ಅಭಿಪ್ರಾಯ / ಸಲಹೆಗಳು

ರೋಜಾ ಪೊಲೀಸ್ ಠಾಣೆ :- ದಿನಾಂಕ: ೦೯/೦೫/೨೦೨೨ ರಂದು ಸಾಯಂಕಾಲ ೪.೦೦ ಪಿ.ಎಮ್ ಹಾಗರಗಾ ಕ್ರಾಸ್ ಹತ್ತಿರ ಕಾಲಂ ನಂ: ೦೮ ರಲ್ಲಿ ನಮೂದಿಸಿದ ಆರೋಪಿತರು ವಿನಾಃ ಕಾರಣ ಹಣದ ವಿಷಯದಲ್ಲಿ ಫರ‍್ಯಾದಿದಾರರಿಗೆ ತೊಂದರೆ ಕೊಟ್ಟು, ಆಗಾಗ ಫಿರ‍್ಯಾದಿದಾರರಿಗೆ ತಡೆದು ನಿಲ್ಲಿಸಿ ನನಗೆ ಅವಾಚ್ಯ ಶಬ್ಧಗಳಿಂದ ಬೈಯ್ದು ಕೈಯಿಂದ ಹೊಡೆದು ಜೀವದ ಭಯ ಬೆದರಿಕೆ ಹಾಕಿದವರ ವಿರುದ್ಧ ಕಾನೂನಿನ ಕ್ರಮ ಜರುಗಿಸಬೇಕೆಂದು ಕೊಟ್ಟ ಅರ್ಜಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

ರೋಜಾ ಪೊಲೀಸ್ ಠಾಣೆ :- ದಿನಾಂಕ: 04-06-2022  ರಂದು ಯದುಲ್ಲಾ ಕಾಲೋನಿಯ ನೀರಿನ ಟಾಕಿಯ ಹತ್ತಿರ ಮಟಕಾ ಬರೆದುಕೊಳ್ಳುತ್ತಿರುವ ಖಚಿತ ಬಾತ್ಮಿ ಮೇರೆಗೆ ಅವನ ಮೇಲೆ ದಾಳಿ ಮಾಡಿ ಹಿಡಿದು ಅವನಿಂದ ನಗದು ೬೮೦ ರೂ , ಒಂದು ಮಟಕಾ ಚೀಟಿ, ಒಂದು ಬಾಲ್ ಪೆನ್ ಜಪ್ತು ಪಡಿಸಿಕೊಂಡು ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

