ಅಭಿಪ್ರಾಯ / ಸಲಹೆಗಳು

ಸ್ಟೇಷನ್‌ ಬಜಾರ ಪೊಲೀಸ್‌‍ ಠಾಣೆ :-  ದಿನಾಂಕ:04/07/2022 ರಂದು ರಾತ್ರಿ 8:00 ಫಿರ್ಯಾದಿ ಶ್ರೀಮತಿ  ಮಹಾದೇವಿ ಗಂಡ ಶ್ರೀಮಂತ ಸುಬೇದಾರ ವಯ:43 ವರ್ಷ ಜಾ:ಬೇಡರ ಉ:ಕೂಲಿ ಕೆಲಸ ಸಾ:ಕೊನಾ ಹಿಪ್ಪರ್ಗಾ ತಾ:ಜೇವರ್ಗಿ ಹಾವ: ಘಾಬರೆ ಲೇಔಟ ಈಶ್ವರ ನಗರ ಕಲಬುರಗಿ ಇವರು ಪೊಲೀಸ್ ಠಾಣೆಗೆ ಬಂದು ನೀಡಿದ ದೂರಿನ ಸಾರಾಂಶವೇನಂದರೆ, ನಾನು ನನ್ನ ಗಂಡ ಶ್ರೀಮಂತ ಇಬ್ಬರು ಕೂಡಿಕೊಂಡು ಸುಮಾರು 7-8 ವರ್ಷಗಳ ಹಿಂದೆ ಉಪ ಜೀವನಕ್ಕಾಗಿ ಕಲಬುರಗಿ ನಮ್ಮ ಇಬ್ಬರು ಗಂಡಸು ಮಕ್ಕಳ ಪೈಕಿ ಹಿರಿಯ ಮಗ ಲೋಹಿತ ಮತ್ತು ಕಿರಿಯಮಗ ದೇವು ವಯ:20 ವರ್ಷ 6 ತಿಂಗಳು ಇವರನ್ನು ಕರೆದುಕೊಂಡು ಕಲಬುರಗಿ ಬಂದು ಅಲ್ಲಲ್ಲಿ ಕೂಲಿ ನಾಲಿ ಮಾಡಿಕೊಂಡು ಜೀವನ ಸಾಗಿಸುತ್ತಾ ಬಂದಿರುತ್ತೆವೆ. ಕಿರಿಯ ಮಗ ದೇವು ಇತನು ಕಲಬುರಗಿಯ ಬಸವೇಶ್ವರ ಆಸ್ಪತ್ರೆಯ ಕ್ಯಾಂಟಿನಲ್ಲಿ ಕೆಲಸ ಮಾಡಿಕೊಂಡು ಇರುತ್ತಾನೆ. ದಿನಾಲು ಶಿಫ್ಟ್ ವೈಸ ಕೆಲಸ ಮಾಡುತ್ತಾ ಬಂದಿರುತ್ತಾನೆ. ಹೀಗಿದ್ದು ದಿನಾಂಕ:29/06/2022 ರಂದು ಬೆಳಗ್ಗೆ 9:00 ಗಂಟೆಗೆ ಸುಮಾರಿಗೆ ನಾನು ಮನೆಯಲ್ಲಿ ಇದ್ದಾಗ ನನ್ನ ಮಗ ದೇವು ಇತನು ನನ್ನ ಗೆಳೆಯನ ಮದುವೆ ಇದೆ ಕೆಲಸಕ್ಕೆ ಹೋಗುವದಿಲ್ಲ ಮದುವೆಗೆ ಹೋಗಿ ಬರುತ್ತೆನೆ ಅಂತ ಹೇಳಿ ಹೋಗಿರುತ್ತಾನೆ. ಅಂದು ಸಂಜೆ 5:00 ಗಂಟೆ ಸುಮಾರಿಗೆ ನಮ್ಮ ತಂಗಿಯಾದ ಅಣೆಮ್ಮಾ ಇವರಿಗೆ ಫೊನ್ ಮಾಡಿ ನಮ್ಮ ಗೆಳೆಯನ ಮದುವೆ ಮೆರವಣಿಗೆ ಡಿಜೆ ಹಚ್ಚಿರುತ್ತಾರೆ ಮೆರವಣಿಗೆ ಮುಗಿಸಿಕೊಂಡು ಬರುತ್ತೆನೆ ಅಂತ ತಿಳಿಸಿದ್ದು ಇರುತ್ತದೆ. ನಂತರ ಬೆಳಗ್ಗೆಯವರೆಗೆ ದಾರಿ ನೋಡಿದೇವು ಬರಲಿಲ್ಲ ಆದ್ದರಿಂದ ನನ್ನ ಮಗನಿಗೆ ಫೊನ್ ಮಾಡಲು ಸ್ವಿಚ್ ಆಫ್ ಅಂತ ಬಂದಿರುತ್ತದೆ. ಗಾಭರಿಯಾಗಿ ಅವನು ಕೆಲಸ ಮಾಡುವ ಕ್ಯಾಂಟಿನ್ಗೆ ಹೋಗಿ ವಿಚಾರಿಸಲು ನಮ್ಮ ಹತ್ತಿರ ರಜೆ ಮಾಡಿರುತ್ತಾನೆ ಕೆಲಸಕ್ಕೆ ಬಂದಿರುವದಿಲ್ಲ ಅಂತ ತಿಳಿಸಿದರು. ಆಗ ನಾನು ನನ್ನ ಗಂಡ ಶ್ರೀಮಂತ ಮತ್ತು ನಮ್ಮ ಸಂಬಂದಿಕರು ಎಲ್ಲಾ ಕಡೆಯಲ್ಲಿ ಹುಡಕಾಡಿ ನಮ್ಮ ಸಂಬಂದಿಕರಲ್ಲಿ ವಿಚಾರಿಸಲು ಎಲ್ಲಿಯೂ ಸಿಕ್ಕಿರುವದಿಲ್ಲ. ನನ್ನ ಮಗ ದೇವು ಇತನು ಗೆಳೆಯನ ಮದುವೆಗೆ ಹೋಗಿ ಬರುತ್ತೆನೆ ಅಂತ ಹೇಳಿ ಹೋದವನು ಮರಳಿ ಮನೆಗೆ ಬರದೆ ಕಾಣೆಯಾಗಿರುತ್ತಾನೆ. ಹೋಗುವಾಗಿ ಮೈಮೇಲೆ ಬಿಳಿ ಬಣ್ಣದ ಶರ್ಟ, ಕಪ್ಪು ಬಣ್ಣದ ಪ್ಯಾಂಟ್ ಧರಿಸಿದ್ದು ಇರುತ್ತದೆ. ನನ್ನ ಮಗನ ಚೆಹರಾ ಪಟ್ಟಿ ಈ ರೀತಿ ಇರುತ್ತದೆ. ಅಗಲವಾದ ಮುಖ, ಗೋದಿ ಮೈಬಣ್ಣ, ಸದೃಡ ದೇಹ, ಎತ್ತರ 5.6 ಇದ್ದು, ಕನ್ನಡ, ಹಿಂದಿ ಬಾಷೆ ಮಾತನಾಡುತ್ತಾನೆ.   ಬಲಗೈ ಮೇಲೆ ಹೆಬ್ಬೆರಳಿನ ಮೇಲೆ ಇಂಗ್ಲೀಷನಲ್ಲಿ ಚಿನ್ನಿ ಮತ್ತು ಬಲಗೈ ಮೇಲೆ ಮಾಮ್ ಡ್ಯಾಡ್ ಅಂತ ಟ್ಯಾಟ್ಯೂ ಇರುತ್ತದೆ. ನನ್ನ ಮಗ ದೇವು ಇತನು ತನ್ನ ಗೆಳೆಯನ ಮದುವೆಗೆ ಹೋಗಿ ಬರುತ್ತೆನೆ ಅಂತ ಹೇಳಿ ಹೋದವನು ಮರಳಿ ಮನಗೆ ಬರದೆ ಕಾಣೆಯಾಗಿರುತ್ತಾನೆ. ಇಲ್ಲಿಯವರೆಗೆ ನಮ್ಮ ಸಂಬಂದಿಕರಲ್ಲಿ, ಪರಿಚಯಸ್ಥರಲ್ಲಿ ಹುಡಕಾಡಿ ವಿಚಾರಿಸಿ ಸಿಗದೆ ಇದ್ದರಿಂದ ಇಂದು ತಡವಾಗಿ ಬಂದು ದೂರು ನೀಡಿದ್ದು, ಕಾಣೆಯಾದ ನನ್ನ ಮಗ ದೇವು ಇತನನ್ನು ಪತ್ತೆ ಮಾಡಲು ಮಾನ್ಯರವರಲ್ಲಿ ವಿನಂತಿ ಅಂತ ಇರುವ ದೂರಿನ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

ಸಬ್‌ ಅರ್ಬನ್‌ ಪೊಲೀಸ್‌ ಠಾಣೆ ;- ದಿನಾಂಕ 04-07-2022  ರಂದು ಸರಕಾರಿ ತರಪೆ ಫಿರ್ಯಾದಿಯಾದ ವಿಶಾಲ್ ಸಿಂಗ್ ಪಿಸಿ ೬೯ ಮತ್ತು ಹನುಮಂತರಾಯ  ಎಎಸ್‌ಐ ರವರು ಠಾಣೆಯಿಂದ ಕಡಗಂಚಿಯಿಂದ ಭೀಮಳ್ಳಿಯ ಕಡೆಗೆ ಹಸುಗಳನ್ನು ಸಾಗಿಸುತ್ತಿದ್ದಾರೆ ಎಂದು ಕರೆ ಬಂದಿದ್ದರಿಂದ ಓಗಿ ಚೆಕ್ ಮಾಡಲು ಸದರಿ ವಾಹನದಲ್ಲಿ ಒಂದು ಓರಿ ಕರು ಇದ್ದು ಸೂಕ್ತ ಕಾಗದ ಪತ್ರಗಳನ್ನು ಕೇಳಲು   ಅವರ ಬಳಿ ಯಾವುದೇ ಕಾಗದ ಪತ್ರಗಳಿರುವುದಿಲ್ಲ .ಸದರಿ ವಾಹನ ಮತ್ತು ವನ್ನು ವಶಕ್ಕೆ ಪಡೆದು ಓರಿ ಕರುವನ್ನು ಗೋಶಾಲೆಗೆ ಕಳಿಸಿ ಖೇಸು ದಾಖಲಿಸಿ ಕೊಂಡ ಬಗ್ಗೆ ವರದಿ.

 

ವಿಶ್ವವಿದ್ಯಾಲಯ ಪೊಲೀಸ್‌ ಠಾಣೆ :- ದಿನಾಂಕ ೦೨-೦೭-೨೦೨೨ ರಂದು ೨:೦೦ ಪಿ.ಎಮ್ ಕ್ಕೆ     ಸದರಿ ಆರೋಪಿತರು ಹೊಲದ ವಿಷಯದಲ್ಲಿ ಪರ‍್ಯದಿಯ ಸಂಗಡ ಜಗಳ ತಗೆದು ಕೊಲೆ ಮಾಡುವ ಉದ್ದೇಶದಿಂದ ಪರ‍್ಯದಿಯ ಮಗನಿಗೆ ರಾಡಿನಿಂದ ಹೊಡೆದಿದ್ದು ಪರ‍್ಯದಿಗೆ ಬಡಿಗೆಯಿಂದ ಹೊಡೆ ಬಡೆ ಮಾಡಿ ಅವಾಚ್ಯ ಶಬ್ಧಗಳಿಂದ ಬೈದು ಜೀವ ಭಯ ಹಾಕಿದ್ದರ ಬಗ್ಗೆ ಅಪರಾಧ ಇರುತ್ತದೆ.

 

 

 

