ಅಭಿಪ್ರಾಯ / ಸಲಹೆಗಳು

ಆರ್.ಜಿ ನಗರ ಪೊಲೀಸ್‌ ಠಾಣೆ :- ದಿನಾಂಕಃ 02.11.2023 ರಂದು ಮದ್ಯಾಹ್ನ 1:00 ಗಂಟೆಯ ಸುಮಾರಿಗೆ ಚನ್ನಬಸಪ್ಪ ತಂದೆ ಶಿವಲಿಂಗಪ್ಪ ಸಾತಳಗಾಂವ ವಯ: 60, ಉ: ಕೂಲಿ ಕೆಲಸ ಸಾ: ಗಾಂಧಿ ಚೌಕ ಆಳಂದ ರೋಡ ಕಲಬುರಗಿ ರವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಗಣಿಕೀಕೃತ ಮಾಡಿಸಿದ ದೂರು ಹಾಜರಪಡಿಸಿದರ ಸಾರಾಂಶವೆನೆಂದರೆ ನನಗೆ ಚೌಡಪ್ಪ ತಂದೆ ಚನ್ನಬಸಪ್ಪ ಸಾತಳಗಾಂವ ಮಗ ಇರುತ್ತಾನೆ. ಈತನಗೆ ಮದುವೆ ಮಾಡಿಕೊಟ್ಟಿದ್ದು, ಅವನಿಗೆ ಎರಡು ಹೆಣ್ಣು ಮಕ್ಕಳು ಇರುತ್ತಾರೆ. ಈತನು ತನ್ನ ಸಂಸಾರ ನಿಬಾಹಿಸಿಕೊಳ್ಳಲು ಒಂದು ಕೆಎ 32 ಸಿ 9028 ಸಿಪ್ಟ ಡಿಜೈರ್ ಖರೀದಿಸಿದ್ದು ಬಾಡಿಗೆಯಿಂದ ಹೋಗಿ ಬರುವುದು ಮಾಡುತ್ತಾನೆ. ಹೀಗೆ ಇರುವಾಗ ದಿನಾಂಕ: 28.10.2023 ರಂದು ಶನಿವಾರ ಬೆಳಿಗ್ಗೆ 0830 ಗಂಟೆ ಸುಮಾರಿಗೆ ನನ್ನ ಮಗ ಚೌಡಪ್ಪ ಈತನು ಸ್ವಲ್ಪ ನನ್ನ ಸ್ವಂತ ಕೆಲಸ ಇದೆ ಹೋಗಿ ಬರುತ್ತೇನೆ ಅಂತಾ ಹೇಳಿ ಹೋದವನು ಮರಳಿ ಮನೆಗೆ ಬಂದಿರುವದಿಲ್ಲ. ನನ್ನ ಮಗ ಉಪಯೋಗಿಸಿದ್ದ ಮೊಬೈಲ ನಂ: 8855945777 ನೇದ್ದಕ್ಕೆ ಫೋನ್ ಮಾಡಿದಾಗ ಸ್ವಚ್ಛ ಆಫ ಬಂದಿರುತ್ತದೆ. ಗಾಬರಿಗೊಂಡು ನಾನು ಮತ್ತು ನನ್ನ ಸಂಬಂಧಿಕರು ಎಲ್ಲಾ ಕಡೆಗಳಲ್ಲಿ ಹುಡುಕಾಡಿದ್ದು ಸಿಕ್ಕಿರುವದಿಲ್ಲ. ನನ್ನ ಮಗ ಕಾಣೆಯಾದ ಬಗ್ಗೆ ನಮ್ಮ ಕುಟುಂಬದಲ್ಲಿ ಹಾಗೂ ಸಂಬಂಧಿಕರಲ್ಲಿ ವಿಚಾರಿಸಿಕೊಂಡು ಇಂದು ಠಾಣೆಗೆ ಬಂದು ದೂರು ಕೊಡುತ್ತಿದ್ದೆನೆ. ಕಾರಣ ನನ್ನ ಮಗ ಸಿಗದ ಇರುವ ಕಾರಣ ಇಂದು ತಡವಾಗಿ ಠಾಣೆಗೆ ಬಂದು ದೂರು ಕೊಡುತ್ತಿದ್ದೇನೆ. ನನ್ನ ಗಂಡನ ಚಹರಾ ಪಟ್ಟಿ ಇದರಂತೆ ಇರುತ್ತದೆ. ಕಾಣೆಯಾದವರ ಹೆಸರು; ಚೌಡಪ್ಪ, ವಯಸ್ಸು; 35 ವರ್ಷ, ಲಿಂಗ; ಗಂಡು, ಕೂದಲು; ಕಪ್ಪು ಕೂದಲು, ಮೈಬಣ್ಣ; ಸಾದಾ ಕಪ್ಪು ಮೈ ಬಣ್ಣ, ಮುಖ; ಗೋಲು ಮುಖ, ಮೈಕಟ್ಟು; ಸಾಧಾರಣ ಮೈಕಟ್ಟು, ದರಸಿದ ಉಡಪುಗಳು; ಬಿಳಿ ಬಣ್ಣದ ಶರ್ಟ, ಬಿಳಿ ಬಣ್ಣದ  ಪ್ಯಾಂಟ, ಮಾತನಾಡುವ ಭಾಷೆ; ಕನ್ನಡ. ಹಿಂದಿ. ಕಾರಣ ಮಾನ್ಯರವರು ಕಾಣೆಯಾದ ನನ್ನ ಮಗ ಚೌಡಪ್ಪ ತಂದೆ ಚನ್ನಬಸಪ್ಪ ಸಾತಳಗಾಂವ ಇವರನ್ನು ಹುಡುಕಿ ಕೊಡಬೇಕೆಂದು ಮಾನ್ಯರವರಲ್ಲಿ ವಿನಂತಿಸಿಕೊಳ್ಳುತ್ತೇನೆ ಅಂತ ಇತ್ಯಾದಿಯಾಗಿ ದೂರು ನೀಡಿದರ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.167/2023 ಕಲಂ.ಮನುಷ್ಯ ಕಾಣೆ ನೇದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡ ಬಗ್ಗೆ ವರದಿ.

 

 

