Feedback / Suggestions

ಸಂಚಾರಿ ಪೊಲೀಸ್‌ ಠಾಣೆ-2 :- ದಿನಾಂಕ: 03-02-2023 ರಂದು ರಾತ್ರಿ 8:00 ಗಂಟೆ ಸುಮಾರಿಗೆ ನಾನು ಮನೆಯಲ್ಲಿರುವಾಗ ನನ್ನ ಅಣ್ಣನ ಮಗ ಆನಂದ ಇತನ ಗೆಳೆಯ ತಂದೆ ರಾಜೇಂದ್ರ ಇವರು ನನಗೆ ಪೋನ ಮಾಡಿ ನಾನು ನಾಗನಹಳ್ಳಿ ಪೊಲೀಸ ಕಮಾನ ಹತ್ತೀರ ಇರುವಾಗ ನಿಮ್ಮ ಅಣ್ಣನ ಮಗ ಆನಂದ ಇತನ ನಾಗನಹಳ್ಳಿ ಪೊಲೀಸ ಕ್ವಾಟರ್ಸನಲ್ಲಿ ತನ್ನ ಗೆಳೆಯರಿಗೆ ಬೇಟಿಯಾಗಿ ವಾಫಸ್ಸ ಹಿರಾಪೂರ ಕಡೆಗೆ ಹೋಗುವ ಕುರಿತು ಮೋಟಾರ ಸೈಕಲ ನಂಬರ ಕೆಎ-32/ಇಡಿ-1745 ನೇದ್ದನ್ನು ಚಲಾಯಿಸಿಕೊಂಡು ಪೊಲೀಸ ವಸತಿ ಗೃಹಗಳ ಕಡೆಯಿಂದ ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಪೊಲೀಸ ಕಮಾನ ಹತ್ತೀರ ರೋಡ ಮೇಲೆ ಒಮ್ಮಲೇ ಬ್ರೇಕ ಹಾಕಿ ಮೋಟಾರ ಸೈಕಲ ಸ್ಕಿಡ್ ಮಾಡಿ ತನ್ನಿಂದ ತಾನೆ ಮೋಟಾರ ಸೈಕಲ ಮೇಲಿಂದ ಕೆಳಗಡೆ ಬಿದ್ದನ್ನು ನಾನು ಮತ್ತು ನನ್ನ ಜೊತೆಯಲ್ಲಿದ್ದ ನನ್ನ ಗೆಳೆಯ ಇಬ್ಬರೂ ಹೋಗಿ ಆತನಿಗೆ ಎಬ್ಬಿಸಿ ನೋಡಲು ಆತನ ನಡು ತೆಲೆಯ ಮೇಲೆ ಭಾರಿ ರಕ್ತಗಾಯ ಎಡ ಕಿವಿಗೆ ರಕ್ತಗಾಯ ಎಡ ಎದೆಗೆ ಭಾರಿ ಗುಪ್ತಪೆಟ್ಟು ಬಿದ್ದಿತ್ತು. ಆತನು ಬೇಹೂಸ ಇರುತ್ತಾನೆ ಸದರಿ ಘಟನೆ ಜರುಗಿದಾಗ ಸಾಯಂಕಾಲ ಅಂದಾಜು 6:30 ಗಂಟೆ ಸಮಯವಾಗಿತ್ತು. ಅಂಬುಲೇನ್ಸ ವಾಹನ ಸ್ಥಳಕ್ಕೆ ಬಂದಾಗ ಆನಂದ ಇತನ ಉಪಚಾರ ಕುರಿತು ಸರ್ಕಾರಿ ಆಸ್ಪತ್ರೆಗೆ ಕಳುಹಿಸಿಕೊಟ್ಟಿರುತ್ತೇವೆ. ಅಂತಹ ತಿಳಿಸಿದ್ದರಿಂದ ನಾನು ಸರಕಾರಿ ಆಸ್ಪತ್ರೆಗೆ ಹೋಗಿ ಆನಂದ ಇತನಿಗೆ ನೋಡಲು ಆತನಿಗೆ ಭಾರಿಪೆಟ್ಟು ಬಿದ್ದಿದ್ದರಿಂದ ಬೇಹೂಸ ಇದ್ದನ್ನು ಆತನ ಹೆಚ್ಚಿನ ಉಪಚಾರ ಕುರಿತು ನಾನು ಖಾಸಗಿ ಎಕ್ಸಾನ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಕೆ ಮಾಡಿದ್ದು ಆನಂದ ಇತನು ರಸ್ತೆ ಅಪಘಾತದಲ್ಲಿ ಆದ ಭಾರಿಗಾಯದ ಉಪಚಾರ ಪಡೆಯುತ್ತಾ ಬೇಳಿಗ್ಗೆ 5:23 ಗಂಟೆಗೆ ಆಕ್ಸನ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು ಇರುತ್ತದೆ. ನನ್ನ ಅಣ್ಣ ಮತ್ತು ಅತ್ತಿಗೆ ಇವರು ಸದ್ಯ ಊರಿಗೆ ಹೋಗಿದ್ದು ನಾನು ಸದರಿ ಘಟನೆ ಬಗ್ಗೆ ದೂರು ನೀಡಲು ಬಂದಿದ್ದು ತಾವು ಮುಂದಿನ ಕ್ರಮ ಜರುಗಿಸಬೇಕು ಎಂದು ಫಿರ್ಯಾದಿ ಕೊಟ್ಟ ಅರ್ಜಿ ಸಾರಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

ಸಂಚಾರಿ ಪೊಲೀಸ್‌ ಠಾಣೆ-2 :- ದಿನಾಂಕ: 04/02/2023 ರಂದು ಮದ್ಯಾಹ್ನ 1:00 ಗಂಟೆಗೆ ಶ್ರೀ. ನಾಗೆಂದ್ರ ತಂದೆ ಹಣಮಂತ ತೆಲಗೂರ ವಯಃ 49 ವರ್ಷ ಜಾತಿಃ ಪ.ಜಾತಿ (ಮಾದೀಗ) ಉಃ ಪ್ಲಂಬರ ಕೆಲಸ ಮುಕ್ಕಾಃ 14 ನೇ ಕ್ರಾಸ್ ತಾರಫೈಲ ಕಲಬುರಗಿ ಇವರು ಕನ್ನಡದಲ್ಲಿ ಟೈಪ ಮಾಡಿದ ಫಿರ್ಯಾದಿ ಅರ್ಜಿ ನೀಡಿರುತ್ತಾರೆ. ಈ ಫಿರ್ಯಾದಿ ಅರ್ಜಿಯನ್ನು ಶ್ರೀ. ಶಂಕರ ತಂದೆ ಶರಣಪ್ಪಾ ದೊಡ್ಡಮನಿ ಇವರು ತಂದು ಹಾಜರು ಪಡಿಸಿದ್ದು ಸಾರಂಶವೆನೆಂದರೆ,  ನಿನ್ನೆ ದಿನಾಂಕ 03/02/2023 ರಂದು ನಾನು ನನ್ನ ಕೆಲಸದ ನಿಮಿತ್ಯ ನಮ್ಮ ಮನೆಯಿಂದ ಆಳಂದ ಚಕ್ ಪೋಸ್ಟ ಕಡೆಗೆ ಹೋಗುವ ಕುರಿತು ನನ್ನ ಟಿ.ವಿ.ಎಸ್ ಮೋಟರ ಸೈಕಲ ನಂ. ಕೆಎ 32 ಯು 7477 ಇದರ ಮೇಲೆ ನಾನು ಮತ್ತು ನಮ್ಮ ಓಣಿಯ ಮರೇಪ್ಪಾ ತಂದೆ ಸಾಯಿಬಣ್ಣ ರಟ್ನಡಗಿ ಇಬ್ಬರೂ ಕೂಡಿಕೊಂಡು ಹೋಗುವಾಗ ಬೆಳಿಗ್ಗೆ 11:30 ಗಂಟೆ ಆಗಿರಬಹುದು ಶಹಾಬಜಾರ ನಾಕಾದಿಂದ ಆಳಂದ ರೋಡಿನ ಕಡೆಗೆ ಸ್ವಲ್ಪ ಅಂತರದಲ್ಲಿ ಶಾಲೆ ಹತ್ತೀರ ಹೋಗುತ್ತಿರುವಾಗ ಅದೆ ವೇಳೆಗೆ ಎದುರುಗಡೆ ರೋಡಿನಿಂದ ರಾಂಗರೂಟಿನಲ್ಲಿ ಹೊಂಡಾ ಶೈನ್ ಮೋಟರ ಸೈಕಲ ನಂ. ಕೆಎ 32 ಹೆಚ್.ಡಿ 1326 ಇದರ ಸವಾರನು ಅತಿವೇಗದಿಂದ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ನಮ್ಮ ಮೋಟರ ಸೈಕಲಗೆ ಡಿಕ್ಕಿ ಹೊಡೆದಿದ್ದರಿಂದ ನಾವು ಮೋಟರ ಸೈಕಲ ಸಮೇತವಾಗಿ ಹಾರಿ ಬಿದ್ದಿದ್ದರಿಂದ ಇದರಿಂದ ನನ್ನ ಬಲಗಾಲ ಹಿಮ್ಮಡಿ ಹತ್ತೀರ ಭಾರಿಗಾಯವಾಗಿದ್ದು ಮತ್ತು ಪಾದದ ಮೇಲೆ ರಕ್ತಗಾಯವಾಗಿದ್ದು, ಮರೇಪ್ಪನಿಗೆ ಅಂತಹ ಗಾಯಗಳು ಕಂಡು ಬರಲಿಲ್ಲಾ. ಅಪಘಾತ ಪಡಿಸಿದ ಮೋಟರ ಸೈಕಲ ಸವಾರನು ನಿಂತಂತೆ ಮಾಡಿ ತನ್ನ ಮೋಟರ ಸೈಕಲದೊಂದಿಗೆ ಓಡಿ ಹೋಗಿರುತ್ತಾನೆ. ಘಟನೆಯನ್ನು ಸಿದ್ದು ತಂದೆ ಬಸವರಾಜ ತಳವಾರ ಹಾಗೂ ಕಾಶಿನಾಥ ತಳವಾರ ಇವರು ಕೂಡಾ ನೋಡಿರುತ್ತಾರೆ, ನಾನು ನೇರವಾಗಿ ಬಾವಗಿ ಆಸ್ಪತ್ರೆಗೆ ಉಪಚಾರ ಕುರಿತು ಸೇರಿಕೆಯಾಗಿರುತ್ತೆನೆ. ಈ ವಿಷಯದಲ್ಲಿ ಅಪಘಾತ ಪಡಿಸಿದ ಮೋಟರ ಸೈಕಲ ಸವಾರನ ವಿರುದ್ಧ ನನಗೆ ಆದ ಗಾಯಕ್ಕೆ ನ್ಯಾಯ ದೊರಕಿಸಿಕೊಡಬೇಕೆಂದು ಕೊಟ್ಟ ಫಿರ್ಯಾದಿ ಅರ್ಜಿ ಸಾರಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

