ಅಭಿಪ್ರಾಯ / ಸಲಹೆಗಳು

ಚೌಕ ಪೊಲೀಸ್‌ ಠಾಣೆ :-  ದಿನಾಂಕ:04-01-2023 ರಂದು ಮಧ್ಯಾಹ್ನ ೩-೩೦ ಗಂಟೆ ಸುಮಾರಿಗೆ ಫಿರ್ಯಾದಿದಾರ ಶ್ರೀ ಜಗದೀಶ ಇತನು  ಅಪ್ಪಾಜಿ ದಾಬಾದಲ್ಲಿ ಕೆಲಸ ಮಾಡುತ್ತಿದ್ದಾಗ ಅವನ  ಹೆಂಡತಿ ಜಗದೇವಿ ಇವಳು ತನ್ನ ಮೋಬಾಯಿಲನಿಂದ ತನ್ನ ಗಂಡ (ಫಿರ್ಯಾದಿ)  ಮೋಬಾಯಿಲಿಗೆ ಫೋನ ಮಾಡಿ ನಿಮ್ಮ ಸೋದರಅತ್ತೆ ಮಗ ಶಿವುಕುಮಾರ ಕುಂಬಾರ ಇತನು ನಿಮ್ಮ ತಮ್ಮ ಪ್ರಶಾಂತ @ ಪಿಂಟ್ಯಾ ತಂದೆ ಐರಾವಣ ಕುಂಬಾರ ವ:೩೦ ವರ್ಷ ಉ:ಟೈಯರ ಅಂಗಡಿಯಲ್ಲಿ ಕೆಲಸ ಜಾತಿ: ಲಿಂಗಾಯತ ಕುಂಬಾರ ಸಾ: ಧನ್ನೂರ (ಆರ್) ಗ್ರಾಮ ತಾ:ಬಸವಕಲ್ಯಾಣ ಹಾ:ವ:ಪುಂಡಲೀಕ ರಾವ ಸಿಂಧೇ ಇವರ ಮನೆಯಲ್ಲಿ ಬಾಡಿಗೆ ಎಕಲವ್ಯ ಶಾಲೆ ಹತ್ತಿರ ಚನ್ನವೀರ ನಗರ ಕಲಬುರಗಿ ಇತನ ಮರ್ಡರ್ ಕಲಬುರಗಿ ಹುಮನಾಬಾದ ರಿಂಗ ರೋಡಿಗೆ ಇರುವ ಭವಾನಿ ನಗರ ಪೂಜಾರಿ ಚೌಕ ಹತ್ತಿರ ಇರುವ ದತ್ತು ಗಾಂಜಲೆ ಇವರ ಮನೆ ಎದುರುಗಡೆ ಟೆಂಗಿನ ಅಂಗಡಿ ಎದುರುಗಡೆ ಆಗಿದೆ ಎಂದು ತಿಳಿಸಿರುತ್ತಾನೆ ಎಂದು ತಿಳಿಸಿದಳು. ನಂತರ ಫಿರ್ಯಾದಿದಾರನು  ಘಟನಾ ಸ್ಥಳಕ್ಕೆ ಹೋದಾಗ ಪೊಲೀಸರು ನನ್ನ ತಮ್ಮನ ಮೃತ ದೇಹ ಜಿಲ್ಲಾ ಸರಕಾರಿ ಅಸ್ಪತ್ರೆ ಕಲಬುರಗಿ ಸಾಗಿಸಿದ ವಿಷಯ ಗೊತ್ತಾಗಿ ಮನೆಗೆ ಹೋಗಿ ಫಿರ್ಯಾದಿ ಮತ್ತು  ಅವನ ಹೆಂಡತಿ ಜಗದೇವಿ ಹಾಗೂ ದೊಡ್ಡಮ್ಮಾ ತೀರ್ಥಮ್ಮಾ ಮೂವರು ಕೂಡಿಕೊಂಡು ಜಿಲ್ಲಾ ಸರಕಾರಿ ಆಸ್ಪತ್ರೆ ಕಲಬುರಗಿ ಶವಗಾರ ಕೋಣೆಗೆ ಹೋಗಿ ಫಿರ್ಯಾದಿ ತನ್ನ ತಮ್ಮ ಪ್ರಶಾಂತ @ ಪಿಂಟ್ಯಾ ಇತನ ಮೃತ ದೇಹ ನೋಡಿ ಗುರುತಿಸಿದ್ದು, ಅವನ ತಲೆ ಪೂರ್ತಿ ಒಡೆದು ಮೆದಳು ಹೊರಗಡೆ ಬಂದು ಭಾರಿ ರಕ್ತಗಾಯವಾಗಿರುತ್ತದೆ. ಮುಖವೆಲ್ಲಾ ರಕ್ತಮಯವಾಗಿರುತ್ತದೆ. ನನ್ನ ತಮ್ಮನಿಗೆ ಯಾರೋ ಕೊಲೆ ಮಾಡಿದ್ದಾರೆ ಎಂದು ಘಟನಾ ಸ್ಥಳಕ್ಕೆ ಹೋಗಿ ವಿಚಾರಿಸಿದಾಗ ಅಲ್ಲಿದ್ದ ಟೆಂಗಿನ ಅಂಗಡಿ ಮಾಲೀಕ ಶ್ರೀಶೈಲ್ ಮತ್ತು ಟೀ ಅಂಗಡಿಯ ಮಾಲೀಕ ದೀಪಕ ಮತ್ತು ಜೂಸ ಅಂಗಡಿಯವನಿಗೆ ವಿಚಾರಿಸಿದಾಗ ಇಂದು ಮಧ್ಯಾಹ್ನ ೧-೦೦ ಗಂಟೆ ಸುಮಾರಿಗೆ ನನ್ನ ತಮ್ಮ ಪ್ರಶಾಂತ @ ಪಿಂಟ್ಯಾ ಇತನಿಗೆ ಅವನ ಜೊತೆಗೆ ಬಂದಿದ್ದ ಇನ್ನೊಬ್ಬನು ಟೆಂಗಿನ ಅಂಗಡಿಯಲ್ಲಿ ಇಟ್ಟ ಎಳ್ಳು ನೀರು ಕಡಿಯುವ ಮಚ್ಚ್ಚಿನಿಂದ ತಲೆಯ ಮೇಲೆ ಹೊಡೆದಾಗ ಅವನು ನೆಲಕ್ಕೆ ಬೀಳಲು ಅಲ್ಲೇ ಬಿದ್ದಿರುವ ದೊಡ್ಡ ಕಲ್ಲುಗಳಿಂದ ತಲೆಯ ಮೇಲೆ ಎತ್ತಿ ಹಾಕಿ ಹೊಡೆದಿದ್ದರಿಂದ ತಲೆ ಒಡೆದು ಮೆದುಳು ಹೊರಗಡೆ ಸಿಡಿದು  ಭಾರಿ ರಕ್ತಗಾಯಗೊಳಿಸಿ ಕೊಲೆ ಮಾಡಿ ಅವನು ಅಲ್ಲಿಂದ ಓಡಿ ಹೋಗಿರುತ್ತಾನೆ ಎಂದು ಅವರಿಂದ ಘಟನೆ ಮಾಹಿತಿ ಕೇಳಿ ನನಗೆ ಗೊತ್ತಾಗಿರುತ್ತದೆ. ನನ್ನ ತಮ್ಮನಿಗೆ ಕೊಲೆ ಮಾಡಿದವನ ಹೆಸರು ಮಂಜುನಾಥ ತಂದೆ ಶಿವುಕುಮಾರ ಮಠಪತಿ ಸಾ:ಚನ್ನವೀರ ನಗರ ಕಲಬುರಗಿ ಅಂತಾ ಜನರು ಮಾತಾಡುತ್ತಿರುವುದು ಕೇಳಿ ಗೊತ್ತಾಗಿರುತ್ತದೆ.  ನನ್ನ ತಮ್ಮ ಪ್ರಶಾಂತ @ ಪಿಂಟ್ಯಾ ಇತನು ಕೊಲೆ ಮಾಡಿದ ಮಂಜುನಾಥ ಇತನ ಹೆಂಡತಿಯೊಂದಿಗೆ ಅನೈತಿಕ ಸಂಬಂಧ ಇಟ್ಟುಕೊಂಡಿರುತ್ತಾನೆ ಎಂದು ಸಂಶಯ ಪಟ್ಟು ಅದೇ ದ್ವೇಷದಿಂದ ಮಂಜುನಾಥ ಇತನು ನನ್ನ ತಮ್ಮ ಪ್ರಶಾಂತ @ ಪಿಂಟ್ಯಾ ಇತನಿಗೆ ಮಚ್ಚು ಮತ್ತು ಕಲ್ಲುಗಳಿಂದ ತಲೆ ಮೇಲೆ ಹೊಡೆದು ಭಾರಿ ರಕ್ತಗಾಯಗೊಳಿಸಿ ಕೊಲೆ ಮಾಡಿರುತ್ತಾನೆ.  