ಚೌಕ ಪೊಲೀಸ್‌ ಠಾಣೆ:- ದಿನಾಂಕ:02.11.2023ರಂದು ರಾತ್ರಿ 09.00 ಗಂಟೆಗೆ  ಫಿರ್ಯಾದುದಾರರಾದ ಶ್ರೀಮತಿ ಜ್ಯೋತಿ ಗಂಡ ಸಂದೀಪ ಕಾಸರ ವಯ:29 ವರ್ಷ ಉ:ಮನೆಗೆಲಸ ಸಾ:ಪ್ಲಾಟ ನಂ.92,T-9-587/21A1/92V ಸ್ವಾಮಿ ವಿವೇಕಾನಂದ ನಗರ ಆದರ್ಶ ಐ.ಟಿ.ಐ ಕಾಲೇಜ ಹತ್ತಿರ ಆಳಂದ ರೋಡ ಕಲಬುರಗಿ ರವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಗಣಿಕೀಕೃತ ಮಾಡಿಸಿದ ಫಿರ್ಯಾಧಿ ದೂರು ಅರ್ಜಿ  ಸಲ್ಲಿಸಿದ್ದು, ಸದರಿ ಫಿರ್ಯಾದಿ ಅರ್ಜಿಯ ಸಾರಾಂಶವೆನೆಂದರೆ, ನಾನು ಜ್ಯೋತಿ ಗಂಡ ಸಂದೀಪ ಕಾಸರ ವಯ:29 ವರ್ಷ ಉ:ಮನೆಗೆಲಸ ಸಾ:ಪ್ಲಾಟ ನಂ.92,T-9-587/21A1/92V ಸ್ವಾಮಿ ವಿವೇಕಾನಂದ ನಗರ ಆದರ್ಶ ಐ.ಟಿ.ಐ ಕಾಲೇಜ ಹತ್ತಿರ ಆಳಂದ ರೋಡ ಕಲಬುರಗಿ ಆಗಿದ್ದು, ಈ ಮೂಲಕ ತಮಗೆ ದೂರು ಕೊಡುವುದೇನೆಂದರೆ, ನಮ್ಮ ಆಳಂದ ಪಟ್ಟಣದಲ್ಲಿ ಲಾಡ್ಲೇ ಮಶಾಕ ದರ್ಗಾದ ಜಾತ್ರೆ ಇರುವುದರಿಂದ ದಿನಾಂಕ:27.10.2023 ರಂದು ಆಳಂದ ನಗರಕ್ಕೆ ಹೋಗಿ ಜಾತ್ರೆ ಮುಗಿದ ನಂತರ ನಮ್ಮ ತಂದೆ ತಾಯಿಯವರ ಹತ್ತಿರ  ಉಳಿದುಕೊಂಡು  ಇಂದು ದಿನಾಂಕ:02.11.2023 ರಂದು ಕಲಬುರಗಿಗೆ ಬರುವ ಸಂಬಂಧವಾಗಿ ನನ್ನ ಎಲ್ಲಾ ಬಟ್ಟೆಬರೆಗಳನ್ನು ಮತ್ತು ಬಂಗಾರ ಮತ್ತು ಬೆಳ್ಳಿಯ ಆಭರಣಗಳನ್ನು ಒಂದು ಸ್ಟೀಲ ಡಬ್ಬಿಯಲ್ಲಿಟ್ಟು ನನ್ನ ಲಗೇಜ ಬ್ಯಾಗಿನಲ್ಲಿ ಕೆಳಗಡೆ ಇಟ್ಟು ಮೇಲ್ಗಡೆ ಬಟ್ಟೆ ಹಾಕಿಕೊಂಡು  ಮಧ್ಯಾಹ್ನ 1.00 ಗಂಟೆ ಸುಮಾರಿಗೆ ಕಲಬುರಗಿಗೆ ಬರುವ ಕುರಿತು ಆಳಂದ ಪಟ್ಟಣದ ಬಸ್ ಸ್ಟ್ಯಾಂಡಿಗೆ ಬಂದು  ಆಳಂದದಿಂದ ಕಲಬುರಗಿ ಬರುವ ಬಸ್ಸಿಗೆ ಹತ್ತಿಕೊಂಡೆನು. ನಂತರ ಮಧ್ಯಾಹ್ನ 2.00 ಗಂಟೆಗೆ ಆಳಂದ ಚಕ್ಕಪೋಸ್ಟ ಹತ್ತಿರ ಲಗೇಜ ಸಮೇತವಾಗಿ ಇಳಿದು ರೋಡ ಕ್ರಾಸ ಮಾಡಿ ಆಳಂದ ಚಕ್ಕಪೋಸ್ಟ ಹತ್ತಿರದ ಅಟೋ ಸ್ಟ್ಯಾಂಡದಲ್ಲಿ ನಿಂತಿರುವ ಒಂದು ಅಟೋ ಡ್ರೈವರನಿಗೆ ಸ್ವಾಮಿ ವಿವೇಕಾನಂದ ನಗರ ಬಡಾವಣೆಗೆ ಹೋಗುವ ಕುರಿತು ಅಟೋದವನಿಗೆ ಫುಲ್ ಬಾಡಿಗೆ ಮಾತನಾಡಿ ನಾನು ನನ್ನ 2 ಮಕ್ಕಳು ಹಾಗೂ 2 ಲಗೇಜ ಬ್ಯಾಗುಗಳೊಂದಿಗೆ ಅಟೋದಲ್ಲಿ ಕುಳಿತುಕೊಂಡೆನು ಅಷ್ಟರಲ್ಲಿ 3ಜನ ಹೆಣ್ಣುಮಕ್ಕಳು ಬಂದು ಅಟೋ ಚಾಲಕನಿಗೆ ನಮಗೆ ಡಬರಾಬಾದ ಕ್ರಾಸಗೆ ಹೋಗಬೇಕು ಅಂತ ಹೇಳಿದಾಗ ಚಾಲಕನು ನಾನು ಖಾದ್ರಿ ಚೌಕ ಕಡೆಗೆ ಹೋಗುತ್ತೇನೆ ಅಂದಾಗ ಆಯಿತು ನಮ್ಮನ್ನು ಕೂಡ ಖಾದ್ರಿ ಚೌಕವರೆಗೆ ಕರೆದುಕೊಂಡು ಹೋಗಿ ಬಿಡುವಂತೆ ಹೇಳಿದಾಗ ಅಟೋ ಚಾಲಕನು ಆಯಿತು ಅಂತ ಹೇಳಿದಾಗ ಹಿಂದಿನ ಶೀಟಿನ ನನ್ನ ಪಕ್ಕದಲ್ಲಿ ಇಬ್ಬರೂ ಹೆಣ್ಣುಮಕ್ಕಳು ಕುಳಿತು ಕೊಂಡರು ಇನ್ನೋಬ್ಬಳು ಅಟೋ ಚಾಲಕನ ಹತ್ತಿರ ಕುಳಿತುಕೊಂಡಳು.ನನ್ನ ಹತ್ತಿರ ಇರುವ ಲಗೇಜ ಬ್ಯಾಗನ್ನು ಕಾಲಿನ ಹತ್ತಿರ ಕೆಳಗಡೆ ಇಟ್ಟಿದ್ದೇನು. ನನ್ನ ಪಕ್ಕದಲ್ಲಿ ಕುಳಿತಿರುವ ಒಬ್ಬಳು ಹೆಣ್ಣು ಮಗಳು ನನಗೆ ಕಾಲು ನೋವು ಆಗುತ್ತಿದೆ ಅಂತ ಅನ್ನುತ್ತಾ ಸುಮಾರು ಬಾರಿ ಕೆಳಗೆ ಕಾಲನ್ನು ತುರಿಸಿಕೊಂಡ ಹಾಗೇ ಮಾಡುತ್ತಿದ್ದಳು ಆದರೆ ನಾನು ನನ್ನ ಕೈಯಲ್ಲಿ ಮಗು ಇರುವುದರಿಂದ ನಾನು ಹೆಚ್ಚಿಗೆ ಅವಳ ಕಡೆಗೆ ಗಮನ ಕೊಟ್ಟಿರುವುದಿಲ್ಲ. ಸದರಿ ಅಟೋ ಖಾದ್ರಿ ಚೌಕ ಹತ್ತಿರ ಬಂದಾಗ ಅಟೋದಲ್ಲಿ ಕುಳಿತ 3 ಜನ ಹೆಣ್ಣು ಮಕ್ಕಳು ಅಟೋದಿಂದ ಕೆಳಗಡೆ ಇಳಿದು ಹೋದರು. ಅವರು ಹೋದ ನಂತರ ಅಟೋ ಚಾಲಕನು ನೇರವಾಗಿ ಸ್ವಾಮಿ ವಿವೇಕಾನಂದ ನಗರ ಬಡಾವಣೆಯಲ್ಲಿರವ ನಮ್ಮ ಮನೆಗೆ ಮಧ್ಯಾಹ್ನ 2.30 ಗಂಟೆಗೆ ಕರೆದುಕೊಂಡು ಬಂದು ಬಿಟ್ಟನು. ಆಗ ನಾನು ಅಟೋ ಚಾಲಕನಿಗೆ ಮಾತನಾಡಿರುವ ಬಾಡಿಗೆ ಹಣವನ್ನು ನೀಡಿ ಲಗೇಜ ಬ್ಯಾಗಗಳು ಮತ್ತು ಮಕ್ಕಳನ್ನು ಕರೆದುಕೊಂಡು ಮನೆಯ ಒಳಗಡೆ ಹೋಗಿ ಬ್ಯಾಗನ್ನು ನೋಡಿದಾಗಿ ಸದರಿ ಬ್ಯಾಗಿನ ಚೈನ ಸ್ವಲ್ಪ ತೆರೆದಿದ್ದನ್ನು ನೋಡಿ ನಾನು ಬ್ಯಾಗಿನಿಂದ ಬಟ್ಟೆಗಳನ್ನು ಹೊರಗೆ ತೆಗೆದು ಅದರಲ್ಲಿರುವ ಬಂಗಾರ& ಬೆಳ್ಳಿಯ ಆಭರಣಗಳ ಡಬ್ಬಿ ಕಾಣಿಸದೇ ಇರುವುದರಿಂದ ಗಾಬರಿಗೊಂಡು ನನ್ನ ಪತಿಯವರಿಗೆ ಫೋನ ಮಾಡಿ ತಿಳಿಸಿದಾಗ ಅವರು ತಕ್ಷಣ ಮನೆಗೆ ಬಂದ ನಂತರ ಇಬ್ಬರೂ ಕೂಡಿ ಖಾದ್ರಿ ಚೌಕ ಹತ್ತಿರ ಇರುವ ಮಜೀದ ಒಳಗಡೆ ಮತ್ತು ಸುತ್ತಮುತ್ತ ನೋಡಿದ್ದು, ಆದರೆ ಅಟೋದಲ್ಲಿ ಬಂದ ಹೆಣ್ಣುಮಕ್ಕಳು ಯಾರೂ ಕಾಣಲಿಲ್ಲ. ನನ್ನ ಬ್ಯಾಗಿನಲ್ಲಿಟ್ಟ 1) ಬಂಗಾರದ ಮಂಗಳ ಸೂತ್ರ 35ಗ್ರಾಂ ಅಂ.ಕಿ 1,75,000/-ರೂ 2) ಬಂಗಾರದ ಮಕ್ಕಳ ಪಾಟ್ಲಿ 25ಗ್ರಾಂ ಅಂ.ಕಿ 125,000/-ರೂ 3) ಬಂಗಾರದ ಮಕ್ಕಳ ಕೈ ಖಡಾ 10ಗ್ರಾಂ ಅಂ.ಕಿ 50,000/-ರೂ 4) ಬಂಗಾರದ ಚೈನ 06ಗ್ರಾಂ ಅಂ.ಕಿ 30,000/-ರೂ 5) ಬಂಗಾರದ ಕಿವಿಯ ಒಲೆ 03ಗ್ರಾಂ ಅಂ.ಕಿ 15,000/- 6) ಬಂಗಾರದ ಮಕ್ಕಳ ಕೈ ಮಣಿಗಳು 02ಗ್ರಾಂ ಅಂ.ಕಿ.10,000/-ರೂ 7) ಬಂಗಾರದ 2 ಮಕ್ಕಳ ಉಂಗುರ ಒಂದೊಂದು ಗ್ರಾಂವುಳ್ಳವುಗಳು 02ಗ್ರಾಂ ಅಂ.ಕಿ 10,000/-ರೂ 8) ಬಂಗಾರದ ಹೆಣ್ಣುಮಕ್ಕಳ ಮೂಗಿನ ನತ್ತು 1.5ಗ್ರಾಂ ಅಂ.ಕಿ7500/-ರೂ 9) ಬೆಳ್ಳಿಯ ಮಕ್ಕಳ ಹಾಲ್ಗಡಗಾ 5ತೊಲೆ ಅಂ.ಕಿ 3000/-ರೂ 10) ಬೆಳ್ಳಿಯ ಹೆಣ್ಣುಮಕ್ಕಳ ಕಾಲು ಚೈನ 5 ತೊಲೆ ಅಂ.ಕಿ 3000/-ರೂ ಹೀಗೆ ಒಟ್ಟು 84.5 ಗ್ರಾಂ ಬಂಗಾರದ ಆಭರಣಗಳು ಮತ್ತು 10 ತೊಲೆ ಬೆಳ್ಳಿಯ ಆಭರಣಗಳು ಎಲ್ಲವೂ ಸೇರಿ ಅ.ಕಿ. 4,28,500/-ರೂ ಕಿಮ್ಮತ್ತಿನ ಆಭರಣಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಕಾರಣ ನನ್ನ ಲಗೇಜ ಬ್ಯಾಗಿನಲ್ಲಿಟ್ಟಿದ ಬಂಗಾರ ಮತ್ತು ಬೆಳ್ಳಿಯ ಆಭರಣಗಳು ಕಳ್ಳತನ ಮಾಡಿಕೊಂಡು ಹೋದ ಕಳ್ಳರನ್ನು ಪತ್ತೆ ಹಚ್ಚಿ ಅವರ ಮೇಲೆ ಕಾನೂನು ಕ್ರಮ ಜರುಗಿಸಿ ಕಳುವಾದ ನನ್ನ ಬಂಗಾರ ಮತ್ತು ಬೆಳ್ಳಿಯ ಆಭರಣಗಳು ಮರಳಿ ಕೊಡಿಸಬೇಕೆಂದು ತಮ್ಮಲ್ಲಿ ಕೋರುತ್ತೇನೆ ಅಂತ ಕೊಟ್ಟ ಫಿರ್ಯಾದಿಯ ಸಾರಾಂಶದ ಮೇಲಿಂದ ಚೌಕ ಪೊಲೀಸ ಠಾಣೆ ಗುನ್ನೆ ನಂ.212/2023 ಕಲಂ 379 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡ ಬಗ್ಗೆ ವರದಿ.

 

ಸಂಚಾರಿ ಪೊಲೀಸ್‌ ಠಾಣೆ – 02 :- ದಿನಾಂಕ 02/11/2023 ರಂದು ಬೆಳಿಗ್ಗೆ 11-15  ಗಂಟೆಗೆ ಶ್ರೀ ಬಸವರಾಜ ತಂದೆ ನರಸಪ್ಪಾ ಹಡಪದ ಸಾ: ಮಂಗಲಗಿ ಗ್ರಾಮ ಹಾ.ವ. ಶ್ರೀ ನಗರ ಕಸುನೂರ ರೋಡ ಕಲಬುರಗಿ ಇವರು ಠಾಣೆಗೆ ಹಾಜರಾಗಿ ದೂರು ಅರ್ಜಿಯನ್ನು ಹಾಜರಪಡಿಸಿದ್ದರ ಸಾರಂಶವೆನೆಂದರೆ ನನಗೆ ಎರಡು ಜನ ಗಂಡು ಮಕ್ಕಳಿದ್ದು ಸಣ್ಣ ಮಗ ಜಗನ್ನಾಥ ವಯ: 34 ವರ್ಷ ಇತನು ಕಟಿಂಗ ಸಲೂನ ಕೆಲಸ ಮಾಡಿಕೊಂಡು ಇದ್ದನ್ನು. ದಿನಾಂಕ 02-11-2023 ರಂದು ಬೆಳಿಗ್ಗಿನ ಸಮಯದಲ್ಲಿ ನಾನು ಮತ್ತು ನನ್ನ ಸೊಸೆ ರಾಧೀಕಾ ಹಾಗೂ ನನ್ನ ಹೆಂಡತಿ ರತ್ನಮ್ಮಾ ರವರು ಮನೆಯಲ್ಲಿರುವಾಗ ನನ್ನ ಮಗ ಜಗನ್ನಾಥ ಇತನು ಎನ.ವ್ಹಿ ಮೈದಾನದಲ್ಲಿ ವಾಕಿಂಗ ಕುರಿತು ಹೋಗುತ್ತೆನೆ ಅಂತಾ ಮನೆಯ ಮೋಟಾರ ಸೈಕಲ ನಂಬರ ಕೆಎ-32/ಇವಾಯ್-8723 ನೆದ್ದನ್ನು ಚಲಾಯಿಸಿಕೊಂಡು ಹೋದನು. ನಂತರ ನಮ್ಮ ಅಣ್ಣತಮ್ಮಕಿಯ ಸುನೀಲಕುಮಾರ ತಂದೆ ಮಹಾದೇವಪ್ಪಾ ಹಡಪದ ಇವರು ಪೊನ ಮಾಡಿ ನಾನು ಮತ್ತು ವಿವೇಕಾನಂದ ತಂದೆ ಮಾಧವ ಹಡಪದ ಇಬ್ಬರೂ ರಾಜಾಪೂರ ಗ್ರಾಮದ ಕಮಾನ ಹತ್ತೀರ ಬರುವ ಬೇಕರಿ ಹತ್ತೀರ ಇರುವಾಗ ನಿಮ್ಮ ಮಗ ಜಗನ್ನಾಥ ಇತನು ಬೆಳಿಗ್ಗೆ 8-00 ಗಂಟೆ ಸುಮಾರಿಗೆ ಸ್ಟೇಡಿಯಂ ಕಡೆಯಿಂದ ನಿಮ್ಮ ಮನೆಯ ಕಡೆಗೆ ಹೋಗುವ ಕುರಿತು ಮೋಟಾರ ಸೈಕಲನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ರಾಜಾಪೂರ ಗ್ರಾಮದ ಕಮಾನ ಎದುರು ರೋಡ ಮೇಲೆ ಒಮ್ಮಲೇ ಬ್ರೇಕ ಹಾಕಿ ಮೋಟಾರ ಸೈಕಲ ಸ್ಕಿಡ್ ಮಾಡಿ ತನ್ನಿಂದ ತಾನೆ ಮೋಟಾರ ಸೈಕಲ ಮೇಲಿಂದ ಕೆಳಗಡೆ ಬಿದ್ದನ್ನು ಸದರ ಘಟನೆ ನೋಡಿದ ನಾನು ಮತ್ತು ವಿವೇಕಾನಂದ ಇಬ್ಬರೂ ಹೋಗಿ ಆತನಿಗೆ ಎಬ್ಬಿಸಿ ರೋಡ ಪಕ್ಕದಲ್ಲಿ ಮಲಗಿಸಿ ನೋಡಲು ಆತನ ತೆಲೆಯ ಹಿಂದುಗಡೆ ಭಾರಿ ಗುಪ್ತಪೆಟ್ಟು ಮತ್ತು ಬಲಗಾಲು ಮೊಳಕಾಲಿಗೆ ತರಚಿದ ರಕ್ತಗಾಯವಾಗಿ ಬೇಹುಸ ಇದ್ದನ್ನು. ಆತನು ಚಲಾಯಿಸಿಕೊಂಡು ಬಂದಿರುವ ಮೋಟಾರ ಸೈಕಲ ನಂಬರ ಕೆಎ-32/ಇವಾಯ್-8723 ಇರುತ್ತದೆ ಆತನ ಉಪಚಾರ ಕುರಿತು ಒಂದು ಅಂಬುಲೇನ್ಸ ವಾಹನದಲ್ಲಿ ಸರಕಾರಿ ಆಸ್ಪತ್ರೆಗೆ ತಂದು ತುರ್ತುನಿಘಾ ಘಟಕದಲ್ಲಿ ಸೇರಿಕೆ ಮಾಡಲು ವೈದ್ಯರು 8-30 ಗಂಟೆ ಸುಮಾರಿಗೆ ನೋಡಿ ಆಸ್ಪತ್ರೆಗೆ ಬರುವದಕ್ಕಿಂತ ಮುಂಚೆ ಮೃತಪಟ್ಟಿರುತ್ತಾನೆ. ಅಂತಾ ತಿಳಿಸಿತ್ತಾರೆ ಅಂತಾ ತಿಳಿಸಿದ್ದರಿಂದ ನಾನು ಮತ್ತು ನನ್ನ ಹೆಂಡತಿ ರತ್ನಮ್ಮಾ ಹಾಗೂ ಸೊಸೆ ರಾಧೀಕಾ ರವರು ಸರಕಾರಿ ಆಸ್ಪತ್ರೆಗೆ ಬಂದು ನನ್ನ ಮಗ ಜಗನ್ನಾಥ ಇತನಿಗೆ ನೋಡಲು ಆತನಿಗೆ ಮೇಲಿನಂತೆ ಗಾಯಗಳಾಗಿ ಮೃತಪಟ್ಟಿದ್ದು ಸುನೀಲಕುಮಾರ ಮತ್ತು ವಿವೇಕಾನಂದ ಇವರಿಗೆ ವಿಚಾರಿಸಲು ತನ್ನಿಂದ ತಾನೆ ಮೋಟಾರ ಸೈಕಲ ಮೇಲಿಂದ ಬಿದ್ದಿರುತ್ತಾನೆ ಅಂತಾ ತಿಳಿಸಿದರು. ಕಾರಣ ತಾವು ಮುಂದಿನ ಕಾನೂನು ಕ್ರಮ ಜರುಗಿಸಿಬೇಕು ಅಂತಾ ಕೊಟ್ಟ ಫಿರ್ಯಾದಿ ದೂರು ಅರ್ಜಿ ಸಾರಂಶದ ಮೇಲಿಂದ ಠಾಣಾ ಗುನ್ನೆ ನಂ. 292/2023 ಕಲಂ 279, 304(ಎ) ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡ ಬಗ್ಗೆ ವರದಿ.