ಸಂಚಾರಿ ಪೊಲೀಸ್‌ ಠಾಣೆ-2 :- ದಿನಾಂಕ: 04-02-2023 ರಂದು 05:30 ಪಿ.ಎಮ್ ಕ್ಕೆ ಮಣ್ಣೂರ ಆಸ್ಪತ್ರೆಯಲ್ಲಿ ಸಚೀನ ತಂದೆ ಬಾಬು ಆಡೆ ಮತ್ತು ಸ್ನೇಹಾ ಗಂಡ ಸಚೀನ ಎಂಬುವರ RTA MLC ವಸೂಲಾಗಿದ್ದು ನಾನು ಆಸ್ಪತ್ರೆಗೆ ಹೋಗಿ MLC ವಸೂಲ ಮಾಡಿಕೊಂಡು ಗಾಯಾಳುಗಳಿಗೆ ಬೇಟಿ ನೀಡಿ  ವಿಚಾರಣೆ ಕಾಲಕ್ಕೆ ಶ್ರೀ. ಸಚೀನ ತಂದೆ ಬಾಬು ಆಡೆ ವ; 23 ವರ್ಷ ಜಾ; ಲಂಬಾಣಿ ಉ; ಎಲಕ್ಟ್ರಿಕಲ್ ಕೆಲಸ ಸಾ; ಮಡಿಹಾಳ ತಾಂಡಾ ಶ್ರೀನಿವಾಸ ಸರಡಗಿ ತಾ; ಜಿ; ಕಲಬುರಗಿ ಇವರು ಕನ್ನಡದಲ್ಲಿ ಟೈಪ ಮಾಡಿದ ಫಿರ್ಯಾದಿ ಅರ್ಜಿ ಸಲ್ಲಿಸಿದ್ದು  ಸಾರಾಂಶವೆನೆಂದರೆ, ಇಂದು ದಿನಾಂಕ:04/02/2023 ರಂದು ನಾನು ಮತ್ತು ನನ್ನ ಹೆಂಡತ್ತಿ ಸ್ನೇಹಾ ಇಬ್ಬರಿಗೆ ಮೈಯಲ್ಲಿ ಉಷಾರ ಇಲ್ಲದಕ್ಕೆ ನಮ್ಮ ಜೂಪಿಟರ್ ಮೋಟಾರ ಸೈಕಲ ನಂ ಕೆಎ-32 ಹೆಚ್.ಸಿ-4118 ನೇದ್ದರ ಮೇಲೆ ಕಲಬುರಗಿಗೆ ಬಂದು ದಾವಾಖಾನೆಗೆ ತೂರಿಸಿಕೊಂಡು ಮರಳಿ ಇಬ್ಬರೂ ಊರಿಗೆ ಹೋಗುವಾಗ ಮದ್ಯಾಹ್ನ 01:10 ನಿಮಿಷವಾಗಿರಬಹುದು ಮಡಿಹಾಳ ತಾಂಡಾ ಕ್ರಾಸಿನ ಹತ್ತಿರ ನಿಧಾನವಾಗಿ ತಿರಿಗಿಸಿಕೊಳ್ಳುವಾಗ ಅದೆ ವೇಳೆಗ ಸೇಡಂ ರೋಡಿನ ಕಡೆಯಿಂದ ಒಂದು ಪಿಕಪ್ ವಾಹನ ನಂ ಕೆಎ-32 ಎಎ-0393 ನೇದ್ದರ ಚಾಲಕನು ಭಾರಿ ಅತೀವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಆತನ ಮಂದೆ ಹೋಗುವ ಯಾವುದೋ ವಾಹನಕ್ಕೆ ಓವರ ಟೇಕ್ ಮಾಡಲು ಹೋಗಿ ನಮ್ಮ ಮೋಟಾರ ಸೈಕಲಗೆ ಮತ್ತು ನಮಗೆ ಬಲವಾಗಿ ಡಿಕ್ಕಿ ಹೊಡೆದಿದ್ದರಿಂದ ನಾವು ಮೋಟಾರ ಸೈಕಲ ಸಮೇತ ಬಿದಿದ್ದು ಇದರಿಂದ ನನ್ನ ಬಲಕೈ ಮೋಳಕೈ ಕೆಳಗೆ ಮೋಳೆ ಮುರಿದಿದ್ದು. ಬಲಗೈ ಹೆಬ್ಬರಳಿಗೆ ಭಾರಿಗಾಯ. ಎಡಗಾಲಿನ ಮೋಳಕೈಗೆ ತರಚಿದ ಗಾಯವಾಗಿದ್ದು. ನನ್ನ ಹೆಂಡತ್ತಿಗೆ ಬಲಗಾಲಿನ ತೊಡೆಗೆ ಭಾರಿಗಾಯವಾಗಿದ್ದು. ಬಲಗೈ ಮುಂಗೈಗೆ ಹಾಗೂ ಟೊಂಕಕ್ಕೆ ಮತ್ತು ಮುಖದ ಬಲಕಣ್ಣಿನ ಹತ್ತಿರ ತರಚಿದ ಗಾಯವಾಗಿದ್ದು ಘಟನೆಯನ್ನು ಅಲ್ಲೆ ಇರುವ ದೇವಲಿಬಾಯಿ ಗಂಡ ಚಂದ್ರು ಆಡೆ, ವಿನೋದ ರಾಠೋಡ ಮತ್ತು ಉಮೇಶ ತಂದೆ ಶಂಕರ ರಾಠೋಡ ಇವರು ನೋಡಿ ಸಹಾಯ ಮಾಡಿದ್ದು ಪಿಕಪ್ ವಾಹನದ ಚಾಲಕ ನಿಂತಂತ್ತೆ ಮಾಡಿ ವಾಹನ ಬಿಟ್ಟು ಓಡಿ ಹೋಗಿರುತ್ತಾನೆ, ಮುಂದೆ ನಾವಿಬ್ಬರೂ ಮಣ್ಣೂರ ಆಸ್ಪತ್ರೆಗೆ ಬಂದು ಸೇರಿಕೆ ಆಗಿರುತ್ತೇವೆ, ಪಿಕಪ್ ವಾಹನದ ಚಾಲಕನ ವಿರುದ್ದ ಕಾನೂನು ಕ್ರಮ ಕೈಕೊಂಡು ನಮಗೆ ನ್ಯಾಯ ಕೊಡಸಬೇಕೆಂದು ಫಿರ್ಯಾದಿ ಕೊಟ್ಟ ಅರ್ಜಿಯ ಸಾರಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

