Feedback / Suggestions

ಬ್ರಹ್ಮಪೂರ ಪೊಲೀಸ ಠಾಣೆ :- ಇಂದು ದಿನಾಂಕ:೦೩/೧೨/೨೦೨೧ ರಂದು ೬-೪೫ ಪಿ.ಎಮ್.ಕ್ಕೆ ಫಿರ್ಯಾದಿದಾರರಾದ ಶ್ರೀ ಧನರಾಜ ತಂದೆ ನರಸಪ್ಪಾ ಮಲ್ಲಿಗೆ ವಯ: ೪೭ ವರ್ಷ, ಜಾ:ಮಾದೀಗ ಉ:ಶಿರಸ್ತೇದಾರರು ಜಿಲ್ಲಾಧೀಕಾರಿಗಳು ಕಲಬುರಗಿ ರವರ ಕಾರ್ಯಾಲಯ, ಸಾ: ಮ.ನಂ.೧೪ ಬಸ ನಿಲ್ದಾಣದ ಹಿಂದುಗಡೆ ಸಿ.ಐ.ಬಿ.ಕಾಲೂನಿ ಕಲಬುರಗಿ ಮೊ.ನಂ.೯೦೦೮೫೬೨೬೩೬ ಇವರು ಠಾಣೆಗೆ ಹಾಜರಾಗಿ ತಮ್ಮದೊಂದು ಪಿರ್ಯಾಧಿ ಅರ್ಜಿ ನೀಡಿದ್ದರ ಸಾರಾಂಶವೆನೆAದರೆ, ನಾನು ಕಲಬುರಗಿ ನಗರದ ಶರಣಬಸವೇಶ್ವರ ಕೆರೆಯ ಉದ್ಯಾನವನದ ಸಾರ್ವಜನಿಕರ ಪ್ರವಾಸಿ ಸ್ಥಳದಲ್ಲಿ ಮ್ಯಾನೇಜರ (ಶಿರಸ್ತೇದಾರರು) ಅಂತಾ ಈಗ ಸುಮಾರು ಒಂದು ವರ್ಷದಿಂದ ಕೆಲಸ ಮಾಡುತ್ತಿದ್ದು, ನಮ್ಮ ಕಛೇರಿ ವತಿಯಿಂದ ಆದಪ್ಪ ತಂದೆ ಅಮರಪ್ಪ ಬಡಿಗೇರ ಇವರು ಎಫ್.ಡಿ.ಸಿ.ಅಂತಾ ಕೆಲಸ ಮಾಡುತ್ತಿದ್ದು, ಅವರು ಈ ಕೆರೆಯ ಆಗು ಹೋಗುಗಳ ಮತ್ತು ಎಲ್ಲಾ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿದ್ದರು, ಪ್ರವಾಸಿ ತಾಣಕ್ಕೆ ಬೇಕಾಗುವ ಎಲ್ಲಾ ಜಿಮ್ ಮತ್ತು ಪ್ರವಾಸಿ ತಾಣದ ಹೊಟೇಲ, ಕಂಪ್ಯೂಟರ ಮತ್ತು ಪ್ರವಾಸಿಗರಿಗೆ ಒಳ ಪ್ರವೇಶ ಕುರಿತು ಟಿಕೇಟ ಗಣಕಯಂತ್ರ ಮತ್ತು ಮಕ್ಕಳು ಹಾಗೂ ಹಿರಿಯರು ಆಟ ಆಡುವ ಸಾಮಾನುಗಳನ್ನು ಕೊಟ್ಟಿದ್ದು ಅವುಗಳನ್ನೆಲ್ಲಾ ಆದಪ್ಪ ಇತನು ನೋಡಿಕೊಂಡು ಹೋಗುತ್ತಿದ್ದು ಕಳೆದ ೨೦೨೦ ನೇ ಸಾಲಿನಲ್ಲಿ ಕೋವಿಡ-೧೯ ಸಂಕ್ರಾಮಿಕ ರೋಗವು ವಿಪರಿತವಾಗಿ ದೇಶದಲ್ಲಿ ಮತ್ತು ರಾಜ್ಯದಲ್ಲಿ ಹಾಗೂ ಕಲಬುರಗಿ ಜಿಲ್ಲೆಯಲ್ಲಿ ಹರಡಿರುವುದರಿಂದ ಭಾರತ ಸರಕಾರವು ಈ ರೋಗವನ್ನು ತಡೆಗಟ್ಟುವ ಸಂಬದವಾಗಿ ಯಾವುದೇ ಪ್ರವಾಸಿಗರನ್ನು ಮತ್ತು ಸಾರ್ವಜನಿಕರನ್ನು ಒಳಗೆ ಪ್ರವೇಶಿಸದಂತೆ ಮತ್ತು ಇಡಿ ದೇಶದಲ್ಲಿ ಲಾಕ ಡೌನ ಹೇರಿದ್ದರಿಂದ ಆ ಕಾಲಕ್ಕೆ ನಮ್ಮ ಉದ್ಯಾನವನ್ನು ದಿನಾಂಕ:೨೪/೦೩/೨೦೨೦ ರಂದು ಬಂದ ಮಾಡಿದ್ದು ಇರುತ್ತದೆ. ಆದಪ್ಪ ಇವರ ಜಾಗಕ್ಕೆ ಪ್ರಶಾಂತ ತಂದೆ ಅಶೋಕ ಪಾಟೀಲ ಇವರಿಗೆ ಮಾನ್ಯ ಜಿಲ್ಲಾಧೀಕಾರಿಗಳು ನೇಮಕ  ಮಾಡಿದ್ದು ನೇಮಕ ಮಾಡಿದ ನಂತರ ಸದರಿ ಪ್ರಶಾಂತ ಪಾಟೀಲ ಇವರು ಉದ್ಯಾನವನದ ಕೆರೆಯ ಸಂಬAದ ಪಟ್ಟ ಪ್ರಭಾರ ವಹಿಸಿಕೊಳ್ಳುವಂತೆ ದಿನಾಂಕ:೨೯/೧೨/೨೦೨೦ ರಂದು ನೇಮಕ ಮಾಡಿದ್ದು ಇರುತ್ತದೆ. ಸದರಿಯವರು ನೇಮಕವಾದ ನಂತರ ತಾವೂ ಪ್ರಭಾರವಹಿಸಿಕೊಳ್ಳುವ ಕಾಲಕ್ಕೆ ಕೆಲವು ಸಾಮಾನುಗಳು ಕಳ್ಳತನ ಆಗಿರುತ್ತವೆ ಎಂದು ದಿನಾಂಕ:೦೨/೦೧/೨೦೨೧ ರಂದು ಮಾನ್ಯ ಜಿಲ್ಲಾಧೀಕಾರಿಗಳಿಗೆ ವರದಿ ನೀಡಿದ್ದು ಮಾನ್ಯ ಜಿಲ್ಲಾಧೀಕಾರಿಗಳು ಈ ಬಗ್ಗೆ ದೂರು ನೀಡುವಂತೆ ದಿನಾಂಕ; ೦೨/೧೨/೨೦೨೧ ರಂದು ಆದೇಶ ಮಾಡಿರುವುದರಿಂದ ನಾನು ಠಾಣೆಗೆ ಬಂದು ಅರ್ಜಿ ನೀಡಿರುತ್ತೇನೆ.

