ಅಭಿಪ್ರಾಯ / ಸಲಹೆಗಳು

ಸ್ಟೇಷನ್‌ ಬಜಾರ ಪೊಲೀಸ ಠಾಣೆ :- ದಿನಾಂಕ:23-11-2022  ರಂದು ರಾತ್ರಿ ೧೦-೩೦ ಗಂಟೆಯಲ್ಲಿ ನನ್ನ BAJAJ PALUSAR REG-220 KA-04 HU-1684, CHASIS NO- MD2A13EZ4ECB31431, ENG NO- DKZCEB23156, COLOUR–RED, MODEL-2014, VALUVE-20927- ವಾಹನವನ್ನು ನಾನು ವಾಸವಾಗಿರುವ ಗಣೇಶ ನಗರದ ಮನೆಯ ಮುಂದೆ ನಿಲ್ಲಿಸಿ.ನಾನು ಮನೆಯ ಒಳಗಡೆ ಹೋಗಿ ಮಲಗಿಕೊಂಡಿರುತ್ತೇನೆ. ನಂತರ ದಿನಾಂಕ:೨೪-೧೧-೨೦೨೨ ರಂದು ಬೆಳಿಗ್ಗೆ ೦೮-೦೦ ಗಂಟೆಗೆ ಮನೆಯಿಂದ ಎದ್ದು ಹೊರಗಡೆ ಬಂದು ನೋಡಿದಾಗ ನಮ್ಮ ಮನೆಯ ಮುಂದೆ ನಿಲ್ಲಿಸಿದ್ದ ನನ್ನ ವಾಹನ ಇರಲಿಲ್ಲ. ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಎಂದು ಫಿರ್ಯಾದಿ ಕೊಟ್ಟ ಹೇಳಿಕೆ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಸ್ಟೇಷನ್‌ ಬಜಾರ ಪೊಲೀಸ ಠಾಣೆ :-  ದಿನಾಂಕ:03/12/2022 ರಂದು ಸಂಜೆ 06:45 ಗಂಟೆ ಸುಮಾರಿಗೆ ಫರ್ಯಾದಿ ಶ್ರೀ ರಾಜೇಶ ಕುಮಾರ ವರ್ಮಾ ತಂದೆ ರಾಜಕಿಶೋರ ವರ್ಮಾ ವಯ:46 ವರ್ಷ ಮುಖ್ಯ ಆಡಳಿತಾಧಿಕಾರಿಗಳು ಜಿಲ್ಲಾ ಸತ್ರ ನ್ಯಾಯಾಲಯ ಕಲಬುರಗಿ ರವರು ಕಳುಹಿಸಿದ ದೂರಿನ ಸಾರಾಂಶದ ಮೇಲೆ ಎಸ್ ಸಿ ನಂ:2020 ನೇದ್ದರಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಆರೋಪಿ ನಂ:04 ಖದೀರ್ @ ಖಲ್ಯಾ  ಈತನು ಜಾಮೀನು ಭದ್ರತೆಗಾಗಿ ಜಾಮೀನುಸಲ್ಲಿಸಿದ್ದು ಅದಕ್ಕೆ ಸಂಬಂದಿಸಿದಂತೆ ಭದ್ರತೆ ನೀಡಿದ ದಾಖಲಾತಿಗಳನ್ನು ಮಾನ್ಯ ಒಂದನೇ ಹೆಚ್ಚುವರಿ ಸತ್ರ ನ್ಯಾಯಾಲಯ ಮಾನ್ಯ ಉಚ್ಛ ನ್ಯಾಯಾಲಯದ ನಿರ್ದೇಶನದ ಪ್ರಕಾರ ಸಂಬಂದಿತ ಕಂದಾಯ ದಾಖಲೆಗಳೊಂದಿಗೆ ಇಬ್ಬರು ಶುರಿಟಿಗಳಿಂದ ಒದಗಿಸಲಾದ ಜಾಮೀನು ಪ್ರಮಾಣ ಪತ್ರಗಳನ್ನುಪರಿಶೀಲನೆಗಾಗಿಬೆಂಚಿಗೆಬಂದಿದ್ದುದಾಖಲಾತಿಗಳನ್ನುಪರಿಶೀಲಿಸಲುದಿನಾಂಕ:17/10/2022ರಂದು ನೊಂದಾಯಿಸಿದ ಭದ್ರತೆಯನ್ನು ನೀಡಿದ ನೂರ್ ಅಹ್ಮದ್ ತಂದೆ ಹಸನ್ ಸಾಬ್ ಮುಲ್ಲಾ ಈ ಹಿಂದೆ ಜಾಮೀನು ನೀಡಿರುವುದಿಲ್ಲ. ಮಾನ್ಯ ನ್ಯಾಯಾಲಯವು ಕಂದಾಯ ಇಲಾಖೆಯ ಅಂತರ್ಜಾಲದಲ್ಲಿ ಕಂದಾಯ ಇಲಾಖೆಯ ದಾಖಲಾತಿಗಳನ್ನು ಪರಿಶೀಲನೆ ಮಾಡಿ ನೋಡಲು ಪಹಣಿ ಪತ್ರಿಕೆಯ ಕಾಲಂ:09 ರಲ್ಲಿ ಸರ್ವೆ ನಂ:280/8 ನೇದ್ದರಲ್ಲಿ ಲಕ್ಷ್ಮಣ್ ತಂದೆ ತುಕಾರಾಮ ನರಸಾಳೆ ಎಂಬ ಹೆಸರನ್ನು ತೆಗೆದು ನಿಜಾಮ ಪಾಶ ತಂದೆ ಹಸನ್ ಸಾಬ್ ಎಂದು ಸೇರಿಕೆ ಮಾಡಿರುತ್ತಾರೆ. ಮಾನ್ಯ ನ್ಯಾಯಾಲಯದ ವ್ಯವಹಾರಗಳಿಗೆ ಮೋಸ ಮಾಡುವ ಉದ್ದೇಶದಿಂದ ತಿದ್ದುಪಡಿ ಮಾಡಿರುತ್ತಾನೆ. ಅಂತ ಇತ್ಯಾದಿಯಾಗಿ ವಸೂಲಾದ ದೂರಿನ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಸಂಚಾರಿ ಪೊಲೀಸ ಠಾಣೆ -2 :- ದಿನಾಂಕ 03/12/2022 ರಂದು 08:30 ಪಿ.ಎಮ್ ಕ್ಕೆ  ಮಲ್ಲಿಕಾರ್ಜುನ್ ತಂದೆ ಗಿರೇಪ್ಪಾ ಸಿಂದೆ ಇವರು ಠಾಣೆಗೆ ಹಾಜರಾಗಿ ಕಾಶಿನಾಥ ತಂದೆ ಸುಭಾಷ ಬಂಡಿ ವಯಃ 36 ವರ್ಷ ಜಾತಿಃ ಪ.ಜಾತಿ ಉಃ ಕೂಲಿ ಕೆಲಸ ಸಾಃ ಆಲಗೂಡ ತಾ.ಜಿಃ ಕಲಬುರಗಿ ಇವರು ಸಹಿ ಮಾಡಿದ ಫಿರ್ಯಾದಿ ಅರ್ಜಿಯನ್ನು ಹಾಜರು ಪಡಿಸಿದ್ದು ಸಾರಂಶವೆನೆಂದರೆ, ನಿನ್ನೆ ದಿನಾಂಕ 02/12/2022 ರಂದು ಬೆಳಿಗ್ಗೆ ಕೆಲಸದ ಕುರಿತು ಕಲಬುರಗಿಗೆ ಬಂದು ಸಾಯಂಕಾಲ ಕೆಲಸ ಮುಗಿಸಿಕೊಂಡು ಮರಳಿ ಊರಿಗೆ ಹೋಗಬೇಕೆಂದು ನಮ್ಮ ಊರಿನ ರೇವಣಸಿದ್ದ ಕಲಗುರ್ತೀ ಈತನ ಮೋಟರ ಸೈಕಲ ನಂ. ಕೆಎ 32 ಇ.ಝಡ್ 9343 ನೇದ್ದರ ಮೇಲೆ ಹಿಂದೆ ಕುಳಿತುಕೊಂಡು ಊರಿಗೆ ಹೋಗುವಾಗ ಅವರಾದ ಗ್ರಾಮ ದಾಟಿ ನಮ್ಮ ಊರಿಗೆ ಹೋಗುವಾಗ ರೇವಣಸಿದ್ದ ಈತನು ಮೋಟರ ಸೈಕಲನ್ನು ಅತಿವೇಗದಿಂದ ಮತ್ತು ಅಲಕ್ಷತನದಿಂದ ಚಲಾಯಿಸುತ್ತಿದ್ದನು. ನಾನು ಆತನಿಗೆ ನಿಧಾನವಾಗಿ ಚಲಾಯಿಸಲು ಹೇಳಿದೆ ಆದರು ಸಹ ಆತನು ಅದೆ ವೇಗದಲ್ಲಿ ಚಲಾಯಿಸಿಕೊಂಡು ಹೋಗುವಾಗ ಸಾಯಂಕಾಲ 6:45 ಗಂಟೆ ಸುಮಾರಿಗೆ ನಮ್ಮ ಊರಿನ ಸೀಮೆಯ ಕೊಟ್ಟಿಯವರ ಹೊಲದ ಹತ್ತೀರ ಆಲಗೂಡ ಕಡೆಯಿಂದ ಕಲಬುರಗಿ ಕಡೆಗೆ ಹೋಗುವ ಕುರಿತು ಒಂದು ಮೋಟರ ಸೈಕಲ ಸವಾರನು ತನ್ನ ಮೋಟರ ಸೈಕಲನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಮುಖಾಮುಖಿಯಾಗಿ ನಮ್ಮ ಮೋಟರ ಸೈಕಲಗೆ ಎದುರಿನಿಂದ ಡಿಕ್ಕಿ ಪಡಿಸಿದನು ಆಗ ಎರಡು ಮೋಟರ ಸೈಕಲ ಮೇಲೆ ಇದ್ದ ನಾವು ಮೂರು ಜನರು ಮೋಟರ ಸೈಕಲ ಸಮೇತ ಕೆಳಗೆ ಬಿದ್ದೆವು. ಅದನ್ನು ನೋಡಿದ ಅಲ್ಲಿಯೇ ಹೋಗುತ್ತಿದ್ದ ಅನೀಲ ತಂದೆ ಪೀರಪ್ಪಾ ಜಾನೆ ಹಾಗು  ರವೀಂದ್ರ ತಂದೆ ಮಲ್ಲೇಶಪ್ಪಾ ಇವರು ಬಂದು ನಮಗೆ ಎಬ್ಬಿಸಿ ರಸ್ತೆಯ ಬದಿಯಲ್ಲಿ ಕೂಡಿಸಿ ನೋಡಲು ಸದರ ಘಟನೆಯಿಂದ ನನ್ನ ಹಣೆಗೆ ಭಾರಿ ರಕ್ತಗಾಯ ಹಾಗು ಮುಖಕ್ಕೆ ಅಲ್ಲಲ್ಲಿ ತರಚಿದ ಗಾಯವಾಗಿದ್ದು, ರೇವಣಸಿದ್ದ ಈತನಿಗೆ ನೋಡಲು ತಲೆಗೆ ಭಾರಿ ಒಳಪೆಟ್ಟು ಬಲಕಣ್ಣಿನ ಕೆಳಭಾಗದಲ್ಲಿ ರಕ್ತಗಾಯ, ಬಲಗಡೆ ಮುಖಕ್ಕೆ ಭಾರಿ ಒಳಪೆಟ್ಟು, ಬಲಕಿವಿಯಿಂದ ಹಾಗು