ಚೌಕ ಪೊಲೀಸ್‌ ಠಾಣೆ :- ದಿನಾಂಕ: 04-02-2023 ರಂದು  ರಾತ್ರಿ 9:00 ಗಂಟೆಗೆ ಶ್ರೀಮತಿ ನಾಗರತ್ನ ಗಂಡ ಶ್ರೀಮಂತ ಮೇಳಕರ ಇವರೂ ಠಾಣೆಗೆ ಹಾಜರಾಗಿ ತಮ್ಮ ಮಗ ಶ್ರೀ ಭಾಗ್ಯವಂತ ಮೇಳಕರ ಇವರೂ ಕನ್ನಡದಲ್ಲಿ ಗಣಕೀಕೃತ ಮಾಡಿಸಿದ ದೂರು ಕೊಟ್ಟಿದ್ದನ್ನು ಸ್ವೀಕರಿಸಿಕೊಂಡೇನು. ಸದರಿ ದೂರಿನ ಸಾರಾಂಶವೆನೆಂದರೆ ನಾನು ಭಾಗ್ಯವಂತ ತಂದೆ ಶ್ರೀಮಂತ ಮೇಳಕರ ವ:18 ವರ್ಷ ಉ:ಬಿ.ಎ. ವಿದ್ಯಾರ್ಥಿ ಜಾತಿ: ಪ.ಜಾತಿ(ಹೊಲೆಯ) ಸಾ:ಗೋಕುಲ ನಗರ ಜಿ.ಡಿ.ಎ.ಕಾಲೋನಿ ಕಲಬುರಗಿ ಇದ್ದು, ಈ ಮೂಲಕ ತಮಗೆ ದೂರು ಕೊಡುವುದೆನೆಂದೆರೆ, ಇಂದು ದಿನಾಂಕ:04/02/2023 ರಂದು ಬೆಳಿಗ್ಗೆ 11:00 ಗಂಟೆ ಸುಮಾರಿಗೆ ನಾನು ಮತ್ತು ನನ್ನ ಗೆಳೆಯರಾದ ಅಭಿಷೇಕ ತಂದೆ ರಾಜು ಮತ್ತು ಶರಣು ತಂದೆ ಮಾಹಾದೇವ ಮೂವರು ಅಭಿಷೇಕ ಇವರ ಕಿರಾಣಿ ಅಂಗಡಿಯಲ್ಲಿ ಮಾತನಾಡುತ್ತಾ ಕುಳಿತಾಗ ಬೆಳಗಿನ 11:30 ಗಂಟೆ ಸುಮಾರಿಗೆ ನನಗೆ ಪರಿಚಯದ ಜೀವನ ಸಾ: ಗುರು ಬಸವಲಿಂಗ ನಗರ ಕಲಬುರಗಿ ಇತನು ನನ್ನ ಹತ್ತಿರ ಬಂದು ಬಾಬು ರಾಠೋಡ ಇತನು ನಿನಗೆ ಕರೆಯುತ್ತಿದ್ದಾನೆ ಎಂದು ಹೇಳಿದಾಗ ಅವನೊಂದಿಗೆ ದತ್ತ ನಗರಕ್ಕೆ ಹೋಗುವ ಗಲ್ಲಿಯಲ್ಲಿ ನಿಂತ ಬಾಬು ರಾಠೋಡ ಹತ್ತಿರ ಹೋದಾಗ ಅವನೊಂದಿಗೆ  ಸುರ್ಜ್ಯಾ ಇತನು ಕೂಡಾ ನಿಂತಿದಿದ್ದನು. ಆಗ ಬಾಬು ರಾಠೋಡ ಇತನು ನನಗೆ ಯಾಕ ಲೇ ಭೋಸಡಿ ಮಗನೇ ನಮ್ಮ ಓಣಿಯ ಹುಡುಗರ ಜೊತೆಯಲ್ಲಿ ಹೆಚ್ಚಿಗೆ ಯಾಕೇ ತಿರುಗಾಡುತ್ತಿದ್ದೀ ಇದಕ್ಕೆ ಪೆನಾಲ್ಟಿಯಾಗಿ 30,000/-ರೂ.ಕೊಡು ಅಂತಾ ಕೇಳಿದನು. ಅದಕ್ಕೆ ನಾನೇಕೆ ನಿಮಗೆ ಹಣ ಕೊಡಲಿ ಅಂತಾ ಹೇಳಿದ್ದಕ್ಕೆ ಬಾಬು ರಾಠೋಡ ಇತನು ಕೈಯಿಂದ ಬಲ ಕಪಾಳ ಮೇಲೆ ಹೊಡೆದನು. ಅವನ ಜೊತೆಯಲ್ಲಿದ್ದ ಜೀವನ ಇತನು ತನ್ನ ಕೈಯಲ್ಲಿದ್ದ ಪ್ಲಾಸ್ಟಿಕ ಪೈಪುನಿಂದ ನನ್ನ ಎಡರಟ್ಟೆಯ ಮೇಲೆ ಮತ್ತು ಟೊಂಕದ ಮೇಲೆ ಹೊಡೆದು ಗುಪ್ತಗಾಯ ಗೊಳಿಸಿದನು. ಅವನ ಕೈಯಲ್ಲಿದ್ದ ಪ್ಲಾಸ್ಟಿಕ ಪೈಪು ಸುರ್ಜ್ಯಾ ಇತನು ತೆಗೆದುಕೊಂಡು ನನ್ನ ಬಲ ತೊಡೆಯ ಮೇಲೆ ಹೊಡೆದು ಗುಪ್ತಗಾಯಗೊಳಿಸಿದನು. ಅವರಿಂದ ಬಿಡಿಸಿಕೊಂಡು ಓಡಿ ಹೋಗುತ್ತಿದ್ದಾಗ, ಅವರಲ್ಲಿ ಒಬ್ಬನು ಅಲ್ಲೇ ಬಿದ್ದ ಕಲ್ಲು ತೆಗೆದುಕೊಂಡು ನನ್ನ ತಲೆ ಮೇಲೆ ಹೊಡೆದು ಭಾರಿ ರಕ್ತಗಾಯಗೊಳಿಸಿದನು. ಈ ಘಟನೆ ನನ್ನ ಗೆಳೆಯರಾದ ಅಭಿಷೇಕ ಮತ್ತು ಶರಣು ಇವರುಗಳು ನೋಡಿರುತ್ತಾರೆ. ತದನಂತರ ಈ ವಿಷಯ ನನ್ನ ಗೆಳೆಯನಾದ ರಮೇಶ ತಳವಾರ ಇತನಿಗೆ ಪೋನ ಮಾಡಲು ಅವನು ನನ್ನ ಹತ್ತಿರ ಬಂದು ನನಗೆ ಉಪಚಾರ ಕುರಿತು ಜಿಲ್ಲಾ ಸರಕಾರಿ ಆಸ್ಪತ್ರೆ ಕಲಬುರಗಿಗೆ ತಂದು ಸೇರಿಕೆ ಮಾಡಿರುತ್ತಾನೆ. ಮಧ್ಯಾಹ್ನ ಸಮಯದಲ್ಲಿ ಚೌಕ ಪೊಲೀಸರು ಎಂ.