 

ಸಬ್-‌ ಅರ್ಬನ್‌ ಪೊಲೀಸ್‌ ಠಾಣೆ :- ದಿನಾಂಕ 2/11/2023 ರಂದು 12:00 ಗಂಟೆಗೆ ಫಿರ್ಯಾದಿ ಶ್ರೀ ಸುಭಾಷ ತಂದೆ ಶರಣಪ್ಪ ಪಪ್ಪಾ ವಯ|| 48 ವರ್ಷ ಉ|| ಜೂನಿಯರ್ ಇಂಜಿನಿಯರ್ ಉತ್ತರ ಶಾಖೆ ಗ್ರಾಮೀಣ ಉಪ ವಿಭಾಗ ಜೆಸ್ಕಾಂ ಕಲಬುರಗಿ ಸಾ|| ಗಂಧಿಗುಡಿ ಲೇಔಟ ಶೇಟ್ಟಿ ಟಾಕೀಜ ಹತ್ತಿರ ಕಲಬುರಗಿಯ ನಿವಾಸಿತನಿದ್ದು ನಾನು ಉತ್ತರ ಶಾಖೆ ಗ್ರಾಮೀಣ ಉಪ ವಿಭಾಗ ಜೆಸ್ಕಾಂ ಕಲಬುರಗಿ ಕಛೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತೆನೆ ಹಿಗಿದ್ದು ದಿನಾಂಕ 28.10.2023 ರಂದು ಬೇಳಿಗೆ 10:00 ಗಂಟೆಗೆ ನಮ್ಮ ಕಛೇರಿಯ ವ್ಯಾಪ್ತಿಗೆ ಬರುವ ಕಪನೂರ ಕೆ.ಎ.ಐ.ಡಿ.ಬಿ 2 ನೇ ಹಂತದಲ್ಲಿ ಬರುವ ಕೀಶೋರ ದಾಲಮಿಲ ಬಳಿ ಇರುವ ಪರಿವರ್ತಕ ಕಾರ್ಯ ನಿರ್ವಹಿಸುತ್ತಿಲ್ಲಾ ಅಂತಾ ಮಾಹಿತಿ ಬಂದ ಕೂಡಲೆ ನಾನು ಶೈಲೇಂದ್ರ ಲೈನ್‌ಮ್ಯಾನ ಇತನನ್ನು ಪೋನ ಮಾಡಿ ಸ್ಥಳಕ್ಕೆ ಬೇಟ್ಟಿ ನೀಡಿ ಸ್ಥಳ ಪರಿಶಿಲನೆ ಮಾಡಲು ಹೇಳಿದಾಗ ಆತನು ಕೂಡಲೆ ಶೈಲೇಂದ್ರ ಲೈನ್‌ಮ್ಯಾನ ಸ್ಥಳಕ್ಕೆ ಬೇಟಿ ನೀಡಿ ಸದರಿ ಪರಿವರ್ತಕದಿಂದ ಬಾಟಂ ಡ್ರೇನ್ ವಾಲ ಬಿಚ್ಚಿ ಪರಿವರ್ತಕದಲ್ಲಿಯ ಆಯಿಲ್ ಯಾರೋ ಕಳ್ಳರು ಕಳ್ಳತನ ಮಾಡಿದ್ದಾರೆ ಅಂತಾ ವಿಷಯ ನನಗೆ ಪೋನ ಮಾಡಿ ತಿಳಿಸಿದಾಗ ನಾನು ಮತ್ತು ನಮ್ಮ ಕಛೇರಿಯಲ್ಲಿ ಕರ್ತವ್ಯ ನಿರ್ವಹಿಸುವ ಶರಣಬಸಪ್ಪ ಮೇಕ್ಯಾನಿಕ ಇಬ್ಬರು ಕೂಡಿ ಸ್ಥಳಕ್ಕೆ ಹೊಗಿ ನೋಡಲು ಸದರಿ ಪರಿವರ್ತಕದ 3 ಡಿ.ಓ.ಎಲ್  ಕಟ್ಟ ಆಗಿರುತ್ತದೆ ಅಲ್ಲದೆ ಸ್ವಲ್ಪ ದೂರದಲ್ಲಿ ಪರಿವರ್ತಕದ ಆಯಿಲ್ ಛಲ್ಲಿದನ್ನು ನೋಡಿದೇವು ಯಾರೋ ಕಳ್ಳರು ದಿನಾಂಕ 27.10.2023 ರಂದು ರಾತ್ರಿ ವೇಳೆಯಲ್ಲಿ ನಮ್ಮ ಕೀಶೋರ ದಾಲಮಿಲ ಬಳಿ ಇರುವ 250 ಕೆ.ವಿ.ಎ ಪರಿವರ್ತಕದಿಂದ 454 ಲೀಟರ ಆಯಿಲ್ ಅ||ಕಿ|| 68,100/- ರೂ ಕಿಮ್ಮತಿನ ಪರಿವರ್ತಕದ ಆಯಿಲ್ ಯಾರೋ ಕಳ್ಳರು ದಿನಾಂಕ 27.10.2023 ರ ರಾತ್ರಿ ಅಂದಾಜು 11:00 ಗಂಟೆಯಿAದ ದಿನಾಂಕ 28.10.2023 ರ ಬೇಳಗಿನ 10:00 ಗಂಟೆಯ ಅವಧಿಯಲ್ಲಿ ಯಾರೋ ಕಳ್ಳರು ಪರಿವರ್ತಕದ ಆಯಿಲ್ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ನಂತರ ಈ ವಿಷಯ ನಮ್ಮ ಮೇಲಾಧಿಕಾರಿಗಳಿಗೆ ತಿಳಿಸಿ ಇಂದು ತಡಮಾಡಿ ಬಂದು ನಮ್ಮ ಪರಿವರ್ತಕದ ಆಯಿಲ್ ಕಳ್ಳತನ ಮಾಡಿಕೊಂಡು ಹೋದ ಕಳ್ಳರನ್ನು ಪತ್ತೆಮಾಡಿ ಕಳುವಾದ ಪರಿವರ್ತಕದ ಆಯಿಲ್ ಮರಳಿ ಕೋಡಿಸಲು ವಿನಂತಿ ದೂರು ಅರ್ಜಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 328/2023 ಕಲಂ 379 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡ ಬಗ್ಗೆ ವರದಿ.

 

 

ಸಬ್-‌ ಅರ್ಬನ್‌ ಪೊಲೀಸ್‌ ಠಾಣೆ :- ದಿನಾಂಕ 02/11/2023 ರಂದು ಪಿರ್ಯಾದಿ ಉಮಾದೇವಿ ಗಂಡ ಅಂಬರಾಯ ನೆಲ್ಲೂರು ವಯಾಃ 40 ವರ್ಷ ಉಃಹೊಮ್ ಗಾರ್ಡ ಸಾಃ ಲಂಗರ ಹನುಮಾನ ನಗರ, ಕಲಬುರಗಿ ಮೊ.ನಂ 8277522518 ಇವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಟೈಪ್ ಮಾಡಿಸಿದ ದೂರು ಹಾಜರು ಪಡಿಸಿದ  ಸಾರಾಂಶವೇನೆಂದರೆ  ನಾನು ನನ್ನ ಮಕ್ಕಳ್ಳೊಂದಿಗೆ ಹೊಮ್ ಗಾರ್ಡ ಕೆಲಸ ಮಾಡಿಕೊಂಡು ವಾಸವಾಗಿರುತ್ತೇನೆ. ನನಗೆ ನಾಲ್ಕು ಜನ ಮಕ್ಕಳಿದ್ದು ಎರಡು ಗಂಡು ಎರಡು ಹೆಣ್ಣು ಮಕ್ಕಳು ಇರುತ್ತಾರೆ. ನನ್ನ ಕೊನೆಯ ಮಗನಾದ ಆದಿತ್ಯ ವಯಾಃ 15 ವರ್ಷ ಇವನು ಭಾವನಿ ನಗರದಲ್ಲಿ ಇರುವ ಮಹಾತ್ಮ ಬಸವೇಶ್ವರ ಶಾಳೆಯಲ್ಲಿ 10 ನೇ ತರಗತಿಯಲ್ಲಿ ಓದುತ್ತಿರುತ್ತಾನೆ. ಅವನು 10 ನೇ ತರಗತಿ ಇದ್ದುದ್ದರಿಂದ ನಾನು ಅವನಿಗೆ ಆಗಾಗ ಚೆನ್ನಾಗಿ ಓದಲು ಹೇಳಿರುತ್ತೇನೆ. ಇದರಿಂದಾಗಿ ಮನಸ್ಸಿನ ಮೇಲೆ ಬೇಜಾರು ಮಾಡಿಕೊಂಡು ದಿನಾಂಕ 31/10/2023 ರಂದು ರಾತ್ರಿ 08-30 ಗಂಟೆ ಸುಮಾರಿಗೆ ನನ್ನ ಮಗನಾದ ಆದಿತ್ಯ ಇತನು ಯಾರಿಗೂ ಹೇಳದೆ ಕೇಳದೆ ಮನೆಯಿಂದ ಹೋರಗಡೆ ಹೋದವನು ಮರಳಿ ಮನೆಗೆ ಬಂದಿರುವುದಿಲ್ಲಾ. ನಂತರ ನಾನು ಮತ್ತು ನನ್ನ ಮಕ್ಕಳಾದ ಅಭಿಜೀತ್, ಚೈತ್ರ ಹಾಗೂ ವೈಶಾಲಿ ಎಲ್ಲರೂ ಕೂಡಿ ಕಲಬುರಗಿಯಲ್ಲಿ ಅವನ ಸ್ನೇಹಿತರನ್ನು ಹಾಗೂ ಮಾರ್ಕೆಟ, ಇನ್ನಿತರ ಕಡೆ ಹುಡುಕಾಡಿದೆವು. ನಂತರ ಬಿಗರ ನೆಂಟರ ಹತ್ತಿರ ವಿಚಾರಿಸಿದರು ನನ್ನ ಮಗನ ಬಗ್ಗೆ ಯಾವುದೆ ಮಾಹಿತಿ ಸಿಕ್ಕಿರುವುದಿಲ್ಲಾ. ನಾವು ಎಲ್ಲಾ ಕಡೆಗೆ ಹುಡುಕಾಡಿ ನನ್ನ ಮಗನು ಸಿಗದೇ ಇರುವುದರಿಂದ ಇಂದು ಠಾಣೆಗೆ ತಡವಾಗಿ ಬಂದು ದೂರು ನೀಡುತ್ತಿದ್ದೇನೆ.                                    ನನ್ನ ಮಗನ ಚಹರಾ ಪಟ್ಟಿ ಇದರಂತೆ ಇರುತ್ತದೆ. ಹೆಸರು:-  ಆದಿತ್ಯ ತಂದೆ ಅಂಬರಾಯ ನೆಲ್ಲರೂ ವಯಾ: 15 ವರ್ಷ, ಉ: 10 ನೇ ತರಗತಿ ವಿದ್ಯಾರ್ಥಿ, ಎತ್ತರ:- 4.6 ಇಂಚ, ಬಾಷೆ:- ಕನ್ನಡ ಮತ್ತು ಹಿಂದಿ ಭಾಷೆ ಬಲ್ಲವಳಾಗಿರುತ್ತಾನೆ. ಆಕಾರ:- ಸಾದಾ ಗೋಧಿ ಮೈಬಣ್ಣ ,ದುಂಡು ಮುಖ ಕಪ್ಪು ಕೂದಲು. ಬಟ್ಟೆ:- ತಿಳಿ ಹಳದಿ ಬಣ್ಣದ ಶರ್ಟ, ಕಡು ನೀಲಿ ಬಣ್ಣದ ಪ್ಯಾಂಟ್ ಧರಿಸಿರುತ್ತಾನೆ.  ಕಾರಣ ನನ್ನ ಮಗನಾದ ಆದಿತ್ಯ ಇವನನ್ನು ಪತ್ತೆ ಮಾಡಿಕೊಡಬೇಕು ಅಂತಾ ಈ ದೂರಿನ ಮೂಲಕ ತಮ್ಮಲ್ಲಿ ವಿನಂತಿಸಿಕೊಳ್ಳಲಾಗಿದೆ. ದೂರು ಅರ್ಜಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 329/2023 ಕಲಂ 363 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡ ಬಗ್ಗೆ ವರದಿ.

 

 

ಸಿ.ಇ,ಎನ್‌ ಪೊಲೀಸ ಠಾಣೆ :-  ದಿನಾಂಕ: 03/11/2023 ರಂದು 12:30 ಗಂಟೆಗೆ ಪಿರ್ಯಾದಿದಾರರಾದ ಶ್ರೀಮತಿ ಡಾ: ಶುಭಾಂಗಿ ದಿಗಂಬರ ಚಿಕ್ತೆ ಗಂಡ ರಮೇಶ ಪಿ. ಪಾಟೀಲ್ ವಯ: 51 ವರ್ಷ ಉ: ಪ್ರೋಫೆಸರ್ ವಿಶ್ವೇಶ್ವರಯ್ಯ ಟೆಕ್ನಾಲಾಜಿಕಲ್ ಯುನಿವರ್ಸಿಟಿ, ಕಲಬುರಗಿ ಸಾ: ಮನೆ ನಂ. ಹೆಚ್.ಎನ್.2-908/45/35/36, ಶಶಾಂಕ ಪ್ಯಾಲೇಸ್, ಜಾಗೃತಿ ಕಾಲೋನಿ, ಸ್ವಸ್ತಿಕ ನಗರ, ಲಕ್ಷ್ಮಿ ಗಾರ್ಡನ ಬಡಾವಣೆ, ಸೇಡಂ ರೋಡ, ಕಲಬುರಗಿ ಮೋಬೈಲ್ ನಂ. 9448716838 ಇವರು ಠಾಣೆಗೆ ಹಾಜರಾಗಿ ಲಿಖಿತ ದೂರು ಸಲ್ಲಿಸಿದ್ದು ಸಾರಾಂಶವೆನೆಂದರೆ, ದಿನಾಂಕ 31/10/2023 ರಂದು ಸಮಯ ಸಾಯಂಕಾಲ 7:15 ಗಂಟೆ ಸುಮಾರಿಗೆ ನಾನು ಮನೆಯಲ್ಲಿದ್ದಾಗ ನನ್ನ ಮೋಬೈಲನಲ್ಲಿ ಫೇಸ್ಬುಕ್ ಬ್ರೋಸಿಂಗ್ ಮಾಡುತ್ತಿದ್ದಾಗ ಅಚಾನಕ್ಕಾಗಿ   J J Communication Mobile Shop ಎಂಬ ಹೆಸರಿನಲ್ಲಿ https://www.7354985835.com ಲಿಂಕ್ ಬಂದಿದ್ದನ್ನು ನೋಡಿ ಅದನ್ನು ಕ್ಲೀಕ್ ಮಾಡಿ ನೋಡಲಾಗಿ ಆಪಲ್ ಕಂಪನಿಯ ಐಫೋನ್ 15 ಪ್ರೋ ಮೋಬೈಲನ್ನು ಕೇವಲ 35,000/- ರೂಪಾಯಿ ಮಾರಾಟ ಮಾಡುತ್ತಿರುವ ಜಾಹಿರಾತನ್ನು ಕಂಡು ನಾನು ಆರ್ಕಶಿತಳಾಗಿ ಕೂಡಲೇ ಲಿಂಕ್ ಕೆಳಗಡೆ ಇರುವ ಮೋಬೈಲ್ ನಂ. 7354985835 ಗೆ ಕರೆ ಮಾಡಿದಾಗ ಕರೆಯನ್ನು ಸ್ವೀಕರಿಸಿ ಹಿಂದಿ ಬಾಷೆಯಲ್ಲಿ ಜೆ.ಜೆ. ಕಮ್ಯೂನಿಷನ್ ಮೋಬೈಲ್ ಶಾಪ್ ಸಂದೀಪ್ ಬಾತ್ ಕರ್ ರಹಾ ಹೂ ಅಂತಾ ಹೇಳಿದಾಗ ನಾನು ಆಪಲ್ ಕಂಪನಿಯ ಐಫೋನ್ 15 ಪ್ರೋ ಜಾಹಿರಾತು ನೋಡಿದ್ದು ಈ ಮೋಬೈಲ್ ನಿಮ್ಮ ಶಾಪನಲ್ಲಿ ಸ್ಟಾಕ್ ಇದೆಯೇ ಅಂತಾ ಕೇಳಿದಾಗ ಸಂದೀಪ್ ಈತನು ಐಫೋನ್ 15 ಪ್ರೋ ಸ್ಟಾಕ್ ಇದೆ ಮತ್ತು ಇದು ಕ್ಯಾಶ್ ಆನ್ ಡೆಲಿವರಿಯಲ್ಲಿ ಲಭ್ಯವಿದೆ ಅಂತಾ ನಂಬಿಕೆ ಬರುವಂತೆ ಹೇಳಿ ನಿಮಗೆ ಐಫೋನ್ ಕಳುಹಿಸಲಾಗುವುದು ಕೂಡಲೇ ಟೋಕನ್ ಅಮೌಂಟ್ ರೂ. 5,000=00 ಖಾತೆ ಸಂಖ್ಯೆ 8748908435 ಗೆ ತಕ್ಷಣ ಜಮಾ ಮಾಡಿ ಅಂತಾ ತಿಳಿಸಿದಾಗ ನನ್ನ ಫೋನ್ ಪೇ ಮೂಲಕ ರೂ. 5,000=00 ಜಮಾ ಮಾಡಿರುತ್ತೇನೆ. ಸ್ವಲ್ಪ ಸಮಯದ ನಂತರ ನನ್ನ ಮೋಬೈಲಗೆ ಸಂದೀಪ ಈತನು ಕರೆ ಮಾಡಿ ವಾಟ್ಸಅಪ್ನಲ್ಲಿ ಬಿಲ್ ಕಳುಹಿಸಲಾಗಿದೆ ಅಂತಾ ತಿಳಿಸಿ ನೀವು 35,000/- ರೂಪಾಯಿ ಫೋನ್ ಪೇ ಮಾಡಿದರೆ ನಿಮಗೆ ಹಣ ವಾಪಸ್ ಮಾಡಲಾಗುವುದು ಅಂತಾ ನಂಬಿಕೆ ಬರುವಂತೆ ಹೇಳಿದಾಗ ನಾನು ನನ್ನ ಫೋನ್ ಪೇ ಮೂಲಕ ಖಾತೆ ಸಂಖ್ಯೆ 8748908435 ನೇದ್ದಕ್ಕೆ ರೂ. 35,000/- ಜಮಾ ಮಾಡಿರುತ್ತೇನೆ. ಸ್ವಲ್ಪ ಸಮಯದ ನಂತರ ಪುನಃ ಸಂದೀಪ ಈತನು ಕರೆ ಮಾಡಿ ಇಲ್ಲಾ ನೀವು 35,000/- ಹಣ ಹಾಕಿದ್ದಿರಿ ಸರ್ವರ್ ರಿಸಿವ್ ಮಾಡುತ್ತಿಲ್ಲಾ 30,000/- ರೂಪಾಯಿ ಕಳುಹಿಸಿ ನಿಮ್ಮ ಎಲ್ಲಾ ಹಣವನ್ನು ವಾಪಸ್ ಫೋ ಪೇ ಮೂಲಕ ಮರಳಿಸುತ್ತೇನೆ ಅಂತಾ ಹೇಳಿದಾಗ ನಾನು ಅವನ ಮಾತನ್ನು ನಂಬಿ ಪುನಃ ನನ್ನ ಫೋನ್ ಪೇ ಮೂಲಕ 30,000/- ರೂಪಾಯಿ ಕಳುಹಿಸಿರುತ್ತೆ. ನಂತರ ಸಂದೀಪ ಈತನ ಮೋಬೈಲ್ ನಂಬರಗೆ ಕರೆ ಮಾಡಲಾಗಿ ಸ್ವೀಚ್ ಆಫ್ ಬರುತ್ತಿದ್ದರಿಂದ ನಾನು ಮೋಸ ಹೋಗಿದ್ದು ಖಚಿತಪಡಿಸಿಕೊಂಡು ಸೈಬರ್ ಹೆಲ್ಪಲೈನ್ ನಂಬರ್ 1930 ನೆದ್ದಕ್ಕೆ ಕರೆ ಮಾಡಿ ಕಂಪ್ಲೇಂಟ್ ದಾಖಲಿಸಿದ್ದು ಅಕ್ನಾಲೆಜಮೆಂಟ್ ನಂಬರ್ 31610230039771 ಅಂತಾ ನೀಡಿರುತ್ತಾರೆ.  ಕಾರಣ ನನಗೆ ಜೆಜೆ ಕಮ್ಯೂನಿಕೇಷನ್ ಮೋಬೈಲ್ ಶಾಪ್ ನಕಲಿ ಲಿಂಕ್ ಕಳುಹಿಸಿ ಆಪಲ್ 15 ಪ್ರೋ ಮೋಬೈಲ್ ಕಡಿಮೆ ಬೆಲೆಗೆ ಸಿಗುತ್ತದೆ ಅಂತಾ ಜಾಹಿರಾತನ್ನು ಹಾಕಿ ನನಗೆ ಮೋಸ ಮಾಡುವ ಉದ್ದೇಶದಿಂದ ಅಪ್ರಮಾಣಿಕತೆಯಿಂದ ನನ್ನ ಫೋನ್ ಪೇ ಮೂಲಕ ಹಂತ ಹಂತವಾಗಿ ಒಟ್ಟು 70,000=00 ರೂಪಾಯಿ ಹಣ ಮೋಸ ಮತ್ತು ವಂಚನೆಯಿಂದ ಪಡೆದುಕೊಂಡು ಮರಳಿ ನೀಡದೇ ಮೋಸ ಮಾಡಿದವನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ವಿನಂತಿ ಅಂತಾ ನೀಡಿದ ದೂರಿನ ಸಾರಾಂಶದ ಮೇಲಿಂದಾ ಠಾಣಾ ಗುನ್ನೆ ನಂ. 45/2023 ಕಲಂ 66 (ಸಿ), 66 (ಡಿ) ಐ.ಟಿ ಆಕ್ಟ್ ಮತ್ತು 419, 420 ಐಪಿಸಿ ರಿತ್ಯ ಪ್ರಕರಣ ದಾಖಲಿಸಿಕೊಂಡ ಬಗ್ಗೆ ವರದಿ.

 

 

ಸಂಚಾರಿ ಪೊಲೀಸ ಠಾಣೆ-1 :-  ದಿನಾಂಕ 03-11-2023 ರಂದು 2:10 ಪಿ.ಎಂ ಕ್ಕೆ ಶ್ರೀ ತಾಂಶಕುಮಾರ ತಂದೆ ದೇವೆಂದ್ರಪ್ಪ ಬಿರಾದಾರ  ಇವರು ಠಾಣೆಗೆ ಹಾಜರಾಗಿ ತಮ್ಮ ತಾಯಿಯಾದ ಸಾವಿತ್ರಿಬಾಯಿ ಗಂಡ ದೇವೆಂದ್ರಪ್ಪ ಬಿರಾದಾರ ವಯ: 60 ವರ್ಷ ಉ: ಕೂಲಿಕೆಲಸ ಸಾ: ಉದನೂರ ತಾ:ಜಿ: ಕಲಬುರಗಿ ರವರ ಕನ್ನಡದಲ್ಲಿ ಟೈಪ್ ಮಾಡಿ ಸಹಿ ಮಾಡಿದ ಫಿರ್ಯಾದಿ ಅರ್ಜಿ ಹಾಜರುಪಡಿಸಿದ್ದು ಫಿರ್ಯಾದಿ ಅರ್ಜಿ ಸಾರಾಂಶವೇನೆಂದರೆ ದಿನಾಂಕ 23-10-2023 ರಂದು ಬೆಳಿಗ್ಗೆ ನಾನು ನಮ್ಮ ಊರಿನಿಂದ ಕಲಬುರಗಿಗೆ ಬಂದು ಭಾಗ್ಯವಂತಿ ನಗರ ಕಲಬುರಗಿಯಲ್ಲಿ ಇರುವ ನಮ್ಮ ಅಣ್ಣನ ಮನೆಗೆ ಹೋಗುವ ಕುರಿತು ಸಂತೋಷ ಕಾಲೋನಿಯಿಂದ ಆಟೋ ರಿಕ್ಷಾದಲ್ಲಿ ರೆಡ್ಡಿ ಪೆಟ್ರೋಲ ಬಂಕ್ ವರೆಗೆ ಹೋಗಿ ಅಲ್ಲಿ ಇಳಿದುಕೊಂಡು ಮದ್ಯಾಹ್ನ 12:30 ಗಂಟೆ ಸುಮಾರಿಗೆ ಎಡಬಲ ನೋಡಿಕೊಂಡು ರಸ್ತೆ ದಾಟುತ್ತಿರುವಾಗ ಒಂದು ಮೋಟಾರ್ ಸೈಕಲ್ ಸವಾರನು ರಾಮ ಮಂದಿರ ರಿಂಗ್ ರೋಡ್ ಕಡೆಯಿಂದ ಸಂತೋಷ ಕಾಲೋನಿ ಕಡೆಗೆ ಹೋಗುವ ಕುರಿತು ತನ್ನ ಮೋಟಾರ್ ಸೈಕಲ್ ಅನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ನನ್ನ ಎಡಗಡೆಯಿಂದ ಬಂದು ನನಗೆ ಡಿಕ್ಕಿಪಡಿಸಿದನು ಆಗ ನಾನು ಪುಟಿದು ರಸ್ತೆಯ ಮೇಲೆ ಬಿದ್ದೆನು. ಅದನ್ನು ನೋಡಿದ ಅಲ್ಲಿಯೇ ಇದ್ದ ದರ್ಶನ ತಂದೆ ಶರಣಬಸಪ್ಪ ಕೋಟನೂರ ಹಾಗೂ ಮಲ್ಲಿಕಾರ್ಜುನ ತಂದೆ ಪರಮೇಶ್ವರ ಮಾವೂರ ಇವರು ಬಂದು ನನಗೆ ಎಬ್ಬಿಸಿ ರಸ್ತೆ ಬದಿಗೆ ಕೂಡಿಸಿ ನೋಡಲು ಸದರ ಘಟನೆಯಿಂದ ನನ್ನ ತೆಲೆಗೆ ರಕ್ತಗಾಯ ಹಾಗೂ ಟೊಂಕಕ್ಕೆ ಎಡಗಡೆ ಭಾರಿ ಒಳಪೆಟ್ಟು ಆಗಿದ್ದು ನನಗೆ ಡಿಕ್ಕಿಪಡಿಸಿದ ಮೋಟಾರ್ ಸೈಕಲ್ ನಂಬರ ನೋಡಲು ಕೆ.ಎ-32/ಇ.ಡಬ್ಲೂ-2367 ನೇದ್ದು ಇದ್ದು ಅದರ ಸವಾರನ ಹೆಸರು ಸಂತೋಷ ಅಂತಾ ಗೋತ್ತಾಗಿದ್ದು ಆತನು ಹಾಗೂ ದರ್ಶನ ಮತ್ತು ಮಲ್ಲಿಕಾರ್ಜುನ ಸೇರಿ ಒಂದು ಆಟೋ ರಿಕ್ಷಾದಲ್ಲಿ ನನಗೆ ಹಾಕಿಕೊಂಡು ಉಪಚಾರ ಕುರಿತು ದರ್ಶ ಆಸ್ಪತ್ರೆಗೆ ಸೇರಿಕೆ ಮಾಡಿದ್ದು ಸದರಿ ಮೋಟಾರ್ ಸೈಕಲ್ ಸವಾರ ಸಂತೋಷ ಇತನು ನನಗೆ ಆಸ್ಪತ್ರೆಯ ಚಿಕಿತ್ಸಾ ವೆಚ್ಚ ಭರಿಸುತ್ತೇನೆ ಅಂತಾ ಹೇಳಿ ಈಗ ನೀರಾಕರಿಸುತ್ತಿದ್ದು ಕಾರಣ ಆತನ ಮೇಲೆ ದೂರು ನೀಡಲು ತಡವಾಗಿರುತ್ತದೆ.  ಮೋಟಾರ್ ಸೈಕಲ್ ನಂ ಕೆ.ಎ-32/ಇ.ಡಬ್ಲೂ-2367 ನೇದ್ದರ ಸವಾರ ಸಂತೋಷ ಇತನು ರಾಮ ಮಂದಿರ ರಿಂಗ್ ರೋಡ್ ಕಡೆಯಿಂದ ಸಂತೋಷ ಕಾಲೋನಿ ಕಡೆಗೆ ಹೋಗುವ ಕುರಿತು ತನ್ನ ಮೋಟಾರ್ ಸೈಕಲ್ ಅನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನನಗೆ ಡಿಕ್ಕಿಪಡಿಸಿ ಅಪಘಾತ ಮಾಡಿ ಭಾರಿಗಾಯಗೊಳಿಸಿದ್ದು ಕಾರಣ ಆತನ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ನೀಡಿದ ದೂರಿನ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ 113/2023 ಕಲಂ 279,338 ಐ.ಪಿ.ಸಿ ನೇದ್ದರಡಿ ಪ್ರಕರಣ ದಾಖಲಿಸಿಕೊಂಡ ಬಗ್ಗೆ ವರದಿ.

 

 

ಎಂ.ಬಿ.ನಗರ ಪೊಲೀಸ ಠಾಣೆ :-  ದಿನಾಂಕ 03.11.2023 ರಂದು 01.30 ಪಿ.ಎಮ್ ಕ್ಕೆ ಫಿರ್ಯಾದಿದಾರರಾದ ಮಲ್ಲಪ್ಪಾ ತಂದೆ ಶಿವಯೋಗಪ್ಪಾ ಸಾತಲಗಾಂವ್ ವ|| 46 ಉ|| ಒಕ್ಕಲತನ ಕೆಲಸ ಸಾ|| ಇಕ್ಕಣಗುತ್ತಿ ತಾ|| ಸಿಂದಗಿ ಜಿ|| ವಿಜಯಪೂರ ಇವರು ಠಾಣೆಗೆ ಹಾಜರಾಗಿ ಒಂದು ದೂರು ಅರ್ಜಿ ನೀಡಿದ್ದು ಸದರಿ ಅರ್ಜಿ ಸ್ವಿಕರಿಸಿಕೊಂಡಿದ್ದು ಅದರ ಸಾರಾಂಶವೆನೆಂದರೆ, ನಾನು ಮಲ್ಲಪ್ಪಾ ತಂದೆ ಶಿವಯೋಗಪ್ಪಾ ಸಾತಲಗಾಂವ್ ಸಾ|| ಹಿಕ್ಕನಗುತ್ತಿ ತಾ|| ಸಿಂದಗಿ ಜಿ|| ಬಿಜಾಪೂರ ನಾಗಿದ್ದು, ದಿನಾಂಕ:- 26/10/2023 ರಂದು 01.00 ಪಿ.ಎಮ್ ಕ್ಕೆ ನಾನು ಮತ್ತು ನನ್ನ ಅಳಿಯ ಬಸವರಾಜ ಜೊತೆಯಲ್ಲಿ ನನ್ನ ಚಿಕಿತ್ಸೆಗೊಸ್ಕರ ಎಎಸ್ಐ ಆಸ್ಪತ್ರೆಗೆ ಹೋಗುವಾಗ ವೀರೇಂದ್ರ ಪಾಟೀಲ್ ಬಡಾವಣೆ ಹತ್ತಿರ ಸೇಂಡ ಮೇನ್ ರೋಡನಲ್ಲಿ ನಾನು ಅಳಿಯನ ಜೋತೆಯಲ್ಲಿ ಹೋಗುತ್ತಿರುವಾಗ ನನ್ನ ಗಾಡಿಯ ಎದರುಗಡೆ ಬಂದು ಹೇ ಸುಳಿಮಗನೆ ನಿಂದರಲೇ ಅಂದು ಅಡ್ಡ ನಿಲ್ಲಿಸಿ ಎದೆಯ ಮೇಲಿನ ಶರ್ಟನು ಹಿಡಿದು ಕಪಾಳಕ್ಕೆ ಹೊಡೆದು ಮತ್ತು ಗಾಯಗೊಂಡಿರುವ ಕಾಲಿಗೆ ಒದ್ದಿರುತ್ತಾನೆ. ಅವಾಗ ನಾನು ಯಾಕೆ ಮಾಂತು ಗೌಡ ನನ್ನ ಮೇಲೆ ವಿನಾಕರಾರಣ ಹಲ್ಲೆ  ಮಾಡ್ತಾ ಇದ್ದಿಯಾ ಅಂತೂ ಕೇಳಿದಾಗ ಅವನ ಜೋತೆಯಲ್ಲಿ ಇದ್ದ ಅವನ ಮಗ ಸುಭಾಷ ಲೇ ಮಗನೆ ಕಲಬುರಗಿಯಲ್ಲಿ ಸಿಕ್ಕಿದಿಯಾ ಮಗನೆ ನಿನ್ನನ್ನು ಸಾಯಿಸಿದರು ಕೂಡಾ ಯಾರು ಇಲ್ಲಿ ಕೇಳುವದಿಲ್ಲ. ಅಂದು ಕಾಲಿನಿಂದ ಹೋಡೆಯುತ್ತಾನೆ. ಅವಾಗ ನನ್ನನ್ನು ನನ್ನ ಅಳಿಯ ಕೂಡಲೆ ಆಸ್ಪತ್ರಗೆ ಕರೆದುಕೊಂಡು ಹೋಗಿರುತ್ತಾನೆ. ನನ್ನ ಮೇಲೆ ಹಲ್ಲೆ ಮಾಡಿರುವ ಬಗ್ಗೆ ಸೂಕ್ತ ಕಾನೂನು ಕ್ರಮ ಜರುಗಿಸಬೆಕೆಂದು ವಿನಂತಿಸಿಕೊಳ್ಳುತೆನೆ. ಮತ್ತು ನಾನು ಮನೆಯಲ್ಲಿ ವಿಚಾರ ಮಾಡಿ ದೂರು ಸಲ್ಲಿಸುತ್ತಿದ್ದೆನೆ.        ಕಾರಣ ನನಗೆ ಹಲ್ಲೆ ಮಾಡಿರುವ 1) ಮಹಾಂತಪ್ಪ ಗೌಡ ತಂದೆ ಶಿವಲಿಂಗಪ್ಪ ರಾಮಶೇಟ್ಟಿ 2) ಶ್ರೀದೇವಿ ಗಂಡ ಮಹಾಂತಪ್ಪ ಗೌಡ ರಾಮಶೇಟ್ಟಿ. 3) ಸುಭಾಷ ತಂದೆ ಮಾಹಾಂತಪ್ಪ ರಾಮಶೇಟ್ಟಿ ಸಾ|| ತೋನಸನಳ್ಳಿ ಎಸ್ ತಾ|| ಶಹಾಬಾದ ಜಿ|| ಕಲಬುರಗಿ ಇವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಬೆಕೆಂದು ನೀಡಿರುವ ಇತ್ಯಾದಿ ಹೇಳಿಕೆಯ ಸಾರಾಂಶದ ಮೇಲಿಂದ ಎಂ.ಬಿ.ನಗರ ಪೊಲೀಸ್ ಠಾಣೆ ಗುನ್ನೆ ನಂ 132/2023 ಕಲಂ 341,323,504,506.ಸಂಗಡ 34 ಐಪಿಸಿ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಫರಹತಾಬಾದ ಪೊಲೀಸ ಠಾಣೆ :- ದಿನಾಂಕಃ 03.11.2023 ರಂದು 12.45 ಗಂಟೆಗೆ ಶ್ರೀ ರಾಜಕುಮಾರ ತಂದೆ ಶರಣಪ್ಪ ಆಳಂದ ಸಾಃ ನೃಪತುಂಗ ಕಾಲೊನಿ ಕಲಬುರಗಿ ಇವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಟೈಪ ಮಾಡಿಸಿದ ಒಂದು ಅರ್ಜಿಯನ್ನು ಸಲ್ಲಸಿದ್ದು ಸದರಿ ಅರ್ಜಿಯ ಸಾರಾಂಶವೆನೆಂದರೆ  ನಧಿಸಿನ್ನೂರ ಸೀಮಾಂತರದ ಸರ್ವೆ ನಂ 115/08 ಮತ್ತು 09 ರಲ್ಲಿ ನನ್ನದು ಮೂರು ಎಕರೆ ಒಂದು ಗುಂಟಾ ಹೋಲ ಇರುತ್ತದೆ. ಆ ಹೊಲದಲ್ಲಿ ತೊಗರಿ ಬೆಳೆದಿದ್ದು ಸದ್ಯ ಎರಡುವರೆ ತಿಂಗ ಬೆಳೆ ಇದ್ದು ಸದರಿ ತೊಗರೆ ಬೆಳೆಗೆ ಎಣ್ಣೆ ಹೊಡೆದಿದ್ದು ಇರುತ್ತದೆ. ನಮ್ಮ ಹೊಲದಲ್ಲಿ ಬೆಳೆದ ಬೆಳೆಗಳಿಗಳಿಗೆ ನೀರು ಹಾಯಿಸಲು ಬೋರವೇಲ್ ಇದ್ದು ಅದಕ್ಕೆ  ಎಲ್.ಎನ್.ಟಿ ಕಂಪನಿಯ ಅಟೋ ಸ್ಟಾಟರ್ ಅಳವಡಿಸಿದ್ದಿ ಇರುತ್ತದೆ. ಹೀಗಿದ್ದು ದಿನಾಂಕಃ 02.11.2023 ರಂದು ಬೆಳಿಗ್ಗೆ 10.00 ಗಂಟೆಗೆ ನಮ್ಮ ಹೊಲದಲ್ಲಿಯ ತೊಗರಿ ಬೆಳೆ ನೋಡಲು ಬಂದಿರುತ್ತೆನೆ. ಮಧ್ಯಾಹ್ನ 03.00 ಗಂಟೆಯವರೆಗು ಹೋಲದಲ್ಲಿ ಇದ್ದು ಹೋಗುವಾಗ ನನ್ನ ಹೊಲದಲ್ಲಿ ಅಳವಡಿಸಿದ ಸ್ಟಾಟರ್ ನೋಡಿದ್ದು ಇದ್ದಿರುತ್ತದೆ. ಇಂದು ದಿನಾಂಕಃ 03.11.2023 ರಂದು ಬೆಳಿಗ್ಗೆ 09.30 ಗಂಟೆಗೆ ನಾನು ನಮ್ಮ ಹೊಲದಲ್ಲಿರುವ ಮಹಾಲಕ್ಷ್ಮೀ ಕಟ್ಟೆಗೆ ಪೊಜೆ ಮಾಡಲು ಹೊಲಕ್ಕೆ ಬಂದಿದ್ದು ನಮ್ಮ ಹೊಲದಲ್ಲಿಯ ಮೋಟರ ಚಾಲು ಮಾಡಲು ಹೋದಾಗ ಅದಕ್ಕೆ ಅಳವಡಿಸಿದ ಸ್ಟಾಟರ ನೋಡಲಾಗಿ ಕಾಣಿಸಲಿಲ್ಲ, ನಾನು ಕೂಡಲೆ 112 ಪೊಲೀಸ್ ಸಹಾಯವಾಣಿಗೆ ವಿಷಯ ತಿಳಿಸಿದ್ದು 112 ವಾಹದವರು ಬಂದು ಸ್ಥಳ ಪರೀಶಿಲನೆ ಮಾಡಿ ಹೋಗಿರುತ್ತಾರೆ. ಕಾರಣ ಯಾರೋ ಕಳ್ಳರು ದಿನಾಂಕಃ02.11.2023 ರಂದು ಮಧ್ಯಾಹ್ನ 03.00 ಗಂಟೆಯಿಂದ ದಿನಾಂಕಃ 03.11.2023 ರ ಬೆಳಿಗ್ಗೆ 09.30 ಗಂಟೆಯ ಮದ್ಯದ ಅವದಿಯಲ್ಲಿ ನನ್ನ ಹೊಲದಲ್ಲಿ ಅಳವಡಿಸಿದ ಎಲ್.ಎನ್.ಟಿ ಕಂಪನಿಯ ಅಟೋ ಸ್ಟಾಟರ್ ಪೇನೆಲ ಬಾಕ್ಸ ಸಹಿತ ಅ.ಕಿಃ 15,000/- ನೇದ್ದು ಕಳ್ಳತನ ಮಾಡಿಕೊಂಡು ಹೋಗಿದ್ದು ಸದರಿ ಕಳುವು ಮಾಡಿಕೊಂಡು ಹೋದ ಆರೋಪತರನ್ನು ಪತ್ತೆ ಮಾಡಿ ಸೂಕ್ತ ಕಾನೂನು ಕ್ರಮ ಕೈಕೊಳ್ಳಲು ವಿನಂತಿ  ಅಂತಾ ದೂರಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ 145/2023 ಕಲಂ 379 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡ ಬಗ್ಗೆ ವರದಿ.

 

 

ಆರ್.ಜಿ.ನಗರ ಪೊಲೀಸ ಠಾಣೆ :- ದಿನಾಂಕಃ 03.11.2023 ರಂದು 00.30 ಗಂಟೆಯ ಸುಮಾರಿಗೆ ಶ್ರೀ ಕುಬೇರ.ಎಸ್. ರಾಯಮಾನೆ  ಪಿ.ಐ. ರಾಘವೇಂದ್ರ ನಗರ ಪೊಲೀಸ್ ಠಾಣೆ ಕಲಬುರಗಿ ನಗರ ರವರು ಠಾಣೆಗೆ ಹಾಜರಾಗಿ ಇಬ್ಬರು ಆರೋಪಿತರೊಂದಿಗೆ, ಜಪ್ತಿ ಪಂಚನಾಮೆ ಮುದ್ದೆ ಮಾಲನೊಂದಿಗೆ ಜ್ಞಾಪನ ಪತ್ರ ನೀಡಿದರ ಸಾರಾಂಶದ ಮೇಲಿಂದ ಮಾನ್ಯ ನ್ಯಾಯಾಲಯಕ್ಕೆ ಪರವಾನಿಗೆ ಕೋರಿ ಪ್ರಪತ್ರದ ಮೂಲಕ ವಿನಂತಿಸಿಕೊಂಡಿದ್ದ ಮಾನ್ಯ ನ್ಯಾಯಾಲಯವು 10.30 ಎ.ಎಮ್ ಕ್ಕೆ ಪರವಾನಿಗೆ ನೀಡಿದ್ದರ ಸಾರಾಂಶವೇನೆಂದರೆ ಇಂದು ದಿನಾಂಕ:02.11.2023 ರಂದು 6-30 ಪಿ.ಎಂ.ಕ್ಕೆ ನಾನು ಪಿ.ಐ ಠಾಘವೇಂದ್ರ ನಗರ ಪೊಲೀಸ್ ಠಾಣೆ ಕಲಬುರಗಿ ಠಾಣೆಯಲ್ಲಿದಾಗ ಕಲಬುರಗಿ ನಗರದ ಖಾದ್ರಿ ಚೌಕ ಮಜೀದ ಎದುರಗಡೆ ಇರುವ ಪಾಟೀಲ್ ಟ್ರೇಡರ್ಸ  ಹತ್ತಿರ ಕ್ರಿಕೇಟ್ ಬೆಟ್ಟಿಂಗ್ ನಡೆಯುತ್ತಿದ್ದ ಬಗ್ಗೆ ಖಚಿತ ಬಾತ್ಮಿ ಬಂದ ಮೇರೆಗೆ ಸದರಿ ವಿಷಯವನ್ನು ಮೇಲಾಧಿಕಾರಿಗಳಿಗೆ ತಿಳಿಸಿ ಅವರ ಮಾರ್ಗದರ್ಶನದಲ್ಲಿ ದಾಳಿ ಮಾಡುವ ಕುರಿತು ಇಬ್ಬರು ಪಂಚರಾದ 1) ಶ್ರೀ. ಶಾಂತಕುಮಾರ ತಂದೆ ರೇವಪ್ಪಾ ಕೋನಗುತ್ತಿ ವಯಃ 50 ವರ್ಷ ಜಾಃ ಲಿಂಗಾಯತ  ಉಃ ಗುತ್ತಿಗೇದಾರ ಸಾಃ ಸ್ವಾಮಿ ವಿವೇಕಾ ನಂದ ನಗರ ಕಲಬುರಗಿ ಮೊ ನಂ 9342355659. 2) ಶ್ರೀ ಶಾಂತಪ್ಪಾ ತಂದೆ ಶಿವರಾಯ ನಾಟೀಕರ ವಯಃ 42 ವರ್ಷ ಜಾಃ ಕಬ್ಬಲೀಗ ಉಃ ಡ್ರೈವರ ಸಾಃ ಮಾಣಿಕೇಶ್ವರ ಕಾಲೋನಿ ಕಲಬುರಗಿ ಮೊ ನ 8660881215 ಇವರನ್ನು ರಾಘವೇಂದ್ರ ನಗರ ಪೊಲೀಸ್ ಠಾಣಗೆ 7-00 ಪಿ.ಎಂ.ಕ್ಕೆ ಬರಮಾಡಿಕೊಂಡು ಸದರಿ ಪಂಚರಿಗೆ ವಿಷಯ ತಿಳಿ ಹೇಳಿ ಪಂಚನಾಮೆಗೆ ಸಹಕರಿಸುವಂತೆ ಕೇಳಿಕೊಂಡ ಮೇರೆಗೆ ಉಭಯ ಪಂಚರು ಒಪ್ಪಿಕೊಂಡಿರುತ್ತಾರೆ. ನಂತರ ನಾನು, ಪಂಚರು, ಮತ್ತು ನಮ್ಮ ಠಾಣಾ ಸಿಬ್ಬಂದಿಯವರಾದ 1) ಶ್ರೀ ಮಲ್ಲಣಗೌಡ  ಹೆಚ್.ಸಿ, 2) ಶ್ರೀ ಸಿಕ್ರೇಶ್ವರ ಹೆಚ್.ಸಿ 128 , 3) ಶ್ರೀ ಉಮೇಶ ಪಿಸಿ 105, 4) ಶ್ರೀ ಆರೇಶ ಪಿಸಿ 238 ರವರೊಂದಿಗೆ ಸರ್ಕಾರಿ ಜೀಪ ನಂ.ಕೆಎ-32-ಜಿ-1125 ನೇದ್ದರಲ್ಲಿ ಮತ್ತು ಕೆಲವು ಸಿಬ್ಬಂದಿಯವರು ತಮ್ಮ ತಮ್ಮ ಮೋಟಾರ ಸೈಕಲಗಳ ಮೇಲೆ  7-15 ಪಿ.ಎಂ. ಗಂಟೆಗೆ ಠಾಣೆಯಿಂದ  ಹೊರಟು ಬಾತ್ಮಿ ಬಂದ ಸ್ಥಳವಾದ ಕಲಬುರಗಿ ನಗರದ ಖಾದರಿ ಚೌಕ ಮಜೀದ ಎದುರಗಡೆ ಇರುವ ಪಾಟೀಲ್ ಟ್ರೇಡರ್ಸ ಹತ್ತಿರ 7-45 ಪಿ.ಎಂ.ಕ್ಕೆ ತಲುಪಿ ಪರಿಶೀಲಿಸಲಾಗಿ ಒಂದು ಖುಲ್ಲಾ ಜಾಗದಲ್ಲಿ ಇಬ್ಬರು ವ್ಯಕ್ತಿಗಳು ಛೇರ ಹಾಕಿಕೊಂಡು ಕುಳಿತು ಕೊಂಡು ಇಬ್ಬರು ಅವರ ಅವರ ಮೊಬೈಲನಲ್ಲಿ  ಒಳಗಡೆ ಲ್ಯಾಪಟ್ಯಾಪನಲ್ಲಿ ಸ್ಕೋರ ನೋಡುತ್ತಾ ಸಾರ್ವಜನಿಕರಿಗೆ ವರ್ಲ್ಡ ಕಪ್ ಕ್ರಿಕೇಟ್ ಮ್ಯಾಚ್ ಭಾರತ ಮತ್ತು ಶ್ರೀಲಂಕಾ ತಂಡಗಳ ಮದ್ಯ ನಡೆಯುವ ವೇಳೆಗೆ ಭಾರತ ಮತ್ತು ಶ್ರೀಲಂಕಾ ಎನ್ನುವ ಪದಗಳನ್ನು ಪೋನನಲ್ಲಿ ಮಾತಾಡುತ್ತಾ, ಪಾಂಚ ಹಜಾರ್ ಲಗಾಯ, ತೀನ ಹಜಾರ ಲಗಾಯ ಅಂತಾ ಹಿಂದಿಯಲ್ಲಿ ಮಾತಾಡುತ್ತಾ ನೋಟ ಬುಕ್ ನಲ್ಲಿ ಬರೆಯುತ್ತಾ ಬಾರತ  ಟೀಮ್ ಫೇವರೆಟ್ ಹೈ ಅಂತ ಫೋನನಲ್ಲಿ ಮಾತಾಡುತ್ತಿರುವಾಗ ಖಚಿತಪಡಿಸಿಕೊಂಡು ಸಿಬ್ಬಂದಿ ಜನರ ಸಹಾಯದಿಂದ ಒಮ್ಮೇಲೆ ದಾಳಿ ಮಾಡಿ ಕ್ರೀಕೇಟ್ ಬೆಟ್ಟಿಂಗನಲ್ಲಿ ತೊಡಗಿದ್ದ ವ್ಯಕ್ತಿಗಳನ್ನು  ಹಿಡಿದಿದ್ದು ಆಗ ಸಮಯ 9-00 ಪಿ.ಎಂ ಆಗಿತ್ತು. ಮೊದಲನೆ ವ್ಯಕ್ತಿ ಹೆಸರು ವಿಳಾಸ ವಿಚಾರಿಸಲು  ಆತನ ಹೆಸರು ಅಮರನಾಥ ತಂದೆ ಚಂದ್ರಶೇಖರ ಪಾಟೀಲ ವಯಃ 32 ವರ್ಷ ಉಃ ವ್ಯಾಪಾರ ಜಾಃ ಲಿಂಗಾಯತ ಸಾಃ ಚಿಂಚೋಳಿ ಲೇಔಟ್ ಕಲಬುರಗಿ,  ಎರಡನೆಯವನ್ನು ತನ್ನ ಹೆಸರು ಸೂರ್ಯಾಕಾಂತ ತಂದೆ ಶಿವಶರಣಪ್ಪಾ ಕೋಬಾಳ ವಯಃ 33 ವರ್ಷ ಜಾಃ ಲಿಂಗಾಯತ  ಉಃ ರೆಸ್ಟೊರೆಂಟ ಕೆಲಸ ಸಾಃ ಜೆಆರ್ ನಗರ ಕಲಬುರಗಿ ಅಂತಾ ತಿಳಿಸಿದರು  ನಂತರ ಸದರಿ ಆರೋಪಿತನಾದ ಅಮರನಾಥ ಈತನ ಅಂಗ ಶೋಧನೆ ಮಾಡಲಾಗಿ ಅವನ  ಹತ್ತಿರ ಕ್ರಿಕೇಟ ಬೆಟ್ಟಿಂಗ್ ನಗದು ಹಣ ರೂ.19100/- ದೊರೆತಿದ್ದು, ಮತ್ತು  1) ಒಂದು ಲಾವ್ ಕಂಪನಿಯ ಕೀಪ್ಯಾಡ ಮೊಬೈಲ್ ದೊರೆತಿದ್ದು, ಅದರ ನಂಬರ ವಿಚಾರಿಸಲು 9561052156 ಅಂತಾ ತಿಳಿಸಿದನು. ಅದರ ಅ.ಕಿ. ರೂ.1,000/- ಇದ್ದು,  2) ಇನ್ನೊಂದು ಎಸ್ಯುಸ್ ಕಂಪನಿ ಮೊಬೈಲ್ ಸಿಕ್ಕಿದ್ದು  ಅದರಲ್ಲಿರುವ ಮೊಬೈಲ್ ನಂಬರ ಪರಿಶೀಸಿಲಿಸಲು ಮೊಬೈಲ್ ನಂ 9743920777,   ಅದರ ಅಃಕಿಃ 10,000/- ರೂ ಬೆಲೆ ಬಾಳುವದನ್ನು ಸಿಕ್ಕಿದ್ದು ಇರುತ್ತದೆ.  ನಂತರ ಅಲ್ಲೆ ನಿಂತಿರುವ ಇನ್ನೊಬ್ಬ ಆರೋಪಿತನಾದ ಸೂರ್ಯಾಕಾಂತ ತಂದೆ ಶಿವಶರಣಪ್ಪಾ ಕೋಬಾಳ ಈತನ ಅಂಗ ಶೋದನೆ ಮಾಡಲು ಅವನ ಹತ್ತಿರ  ಕ್ರಿಕೇಟ ಬೆಟ್ಟಿಂಗ್ ನಗದು ಹಣ ರೂ.15275/- ದೊರೆತಿದ್ದು, ಮತ್ತು  1) ಒಂದು ಲಾವ್ ಕಂಪನಿಯ ಕೀಪ್ಯಾಡ ಮೊಬೈಲ್ ದೊರೆತಿದ್ದು, ಅದರ ನಂಬರ ವಿಚಾರಿಸಲು 9156953156 ಅಂತಾ ತಿಳಿಸಿದನು. ಅದರ ಅ.ಕಿ. ರೂ.1000/- ಇದ್ದು, 2) ಇನ್ನೊಂದು ಸ್ಯಾಮಸಂಗ್ ಕಂಪನಿ ಮೊಬೈಲ್ ಸಿಕ್ಕಿದ್ದು ಅದರಲ್ಲಿರುವ ಮೊಬೈಲ್ ನಂಬರ ಪರಿಶೀಸಿಲಿಸಲು ಮೊಬೈಲ್ ನಂ 7019746654   ಅದರ ಅಃಕಿಃ 10,000/- ರೂ ಬೆಲೆ ಬಾಳುವದನ್ನು ಸಿಕ್ಕಿದ್ದು ಇರುತ್ತದೆ. ಸದರಿ ಮೇಲ್ಕಂಡ ಮುದ್ದೇಮಾಲುಗಳನ್ನು ಪಂಚರ ಸಮಕ್ಷಮ ಜಪ್ತುಪಡಿಸಿಕೊಂಡಿದ್ದು ಇರುತ್ತದೆ.  ಸದರಿ ಜಪ್ತುಪಡಿಸಿಕೊಂಡ ಮುದ್ದೇಮಾಲುಗಳಿಗೆ ಪಂಚರು ಸಹಿ ಮಾಡಿದ ಚೀಟಿಯನ್ನು ಅಂಟಿಸಲಾಯಿತು.  ಸದರಿ ಜಪ್ತಿ ಪಂಚನಾಮೆಯನ್ನು 9-30 ಪಿ.ಎಂ. ದಿಂದ 11.00 ಪಿ.ಎಂ. ವರೆಗೆ ಸಾರ್ವಜನಿಕ ಬೀದಿ ದೀಪದ ಬೆಳಕಿನಲ್ಲಿ ಸ್ಥಳದಲ್ಲಿ ಕುಳಿತು ಪಂಚರ ಸಮಕ್ಷಮದಲ್ಲಿ ಲ್ಯಾಪಟ್ಯಾಪನಲ್ಲಿ ಟೈಪ ಮಾಡಿ ಮುಗಿಸಲಾಯಿತು. ನಂತರ ರಾಘವೇಂದ್ರ ನಗರ ಪೊಲೀಸ ಠಾಣೆಗೆ ಬಂದು ನನ್ನ ವರದಿಯನ್ನು ತಯಾರಿಸಿ, ಜಪ್ತಿಪಂಚನಾಮೆ, ಮತ್ತು ಮುದ್ದೇಮಾಲುಗಳು ಹಾಗೂ ಆರೋಪಿತರನ್ನು ಹಾಜರಪಡಿಸಿದ್ದು, ಸದರಿಯವರ ವಿರುದ್ದ ಪ್ರಕರಣ ದಾಖಲಿಸಿ ಕಾನೂನು ಕ್ರಮ ಜರುಗಿಸಲು ಕೋರಲಾಗಿದೆ. ಅಂತ ಇತ್ಯಾದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.168/2023 ಕಲಂ 78(1)(ಎ)(6) ಕೆ.ಪಿ ಎಕ್ಟ ನೇದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡ ಬಗ್ಗೆ ವರದಿ.