ನನ್ನ ತಮ್ಮನಿಗೆ ಕೊಲೆ ಮಾಡಿದ ಮಂಜುನಾಥ ತಂದೆ ಶಿವುಕುಮಾರ ಮಠಪತಿ ಸಾ: ಚನ್ನವೀರ ನಗರ ಕಲಬುರಗಿ ಇತನ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಎಂದು ಶ್ರೀ ಜಗದೀಶ ತಂದೆ ಐರಾವಣ ಕುಂಬಾರ ವ:೩೪ ವರ್ಷ ಉ:ಅಡುಗೆ ಕೆಲಸ ಜಾತಿ: ಲಿಂಗಾಯತ ಕುಂಬಾರ ಸಾ: ಧನ್ನೂರ(ಆರ್) ಗ್ರಾಮ ತಾ:ಬಸವಕಲ್ಯಾಣ ಹಾ:ವ:ಪುಂಡಲೀಕರಾವ ಸಿಂಧೇ ಇವರ ಮನೆಯಲ್ಲಿ ಬಾಡಿಗೆ ಎಕಲವ್ಯ ಶಾಲೆ ಹತ್ತಿರ ಚನ್ನವೀರ ನಗರ ಕಲಬುರಗಿ ಇವರು  ಕೊಟ್ಟ ಹೇಳಿಕೆ ಫಿರ್ಯಾದಿ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ವಿಶ್ವವಿದ್ಯಾಲಯ ಪೊಲೀಸ್‌ ಠಾಣೆ :- ದಿನಾಂಕ: 04-01-2023  ರಂದು ಸಾಯಾಂಕಾಲ ೬-೪೦ ಗಂಟೆ ಸುಮಾರಿಗೆ ಬುದ್ದ ವಿಹಾರ ಹತ್ತಿರ ಕುಸನೂರ ಕಡೆಗೆ ಹೋಗುವ ರೋಡಿನ ಹತ್ತಿರ ಸದರಿ ಆರೋಪಿತರು ಫಿರ್ಯಾದಿಗೆ ಹಲ್ಲೆ ಮಾಡಿ ಆತನ ಹತ್ತಿರ ಇದ್ದ ಮೊಬೈಲ, ಲ್ಯಾಪಟಾಪ ವಾಚ ಹಗೂ ಏರಫೋನ ಒಟ್ಟು 41,000/- ರೂ ನೇದ್ದವುಗಳನ್ನು ಕಸಿದುಕೊಂಡು ಹೋದವರ ವಿರುದ್ದ ಕ್ರಮ ಕೈಗೊಳ್ಳಬೇಕೆಂದು ಫಿರ್ಯಾದಿ ಕೊಟ್ಟ ಹೇಳಿಕೆ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಸಂಚಾರಿ ಪೊಲೀಸ್‌ ಠಾಣೆ -1 :- ದಿನಾಂಕ: 04-01-2023 ರಂದು ಬೆಳಿಗ್ಗೆ ಜೇವರ್ಗಿ ತಾಲ್ಲೂಕಿನ ವರ್ಕನಳ್ಳಿ ಗ್ರಾಮದಲ್ಲಿರುವ ನನ್ನ ಅಕ್ಕ ಮರೇಮ್ಮಾ ಇವಳಿಗೆ ಫರಹತಾಬಾದ ಗ್ರಾಮಕ್ಕೆ ಕರೆದುಕೊಂಡು ಬರುವ ಸಲುವಾಗಿ ನಾನು ನಮ್ಮೂರಿನಿಂದ ಮೋಟಾರ ಸೈಕಲ ನಂಬರ ಕೆಎ-32/ಇಇ-0552 ನೇದ್ದನ್ನು ಚಲಾಯಿಸಿಕೊಂಡು ರಾಷ್ಟ್ರೀಯ ಹೆದ್ದಾರಿ-50 ರ ಮೇಲೆ ಜೇವರ್ಗಿ ಕಡೆಗೆ ಹೋಗುತ್ತೀರುವಾಗ ದಾರಿ ಮದ್ಯ ಕಟ್ಟಿ ಸಂಗಾವಿ ಭೀಮಾ ಬ್ರಿಡ್ಜ್ ಸಮೀಪ ಬರುವ ಹಸನಾಪೂರ ಗ್ರಾಮದ ಸಿಮಾಂತರದಲ್ಲಿ ಬರುವ ದಾಭಾ ಎದುರಿನ ರೋಡ ಮೇಲೆ ಬೆಳಿಗ್ಗೆ ಅಂದಾಜು 10-20 ಗಂಟೆ ಸುಮಾರಿಗೆ ಹಿಂದಿನಿಂದ ಕಾರ ನಂಬರ ಕೆಎ-33/ಎಮ್-2683 ನೇದ್ದರ ಚಾಲಕನು ಜೇವರ್ಗಿ ಕಡೆಗೆ ಹೋಗುವ ಕುರಿತು ತನ್ನ ಕಾರನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನನ್ನ ಮೋಟಾರ ಸೈಕಲಕ್ಕೆ ಡಿಕ್ಕಿಪಡಿಸಿ ಅಪಘಾತ ಮಾಡಿ ನನಗೆ ಭಾರಿಗಾಯಗೊಳಿಸಿ ತನ್ನ ಕಾರ ಅಲ್ಲೇ ಬಿಟ್ಟು ಓಡಿ ಹೋಗಿದ್ದು ಕಾರ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಫಿರ್ಯಾದಿ ದೂರು ಹೇಳಿಕೆ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಸಂಚಾರಿ ಪೊಲೀಸ್‌ ಠಾಣೆ -2 :-  ದಿನಾಂಕ 04/01/2023 ರಂದು ರಾತ್ರಿ 8:15 ಗಂಟೆಗೆ ಶ್ರೀ. ರಮೇಶ ಕುಮಾರ ತಂದೆ ಚಂದ್ರಕಾಂತ ಸಾಃ ಸಂಜಯ ಗಾಂಧಿ ನಗರ ದುಬೈ ಕಾಲೋನಿ ಕಲಬುರಗಿ ಇವರು ಪೊಲೀಸ್ ಠಾಣೆಗೆ ಹಾಜರಾಗಿ ಒಂದುಕನ್ನಡದಲ್ಲಿ ಟೈಪ್ ಮಾಡಿದ ಫಿರ್ಯಾದಿ ಅರ್ಜಿಯನ್ನು ಹಾಜರು ಪಡಿಸಿದ್ದುಸಾರಂಶವೆನೆಂದರೆ, ಇಂದು ದಿನಾಂಕ 04/01/2023 ರಂದು ಬೆಳಿಗ್ಗೆ 9:15 ಗಂಟೆ ಸುಮಾರಿಗೆ ಫಿರ್ಯಾದಿಯ ಮಕ್ಕಳಾದ ರೋಹಿತ ಹಾಗು ಪಲ್ಲವಿ ಇವರು ಎಂದಿನಂತೆ ಭೋಗೇಶ್ವರ ಶಾಲೆಗೆ ಹೋಗುವಾಗ ದೇವಿ ನಗರ ಕಮಾನ ಕ್ರಾಸಿನ ಹತ್ತೀರ ಆಳಂದ ಚಕ್ ಪೋಸ್ಟ ಕಡೆಯಿಂದ ಅಟೋ ನಂ. ಕೆಎ 32 ಬಿ 3301 ನೇದ್ದರ ಚಾಲಕನು ಅತಿವೇಗದಿಂದ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ಮಕ್ಕಳಿಬ್ಬರಿಗೆ ಅಪಘಾತ ಪಡಿಸಿದ್ದರಿಂದ ರೊಹಿತ ಮತ್ತು ಪಲ್ಲವಿ ಇವರಿಬ್ಬರು ಭಾರಿ ಗಾಯಗೊಂಡಿದ್ದು, ಘಟನೆಯನ್ನು ಮಲ್ಲಿಕಾರ್ಜುನ ಮೆಳಕುಂದಿ ಇವರುನೋಡಿ ನಂತರ ಫಿರ್ಯಾದಿಗೆ ವಿಷಯ ತಿಳಿಸಿದಾಗ ಕಾಮರೆಡ್ಡಿ ಆಸ್ಪತ್ರೆಯಲ್ಲಿ ಉಪಚಾರ ಕುರಿತು ಸೇರಿಕೆ ಮಾಡಿದ್ದು, ಅಲ್ಲದೆ ಅಟೋದ ಚಾಲಕನು ಓಡಿ ಹೊಗಿದ್ದು ಇರುತ್ತದೆ ಅಂತಾ ಇತ್ಯಾದಿ ಕೊಟ್ಟ ಫಿರ್ಯಾದಿ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ವಿಶ್ವವಿದ್ಯಾಲಯ ಪೊಲೀಸ್‌ ಠಾಣೆ :- ದಿನಾಂಕ: 04-01-2023  ರಂದು ಬೆಳಿಗ್ಗೆ ೯:೩೦ ಗಂಟೆಗೆ ಪರ‍್ಯಾದಿದಾರನ ಮಗನಾದ ಜಿ ಸುದರ್ಶನ ವ:೧೦ ವರ್ಷ ಬಾಲಕನಿಗೆ ಹನುಮಾನ ಗುಡಿಯ ಹತ್ತಿರ ಎಸ್.ಬಿ.ಆರ್ ಸ್ಕೂಲ ವ್ಯಾನ ಬರುತ್ತಿದ್ದರಿಂದ ಮನೆಯಿಂದ ಅಲ್ಲಿಗೆ ನಡೆದುಕೊಂಡು ಹೋಗುವಾಗ ಅವನನ್ನು ಅಪಹರಿಸಿಕೊಂಡು ಹೋಗಿ  ಅನ್ವೌನ ಮೋಬೈಲನಿಂದ ಪರ‍್ಯಾದಿ ನಂಬರಗೆ ಕರೆ ಮಾಡಿ ನಿನ್ನ ಮಗ ಜೀವಂತವಾಗಿ ಬೇಕಾದರೆ ೧೦ ಲಕ್ಷ ಹಣ ಕೊಡು ಎನಾದರು ಚಾಲಾಕಿ ಮಾಡಿದರೆ ನಿನ್ನ ಮಗನನು ಖಲಾಸ ಮಾಡುತ್ತೇವೆ ಅಂತಾ  ಪೋನ ಕಟ್ ಮಾಡಿರುತ್ತಾರೆ ಅಂತಾ ಇತ್ಯಾದಿ  ದೂರಿನ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಅಶೋಕ ನಗರ ಪೊಲೀಸ ಠಾಣೆ :-  ದಿನಾಂಕ:04.01.2023 ರಂದು ಬೆಳಿಗ್ಗೆ 09:00 ಎ.