ಎಲ್.ಸಿ. ವಿಚಾರಣೆಗಾಗಿ ಬಂದಾಗ ದೂರು ಕೊಡುವುದಿಲ್ಲಾ ಎಂದು ತಿಳಿಸಿದ್ದು, ಈ ಕಾರಣದಿಂದ ದೂರು ಕೊಡಲು ತಡವಾಗಿರುತ್ತದೆ. ಕಾರಣ ನನಗೆ  ಕೈಯಿಂದ ಮತ್ತು ಪ್ಲಾಸ್ಟಿಕ ಪೈಪುನಿಂದ ಮತ್ತು ಕಲ್ಲಿನಿಂದ ಹೊಡೆ ಬಡೆ ಮಾಡಿದ 1)ಬಾಬು ತಂದೆ ಮೇಘು ರಾಠೋಡ 2) ಸುರ್ಜ್ಯಾ 3) ಜೀವನ ಸಾ: ಮೂವರು ಗುರುಬಸವಲಿಂಗ ನಗರ ಶಹಾಬಜಾರ ಹರಿಜನವಾಡ ಕಲಬುರಗಿ ಇವರುಗಳ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಫಿರ್ಯಾದಿ ಕೊಟ್ಟ ಅರ್ಜಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

ಸಬ್‌ ಅರ್ಬನ್‌ ಪೊಲೀಸ್‌ ಠಾಣೆ :- ದಿನಾಂಕ: 04-02-2023 ರಂದು ಖಚಿತ ಬಾತ್ಮಿ ಬಂದಿದ್ದೇನೆಂದರೆ ಹುಮನಾಬಾದ ರಿಂಗ್ ರೋಡಿಗೆ ಒಬ್ಬ ವ್ಯಕ್ತಿಯು ಗಾಂಜಾ ಮಾರಾಟ ಮಾಡುತ್ತಿದ್ದಾನೆಂದು ಬಾತ್ಮಿ ಬಂದಿದ್ದರಿಂದ ಖಚಿತ ಪಡಿಸಿಕೊಂಡು ಮಾನ್ಯ ಎಸಿಪಿ ಸಾಹೆಬರು,ಮಾನ್ಯ ಸಿಪಿ ಸಾಹೇಬರ ಮಾರ್ಗದರ್ಷನದಲ್ಲಿ ಹೋಗಿ ಇಬ್ಬರು ಪಂಚರ ಸಮಕ್ಷಮ ದಾಳಿ ಮಾಡಿ ಸದರಿ ಆರೋಪಿ ಮುತ್ತು ಮುದ್ದೆ ಮಾಲನ್ನು ವಶಕ್ಕೆ ಪಡದುಕೊಂಡು ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

ಸ್ಟೇಷನ್‌ ಬಜಾರ ಪೊಲೀಸ್‌ ಠಾಣೆ :- ದಿನಾಂಕ: 04-02-2023 ರಂದು ಬೆಳಿಗ್ಗೆ 9:00 ಗಂಟೆಗೆ ಫಿರ್ಯಾದಿ ಶ್ರೀ ಮಕ್ಬೂಲ್ ಪಾಷಾ ತಂದೆ ಮಹಿಬೂಬ ಸಾಬ ಫೂಲವಾಲೆ ವಯ|| 55 ವರ್ಷ ಜಾ|| ಮುಸ್ಲಿಂ ಉ|| ಹೂವಿನ ವ್ಯಾಪಾರ ಸಾ|| 4ನೇ ಕ್ರಾಸ್ ತಾರಫೈಲ್ ರಹೆಮತ ನಗರ ಹತ್ತಿರ ಕಲಬುರಗಿ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ, ನಾನು ಹೂವಿನ ವ್ಯಾಪಾರ ಮಾಡಿಕೊಂಡು ಹೆಂಡತಿ ಮಕ್ಕಳೊಂದಿಗೆ ವಾಸವಾಗಿರುತ್ತೆನೆ. ನನಗೆ ಒಟ್ಟು 2 ಜನ ಹೆಂಡತಿಯರಿದ್ದು ನನ್ನ ಮೊದಲನೇ ಹೆಂಡತಿ ನಸೀಮಾಬೇಗಂ ಅಂತಾ ಇದ್ದು ಅವಳು ಮನೆಕೆಲಸ ಮಾಡಿಕೊಂಡಿರುತ್ತಾಳೆ. ಇವಳಿಗೆ 2 ಗಂಡು ಮಕ್ಕಳು ಹಾಗೂ ಒಬ್ಬಳು ಹೆಣ್ಣು ಮಗಳಿರುತ್ತಾಳೆ. ನನ್ನ ಎರಡನೇ ಹೆಂಡತಿಯಾದ ರಹೆಮತ್ ಬೀ ಅಂತಾ ಇದ್ದು ಅವಳು ನನ್ನೊಂದಿಗೆ ತಂಟೆ-ತಕರಾರು ಮಾಡಿಕೊಂಡು ಸುಮಾರು 18 