ಅಶೋಕ ನಗರ ಠಾಣೆ :-  ದಿನಾಂಕ:04-07-2022  ರಂದು ೧೦:೩೦ ಎ.ಎಂ.ಕ್ಕೆ ಫಿರ್ಯಾದಿದಾರರಾದ ಶ್ರೀ ದತ್ತಪ್ಪ ತಂದೆ ಅಂಬಣ್ಣ ಗೊಬ್ಬರ ವಯ: ೬೧ ವರ್ಷ ಜಾತಿ: ಎಸ್.ಸಿ.(ಹೊಲೆಯ) ಉ: ನಿವೃತ್ತ ಜಿಲ್ಲಾ ಖಜಾನೆ ಅಧಿಕಾರಿಗಳು ಸಾ|| ಕಾಂತಾ ಕಾಲೋನಿ ಕಲಬುರಗಿ  ಇವರು ಠಾಣೆಗೆ ಹಾಜರಾಗಿ ಲಿಖಿತ ಫಿರ್ಯಾದಿ ಅರ್ಜಿ ಸಲ್ಲಿಸಿದ್ದರ ಸಾರಾಂಶವೆನೆಂದರೆ, ನಾನು ನಿವೃತ್ತ ಜಿಲ್ಲಾ ಖಜಾನೆ ಅಧಿಕಾರಿಯಾಗಿದ್ದು, ನನ್ನ ಹೆಂಡತಿ ನಾಗವೇಣಿ ಅಂತಾ ಇದ್ದು ಅವಳು ಮನೆಕೆಲಸ ಮಾಡಿಕೊಂಡು ಇರುತ್ತಾಳೆ. ನಮಗೆ ೨ ಜನ ಗಂಡು ಮಕ್ಕಳು ಹಾಗೂ ಒಬ್ಬಳು ಹೆಣ್ಣುಮಗಳು ಇರುತ್ತಾಳೆ. ನಮ್ಮ ಹಿರಿಯ ಮಗ ಶಶಿಧರ ಅಂತಾ ಇದ್ದು ಇವನು ಕಳೆದ ಮೂರು ವರ್ಷಗಳಿಂದ ಫೈನ್ ಆರ್ಟ್ಸ ವಿದ್ಯಾಭ್ಯಾಸ ಮಾಡಿಕೊಂಡು ದೆಹಲಿ ನಗರದಲ್ಲಿ ಇರುತ್ತಾನೆ, ಇನ್ನೊಬ್ಬ ಮಗ ಶ್ರೀಧರ ಇತನು ಎಮ್.ಟೆಕ್. ವಿದ್ಯಾಭ್ಯಾಸ ಮಾಡಿಕೊಂಡು ನಮ್ಮ ಹತ್ತಿರ ಇದ್ದು ಅವನು ತನ್ನ ಖಾಸಗಿ ಕೆಲಸದ ನಿಮಿತ್ತ ಕಳೆದ ೩ ದಿವಸಗಳ ಹಿಂದೆ ಬೆಂಗಳೂರಿಗೆ ಹೋಗಿರುತ್ತಾನೆ ಮತ್ತು ಮಗಳಾದ ಐಶ್ವರ್ಯ ಇವಳು ವಲಯ ಅರಣ್ಯ ಅಧಿಕಾರಿ ಅಂತಾ ಕೆಲಸ ಮಾಡಿಕೊಂಡು ಇರುತ್ತಾರೆ.    ನಿನ್ನೆ ದಿನಾಂಕ:೦೩.೦೭.೨೦೨೨ ರಂದು ರಾತ್ರಿ ೧೧:೩೦ ಗಂಟೆಯವರೆಗೆ ನಾನು ನನ್ನ ಹೆಂಡತಿ ಮತ್ತು ತಂಗಿಯ ಮಗನಾದ ಅಖಿಲ್ ಎಲ್ಲರೂ ಕೂಡಿ ಒಂದು ರೂಮನಲ್ಲಿ ಮಲಗಿದ್ದು ಮತ್ತೋಂದು ರೂಮನಲ್ಲಿ ನಮ್ಮ ಮಗಳು ಐಶ್ವರ್ಯ ಇವಳು ಮಲಗಿಕೊಂಡಿದ್ದು ಇರುತ್ತದೆ. ಬೆಳಗಿನ ಜಾವ ಅಂದರೆ ಇಂದು ದಿನಾಂಕ: ೦೪.೦೭.೨೦೨೨ ರಂದು ೦೪:೩೦ ಎ.ಎಮ್.