ಮೂಗಿನಿಂದ ರಕ್ತಸ್ರಾವ ಆಗಿದ್ದು, ಆತನು ಮಾತನಾಡುವ ಸ್ಧಿತಿಯಲ್ಲಿ ಇರಲಿಲ್ಲಾ & ನಮ್ಮ ಮೋಟರ ಸೈಕಲಗೆ ಡಿಕ್ಕಿ ಪಡಿಸಿದ ಮೋಟರ ಸೈಕಲ ಸವಾರನಿಗೆ ನೊಡಲು ಆತನು ನಮ್ಮ ಊರಿನ ಸೈಬಣ್ಣ ತಂದೆ ಶಿವಶರಣಪ್ಪಾ ಹಿರೆಕುರುಬ ಇದ್ದು, ಆತನು ಚಲಾಯಿಸಿಕೊಂಡು ಬಂದ ಮೊಟರ ಸೈಕಲ ನೋಡಲು ಕೆಎ 32 ಇ.ಎಕ್ಸ 3254 ನೇದ್ದು ಇದ್ದು, ಸದರ ಘಟನೆಯಿಂದ ಆತನಿಗೆ ಮುಖಕ್ಕೆ ಅಲ್ಲಲ್ಲಿ ಭಾರಿ ರಕ್ತಗಾಯ, ತಲೆಗೆ ಭಾರಿ ಒಳಪೆಟ್ಟು, ನಾಲಿಗೆಗೆ ಭಾರಿ ರಕ್ತಗಾಯ ಆಗಿ ಆತನು ಸಹ ಮಾತನಾಡುವ ಸ್ಧಿತಿಯಲ್ಲಿ ಇರಲಿಲ್ಲಾ. ಸದರ ವಿಷಯ ಗೊತ್ತಾಗಿ ಸ್ಧಳಕ್ಕೆ ಅಂಬುಲೇನ್ಸ ವಾಹನ ಬಂದಿದ್ದು, ಅನೀಲ ಜಾನೆ ಮತ್ತು ರವೀಂದ್ರ ಇಬ್ಬರು ಸೇರಿ ನಮಗೆ ಮೂರು ಜನರಿಗೆ ಸದರಿ ಅಂಬುಲೇನ್ಸದಲ್ಲಿ ಹಾಕಿಕೊಂಡು ಉಪಚಾರ ಕುರಿತು ಕಲಬುರಗಿ ನಗರದ ಎ.ಎಸ್.ಎಮ್ ಆಸ್ಪತ್ರೆಗೆ ತಂದು ಸೇರಿಕೆ ಮಾಡಿದ್ದು, ನಾನು ನನ್ನ ಚಿಕಿತ್ಸೆಯಲ್ಲಿದ್ದು ವಿಚಾರ ಮಾಡಿ ಇಂದು ದೂರು ನೀಡಲು ತಡವಾಗಿರುತ್ತದೆ. ಕಾರಣ ಮೋಟರ ಸೈಕಲ ನಂ. ಕೆಎ 32 ಇ.ಎಕ್ಸ 3254 ನೇದ್ದರ ಸವಾರ ಸೈಬಣ್ಣ ಹಾಗು ಮೋಟರ ಸೈಕಲ ನಂ. ಕೆಎ 32 ಇ.ಝಡ್ 9343 ನೇದ್ದರ ಸವಾರ ರೇವಣಸಿದ್ದಪ್ಪಾ ಇವರಿಬ್ಬರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಅಂತಾ ಇತ್ಯಾದಿ ಕೊಟ್ಟ ಹೇಳಿಕೆ ಫಿರ್ಯಾದಿ ಸಾರಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

ಇತ್ತೀಚಿನ ನವೀಕರಣ​ : 06-12-2022 04:37 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080