ವರ್ಷಗಳಿಂದ ತನ್ನ ತಂದೆ-ತಾಯಿಯ ಹತ್ತಿರ ಪಟ್ಟಣ ಗ್ರಾಮದಲ್ಲಿ ಇರುತ್ತಾಳೆ. ಇವಳಿಗೆ 2 ಜನ ಹೆಣ್ಣು ಮಕ್ಕಳಿದ್ದು ಅವರು ತಮ್ಮ ತಾಯಿಯ ಹತ್ತಿರ ಇರುತ್ತಾರೆ. ಹೀಗಿದ್ದು ನಿನ್ನೆ ದಿನಾಂಕ: 03.02.2023 ರಂದು ಮದ್ಯಾಹ್ನ 3 ಗಂಟೆಯ ಸುಮಾರಿಗೆ ನಾನು ನಮ್ಮ ತಾಯಿಯಾದ ಸಲೀಮಾ ಬೇಗಂ ಮತ್ತು ನನ್ನ ತಂಗಿಯಾದ ಆಶಾ ಬೇಗಂ ನಾವು ಮೂರು ಜನರು ತಾರಫೈಲ್ನಲ್ಲಿರುವ ನಮ್ಮ ಮನೆಯ ಮುಂದೆ ಕುಳಿತಿರುವಾಗ ನಮ್ಮ ಮೊದಲನೇ ಹೆಂಡತಿಯಾದ ನಸೀಮಾ ಬೇಗಂ ಮತ್ತು ಅವಳ ಮಗನಾದ ಮುಸ್ತಫಾ ಇಬ್ಬರು ಕೂಡಿ ಬಂದವರೇ ನನ್ನೊಂದಿಗೆ ಜಗಳಕ್ಕೆ ಬಿದ್ದು ಆಗ ನನ್ನ ಮಗ ಮುಸ್ತಫಾ ಇತನು ಅವಾಚ್ಯವಾಗಿ ಬೈಯ್ಯುತ್ತಾ ಬೊಸಡೀ ಮಗನೇ ನೀನು ನಿಮ್ಮ ತಾಯಿಯನ್ನು ಕರೆದುಕೊಂಡು ಮೀಜಬಾ ನಗರದಲ್ಲಿರುವ ಮನೆಗೆ ಹೋಗು ಇಲ್ಲಿ ನಾನು ಮತ್ತು ನನ್ನ ತಾಯಿ ಇರುತ್ತೆವೆ ಅಂತಾ ಬೈದಿರುತ್ತಾನೆ. ಆಗ ನಾನು ನಾನೇಕೆ ಅಲ್ಲಿಗೆ ಹೋಗಲೀ ನಿವೇ ಬೇಕಾದರೇ ಅಲ್ಲಿ ಹೋಗಿರಿ ಅಂತಾ ಅಂದಿದ್ದಕ್ಕೆ ನನಗೆ ಎದರು ಮಾತನಾಡುತ್ತಿಯಾ ಅಂತಾ ಅಂದು ನನ್ನ ಎದೆಯ ಮೇಲಿನ ಅಂಗಿ ಹಿಡಿದು ಕೈಯಿಂದ ನನ್ನ ಎಡಗಡೆಯ ಕಪಾಳ ಮೇಲೆ ಹೊಡೆದಿರುತ್ತಾನೆ. ಆಗ ನನ್ನ ತಾಯಿ ಜಗಳ ಬಿಡಿಸಲು ಬಂದಾಗ ಅವಳಿಗೂ ಕೂಡಾ ನನ್ನ ಹೆಂಡತಿಯಾದ ನಸೀಮಾ ಬೇಗಂ ಇವಳು ನನ್ನ ತಾಯಿಯ ಬಲಗೈನ ಮುಂಗೈ ಕೆಳಗಿನ ಭಾಗಕ್ಕೆ ಹಲ್ಲಿನಿಂದ ಕಚ್ಚಿದ್ದು ಅಲ್ಲದೇ ತನ್ನ ಕೈಯಲ್ಲಿದ್ದ ಬಡಿಗೆಯಿಂದ ನನ್ನ ತಾಯಿಯ ಬೆನ್ನಿನ ಮೇಲೆ ಹೊಡೆದಿದ್ದು ಇದರಿಂದ ಗುಪ್ತಗಾಯವಾಗಿರುತ್ತದೆ. ಅಷ್ಟರಲ್ಲಿ ನನ್ನ ತಂಗಿಯಾದ ಆಶಾ ಬೇಗಂ ಇವಳು ಜಗಳ ಬಿಡಿಸಲು ಬಂದಾಗ ಅವಳಿಗೂ ಕೂಡಾ ನನ್ನ ಹೆಂಡತಿ ಕೆಳಗೆ ಬಿಳಿಸಿ ಕಾಲಿನಿಂದ ಒದ್ದಿದ್ದು ಅಲ್ಲದೇ ಕೈಯಿಂದ ಬಲಗಡೆ ಕಪಾಳದ ಹತ್ತಿರ ಹೊಡೆದಿದ್ದು ಇರುತ್ತದೆ. ಆಗ ನಾವು ಎಲ್ಲರೂ ಚಿರಾಡುವುದನ್ನು ಕೇಳಿ ನನ್ನ ತಂಗಿ ಆಶಾ ಬೇಗಂ ಇವಳ ಗಂಡನಾದ ಮಹ್ಮದ ಜಾಫರ್ ಇತನು ಬಂದು ಜಗಳ ಬಿಡಿಸಿ ನಮ್ಮ ತಂಗಿ ಮತ್ತು ನಮ್ಮ ತಾಯಿಗೆ ಉಪಚಾರ ಕುರಿತು ಯುನೈಟೇಡ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಕೆ ಮಾಡಿದ್ದು ಇರುತ್ತದೆ. ನನ್ನ ಮಗ ಮುಸ್ತಫಾ ಇತನು ನನಗೆ ಕೈಯಿಂದ ಹೊಡೆದಿರುವುದರಿಂದ ನನಗೆ ಅಷ್ಟೇನು ಗಾಯ ಆಗದ  ಕಾರಣ ನಾನು ಆಸ್ಪತ್ರೆಗೆ ಹೋಗಿರುವುದಿಲ್ಲಾ. ಈ ಬಗ್ಗೆ ನಾನು ಮನೆಯಲ್ಲಿ ಚರ್ಚಿಸಿ ಇಂದು ತಡವಾಗಿ ಠಾಣೆಗೆ ಬಂದು ದೂರು ನೀಡುತ್ತಿದ್ದೇನೆ ಎಂದು ಫಿರ್ಯಾದಿ ಕೊಟ್ಟ ಹೇಳಿಕೆ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

