Feedback / Suggestions

ರೋಜಾ ಪೊಲೀಸ ಠಾಣೆ:- ನಾನು ಮಹ್ಮದ ಶಾಕೀರ್ ತಂದೆ ಮಹ್ಮದ ಯುನುಷ್ ಹುಸೇನ್ ವಯಾ: 31 ವರ್ಷ, ಜಾತಿ:ಮುಸ್ಲಿಂ ಉ: ರಿಯಲ್ ಎಸ್ಟೇಟ್ ವ್ಯಾಪಾರ ಸಾ: ಜವಾಹರ್ ಹಿಂದ್ ಶಾಲೆ ನಯಾಮೊಹಲ್ಲಾ ಕಲಬುರಗಿ. ಮೋ.ನಂ. 9071154444 ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಉಪಚಾರ ಪಡೆದುಕೊಂಡು ರೋಜಾ ಪೊಲೀಸ್ ಠಾಣೆಗೆ ಬಂದು ಹೇಳಿ ಗಣಕಿಕೃತ ಮಾಡಿಸಿದ ಹೇಳಿಕೆ ನಾನು ಈ ಮೆಲ್ಕಾಣಸಿದ ಹೆಸರಿನವನಿದ್ದು, ಈ ಮೇಲಿನ  ವಿಳಾಸದಲ್ಲಿ ರಿಯಲ್ ಎಸ್ಟೇಟ್ ವ್ಯಾಪಾರ ಮಾಡಿಕೊಂಡು ಕುಟುಂಬ ಸಮೇತ ಉಪಜೀವನ ನಡೆಸುತ್ತಿದ್ದೆನೆ. ಹೀಗಿದ್ದು ನಿನ್ನೆ ದಿನಾಂಕ: 03/03/2023 ರಂದು ರಾತ್ರಿ 11.30 ಪಿ.ಎಮ್ ಕ್ಕೆ ನನಗೆ ಪರಿಚಯದ ಗೆಳೆಯರಾದ ಅಬ್ದುಲ್ ಮಜೀದ್ ಲಾತೂರೆ, ಮಹ್ಮದ ಅಕ್ತಾರ್ ಲಾತೂರೆ, ಮತ್ತು ಮಹ್ಮದ ಅಕ್ಬರ ಲಾತೂರೆ ಇವರೆಲ್ಲರೂ ಕೂಡಿಕೊಂಡು ತಮ್ಮ ಪಲ್ಸರ್ NS  KA-32 ES-3075 ಮೋಟಾರ್ ಸೈಕಲ್ ಮೇಲೆ ನಮ್ಮ ಮನೇಯ ಹತ್ತಿರ ಬಂದು ನನ್ನ ಅಣ್ಣ ಮಹ್ಮದ ಸಾಜೀದ್ ಇವರಿಗೆ ಮನೆಯಿಂದ ಹೋರಗೆ ಕರೆದು ತೇರಾ ಭೈ ಶಾಕೀರ್ ಕಹಾಂ ಹೈ ಬೇ ಬಾಹರ್ ಬುಲಾ ಅಂತಾ ಅವಾಶ್ಚ ಶಬ್ದಗಳಿಂದ ಬೈಯುತ್ತಿದ್ದರು, ಆಗ ನಾನು ಮನೆಯ ಹೋರಗಡೆ ಗಲಾಟೆ ಶಬ್ದ ಕೇಳಿ, ನಾನೂ ಕೂಡಾ ಹೋರಗಡೆ ಬಂದಾಗ, ಅಬ್ದುಲ್ ಮಜೀದ್ ಲಾತೂರೆ, ಮಹ್ಮದ ಅಕ್ತಾರ್ ಲಾತೂರೆ, ಮತ್ತು ಮಹ್ಮದ ಅಕ್ಬರ ಲಾತೂರೆ ಇವರೆಲ್ಲರೂ ಕೂಡಿ ಅಬೇ ಬೋಸಡಿಕೇ ಹಮಾರಾ ಪಚಾಸ್ ಹಜಾರ್ ರೂಪಾಯಿ ಕ್ಯೂಂ ನಹೀ ದೇ ರಹಾ ಹೇ ಬೇ ರಾಂಡಕೆ ಅಂತಾ  ಅವರಲ್ಲಿಯ ಅಬ್ದುಲ್ ಮಜೀದ್ ಲಾತೂರೆ ಈತನು ತನ್ನಲ್ಲಿದ್ದ ಕಬ್ಬಿಣದ ರಾಡನಿಂದ್ ನನ್ನ ತಲೆಗೆ ಜೋರಾಗಿ ಹೋಡೆದು ಭಾರಿ ರಕ್ತಗಾಯ ಪಡಿಸಿರುತ್ತಾನೆ.  ಮಹ್ಮದ ಅಕ್ಬರ್ ಲಾತೂರೆ ಹಾಗೂ ಮಹ್ಮದ ಅಕ್ತಾರ್ ಲಾತೂರೆ ಇಬ್ಬರೂ ಇಸ್ಕೋ ಆಜ್ ಜಿಂದಾ ನಹೀ ಛೋಡನಾ ಅಂತಾ ತಮ್ಮಲ್ಲಿದ್ದ ಬಡಿಗೆಯಿಂದ ನನ್ನ ಬೆನ್ನಿಗೆ, ಭುಜಕ್ಕೆ ಕಾಲಿಗೆ ಹೊಡೆದು ಗುಪ್ತಗಾಯ ಮಾಡಿರುತ್ತಾರೆ. ಆಗ ನಮ್ಮ ಬಡಾವಣೆಯ ಮುಸ್ತಫಾ ಶಿಕಾರಿ ಹಾಗೂ ಮೀನಾಜ್ ಭೈ ಇವರು ಜಗಳವನ್ನು ಕಣ್ಣಾರೆ ನೋಡಿ ಬಿಡಿಸಿರುತ್ತಾರೆ. ಮತ್ತು ಜನಸೇರುವುದನ್ನು ನೋಡಿ ಅವರೆಲ್ಲರೂ ಓಡಿ ಹೋಗಿರುತ್ತಾರೆ. ಆಗ ನನ್ನ ಇನ್ನೋಬ್ಬ ಅಣ್ಣನಾದ ಮಹ್ಮದ ಸಾಬೀರ ಹುಸೇನ್ ಈತನು ನಾನು ಭಾರಿ ರಕ್ತ ಗಾಯ ಹೊಂದಿರುವದರಿಂದ ಉಪಚಾರ ಕುರಿತು ಜೀಲ್ಲಾ ಸರಕಾರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿರುತ್ತಾನೆ. ನಂತರ ನಾನು ಉಪಚಾರ ಪಡೆದುಕೊಂಡು ರೋಜಾ ಪೊಲೀಸ್ ಠಾಣೆಗೆ ಬಂದು, ಹಣ ಕೋಡುವ ವಿಷಯದಲ್ಲಿ ವಿನಾಕಾರಣ ಹೊಡೆ ಬಡೆ ಮಾಡಿ ಜೀವ ಬೇದರಿಕೆ ಹಾಕಿದವರ ಮೇಲೆ ಕಾನೂನಿನ ಕ್ರಮ ಜರುಗಿಸಬೆಕೆಂದು ಫಿರ್ಯಾದಿ ಕೊಟ್ಟ ಅರ್ಜಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ರೋಜಾ ಪೊಲೀಸ ಠಾಣೆ :- ನಾನು ಶೇಖ್ ಅಕ್ತರ್ ತಂದೆ ಶೇಖ್ ಅಬ್ದುಲ್ ಸಲೀಮ್ ಲಾತೂರೆ ವಯಾ: 29 ವರ್ಷ, ಜಾತಿ:ಮುಸ್ಲಿಂ ಉಃ ವ್ಯಾಪಾರ ಸಾ: ಸಂತ್ರಸವಾಡಿ ಬಸ್ ನಿಲ್ದಾಣ ಹತ್ತಿರ ಜಿಡಿಎ ಕಾಲೋನಿ ಕಲಬುರಗಿ ನಗರ. ಮೋ.ನಂ.9535593457 ಮಣ್ಣೂರ ಆಸ್ಪತ್ರೆಯಲ್ಲಿ ಲ್ಯಾಪ್ ಟಾಪ್ ನಲ್ಲಿ ಹೇಳಿ ಟೈಪ್ ಮಾಡಿಸಿದ ನಾನು ಈ ಮೆಲ್ಕಾಣಸಿದ ಹೆಸರಿನವನಿದ್ದು, ಈ ಮೇಲಿನ  ವಿಳಾಸದಲ್ಲಿ ವ್ಯಾಪಾರ ಮಾಡಿಕೊಂಡು ಕುಟುಂಬ ಸಮೇತ ಉಪಜೀವಿಸುತ್ತಿದ್ದೇನೆ. ಕೆಲವು ತಿಂಗಳುಗಳ ಹಿಂದೆ ನನಗೆ ಪರಿಚಯದ ಗೆಳೆಯನಾದ ಮಹ್ಮದ ಶಾಕೀರ್ ಈತನಿಗೆ ಸಂಸಾರದ ಅಡಚಣೆಯಿದ್ದ ಕಾರಣ ಕೈಗಡ ರೂಪದಲ್ಲಿ ಎರಡುವರೆ ಲಕ್ಷ ರೂಪಾಯಿಗಳನ್ನು ಕೊಟ್ಟಿರುತ್ತೇನೆ. ಹೀಗಿದ್ದು ನಿನ್ನೆ ದಿನಾಂಕ: 03/03/2023 ರಂದು ರಾತ್ರಿ 11:30 ಪಿ.ಎಮ್ ಕ್ಕೆ  ನಾನು ಕೊಟ್ಟಿರುವರ ಎರಡುವರೆ ಲಕ್ಷ ರೂಪಾಯಿಗಳನ್ನು ಕೇಳಲು ನಯಾ ಮೋಹಲ್ಲಾದಲ್ಲಿರುವ ಮಹ್ಮದ ಶಾಕೀರ್ ಇವರ ಮನೆಗೆ ನಾನು ಮತ್ತು ನನ್ನ ಸಹೋದರರಾದ ಅಬ್ದುಲ್ ಮಜೀದ್, ಮತ್ತು ಶೇಖ್  ಅಕ್ಬರ  ಮೂವರು  ಕೂಡಿಕೊಂಡು  ಹಮಾರಾ ಪೈಸೆ ದೋ ಮೈನೆಮೇ ದೇತೂಂ ಬೋಲೆತೇ ಕ್ಯೂಂ ಸತಾ ರಹೇ ಹಮಾರಾ ಪೈಸೆ ದೇವ್ ಅಂತಾ ಕೇಳಿದ್ದಕ್ಕೆ ಮಹ್ಮದ ಶಾಕೀರ್ ಈತನು ಬಾರ್ ಬಾರ್ ಮೇರೆಕೋ ಪೈಸೆ ಫೂಚಕೇ ಏರೀಯಾ ಮೇ ಮೇರಾ ಹಿಜ್ಜತ್ ನಿಖಾಲ್ ರಹೇ ಸಾಲೇ ಅಂತಾ ತಮ್ಮ ಮನೆಯಲ್ಲಿದ್ದ ಬಡಿಗೆಯಿಂದ ನನಗೆ ಜೋರಾಗಿ ಹೋಡೆಯಲು ಬಂದಾಗ ನಾನು ತಪ್ಪಿಸಿಕೊಳ್ಳುವ ಸಲುವಾಗಿ ಎಡಗೈ ಮುಂದೆ ಮಾಡಿದ್ದರಿಂದ ನನ್ನ ಎಡಗೈ ತೋರು ಬೇರಳು ಮತ್ತು ಮಧ್ಯ ಬೇರಳುಗಳ ಮಧ್ಯದಲ್ಲಿ ಬಡಿಗೆ ಏಟು ಬಿದ್ದಿರುವದಿಂದ ರಕ್ತಗಾಯ ವಾಗಿರುತ್ತದೆ. ಮತ್ತು ನನ್ನ ಸಹೋದರನಾದ ಅಬ್ದುಲ್ ಮಾಜೀದ್ ಈತನಿಗೆ ಅದೇ ಬಡಿಗೆಯಿಂದ ಬೆನ್ನಿಗೆ, ಕುತ್ತಿಗೆಯ ಹಿಂಭಾಗಕ್ಕೆ ಮತ್ತು ಕಾಲಿಗೆ ಹೊಡೆದು ಗುಪ್ತಗಾಯ ಮಾಡಿರುತ್ತಾನೆ. ಆಗ ನನ್ನ ಇನ್ನೊಬ್ಬ ಸಹೋದರನಾದ ಮಹ್ಮದ ಅಕ್ಬರ್ ಇವರು ಹಮಾರಾ ಪೈಸೆ ಲೇಕರ್ ಹಮಾರಾ ಭಾಂಯಾಂಕೋ ಐಸೇ ಮಾರೇತೋ ಅಚ್ಚೇ ಲಗತೇ ಕ್ಯಾ  ಆಪ್ಕೋ,  ಅಂತಾ ಜಗಳ ಬಿಡಿಸಲು ಬಂದಾಗ ಮಹ್ಮದ ಶಾಕೀರ್ ಈತನ ಅಣ್ಣನಾದ ಮಹ್ಮದ ಸಾಜೀದ್ ಈತನು ಆಜ್ ಇನ್ ತಿನೋಂಕೋ ಜಾನ್ ಸೇ ಮಾರನಾ ಅಂತಾ ಜೀವ ಬೆದರಿಕೆ ಹಾಕಿರುತ್ತಾನೆ. ಆಗ ಅಲ್ಲೆ ಇದ್ದ ಸೈಯ್ಯದ ಮೋಶಿನ್ ಮತ್ತು ಮಹ್ಮದ ಅಫ್ರೋಜ್ ಇವರುಗಳು ಕಣ್ಣಾರೆ ನೊಡಿ ಜಗಳ ಬಿಡಿಸಿರುತ್ತಾರೆ. ಹೀಗಿದ್ದು ನಾನು ಮತ್ತು ನನ್ನ ಸಹೋದರ ಗಾಯಗೊಂಡಿರುವದರಿಂದ ಉಪಚಾರ ಕುರಿತು ನನ್ನ ಸಹೋದರನಾದ ಮಹ್ಮದ ಅಕ್ಬರ್ ಇವರು ಉಪಚಾರ ಕುರಿತು ಮಣ್ಣೂರ ಆಸ್ಪತ್ರೆಗೆ ತಂದು ಸೇರಿಕೆ ಮಾಡಿರುತ್ತಾರೆ ಅಂತಾ ಲ್ಯಾಪ್ ಟಾಪ್ ನಲ್ಲಿ ಹೇಳಿ ಟೈಪ್ ಮಾಡಿಸಿದ ಹೇಳಿಕೆ ನಿಜವಿರುತ್ತದೆ. ಕಾರಣ ನಾನು ಮಹ್ಮದ ಶಾಕೀರ್ ಈತನಿಗೆ ಕೊಟ್ಟಿರುವ ಎರಡುವರೆ ಲಕ್ಷ ಹಣ ಕೇಳಿದ್ದರಿಂದ  ವಿನಾಕಾರಣ ಹೊಡೆ ಬಡೆ ಮಾಡಿ ಜೀವ ಬೇದರಿಕೆ ಹಾಕಿದವರ ಮೇಲೆ ಕಾನೂನಿನ ಕ್ರಮ ಜರುಗಿಸಬೆಕೆಂದು ಫಿರ್ಯಾದಿ ಕೊಟ್ಟ ಅರ್ಜಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಕೊಂಡ ಬಗ್ಗೆ ವರದಿ.