 ಈ ಕೆಳಗಿನ ಸಾಮಾನುಗಳು ಕಳ್ಳತನ ಆಗಿರುವ ಬಗ್ಗೆ ವರದಿಯಲ್ಲಿ ನೀಡಿರುತ್ತಾರೆ.

 • Studio Master Fire 51 A (Speaker) Total 4

 • Studio Master Fire 84 (Subwoofer) Total 2

 • Amplifiers (DJA5000) TOTAL 1

 • Speaker tripod stands Total 4

 • Foh speaker movable accessories Total 1

 • 19 U box to mount amp mixer

     ಹೀಗೆ ವಿವಿಧ ನಮೂನೆಯ ಶರಣಬಸವೇಶ್ವರ ಕೆರೆಯ ಉದ್ಯಾನವನದಲ್ಲಿರುವ ಅಂದಾಜು ಮೊತ್ತ ೨೦ ಲಕ್ಷ ರೂ. ಕಿಮ್ಮತ್ತಿನ ವಸ್ತುಗಳನ್ನು ಕಳ್ಳತನವಾಗಿದ್ದು,    ಕಾರಣ ದಿನಾಂಕ;೨೪/೦೩/೨೦೨೦ ರಂದು ಬೆಳಗ್ಗೆ.೦೮.೦೦ ಗಂಟೆಯಿAದ ದಿನಾಂಕ:೨೯/೧೨/೨೦೨೦ ರ ಮಧ್ಯಾಹ್ನ ೨-೩೦ ಗಂಟೆಯ ಮಧ್ಯದ ಅವಧೀಯಲ್ಲಿ ಶರಣಬಸವೇಶ್ವರ ಕೆರೆಯ ಉದ್ಯಾನವನದಲ್ಲಿರುವ ಹೊಟೇಲ, ಜಿಮ್, ಪ್ರವಾಸಿಗರ ಪ್ರವೇಶ ದ್ವಾರದಲ್ಲಿರುವ ಗಣಕಯಂತ್ರ ಮತ್ತು ಉದ್ಯಾನವನದ ಹೊರಗೆ ಇರುವ ವಸ್ತುಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು ಈ ಬಗ್ಗೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು  ಅಂತಾ ಅರ್ಜಿ ನೀಡಿದ್ದರ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

