ಅಭಿಪ್ರಾಯ / ಸಲಹೆಗಳು

ಬ್ರಹ್ಮಪೂರ ಪೊಲೀಸ್‌ ಠಾಣೆ :- ದಿನಾಂಕ: 04-08-2022 ರಂದು ಮದ್ಯಾಹ್ನ ೦೧:೦೦ ಪಿ.ಎಮ್.ಗೆ ಫಿರ್ಯಾದಿದಾರರಾದ ಶ್ರೀ ಮೋತಿಲ್ಲಹ ತಂದೆ ಕಿಬರಿಯಾ ಮೊಲ್ಲಿಕ ವಯ:೩೬ವರ್ಷ ಜಾ:ಮುಸ್ಲಿಂ ಉ: ಬಂಗಾರ ವ್ಯಾಪರ ಕೆಲಸ ಸಾ//ಎಮ್.ಜಿ. ರಸ್ತೆ ಎಸ್.ಜಿ.ಎನ್. ಕಾಲೇಜ್ ಹತ್ತಿರ ಕಲಬುರಗಿ ನಗರ. ಇವರು ಠಾಣೆಗೆ ಹಾಜರಾಗಿ ಫಿರ್ಯಾದಿ ಅರ್ಜಿ ಸಲ್ಲಿಸಿದ್ದರ ಸಾರಾಂಶವೇನೆಂದೆರೆ. ಮಕ್ತಾಂಪೂರ ಬಡಾವಣೆಯ ಚಪ್ಪಲ್ ಬಜಾರದ ಪಂಜಾಬ್ ಬೂಟ್ ಹೌಸ್ ಹತ್ತಿರ ಇರುವ ದೇವಿದಾಸ್ ಲಾಡ್ಜ್ ಮತ್ತು ಕಾಂಪ್ಲೇಕ್ಸ್ದಲ್ಲಿ ನನ್ನದೊಂದು ಬಾಡಿಗೆ ರೂಪದಲ್ಲಿ ಸ್ವಂತ ಮಲ್ಲಿಕ್ ಬಂಗಾರದ ಅಂಗಡಿ ಇದ್ದು. ಇದನ್ನು ನಾನು ನಡೆಸಿಕೊಂಡು ಹೋಗುತ್ತೇನೆ. ನನ್ನ ಜೊತೆ ನನ್ನ ತಮ್ಮನಾದ ಶಬ್ಕಾ ಉಲ್ಲಾ ಹಾಗೂ ಕೆಲಸಗಾರರೊಂದಿಗೆ ಕೆಲಸ ಮಾಡುತ್ತಿದ್ದು ಅಂಗಡಿಗೆ ಬರುವ ಗ್ರಾಹಕರಿಗೆ ಬಂಗಾರ ಸಾಮಾನುಗಳನ್ನು ಅವರು ಹೇಳಿದಂತೆ ಆರ್ಡರ್ ಪಡೆದುಕೊಂಡು. ಬಂಗಾರವನ್ನು ಸರಫ್ ಬಜಾರದ ನಭಿ ಹೋಟೆಲ್ ಹತ್ತಿರ ಇರುವ ೦೧)ಶೇಖ್ ರಂಜಾನ್ ಅಲಿ ತಂದೆ ಶೇಖ್ ಶೀರಾಜ್ ಉಲ್ಲ್ ಹಾಗೂ ಆತನ ಅಣ್ಣನಾದ ೦೨)ಶೇಖ್ ಹಾರೋನ್ ಅಲಿ ತಂದೆ ಶೇಖ್ ಸಿರಾಜ್ ಉಲ್ಲ್,  ೦೩)ಶೇಖ್ ಸಾಹಿಮಾ ಬೇಗಂ ಗಂಡ ಶೇಖ್ ಹಾರೋನ್ ಶೇಖ್ ಸಾ//ಕಾಪಸ್ ಹರಿಯಾ ದಕ್ಷಿಣಪಾರ, ಉತ್ತರ ಚಂಡಿಲಾಲ್ ಹೋಬಳಿ, ಹೂಗ್ಲಿ ಜಿಲ್ಲೆ, ಪಶ್ಚಿಮ ಬಂಗಾಳ ರಾಜ್ಯ. ಹಾ.