ಅಭಿಪ್ರಾಯ / ಸಲಹೆಗಳು

ಚೌಕ ಪೊಲೀಸ್ ಠಾಣೆ :- ದಿನಾಂಕ:04-05-2022 ರಂದು ರಾತ್ರಿ ೮.೪೫ ಪಿಎಂಕ್ಕೆ ಫರ‍್ಯಾದಿದಾರನಾದ ಶ್ರೀ ಮಹ್ಮದ ಮುಖೀಮ್ ಕಾಜಲ್ ತಂದೆ ಮಹ್ಮದಸಾಬ ಕಾಜಲ್ ವ:೫೨ ವರ್ಷ ಉ:ಕಾಜಲ್ ಕಲೆಕ್ಷನ ಬಟ್ಟೆ ಅಂಗಡಿಯ ಮಾಲೀಕ ಜಾ:ಮುಸ್ಲಿಂ ಸಾ:ಅಂಗಡಿ ನಂ.೭-೧೭೨/೨ಎ ಮುಸ್ಲಿಂಚೌಕ ಮೋಮಿನಪೂರ ಕಲಬುರಗಿ ಇವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಗಣಕೀಕೃತ ಮಾಡಿಸಿದ ಅರ್ಜಿಯನ್ನು ಹಾಜರ ಪಡಿಸಿದ್ದು ಸದರಿ ಫಿರ್ಯಾದಿ ಅರ್ಜಿಯ ಸಾರಾಂಶವೆನೆಂದರೆ ಮಾನ್ಯರವರಲ್ಲಿ ಈ ಮೇಲ್ಕಾಣಿಸಿದ ವಿಷಯಕ್ಕೆ ಸಂಬಂಧಿಸಿದಂತೆ ತಮ್ಮಲ್ಲಿ ಅರಿಕೆ ಮಾಡಿಕೊಳ್ಳುವುದೇನೆಂದರೆ ನಾನು ನನ್ನ ಮಕ್ಕಳೊಂದಿಗೆ ಮುಸ್ಲಿಂಚೌಕ ಹತ್ತಿರ ಕಾಜಲ್ ಕಲೆಕ್ಷನ ಎಂಬ ಹೆಸರಿನಿಂದ ಬಟ್ಟೆ ಅಂಗಡಿ ಇಟ್ಟುಕೊಂಡು ವ್ಯಾಪಾರ ಮಾಡಿಕೊಂಡು ವಾಸವಾಗಿರುತ್ತೇನೆ. ನಮ್ಮ ಬಟ್ಟೆ ಅಂಗಡಿಯಿಂದ ಸ್ವಲ್ಪ ದೂರದಲ್ಲಿ ನದೀಮ್ ಮತ್ತು ನವೀದ ಅನ್ನುವವರು ಸಹ ಸೂರತಖಜಾನಾ ಎಂಬ ಹೆಸರಿನಿಂದ ಬಟ್ಟೆ ಅಂಗಡಿ ಇಟ್ಟುಕೊಂಡು ವ್ಯಾಪಾರ ಮಾಡಿಕೊಂಡಿರುತ್ತಾರೆ. ಈಗ ಸುಮಾರು ೮-೧೦ ದಿವಸಗಳಿಂದ ರಮಜಾನ ಹಬ್ಬ ಇದುದ್ದರಿಂದ ನಾನು ತಂದಿರುವ ಬಟ್ಟೆಗಳನ್ನು ಗ್ರಾಹಕರಿಗೆ ನಾನು ಖರೀದಿಸಿದ ದರದಲ್ಲಿಯೇ ಕಡಿಮೆ ದರದಲ್ಲಿ(ಬೆಲೆ)ಯಲ್ಲಿ ಮಾರಾಟ ಮಾಡುತ್ತಿದ್ದರಿಂದ ಹೆಚ್ಚಿನ ಗಿರಾಕಿಗಳು ನನ್ನ ಅಂಗಡಿಗೆ ಬರುತ್ತಿರುವುದರಿಂದ ಅವನು  ನನ್ನ ಮೇಲೆ ಅಸೂಯೆ ಪಡುತ್ತಾ ಬಂದಿರುತ್ತಾರೆ.  