ಸ್ಟೇಷನ್‌ ಬಜಾರ್‌ ಪೊಲೀಸ್‌ ಠಾಣೆ :- ದಿನಾಂಕ:04/02/2023 ರಂದು ಮದ್ಯಾಹ್ನ 02:30 ಗಂಟೆ ಸುಮಾರಿಗೆ ಫಿರ್ಯಾದಿ ಶ್ರೀ ಮಂಜುನಾಥ ತಂದೆ ಸಾಯಿಬಣ್ಣ ಧನ್ನಿ ವಯ|| 40 ವರ್ಷ ಉ|| ನ್ಯಾಯವಾದಿ ಸಾ|| ಕಲಬುರಗಿರವರು ಠಾಣೆಗೆ ಹಾಜರಾಗಿ ನೀಡಿದ ದೂರು ಆರ್ಜಿಯ  ಸಾರಾಂಶವೇನೆಂದರೆ ನಾನು ಸುಮಾರು 11 ವರ್ಷಗಳಿಂದ ನನ್ನ ವಕೀಲ ವೃತ್ತಿಯಲ್ಲಿ ನಿರಂತರವಾಗಿ ವೃತ್ತಿ ಮಾಡುತ್ತಿದ್ದೆನೆ. ನನ್ನಂತೆ ನನ್ನ ಅಣ್ಣ ಶರಣಬಸಪ್ಪಾ ಧನ್ನಿ ಇವರು ಕೂಡ ವಕೀಲ ವೃತ್ತಿ ಮಾಡಿಕೊಂಡಿರುತ್ತಾರೆ  ಹೀಗಿದ್ದು ದಿನಾಂಕ: 03/02/2023 ರಂದು ಮದ್ಯಾಹ್ನ 4 ಗಂಟೆಗೆ ನಾನು ನನ್ನ ಕೆಲಸದಲ್ಲಿ ಕಲಬುರಗಿಯ  ನ್ಯಾಯಾಲಯದ ಆವರಣದಲ್ಲಿ ಇದ್ದಾಗ ನನ್ನ ಅಣ್ಣ ಶರಣಬಸಪ್ಪಾ ಧನ್ನಿ ಅವರ ಕಕ್ಷಿದಾರ ಜೀವನ ಮರೆಪ್ಪಾ ಮದನಕರ್ ಇವರು ಎಸ್,ಸಿ/ಎಸ್ಟಿ ಎಸ್,ಪಿ,ಎಲ್ 03/2020 ಪ್ರಕರಣದಲ್ಲಿ ಆರೋಪಿತನಿದ್ದು ಅವನ ಪರವಾಗಿ ನಿರೀಕ್ಷಣಾ ಜಾಮೀನು ಕೋರಿ ಮಾನ್ಯ ಜಿಲ್ಲಾ ಸತ್ರ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಇಂದು ದಿನಾಂಕ: 03/02/2023 ರಂದು ಮದ್ಯಾಹ್ನ 4 ಗಂಟೆಗೆ ನಾನು ನ್ಯಾಯಾಲಯದ ಆವರಣದಲ್ಲಿದ್ದಾಗ ಅವನ ತಮ್ಮನಾದ ಸಚಿನ್ ತಂದೆ ಮರೆಪ್ಪಾ ಮದನಕರ್ ಹಾಗೂ ಅವನ ತಂದೆ ಮರೆಪ್ಪಾ ತಂದೆ ಜೀವಬಳಪ್ಪಾ ಮದನಕರ್ ಬಂದು ಅವರಲ್ಲಿ ಸಚಿನ್ ಇತನು ನನಗೆ ಅವಾಚ್ಯವಾಗಿ ಬೈಯುತ್ತ ಏ ಬೋಸಡಿ ಮಗನೇ ನಿನ್ನ ಅಣ್ಣ ಶರಣಬಸ್ಸು ಎಲ್ಲಿದ್ದಾನೆ ಅವನಿಗೆ ನನ್ನ ಅಣ್ಣ ಜೀವನ ಜಾಮೀನಿನ ಅರ್ಜಿ ಕೊಟ್ಟು ಒಂದು ವಾರ ಆಗಿದೆ, ನಮಗೆ ಭೇಟಿ ಆಗುತ್ತಿಲ್ಲಾ. ಆದಕಾರಣ ನಿನಗೆ ಹೊಡೆಯುತ್ತೆವೆ. ಆಗ ನಿನ್ನ ಅಣ್ಣ ಬಿಡಿಸಲು ತಾನೇ ಬರುತ್ತಾನೆ ಅಂತಾ ಅನ್ನುತ್ತ ನನ್ನನ್ನು ಮುಂದೆ ಹೋಗದಂತೆ ತಡೆದು ನಿಲ್ಲಿಸಿ ನನ್ನ ಎದೆಯ ಅಂಗಿ ಹಿಡಿದು ಕೈಯಿಂದ ಎಡಗಡೆ ಕಪಾಳದ ಮೇಲೆ ಹೊಡೆದಿರುತ್ತಾನೆ. ಆಗ ಮರೆಪ್ಪ ಇತನು ಕೂಡ ನನಗೆ ಅವಾಚ್ಯವಾಗಿ ಬೈದು ಇನ್ನು ಚೆನ್ನಾಗಿ ಹೊಡೆ ಅಂತ ತನ್ನ ಮಗ ಸಚಿನ್ ಇತನಿಗೆ ಪ್ರಚೋದನೆ ಮಾಡುತ್ತಿದ್ದನು. ಆಗ ಅಲ್ಲಿಯೇ ಇದ್ದ ಜೈರಾಜ ತಂದೆ ಅರುಲದಾಸ, ಹೀರಾಲಾಲ ಚವ್ಹಾಣ, ಮಸ್ತಾನದಂಡೆ ಹಾಗೂ ಮಲ್ಲಿಕಾರ್ಜುನ ಡಾಂಗೆ ಬಂದು ಜಗಳ ಬಿಡಿಸಿರುತ್ತಾರೆ. ಇವರು ಬಂದು ಜಗಳ ಬಿಡಿಸದೆ ಇದ್ದರೆ ನನಗೆ ಪ್ರಾಣ ಅಪಾಯ ಕೂಡಾ ಇತ್ತು. ನಂತರ ಸಚಿನ್ ಮತ್ತು ಅವರ ತಂದೆ ಹೋಗುವಾಗ ನೀವು ನಮ್ಮ ಊರು ತಾಜಸೂಲ್ತಾನಪೂರ ದಾಟಿ ನಿಮ್ಮ ಊರು ಚಿಂಚನಸೂರ ಸೀಮೆ ಹೇಗಿ ಮುಟ್ಟುತ್ತಿ ನಾನು ನೋಡಿಕೊಳ್ಳುತ್ತೆನೆ. ಹಾಗೆಯೇ ಇವತ್ತು ನಿನ್ನ ಅಣ್ಣ ಶರಣಬಸಪ್ಪಾ ಕರ್ನಾಟಕ ಹೌಸಿಂಗ್ ಬೊರ್ಡ ಕಾಲೋನಿ ಮನೆಗೆ ಹೋಗಿ ಮನೆ ಹೊಕ್ಕಿ ನಮ್ಮ ಕೇಸಿನ ಫೀಸ್ ವಸೂಲಿ ಮಾಡುತ್ತೆನೆ ಮತ್ತು ನಿನ್ನ ಅಣ್ಣನಾದ ಶರಣಬಸಪ್ಪಾ ಧನ್ನಿ ಅವನಿಗೂ ಕೂಡ ಬಿಡುವುದಿಲ್ಲ ಅಂತ ಜೀವ ಬೆದರಿಕೆ ಹಾಕಿ ನಿಮ್ಮಿಬ್ಬರಿಗೆ ನೋಡಿಕೊಳ್ಳುತ್ತೆನೆ ಅಂತಾ ಹೇಳಿ ಹೋಗಿರುತ್ತಾರೆ. ಸಚಿನ ಈತನು ನನಗೆ ಕೈಯಿಂದ ಹೊಡೆದಿರುವುದರಿಂದ ನನಗೆ ಅಷ್ಟೇನು ಗಾಯ ಆಗದ ಕಾರಣ ನಾನು ಆಸ್ಪತ್ರೆಗೆ ಹೋಗಿರುವುದಿಲ್ಲ. ಈ ಘಟನೆ ನಾನು ಮನೆಯಲ್ಲಿ ವಿಚಾರಿಸಿ ಇಂದು ತಡವಾಗಿ ಠಾಣೆಗೆ ಬಂದು ದೂರು ಸಲ್ಲಿಸಿದ್ದು ಇರುತ್ತದೆ. ಕಾರಣ ನಿನ್ನೆ ದಿನಾಂಕ:03/02/2023 ರಂದು ಸಾಯಂಕಾಲ 04 ಗಂಟೆಗೆ ನನ್ನೊಂದಿಗೆ ಜಗಳಕ್ಕೆ ಬಿದ್ದು ಕೈಯಿಂದ ಹೊಡೆ ಬಡೆ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿದ ಸಚಿನ ಮದನಕರ್ ಮತ್ತು ಅವನ ತಂದೆ ಮರೆಪ್ಪಾ ಮದನಕರ್ ಇವರ ವಿರುದ್ದ ಕಾನೂನು ರೀತಿ ಕ್ರಮ ಜರುಗಿಸಬೇಕೆಂದು ಫಿರ್ಯಾದಿ ಕೊಟ್ಟ ಅರ್ಜಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

Last Updated: 06-02-2023 07:10 PM Updated By: ADMIN


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

 • Copyright Policy
 • Hyperlinking Policy
 • Security Policy
 • Terms & Conditions
 • Privacy Policy
 • Help
 • Screen Reader Access
 • Guidelines

Visitors

 • Last Updated​ :
 • Visitors Counter :
 • Version :
CONTENT OWNED AND MAINTAINED BY : Kalaburagi City Police
Designed, Developed and Hosted by: Center for e-Governance - Web Portal, Government of Karnataka © 2024, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080