ಮಹಿಳಾ ಪೊಲೀಸ್ ಠಾಣೆ :-   ಇಂದು ದಿನಾಂಕ ೦೩.೧೨.೨೦೨೧ ರಂದು ಸಾಯಂಕಾಲ ೬ ಗಂಟೆಗೆ ಫರ‍್ಯಾದಿ ಶ್ರೀಮತಿ ಮಹಿಬುನ್ನೀಸಾ ಗಂಡ ಅಬ್ದುಲ್ ಲತೀಫ ವಯಾ|| ೩೩ ವರ್ಷ ಉ|| ಗೃಹಿಣಿ ಸಾ|| ಸೆಂಟ್ರಲ್ ಮುಂಬೈ ಹಾ.ವ. ಏಕಾನ ಮಜೀದ ಹತ್ತಿರ ಮಾಡಿ ಮೊಹಲ್ಲಾ ಮೋಮಿನಪುರ ಕಲಬುರಗಿ ಇವರು ಠಾಣೆಗೆ ಹಾಜರಾಗಿ ದೂರು ಸಲ್ಲಿಸಿದ್ದು, ಸದರಿ ದೂರಿನ ಸಾರಾಂಶ ಏನೆಂದರೆ, ೨೦೦೯ ರಲ್ಲಿ ಅಮ್ಜದ್ ಹುಸೇನ ಇವರ ಸಂಗಡ ನೆರವೇರಿದ್ದು, ನಂತರ ಇವರೊಂದಿಗೆ ನಾನು ಮುಸ್ಲಿಂ ಸಂಪ್ರದಾಯದAತೆ ಖುಲಾನಾಮಾ ಮಾಡಿಕೊಂಡಿರುತ್ತೇನೆ. ನಂತರ ಅಬ್ದುಲ್ ಲತೀಫ್ ಶೇಕ ತಂದೆ ಅಬ್ದುಲ್ ಖದೀರ ಶೇಕ ಸಾ|| ಮುಂಬೈ ಸೆಂಟರ್ ಇವರೊಂದಿಗೆ ದಿನಾಂಕ ೩೧.೦೧.೨೦೧೬ ರಂದು ಕಲಬುರಗಿಯ ಮಹ್ಮದ ಹಯಾ ಫಂಕ್ಷನ್ ಹಾಲ್‌ನಲ್ಲಿ ನಮ್ಮ ಮುಸ್ಲಿಂ ಧರ್ಮದ ಪ್ರಕಾರ ನನ್ನ ವದುವೆ ಆಗಿರುತ್ತದೆ. ಮದುವೆಯ ಕಾಲಕ್ಕೆ ನನ್ನ ಗಂಡನಿಗೆ ೬ ತೊಲೆ ಬಂಗಾರ, ೫೦ ಸಾವಿರ ರೂಪಾಯಿ ಜಗದು ಹಣ ಒಟ್ಟು ೪ ಲಕ್ಷ ರೂಪಾಯಿ ಹಣ ಖರ್ಚು ಮಾಡಿ ನನ್ನ ತಂದೆಯವರು ನನ್ನ ಮದುವೆ ಮಾಡಿಕೊಟ್ಟಿರುತ್ತಾರೆ. ಮದುವೆಯಾದ ನಂತರ ನನ್ನ ಗಂಡನ ಮನೆಯಲ್ಲಿ ಅವರ ತಂದೆ ತಾಯಿ ಅಣ್ಣಂದಿರಾದ ಇಬ್ರಾಹಿಂ, ಖಲಿಮುಲ್ಲಾ ಹಾಗೂ ಇಬ್ರಾಹಿಂ ಮತ್ತು ಅವನ ಹೆಂಡತಿ ಶಬಾನಾ ಇವರು ಇದ್ದು, ಒಂದು ವರ್ಷ ಒಳ್ಳೆಯ ರೀತಿಯಲ್ಲಿ ಸಂಸಾರ ಮಾಡಿಕೊಂಡು ಬಂದಿರುತ್ತೇನೆ. ಕೆಲವು ದಿವಸಗಳ ನಂತರ ನನ್ನ ಅತ್ತೆ ತೀರಿಕೊಂಡಿರುತ್ತಾರೆ. ನಂತರ ನನ್ನ ಗಂಡ ಕಲಬುರಗಿಯಲ್ಲಿ ಒಮದು ಎಲೆಕ್ಟಿçಕಲ್ ಅಂಗಡಿ ಹಾಕಿಕೊಂಡು ಜೀವನ ಮಾಡೋಣಾ ಅದಕ್ಕೆ ನಿನ್ನ ತವರು ಮನೆಯಿಂದ ೭ ಲಕ್ಷ ರೂಪಾಯಿ ಹಣ ತೆಗೆದುಕೊಂಡು ಬರಬೇಕು ಅಂತಾ ನನಗೆ ಒತ್ತಾಯಿಸಿದಾಗ ನಾನು ಅದಕ್ಕೆ ಒಪ್ಪದೇ ಇರುವದರಿಂದ ನನ್ನ ಗಂಡನ ಅಣ್ಣ ಇಬ್ರಾಹಿಂ ಮತ್ತು ಖಲಿಮುಲ್ಲಾ ಹಾಗೂ ಇಬ್ರಾಹಿಂ ಇತನ ಹೆಂಡತಿ ಶಬಾನಾ ಇವರೆಲ್ಲಾ ಸೇರಿ ನಗೆ ಹಣ ತರಬೇಕು ಅಂತಾ ಒತ್ತಾಯ ಮಾಡುತ್ತಿದ್ದರು. ಅಲ್ಲದೆ ಆಗಾಗ ನಮ್ಮ ಮನೆಗ ಬಂದು ನನ್ನ ನಾದಿನಿಯರಾದ ಇರ್ಫಾನಾ ಬೇಗಂ ಹಾಗೂ ಅವಳ ಗಂಡ ನಸೀಮ ಇಕ್ಬಾಲ್ ಇವರು ಸಹ ನನ್ನ ಗಂಡನಿಗೆ ಪ್ರೋತ್ಸಾಹಿಸಿ ಹಣ ತರಬೇಕು ಇಲ್ಲದಿದ್ದರೆ, ಈ ಮನೆಯಲ್ಲಿ ಸಂಸಾರ ಮಾಡಲು ನಿನಗೆ ಆಸ್ಪದ ಇಲ್ಲ ಅಂತಾ ಹೆದರಿಸಿ ಜೀವದ ಬೆದರಿಕೆ ಹಾಕುತ್ತಾ ಬಂದಿದ್ದರಿAದ ಈ ವಿಷಯವನ್ನು ನಾನು ನನ್ನ ತವರು ಮನೆಯವರಿಗೆ ತಿಳಿಸಿದೆ, ಆಗ ಅವರು ನಮ್ಮ ಮನೆಗೆ ಬಂದು ನನ್ನ ಗಂಡ ಮತ್ತು ಗಂಡನ ಮನೆಯವರಿಗೆ ತಿಳಿಹೇಳಿರುತ್ತಾರೆ.   ಇತ್ತೀಚೆಗೆ ಅವರೆಲ್ಲಾ ಸೇರಿ ನನಗೆ ತವರಿನಿಂದ ಹಣ ತರಬೇಕು ಇಲ್ಲದಿದ್ದರೆ ಸಂಸಾರ ಮಾಡಲು ಕೊಡುವದಿಲ್ಲಾ ಅಂತಾ ರಂಡಿ ಬೋಸಡಿ ಅಂತಾ ಅವಾಚ್ಯ ಶಬ್ದಗಳಿಂದ ಬೈಯ್ದಾಡಿ, ಶಬಾನಾ ಇವಳು ೧-೨ ಸಲ ನನ್ನ ಕೂದಲು ಹಿಡಿದು ಹೊಡೆಬಡೆ ಮಾಡಿರುತ್ತಾಳೆ. ನನ್ನ ಗಂಡನ ಸೋದರಿಯಾದ ಸುಲ್ತಾನ ಬೇಗಂ ಮತ್ತು ಅವಳ ಗಂಡ ಕಬೀರ ಅಹ್ಮದ ಸಗರಿ ಹಾಗೂ ನನ್ನ ಭಾವನ ಮಗಳಾದ ಫಾತೀಮಾ ಇವರು ಸಹ ಇವಳು ವರದಕ್ಷಿಣೆ ಹಣ ತರುವವರೆಗೆ ಮನೆಯಲ್ಲಿ ಇರಲು ಬಿಡಬೇಡಿ ಅಂತಾ ಪ್ರೋತ್ಸಾಹ ಮಾಡಿರುತ್ತಾರೆ. ೨೦೧೬ ರಲ್ಲಿ ನನ್ನ ಗಂಡ ಕೈಯಿಂದ ನನ್ನ ಕಪಾಳಕ್ಕೆ ಜೋರಾಗಿ ಹೊಡೆದಾಗ ನನ್ನ ಕಿವಿಯ ಒಳಪದರು ಹರಿದಿದ್ದು, ಈ ವಿಷಯ ಯಾರಿಗಾದರೂ ಹೇಳಿದರೆ ನಿನಗೆ ಖಲಾಸ್ ಮಾಡುತ್ತೇನೆ ಅಂತಾ ಬೆದರಿಕೆ ಹಾಕಿರುತ್ತಾರೆ. ದಿನಾಂಕ ೦೮.೦೫.೨೦೧೮ ರಂದು ನನ್ನ ಗಂಡ ಮತ್ತು ಅವನ ಮನೆಯವರು ಸೇರಿ ನನಗೆ ನನ್ನ ತವರು ಮನಗೆಎ ಬಿಟ್ಟು ಹೋಗಿರುತ್ತಾರೆ. ದಿನಾಂಕ ೨೫.೧೧.೨೦೨೧ ರಂದು ಮಧ್ಯಾಹ್ನ ೨ ಗಂಟೆಗೆ ನಾನು ಮತ್ತು ನಮ್ಮ ತಂದೆಯವರು ಮಹಿಳಾ ಪೊಲೀಸ್ ಠಾಣೆಯಿಂದ ಮನೆಗೆ ಹೋಗುತ್ತಿರುವಾಗ ಸಿದ್ದಿಬಾಶಾ ದರ್ಗಾ ಹತ್ತಿರ ನನ್ನ ಗಂಡ ಅಬ್ದುಲ್ ಲತೀಫ್ ಇತನು ನಮ್ಮ ಹಿಂದಿನಿAದ ಬಂದು ನನಗೆ ಅವಾಚ್ಯ ಶಬ್ದಗಳಿಮದ ಬೈದು ಜೀವದ ಬೆದರಿಕೆ ಹಾಕಿ ಹೋಗಿರುತ್ತಾನೆ. ಕಾರಣ ನನ್ನ ಗಂಡ ಮತ್ತು ಅವನ ಸಂಬAಧಿಕರ ಮೇಲೆ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಸಲ್ಲಿಸಿದ ದೂರಿನ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

ಮಹಿಳಾ ಪೊಲೀಸ್ ಠಾಣೆ :-  ಇಂದು ದಿನಾಂಕ ೦೩.೧೨.೨೦೨೧ ರಂದು ಸಾಯಂಕಾಲ ೭-೩೦ ಗಂಟೆಗೆ ಫರ‍್ಯಾದಿ ಶ್ರೀಮತಿ ಮೆರಾಜ ಬೇಗಂ ಗಂಡ ಹಾಜಿ ಖಾನ್ ಸಾ|| ಸದರ ಮೊಹಲ್ಲಾ ಮೋಮಿನಪುರ ಕಲಬುರಗಿ ಇವರು ಠಾಣೆಗೆ ಹಾಜರಾಗಿ ದೂರು ಸಲ್ಲಿಸಿದ್ದು, ಸದರಿ ದೂರಿನ ಸಾರಾಂಶ ಏನೆಂದರೆ, ದಿನಾಂಕ ೨೪.೦೭.೨೦೧೬ ರಂದು ಹಾಜಿಕಾನ್ ಇವರ ಜೊತೆ ನನ್ನ ಮದುವೆಯಾಗಿರುತ್ತದೆ. ಮದುವೆಯ ಕಾಲಕ್ಕೆ ನನ್ನ ಗಂಡನ ಮನೆಯವರಿಗೆ ೩ ತೊಲೆ ಬಂಗಾರ, ೫೦ ಸಾವಿರ ಹಣ ಮತ್ತು ಎಲ್ಲಾ ಸಾಮಾನುಗಳನ್ನು ಕೊಟ್ಟು ನನ್ನ ತಂದೆತಾಯಿಯವರು ಮದುವೆ ಮಾಡಿಕೊಟ್ಟಿರುತ್ತಾರೆ. ಮದುವೆಯಾಗಿ ೩ ತಿಂಗಳ ವರೆಗೆ ಮಾತ್ರ ನನ್ನ ಗಂಡ ಹಾಗೂ ಗಂಡನ ಸಂಬAಧಿಕರು ನನ್ನನ್ನು ಚೆನ್ನಾಗಿ ನೋಡುಕೊಂಡು, ನಂತರ ನನಗೆ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡಲು ಪ್ರಾರಂಭಿಸಿದರು. ನನ್ನ ಗಂಡ, ಅತ್ತೆ ಪರವೀನ ಬೇಗಂ, ಮಾವ ಮೊಹಮ್ಮದಖಾನ್, ನಾದಿನಿ ಮಾಲನ, ಮತ್ತು ಮೈದುನ ಶಾರುಖಖಾನ್ ಇವರೆಲ್ಲಾ ಸೇರಿ ಇನ್ನು ಹೆಚ್ಚಿನ ವರದಕ್ಷಿಣೆಯನ್ನು ತರುವಂತೆ ದೈಹಿಕವಾಗಿ ಹೊಡೆಬಡೆ ಮಾಡಿ ಅವಾಚ್ಯ ಶಬ್ದಗಳಿಂದ ಬಯದು ಕಿರುಕುಳ ನಿಡಿರುತ್ತಾರೆ. ಈ ಮೊದಲು ದಿನಾಂಕ ೨೨.೧೦.೨೦೧೮ ರಮದು ವರದಕ್ಷಿಣೆ ಕೇಸು ದಾಖಲಿಸಲಾಗಿತ್ತು, ಆಗ ನನ್ನ ಗಂಡ ನನ್ನ ಜೊತೆ ಸರಿಯಾಗಿ ಇರುವದಾಗಿ ಹೇಳಿದ್ದರಿಂದ ನಾನು ಕೇಸು ವಾಪಸ್ಸು ಪಡೆದುಕೊಂಡಿರುತ್ತೇನೆ. ನನ್ನ ಮಾವ ಮೈದುನ ಇವರು ಕೂಡಾ ನನಗೆ ಹೊಡೆಬಡೆ ಮಾಡಿದ್ದಾರೆ. ದಿನಾಂಕ ೦೨.೧೨.೨೦೨೧ ರಂದು ಮಧ್ಯಾಹ್ನ ೧ ಗಂಟೆಗೆ ನನ್ನ ಗಂಡ ಹಾಗೂ ಗಂಡನ ಮನೆಯವರು ಎಲ್ಲರೂ ಸೇರಿ ನನ್ನ ತವರು ಮನೆಗೆ ಬಂದು ನನ್ನನ್ನು ಮತ್ತು ನನ್ನ ತಂದೆ ತಾಯಿಯವರಿಗೆ ಹೊಡೆಬಡೆ ಮಾಡಿ ಅವಾಚ್ಯ ಶಬ್ದಗಳಿಂದ ಬೈದಿದ್ದಾರೆ. ನನ್ನ ಗಂಡನ ಮನೆಯವರು ನೀಡುತ್ತಿರುವ ವರದಕ್ಷಿಣೆ ಕಿರುಕುಳ ಬಗ್ಗೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರಿನ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