 

 

 

ಸಬ್‌ ಅರ್ಬನ್‌ ಪೊಲೀಸ ಠಾಣೆ :- ನಾನು ಶಿವಮ್ಮಾ ಗಂಡ ರೇವಣಸಿದ್ದಪ್ಪಾ ಹಡಪದ ವಯಾ: 52 ವರ್ಷ ಜಾ: ಹಡಪದ ಉ: ಮನೆ ಕೆಲಸ ಸಾ: ಎಸ್.ಎಮ್ ಕೃಷ್ಣಾ ಕಾಲೋನಿ ಕಲಬುರಗಿ ಇದ್ದು ನನಗೆ 1) ಚೆನ್ನಬಸಪ್ಪಾ ವಯಾ: 30 ವರ್ಷ 2) ಬಸವರಾಜ ಎಂಬ ಎರಡು ಗಂಡು ಮಕ್ಕಳು ಇರುತ್ತಾರೆ. ನನ್ನ ಮಗ ಚೆನ್ನಬಸಪ್ಪಾ ಇತನಿಗೆ ಸುನಿತಾ ಹಪಡದ ಎಂಬುವಳೊಂದಿಗೆ ಮದುವೆ ಮಾಡಿದ್ದು ಸದ್ಯ ನನ್ನ ಮಗನಿಗೆ ಒಂದು ಗಂಡು ಹಾಗು ಒಂದು ಹೆಣ್ಣು ಮಗು ಇರುತ್ತದೆ. ನನ್ನ ಮಗನು ತನ್ನ ಹೇಂಡ್ತಿ ಮಕ್ಕಳೊಂದಿಗೆ ಬೇರೆ ಮನೆ ಮಾಡಿಕೊಂಡು ಬಿದ್ದಾಪೂರ ಕಾಲೋನಿಯಲ್ಲಿ ಇರುತ್ತಿದ್ದನು. ಇತ್ತಿಚೇಗೆ ಕಟಿಂಗ ಅಂಗಡಿ ಹಾಕಿದ್ದು. ನನ್ನ ಮಗ ಚೆನ್ನಬಸಪ್ಪಾ ಕುಡಿಯುವ ಚಟದವನಾಗಿದ್ದು . ಕುಡಿದು ಅಂಗಡಿಯಲ್ಲಿ ಹೋಗಿ ಗಲಾಟೆ ಮಾಡುತ್ತಿದ್ದರಿಂದ ಹೇಂಡ್ತಿ ಸುನಿತಾ, ಹೇಂಡ್ತಿ ತಮ್ಮಂದಿರಾದ ಅನೀಲ ಹಾಗು ಸುನೀಲ ರವರು ಆಗಾಗ ಅವನಿಗೆ ಹೊಡೆದು ಮನೆಯಿಂದ ಹೊರಹಾಕುತ್ತಿದ್ದರು. ಇದರಿಂದ ಅವರು ಮನೆಯಿಂದ ಹೊರಹಾಕಿದಾಗ ನನ್ನ ಮಗ ನಮ್ಮ ಮನೆಗೆ ಬಂದು ಅವರು ಹೊಡೆದು ಹೊರಹಾಕಿದ ಬಗ್ಗೆ ಹೇಳುತ್ತಿದ್ದನು. ಹೀಗಿದ್ದು ನಿನ್ನೆ ದಿನಾಂಕ: 02/03/2023 ರಂದು ಬೆಳಿಗ್ಗೆ ನನ್ನ ಮಗ ಚೆನ್ನಬಸಪ್ಪಾ ನನ್ನ ಮಗನೆ ಬಂದು ನನಗೆ ಅಂಗಡಿಗೆ ಹೋದರೆ ಹೊಡೆದು ಹೊರಹಾಕುತ್ತಿದ್ದಾರೆ ಅದಕ್ಕೆ ನಾನು ಬಂದಿದ್ದೇನೆ ಅಂತಾ ಹೇಳಿದನು ನಂತರ ರಾತ್ರಿ 10:00 ಗಂಟೆ ಸುಮಾರಿಗೆ ನಮ್ಮ ಮನೆಯಲ್ಲಿ ಊಟ ಮಾಡಿ ನನ್ನ ಹೇಂಡ್ತಿ ಹತ್ತಿರ ಹೋಗುತ್ತೇನೆ ಅಂತಾ ತನ್ನ ಮೋಟರ ಸೈಕಲ ನಂಬರ ಕೆಎ-36 ಕೆ-4093 ನೇದ್ದರ ಮೇಲೆ ಹೋದನು. ನಂತರ ಇಂದು ಬೆಳಿಗ್ಗೆ 7:00 ಗಂಟೆ ಸುಮಾರಿಗೆ ನನ್ನ ಮಗ ಬಸವರಾಜ ಇತನಿಗೆ ಯಾರೋ ತಿಳಿಸಿದೆನೆಂದರೆ ನಿಮ್ಮ ಅಣ್ಣ ಚೆನ್ನಬಸಪ್ಪಾ ಇತನು ಡಭರಾಬಾದದ ಸುಮುದಾಯ ಭವನದ ಮುಂದಿನ ಶಿವಲಿಂಗಪ್ಪಾ ಹೂಣಸಿಹಡಗಿಲ ರವರ ಮನೆಯ ಮುಂದಿನ ಅಂಗಳದಲ್ಲಿ ಮೃತಪಟ್ಟಿರುತ್ತಾನೆ ಅಂತಾ ಹೇಳಿದಾಗ ಸ್ಥಳಕ್ಕೆ ನಾನು ಮತ್ತು ನನ್ನ ಮಗ ಬಸವರಾಜ ಹೋಗಿ ನೋಡಲು ನನ್ನ ಮಗನು ಅವರ ಮನೆಯ ಮುಂದಿನ ಕಟಕಿನಲ್ಲಿ ಅಂಗಾತವಾಗಿ ಬಿದಿದ್ದು ಮನೆಯವರನ್ನು ವಿಚಾರಿಸಲು ಬೆಳಗಿನ ಜಾವ ನಮ್ಮ ಮೋಟರ ಸೈಕಲಿನ ವೈರ ಕಿತ್ತುವಾಗ ಶೆಬ್ದವಾಗಿದ್ದರಿಂದ ನಾವು ಎಚ್ಚರಗೊಂಡು ಅವನನ್ನು ಹಿಡಿದು ಎರಡು ಏಟು ಹೊಡೆದಿದ್ದು ಆಗ ಅವನು ನೀರು ನೀರು ಅಂತಾ ಅಂದಾಗ ನಾವು ಚೆರಗಿಯಿಂದ ನೀರು ಕುಡಿಸಿರುತ್ತೇವೆ ನಂತರ ಅವನು ಮೃತಪಟ್ಟಂತೆ ಬಿದ್ದಿರುತ್ತಾನೆ ಅಂತಾ ಹೇಳಿರುತ್ತಾರೆ. ನಂತರ ನಾವು ನನ್ನ ಮಗನ ಶವ ನೋಡಲು ಅವನ ಎರಡು ಕಾಲಿನ ತೊಡೆ ಮೇಲ್ಭಾಗದಲ್ಲಿ ಕಟ್ಟಿಗೆಯಿಂದ ಹೊಡೆದ ಗುಪ್ತ ಕಂದುಗಟ್ಟಗಾಯವಿರುತ್ತವೆ. ಸದರಿ ಘಟನೆಯು ಅಂದಾಜು ಬೆಳಗಿನ 02:00 ಗಂಟೆಯಿಂದ 04:00 ಗಂಟೆಯ ಮದ್ಯದಲ್ಲಿ ನಡೆದಿರುತ್ತದೆ. ಕಾರಣ ನನ್ನ ಮಗ ಚೆನ್ನಬಸಪ್ಪ ಇತನ ಶವ ನೋಡಲು ಆತನ ಸಾವಿನಲ್ಲಿ ಸಂಶಯ ಕಂಡುಬರುತ್ತಿದ್ದು ತಾವುಗಳು ವಿಚಾರಣೆ ಮಾಡಿ ಮುಂದಿನ ಕ್ರಮ ಕೈಗೊಳ್ಳಬೇಕು ಎಂದು ಫಿರ್ಯಾದಿ ಕೊಟ್ಟ ಹೇಳಿಕೆ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಚೌಕ ಪೊಲೀಸ ಠಾಣೆ :- ನಿನ್ನೆ ದಿನಾಂಕ 02/03/2023 ರಂದು ರಾತ್ರಿ 8-00 ಗಂಟೆ ಸುಮಾರಿಗೆ ನಮ್ಮ ಅಣ್ಣ ಖಾಜಾ ಮೈನೋದ್ದಿನ ಇವರು ನಮ್ಮ ಮನೆ ಪಕ್ಕದಲ್ಲಿ ಇರುವ ಮದಿನಾ ಚಿಕನ ಅಂಗಡಿ ಎದುರುಗಡೆ ಬರಲು ತಿಳಿಸಿದಾಗ ನಾನು ಮತ್ತು ನನ್ನ ಹೆಂಡತಿಯ ತಂಗಿ ಮಗನಾದ ಮಹ್ಮದ ಸೋಹೇಬೋದ್ದಿನ ಇಬ್ಬರು ಕೂಡಿಕೊಂಡು ಅಲ್ಲಿಗೆ ಹೋದಾಗ ಅಲ್ಲಿ ನಮ್ಮ ಅಣ್ಣ ಖಾಜಾ ಮೈನೋದ್ದಿನ ಮತ್ತು ಅವನ ಮಕ್ಕಳಾದ ಮಹ್ಮದ ಸಮೀರ ಮತ್ತು ಮಹ್ಮದ ಅಮನ ಇದ್ದರು. ಆಗ ನಮ್ಮ ಅಣ್ಣ ಖಾಜಾ ಮೈನೋದ್ದಿನ ಇವರು ಮತ್ತೆ ನನಗೆ ನಿನ್ನ ಆಧಾರ ಕಾರ್ಡ, ಪಾನ ಕಾರ್ಡ ಕೊಡು ಮತ್ತು ವಕೀಲ ಹತ್ತಿರ ಸಹಿ ಮಾಡು ಕೋರ್ಟನಲ್ಲಿದ್ದ ಮೂಲ ದಾಖಲಾತಿಗಳು ತೆಗೆದುಕೊಂಡು ಬರುತ್ತೇನೆ ಅಂತಾ ಹೇಳಿದಾಗ ನಾನು ನಮ್ಮ ಅಣ್ಣನಿಗೆ ನಮ್ಮ ಮನೆಯಲ್ಲಿ ವಿಚಾರಿಸಿಕೊಂಡು ನೀನು ಹೇಳಿದ ಆಧಾರ ಕಾರ್ಡ ಪಾನ ಕಾರ್ಡ ಕೊಟ್ಟು ಸಹಿ ಮಾಡುತ್ತೇನೆ ಅಂತಾ ಹೇಳಿದಾಗ, ಆಗ ನನ್ನ ಅಣ್ಣ ಖಾಜಾ ಮೈನೋದ್ದಿನ ಮತ್ತು ಅವನ ಮಕ್ಕಳಾದ ಮಹ್ಮದ ಸಮೀರ ಮತ್ತು ಮಹ್ಮದ ಅಮನ ಇವರುಗಳು ನನಗೆ ಏ ರಾಂಡಕೇ ಚಿನಾಲಕೇ ಏಕ ಸಾಲ ಏಹೀ ಬೋಲತೇ ಆರಾ ಸಾಲೇ ಅಂತಾ ಬೈಯ್ಯುತ್ತಿದ್ದಾಗ ಮಹ್ಮದ ಅಮನ ಇತನು ನನಗೆ ಒತ್ತಿಯಾಗಿ ಹಿಡಿದಾಗ ನನ್ನ ಅಣ್ಣ ಮಹ್ಮದ ಖಾಜಾಮೈನೋದ್ದಿನ ಇವರು ಅಲ್ಲೇ ಬಿದ್ದ ಕಲ್ಲು ತೆಗೆದುಕೊಂಡು ನನ್ನ ಎಡ ಹಣೆಯ ಮೇಲೆ ಹೊಡೆದು ರಕ್ತಗಾಯಗೊಳಿಸಿದನು. ಮಹ್ಮದ ಸಮೀರ ಇತನು ಕೈ ಮುಷ್ಟಿ ಮಾಡಿ  ನನ್ನ ಬಲ ಮತ್ತು ಎಡ ಪಕ್ಕೆ ಮೇಲೆ ಹೊಡೆದು ರಕ್ತ್ತಗಾಯಗೊಳಿಸಿದನು. ಈ ಜಗಳಾ ಅಲ್ಲೇ ಇದ್ದ ಮಹ್ಮದ ಸೋಹೇಬೋದ್ದಿನ ಮತ್ತು ಚಿಕನ ಅಂಗಡಿ ಮಾಲೀಕ ಮಹ್ಮದ ಶಫೀ ಹಾಗೂ ಮಹ್ಮದ ರಿಜವಾನ ಇವರುಗಳು ನೋಡಿ ಜಗಳಾ ಬಿಡಿಸಿಕೊಂಡರು. ನಂತರ  ನನ್ನ ಅಣ್ಣ ಖಾಜಾ ಮೈನೋದ್ದಿನ ಮತ್ತು ಅವನ ಮಕ್ಕಳಾದ ಮಹ್ಮದ ಸಮೀರ ಹಾಗೂ ಮಹ್ಮದ ಅಮನ ಇವರು ನನಗೆ ನಾವು ಹೇಳಿದಂತೆ ಕೇಳದೇ ಹೋದರೆ ನನಗೆ ಖಲಾಷ ಮಾಡುವುದಾಗಿ ಜೀವ ಭಯ ಹಾಕಿರುತ್ತಾರೆ. ಈ ಜಗಳಾ ಮದಿನಾ ಚಿಕನ ಅಂಗಡಿ ಎದುರಿನ ಲೈಟಿನ ಬೆಳಕಿನಲ್ಲಿ ನಡೆದಿರುತ್ತದೆ. ನಮಗೆ ಹೊಡೆ ಬಡೆ ಮಾಡಿದವರ ಕ್ರಮ ಕೈಗೊಳ್ಳಬೇಕೆಂದು ಫಿರ್ಯಾದಿ ಕೊಟ್ಟ ಅರ್ಜಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

ಚೌಕ ಪೊಲೀಸ ಠಾಣೆ :- ಫಿರ್ಯಾದಿದಾರರು ಠಾಣೆಗೆ ಹಾಜರಾಗಿ ದೂರು ಸಲ್ಲಿಸಿದೇನೆಂದರೆ, ನಾನು ಮಹ್ಮದ ಜಿಯಾವುದ್ದೀನ ತಂದೆ ಮಹ್ಮದ ಅಲ್ಲಾವುದ್ದೀನ ವ:42 ವರ್ಷ ಉ: ವಾಷ್ ಕಂಪನಿಯಲ್ಲಿ ಸೇಲ್ಸ ಎಕ್ಸಿಕ್ಯೂಟಿವ ಕೆಲಸ ಜ್ಯಾ:ಮುಸ್ಲಿಂ ಸಾ:ಮನೆ.ನಂ.5-470/15/13/1 ಕೆ.ಸಿ.ಟಿ ಇಂಜೀನಿಯರ ಕಾಲೇಜ ಹತ್ತಿರ ಖಮರ ಕಾಲೋನಿ ಕಲಬುರಗಿ ತಮ್ಮಲ್ಲಿ ದೂರು ಸಲ್ಲಿಸುವುದೇನೆಂದರೆ, ನಾನು ವಾಷ್ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದು, ನನ್ನ ಕಂಪನಿಯ ಆಫೀಸಗೆ ಹೋಗಿ ಬರಲು ಮತ್ತು ಇತರೆ ನನ್ನ ಸ್ವಂತ ಕೆಲಸಕ್ಕಾಗಿ ನನ್ನ  ಹೆಸರಿನಲ್ಲಿ ಹಿರೋ ಸ್ಪ್ಲೇಂಡರ ಪ್ಲಸ್  ಮೋಟಾರ ಸೈಕಲ್ ನಂ. KA 32 ES 9354 ನೇದ್ದನ್ನು ಖರೀದಿಸಿದನ್ನು ನಾನೇ ಉಪಯೋಗಿಸಿಕೊಂಡು ಬಂದಿದ್ದು ಇರುತ್ತದೆ.    ಹೀಗಿದ್ದು , ದಿನಾಂಕ:25.10.2022 ರಂದು ದೀಪಾವಳಿ ಹಬ್ಬದ ಪ್ರಯುಕ್ತ ಟಿ.ವಿ ಆಫರ ಇರುವುದರಿಂದ ಅಂದು ಸಾಯಂಕಾಲ 06.30 ಗಂಟೆಗೆ  ಟಿ.ವಿ ಖರೀದಿ ಮಾಡುವ ಸಲುವಾಗಿ ಕಲಬುರಗಿ ನಗರದ ಸೂಪರ ಮಾರ್ಕೇಟನ ಸಿಟಿ  ಬಸ್ ಸ್ಟ್ಯಾಂಡ ಹತ್ತಿರ ಇರುವ ಕರ್ನಾಟಕ ರೆಡಿಯೋ ಹೌಸ ಅಂಗಡಿಯ ಮುಂದುಗಡೆ ನನ್ನ ಮೋಟಾರ ಸೈಕಲ್ ನಂ.KA 32 ES 9354 ನೇದ್ದನ್ನು ನಿಲ್ಲಿಸಿ ಸದರಿ ಅಂಗಡಿ ಒಳಗೆ ಹೋಗಿ ಟಿ.ವಿ ನೋಡಿಕೊಂಡು ನಾನು ಮೋಟಾರ ಸೈಕಲ್ ನಿಲ್ಲಿಸಿದ ಸ್ಥಳದಲ್ಲಿ ನನ್ನ ಮೋಟಾರ ಸೈಕಲ್  ಇರುವುದಿಲ್ಲ . ಕಳುವಾದ ನನ್ನ ಬೈಕ ಹುಡುಕಿಕೊಡಬೇಕೆಂದು ಫಿರ್ಯಾದಿ ಕೊಟ್ಟ ಅರ್ಜಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