ಚೌಕ ಪೊಲೀಸ್ ಠಾಣೆ :-  ದಿನಾಂಕ.04-06-2022  ರಂದು ಬೆಳಿಗ್ಗೆ ೧೦.೩೦ ಗಂಟೆಗೆ ಫಿಯ್ಯಾದಿದಾರರು ಠಾಣೆಗೆ ಹಾಜರಾಗಿ ದೂರು ಸಲ್ಲಿಸಿದ ಸಾರಂಶವೇನೆಂದರೆ, ನಾನು ಶ್ರೀಮತಿ ಲಲಿತಾ ಗಂಡ ರಾಜು ರಾಠೋಡ ಜಾ:ಲಂಬಾಣಿ ಉ:ಮನೆಕೆಲಸ ಸಾ:ಸಾವಳಗಿ (ಕೆ) ತಾಂಡಾ ತಾ: ಆಳಂದ ಜಿ: ಕಲಬುರಗಿ, ಹಾ,ವಾ ಬಿವಂಡಿ ಮುಂಬೈ ಈ ಮೂಲಕ ತಮ್ಮಲ್ಲಿ ದೂರು ಸಲ್ಲಿಸುವುದೇನೆಂದರೆ, ನಾನು ಮತ್ತು ನನ್ನ ಗಂಡ ಮುಂಬೈಯಲ್ಲಿ  ಕೂಲಿ ಕೆಲಸ ಮಾಡಿಕೊಂಡು ಕುಟುಂಬದೊಂದಿಗೆ ವಾಸವಾಗಿರುತ್ತೇನೆ. ನನ್ನ  ಗಂಡ ರಾಜು ತಂದೆ ಲಕ್ಷ್ಮಣ  ರಾಠೋಡ ವ:೪೫  ವರ್ಷ ಉ:ಸಾವಳಗಿ (ಕೆ) ತಾಂಡಾ ತಾ: ಆಳಂದ ಜಿ: ಕಲಬುರಗಿ ಅಂತಾ ಇದ್ದು ನನ್ನ ಗಂಡ ದಿನಾಂಕ:೦೧.೦೬.೨೦೨೨ ರಂದು ನಮ್ಮ ಅತ್ತೆ ಶಾಲುಬಾಯಿ ಅವರಿಗೆ ಮಾತನಾಡಿಸಿಕೋಂಡು ಬರುತ್ತೆನೆ ಅಂತಾ ಸ್ವಂತ ರಾದ ಸಾವಳಗಿ (ಕೆ) ತಾಂಡಾ ತಾ: ಆಳಂದ ಜಿ: ಕಲಬುರಗಿಗೆ ಬಂದಿರುತ್ತಾನೆ, ಮತ್ತು ನನ್ನ ಗಂಡ ಸರಾಯಿ ಕಂಠಪೂರ್ತಿ  ಕುಡಿಯುವ ಚಟವುಳ್ಳವನಾಗಿದ್ದು ಆಗಾಗೆ ಕುಡಿದ ಅಮಲಿನಲ್ಲಿ ಅಲ್ಲಲ್ಲಿ ಬಿದ್ದು ಮರಳಿ ಮನೆಗೆ ಬಂದಿರುತ್ತಾನೆ, ಹೀಗಿದ್ದು ನಿನ್ನೆ ದಿನಾಂಕ:೦೩.೦೬.೨೦೨೨ ರಂದು ಬೆಳಿಗ್ಗೆ ೧೧.೦೦ ಎಎಮ್ಕ್ಕೆ ನಾನು ಬಿವಂಡಿ ಮುಂಬೈಯಲ್ಲಿ ಕೆಲಸಕ್ಕೆ ಹೋದಾಗ ನನ್ನ ಗಂಡನ ಅಕ್ಕನ ಮಗನಾದ ರಾಮು ತಂದೆ ಲಕ್ಷ್ಮಣ ರಾಠೋಡ ಇತನು ನನಗೆ ಪೋನ ಮಾಡಿ ತಿಳಿಸಿದ್ದು ಎನಂದರೆ ನಿನ್ನ ಗಂಡನಾದ ರಾಜು ಇತನು ಎಮ್ ಎಸ್ ಕಾರಬಾರಿ ಅಡತಿ ಹತ್ತಿರ ಕುಡಿದು ಕುಡಿದು ಸರಿಯಾಗಿ ಊಟ ಮಾಡದೆ ಬಿದ್ದು ಮೃತ ಪಟ್ಟಿರುತ್ತಾನೆ ಮೃತ ದೇಹ ಜಿಲ್ಲಾ ಸರಕಾರಿ ಆಸ್ಪತ್ರೆಗೆಯ ಶವಗಾರ ಕೋಣೆಯಲ್ಲಿ ಇಟ್ಟಿರುತ್ತದೆ ಅಂತಾ ಪೋನ ಮಾಡಿ ತಿಳಿಸಿರುತ್ತಾನೆ, ಆಗ ನಾನು ಗಾಬರಿಯಿಂದ ನನ್ನ ಮಕ್ಕಳೊಂದಿಗೆ ಮುಂಬೈಯಿಂದ ಇಂದು ದಿನಾಂಕ ೦೪.೦೬.೨೦೨೨ ರಂದು ಬೆಳಿಗ್ಗೆ ೧೦.೦೦ ಎಎಮ್ಕ್ಕೆ ಬಂದು ನಾನು ಮತ್ತು ಮಕ್ಕಳು ಜಿಲ್ಲಾ ಸರಕಾರಿ ಆಸ್ಪತ್ರೆಗೆಯ ಶವಗಾರ ಕೋಣೆಯಲ್ಲಿರುವ ಮೃತಪಟ್ಟ ನನ್ನ ಗಂಡನ ಶವವನ್ನು ನೋಡಿ ಗುರುತಿಸಿರುತ್ತೆನೆ, ಅವನ ಮೈಮೇಲೆ ಯಾವುದೆ ಗಾಯಗಳು ಕಂಡು ಬಂದಿರುವುದಿಲ್ಲಾ .ನನ್ನ ಗಂಡ ರಾಜು ಇವರು ದಿನಾಂಕ:೦೧.೦೬.೨೦೨೨ ರಾತ್ರಿಯಿಂದ ದಿನಾಂಕ:೦೨.೦೬.೨೦೨೨ ರಾತ್ರಿವರೆಗೆ ಸರಿಯಾಗಿ ಊಟ ಮಾಡದೇ ಬಿಸಿಲಿನಲ್ಲಿಯೇ ವಿಪರೀತ ಸರಾಯಿ ಕುಡಿದು ಗಂಜ ಎರಿಯಾದಲ್ಲಿ ತಿರುಗಾಡಿ ರಾತ್ರಿ ಸಮಯದಲ್ಲಿ ಗಂಜ ಏರಿಯಾದ ಡಾ:ಎಮ್ ಎಸ್ ಕಾರಬಾರಿ ಇವರ ಅಡತಿ ಹತ್ತಿರ ನಿಶಕ್ತರಾಗಿ ಮಲಗಿಕೋಂಡಾಗ ಮೃತಪಟ್ಟಿರುತ್ತಾನೆ ನನ್ನ ಗಂಡ ಕುಡಿತ ಚಟಕ್ಕೆ ಬಲಿಯಾಗಿ ಸರಿಯಾಗಿ ಊಟ ಮಾಡದೇ ನಿಶಕ್ತನಾಗಿ  ಪೃತಪಟ್ಟಿರುತ್ತಾನೆ ನನ್ನ ಗಂಡನ ಸಾವಿನಲ್ಲಿ ನನ್ನದು ಯಾರ ಮೇಲೆ ಯಾವುದೇ ಸಂಶಯ ಫಿರ್ಯಾದಿ ದೂರು ಇರುವುದಿಲ್ಲಾ. ಕಾರಣ ನನ್ನ ಗಂಡನ ಶವದ ಬಗ್ಗೆ  ಮುಂದಿನ ಕಾನೂನು ಕ್ರಮ ಜರೂಗಿಸಿ ಶವ ಸಂಸ್ಕಾರ ಕುರಿತು ನನ್ನ ಗಂಡನ ಶವ ನನಗೆ ಕೊಡಲು ವಿನಂತಿ   ಅಂತಾ ಕೊಟ್ಟ ದೂರು ಫಿರ್ಯಾದಿ  ಅರ್ಜಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಇತ್ತೀಚಿನ ನವೀಕರಣ​ : 17-06-2022 12:00 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080