ಎಂ.ಕ್ಕೆ ಫಿರ್ಯಾದಿ ಶ್ರೀ  ವಿರೇಶ್ ತಂದೆ ಚಂದ್ರಕಾಂತ ಮಾಲೆ ವಯ: 22 ವರ್ಷ ಜಾತಿ: ಎಸ್.ಸಿ.(ಹೊಲೆಯ) ಉ: ವಿದ್ಯಾರ್ಥಿ ಸಾ|| ಸಿ.ಐ.ಬಿ. ಕಾಲೋನಿ, ಕಲಬುರಗಿ ಇವರು ಹಲ್ಲೆಗೊಳಗಾಗಿ ಸ್ಪರ್ಶ ಆಸ್ಪತ್ರೆಯಲ್ಲಿ ಉಪಚಾರ ಪಡೆಯುತ್ತಿದ್ದಾಗ ಫಿರ್ಯಾದಿ ಹೇಳಿಕೆ ಪಡೆದುಕೊಂಡು ಮರಳಿ ಠಾಣೆಗೆ ಬಂದಿದ್ದು ಸದರಿ ಫಿರ್ಯಾದಿ ಹೇಳಿಕೆ ಸಾರಾಂಶವೆನೆಂದರೆ, ನಾನು ವಿದ್ಯಾಭ್ಯಾಸ ಮಾಡಿಕೊಂಡು ಕುಟುಂಬದೊಂದಿಗೆ ವಾಸವಾಗಿರುತ್ತೇನೆ. ನಮ್ಮ ತಂದೆ ಚಂದ್ರಕಾಂತ ಇವರು ಕೂಲಿ ಕೆಲಸ ಮಾಡಿಕೊಂಡಿರುತ್ತಾರೆ. ನಮ್ಮ ತಾಯಿ ಶಿವಕಾಂತ ಅಂತ ಇದ್ದು ಅವರು ಮನೆಗೆಲಸ ಮಾಡಿಕೊಂಡಿರುತ್ತಾರೆ. ನಮ್ಮ ತಂದೆ-ತಾಯಿಗೆ ನಾವು ಎರಡು ಜನ ಗಂಡು ಮಕ್ಕಳು ಹಾಗೂ ಒಬ್ಬಳು ಹೆಣ್ಣುಮಗಳು ಇರುತ್ತಾಳೆ. ನನಗೆ ನಮ್ಮ ಬಡಾವಣೆಯವನಾದ ಕಿರಣ್ ಕಾಳೆಕಿಂಗೆ ಇತನು ಸ್ನೇಹಿತನಿರುತ್ತಾನೆ. ಅಲ್ಲದೇ ನನಗೆ 1) ರೋಹಿತ ಭದ್ರೆ ಸಾ|| ಬಸವ ನಗರ, 2) ರೋಹನ್ ಸಾ|| ಕಾಂತಾ ಕಾಲೋನಿ, 3) ಬಸವರಾಜ ಸಾ|| ಸಿ.ಐ.ಬಿ. ಕಾಲೋನಿ, 4) ಪ್ರತೀಕ್ ಸಾ|| ಇಂದಿರಾ ನಗರ ಹಾಗೂ 5) ಲೋಕೇಶ್ ಸಾ|| ಇಂದಿರಾ ನಗರ ಇವರುಗಳ ಪರಿಚಯ ಇರುತ್ತದೆ ಹೀಗಿದ್ದು ನಿನ್ನೆ ದಿನಾಂಕ:03.01.2023 ರಂದು ರಾತ್ರಿ 07:30 ಪಿ.ಎಂ. ಸುಮಾರಿಗೆ ನಾನು ಮತ್ತು ನನ್ನ ಸ್ನೇಹಿತ ಕಿರಣ ಕಾಳೆಕಿಂಗೆ ಇಬ್ಬರು ಸಿ.ಐ.