ವ:-ಸರಫ್ ಬಜಾರ್ ನಭಿ ಹೋಟೆಲ್ ಹತ್ತಿರ ಕಲಬುರಗಿ ನಗರ. ಇವರಿಗೆ ಆಭರಣಗಳನ್ನು ಈಗ ಸುಮಾರು ೨ ವರ್ಷದಿಂದ ತಯ್ಯಾರಿಸಲು ಬಂಗಾರ ಕೊಡುತ್ತಿದ್ದು ಅವರು ಬಂಗಾರದ ಆಭರಣಗಳನ್ನು ತಯ್ಯಾರಿಸಿ ಮರಳಿ ಕೊಡುತ್ತಾ ಬಂದಿದ್ದು ಇರುತ್ತದೆ. ದಿನಾಂಕ:೧೫/೦೭/೨೦೨೨ ರಂದು ನಮ್ಮ ಅಂಗಡಿಗೆ ಗ್ರಾಹಕರು ಬಂಗಾರದ ಆಭರಣಗಳನ್ನು ತಯ್ಯಾರಿಸಿ ಕೊಡುವ ಸಂಬಂಧ ಆರ್ಡರ್ ಬಂದಿರುವದರಿಂದ ನಾನು ಸುಮಾರು ೩೦ ತೋಲೆ ಬಂಗಾರದ ವಿವಿಧ ನಮೂನೆಯ ಸಾಮಾನುಗಳನ್ನು ತಯ್ಯಾರಿಸುವ ಕುರಿತು ಮದ್ಯಾಹ್ನ ೦೨:೩೦ ಗಂಟೆ ಸುಮಾರಿಗೆ ಶೇಖ್ ರಂಜಾನ್ ಅಲಿ ತಂದೆ ಶೇಖ್ ಸಿರಾಜ್ ಉಲ್ಲ್ ಇತನಿಗೆ ನನ್ನ ಅಂಗಡಿಗೆ ಕರೆಯಿಸಿ ಯಾವ ನಮೂನೆಯ ಬಂಗಾರದ ಆಭರಣಗಳು ತಯ್ಯಾರು ಮಾಡಬೇಕು ಎಂಬ ಬಗ್ಗೆ ಮಾಹಿತಿ ನೀಡಿ ೧೦೦ ಗ್ರಾಂ ನ ಒಟ್ಟು ೩ ಪೀಸ್ ಬಿಸ್ಕೆಟ್ ಅಂದಾಜು ತೂಕ ೩೦೦ ಗ್ರಾಂ ಅಂದಾಜು ಕಿಮ್ಮತ್ತು ೧೬,೦೦,೦೦೦/-ರೂಪಾಯಿ ಕಿಮ್ಮತ್ತಿನದು ಆತನಿಗೆ ಕೊಟ್ಟು ಕಳುಹಿಸಿದೆ. ನಂತರ ಎರಡು ಮೂರು ದಿವಸಗಳಾದರು ಸಹ ನನ್ನ ಆಭರಣಗಳನ್ನು ಮರಳಿ ತಂದು ಕೊಡಲಿಲ್ಲ ನಂತರ ನಾನು ದಿನಾಂಕ:೨೦/೦೭/೨೦೨೨ ರಂದು ರಾತ್ರಿ ೦೮:೦೦ ಗಂಟೆ ಸುಮಾರಿಗೆ ಅವನು ತಯ್ಯಾರಿಸುವ ಬಂಗಾರದ ಅಂಗಡಿಗೆ ಹೋಗಿ ನೋಡಲಾಗಿ ಅಂಗಡಿ ಕೀಲಿ ಹಾಕಿದ್ದು ಅಕ್ಕ ಪಕ್ಕದ ಜನರಿಗೆ ವಿಚಾರಮಾಡಲಾಗಿ ತಿಳಿಸಿದ್ದೇನೆಂದರೆ ೦೧)ಶೇಖ್ ರಂಜಾನ್, ೦೨)ಶೇಖ್ ಹಾರೋನ್ ಅಲಿ, ೦೩)ಶೇಖ್ ಸಾಹಿಮಾ ಬೇಗಂ ಇವರುಗಳು ತಮ್ಮ ಅಂಗಡಿ ಮತ್ತು ಮನೆಯನ್ನು ಖಾಲಿ ಮಾಡಿಕೊಂಡು ಓಡಿ ಹೋಗಿರುತ್ತಾರೆಂದು ತಿಳಿಸಿದರು. ನಂತರ ಅವನ ಮೊಬೈಲ್ ನಂಬರ್ ೭೮೯೨೮೩೬೭೩೭ ಕ್ಕೆ ಫೋನ್ ಕಾಲ್ ಮಾಡಲಾಗಿ ಸ್ವಿಚ್ ಆಫ್ ಅಂತ ಬಂದಿರುತ್ತದೆ. ನಾನು ಸದರಿಯವರ ಬಗ್ಗೆ ಎಲ್ಲಿಯಾದರೂ ಇರಬಹುದು ಎಂದು ತಿಳಿದು ಹುಡುಕಾಡಲಾಗಿ ಇಲ್ಲಿಯವರೆಗೆ ಸಿಕ್ಕಿರುವುದಿಲ್ಲಾ ೧)ಶೇಖ್ ರಂಜಾನ್, ೨)ಶೇಖ್ ಹಾರೋನ್ ಅಲಿ, ೩)ಶೇಖ್ ಸಾಹಿಮಾ ಬೇಗಂ ಇವರು ಬಂಗಾರದ ಆಭರಣಗಳನ್ನು ತಯ್ಯಾರಿಸಿ ಕೊಡುತ್ತೇನೆ ಅಂತ ಹೇಳಿ ನನ್ನ ಹತ್ತಿರವಿದ್ದ ಸುಮಾರು ೩೦೦ ಗ್ರಾಂ ಅಂದಾಜು ಕಿಮ್ಮತ್ತು ೧೬,೦೦,೦೦೦/-ರೂಪಾಯಿ ಬೆಲೆ ಬಾಳುವ ಬಂಗಾರವನ್ನು ತೆಗೆದುಕೊಂಡು ಹೋಗಿ ಬಂಗಾರದ ಆಭರಣಗಳನ್ನು ಮರಳಿ ಕೊಡದೆ ನನಗೆ ನಂಬಿಕೆ ದ್ರೋಹ, ಮೋಸ, ವಂಚನೆ ಮಾಡಿದ ಅವರುಗಳನ್ನು ಮತ್ತು ಬಂಗಾರವನ್ನು ಪತ್ತೆ ಹಚ್ಚಿ ಸೂಕ್ತ  ಕಾನೂನು ಕ್ರಮ ಕೈಕೊಳ್ಳಬೇಕು ಎಂದು ಫಿರ್ಯಾದಿ ಹೇಳಿಕೆ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ವಿಶ್ವವಿದ್ಯಾಲಯ ಪೊಲೀಸ ಠಾಣೆ :- ದಿನಾಂಕ 03-08-2022  ರಂದು ೭.೩೦ ಪಿ.ಎಮ್ ಕ್ಕೆ ಸದರಿ ಫಿರ್ಯಾದಿಯ ಗಂಡನು ತನ್ನ ಗಂಡನೊಂದಿಗೆ ತೇಲ್ಕರ ಕಾಲೋನಿಯಲ್ಲಿರುವ ಸದರಿ ಆರೋಪಿಯ ಮನೆಗೆ ತಮ್ಮ ಗಂಡನ ವೇತನ ಕುರಿತು ಕೇಳಲು ಹೋದಾಗ ಅವಾಚ್ಯವಾಗಿ ಬೈದು ಹೊಡೆಬಡೆ ಮಾಡಿ ಫಿರ್ಯಾದಿಗೆ ಮಾನಭಂಗ ಮಾಡಿದ ಬಗ್ಗೆ ದೂರು ಇರುತ್ತದೆ.

