ಅಭಿಪ್ರಾಯ / ಸಲಹೆಗಳು

ವಿಶ್ವವಿದ್ಯಾಲಯ ಪೊಲೀಸ ಠಾಣೆ  :-  ದಿನಾಂಕ:04-03-2022  ರಂದು ಸಾಯಾಂಕಾಲ ೬:೩೦ ಗಂಟೆಗೆ ಫಿರ್ಯದಿ ಶ್ರೀಮತಿ ಮಹಾನಂದ ಗಂಡ ನಾಗೇಂದ್ರ ಚಾಮನಾಳಕರ್ ಸಾ: ಶಾಮಲೇಔಟ ಉದನೂರ ರೋಡ ಕಲಬುರಗಿ ಇವರು ಠಾಣೆಗೆ ಹಾಜರಾಗಿ ಲಿಖೀತ ದೂರು ಅರ್ಜಿ ಹಾಜರ ಪಡಿಸಿದ್ದರ ಸಾರಾಂಶ ಏನಂದರೆ, ಶಹಾಪೂರ ತಾಲೂಕಿನ ಹತ್ತಿಗುಡೂರ ಗ್ರಾಮದ ಸರಕಾರಿ ಹೀರಿಯ ಪ್ರಾಥಮಿಕ ಶಾಲೆಯಲ್ಲಿ ಸ-ಶಿಕ್ಷಕಿ ಅಂತಾ ಕೆಲಸ ಮಾಡಿಕೊಂಡಿರುತ್ತೇನೆ. ದಿನಾಲು ಶಾಲೆಗೆ ಹೋಗಿ ಬಂದು ಮಾಡುತ್ತೇನೆ. ದಿನಾಂಕ: ೦೩-೦೩-೨೦೨೨ ರಂದು ಎಂದಿನಂತೆ ಮುಂಜಾನೆ ಕಲಬುರಗಿಯಿಂದಿ ಹತ್ತಿಗುಡೂರ ಸರಕಾರಿ ಶಾಲೆಗೆ ಹೋಗಿ ಕರ್ತವ್ಯ ಮುಗಿಸಿಕೊಂಡು ಮರಳಿ ಸಂಜೆ ಸಮಯದಲ್ಲಿ ಕಲಬುರಗಿ ರಾಮಮಂದಿರ ಸರ್ಕಲ ಹತ್ತಿರ ಬಂದಾಗ ನಮ್ಮ ಅಣ್ಣ ರವಿಂದ್ರಕುಮಾರ ಇವರು ನಮ್ಮ ಹತ್ತಿರ ಬಂದು ನನಗೆ ಅವರ ಮೋಟಾರ ಸೈಕಲದ ಮೇಲೆ ಕೂಡಿಸಿಕೊಂಡು ಶಾಮ ಲೇಔಟ ಉದನೂರ ರೋಡ  ಹತ್ತಿರ ನಮ್ಮ ಮನೆಯ ಸಮಿಪ್ ಬಿಟ್ಟು ಹೋದರು. ನಾನು ನಡೆದುಕೊಂಡು ಮನೆಯ ಕಡೆಗೆ ಹೋಗುತ್ತಿದ್ದೇನು ಆಗ ಸಮಯ ೭:೩೦ ಗಂಟೆ ಆಗಿರಬಹುದು. ಅದೆ ಸಮಯಕ್ಕೆ ನನ್ನ ಹಿಂದಿನಿಂದ ಒಬ್ಬ ಮನುಷ್ಯನು ತನ್ನ ಮುಖಕ್ಕೆ ಮಾಸ್ಕ್‌ ಹಾಕಿಕೊಂಡು ಬಂದು ನನಗೆ ತಡೆದು ನನ್ನ ಕೊರಳಲ್ಲಿ ಕೈ ಹಾಕಿ ಕೊರಳಲ್ಲಿದ್ದ ಬಂಗಾರದ ಮಂಗಳಸೂತ್ರ ೩೫ ಗ್ರಾಂದಲ್ಲಿ ೫ ಗ್ರಾಂ ಕಡೆದುಕೆಳಗೆ ಬಿದ್ದಿದ್ದು, ಉಳಿದ ೩೦ ಗ್ರಾಂ ಅ.