ಹೀಗಿದ್ದು ಮೊನ್ನೆ ಚಾಂದ ರಾತ್ರ ಇದುದ್ದರಿಂದ ದಿನಾಂಕ:೦೨.೦೫.೨೦೨೨ ರಂದು ರಾತ್ರಿ ೯.೧೫ ಗಂಟೆ ಸುಮಾರಿಗೆ ನಾನು ಮತ್ತು ನನ್ನ ಮಗ ಮಹ್ಮದ ಶೋಹೆಬ ಕಾಜಲ ಇಬ್ಬರೂ ಕೂಡಿಕೊಂಡು ನಮ್ಮ ಬಟ್ಟೆ ಅಂಗಡಿಯಲ್ಲಿ ವ್ಯಾಪಾರ ಮಾಡುತ್ತಾ ಕುಳಿತುಕೊಂಡಾಗ ನಮ್ಮ ವ್ಯಾಪಾರ ವಹಿವಾಟು ಸಹಿಸದೇ ಒಮ್ಮೇಲೆ ಸೂರತಖಜಾನಾ ಬಟ್ಟೆ ಅಂಗಡಿಯ ಮಾಲೀಕರಾದ ೧) ನದೀಮ್ ಮತ್ತು ಅವರ ತಮ್ಮ ೨) ನಮೀದ್ ಮತ್ತು ಅವನ ಗೆಳೆಯನಾಗಿರುವ ೩) ನಸೀರ ನವಾಡೇ ಹಾಗೂ ನದೀಮ್ ಇವರ ಅಂಗಡಿಯಲ್ಲಿ ಕೆಲಸ ಮಾಡುವ ೭-೮ ಜನ ಹುಡುಗರೊಂದಿಗೆ ಕೈಯಲ್ಲಿ ರಾಡ್ ಮತ್ತು ಬಡಿಗೆಗಳನ್ನು ಹಿಡಿದುಕೊಂಡು ಬಂದವರೇ ನದೀಮ್ ಮತ್ತು ನವೀದ್ ಇವರಿಬ್ಬರೂ ಕ್ಯಾಬೇ ರಾಂಡಕೇ ತೇರಿ ಮಾಕಿ ಚೂತ್ ಸಾಲೇ, ತುಮ್ ರಮಜಾನಕೇ ದಿನ ಇತನಾ ಕಮ್ ರೇಟಮೇ ಕಪಡೇ ಬೇಚಕೇ ಹಮಾರೆ ಗಿರಾಕೋ ತುಮ್ ತುಮಾರೆ ದುಕಾನಕೋ ಬುಲಾಕೆ ಬೇಪಾರ ಕರಕೇ ಹಮಾರೆಕೋ ಘಾಟಾ ಕರರಹೆಹೋ ತುಮಾರೆಕೋ ಆಜ್ ಜಿಂದಾ ನಹೀ ಚೋಡತೆ ಸಾಲೇ ಅನ್ನುತ್ತಾ ನನಗೆ ನದೀಮ್ ಇತನು ತನ್ನ ಕೈಯಲ್ಲಿದ ಬಡಿಗೆಯಿಂದ ನನ್ನ ಎಡಗೈ ಮಣಿಕಟ್ಟಿನ ಮೇಲೆ ಹೊಡೆದು ರಕ್ತಗಾಯ & ಗುಪ್ತಗಾಯ ಪಡಿಸಿದನು.  ಅಲ್ಲದೇ ನವೀದ್ ಇತನು ಸಹ ತನ್ನ ಕೈಯಲ್ಲಿದ ರಾಡಿನಿಂದ ನನ್ನ ಎದೆಗೆ, ತೊಡೆಗೆ ಹೊಡೆದು ಗುಪ್ತಗಾಯ ಪಡಿಸಿದನು. ನಸೀರ ನವಾಡೇ ಇತನು ಕೈಯಿಂದ ತುಟಿಯ ಮೇಲೆ ಮುಷ್ಠಿ ಮಾಡಿ ಹೊಡೆದು ರಕ್ತಗಾಯ ಪಡಿಸಿದನು. ಇದನ್ನು ಕಂಡು ಬಿಡಿಸಲು ಬಂದ ನನ್ನ ಮಗ ಮಹ್ಮದ ಶೋಹೆಬ್ ಇತನಿಗೆ ನದೀಮ್ ಇತನು ಅವನ ಹಿಂದೆ ಬಂದ ಹುಡುಗರಿಗೆ ಹಿಡಿದುಕೊಳ್ಳಲು ಹೇಳಿದಾಗ ಅವನಿಗೆ ಅವನ ಹಿಂದೆ ಬಂದ ಹುಡುಗರು ಒತ್ತಿಯಾಗಿ ಹಿಡಿದುಕೊಂಡಾಗ ನದೀಮ್ ಇತನು ಅವನಿಗೂ ಸಹ ತನ್ನ ಕೈಯಲ್ಲಿದ ಬಡಿಗೆಯಿಂದ ತಲೆಯ ಮೇಲೆ ಹೊಡೆದು ರಕ್ತಗಾಯ ಪಡಿಸಿದ್ದು ಮತ್ತು ನವೀದ್ ಇತನು ಸಹ ತನ್ನ ಕೈಯಿಲ್ಲಿದ ರಾಡಿನಿಂದ ನನ್ನ ಮಗನ ಎಡ ಎದೆಯ ಮೇಲೆ ಹೊಡೆದು ಗುಪ್ತಗಾಯ ಪಡಿಸಿದ್ದು ಅಲ್ಲದೇ ಅವರ ಹಿಂದೆ ಇದ್ದ ನಸೀರ್ ನವಾಡೇ ಮತ್ತು ಅವನ ಹಿಂದಿನ ಜನರೂ ಕೈಯಿಂದ ಸಿಕ್ಕಾಪಟ್ಟೆಯಾಗಿ ಮುಖದ ಮೇಲೆ, ಎದೆಯ ಮೇಲೆ ಹೊಡೆದು ಗುಪ್ತಗಾಯ ಪಡಿಸಿರುತ್ತಾರೆ. ಇವರೆಲ್ಲರೂ ಸೇರಿ ನಮ್ಮ ಅಂಗಡಿಯಲ್ಲಿ ಹೊಡೆಯುತ್ತಿರುವುದನ್ನು ಕಂಡು ಅಲ್ಲೇ ಇದ್ದ ಅಜ್ಜು ತಂದೆ ದಾದೇಅಲಿ, ಸಾಜೀದ ತಂದೆ ಎಕ್ಬಾಲ ಮತ್ತು ನಮ್ಮ ಅಂಗಡಿಯ ಅಕ್ಕಪಕ್ಕದ ಜನರೂ ಓಡಿ ಬಂದು ಜಗಳಾ ಬಿಡಿಸಿರುತ್ತಾರೆ. ಇಲ್ಲದಿದ್ದರೆ ಅವರು ಇನ್ನು ಹೊಡೆಯುತ್ತಿದರು. ಸದರಿ ಜಗಳದಲ್ಲಿ ನನ್ನ ಹತ್ತಿರ ಇದ್ದ ನಗದು ಹಣ ೪೫,೦೦೦/-ರೂ(ನಲವತ್ತೈದು ಸಾವಿರ ರೂಪಾಯಿ) ನಗದು ಹಣ ಮತ್ತು ಮೋಬೈಲ ಜಗಳದಲ್ಲಿ ಬಿದ್ದು ಕಳೆದು ಹೋಗಿರುತ್ತವೆ. ನನ್ನ ಮಗನಿಗೆ ರಕ್ತ ಗಾಯಗಳಾಗಿದ್ದರಿಂದ ಅವನಿಗೆ ತೆಗೆದುಕೊಂಡು ನಾನು ಉಪಚಾರಕ್ಕಾಗಿ ಆಸ್ಪತ್ರೆಗೆ ಹೋಗಿರುತ್ತೇನೆ. ನಿನ್ನೆ ರಮಜಾನ ಹಬ್ಬ ಇದುದ್ದರಿಂದ  ಈ ವಿಷಯದಲ್ಲಿ ನಾನು ಮನೆಯಲ್ಲಿ ವಿಚಾರಿಸಿ ಇಂದು ತಡಮಾಡಿ ಠಾಣೆಗೆ ಬಂದು