 

 

ಸಂಚಾರಿ ಪೊಲೀಸ್‌ ಠಾಣೆ  -1 :- ದಿನಾಂಕ 04-08-2022  ರಂದು ಬೆಳಿಗ್ಗೆ ೯-೦೦  ಗಂಟೆಗೆ ಶ್ರೀಶೈಲ ತಂದೆ ಶರಣಗೌಡ ಪೊಲೀಸ ಪಾಟೀಲ ಇವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಗಣಕಿಕೃತ ಮಾಡಿದ ದೂರು ಅರ್ಜಿಯನ್ನು ಹಾಜರಪಡಿಸಿದ್ದರ ಸಾರಂಶವೆನೆಂದರೆ ದಿನಾಂಕ ೦೨-೦೮-೨೦೨೨ ರಂದು ಕಲಬುರಗಿ ಕೇಂದ್ರ ಬಸ್ಸ ನಿಲ್ದಾಣದಿಂದ ದಂಗಾಪೂರ ಮುಖಾಂ ಕುರಿತು ನಾನು ಚಲಾಯಿಸುತ್ತೀರುವ ಬಸ್ಸ ನಂಬರ ಕೆಎ-೩೨/ಎಫ್-೨೦೬೭ ನೇದ್ದನ್ನು ನಾನು ಚಲಾಯಿಸಿಕೊಂಡು ಸುರೇಶ ಇವರು ಬಸ್ಸ ಕಂಡೆಕ್ಟೆರ ಕರ್ತವ್ಯದ ಮೇಲೆ ಹೋಗಿ ಮುಖಾಂ ಮಾಡಿ ದಿನಾಂಕ ೦೩-೦೮-೨೦೨೨ ರಂದು ಬೆಳಿಗ್ಗೆ ದಂಗಾಪೂರದಿಂದ ಕಲಬುರಗಿಗೆ ಕಲಬುರಗಿಯಿಂದ ದಂಗಾಪೂರಕ್ಕೆ ಹೋಗಿ ದಂಗಾಪೂರದಿಂದ ಕಲಬುರಗಿಗೆ ಬಂದು ಸುರಪೂರ ಟ್ರೀಪ ಕುರಿತು ಹೋಗಿ ಸುರಪೂರದಿಂದ ಕೇಂದ್ರ ಬಸ್ಸ ನಿಲ್ದಾಣಕ್ಕೆ ಬರುವಾಗ ಸಾಯಂಕಾಲ ೪-೪೦ ಗಂಟೆ ಸುಮಾರಿಗೆ ಶಹಾಬಾದ ಕ್ರಾಸ ಮತ್ತು ಫಿರೋಜಾಬಾದ ದರ್ಗಾ ಮದ್ಯದ ಫಿರೋಜಾಬಾದ ಗ್ರಾಮದ ಸಿಮಾಂತರದ ರೋಡ ಮೇಲೆ ಒಬ್ಬ ಕಾರ ಚಾಲಕನು ಜೇವಗಿ ಕಡೆಯಿಂದ ಕಲಬುರಗಿ ಕಡೆಗೆ ಹೋಗುವ ಕುರಿತು ನಮ್ಮ ಬಸ್ಸಿಗೆ ಸೈಡ ಹೊಡೆದು ಹೋಗುವಾಗ ಒಬ್ಬ ಟಿಪ್ಪರ ಚಾಲಕನು ಕಲಬುರಗಿ ಕಡೆಯಿಂದ ಜೇವರ್ಗಿ ಕಡೆಗೆ ಹೋಗುವ ಕುರಿತು ತನ್ನ ಟಿಪ್ಪರ ವಾಹನವನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದಾಗ ಟಿಪ್ಪರ ಚಾಲಕ ಮತ್ತು ಕಾರ ಚಾಲಕ ಇಬ್ಬರೂ ತಮ್ಮ ತಮ್ಮ ವಾಹನಗಳನ್ನು ಒಂದಕ್ಕೊಂದು ಡಿಕ್ಕಿಪಡಿಸಿ ಅಪಘಾತ ಮಾಡಿದಾಗ ಕಾರ ಚಾಲಕನು ನನ್ನ ಬಲ ಸೈಡಿಗೆ ಬಂದು ನನ್ನ ಬಸ್ಸಿಗೆ ಡಿಕ್ಕಿಪಡಿಸಿ ಅಪಘಾತ ಮಾಡಿದನು ನಾನು ನನ್ನ ಬಸ್ಸ ರೋಡ ಪಕ್ಕಕ್ಕೆ ನಿಲ್ಲಿಸಿ ಬಸ್ಸಿನಿಂದ ನಾನು ಮತ್ತು ಕಂಡೆಕ್ಟರ ಸುರೇಶ ತಂದೆ ಕಂಠೆಪ್ಪಾ ಇಬ್ಬರೂ ಇಳಿದು ಟಿಪ್ಪರ ನಂಬರ ನೋಡಲು ಕೆಎ-೫೧/ಡಿ-೩೩೬೩ ಇದ್ದಿತ್ತು. ಅದರ ಚಾಲಕ ತನ್ನ ವಾಹನ ಅಲ್ಲೆ ಬಿಟ್ಟು ಹೋದನು. ಕಾರ ನಂಬರ ನೋಡಲು ಕೆಎ-೩೩/ಎಮ್-೭೮೬೨ ಇದ್ದಿತ್ತು. ಅದರ ಚಾಲಕನ ಹೆಸರು