ಸಂಚಾರಿ ಪೊಲೀಸ ಠಾಣೆ-2 :- ದಿನಾಂಕ 03/03/2023 ರಂದು ಮಧ್ಯಾಹ್ನ 12:30 ಗಂಟೆಗೆ ಶ್ರೀ. ಬಾಬುರಾವ ತಂದೆ ಕರಬಸಪ್ಪಾ ಗೋಗಿ ವಯಃ 28 ವರ್ಷ ಜಾತಿಃ ಪ.ಜಾತಿ(ಮಾದೀಗ) ಉಃ ಅಟೋ ಚಾಲಕ ಸಾಃ ಪಟ್ಟಣ ತಾ.ಜಿಃ ಕಲಬುರಗಿ ಇವರು ಪೊಲೀಸ್ ಠಾಣೆಗೆ ಹಾಜರಾಗಿ ಫಿರ್ಯಾದಿ ಅರ್ಜಿ ಹಾಜರು ಪಡಿಸಿದ್ದು ಸಾರಂಶವೆನೆಂದರೆ, ನನಗೆ ಮಹೇಶ ಎಂಬ 24 ವರ್ಷದ ತಮ್ಮನಿದ್ದು, ಈತನು ಕೂಲಿ ಕೆಲಸ ಮಾಡಿಕೊಂಡಿದ್ದು, ದಿನಾಂಕ 01/03/2023 ರಂದು ನಮ್ಮೂರಿನ ನಮ್ಮ ಅಣ್ಣತಮ್ಮಕೀಯ ಭಾಗಪ್ಪಾ ತಂದೆ ದೇವಿಂದ್ರಪ್ಪಾ ಗೋಗಿ ಈತನು ಬಾಡಿಗೆಯಿಂದ ನಡೆಸುವ ಅಟೋ ನಂ. ಕೆಎ 32 ಬಿ 5018 ಇದರದಲ್ಲಿ ಆತನು, ನನ್ನ ತಮ್ಮ ಮಹೇಶನಿಗೆ ಪಟ್ಟಣ ಕ್ರಾಸಿನ ವರೆಗೆ ಹೋಗಿ ಬರೋಣ ಬಾ ಅಂತಾ ಕರೆದುಕೊಂಡು ಅಟೋದಲ್ಲಿ ಇಬ್ಬರೂ ಹೋಗುವಾಗ ರಾತ್ರಿ 8:00 ಗಂಟೆ ಸುಮಾರಿಗೆ ನಮ್ಮೂರಿನ ಚೌಡಾಪೂರ ರವರ ಹೊಲದ ಹತ್ತೀರ ಹುಣಚಿಗಿಡದ ಸಮೀಪ ಹೋಗುತ್ತಿರುವಾಗ ಅಟೋದ ಚಾಲಕ ಭಾಗಪ್ಪಾ ಇತನು ಅಟೋವನ್ನು ಅತಿವೇಗದಿಂದ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಹೋಗುವಾಗ ಏಕಾ ಏಕಿಯಾಗಿ ಒಮ್ಮೇಲೆ ಈ ಅಟೋಕ್ಕೆ ಆತನು ಬ್ರೇಕ ಹಾಕಿದಕ್ಕೆ ಅಟೋ ಪಲ್ಟಿಯಾಗಿ ಬಿದ್ದಿದ್ದರಿಂದ ನನ್ನ ತಮ್ಮ ಮಹೇಶನ ಎಡಗಡೆ ತಲೆಯ ಸೈಡಿಗೆ ಭಾರಿ ರಕ್ತಗಾಯ ಮತ್ತು ಮೂಗಿಗೆ, ತುಟಿಗೆ, ಮುಖದ ಹತ್ತೀರ ರಕ್ತಗಾಯ ಹಾಗು ಎದೆಗೆ ಗುಪ್ತಗಾಯಗಳಾಗಿದ್ದು, ಅಲ್ಲದೆ ಅಟೋ ನಡೆಸುವ ಭಾಗಪ್ಪಾ ಗೋಗಿ ಈತನಿಗು ಕೂಡಾ ಬಲಗಾಲಿನ ತೊಡೆಯ ಭಾಗಕ್ಕೆ, ಗಟಬಾಯಿಯ ಹತ್ತೀರ ರಕ್ತಗಾಯವಾಗಿದ್ದು, ಘಟನೆಯನ್ನು ಅನೀಲ ತಂದೆ ಅಶೋಕ ವಗ್ಗೆ ಹಾಗು ಮಲ್ಲಿಕಾರ್ಜುನ ತಂದೆ ಈರಣ್ಣ ಕಂಟಿಕರ ರವರು ನೋಡಿ ಅವರೆ ಸಹಾಯ ಮಾಡಿ 108 ಅಂಬುಲೇನ್ಸದಲ್ಲಿ ಹಾಕಿ ಉಪಚಾರ ಕುರಿತು ಕಲಬುರಗಿ ಸರಕಾರಿ ಆಸ್ಪತ್ರೆಗೆ ಕಳುಹಿಸಿದ ಬಗ್ಗೆ ನನಗೆ ಗೊತ್ತಾಗಿ, ನಾನು ಮತ್ತು ಭಾಗಪ್ಪ ಈತನನ ತಂದೆ ದೇವಿಂದ್ರಪ್ಪಾ ತಂದೆ ಭಾಗಪ್ಪಾ ಗೋಗಿ ಇಬ್ಬರು ಆಸ್ಪತ್ರೆಗೆ ಹೋಗಿ ತಮ್ಮ ಮತ್ತು ಭಾಗಪ್ಪನಿಗೆ ನೋಡಿ ವಿಚಾರಿಸಿದ್ದು, ಆದರೆ ತಮ್ಮ ಮಹೇಶನು ಮಾತನಾಡುವ ಪರಸ್ಧಿತಿಯಲ್ಲಿ ಇರುವುದಿಲ್ಲಾ. ಅಲ್ಲದೆ ಇಲ್ಲಿಯ ವರೆಗೆ ಬೆಹೋಶ ಸ್ಧಿತಿಯಲ್ಲಿಯೇ ಉಪಚಾರ ಪಡೆಯುತ್ತಿರುತ್ತಾನೆ. ಈಗ ಮನೆಯಲ್ಲಿ ವಿಚಾರಣೆ ಮಾಡಿಕೊಂಡು ತಡವಾಗಿ ಪೊಲೀಸ್ ಠಾಣೆಗೆ ಬಂದಿದ್ದು, ಈ ವಿಷಯದಲ್ಲಿ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು ಅಂತಾ ವಿನಂತಿ ಅಂತಾ ಫಿರ್ಯಾದಿ ಅರ್ಜಿ ಸಾರಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

ಸಂಚಾರಿ ಪೊಲೀಸ ಠಾಣೆ-2 :-  ದಿನಾಂಕ 03/03/2023 ರಂದು ಮಧ್ಯಾಹ್ನ 1:30 ಗಂಟೆಗೆ ಶ್ರೀ. ಶ್ರೀಕೃಷ್ಣ ತಂದೆ ಲಕ್ಷ್ಮಣ ರವರು ನೀಡಿರುವ ಫಿರ್ಯಾದಿ ಅರ್ಜಿಯನ್ನು ವಸೂಲಾಗಿದ್ದು ಸಾರಂಶವೆನೆಂದರೆ, ದಿನಾಂಕ 02/03/2023 ರಂದು ಮಧ್ಯಾಹ್ನ 3:25 ಗಂಟೆ ಸುಮಾರಿಗೆ ತಾನು ಮತ್ತು ಶ್ರೀಧರ ಪಾಟೀಲ ಇಬ್ಬರೂ  ಶ್ರೀಧರ ಪಾಟೀಲ ಇವರ ಮೋಟರ ಸೈಕಲದ ಮೇಲೆ ಶಹಾಬಜಾರ ನಾಕಾ ಕಡೆಯಿಂದ ಲಾಲಗೇರಿ ಕ್ರಾಸಿನ ಕಡೆಗೆ ಬರುತ್ತಿರುವಾಗ ಅಗ್ನಿಶಾಮಕ ಕಛೇರಿಯ ಹತ್ತೀರ ರೋಡಿನ ಮೇಲೆ ಚೆಂಬರ ಗುಂಡಿಯನ್ನು ಇದ್ದು, ಮಹಾನಗರ ಪಾಲೀಕೆಯ ಅಧಿಕಾರಿಗಳಾದ ಎ.ಇ.ಇ, ಜೆ.ಇ ಹಾಗು ಕಾಮಗಾರಿ ಗುತ್ತಿಗೆದಾರರು ಡಾಂಬರಿಕರಣ ಕಾಮಗಾರಿಯ ವೇಳೆಯಲ್ಲಿ ಅದನ್ನು ಮುಚ್ಚದೆ ಹಾಗೆ ಅಲಕ್ಷತನದಿಂದ ಇಟ್ಟಿದ್ದರಿಂದ ತಾವು ಆ ಗುಂಡಿಯಲ್ಲಿ ಬಿದ್ದು, ಶ್ರೀಕೃಷ್ಣ ಇವರಿಗೆ ತೀವ್ರತರಹದ ಗಾಯಗಳಾಗಿದ್ದು ಮತ್ತು ಶ್ರೀಧರ ಇವರಿಗು ಕೂಡಾ ಗಾಯಗಳಾಗಿರುತ್ತವೆ. ಮಹಾನಗರ ಪಾಲೀಕೆ ಅಧಿಕಾರಿಗಳು ರಸ್ತೆ ಕಾಮಗಾರಿ ವೇಳೆಯಲ್ಲಿ ಅಲಕ್ಷತನದಿಂದ ಈ ಗುಂಡಿಯನ್ನು ಬೇಜವಾಬ್ದಾರಿತನದಿಂದ ಗುಂಡಿಯನ್ನು ಹಾಗೆ ಇಟ್ಟಿದ್ದರಿಂದ ಅದರಲ್ಲಿ ಬಿದ್ದ ಪರಿಣಾಮ ಗಾಯಗಳಾಗಿರುತ್ತವೆ. ಈ ವಿಷಯಕ್ಕೆ ಸಂಬಂಧಪಟ್ಟಂತೆ ತಾವು ಉಪಚಾರಕ್ಕಾಗಿ ಆಸ್ಪತ್ರೆಯಲ್ಲಿ ಸೇರಿಕೆಯಾಗಿದ್ದು, ಈ ಘಟನೆಗೆ ಕಾರಣಿಭೂತರಾದ ಮಹಾನಗರ ಪಾಲೀಕೆಯ ಎ.ಇ.ಇ, ಜೆ.ಇ ಹಾಗು ಕಾಮಗಾರಿ ಗುತ್ತಿಗೆದಾರರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಅಂತಾ ಇತ್ಯಾದಿ ಕೊಟ್ಟ ಫಿರ್ಯಾದಿ ಸಾರಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

ಸಂಚಾರಿ ಪೊಲೀಸ ಠಾಣೆ-2 :-  ದಿನಾಂಕ 03/03/2023 ರಂದು 06:30 ಪಿ.ಎಮ್ ಕ್ಕೆ ಶ್ರೀಮತಿ. ಸ್ನೇಹಾ ಗಂಡ ಪಂಡಿರಿನಾಥ ಇವರು ನೀಡಿರುತ್ತಾರೆಂಬುವ   ಫಿರ್ಯಾದಿ ಅರ್ಜಿಯನ್ನು ಶ್ರೀ. ಪಂಡರಿನಾಥ ಕ್ಷೀರಸಾಗರ  ಎಂಬುವರು ತಂದು ಹಾಜರು ಪಡಿಸಿದ್ದು ಸಾರಂಶವೆನೆದರೆ, ದಿನಾಂಕ : 28-02-2023 ರಂದು ಬೆಳಿಗ್ಗೆ ನನ್ನ ಮಗ ಅಕ್ಷಜ ಹಾಗೂ ನೆಗೆಣಿ ಮಗ ಮಾನಸಾ ಇವಳನ್ನು ನಾನು ಮನೆಯಿಂದ ಮೋಟಾರ ಸೈಕಲ ಮೇಲೆ ಹೋಗಿ ಬಿಟ್ಟುಬಂದು ಮದ್ಯಾಹ್ನ ಶಾಲೆ ಬಿಟ್ಟ ನಂತರ ನಾನು ಅಕ್ಷಜ ಮತ್ತು ಮಾನಸಾ ಇಬ್ಬರನ್ನು ನಾನು ಚಲಾಯಿಸುತ್ತೀರುವ ಮೋಟಾರ ಸೈಕಲ ನಂಬರ ಕೆಎ-32/ಇಟಿ-1742 ನೇದ್ದರ ಹಿಂದುಗಡೆ ಕೂಡಿಸಿಕೊಂಡು  ವಿವೇಕಾನಂದ ಶಾಲೆಯಿಂದ ನಾಗನಹಳ್ಳಿ ರಿಂಗ ರೋಡ ಮುಖಾಂತರ ನಾನು ಮೋಟಾರ ಸೈಕಲ ಚಲಾಯಿಸಿಕೊಂಡು  ಹೋಗುತ್ತೀರುವಾಗ ಶಾಹಾಬಾದ ರಿಂಗ ರೋಡ ಹತ್ತೀರ ನಾನು ಹೋಗಿ ಸಿಗ್ನಲ್ ರೆಡ ಇರುವದರಿಂದ ಗ್ರೀನ ಬರುವವರೆಗೆ ಮೋಟಾರ ಸೈಕಲ ನಿಲ್ಲಿಸಿ ಇರುವಾಗ ಹಿಂದಿನಿಂದ ಒಬ್ಬ ಟಿಪ್ಪರ ಚಾಲಕನು ತನ್ನ ಟಿಪ್ಪರ ವಾಹನವನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನನ್ನ ಮೋಟಾರ ಸೈಕಲ ಹಿಂದುಗಡೆ ಡಿಕ್ಕಿಪಡಿಸಿ ಅಪಘಾತ ಮಾಡಿದ್ದರಿಂದ ನಾನು ಮತ್ತು ಅಕ್ಷಜ ಹಾಗೂ ಮಾನಸಾ ಮೂರು ಜನರು ಮೋಟಾರ ಸೈಕಲದೊಂದಿಗೆ ಕೆಳಗಡೆ ಬಿದ್ದಾಗ ಸದರಿ ಘಟನೆ ನೋಡಿದ ನನಗೆ ಪರಿಚಯದ ಬೀಮಕಲಾ ಗಂಡ ಅಮೀತ ರಂಗದಾಳ ಹಾಗೂ ಅವರ ಗಂಡ ಅಮೀತ ರವರು ಬಂದು ನಮ್ಮ ಮೂರು ಜನರಿಗೆ ಎಬ್ಬಿಸಿ ರೋಡ ಪಕ್ಕದಲ್ಲಿ ಕೂಡಿಸಿದಾಗ ನನ್ನ ಮೋಟಾರ ಸೈಕಲಕ್ಕೆ ಡಿಕ್ಕಿಪಡಿಸಿ ಅಪಘಾತ ಮಾಡಿದ ಟಿಪ್ಪರ ನಂಬರ ಕೆಎ-32/ಬಿ-7126 ಇದ್ದಿತು. ಸದರಿಯವನು ತನ್ನ ವಾಹನವನ್ನು ಅಲ್ಲೇ ನಿಲ್ಲಿಸಿ ಓಡಿ ಹೋದನು ಸದರ ಘಟನೆ ಜರುಗಿದಾಗ ಮದ್ಯಾಹ್ನ 2-00 ಗಂಟೆ ಅಂದಾಜು ಸಮಯವಾಗಿತ್ತು. ಸದರ ಘಟನೆಯಿಂದ ನನ್ನ ಎಡಗಾಲು ಹೆಬ್ಬರಳಿಗೆ ಭಾರಿ ರಕ್ತಗಾಯ ಎಡಗೈ ಮುಂಗೈ ಹತ್ತೀರ ತರಚಿದಗಾಯ ಹಾಗೂ ಎಡಗಾಲು ಮೊಳಕಾಲಿಗೆ ತರಚಿದಗಾಯವಾಗಿತ್ತು. ಅಕ್ಷಜ ಇತನ ಕೆಳಗಿನ ತುಟಿಗೆ ಗದ್ದಕ್ಕೆ ಹಣೆಗೆ ತರಚಿದಗಾಯವಾಗಿತ್ತು. ಎಡಗೈ ಮುಂಗೈ ಹತ್ತೀರ ತರಚಿದಗಾಯ ಮಾನಸಾ ಇವಳ ಎಡಗಾಲು ಪಾದದ ಮೇಲ್ಬಾಗದಲ್ಲಿ ಭಾರಿ ರಕ್ತಗಾಯ ಹಾಗೂ ಎಡಗೈ ಮುಂಗೈ ಹತ್ತೀರ ತರಚಿದಗಾಯವಾಗಿ ತ್ರಾಸ ಆಗುತ್ತಿದ್ದರಿಂದ ಅಪಘಾತ ಸ್ಥಳಕ್ಕೆ ಅಂಬುಲೇನ್ಸ ವಾಹನ ಬಂದಾಗ ಬೀಮಕಲಾ ಮತ್ತು ಅವರ ಗಂಡ ಅಮೀತ ರವರು ನಮ್ಮ ಮೂರು ಜನರಿಗೆ ಉಪಚಾರ ಕುರಿತು ಬಸವೇಶ್ವರ ಆಸ್ಪತ್ರೆಗೆ ತಂದು ಸೇರಿಕೆ ಮಾಡಿದ್ದು ನಿನ್ನೆ ನನ್ನ ಗಂಡ ಪಂಡರಿನಾಥ ಇವರು ಬೇರೆ ಊರಿಗೆ ಹೋಗಿದ್ದು ಇಂದು ಅವರು ಊರಿನಿಂದ ಆಸ್ಪತ್ರೆಗೆ ಬಂದಿದ್ದು ಅವರನ್ನು ವಿಚಾರಿಸಿ ಟಿಪ್ಪರ ನಂಬರ ಕೆಎ-32/ಬಿ-7126 ನೇದ್ದರ ಚಾಲಕನ ಮೇಲೆ ದೂರು ಬರೆಯಿಸಿ ಕಳುಹಿಸಿ ಕೊಟ್ಟಿದ್ದು ಇರತ್ತದೆ ಅಪಘಾತ ಪಡಿಸಿದ ಟಿಪ್ಪರ ಚಾಲಕನ ಹೆಸರು ಗೋತ್ತಾಗಿರುವದಿಲ್ಲ ಆತನನ್ನು ನೋಡಿದ್ದು ಮುಂದೆ ನೋಡಿದಲ್ಲಿ ಗುರ್ತಿಸುತ್ತೆನೆ, ಟಿಪ್ಪರ ನಂಬರ ಕೆಎ-32/ಬಿ-7126 ನೇದ್ದರ ಚಾಲಕನು ತನ್ನ ವಾಹನವನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನಾನು ಚಲಾಯಿಸಿಕೊಂಡು ಹೋಗುತ್ತೀರುವ ಮೋಟಾರ ಸೈಕಲ ನಂಬರ ಕೆಎ-32/ಇಟಿ-1742 ನೇದ್ದಕ್ಕೆ ಹಿಂದಿನಿಂದ ಡಿಕ್ಕಿಪಡಿಸಿ ಅಪಘಾತ ಮಾಡಿ ನನಗೆ ಮತ್ತು ನನ್ನ ಮಗ ಅಕ್ಷಜ ಹಾಗೂ ನೆಗಣೆ ಮಗಳು ಮಾನಸಾ ಇವಳಿಗೆ ಗಾಯಗೊಳಿಸಿ ತನ್ನ ಟಿಪ್ಪರ ಅಲ್ಲೆ ಬಿಟ್ಟು ಓಡಿ ಹೋಗಿದ್ದು ಟಿಪ್ಪರ ಚಾಲಕನ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಅಂತಾ ಕೊಟ್ಟ ಅರ್ಜಿಯ ಸಾರಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