ಕಿ ೧,೨೦,೦೦೦/-ರೂ ಹಾಗು ಬಂಗಾರದ ಲಾಕೇಟ ೧೩ ಗ್ರಾಂ ೫೨,೦೦೦/-ರೂ ಕಸೀದುಕೊಂಡನು. ಸ್ವಲ್ಪ ಮಂಗಳ ಸೂತ್ರದಲ್ಲಿಂದ ಕಡಿದು ಕೆಳಗೆ ಬಿದ್ದಿರುತ್ತದೆ (೫ ಗ್ರಾಂ) ಆತನು ಅಲ್ಲಿಂದ ಓಡಿ ಹೋಗಿ ಇನ್ನೋಬ್ಬನು ಮೊಟಾರ ಸೈಕಲದ ಮೇಲೆ ನಿಂತಿದ್ದು ಅವನ ಮೊಟಾರ ಸೈಕಲದ ಹಿಂದೆ ಕುಳಿತು ಹೋದರು ಅವರಿಗೆ ನೋಡಿದಲ್ಲಿ ಗುರುತಿಸುತ್ತೇನೆ. ಅವರ ಅಂದಾಜು ೨೨ ರಿಂದ ೨೫ ವಯಸ್ಸಿನವರಿದ್ದು, ಪ್ಯಾಂಟ ಮತ್ತು ಶರ್ಟ ಧರಿಸಿರುತ್ತಾರೆ. ಅವನು ಕನ್ನಡದಲ್ಲಿ ಮಾತನಾಡಿರುತ್ತಾನೆ. ಆ ನಂತರ ನಾನು ನಮ್ಮ ಅಣ್ಣನಿಗೆ ಫೋನ ಮಾಡಿದಾಗ ಅವರು ಸ್ವಲ್ಪ ಹೋತ್ತಿನಲ್ಲಿ ಬಂದಿರುತ್ತಾರೆ     ಕಾರಣ ಮೇಲೆ ನಮೂದಿಸಿದ ಅಪರಿಚಿತ ಅಂದಾಜು ೨೨ ರಿಂದ ೨೫ ವಯಸ್ಸಿನ ವ್ಯಕ್ತಿಗಳು ಮೊಟಾರ ಸೈಕಲ ಮೇಲೆ ಬಂದು ಮೊಟಾರ ಸೈಕಲ ಸ್ವಲ್ಪ ದೂರದಲ್ಲಿ ನಿಲ್ಲಿಸಿ ಅವರಲ್ಲಿ ಒಬ್ಬನು ಬಂದು ನನಗೆ ತಡೆದ ನನ್ನ ಕೊರಳಲ್ಲಿದ್ದ ಬಂಗಾರದ ಮಂಗಳಸೂತ್ರದಲ್ಲಿ ೩೦ ಗ್ರಾಂ ಅ.ಕಿ ೧,೨೦,೦೦೦/-ರೂ ಹಾಗು ಬಂಗಾರದ ಚೈನ್ ೧೩ ಗ್ರಾಂ ಅ.ಕಿ ೫೨,೦೦೦/-ರೂ ಹೀಗೆ ಒಟ್ಟು ೪೩ ಗ್ರಾಂ ಒಟ್ಟು ಅ.ಕಿ ೧,೭೨,೦೦೦/-ರೂ ಕಿಮ್ಮತಿನವುಗಳು ಕಸಿದುಕೊಂಡು ಹೋಗಿದ್ದು ಅವರನ್ನು ಪತ್ತೆ ಮಾಡಿ ಅವರ ವಿರುದ್ದ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಮಾನ್ಯರವರಲ್ಲಿ ವಿನಂತಿ. ಅಂತಾ ಇತ್ಯಾದಿ ದೂರಿನ ಸಾರಾಂಶದ ಮೇಲಿಂದ ಗುನ್ನೆ ದಾಖಲು  ಮಾಡಿಕೊಂಡ ಬಗ್ಗೆ ವರದಿ.