ಸಯ್ಯದ ರಿಜ್ವಾನ ತಂದೆ ಸಯ್ಯದ ಗುಲಾಮ ಅಹಮದ ಅಂತಾ ಗೋತ್ತಾಯಿತು ಕಾರಿನಲ್ಲಿ ೨ ಜನ ಇದ್ದರು. ಅವರ ಹೆಸರು ತಾಹೇರ ಅಹಿಮದ ತಂದೆ ಮಹಿಮೂದ ಅಹಿಮದ ಮತ್ತು ಅಯ್ಯೂಮ ಅಹಿಮದ ತಂದೆ ಫಾರೂಕ ಅಹಿಮದ ಅಂತಾ ಇದ್ದರು. ಕಾರ ಚಾಲಕನಿಗೆ ಪೆಟ್ಟು ಬಿದ್ದಿತ್ತು. ನನಗೆ ಮತ್ತು ಬಸ್ಸನಲ್ಲಿ ಕುಳಿತವರಿಗೆ ಹಾಗೂ ಟಿಪ್ಪರ ಚಾಲಕನಿಗೆ ಯಾವುದೇ ಪೆಟ್ಟು ಬಿದ್ದಿರಲಿಲ್ಲ, ನಿನ್ನೆ ನಾನು ನಮ್ಮ ಮೇಲಾಧಿಕಾರಿಗಳಿಗೆ ಮಾಹಿತಿ ತಿಳಿಸಿ ಠಾಣೆಗೆ ಬರಲು ತಡವಾಗಿರುತ್ತದೆ. ಕಾರಣ ಟಿಪ್ಪರ ನಂಬರ ಕೆಎ-೫೧/ಡಿ-೩೩೬೩ ನೇದ್ದರ ಚಾಲಕ ಹಾಗೂ ಕಾರ ನಂಬರ ಕೆಎ-೩೩/ಎಮ್-೭೮೬೨ ನೇದ್ದರ ಚಾಲಕ ಸಯ್ಯದ ರಿಜ್ವಾನ ಇಬ್ಬರೂ ತಮ್ಮ ವಾಹನಗಳನ್ನು ಎದುರಿನಿಂದ ಡಿಕ್ಕಿಪಡಿಸಿ ಅಪಘಾತ ಮಾಡಿ ಕಾರ ಚಾಲಕ ನನ್ನ ಬಸ್ಸಿಗೆ ಡಿಕ್ಕಿಪಡಿಸಿ ಅಪಘಾತ ಮಾಡಿ ಕಾರ ಚಾಲಕ ಗಾಯ ಹೊಂದಿದ್ದು ಕಾರ ಮತ್ತು ಟಿಪ್ಪರ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಫಿರ್ಯಾದಿ ಹೇಳಿಕೆ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಸಬ್‌ ಅರ್ಬನ್‌ ಪೊಲೀಸ ಠಾಣೆ :- ದಿನಾಂಕ 04-08-2022  ರಂದು ಫಿರ್ಯಾದಿದಾರರು ಬಂದು ಸಲ್ಲಿಸಿದ ಫಿರ್ಯಾದಿ ಏನೆಂದರೆ ಫಿರ್ಯಾದಿದಾರರು ತಮ್ಮ ಕಾರನ್ನು ಕಾಸಿಪ್ ಎಂಬಾತನಿಗೆ ಮಾರಿದ್ದು ಅವನ ೫ ತಿಂಗಳಾದರು ಅವರ ಹಣವನ್ನು ಕೊಡದೆ ಸತಾಯಿಸುತ್ತಿದ್ದರಿಂದ ಸದರಿ ಫಿರ್ಯಾದಿದಾರರು ಅವನ ಮೇಲೆ ಎನ್ ಐ ಕಾಯ್ದೆ ಅಡಿ ಪ್ರಕರಣವನ್ನು ದಾಖಲಿಸಿದ್ದರಿಂದ ಆತನು ಫಿರ್ಯಾದಿದಾರರಿಗೆ ಕೇಸು ವಾಪಾಸು ಪಡೆಯಲು ಒತ್ತಾಯಿಸಿದ್ದು ಫಿರ್ಯಾದಿದಾರರು ಕೇಸು ವಾಪಾಸು ಪಡೆಯಲು ನಿರಾಕರಿಸಿದಾಗ ಸದರಿಯವರ ಮೇಲೆ ಕಾಸಿಪ್ ಮತ್ತು ಅವನ ಜೊತೆಗೆ ಮೂರು ಜನ ಅವನ ಸಹಚರರು ಫಿರ್ಯಾದಿದಾರರ ಮೇಲೆ ಹೊಡೆ ಬಡೆ ಮಾಡಿದ್ದರಿಂದ ಸದರಿಯವರ ಮೇಲೆ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

ಇತ್ತೀಚಿನ ನವೀಕರಣ​ : 05-08-2022 07:03 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080