ಸಬ್ ಅರ್ಬನ್ ಪೊಲೀಸ ಠಾಣೆ :- ನಾನು ಸಂತೋಷ ಬನ್ನಟ್ಟಿ, ಎ.ಸಿ.ಪಿ., ಸಿ.ಸಿ.ಬಿ. ಘಟಕ ಕಲಬುರಗಿ ನಗರ ಈ ಮೂಲಕ ಸರಕಾರಿ ತರ್ಫೆ ವರದಿ ಸಲ್ಲಿಸುವುದೇನಂದರೆ, ಇಂದು ದಿನಾಂಕ:03-03-2023 ರಂದು ಬೆಳಿಗ್ಗೆ 01-00 ಗಂಟೆಗೆ ನಾನು ರಾತ್ರಿಗಸ್ತು ಮೇಲ್ವಿಚಾರಣೆ ಕರ್ತವ್ಯದಲ್ಲಿದ್ದಾಗ ಮಾಲಗತ್ತಿ ಕ್ರಾಸ್ ಹತ್ತಿರ ಸವರ್ೆ ನಂ.98 ದರ್ಗಾದ ಹತ್ತಿರ ಲೈಟಿನ ಬೆಳಕಿನಲ್ಲಿ ಖುಲ್ಲಾ ಜಾಗೆಯಲ್ಲಿ ಅಕ್ರಮವಾಗಿ ಅಂದರ ಬಾಹರ ಜೂಜಾಟ ನಡೆದಿದೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ಸದರಿ ವಿಷಯವನ್ನು ನಾನು ಮೇಲಾಧಿಕಾರಿಗಳಿಗೆ ಮಾಹಿತಿ ತಿಳಿಸಿ, ಅವರ ಮಾರ್ಗದರ್ಶನದಲ್ಲಿ ದಾಳಿ ಕುರಿತು ಇಬ್ಬರೂ ಪಂಚರಾದ 1) ಶ್ರೀ ಅಬ್ದುಲ ಕರೀಮ ಶೇಖ ತಂದೆ ರುಕ್ಮೋದ್ದಿನ ಶೇಖ, ವ:42 ವರ್ಷ, ಜಾತಿ:ಮುಸ್ಲಿಂ, ಉ:ವ್ಯಾಪಾರ, ಸಾ:ಎಂ.ಎಸ್.ಕೆ.ಮಿಲ್, ಕಲಬುರಗಿ ಮೊ.ನಂ.7251396451, 2) ಮಹ್ಮದ ನುಮಾನ ತಂದೆ ಮಹ್ಮದ ಪಟೇಲ, ವ:33 ವರ್ಷ, ಜಾತಿ:ಮುಸ್ಲಿಂ, ಉ:ವ್ಯಾಪಾರ, ಸಾ:ಸ್ಟೇಷನ್ಬಜಾರ ಕಲಬುರಗಿ ಮೊ.ನಂ.9945276866 ರವರಿಗೆ ಬೆಳಿಗ್ಗೆ 2-00 ಗಂಟೆಗೆ ಹಾಗರಗಾ ಕ್ರಾಸ್ಗೆ ಬರಮಾಡಿಕೊಂಡು, ಹಾಗೂ ಸಿ.ಸಿ.ಬಿ. ಘಟಕದ ಸಿಬ್ಬಂದಿಯವರಾದ 1) ಸುನೀಲಕುಮಾರ ಹೆಚ್.ಸಿ-167, 2) ಅಶೋಕ ಸಿಪಿಸಿ-647, 3) ಅಂಬಾಜಿ ಸಿಪಿಸಿ-131, 4) ಯಲ್ಲಪ್ಪ ಸಿಪಿಸಿ-220, 5) ಶಿವಕುಮಾರ ಸಿಪಿಸಿ-16715, 6) ನಾಗರಾಜ ಪಿಸಿ-1257, ರವರುಗಳಿಗೆ ಕೂಡಾ ಹಾಗರಗಾ ಕ್ರಾಸ್ಗೆ ಬರಮಾಡಿಕೊಂಡು ನಂತರ ಪಂಚರಿಗೆ ಸಿಬ್ಬಂದಿಯವರನ್ನು ಪರಿಚಯಿಸಿ ವಿಷಯ ತಿಳಿಸಿ ದಾಳಿ ಪಂಚನಾಮೆ ಸಹಕರಿಸಲು ಕೇಳಿಕೊಂಡ ಮೇರೆಗೆ ಉಭಯ ಪಂಚರು ಒಪ್ಪಿಕೊಂಡಿರುತ್ತಾರೆ.

ನಂತರ ನಾನು, ಪಂಚರು, ಮತ್ತು ಸಿ.ಸಿ.ಬಿ. ಘಟಕದ ಸಿಬ್ಬಂದಿಯವರು ಕೂಡಿಕೊಂಡು ಸಕರ್ಾರಿ ಜೀಪ ನಂ.ಕೆಎ-32-ಜಿ-1249 ನೇದ್ದರಲ್ಲಿ ಕೆಲವು ಸಿಬ್ಬಂದಿ ಜನರು ತಮ್ಮ ತಮ್ಮ ಮೋಟಾರಸೈಕಲಗಳ ಮೇಲೆ ಬೆಳಿಗ್ಗೆ 2-20 ಗಂಟೆಗೆ ಹಾಗರಗಾ ಕ್ರಾಸ್ದಿಂದ ಹೊರಟು, ಸದರಿ ಜೀಪನ್ನು ಶ್ರೀ ಗುರುನಾಥ ಎ.ಹೆಚ್.ಸಿ-56 ರವರು ಚಲಾಯಿಸುತ್ತಿದ್ದು, ನಂತರ ಬಾತ್ಮಿ ಬಂದ ಸ್ಥಳವಾದ ಮಾಲಗತ್ತಿ ಕ್ರಾಸ್ ಹತ್ತಿರ ಸರ್ವೇ ನಂ.98 ದಗರ್ಾದ ಹತ್ತಿರ ಬೆಳಿಗ್ಗೆ 2-45 ಗಂಟೆಗೆ ತಲುಪಿ ಸ್ವಲ್ಪ ದೂರದಲ್ಲಿ ವಾಹನಗಳನ್ನು ನಿಲ್ಲಿಸಿ ಅಲ್ಲಿಯೇ ಮರೆಯಲ್ಲಿ ನಿಂತು ನೋಡಲಾಗಿ ಸದರಿ ಖುಲ್ಲಾ ಜಾಗೆಯಲ್ಲಿ ಕೆಲವು ಜನರು ದುಂಡಾಗಿ ಕೆಳಗಡೆ ನೆಲದ ಮೇಲೆ ಕುಳಿತುಕೊಂಡು ಲೈಟಿನ ಬೆಳಕಿನಲ್ಲಿ ಪಣಕ್ಕೆ ಹಣ ಹಚ್ಚಿ ಅಕ್ರಮವಾಗಿ ಇಸ್ಪೀಟ್ ಜೂಜಾಟ ಆಡುವುದನ್ನು ಪಂಚರ ಸಮಕ್ಷಮ ನೋಡಿ ಖಚಿತಪಡಿಸಿಕೊಂಡು ಬೆಳಿಗ್ಗೆ 3-00 ಗಂಟೆಗೆ ಸಿಬ್ಬಂದಿಯವರೊಂದಿಗೆ ದಾಳಿ ಮಾಡಿ ಆಪಾದಿತರಿಗೆ ಹಿಡಿದು ವಿಚಾರಿಸಲು ಅವರು ಹಣ ಪಣಕ್ಕೆ ಹಚ್ಚಿ ಇಸ್ಪೇಟ್ ಎಲೆಗಳ ಸಹಾಯದಿಂದ ಅಂದರಬಾಹರ ಎಂಬ ಜೂಜಾಟ ಆಡುವ ಬಗ್ಗೆ ತಪ್ಪೊಪ್ಪಿಕೊಂಡ ಬಳಿಕ ಸ್ವಾಧೀನಕ್ಕೆ ಪಡೆದುಕೊಂಡು ಅವರ ಹೆಸರು ವಿಳಾಸ ವಿಚಾರಿಸಿ ಅಂಗ ಶೋಧನೆ ಮಾಡಲಾಗಿ

1) ಮಹ್ಮದ ಹಬೀಬ ತಂದೆ ಮಹ್ಮದ ಮಶಾಕ, ವ:45 ವರ್ಷ, ಜಾತಿ:ಮುಸ್ಲಿಂ, ಉ:ಡ್ರೈವರ್, ಸಾ:ಹಾಗರಗಾ ರಿಂಗ ರೋಡ, ಕೆ.ಸಿ.ಟಿ. ಕಾಲೇಜ ಹತ್ತಿರ ಕಲಬುರಗಿ ಅಂತಾ ತಿಳಿಸಿದ್ದು, ಸದರಿಯವನಿಗೆ ಅಂಗ ಶೋಧನೆ ಮಾಡಲು ನಗದು ಹಣ 4,800/- ರೂ.ಗಳು ದೊರೆತಿರುತ್ತವೆ.

2) ಮಹ್ಮದ ಇಸ್ಮಾಯಿಲ ತಂದೆ ಮಹ್ಮದ ಇಬ್ರಾಹಿಂ, ವ:50 ವರ್ಷ, ಜಾತಿ:ಮುಸ್ಲಿಂ, ಉ:ಅಲುಮಿನಿಯಂ ಫ್ಯಾಬ್ರಿಕೇಷನ್ ಕೆಲಸ, ಸಾ:ರೋಜಾ(ಬಿ) ಕಲಬುರಗಿ ಅಂತಾ ತಿಳಿಸಿದ್ದು, ಸದರಿಯವನಿಗೆ ಅಂಗ ಶೋಧನೆ ಮಾಡಲು ನಗದು ಹಣ 4,100/- ರೂ.ಗಳು ದೊರೆತಿರುತ್ತವೆ.

3) ಮಹ್ಮದ ಇಮ್ತಿಯಾಜ ತಂದೆ ಮಹ್ಮದ ಖಾಜಾ, ವ:30 ವರ್ಷ, ಜಾತಿ:ಮುಸ್ಲಿಂ, ಉ:ಖಾಸಗಿ ಕೆಲಸ, ಸಾ:ಹಾಗರಗಾ ಕ್ರಾಸ್ ಜುಬೇರ ಕಾಲೋನಿ, ಕಲಬುರಗಿ ಅಂತಾ ತಿಳಿಸಿದ್ದು, ಸದರಿಯವನಿಗೆ ಅಂಗ ಶೋಧನೆ ಮಾಡಲು ನಗದು ಹಣ 2,400/- ರೂ.ಗಳು ದೊರೆತಿರುತ್ತವೆ.

4) ಮಹ್ಮದ ಜಿಲಾನಿ ತಂದೆ ಯಾಕೂಬ ಜಿಲಾನಿ, ವ:28 ವರ್ಷ, ಜಾತಿ:ಮುಸ್ಲಿಂ, ಉ:ಸೆಂಟ್ರಿಂಗ್ ಕೆಲಸ, ಸಾ:ಮೆಹಬೂಬ ನಗರ ಕಲಬುರಗಿ ಅಂತಾ ತಿಳಿಸಿದ್ದು, ಸದರಿಯವನಿಗೆ ಅಂಗ ಶೋಧನೆ ಮಾಡಲು ನಗದು ಹಣ 3,200/- ರೂ.ಗಳು ದೊರೆತಿರುತ್ತವೆ.

5) ಅಬ್ದುಲ ರೌಫ ತಂದೆ ಅಬ್ದುಲ ಕರೀಮ, ವ:58 ವರ್ಷ, ಜಾತಿ:ಮುಸ್ಲಿಂ, ಉ:ಮಾಂಸ ವ್ಯಾಪಾರ, ಸಾ:ಚಾಚಾ ಹೊಟೇಲ ಹತ್ತಿರ, ಮುಸ್ಲಿಂ ಚೌಕ ಕಲಬುರಗಿ ಅಂತಾ ತಿಳಿಸಿದ್ದು, ಸದರಿಯವನಿಗೆ ಅಂಗ ಶೋಧನೆ ಮಾಡಲು ನಗದು ಹಣ 2,100/- ರೂ.ಗಳು ದೊರೆತಿರುತ್ತವೆ.

6) ಮಹ್ಮದ ಆಸೀಫ ತಂದೆ ಮಹ್ಮದ ರಜಾಕ, ವ:45 ವರ್ಷ, ಜಾತಿ:ಮುಸ್ಲಿಂ, ಉ:ಹೊಟೇಲ ಕೆಲಸ, ಸಾ:ಚಾಚಾ ಹೊಟೇಲ ಹತ್ತಿರ, ಮುಸ್ಲಿಂ ಚೌಕ,

7) ಶೇಖ ಗುಡುಲಾಲ ತಂದೆ ಶೇಖ ರುಕುಮಸಾಬ, ವ:40 ವರ್ಷ, ಜಾತಿ:ಮುಸ್ಲಿಂ, ಉ:ಸೆಂಟ್ರಿಂಗ್ ಕೆಲಸ, ಸಾ:ಹಮಾಲವಾಡಿ ಸ್ಟೇಷನ್ಬಜಾರ ಕಲಬುರಗಿ ಅಂತಾ ತಿಳಿಸಿದ್ದು, ಸದರಿಯವನಿಗೆ ಅಂಗ ಶೋಧನೆ ಮಾಡಲು ನಗದು ಹಣ 2,700/- ರೂ.ಗಳು ದೊರೆತಿರುತ್ತವೆ.