ಸಂಚಾರಿ ಪೊಲೀಸ್ ಠಾಣೆ-೨ :- ದಿನಾಂಕ 04-02-2022 ರಂದು ೪-೦೦ ಪಿ.ಎಮ್ ಕ್ಕೆ ಚಕ್ರವರ್ತಿ  ತಂದೆ ರಾಯಪ್ಪಾ ವಾಲಿಕರ್ ವ; ೩೬ ವರ್ಷ ಜಾ; ಪ.ಜಾತಿ[ ಮಾದಿಗಾ] ಉ; ಕೂಲಿ ಕೆಲಸ ಸಾ; ಕೋರವಿ ತಾ; ಕಾಳಗಿ ಜಿಃ ಕಲಬುರಗಿ ಇವರು ಪೊಲೀಸ್ ಠಾಣೆಗ ಹಾಜರಾಗಿ ಫಿರ್ಯಾದಿ ಹೇಳಿಕೆ ನೀಡಿದ್ದು ಸಾರಂಶವೆನೆಂದರೆ,  ನನ್ನ ಹೆಂಡತ್ತಿ ಪದ್ಮಾವತಿ ಇವಳಿಗೆ ಟಿ.ಬಿ ರೋಗ ಹೆಚ್ಚಾಗಿರುವುದರಿಂದ ಅದರ ಉಪಚಾರಕ್ಕಾಗಿ ನಿನ್ನೆ ದಿನಾಂಕ-03-03-2022 ರಂದು ನಾನು ನನ್ನ ಹೆಂಡತ್ತಿ ಪದ್ಮಾವತಿ ನನ್ನ ಮಗು ಲಕ್ಷ್ಮಿ ಮೂವರು ಕೂಡಿಕೊಂಡು ಊರಿನಿಂದ ಕಲಬುರಗಿಗೆ ಬಂದು ಇ.ಎಸ್.ಐ.ಸಿ ಆಸ್ಪತ್ರೆಗೆ ಬಂದು ನನ್ನ ಹೆಂಡತ್ತಿಗೆ ತೊರಿಸಿ ಅಲ್ಲೆ ರಾತ್ರಿ ಉಳಿದು ಇಂದು ದಿನಾಂಕ-04-02-2022 ರಂದು ಪುನಃ ಮುಂಜಾನೆ ಆಸ್ಪತ್ರೆಯಲ್ಲಿ ತೊರಿಸಿಕೊಂಡು ಮರಳಿ ನಮ್ಮೂರಿಗೆ ಹೋಗುವ ಕುರಿತು ಇ.ಎಸ್.ಐ.ಸಿ ಆಸ್ಪತ್ರೆಯ ಗೇಟಿನ ಮುಂಭಾಗದಲ್ಲಿ ಮದ್ಯಾಹ್ನ ೧೨-೩೦ ಗಂಟೆ ಸುಮಾರಿಗೆ ರೋಡ ದಾಟಬೇಕೆಂದು ನಡೆದಾಗ ಅದೆ ವೇಳೆಗೆ ಕಲಬುರಗಿ ನಗರದ ಕಡೆಯಿಂದ  ಸೇಡಂ ರೋಡಿನ ಕಡೆಗೆ ಒಂದು ಲಾರಿ ನಂ ಎಮ್.ಹೆಚ್-೧೨ ಪಿ.ಕ್ಯೂ ೧೯೭೩ ನೇದ್ದರ ಚಾಲಕನು ಭಾರಿ ಅತಿವೇಗದಿಂದ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದವನೇ ಹಾರ್ನ್ ವಗೈರೆ ಹಾಕದೆ ಹಾಗೆ ನಡೆಸಿಕೊಂಡು ಬಂದವನೇ ನನ್ನ ಹೆಂಡತ್ತಿ ಪದ್ಮಾವತಿಗೆ ಡಿಕ್ಕಿ ಹೊಡೆದ ಪರಿಣಾಮ ಅವಳು ರೋಡಿಗೆ ಬಿದ್ದಾಗ ಅವಳ ಎದೆಯ ಭಾಗದಿಂದ ಟೊಂಕದ ಭಾಗದ ವರೆಗೆ ಮತ್ತು ಬಲಗೈ ಮೇಲಿಂದ ಲಾರಿ ಹಾಯ್ದು ಹೋದ ಪರಿಣಾಮ ಭಾರಿ ಪ್ರಮಾಣದ ಗಾಯವಾಗಿ ಟೊಂಕದ ಮತ್ತು