ಬಿ. ಕಾಲೋನಿಯ ಲುಂಬಿನ ಗಾರ್ಡನ್ ಹತ್ತಿರ ನಿಂತಿದ್ದಾಗ 1) ರೋಹೀತ್ ಭದ್ರೆ 2) ರೋಹನ್ 3) ಬಸವರಾಜ 4) ಪ್ರತೀಕ್ ಮತ್ತು 5) ಲೊಕೇಶ ಇವರು ಬಂದವರೆ ರೋಹಿತ ಈತನು ನನ್ನ ಎದೆಯ ಮೇಲಿನ ಅಂಗಿ ಹಿಡಿದು ಅವಾಚ್ಯವಾಗಿ “ ಏ ಭೋಸಡಿ ಮಗನೆ ನಿಂದು ಬಹಳ ಆಗ್ಯಾದ ನನ್ನ ಎದರು ಸೇಟದ ನಡಿತಿ ಅಂತ ಕೈಯಿಂದ ನನ್ನ ಎಡಗಡೆ ಕಪಾಳ ಮೇಲೆ ಹೊಡೆದಿರುತ್ತಾನೆ, ಅಷ್ಟರಲ್ಲಿ ರೋಹನ್ ಇತನು ತನ್ನ ಕೈಯಲ್ಲಿದ್ದ ಕಟ್ಟಿಗೆಯಿಂದ ನನ್ನ ಕಾಲುಗಳಿಗೆ ಹೊಡೆದಾಗ ನಾನು ಚಿರಾಡುತ್ತಾ ಕೆಳಗೆ ಬಿದ್ದಾಗ ಅವರೊಂದಿಗೆ ಇದ್ದ ಇನ್ನೊಬ್ಬ ಬಸವರಾಜ ಈತನು ತನ್ನ ಕೈಯಲ್ಲಿದ್ದ ಚಾಕುವಿನಿಂದ ನನ್ನ ಬಲಗೈಗೆ ಮತ್ತು ಹಣೆಯ ಮೇಲೆ ಹೊಡೆದಿದ್ದರಿಂದ ನನಗೆ ರಕ್ತಗಾಯವಾಗಿ ಚಿರಾಡುತ್ತಾ ಕೆಳಗೆ ಬಿದ್ದಾಗ, ಅವರೊಂದಿಗೆ ಇದ್ದ ಪ್ರತೀಕ ಮತ್ತು ಲೋಕೇಶ ಇವರು ಈ ಸ್ಯೂಳ್ಯಾಮಗನಿಗ ಇನ್ನೂ ಚೆನ್ನಾಗಿ ಹೊಡೆಯಿರಿ ಅಂತ ಪ್ರಚೋದನೆ ನೀಡುತ್ತಿದ್ದರು. ನಾನು ಮತ್ತೆ ಮತ್ತೆ ಅವರಿಗೆ ನನಗೇಕೆ ಹೊಡೆಯುತ್ತಿದ್ದೀರಿ ಅಂತ ಕೇಳಿದಾಗ ಅವರು ಏನು ಕಾರಣ ಹೇಳಿರುವುದಿಲ್ಲ ಅವರು ಹೋಡೆಯುತ್ತಿದ್ದಾಗ ಕಿರಣ್ ಇವನು ಜಗಳ ಬಿಡಿಸಿರುತ್ತಾರೆ. ನಂತರ ಉಪಚಾರಕ್ಕಾಗಿ ಕಿರಣ್ ಇತನು ಆಸ್ಪತ್ರೆಗೆ ಸೇರಿಕೆ ಮಡಿರುತ್ತಾನೆ. ನನಗೆ ವಿನಾಕಾರಣ ಅವಾಚ್ಯವಾಗಿ ಬೈದು ಕೈಯಿಂದ, ಕಟ್ಟಿಗೆಯಿಂದ ಮತ್ತು ಚಾಕುವಿನಿಂದ ಹೊಡೆ ಬಡೆ ಮಾಡಿದ 1) ರೋಹಿತ ಭದ್ರೆ, 2) ರೋಹನ, ಮತ್ತು 3) ಬಸವರಾಜ ಹಾಗೂ ಇವರಿಗೆ ಪ್ರಚೋದನೆ ನೀಡಿದ 4) ಪ್ರತೀಕ್ ಮತ್ತು 5) ಲೊಕೇಶ ಇವರ ವಿರುದ್ದ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತ ವಗೈರೆಯಾಗಿ  ಇದ್ದ  ಫಿರ್ಯಾದಿ ಹೇಳಿಕೆ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ರೋಜಾ ಪೊಲೀಸ ಠಾಣೆ :- ದಿನಾಂಕ : 04/01/2023  ರಂದು ಸುಮಾರು  18:40 ಗಂಟೆಗೆ ರೋಜಾ ಪಿ ಐ ಹಾಗೂ ಠಾಣೆಯ ಸಿಬ್ದಂದಿಯವರು ಸಹಾಯದಿಂದ ಒಮ್ಮಲ್ಲೇ ಎಲ್ಲರೂ ಸುತ್ತುವರೆದು ಮಟಕಾ ಬರೆದುಕೊಳ್ಳುತ್ತಿದ್ದ ವ್ಯಕ್ತಿಯನ್ನು ಪಂಚರ ಸಮಕ್ಷಮ ಹಿಡಿದು ವಿಚಾರಿಸಲು ಅವನ ಹೆಸರು ತಾಹೇರ ಅಲಿ ತಂದೆ ಚಾಂದಪಾಶಾ ವಯಸ್ಸು: 26 ವರ್ಷ ಉ: ಹಣ್ಣಿನ ವ್ಯಾಪಾರ ಸಾ: ಕಮಾನ ಹತ್ತಿರ ಬುಲಂದ್ ಫರ್ವೇಜ್ ಕಾಲೋನಿ ಮೊ. ನಂ 6362970799 ಅಂತಾ ತಿಳಿಸಿದನು . ನಂತರ ಅವನ  ಅಂಗ ಶೋಧನೆ ಮಾಡಲಾಗಿ, ನಗದು ಹಣ 1040-00/- ರೂ ಮತ್ತು  ಒಂದು ಮಟಕಾ ಚೀಟಿ ಒಂದು ಬಾಲ ಪೆನ್ ಜಪ್ತಿಪಡಿಸಿಕೊಂಡು ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಸಬ್‌ ಅರ್ಬನ್‌ ಪೊಲೀಸ್‌ ಠಾಣೆ :- ದಿನಾಂಕಃ-04-01-2023 ಫಿರ್ಯಾದಿಯು ಠಾಣೆಗೆ ಹಾಜರಾಗಿ ನೀಡಿದ ಫಿರ್ಯಾದಿಯೇನೆಂದರೆ ದಿನಾಂಕಃ-03-01-2023 ರಂದು ಬೆಳಗ್ಗೆ ೧೧:೦೦ ಗಂಟೆಯಿಂದ ೧೪-೦೦ ಮಧ್ಯದ ಅವಧಿಯಲ್ಲಿ ಯಾರೋ ಕಳ್ಳರು ಫಿರ್ಯಾದಿಯ ಮನೆಯ ಬೀಗ ಮುರಿದು ಮನೆಯಲ್ಲಿದ್ದ ಸುಮಾರು 82,540 /- ರೂ ಮೌಲ್ಯದ ನಗದು ಹಣವನ್ನು ಕಳುವು ಮಾಡಿದವರ ವಿರುದ್ದ ಕ್ರಮ ಕೈಗೊಳ್ಳಬೇಕೆಂದು ಫಿರ್ಯಾದಿ ಕೊಟ್ಟ ಹೇಳಿಕೆ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

ಇತ್ತೀಚಿನ ನವೀಕರಣ​ : 06-01-2023 01:59 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080