ದೂರು ಕೊಟ್ಟಿರುತ್ತೇನೆ. ಕಾರಣ ಅನಾವಶ್ಯಕವಾಗಿ ನಮ್ಮ ಅಂಗಡಿಗೆ ಬಂದು ನನಗೆ ಮತ್ತು ನನ್ನ ಮಗನೊಂದಿಗೆ ಅನಾವಶ್ಯಕವಾಗಿ ಜಗಳ ತೆಗೆದು  ಬಡಿಗೆ & ರಾಡಿನಿಂದ ಹೊಡೆದು ಹಲ್ಲೆ ಮಾಡಿದ  ೧) ನದೀಮ ಸೂರತಖಜಾನಾ ೨) ನವೀದ ಸೂರತಖಜಾನಾ ೩) ನಸೀರ ನವಾಡೇ ಅವರ ಸಂಗಡ ಬಂದ ೭-೮ ಜನರು ಈ ಮೇಲ್ಕಂಡ ಜನರ ವಿರುದ್ದ ಸೂಕ್ತ ಕಾನೂನು ಕ್ರಮ ಜರೂಗಿಸಲು ವಿನಂತಿ ಅಂತಾ ಕೊಟ್ಟ ಫಿರ್ಯಾದಿಯ ಅರ್ಜಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

ಚೌಕ ಪೊಲೀಸ್ ಠಾಣೆ :-  ದಿನಾಂಕ:04-05-2022 ರಂದು ರಾತ್ರಿ ೨೨.೦೦ ಪಿಎಂಕ್ಕೆ ಫಿರ್ಯ‍್ಯಾದಿದಾರನಾದ ಶ್ರೀ ನದೀಮ್ ಅಹೆಮದ ತಂದೆ ನಸೀಮ್ ಅಹೆಮದ ವ:೨೭ ವರ್ಷ ಉ:ಸೂರತ್ ಖಜಾನಾ ಬಟ್ಟೆ ಅಂಗಡಿಯ ಮಾಲೀಕ ಜಾ:ಮುಸ್ಲಿಂ ಸಾ:ಅಂಗಡಿ ನಂ.ಜೀನತ್ ಟಾವರ ೨ನೇ ಮಹಡಿ ಮ.ನಂ.೪ ಮುಸ್ಲಿಂಚೌಕ ಮೋಮಿನಪೂರ ಕಲಬುರಗಿ ಇವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಗಣಕೀಕೃತ ಮಾಡಿಸಿದ ಅರ್ಜಿಯನ್ನು ಹಾಜರ ಪಡಿಸಿದ್ದು ಸದರಿ ಫಿರ್ಯದಿ ಅರ್ಜಿಯ ಸಾರಾಂಶವೆನೆಂದರೆ ಮಾನ್ಯರವರಲ್ಲಿ ಈ ಮೇಲ್ಕಾಣಿಸಿದ ವಿಷಯಕ್ಕೆ ಸಂಬಂಧಿಸಿದಂತೆ ತಮ್ಮಲ್ಲಿ ಅರಿಕೆ ಮಾಡಿಕೊಳ್ಳುವುದೇನೆಂದರೆ  ನಾನು ನನ್ನ ತಮ್ಮ ನವೀದ್ ಅಹೆಮದ ಇತನೊಂದಿಗೆ ಮುಸ್ಲಿಂಚೌಕ ಹತ್ತಿರ ಸೂರತ್ ಖಜಾನಾ ಬಟ್ಟೆ ಎಂಬ ಹೆಸರಿನಿಂದ ಬಟ್ಟೆ ಅಂಗಡಿ ಇಟ್ಟುಕೊಂಡು ವ್ಯಾಪಾರ ಮಾಡಿಕೊಂಡು ವಾಸವಾಗಿರುತ್ತೇನೆ. ನಮ್ಮ ಬಟ್ಟೆ ಅಂಗಡಿಯ ಎದುರುಗಡೆ  ಮಹ್ಮದ ಮುಖೀಮ್ ಕಾಜಲ್ ಅನ್ನುವವರು ಸಹ ಕಾಜಲ್ ಕಲೆಕ್ಷನ್ ಎಂಬ ಹೆಸರಿನಿಂದ ಬಟ್ಟೆ ಅಂಗಡಿ ಇಟ್ಟುಕೊಂಡು ವ್ಯಾಪಾರ ಮಾಡಿಕೊಂಡಿರುತ್ತಾರೆ. ಈಗ ಸುಮಾರು ೮-೧೦ ದಿವಸಗಳಿಂದ ರಮಜಾನ ಹಬ್ಬ ಇದುದ್ದರಿಂದ ನಾನು ತಂದಿರುವ ಬಟ್ಟೆಗಳನ್ನು ಗ್ರಾಹಕರಿಗೆ ಕಡಿಮೆ ದರದಲ್ಲಿ(ಬೆಲೆ)ಯಲ್ಲಿ ಸೂಟ್ ಗಳನ್ನು ಮಾರಾಟ ಮಾಡುತ್ತಿದ್ದರಿಂದ ಹೆಚ್ಚಿನ ಗಿರಾಕಿಗಳು ನನ್ನ ಅಂಗಡಿಗೆ ಬರುತ್ತಿರುವುದರಿಂದ ಅವನು  ನನ್ನ ಮೇಲೆ ಅಸೂಯೆ ಪಡುತ್ತಾ ಬಂದಿರುತ್ತಾನೆ. ಹೀಗಿದ್ದು ಮೊನ್ನೆ ಚಾಂದ ರಾತ್ರಿ ಇದುದ್ದರಿಂದ ದಿನಾಂಕ:೦೨.೦೫.೨೦೨೨ ರಂದು ರಾತ್ರಿ ೯.೩೦ ಗಂಟೆ ಸುಮಾರಿಗೆ ನಾನು ಮತ್ತು ನನ್ನ ತಮ್ಮ ನವೀದ್ ಅಹೆಮದ ಮತ್ತು ನಮ್ಮ ಅಂಗಡಿಯಲ್ಲಿ ಕೆಲಸ ಮಾಡುವ ಶೇಖ ಶಹದಾಬ ಇವರೊಂದಿಗೆ ನಮ್ಮ ಅಂಗಡಿಯ ಮುಂದುಗಡೆ ಮಂಚಾ ಹಾಕಿ ಬಟ್ಟೆಯನ್ನು ಮಾರಾಟ ಮಾಡುತ್ತಾ ನಿಂತುಕೊಂಡಾಗ ನಮ್ಮ ಅಂಗಡಿಯ ಎದುರುಗಡೆ ಇರುವ  ೧) ಲಿಯಾಖತ್  ಕಾಜಲ ೨) ಮುಖೀಮ್ ಕಾಜಲ ೩) ಶೋಹೆಬ್ ಕಾಜಲ್ ೪) ಜೋಹೆಬ್ ಕಾಜಲ ೫) ವಾಜೀದ ಕಾಜಲ ಇವರೆಲ್ಲರೂ ಕೂಡಿಕೊಂಡು ಬಂದವರೇ ಶೋಹೆಬ್ ಕಾಜಲ್ ಕೈಯಲ್ಲಿ ರಾಡ್ ಹಿಡಿದುಕೊಂಡು ಬಂದವನೇ  ಲಿಯಾಖತ್ ಮತ್ತು ಶೋಹೆಬ್ ಕಾಜಲ ಇಬ್ಬರೂ  ಕ್ಯಾಬೇ ರಾಂಡಕೇ ತೇರಿ ಮಾಕಿ ಚೂತ್ ಸಾಲೇ, ತುಮ್ ಬಾರಸೇ ಆಕೆ ಹಮಾರೆ ಗುಲರ‍್ಗೆಮೆ ರಹೆನೆವಾಲೆ ಹಮಾರೆಕೋ ಹಮಾರೆ ಧಂನದೆಕೋ ಖರಾಬ ಕರಕೇ ಹಮಾರೆಕೋ  ರಮಜಾನಕೇ ದಿನ ಇತನಾ ಕಮ್ ರೇಟಮೇ ಕಪಡೇ ಬೇಚಕೇ ಹಮಾರೆ ಗಿರಾಕೋ ತುಮ್ ತುಮಾರೆ ದುಕಾನಕೋ ಬುಲಾಕೆ ಬೇಪಾರ ಕರಕೇ ಹಮಾರೆಕೋ ಘಾಟಾ ಕರರಹೆಹೋ ತುಮಾರೆಕೋ ಆಜ್ ಜಿಂದಾ ನಹೀ ಚೋಡತೆ ಸಾಲೇ ಅನ್ನುತ್ತಾ ನನಗೆ ಲಿಯಾಖತ್ ಅಲಿ ಇತನು ತನ್ನ ಕೈಯಲ್ಲಿದ ಬಡಿಗೆಯಿಂದ ನನ್ನ ಬೆನ್ನಿಗೆ ಹೊಡೆದು ಗುಪ್ತಗಾಯ ಮತ್ತು ತೆರಚಿದ ಗಾಯ ಪಡಿಸಿದನು. ಅಲ್ಲದೇ ಶೋಹೆಬ್ ಕಾಜಲ ಇತನು ತನ್ನ ಕೈಯಲ್ಲಿದ ರಾಡಿನಿಂದ ನನ್ನ ಬಲಗೈ ಭುಜದ ಮೇಲೆ ಹೊಡೆದು ಗುಪ್ತಗಾಯ ಪಡಿಸಿದನು. ಅವನ ಹಿಂದೆ ಇದ್ದ ಜೋಹೆಬ್ ಕಾಜಲ, ಮುಖೀಮ್ ಕಾಜಲ  ವಾಜೀದ ಕಾಜಲ ಇವರು ಕೈಗಳಿಂದ ಮುಖದ ಮೇಲೆ, ಹೊಟ್ಟೆಯಲ್ಲಿ ಹೊಡೆದು ಗುಪ್ತಗಾಯ ಪಡಿಸಿದರು. ಮತ್ತು ಇದನ್ನು ಕಂಡು ಜಗಳ ಬಿಡಿಸಲು ಬಂದ ನನ್ನ ತಮ್ಮ ನವೀದ್ ಅಹೆಮದ ತಂದೆ ನಸೀಮ್ ಅಹೆಮದ ಇತನಿಗೂ ಸಹ  ಈ ಮೇಲ್ಕಂಡ ಜನರೂ ಕೈಗಳಿಂದ ಬಡಿಗೆ ರಾಡಿನಿಂದ ಬಲಗೈ ಮತ್ತು ಎಡಗೈ ಬೆನ್ನಿಗೆ ಹೊಡೆದು ಗುಪ್ತಗಾಯ ಪಡಿಸಿರುತ್ತಾರೆ. ಅಲ್ಲದೇ ನಮ್ಮ ಅಂಗಡಿಯಲ್ಲಿ ಕೆಲಸ ಮಾಡುವ ಶೇಖ ಶಹಾದಾಬ ಇತನಿಗೆ ಶೋಹೆಬ್ ಕಾಜಲ ಇತನು ಕಬ್ಬಿಣದ ರಾಡಿನಿಂದ  ತಲೆಯ ಮೇಲೆ ಹೊಡೆದು ರಕ್ತಗಾಯ ಪಡಿಸಿದನು. ಅವನ ಹಿಂದೆ ಇದವರು ಕೈಯಿಂದ ಸಿಕ್ಕಾಪಟ್ಟೆಯಾಗಿ ಮುಖದ ಮೇಲೆ, ಎದೆಯ ಮೇಲೆ ಹೊಡೆದು ಗುಪ್ತಗಾಯ ಪಡಿಸಿರುತ್ತಾರೆ. ಇವರೆಲ್ಲರೂ ಸೇರಿ ನಮ್ಮ ಅಂಗಡಿಯಲ್ಲಿ ಹೊಡೆಯುತ್ತಿರುವುದನ್ನು ಕಂಡು ಅಲ್ಲೇ ಇದ್ದ  ಹಬೀಬ ಮುಮತಾಜ್ ಕೆಲಕ್ಷನ, ಜಬ್ಬಾರ ಹೊಟೇಲ ಮಾಲೀಕ ಜೀಶಾನ್ ರ‍್ವೆಜ್ ಮತ್ತು