ಟೊಂಕದ ಕೆಳಭಾಗದಿಂದ ಮೊಂಸ ಖಂಡ ಹೊರ ಬಂದಿದ್ದು ಅಲ್ಲದೆ ಬಲಗೈಗೆ ಭಾರಿ ಪ್ರಮಾಣದ ಗಾಯವಾಗಿ ನೋಡುನೋಡುತ್ತಿದ್ದಯೇ ಸ್ಥಳದಲ್ಲಿಯೇ ಮೃತ ಪಟ್ಟಳು ನಾನು ಚಿರಾಡುವಾಗ ರೋಡಿನಿಂದ ಹೋಗುವ ಶಿವಪುತ್ರ ತಂದೆ ಭೀಮರಾವ ಸ್ವಂತ, ವಿಚಾರಣೆಯಲ್ಲಿ ಹೆಸರು ತಿಳಿದುಕೊಂಡಿದ್ದು ಇವರು ಸಹಾಯ ಮಾಡಿದ್ದು. ಲಾರಿಚಾಲಕನು ಈ ಘಟನೆ ಕೊಂಡು ಲಾರಿಯನ್ನು ಅಲ್ಲಿಯೇ ಬಿಟ್ಟು ಓಡಿ ಹೋಗಿದ್ದು ಆತನಿಗೆ ನಾವು ನೋಡಿರುತ್ತೇವೆ ಮತ್ತೆ ನೋಡಿದಲ್ಲಿ ಗುರುತ್ತಿಸುತ್ತೇವೆ, ಮುಂದೆ ಯಾವುದೋ ಖಾಸಗಿ ಅಂಬುಲೈನ್ಸನಲ್ಲಿ ಹೆಂಡತ್ತಿ ಶವವನ್ನು ಹಾಕಿಕೊಂಡು ಕಲಬುರಗಿಯ ಸರಕಾರಿ ಆಸ್ಪತ್ರಗೆ ತಂದಿರುತ್ತೇನೆ, ಕಾರಣ ಲಾರಿ ನಂ ಎಮ್.ಹೆಚ್-೧೨ ಪಿ.ಕ್ಯೂ ೧೯೭೩ ನೇದ್ದರ ಚಾಲಕನ ಮೇಲೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕೆಂದು ಕೊಟ್ಟ ಫಿರ್ಯದಿ ಹೇಳಿಕೆ ಸಾರಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

ಚೌಕ ಪೊಲೀಸ್ ಠಾಣೆ:-  ದಿನಾಂಕ:04-03-2022  ರಂದು ರಾತ್ರಿ ೨೧.೦೦ ಪಿಎಂಕ್ಕೆ ಪ್ರಕರಣದ ಫಿರ್ಯಾದಿದಾರನಾದ ಶ್ರೀ ಶ್ರೀ ಸೂರ್ಯಕಾಂತ ತಂದೆ ತಿಪ್ಪಣ್ಣಾ ಖೇಳಗಿ ವ:೪೦ ವರ್ಷ ಉ:ಗೌಂಡಿ ಕೆಲಸ ಜಾ:ಪ.ಜಾತಿ(ಹೊಲೆಯ) ಸಾ: ಮನೆ ನಂ.ಇ/೮/೬೫೫ ಸಂಜೀವ ನಗರ ಗಂಜರೋಡ ಕಲಬುರಗಿ  ಇವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಗಣಕೀಕೃತ ಮಾಡಿಸಿದ ಫಿರ್ಯಾದಿ ಅರ್ಜಿಯನ್ನು ಹಾಜರ ಪಡಿಸಿದ್ದು ಸದರಿ  ಫಿರ್ಯಾದಿಯ ಅರ್ಜಿಯ ಸಾರಾಂಶವೆನೆಂದರೆ  ನಾನು ಶ್ರೀ ಸೂರ್ಯಕಾಂತ ತಂದೆ ತಿಪ್ಪಣ್ಣಾ ಖೇಳಗಿ ವ:೪೦ ವರ್ಷ ಉ:ಗೌಂಡಿ ಕೆಲಸ ಜಾ:ಪ.