ಅಭಿಪ್ರಾಯ / ಸಲಹೆಗಳು

ಸಂಚಾರಿ ಪೊಲೀಸ ಠಾಣೆ -2 :-  ದಿನಾಂಕ 04/09/2022 ರಂದು 08:15 ಪಿ.ಎಮ್ ಕ್ಕೆ ಶಾಂತಾ ಗಂಡ ದೇವಿಂದ್ರಪಗಪಾ ಗೋಗಿ ವಯಃ 42 ವರ್ಷ ಜಾತಿಃ ಹಟಗಾರ ಉಃ ಮನೆ ಕೆಲಸ ಸಾಃ ಅಳ್ಳೊಳ್ಳಿ ತಾಃ ಚಿತ್ತಾಪೂರ ಹಾ.ವಃ ದೇವರದಾಸಿಮಯ ನಗರ ಡಬರಾಬಾದ ಕ್ರಾಸ್ ಹತ್ತೀರ ಕಲಬುರಗಿ ಇವರು ಠಾಣೆಗೆ ಹಾಜರಾಗಿ ಒಂದು ಹೇಳಿಕೆ ಫಿರ್ಯಾಧಿಯನ್ನು ನೀಡಿದ್ದು ಸಾರಂಶವೆನೆಂದರೆ, ಇಂದು ದಿನಾಂಕ 04/09/2022 ರಂದು ನನ್ನ ದೊಡ್ಡಮಗ ಕಾರ್ತಿಕ ಈತನಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಇರುವುದರಿಂದ ನಾವೆಲ್ಲರೂ ಅಲ್ಲಿಗೆ ಮುಂಜಾನೆ ಹೋಗಿ ಮಧ್ಯಾಹ್ನ ಎಲ್ಲರೂ ಮನೆಗೆ ಬಂದಿದ್ದು, ಮಧ್ಯಾಹ್ನ 3:00 ಗಂಟೆ ನಂತರ ನನ್ನ ಗಂಡ ದೇವಿಂದ್ರಪ್ಪಾ ಇವರು ಕೆಲಸವಿರುತ್ತದೆ ಹೊರಗೆ ಹೋಗಿ ಬರುತ್ತೆನೆ ಅಂತಾ ಹೇಳಿ ಈ ನಮ್ಮ ಮೋಟರ ಸೈಕಲ ನಂ. ಕೆಎ 32 ವಾಯಿ 9606 ಇದರ ಮೇಲೆ ಹೋದರು. ಮುಂದೆ 6:00 ಗಂಟೆ ಸುಮಾರಿಗೆ ನಮ್ಮ ಓಣಿಯ ಸತೀಶ ಬುಳಾ ಮತ್ತು ರಾಜಶೇಖರ ಯಳಸಂಗಿ ಇವರು ನಮಗೆ ಫೋನ್ ಮಾಡಿ ಈಗ ತಾನೆ ಸಾಯಂಕಾಲ 5:50 ಸುಮಾರಿಗೆ ನಿಮ್ಮ ಯಜಮಾನ ದೇವಿಂದ್ರಪ್ಪಾ ಗೋಗಿ ಇವರು ತಮ್ಮ ಮೋಟರ ಸೈಕಲ ನಂ. ಕೆಎ 32 ವಾಯಿ 9606 ಇದರ ಮೇಲೆ ಆಳಂದ ಚಕ್ ಪೋಸ್ಟ ಕಡೆಯಿಂದ ಡಬರಾಬಾದ ಕ್ರಾಸಿನ ಕಡೆಗೆ ಬರುತ್ತಿರುವಾಗ ಹಿಂದುಗಡೆ ರೋಡಿನಿಂದ ಒಂದು ಟಿಪ್ಪರ ನಂ. ಕೆಎ 32 ಸಿ 7447 ಇದರ ಚಾಲಕನು ಅತಿವೇಗದಿಂದ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ಡಿಕ್ಕಿ ಹೊಡೆದ ಪರಿಣಾಮ ಅವರು ರೋಡಿಗೆ ಬಿದ್ದಾಗ ಟಿಪ್ಪರ ಮುಂದಿನ ಎಡಭಾಗದ ಟೈರ ಅವರ ತಲೆಯ ಮೇಲೆ ಹೋಗಿದ್ದರಿಂದ ಭಾರಿ ಪ್ರಮಾಣದ ರಕ್ತಗಾಯವಾಗಿ ಸ್ಧಳದಲ್ಲಿ ಮೃತ ಪಟ್ಟಿರುತ್ತಾರೆ ಅಂತಾ ತಿಳಿಸಿದಕ್ಕೆ ನಾನು ಗಾಬರಿಗೊಂಡು ನನ್ನ ತಮ್ಮ ದೇವಿಂದ್ರಪ್ಪಾ ತಂದೆ ಶಂಕ್ರಪ್ಪಾ ಪೂಜಾರಿ ಇಬ್ಬರೂ ಕೂಡಿ ಸ್ಧಳಕ್ಕೆ ಹೋಗುವಷ್ಟರಲ್ಲಿ ಸತೀಶ ಮತ್ತು ರಾಜಶೇಖರ ಇವರು ಸರಕಾರಿ ಆಸ್ಪತ್ರೆ ಕಡೆಗೆ ತೆಗೆದುಕೊಂಡು ಹೋದ ಬಗ್ಗೆ ಗೊತ್ತಾಗಿ, ಅಲ್ಲಿಗೆ ಹೋಗಿ ನೋಡಲಾಗಿ ಗಂಡನವರ ಮುಖ ಮತ್ತು ತಲೆಯ ಭಾಗ ಪೂರ್ತಿಯಾಗಿ ಒಡೆದು ಮೌಂಸಖಂಡ ಹೊರಬಂದು ಮೃತ ಪಟ್ಟಿದ್ದು, ಅಲ್ಲಿಯೇ ಇರುವ ಸತೀಶ ಬುಲ್ಲಾ ಮತ್ತು ರಾಜಶೇಖರ ಯಳಸಂಗಿ ಇವರಿಗೆ ವಿಚಾರಿಸಲು ಈ ಮೇಲಿನ ವಿಷಯವನ್ನೆ ತಿಳಿಸಿದರು & ಅಪಘಾತ ಪಡಿಸಿದ ಟಿಪ್ಪರ ಚಾಲಕನನ್ನು ಟಿಪ್ಪರದೊಂದಿಗೆ ಓಡಿ ಹೋಗಿದ್ದು, ಆತನನ್ನು ಮತ್ತೆ ನೋಡಿದಲ್ಲಿ ಗುರ್ತಿಸುವುದಾಗಿ ಹೇಳಿರುತ್ತಾರೆ. ಕಾರಣ ಟಿಪ್ಪರ ನಂ. ಕೆಎ 32 ಸಿ 7447 ನೇದ್ದರ ಚಾಲಕನನ್ನು ಪತ್ತೆ ಮಾಡಿ ಆತನ ಮೇಲೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು ಅಂತಾ ಕೊಟ್ಟ ಫಿರ್ಯಾಧಿ ಹೇಳಿಕೆ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಅಶೋಕ ನಗರ ಪೊಲೀಸ ಠಾಣೆ :-  ದಿನಾಂಕ: 04.09.2022 ರಂದು 03:00 ಪಿ.ಎಂ.ಕ್ಕೆ ಫಿರ್ಯಾದಿ ಶ್ರೀಮತಿ  ಚಂದ್ರಕಲಾ ಗಂಡ ವಿಸ್ಮಯ ಮಾಳಗಿ ವಯ: 41 ವರ್ಷ ಜಾ: ಎಸ್.ಸಿ.(ಹೊಲೆಯ) ಉ: ಮನೆ ಕೆಲಸ ಸಾ|| ಪ್ಲಾಟ ನಂ. 124, ಸಿ.ಐ.ಬಿ. ಕಾಲೋನಿ, ಕಲಬುರಗಿ ಇವರ ಫಿರ್ಯಾದಿಯ ಸಾರಾಂಶವೆನೆಂದರೆ, ನಾನು ಮನೆಕೆಲಸ ಮಾಡಿಕೊಂಡು ನನ್ನ ಕುಟುಂಬದೊಂದಿಗೆ ವಾಸವಾಗಿದ್ದು ಇರುತ್ತದೆ. ನನ್ನ ಗಂಡ ವಿಸ್ಮಯ ಇವರಿಗೆ ಪ್ಯಾರಲೈಜ್ ಆಗಿದ್ದು ಇವರು  ಸಹ ಮನೆಯಲ್ಲಿಯೇ ಇರುತ್ತಾರೆ. ನಮಗೆ ಪೃಥ್ವಿ ಮತ್ತು ಶ್ರೇಯಾ ಅಂತ ಬ್ಬರು ಮಕ್ಕಳಿರುತ್ತಾರೆ. ನಾವು ದಿನಾಲು ನಮ್ಮ ಮನೆಯ ಒಂದನೇ ಮಹಡಿಯಲ್ಲಿ ಮಲಗಿಕೊಳ್ಳುತ್ತೇವೆ. ಹೀಗಿದ್ದು ದಿನಾಂಕ:03.09.2022 ರಂದು 11:30 ಪಿ.