂ. ೭೦೨೨೨೩೩೦೩೩  ನೇದ್ದಕ್ಕೆ ಕರೆ ಮಾಡಿದಾಗ ಅದು ನಾಟ್ ರಿಚೇಬಲ್ ಅಂತ ಬರುತ್ತಿರುತ್ತದೆ ಇಲ್ಲಿಯ ವರೆಗೆ ನಾವು  ಎಲ್ಲಾ ಕಡೆಗಳಲ್ಲಿ  ಹುಡುಕಾಡಿ ಠಾಣೆಗೆ ಬಂದು ದೂರು  ಸಲ್ಲಿಸಿದ ಪ್ರಕಾರ ತಮ್ಮ ಠಾಣೆಯಲ್ಲಿ ಗುನ್ನೆ ನಂ. ೮೮/೨೦೨೧ ಕಲಂ ಮನುಷ್ಯ ಕಾಣೆ  ಪ್ರಕರಣ ದಾಖಲಾಗಿದ್ದು ಇರುತ್ತದೆ. ನಮ್ಮ ಮಗ ಅಭಿಷೇಕ ಇತನು ಕೊನೆಯದಾಗಿ ದಿನಾಂಕ:೨೬.೦೭.೨೦೨೧ ರಂದು ೦೮:೦೦ ಪಿ.ಎಂ. ಸುಮಾರಿಗೆ ನಮ್ಮ  ಬಡಾವಣೆಯ ಅಜಯ ಬೆಲಸೂರೆ ಇತನೊಂದಿಗೆ ಅವನ ದ್ವಿ-ಚಕ್ರ ವಾಹನದ ಮೇಲೆ ಹೋಗಿದ್ದನ್ನು, ನಮ್ಮ ಬಡಾವಣೆಯವನೆ ಆದ ನಿತೀಶ @ ಡುಬ್ಯಾತಂದೆ ಸುಭಾಷ ಗಾಯಪಕವಾಡ, ಮತ್ತು  ಪ್ರೀತಿ ತಂದೆ ಮಲ್ಲಿನಾಥ ಪಾಟೀಲ್  ಇವರು  ನೋಡಿರುತ್ತಾರೆ. ಅಲ್ಲದೆ  ರವಿಚಂದ್ರ ತಂದೆ ರಾಣಪ್ಪ  ಹೊಸಮನಿ ಇತನು ದಿನಾಂಕ:೨೬.೦೭.೨೦೨೧ ರಂದು ನಮ್ಮ ಮಗನು ಮನೆಗೆ ಮರಳಿ ಬರದೆ ಇದ್ದ  ಬಗ್ಗೆ  ನಮ್ಮ ಬಡಾವಣೆಯ ಅಜಯ ಬೆಲಸೂರೆ ಇತನಿಗೆ ವಿಚಾರಿಸಿದಾಗ  ಅವನು  ನಮ್ಮ ಮಗನಿಗೆ ಕೇಂದ್ರ ಬಸ್ ನಿಲ್ದಾಣದ ಪರ‍್ಕಿಂಗ್  ಗೇಟ ಹತ್ತಿರ ೦೮:೦೦ ಪಿ.ಎಂ.ಕ್ಕೆ ಬಿಟ್ಟಿರುತ್ತೇನೆ  ಅಂತ ಹೇಳಿರುತ್ತಾನೆಂದು, ರವಿಚಂದ್ರ   ಹೊಸಮನಿ ಇತನು ನಮಗೆ ತಿಳಿಸಿರುತ್ತಾನೆ. ನಮ್ಮ  ಮಗ ಅಭಿಷೇಕ ಇತನಿಗೆ ಅಜಯ ಬೆಲಸೂರೆ ಇತನು  ಅಪಹರಿಸಿಕೊಂಡು ಹೋಗಿ  ಎಲ್ಲಿ ಇಟ್ಟಿರುತ್ತಾನೆ  ಮತ್ತು ಏನು  ಮಾಡಿರುತ್ತಾನೆ ಅಂತ ಅವನ ಮೇಲೆ ನಮಗೆ ಅನುಮಾನವಿರುತ್ತದೆ.        ಕಾರಣ ದಿನಾಂಕ:೨೬.೦೭.೨೦೨೧  ರಂದು ರಾತ್ರಿ ೦೮:೦೦ ಗಂಟೆ ಸುಮಾರಿಗೆ ನಮ್ಮ ಮಗ ಅಭಿಷೇಕ ಇತನಿಗೆ  ನಮ್ಮ ಬಡಾವಣೆಯವನಾದ ಅಜಯ  ಬೆಲಸೂರೆ ಇತನು ಅಪಹರಣ ಮಾಡಿಕೊಂಡು ಹೋಗಿದ್ದು  ಅವನ  ವಿರುದ್ದ  ಸೂಕ್ತ ಕಾನೂನು ಕ್ರಮ  ಜರುಗಿಸಿ, ಅಪಹರಣಕ್ಕೊಳಗಾದ ನಮ್ಮ  ಮಗನಿಗೆ  ಪತ್ತೆ  ಮಾಡಿಕೊಡಬೇಕು  ಅಂತ  ವಿನಂತಿ ಅಂತ ಇತ್ಯಾದಿಯಾಗಿದ್ದ ಅರ್ಜಿ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

ಇತ್ತೀಚಿನ ನವೀಕರಣ​ : 05-10-2021 12:03 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080