ಸಂಚಾರಿ-೦೨ ಪೊಲೀಸ ಠಾಣೆ :- ಇಂದು ಮಾನ್ಯರವರಲ್ಲಿ ಅರಿಕೆ ಮಾಡಿಕೊಳ್ಳುವುದೆನೆಂದರೆ, ಇಂದು ದಿನಾಂಕ ೦೨/೧೨/೨೦೨೧ ರಂದು ೧೦-೩೦ ಪಿ.ಎಮ್ ಕ್ಕೆ ರಾಧಾಬಾಯಿ ಗಂಡ ಬಸವರಾಜ ಮ್ಯಾಕೇರಿ ವ; ೪೫ ರ‍್ಷ ಜಾ; ಪ.ಜಾತಿ[ಹೊಲೆಯ] ಉ; ಕೂಲಿ ಕೆಲಸ ಸಾ; ಮುಛಖೇಢ ತಾ; ಚಿತ್ತಾಪುರ ಹಾ;ವ; ಹೌಸಿಂಗ್ ಬರ‍್ಡ ಕಾಲೋನಿ ಬಾರಾಹಿಲ್ಸ್ ಕಲಬುರಗಿ ಇವರು ಪೊಲೀಸ್ ಠಾಣೆಗೆ ಹಾಜರಾಗಿ ಹೇಳಿಕೆ ಫರ‍್ಯಾದಿ ನೀಡಿದ್ದು ಸಾರಂಶವೆನೆಂದರೆ, ಇಂದು ದಿನಾಂಕ ೦೨/೧೨/೨೦೨೧ ರಂದು ಬೆಳಿಗ್ಗೆ ನಾನು ನನ್ನ ಗಂಡ ಬಸವರಾಜ ಇಬ್ಬರೂ ಕೂಡಿಕೊಂಡು ಕಾಂಕರೇಟ್ ಕೂಲಿ ಕೆಲಸಕ್ಕೆ ಮುಂಜಾನೆ ಹೋಗಿ ಸಾಯಾಂಕಾಲದಷ್ಟಿಗೆ ನಾನು ಮನೆಗೆ ಬಂದೆನು ಮುಂದೆ ೫-೩೦ ಗಂಟೆ ಸುಮಾರಿಗೆ ನಮ್ಮ ದೊಡ್ಡ ಅತ್ತೆ ಕಸ್ತೂರಿಬಾಯಿ ಗಂಡ ಕಾಮಣ್ಣಾ ಹಾಗೂ ಅವರ ಸೊಸೆ ಸವಿತಾ ಇವರು ನನಗೆ ಪೋನ್ ಮಾಡಿ ವಿಷಯ ತಿಳಿಸಿದೆನೆಂದರೆ ಈಗ ೫-೧೫ ಗಂಟೆ ಸುಮಾರಿಗೆ ಮಗ ಬಸವರಾಜ [ನಿನ್ನ ಗಂಡ] ಈತನು ಲೇಬರ ಕೆಲಸ ಮುಗಿಸಿಕೊಂಡು ನಡೆದುಕೊಂಡು ಬಾರಾಹಿಲ್ಸ್ ಪ್ಯಾಮಿಲಿ ಬಜಾರ ಹತ್ತಿರ ನಡೆದುಕೊಂಡು ಬರುತ್ತಿರುವಾಗ ಹಿಂದುಗಡೆ ರೋಡಿನಿಂದ ಒಂದು ಸ್ಕೂಲ್ ಬಸ್ ನೇದ್ದರ ಚಾಲಕನು ಅತೀವೇಗದಿಂದ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಬಸವರಾಜನಿಗೆ ಡಿಕ್ಕಿ ಹೊಡೆದು ಆತನಿಗೆ ಬಲಗಡೆ ಮೆಲಕಿಗೆ ರಕ್ತಗಾಯ, ಎಡಗಾಲಿ ತೊಡೆಯ ಭಾಗಕ್ಕೆ ಭಾರಿಗಾಯವಾಗಿ ಕಾಲು ಮುರಿದಿದ್ದು ಎರಡು ಮುಂಗೈ ಹತ್ತಿರ ರಕ್ತಗಾಯವಾಗಿದ್ದು ಬೆಹೋಷ ಸ್ಥಿತಿಯಲ್ಲಿ ಬಿದಿರುತ್ತಾನೆ ಸ್ಕೂಲ್ ಬಸ್ ಚಾಲಕನು ಹೌಸಿಂಗ್ ಬರ‍್ಡ ಕಾಲೋನಿ ಕಡೆಗೆ ಓಡಿಸಿಕೊಂಡು ಹೋಗಿರುತ್ತಾನೆ ಅಂತಾ ತಿಳಿಸಿದಕ್ಕೆ ನಾನು ಗಾಬರಿಗೊಂಡು ಮಗ ಸಾಗರ ಇತನೊಂದಿಗೆ ಘಟನಾ ಸ್ಥಳಕ್ಕೆ ಬಂದು ಗಂಡನನ್ನು ನೋಡಲಾಗಿ ಮೇಲಿನಂತೆ ಗಾಯಗಳಾಗಿದ್ದು ಅತ್ತೆ ಮತ್ತು ಸೊಸೆಗೆ ವಿಚಾರಿಸಲು ಈ ಮೇಲಿನ ವಿಷಯವನೆ ತಿಳಿಸಿದರು ಗಂಡನವರು ಮಾತನಾಡಲಿಲ್ಲಾ ಕೊಡಲೇ ಯಾವುದೋ ಒಂದು ಖಾಸಗಿ ಅಂಬುಲೈನ್ಸ್ ನಲ್ಲಿ ಹಾಕಿಕೊಂಡು ಕಲಬುರಗಿ ಸರಕಾರಿ ಆಸ್ಪತ್ರೆಗೆ ತೆಗೆದುಕೊಂಡು ಹೋಗಿ ಸೇರಿಕೆ ಮಾಡಿದೇವು ಮುಂದೆ ವಿಚಾರಣೆಯಲ್ಲಿ ಅದೆ ಏರಿಯಾದವರು ಒಬ್ಬರೂ ಸ್ಕೂಲ ಬಸ್ಸಿನ ನಂಬರ ನೋಡಿರುತ್ತಾರೆ ಎಂದು ಗೋತ್ತಾಗಿದ್ದು ನಂತರ ಆ ನಂಬರ ತಮಗೆ ನೋಡಲಾಗುವುದು. ಮುಂದೆ ನನ್ನ ಗಂಡನವರು ಸರಕಾರಿ ಆಸ್ಪತ್ರೆ ಕಲಬುರಗಿಯಲ್ಲಿ ಒಳರೋಗಿಯಾಗಿ ಉಪಚಾರ ಪಡೆಯುತ್ತಿರುವಾಗ ರಾತ್ರಿ ೭-೩೦ ಗಂಟೆಯ ನಂತರ ಮೃತ ಪಟ್ಟಿರುವುದಾಗಿ ಸರಕಾರಿ ಆಸ್ಪತ್ರೆಯ ವೈದ್ಯರು ತಿಳಿಸಿರುತ್ತಾರೆ, ನಂತರ ನಾನು ಮತ್ತು ಮಗ ಸಾಗರ ವಿಚಾರಣೆ ಮಾಡಿಕೊಂಡು ಠಾಣೆಗೆ ಬಂದಿರುತ್ತೇವೆ, ಕಾರಣ ನನ್ನ ಗಂಡ ಬಸವರಾಜ ಇವರು ನಡೆದುಕೊಂಡು ಮನೆ ಕಡೆಗೆ ಬರುತ್ತಿರುವಾಗ ಸಾಯಂಕಾಲ ೫-೧೫ ಗಂಟೆ ಸುಮಾರಿಗೆ ಹಿಂದಿನ ರೋಡಿನಿಂದ ಒಂದು ಸ್ಕೂಲ ಬಸ್ಸಿನ ಚಾಲಕನು ಅತೀವೇಗ ಮತ್ತು ಅಲಕ್ಷತನದಿಂದ ನಡೆಸಿ ಗಂಡನಿಗೆ ಡಿಕ್ಕಿ ಹೊಡೆದು ಪರಿಣಾಮ ಗಂಡನವರು ಭಾರಿಗಾಯಗೊಂಡು ಉಪಚಾರ ಕಾಲದಲ್ಲಿ ಸರಕಾರಿ ಆಸ್ಪತ್ರೆ ಕಲಬುರಗಿಯಲ್ಲಿ ಮೃತಪಟ್ಟಿರುತ್ತಾರೆ, ಅಪಘಾತ ಪಡಿಸಿದ ಸ್ಕೂಲ್ ಬಸ್ ಮತ್ತು ಬಸ್ಸಿನ ಚಾಲಕನನ್ನು ಪತ್ತೆ ಮಾಡಿ ಕಾನೂನು ಕ್ರಮ ಕೈಗೊಳ್ಳಬೇಕು ಅಂತಾ ಕೊಟ್ಟ ಫರ‍್ಯಾದಿ ಹೇಳಿಕೆ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

Last Updated: 14-12-2021 11:55 AM Updated By: ADMIN


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

 • Copyright Policy
 • Hyperlinking Policy
 • Security Policy
 • Terms & Conditions
 • Privacy Policy
 • Help
 • Screen Reader Access
 • Guidelines

Visitors

 • Last Updated​ :
 • Visitors Counter :
 • Version :
CONTENT OWNED AND MAINTAINED BY : Kalaburagi City Police
Designed, Developed and Hosted by: Center for e-Governance - Web Portal, Government of Karnataka © 2024, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080