8) ಮಹ್ಮದ ಪಾಶಾ ತಂದೆ ಮಹ್ಮದ ಅಬ್ದುಲ ವ:38 ವರ್ಷ, ಜಾತಿ:ಮುಸ್ಲಿಂ, ಉ:ಫೋಟೊಗ್ರಾಫರ್, ಸಾ:ಸಾತಗುಂಬಜ ಹತ್ತಿರ, ಕಲಬುರಗಿ ಅಂತಾ ತಿಳಿಸಿದ್ದು, ಸದರಿಯವನಿಗೆ ಅಂಗ ಶೋಧನೆ ಮಾಡಲು ನಗದು ಹಣ 1,800/- ರೂ.ಗಳು ದೊರೆತಿರುತ್ತವೆ.

9) ಸಜ್ಜದಅಲಿಖಾನ ತಂದೆ ಗೌಸ ಖಾನ, ವ:45 ವರ್ಷ, ಜಾತಿ:ಮುಸ್ಲಿಂ, ಉ:ಚಹಾ ಹೊಟೇಲ, ಸಾ:ಸ್ಟೇಷನಬಜಾರ ಕಲಬುರಗಿ ಅಂತಾ ತಿಳಿಸಿದ್ದು, ಸದರಿಯವನಿಗೆ ಅಂಗ ಶೋಧನೆ ಮಾಡಲು ನಗದು ಹಣ 2,900/- ರೂ.ಗಳು ದೊರೆತಿರುತ್ತವೆ.

10) ಅರ್ಷದ ತಂದೆ ಖಾಜಾಪಾಶಾ, ವ:32 ವರ್ಷ, ಜಾತಿ:ಮುಸ್ಲಿಂ, ಉ:ಖಾಸಗಿ ಕೆಲಸ, ಸಾ:ಜಂಜಂ ಕಾಲೋನಿ ಕಲಬುರಗಿ ಅಂತಾ ತಿಳಿಸಿದ್ದು, ಸದರಿಯವನಿಗೆ ಅಂಗ ಶೋಧನೆ ಮಾಡಲು ನಗದು ಹಣ 3,700/- ರೂ.ಗಳು ದೊರೆತಿರುತ್ತವೆ. ಕೆಳಗಡೆ ನೆಲದ ಮೇಲೆ ಒಟ್ಟು ನಗದು ಹಣ ರೂ.12,230/- ಗಳು ದೊರೆತಿದ್ದು, ಮತ್ತು 52 ಇಸ್ಪೀಟ್ ಎಲೆಗಳು ದೊರೆತಿರುತ್ತವೆ. ಹೀಗೆ ಒಟ್ಟು ರೂ.42,230/- ನಗದು ಹಣ ದೊರೆತಿದ್ದು ಇರುತ್ತದೆ. ನಂತರ ಸದರಿ ಒಟ್ಟು 10 ಆಪಾದಿತರನ್ನು ಸಬ್-ಅರ್ಬನ್ ಪೊಲೀಸ್ ಠಾಣೆಗೆ ಬಂದು ಜಪ್ತಿ ಪಂಚನಾಮೆ ಮತ್ತು ಮುದ್ದೆಮಾಲಿನೊಂದಿಗೆ ತಂದು ಹಾಜರುಪಡಿಸಿದ್ದರ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

ಸಬ್ ಅರ್ಬನ್ ಪೊಲೀಸ ಠಾಣೆ :- ನಾನು ಸುರೇಶ ಹಜ್ಜರಗಿ ಪಿ.ಎಸ್.ಐ. ಸಬ್ ಅರ್ಬನ ಪೊಲೀಸ್ ಠಾಣೆ ಕಲಬುರಗಿ ನಗರ ಸರಕಾರಿ ತರ್ಪೆ ಫಿರ್ಯಾದಿ ಸಲ್ಲಿಸುವುದೆನೆಂದರೆ ಇಂದು ದಿನಾಂಕ: 03.03.2023 ರಂದು ಸಾಯಂಕಾಲ 05:30 ಗಂಟೆಯ ಸುಮಾರಿಗೆ ನಾನು ಠಾಣೆಯಲ್ಲಿರುವಾಗ ಖಚಿತ ಬಾತ್ಮಿ ಬಂದಿದ್ದು ಏನೆಂದರೆ, ಗಣಜಲಖೇಡ ಗ್ರಾಮದ ಪಿರಾಯ್ಯ ಗುತ್ತೇದಾರ ಇತನ ಕಿರಾಣಿ ಅಂಗಡಿ ಮುಂದೆ ಬಯಲು ಜಾಗೆಯಲ್ಲಿ ಕುಳಿತು ಅಕ್ರಮವಾಗಿ ಮದ್ಯ ಸಂಗ್ರಹಿಸಿ ಇಟ್ಟುಕೊಂಡು ಮದ್ಯ ಮಾರಾಟ ಮಾಡುತ್ತಿದ್ದಾನೆ ಅಂತಾ ಬಾತ್ಮಿ ಬಂದ ಕೂಡಲೇ  ನಾನು ಮತ್ತು ಹಾಗೂ ನಮ್ಮ ಠಾಣೆಯ ಸಿಬ್ಬಂದಿಯವರಾದ ಅಶೋಕ ಹೆಚ್.ಸಿ 79, ನಾಗೇಂದ್ರ ಪಿಸಿ 464, ಪ್ರಕಾಶ ಪಿಸಿ458, ಮಲ್ಲಿಕಾರ್ಜುನ ಪಿಸಿ 88, ಶಿವಾನಂದ ಪಿಸಿ 463 ಹಾಗೂ ಇಬ್ಬರೂ ಪಂಚರಾದ 1)ಶ್ರೀ ಕಾಳೇಶ ತಂದೆ ವಿಜಯಕುಮಾರ   ಕಲಮೂಡ ಯ;32 ವರ್ಷ ಜ್ಯಾತಿ; ಎಸ್.ಸಿ. ಉ; ಡ್ರೈವರ ಸಾ; ಸಂಜೀವ ನಗರ ಕಾಲೂನಿ ಕಲಬುರಗಿ. 2)ಶ್ರೀಕೇಶವ ತಂದೆ ಜಟ್ಟಿಂಗರಾಯ ಸೂರ್ಯವಂಶಿ, ವ:54 ವರ್ಷ, ಜಾತಿ:ಹರಿಜನ, ಉ:ಕೂಲಿಕೆಲಸ, ಸಾ:ಸಂಜೀವನಗರ, ಕಲಬುರಗಿ ರವರನ್ನು ಠಾಣೆಗೆ ಬರಮಾಡಿಕೊಂಡು ಅಕ್ರಮ ಮದ್ಯ ಮಾರಾಟದ ಮೇಲೆ ದಾಳಿ ಮಾಡುವದಿದ್ದು ಸಂಗಡ ಬಂದು ಹಕೀಕತ ನೋಡಿ ಪಂಚನಾಮೆಯನ್ನು ಕೈಕೊಳ್ಳಲು ಪಂಚರಾಗಲು ಕೋರಿಕೊಂಡ ಮೇರೆಗೆ ಉಭಯ ಜನರು ಒಪ್ಪಿಕೊಂಡಿರುತ್ತಾರೆ. ನಂತರ ನಾನು ಮತ್ತು ಈ ಮೇಲೆ ನಮೂದ ಮಾಡಿದ ನಮ್ಮ ಸಿಬ್ಬಂದಿಯವರು ಕೂಡಿಕೊಂಡು ಮಾನ್ಯ ಪಿ.ಐ.ಸಾಹೇಬರ ಆದೇಶ ಮತ್ತು ಸೂಚನೆಯಂತೆ  ಪಿರಾಯ್ಯ ಗುತ್ತೇದಾರ ರವರ ಕಿರಾಣಿ ಅಂಗಡಿ ಹತ್ತಿರ  ಸ್ವಲ್ಪ ದೂರದಲ್ಲಿ ನಮ್ಮ ಖಾಸಗಿ ವಾಹನ ನಿಲ್ಲಿಸಿ ನೋಡಲು ಅಕ್ರಮವಾಗಿ ಮದ್ಯವನ್ನು ಸಂಗ್ರಹಿಸಿ ಇಟ್ಟುಕೊಂಡು ಸಾರ್ವಜನಿಕರಿಗೆ  ಮಾರಾಟ ಮಾಡಲು ಒಬ್ಬನು ನಿಂತಿರುವದನ್ನು ನೋಡಿ ಖಚಿತ ಪಡಿಸಿಕೊಂಡು 06:00 ಪಿ.ಎಂ.ಕ್ಕೆ. ಒಮ್ಮಲೇ ದಾಳಿ ಮಾಡಲು ನಮ್ಮನ್ನು ನೋಡಿ ಮದ್ಯವನ್ನು ಬಿಟ್ಟು ಓಡಿಹೋಗಿದ್ದು, ಓಡಿಹೋದವನ ಹೆಸರು ವಿಚಾರಿಸಲಾಗಿ ಹೆಸರು ಪಿರಾಯ್ಯ ತಂದೆ ಶರಣಯ್ಯ ಗುತ್ತೇದಾರ ವಯಾಃ 32 ವರ್ಷ ಉಃ ಇಳಿಗ ಉಃ ಕಿರಾಣಿ ಅಂಗಡಿ ಸಾಃ ಗಣಜಲಕೇಡ ಗ್ರಾಮ ತಾಃಜಿಃ ಕಲಬುರಗಿ ಅಂತಾ ಗೊತ್ತಾಗಿದ್ದು ಸದರಿಯವನ ಹತ್ತಿರ ಇದ್ದ ಮದ್ಯಗಳ ಮಾರಾಟ ಮಾಡಲು ಪರವಾನಿಗೆ ಮತ್ತು ದಾಖಲಾತಿಗಳು ಇರುವದಿಲ್ಲಾ ಅನಧಿಕೃತವಾಗಿ ಇಟ್ಟು ಮಾರಾಟ ಮಾಡುತಿದ್ದ ಬಗ್ಗೆ  ತಿಳಿಸಿದ್ದು  ಸದರಿಯವನ ಹತ್ತಿರ ಕೆಲವು ರಟ್ಟಿನ ಬಾಕ್ಸಗಳು ಇದ್ದು ಅದರಲ್ಲಿದ್ದ ಮದ್ಯಗಳನ್ನು ಪರಿಶೀಲಿಸಿ ನೋಡಲಾಗಿ 1) ಓರಿಜನಲ್ ಚಾಯ್ಸ್ 90 ಎಂ.ಎಲ್.ನ ಒಟ್ಟು 472 ಟೆಟ್ರಾ ಪಾಕೇಟಗಳು ಪ್ರತಿಯೊಂದಕ್ಕೆ ರೂ.35=00 ರಂತೆ ಒಟ್ಟು ಅಕಿ. ರೂ.16,520=00, 2) ಪವರ್ ಕೂಲ್ ಸ್ರ್ಟಾಂಗ್ ಬಿಯರ್ 650 ಎಂ.ಎಲ್ ನ ಒಂದು ಬಾಕ್ಸನಲ್ಲಿ 12 ಬಾಟಲ್ ಗಳಂತೆ 3 ಬಾಕ್ಸನಲ್ಲಿ ಒಟ್ಟು 36 ಬಾಟಲ್ಗಳು ಇದ್ದು ಪ್ರತಿಯೊಂದಕ್ಕೆ ರೂ. 100=00 ರಂತೆ ಒಟ್ಟು ಅ:ಕಿ: 3600/- ರೂಪಾಯಿಗಳ ಬೆಲೆಬಾಳುವ ಮದ್ಯದ ಬಾಟಲ್ಗಳನ್ನು ಪಂಚರ ಸಮಕ್ಷಮ ಜಪ್ತಿ ಮಾಡಿ, ಹೀಗೆ ಜಪ್ತಾದ 472 ಓರಿಜಿನಲ್ ಚಾಯ್ಸ್ ಟೆಟ್ರಾ ಮದ್ಯದ ಪಾಕೇಟ ಹಾಗು 36 ಪವರ್ ಕೂಲ್ ಸ್ರ್ಟಾಂಗ್ ಬಿಯರ್ ಬಾಟಲ್ಗಳು ಎಫ್ ಎಸ್ ಎಲ್ ಪರೀಕ್ಷೆ ಕುರಿತು ಒಂದೊಂದು ರಟ್ಟಿನ ಬಾಕ್ಸನಲ್ಲಿ ಹಾಕಿ ಬಿಳಿ ಅರಿವೆಯಲ್ಲಿ ಹಾಕಿ ದಾರದಿಂದ ಹೊಲೆದು “ ಜಿಪಿಎಸ್ ” ಎಂಬ ಇಂಗ್ಲೀಷ ಅಕ್ಷರದಿಂದ ಅರಗಿನಿಂದ ಶೀಲ ಮಾಡಿ  ಪಂಚರ ಸಹಿ ಚೀಟಿ ಅಂಟಿಸಿ ಜಪ್ತಿ ಪಡಿಸಿಕೊಂಡಿದ್ದು ಇರುತ್ತದೆ. ಸದರಿ ಆರೋಪಿತನು ಯಾವುದೇ ಅಧಿಕೃತ ಪರವಾನಿಗೆ ಇಲ್ಲದೇ ಅಕ್ರಮವಾಗಿ ಮದ್ಯ ಸಂಗ್ರಹಿಸಿಕೊಂಡಿದ್ದರ ಆಧಾರದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