ಕ್ಕೆ ನಾನು ಮೂತ್ರ ವಿಸರ್ಜನೆ ಸಲುವಾಗಿ ಹೊರಗೆ ಬಂದು ನೋಡಿದಾಗ ನಮ್ಮ ಮನೆಯ ಬೆಡರೂಮಿನ ಕಿಟಕಿಯ ಗ್ರಿಲ್ ಮುರಿದಿದ್ದು ನಾನು ಗಾಬರಿಯಾಗಿ ನನ್ನ ಅಳಿಯ ನನ್ನ ಹೆಂಡತಿ ಮತ್ತು ಮಗಳಿಗೆ ಎಬ್ಬಿಸಿ ಎಲ್ಲರೂ ಕೂಡಿ ಬೆಡರೂಮ ಬಾಗಿಲ ಹತ್ತಿರ ಬಂದು ನೋಡಲು ಬೆಡರೂಮಿನ ಒಳಕೊಂಡಿ ಹಾಕಿದ್ದು ನಂತರ ನಮ್ಮ ಅಳಿಯನು ಕಿಟಕಿಯ ಮುಖಾಂತರ ಬೆಡರೂಮಿನ ಒಳಗೆ ಹೋಗಿ ಬಾಗಿಲ ಕೊಂಡಿ ತೆಗೆದಿದ್ದು ನಂತರ ಎಲ್ಲರೂ ಕೂಡಿ ಒಳಗೆ ಹೋಗಿ ನೋಡಲು ಆಲಮಾರಿಯ ಲಾಕರ ಮುರಿದಿದ್ದು ಅದರಲ್ಲಿ ಇದ್ದ ಬಟ್ಟೆ ಸಾಮಾನುಗಳು ಚೆಲ್ಲಾ-ಪಿಲ್ಲಿಯಾಗಿ ಬಿದ್ದಿದ್ದು ಆಲಮಾರಿ ಲಾಕರನಲ್ಲಿ ಇಟ್ಟಿದ್ದ ನಗದು ಹಣ ೫೦,೦೦೦/-ರೂ ಮತ್ತು ಬಂಗಾರದ ಸಾಮಾನುಗಳಾದ ೧) ೩೦ ಗ್ರಾಂ.ನ ೨ ಬಂಗಾರದ ಬಳೆಗಳು ಅ.ಕಿ.೧,೨೦,೦೦೦/-ರೂ ೨) ೬೦ ಗ್ರಾಂ.ನ ಒಂದು ಬಂಗಾರದ ಮಂಗಳಸೂತ್ರ ಅ.ಕಿ.೨,೦೦,೦೦೦/-ರೂ ೩) ೪೦ ಗ್ರಾಂ.ನ ೨ ಬಂಗಾರದ ಪಾಟಲಿಗಳು ಅ.ಕಿ.೧,೮೦,೦೦೦/-ರೂ ೪) ೩೦ ಗ್ರಾಂ.ನ ೧ ಬಂಗಾರದ ನೆಕಲೆಸ್ ಅ.ಕಿ.೧,೨೦,೦೦೦/-ರೂ ೫) ೧೫ ಗ್ರಾಂ.ನ ೧ ಲಕ್ಷ್ಮಿ ಸರ ಅ.ಕಿ.೫೦,೦೦೦/-ರೂ ಮತ್ತು ಬೆಳ್ಳಿಯ ಸಾಮಾನುಗಳಾದ ೧) ಒಂದು ಬೆಳ್ಳಿಯ ದೇವಿ ಮರ‍್ತಿ ಅ.ಕಿ.೩೦,೦೦೦/-ರೂ ೨) ೩೦ ತೊಲೆಯ ಬೆಳ್ಳಿಯ ಸಮೆ ಅ.ಕಿ.೧೦,೦೦೦/-ರೂ ೩) ಒಂದು ಬೆಳ್ಳಿಯ ಗ್ಲಾಸ್ ಅ.ಕಿ.೨,೦೦೦/-ರೂ ೪) ೨ ಬೆಳ್ಳಿಯ ಖಡಗಗಳು ಅ.ಕಿ.೧,೦೦೦/-ರೂ ಹೀಗೆ ಒಟ್ಟು ನಗದು ಹಣ, ಬಂಗಾರ ಮತ್ತು ಬೆಳ್ಳಿಯ ಆಭರಣಗಳು ಸೇರಿ ಒಟ್ಟು ರೂ. ೭,೬೩,೦೦೦/- ಕಿಮ್ಮತ್ತಿನ ಸಾಮಾನುಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಕಾರಣ ನಮ್ಮ ಮನೆಯ ಬೀಗ ಮುರಿದು ಕಳ್ಳತನ ಮಾಡಿಕೊಂಡು ಹೋಗಿರುವ ಕಳ್ಳರನ್ನು ಪತ್ತೆಮಾಡಿ ಅವರ ವಿರುದ್ಧ ಕ್ರಮ ಜರುಗಿಸಿ ನಮ್ಮ ವಸ್ತುಗಳನ್ನು ನಮಗೆ ದೊರಕಿಸಿ ಕೊಡಲು ಮಾನ್ಯರಲ್ಲಿ ವಿನಂತಿ ಅಂತ ಇತ್ಯಾದಿಯಾಗಿ ಸಲ್ಲಿಸಿದ ಅರ್ಜಿ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ

ಇತ್ತೀಚಿನ ನವೀಕರಣ​ : 16-07-2022 07:01 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080