ಎಮ್.ಕ್ಕೆ ನಾವು ಎಂದಿನಂತೆ ನಮ್ಮ ಮನೆಯ ಒಂದನೇ ಮಹಡಿಯಲ್ಲಿ ಮಲಗಿಕೊಳ್ಳಲು ಹೋಗಿದ್ದು ಇರುತ್ತದೆ. ಇಂದು ದಿನಾಂಕ:04.09.2022 ರಂದು ಬೆಳಿಗ್ಗೆ 07:30 ಸುಮಾರಿಗೆ ನನ್ನ ಗಂಡ ವಿಸ್ಮಯ ಇವರು ಎದ್ದು ಕೆಳಗೆ ಹೋಗುವುದಲ್ಲಿ ಮನೆಯ ಬೀಗ ಮುರಿದು ಬಿದ್ದದ್ದು ನೋಡಿ ನನಗೆ ಕರೆದಾಗ ಇಬ್ಬರೂ ಮನೆಯ ಒಳಗೆ ಹೋಗಿ ನೋಡಲಾಗಿ ಬೆಡರೂಮಿನ ಅಲ್ಮಾರಾದಲ್ಲಿದ್ದ ಬಟ್ಟೆಗಳೆಲ್ಲಾ ಚೆಲ್ಲಾಪಿಲ್ಲಿಯಾಗಿ ಬಿದಿದ್ದು ಅಲಮಾರದಲ್ಲಿ ಇಟ್ಟಿದ್ದ ನಗದು ಹಣ 1,15,000/-ರೂ, ಸುಮಾರು 20 ವರ್ಷಗಳ ಹಿಂದೆ ಖರಿದಿಸಿದ 10 ಗ್ರಾಮನ ಬಂಗಾರದ ಲಾಕೇಟ್ ಅ.ಕಿ.25,000/- ಹಾಗೂ ಬೆಳ್ಳಿ ಚೈನ್, 2 ಬೆಳ್ಳಿ ಕಡಗ ಹಾಗೂ ಬೆಳ್ಳಿ ಉಡುದಾರ ಅ.ಕಿ.5,000/- ಹೀಗೆ ನಗದು ಹಣ, ಬಂಗಾರ ಆಭರಣಗಳು ಮತ್ತು ಬೆಳ್ಳಿಯ ಆಭರಣಗಳು ಹೀಗೆ ಒಟ್ಟು ಎಲ್ಲಾ ಸೇರಿ ಒಟ್ಟು ಅ.ಕಿ. 1,45,000/-ರೂ ನೇದ್ದವುಗಳು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ.     ಕಾರಣ ನಮ್ಮ ಮನೆಯ ಬೀಗ ಮುರಿದು ನಗದು ಹಣ, ಬಂಗಾರದ ಆಭರಣಗಳು ಮತ್ತು ಬೆಳ್ಳಿಯ ಆಭರಣಗಳನ್ನು ಕಳ್ಳತನ ಮಾಡಿಕೊಂಡು ಹೋದ ಕಳ್ಳರನ್ನು ಪತ್ತೆಮಾಡಿ ಅವರ ವಿರುದ್ಧ ಕ್ರಮ ಜರುಗಿಸಿ ನಮ್ಮ ವಸ್ತುಗಳನ್ನು ನಮಗೆ ದೊರಕಿಸಿಕೊಡಲು ವಿನಂತಿ ಅಂತ ಇತ್ಯಾದಿಯಾಗಿ ನೀಡಿದ ಫಿರ್ಯಾದಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

ಇತ್ತೀಚಿನ ನವೀಕರಣ​ : 16-09-2022 06:52 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080