ಜೈನೊದ್ದೀನ ಅಕ್ಕಪಕ್ಕದ ಜನರೂ ಓಡಿ ಬಂದು ಜಗಳಾ ಬಿಡಿಸಿರುತ್ತಾರೆ. ಇಲ್ಲದಿದ್ದರೆ ಅವರು ಇನ್ನು ಹೊಡೆಯುತ್ತಿದರು. ಸದರಿ ಜಗಳದಲ್ಲಿ ನನ್ನ ಮತ್ತು ನಮ್ಮ ತಮ್ಮನ  ಹತ್ತಿರ ಮತ್ತು ಅಂಗಡಿಯಲ್ಲಿ ಕೆಲಸ ಮಾಡುವ ಹುಡುಗನ ಕೊರಳಲ್ಲಿದ್ದ ೨ ತೊಲೆ ಬಂಗಾರದ ಲಾಕೇಟ, ೦೧ ಫೋನ , ಎಕ್ಟ್ರಾನಿಕ್ ಗಡಿಯಾರ, ಕೈಯಲ್ಲಿದ್ದ ಬೆಳ್ಳಿಯ ಉಂಗುರ ಸಾಮಾನುಗಳು ಜಗಳದಲ್ಲಿ ಬಿದ್ದು ಕಳೆದು ಹೋಗಿರುತ್ತವೆ. ನನ್ನ ಅಂಗಡಿಯಲ್ಲಿ ಕೆಲಸ ಮಾಡು ಹುಡುಗ ಶೇಖ ಶಹಾದಾಬ ಇತನಿಗೆ ರಕ್ತ ಗಾಯಗಳಾಗಿದ್ದರಿಂದ ಅವನಿಗೆ ತೆಗೆದುಕೊಂಡು ನಾನು ಉಪಚಾರಕ್ಕಾಗಿ ಆಸ್ಪತ್ರೆಗೆ ಹೋಗಿರುತ್ತೇನೆ. ನಿನ್ನೆ ರಮಜಾನ ಹಬ್ಬ ಇದುದ್ದರಿಂದ ಈ ವಿಷಯದಲ್ಲಿ ನಾನು ಮನೆಯಲ್ಲಿ ವಿಚಾರಿಸಿ ಇಂದು ತಡಮಾಡಿ ಠಾಣೆಗೆ ಬಂದು ದೂರು ಕೊಟ್ಟಿರುತ್ತೇನೆ. ಕಾರಣ ಅನಾವಶ್ಯಕವಾಗಿ ನಮ್ಮ ಅಂಗಡಿಗೆ ಬಂದು ನನಗೆ ಮತ್ತು ನನ್ನ ಮಗನೊಂದಿಗೆ ಅನಾವಶ್ಯಕವಾಗಿ ಜಗಳ ತೆಗೆದು  ಬಡಿಗೆ & ರಾಡಿನಿಂದ ಹೊಡೆದು ಹಲ್ಲೆ ಮಾಡಿದ  ೧) ಲಿಯಾಖತ್ ಕಾಜಲ ೨) ಮುಖೀಮ್ ಕಾಜಲ ೩) ಶೋಹೆಬ್ ಕಾಜಲ್ ೪) ಜೋಹೆಬ್ ಕಾಜಲ ೫) ವಾಜೀದ ಕಾಜಲ ಇವರ ವಿರುದ್ದ ಸೂಕ್ತ ಕಾನೂನು ಕ್ರಮ ಜರೂಗಿಸಲು ವಿನಂತಿ ಅಂತಾ ಕೊಟ್ಟ ಫಿರ್ಯಾದಿಯ ಅರ್ಜಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಇತ್ತೀಚಿನ ನವೀಕರಣ​ : 24-05-2022 01:28 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080