ಸಬ್ ಅರ್ಬನ್ ಪೊಲೀಸ ಠಾಣೆ :- ನಾನು ಶರಣಮ್ಮಾ ಗಂಡ  ಹಣಮಂತರಾಯ ಎಕಲೂರ ವಯಾ: 55 ವರ್ಷ ಜಾ: ಲಿಂಗಾಯತ ಉ:ಹೋಲಾ ಮನೆ ಕೆಲಸ ಸಾ: ಸೈಯದ ಚಿಂಚೋಳಿ ತಾ:ಜಿ: ಕಲಬುರಗಿ ಇದ್ದು ಈ ಮೂಲಕ ದೂರು ಸಲ್ಲಿಸುವದೆನೆಂದರೆ ನಮ್ಮ ಹೋಲವು ಸೈಯದ ಚಿಂಚೋಳಿ ಸಿಮಾಂತರದಲ್ಲಿ ಹೋಲ ಸರ್ವೆ ನಂ 47,48 ನೇದ್ದರಲ್ಲಿ ಜಮೀನು ಇದ್ದು. ಸದರಿ ಜಮೀನಿಗೆ ಹೊಂದಿಕೊಂಡು ನನ್ನ ಗಂಡನ ಅಣ್ಣತಮ್ಮಕೀಯ ಚಂದ್ರಕಾಂತ ತಂದೆ ಅಂಬಾರಾಯ ಎಕಲೂರ ರವರ ಹೋಲವು ಇದ್ದು. ಅವರ ಹೋಲದಲ್ಲಿ ನಮಗೆ ಸಂಬಂದಿಸಿದ ಹೋಲ ಸ್ವಲ್ಪ ಬರಬೇಕಾಗಿದ್ದರಿಂದ ಅವರು ಬಾಯಿ ಮಾತಿನಿಂದ ಹೇಳಿದರೆ ಕೊಡದೆ ಇದ್ದಾಗ ನಾವು ಸರ್ವೆ ಮಾಡಿಸಿ ಸದರಿ ಹೋಲ ಇಲ್ಲಿಗೆ ನಮಗೆ ಬರುತ್ತದೆ ಅಂತಾ ಅಂದರು ಅವರು ನಮಗೆ ಹೊಲಕೊಡದೆ ಜಗಳ ಮಾಡಿಕೊಳ್ಳುತ್ತಾ ಬಂದಿದ್ದು ಇರುತ್ತದೆ.  ಹೀಗಿದ್ದು ನಿನ್ನೆ ದಿನಾಂಕ 03/03/2023 ರಂದು ನಾನು ಮತ್ತು ನನನ್ನ ಮಕ್ಕಳಾದ ಶಿವಾನಂದ,  ಮಲ್ಲಿಕಾರ್ಜುನ  ಹಾಗು ನಮ್ಮ ಗ್ರಾಮದ ಖಾದರಮಿಯಾ ತಂದೆ ಮಹ್ಮದ ಅಲಿ, ಬಸವಣಪ್ಪಾ ತಂದೆ ಮಲ್ಕಜಪ್ಪಾ ಮುಲಗೆ, ದಾನಪ್ಪಾ ತಂದೆ ರಾಚಪ್ಪಾ ಜಟಗೆ ಎಲ್ಲರೂ ಸೇರಿ ಹೊಲವನ್ನು ಸರ್ವೆದವರು ಬಂದು ಅಳತೆ ಮಾಡುವರು ಇರುವುದರಿಂದ ಎಲ್ಲರೂ ಹೋಲಕ್ಕೆ ಹೋದಾಗ ಸರ್ವೆದವರು ಹೊಲ ಸರ್ವೆ ಮಾಡಿದ ನಮಗೆ ಅವರ ಹೊಲದಲ್ಲಿ ಸ್ವಲ್ಪ ಬಂದಿದ್ದು . ಆಗ ಅದೇ ಸಮಯದಲ್ಲಿ ಹೋಲದಲ್ಲಿ ಇದ್ದ 1) ಚಂದ್ರಕಾಂತ ತಂದೆ ಅಂಬಾರಾಯ ಎಕಲೂರ 2) ಸೂರ್ಯಕಾಂತ ತಂದೆ ಅಂಬಾರಾಯ ಎಕಲೂರ ಇಬ್ಬರು ಕೂಡಿಕೊಂಡು ಏ ರಂಡಿ ಮಕ್ಕಳೆ ನೀವು ಎಷ್ಟು ಸಾರಿ ಅಳತೆ ಮಾಡಿಸಿದರೂ ನಿಮಗೆ ಆ ಹೋಲ ಕೊಡುವುದಿಲ್ಲಾ ಏನು ಮಾಡತ್ತಿರಿ ಮಾಡ್ರಿ ಅಂತಾ ಚಂದ್ರಕಾಂತ ಇತನು ನನ್ನ ಮಗನಾದ ಶಿವಾನಂದ ಇತನಿಗೆ ಕೈಹಿಡಿದು ತಿರುವಿ ಬಲಗೈ ಮುಂಗೈ ಹತ್ತಿರ ಗಾಯಗೊಳಿಸಿದ್ದು ನಂತರ ನನಗೆ ಚಂದ್ರಕಾಂತ ಇತನು ಕಲ್ಲಿನಿಂದ ಮುಖದ ಮೇಲೆ ಹೊಡೆದಿದ್ದರಿಂದ ಮುಗಿನಿಂದ ,ಬಾಯಿಂದ ರಕ್ತ ಬಂದಿದ್ದು ನಂತರ ನನ್ನ ಮಗ ಮಲ್ಲಿಕಾರ್ಜುನ ಬಿಡಿಸಲು ಬಂದಾಗ ಅವನಿಗೂ ಸೂರ್ಯಕಾಂತ ಇತನು ಎದೆಯ ಮೇಲಿನ ಅಂಗಿ ಹಿಡಿದು ಜೆಗ್ಗಾಗಿ ಎದೆಗೆ ಹೊಡೆದು ಗುಪ್ತಗಾಯ ಮಾಡಿದ್ದು ಇರುತ್ತದೆ. ನಂತರ ನಮ್ಮೊಂದಿಗೆ ಇದ್ದ ಖಾದರಮಿಯಾ, ಬಸವಣಪ್ಪಾ , ಧಾನಪ್ಪಾ ಎಲ್ಲರೂ ಬಂದು ಜಗಳ ಬಿಡಿಸುವಾಗ ಇಬ್ಬರು ಏ ರಂಡಿ ಮಕ್ಕಳೆ ಇನ್ನೊಮ್ಮೆ ಆ ಹೋಲದ ವಿಷಯಕ್ಕೆ ಬಂದರೆ ನಿಮಗೆ ಖಲಾಷ ಮಾಡಿಯೇ ಬಿಡುತ್ತೇವೆ ಅಂತಾ ಜೀವದ ಭಯ ಹಾಕಿರುತ್ತಾರೆ. ಆಗ ಅಂದಾಜು ಸಮಯ ಮದ್ಯಾಹ್ನ 03:00 ಗಂಟೆ ಆಗಿರುತ್ತದೆ. ನಂತರ ನನಗೆ ಹಾಗು ನನ್ನ ಮಗ ಶಿವಾನಂದ ಇತನಿಗೆ ಗಾಯವಾಗಿರುವುದರಿಂದ ಸರಕಾರಿ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದು ಇಂದು ಠಾಣೆಗೆ ಬಂದು ದೂರು ನೀಡುತ್ತಿದ್ದೇವೆ.   ಕಾರಣ ನಮಗೆ ಅವಾಚ್ಯವಾಗಿ ಬೈದು ಹೊಡೆಬಡೆ ಮಾಡಿ ಜೀವದ ಭಯ ಹಾಕಿದ ಇಬ್ಬರ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಫಿರ್ಯಾದಿ ಅರ್ಜಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

Last Updated: 04-03-2023 06:48 PM Updated By: ADMIN


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

 • Copyright Policy
 • Hyperlinking Policy
 • Security Policy
 • Terms & Conditions
 • Privacy Policy
 • Help
 • Screen Reader Access
 • Guidelines

Visitors

 • Last Updated​ :
 • Visitors Counter :
 • Version :
CONTENT OWNED AND MAINTAINED BY : Kalaburagi City Police
Designed, Developed and Hosted by: Center for e-Governance - Web Portal, Government of Karnataka © 2024, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080