ಜಾತಿ(ಹೊಲೆಯ) ಸಾ: ಮನೆ ನಂ.ಇ/೮/೬೫೫ ಸಂಜೀವ ನಗರ ಗಂಜರೋಡ ಕಲಬುರಗಿ ಇದ್ದು ನಾನು ಗೌಂಡಿ ಕೆಲಸ  ಮಾಡಿಕೊಂಡು ಕುಟುಂಬದೊಂದಿಗೆ ವಾಸವಾಗಿರುತ್ತೇನೆ. ನನಗೆ ಒಟ್ಟು ೦೪ ಜನ ಮಕ್ಕಳಿದ್ದು ಅದರಲ್ಲಿ ೦೨ ಜನ ಹೆಣ್ಣುಮಕ್ಕಳು ೦೨ ಜನ ಗಂಡು ಮಕ್ಕಳಿರುತ್ತಾರೆ. ಹೆಣ್ಣುಮಕ್ಕಳಲ್ಲಿ ೨ನೇ ಮಗಳಾದ ಕು:ಪದ್ಮಾವತಿ ತಂದೆ ಸೂರ್ಯಕಾಂತ  ಖೇಳಗಿ ವ:೧೭ ವರ್ಷದವಳಿದ್ದು ಸದ್ಯ ಪಿಯುಸಿ ವಿದ್ಯಾಭ್ಯಾಸ ಮಾಡುತ್ತಿರುತ್ತಾಳೆ. ಹೀಗಿದ್ದು ದಿನಾಂಕ:೦೨.೦೩.೨೦೨೨ ರಂದು ಬೆಳಿಗ್ಗೆ ನಾನು ಮತ್ತು ನನ್ನ ಹೆಂಡತಿ ಇಬ್ಬರೂ ಕೂಡಿಕೊಂಡು ಗೌಂಡಿ ಕೆಲಸಕ್ಕೆ ಹೋಗಿದ್ದು ಮನೆಯಲ್ಲಿ ನನ್ನ ತಾಯಿ ಕಸ್ತೂರಿಬಾಯಿ ಮತ್ತು ನನ್ನ ಮಗಳಾದ ಪದ್ಮಾವತಿ ಮತ್ತು ಮಗ ದರ್ಶನ ಮೂರು ಜನರೂ ಮನೆಯಲ್ಲಿ ಇದ್ದರು. ಮಧ್ಯಾಹ್ನ ೧೨.೦೦ ಗಂಟೆ ಸುಮಾರಿಗೆ ನನ್ನ ಮಗಳಾದ ಪದ್ಮಾವತಿ ಇವಳು ನಮ್ಮ ತಾಯಿಗೆ ನನ್ನ ಗೆಳತಿಯರ ಹತ್ತಿರ ಹೋಗಿ ಬರುತ್ತೇನೆ ಅಂತಾ ಅವಳಿಗೆ ಹೇಳಿ ಮನೆಯಿಂದ ಹೋಗಿರುತ್ತಾಳೆ. ನಾವು ಕೆಲಸ ಮುಗಿಸಿಕೊಂಡು ಸಾಯಂಕಾಲ ೬.೦೦ ಗಂಟೆಗೆ ಮನೆಗೆ ಬಂದಿದ್ದು ಆಗ ನನ್ನ ೨ನೇ ಮಗಳಾದ ಪದ್ಮಾವತಿ ಇವಳು ಮನೆಯಲ್ಲಿ ಇರಲಿಲ್ಲಾ. ಮಗಳು ಪದ್ಮಾವತಿ ಎಲ್ಲಿಗೆ ಹೋಗಿದ್ದಾಳೆ ಅಂತಾ ನನ್ನ ತಾಯಿ ಕಸ್ತೂರಿಬಾಯಿ ಇವರಿಗೆ ವಿಚಾರಿಸಲಾಗಿ ನಮ್ಮ ತಾಯಿಯವರು ನನಗೆ ತಿಳಿಸಿದೇನೆಂದರೆ ನಾನು ಮಧ್ಯಾಹ್ನ ೧೨.೩೦ ಗಂಟೆಗೆ ನಾನು ಜೋಗಾ ಬೇಡುವ ಕುರಿತು ಹೋಗಿ ಸಾಯಂಕಾಲ ೫.೦೦ ಗಂಟೆಗೆ ಮನೆಗೆ ವಾಪಸ್ಸ ಬಂದಿದ್ದು ಮಧ್ಯಾಹ್ನ ೧೨.೦೦ ಗಂಟೆಗೆ ಗೆಳತಿಯರ ಮನೆಗೆ ಹೋಗಿ ಬರುತ್ತೇನೆ ಅಂತಾ ಹೇಳಿ ಹೋದ ನಿನ್ನ ಮಗಳು ಪದ್ಮಾವತಿ ಇವಳು ಇನ್ನು ಮನೆಗೆ ಬಂದಿರುವುದಿಲ್ಲಾ ಅಂತಾ ತಿಳಿಸಿದ್ದು ನಂತರ ನಾನು ನನ್ನ ಮಗ ಚಂದ್ರಕಾಂತ, ಹೆಂಡತಿ ಅಂಬಿಕಾ ಎಲ್ಲರೂ ಸೇರಿಕೊಂಡು ನಾವು ಎಲ್ಲಾ ಕಡೆ ಹಾಗೂ ನಮ್ಮ ಸಂಬಂಧಿಕರುಗಳಲ್ಲಿ ಹುಡುಕಾಡಿದರೂ ಸಹ ನನ್ನ ಮಗಳು ಸಿಕ್ಕಿರುವುದಿಲ್ಲಾ. ದಿನಾಂಕ:೦೨.೦೩.೨೦೨೨ ರಂದು ಮಧ್ಯಾಹ್ನ ೧೨.೦೦ ಗಂಟೆಯಿಂದ ಇಂದಿನವರೆಗೆ ಕಾಣೆಯಾದ ನನ್ನ ಮಗಳಾದ ಕು:ಪದ್ಮಾವತಿ ತಂದೆ ಸರ‍್ಯಕಾಂತ ಖೇಳಗಿ ಇವಳನ್ನು ಎಲ್ಲಾ ಕಡೆ ಹುಡುಕಾಡಲಾಗಿ ಅವಳು ಪತ್ತೆಯಾಗದ ಕಾರಣ ಇಂದು ತಡಮಾಡಿ ಠಾಣೆಗೆ ಬಂದು ದೂರು ಕೊಡುತ್ತಿದ್ದು ಕಾರಣ ದಯಮಾಡಿ ಕಾಣೆಯಾದ ಅಪ್ರಾಪ್ತ ನನ್ನ ಮಗಳಾದ ಕು:ಪದ್ಮಾವತಿ ತಂದೆ ಸರ‍್ಯಕಾಂತ ಖೇಳಗಿ ಇವಳನ್ನು ಹುಡುಕಿ ನಮಗೆ ಒಪ್ಪಿಸಬೇಕಾಗಿ ವಿನಂತಿ.

        ಕಾಣೆಯಾದ(ಅಪಹರಣಕೊಳ್ಳಗಾದ) ಹುಡುಗಿಯ ಚಹರಾಪಟ್ಟಿ ಈ ಕೆಳಗಿನಂತೆ ಇರುತ್ತದೆ.

ಹೆಸರು     : ಪದ್ಮಾವತಿ,  ತಂದೆ : ಸೂರ್ಯಕಾಂತ ಖೇಳಗಿ, ವಯ : ೧೭ ವರ್ಷ (ಹುಟ್ಟಿದ ದಿ:೦೫.೦೪.೨೦೦೫)

ಎತ್ತರ  : ೫ ಫೀಟ ೧ ಇಂಚ್, ಬಣ್ಣ : ಸಾಧಾರಣ ಗೋಧಿ ಬಣ್ಣ, ಮುಖ : ದುಂಡು ಮುಖ

ಕೂದಲು : ಕಪ್ಪು ಕೂದಲು ಬಟ್ಟೆ              : ಹಸಿರು & ಬಿಳಿ ಮಿಶ್ರಿತ ಟಾಪ್, ಬಿಳಿಯ ಬಣ್ಣದ ಲಗೀನ್ಸ

ಭಾಷೆ      : ಕನ್ನಡ, ಮರಾಠಿ, ಹಿಂದಿ ವಿದ್ಯಾರ್ಹತೆ : ಪಿಯುಸಿ ದ್ವೀತಿಯ ವರ್ಷದ ವಿದ್ಯಾರ್ಥಿನಿ  ಅಂತಾ ಕೊಟ್ಟ ಫಿರ್ಯಾದಿ ಅರ್ಜಿಯ  ಸಾರಾಂಶದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

ಇತ್ತೀಚಿನ ನವೀಕರಣ​ : 19-03-2022 02:36 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080