 

 

ಚೌಕ ಪೊಲೀಸ ಠಾಣೆ :-  ದಿನಾಂಕ 03/11/2023 ರಂದು ಬೆಳಗಿನ ಸಮಯದಲ್ಲಿ ಜಿಮ್ಸ್ (ಜಿಲ್ಲಾ) ಸರಕಾರಿ ಆಸ್ಪತ್ರೆ ಕಲಬುರಗಿ ಓ.ಪಿ. ಸಿಬ್ಬಂದಿಯವರು ದೂರವಾಣಿ ಮುಖಾಂತರ ಶ್ರೀ ಅಂಬಾರಾವ ತಂದೆ ಸಿದ್ಧಣ್ಣಾ ಸಾ: ದಿಗ್ಗಾಂವ ತಾ:ಚಿತ್ತಾಪೂರ ಇವರ ಹಲ್ಲೆ ಎಂ.ಎಲ್.ಸಿ. ಬಗ್ಗೆ  ಸ್ವೀಕೃತವಾಗಿದೆ. ಎಂದು ತಿಳಿಸಿದ ಮೇರೆಗೆ ಆಸ್ಪತ್ರೆಗೆ ಭೇಟ್ಟಿ ಕೊಟ್ಟು ಗಾಯಾಳು ಶ್ರೀ ಅಮೃತ @ ಅಂಬಾರಾವ @ ಅಂಬಣ್ಣ ತಂದೆ ಸಿದ್ಧಣ್ಣಾ ಕೋರಿ ವ:42 ವರ್ಷ ಉ:ಒಕ್ಕಲುತನ , ಸಾ: ದಿಗ್ಗಾಂವ ಗ್ರಾಮ ತಾ:ಚಿತ್ತಾಪೂರ ಹಾ:ವ: ಹೊಸಳ್ಳಿ ಗ್ರಾಮ ತಾ: ಚಿಂಚೋಳಿ ಇತನು ಮಾತನಾಡುವ ಮತ್ತು ಹೇಳಿಕೆ ಕೊಡುವ ಸ್ಥಿತಿಯಲ್ಲಿ  ಇದ್ದ ಬಗ್ಗೆ ವೈದ್ಯರಿಂದ ದೃಢೀಕರಣ ಪತ್ರ ಪಡೆದುಕೊಂಡು,  ಗಾಯಾಳು ಅಮೃತ @ ಅಂಬಾರಾವ @ ಅಂಬಣ್ಣ ತಂದೆ ಸಿದ್ಧಣ್ಣಾ ಕೋರಿ ವ:42 ವರ್ಷ ಉ:ಒಕ್ಕಲುತನ ಸಾ: ದಿಗ್ಗಾಂವ ಗ್ರಾಮ ತಾ:ಚಿತ್ತಾಪೂರ ಹಾ:ವ: ಹೊಸಳ್ಳಿ ಗ್ರಾಮ ತಾ: ಚಿಂಚೋಳಿ ಇವರ ಹೇಳಿಕೆ ಫಿರ್ಯಾದಿ  ಬರೆಯಿಸಿದ್ದರ ಸಾರಾಂಶವೆನೆಂದೆರೆ, ನಾನು, ಮೇಲಿನ ವಿಳಾಸದವನಿದ್ದು, ಕಳೆದ 2 ವರ್ಷಗಳಿಂದ ನನ್ನ ಹೆಂಡತಿ ನೀಲಮ್ಮಾ ಇವಳ ತವರು ಮನೆಯಾಧ ಹೊಸಳ್ಳಿ ಗ್ರಾಮದಲ್ಲಿ ವಾಸವಾಗಿದ್ದು, ಹೊಸಳ್ಳಿ ಗ್ರಾಮದ ಭದ್ರು ಸಾಹುಕಾರ ಇವರ 14 ಎಕರೆ ಹೊಲ ಕಡತಿ ಹಾಕಿಕೊಂಡು ಇದೇ ವರ್ಷದಿಂದ  ಒಕ್ಕಲುತನ ಕೆಲಸ ಮಾಡುತ್ತಾ ಬಂದಿರುತ್ತೇನೆ. ಈಗ  1 ತಿಂಗಳ ಹಿಂದೆ ಕಲಬುರಗಿ ನಗರದ ನೆಹರು ಗಂಜ ಎಪಿಎಂಸಿಯಲ್ಲಿ ಇರುವ ಶ್ರೀ ಬನದೇಶ್ವರ ಟ್ರೇಡಿಂಗ ಕಂಪನಿಯಲ್ಲಿ 30 ಚೀಲ ಉದ್ದು ಹಚ್ಚಿ 25 ಚೀಲ  ಉದ್ದು ಮಾರಾಟ ಮಾಡಿ ಈ  ಮೊದಲೇ ಹಣ ತೆಗೆದುಕೊಂಡಿರುತ್ತೇನೆ. ಇನ್ನುಳಿದ 05 ಚೀಲ  ಉದ್ದಿನ ರೇಟ ಕಡಿಮೆ ಇರುವುದರಿಂದ ಮಾರಾಟ ಮಾಡದೇ ಅಡತಿಯಲ್ಲಿಟ್ಟಿದ್ದು, ಅನಾಮತ್ತಾಗಿ ಹಣ ಪಡೆಯುವ ಕುರಿತು ನಿನ್ನೆ ದಿನಾಂಕ 02/11/2023  ಬೆಳಿಗ್ಗೆ 11-00 ಗಂಟೆ ಸುಮಾರಿಗೆ ಹೊಸಳ್ಳಿ ಗ್ರಾಮದಿಂದ  ಅದೇ ಊರಿನ ಪರಿಚಯದ  ಅಮೃತ ಹಡಪದ  ಇವರ ಟಿವಿಎಸ್ ಮೋಟಾರ ಸೈಕಲ್ ನಂಬರ  ಇರಲಾರದು ತೆಗೆದುಕೊಂಡು ಒಬ್ಬನೇ ಹೊಸಳ್ಳಿಯಿಂದ ಕಲಬುರಗಿ ಎಪಿಎಂಸಿ ಗಂಜನಲ್ಲಿರುವ ಬನದೇಶ್ವರ ಅಡತಿಗೆ ಮಧ್ಯಾಹ್ನ 2-00  ಗಂಟೆ ಸುಮಾರಿಗೆ  ಬಂದು 05 ಚೀಲದ  ಉದ್ದಿನ ಹಣ 35,000/- ರೂ. ಅಡತ್ತಿ ಮಾಲೀಕರಿಂದ ಅನಾಮತ್ತಾಗಿ  ತೆಗೆದುಕೊಂಡೆನು.  ನಂತರ ತೊಗರಿಗೆ ಹೊಡೆಯುವ  ಎಣ್ಣೆ ಖರೀದಿ ಮಾಡುವ  ಕುರಿತು ಹೊಸಳ್ಳಿ ಗ್ರಾಮಕ್ಕೆ ಹೋಗುವ ಟಂಟಂ ಗಾಡಿ ಗಂಜ ಏರಿಯಾದ ಹನುಮಾನ ಗುಡಿಯ  ಹತ್ತಿರ ಸಂಜೆ 6-30 ಗಂಟೆ ಸುಮಾರು ಕಾಯುತ್ತಾ ನಿಂತಾಗ ಯಾವುದೇ ಗಾಡಿ ಬರದೇ ಇದ್ದಾಗ ನಾಳೆ ಮತ್ತೆ ಗಂಜಿಗೆ ಬರುವ ಕುರಿತು ಕಲಬುರಗಿ ನಗರದ ಸುಲ್ತಾನಪೂರ ರಿಂಗ ರೋಡಿಗೆ ತರಕಾರಿ ಮಾರ್ಕೆಟ ಹತ್ತಿರ ಇರುವ ನಮ್ಮ ಸಹೋದರ ಮಾವ ಶಿವಯೋಗಿ ಕೋಲಕುಂದಿ ಇವರ ಮನೆಯ ಕಡೆಗೆ ಹೊರಟಿದ್ದು,  ಮೋಟಾರ ಸೈಕಲ ಮೇಲೆ ಒಬ್ಬನೇ ಕುಳಿತುಕೊಂಡು ಎಪಿಎಂಸಿ ಹಿಂದಿನ ಗೇಟನಿಂದ ಸುಲ್ತಾನಪೂರ ಕಡೆಗೆ ಹೋಗುವ  ಮುಖ್ಯ ರಸ್ತೆಯ ಫೀಲ್ಟರಬೇಡ ಕಮಾನ ಹತ್ತಿರ  ರೋಡ ಬದಿಯಿಂದ  ಹೋಗುತ್ತಿದ್ದಾಗ ಸಂಜೆ 7-30 ಗಂಟೆ ಸುಮಾರಿಗೆ ಎದುರುನಿಂದ 05 ಜನರು ಕೂಡಿಕೊಂಡು ಬಂದರು. ಅವರಲ್ಲಿ ನನಗೆ ಪರಿಚಯದ ಹೊಸಳ್ಳಿ ಗ್ರಾಮದ ಅಳಿಯನಾದ  ಕಬ್ಬಲೀಗ ಜನಾಂಗದ ರವಿ ಎಂಬುವವರು ತನ್ನ ಕೈಯಲ್ಲಿ ಬಡಿಗೆ ಹಿಡಿದುಕೊಂಡಿದ್ದು,  05 ಜನರು ಕೂಡಿಕೊಂಡು ಒಮ್ಮಿಂದೊಮ್ಮಲೆ ನನ್ನ ಮೋಟಾರ ಸೈಕಲಿಗೆ ಅಡ್ಡಗಟ್ಟಿ ನಿಲ್ಲಿಸಿದರು. ನನ್ನ ಮೋಟಾರ ಸೈಕಲ್ ಸ್ಟ್ಯಾಂಡ ಹಚ್ಚಿ ಕೆಳೆಗೆ ಇಳಿದಾಗ ರವಿ ಇತನು ಕೈಯಲ್ಲಿದ್ದ  ಬಡಿಗೆಯಿಂದ ನನ್ನ ಎಡಗಣ್ಣಿನ ಹತ್ತಿರ, ಮತ್ತು ಎಡಮೊಣಕಟ್ಟಿನ ಮೇಲೆ.  ಎಡ ತೊಎಗೆ ಹೊಡೆದನು. ಆ ಏಟುಗಳಿಗೆ ನಾನು ಬೇಹುಷ ಗಿ ಬಿದ್ದೆನು.  ಸ್ವಲ್ಪ ಸಮಯದ ನಂತರ  ಎಚ್ಚರವಾಗಲು ಫೀಲ್ಟರಬೇಡ ಕಮಾನ ಹತ್ತಿರ ರುವ ಗುಡಿಯ ಹತ್ತಿರ  ಇದ್ದಿದ್ದು ಗೊತ್ತಾಯಿತು. ನಂತರ ಎದ್ದು ಸುಧಾರಿಸಿಕೊಂಡು ಶರ್ಟಿನ ಕಿಸೆ  ಮತ್ತು ಪ್ಯಾಂಟಿನ ಜೇನು ನೋಡಲಾಗಿ ಶರ್ಟಿನ ಕಿಸೆಯಲ್ಲಿದ್ದ 15,000/- ರೂ. ಮತ್ತು ಪ್ಯಾಂಟಿನ ಜೇಬಿನಲ್ಲಿದ್ದ 20,000/- ರೂ. ಹಣ ಹಾಗೂ ಕೊರಳಲ್ಲಿದ್ದ 01 ತೊಲಿ ಬಂಗಾರದ ಲಾಕೇಟ ಕಾಣಲಿಲ್ಲಾ ಅ:ಕಿ: 50,000/- ರೂ. ಆಗುತ್ತದೆ.  ನಂತರ ಮೋಟಾರ ಸೈಕಲ ತೆಗೆದುಕೊಂಡು ನಮ್ಮ ಸಹೋದರ ಮಾವನ ಮನೆಗೆ ರಾತ್ರಿ 10-30 ಗಂಟೆ ಸುಮಾರಿಗೆ  ಹೋದಾಗ, ಅವರು ನನ್ನ ಶರ್ಟಿಗೆ ಮತ್ತು ಕಣ್ಣಿಗೆ ಆದ ರಕ್ತಗಾಯ ನೋಡಿ ಎನಾಗಿದೆ ಅಂತಾ ವಿಚಾರಿಸಿದಾಗ ನಾನು ನಿತ್ರಾಣವಾಗಿದ್ದರಿಂದ ಅವರಿಗೆ ಎನು ಹೇಳದೇ ಇದ್ದಾಗ ನಮ್ಮ ಸಹೋದರ ಮಾವ ಯಾವುದೋ ಒಂದು ಆಟೋದಲ್ಲಿ ನನಗೆ ಕೂಡಿಸಿಕೊಂಡು ರಾತ್ರಿಯೇ ಜಿಮ್ಸ್ ಆಸ್ಪತ್ರೆಗೆ  ಉಪಚಾರ ಕುರಿತು  ಸೇರಿಕೆ ಮಾಡಿರುತ್ತಾರೆ. ಇಂದು ದಿನಾಂಕ 03/11/2023 ರಂದು ಮಧ್ಯಾಹ್ನ ಸಮಯದಲ್ಲಿ  ಉಪಚಾರದಿಂದ ಚೇತರಿಸಿಕೊಂಡಿದ್ದು, ಈ ಕಾರಣದಿಂದ ದೂರು ಕೊಡಲು ತಡವಾಗಿರುತ್ತದೆ. ಕಾರಣ ನನಗೆ ರವಿ ಸಾ: ಫೀಲ್ಟರಬೇಡ ಕಲಬುರಗಿ ಮತ್ತು ಅವನ ಜೊತೆಗೆಯಿದ್ದ  ಇನ್ನೂ 04 ಜನ ಅಪರಿಚಿತರು ಕೂಡಿಕೊಂಡು ನನ್ನ ಮೋಟಾರ ಸೈಕಲ ಅಡ್ಡಗಟ್ಟಿ ನಿಲ್ಲಿಸಿ  ಬಡಿಗೆಯಿಂದ ಹೊಡೆದು ರಕ್ತಗಾಯ ಮತ್ತು ಗುಪ್ತಗಾಯಗೊಳಿಸಿ, ನನ್ನ ಹತ್ತಿರವಿದ್ದ ಹಣ 35,000/- ರೂ. ಮತ್ತು 01 ತೊಲಿ ಬಂಗಾರದ ಲಾಕೇಟ ಅ:ಕಿ: 50,000/- ರೂ. ಹೀಗೆ ಒಟ್ಟು 85,000/-ರೂ.ದರೋಡೆ ಮಾಡಿಕೊಂಡು ಹೋದ 05 ಜನರ ಮೇಲೆ ಕಾನೂನು ಕ್ರಮ ಜರುಗಿಸಿ, ದರೋಡೆ ಮಾಡಿಕೊಂಡು ಹೋದ  ಹಣ ಮತ್ತು ಬಂಗಾರ ಮರಳಿ ಕೊಡಿಸಬೇಕೆಂದು ಹೇಳಿ ಬತರೆಯಿಸಿದ್ದು, ನಂತರ  ಓದಿ ಹೇಳಿದ್ದು ಹೇಳಿಕೆ ನಿಜವಿರುತ್ತದೆ. ಎಂದು ಕೊಟ್ಟ ಹೇಳಿಕೆ ಫಿರ್ಯಾದಿಯು ಇಂದು ದಿನಾಂಕ 03/11/2023 ರಂದು  ಮಧ್ಯಾಹ್ನ 01-00 ಗಂಟೆಯಿಂದ ಮಧ್ಯಾಹ್ನ 2-00 ಗಂಟೆಯವರೆಗೆ ಜಿಮ್ಸ್ ಆಸ್ಪತ್ರೆ ಕಲಬುರಗಿಯಲ್ಲಿ  ಪಡೆದುಕೊಂಡು ಮಧ್ಯಾಹ್ನ 2-30 ಗಂಟೆಗೆ ಮರಳಿ ಠಾಣೆಗೆ ಬಂದು ಸದರ ಹೇಳಿಕೆ ಫಿರ್ಯಾದಿ ಸಾರಾಂಶದ ಮೇಲಿಂದ ಚೌಕ ಪೊಲೀಸ ಠಾಣೆ ಗುನ್ನೆ ನಂಬರ  213/2023 ಕಲಂ 395 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡ ಬಗ್ಗೆ ವರದಿ.

 

 

ವಿಶ್ವವಿದ್ಯಾಲಯ ಪೊಲೀಸ ಠಾಣೆ :- ದಿನಾಂಕ. 03-11-2023 ರಂದು 12-30 ಪಿ.ಎಂ.ಕ್ಕೆ. ಶ್ರೀ ಮಾರುತಿ ತಂದೆ ಪರಮೇಶ್ವರ ಕಿಳ್ಳಿ ವಯ;42 ವರ್ಷ ಜ್ಯಾತಿ;ಎಸ್.ಸಿ. ಹೊಲೆಯ ಉ; ಗೌಂಡಿಕೆಲಸ ಸಾ; ಶ್ರೀನಿವಾಸ ಸರಡಗಿ ಗ್ರಾಮ ತಾ;ಜಿ; ಕಲಬುರಗಿ , ಇವರು ಠಾಣೆಗೆ ಹಾಜರಾಗಿ ಕೊಟ್ಟ ದೂರಿನ ಸಾರಂಶ ಏನೆಂದರೆ ನಮಗೆ ನಾಲ್ಕು ಜನ ಮಕ್ಕಳಿದ್ದು ಅವರಲ್ಲಿ ಮೂರು ಜನ ಹೆಣ್ಣು ಮಕ್ಕಳಿದ್ದು ಅವರಲ್ಲಿ 1) ಪ್ರಿಯಾಂಕ ವಯ: 20 ವರ್ಷ, 2) ಕಾವೇರಿ  ವಯ: 17 ವರ್ಷ, 3) ಸ್ವಾತಿ ವಯ: 13 ವಷ ದವರಿದ್ದು ಮತ್ತು ಒಬ್ಬ ಗಂಡು ಮಗ ಜೀವನ ವಯ;15ವರ್ಷ ದವರಿರುತ್ತಾರೆ.  ಎಲ್ಲರೂ ವಿದ್ಯಾಬ್ಯಾಸ ಮಾಡಿಕೊಂಡಿರುತ್ತಾರೆ. ನಾನು ಗೌಂಡಿಕೆಲಸ ಮಾಡಿಕೊಂಡಿರುತ್ತೇನೆ. ಮತ್ತು ನನ್ನ ಹೆಂಡತಿ ಸಕ್ಕೂಬಾಯಿ ವಯ; 40 ವರ್ಷ  ಎಲ್ಲರೂ ಕೂಡಿಕೊಂಡು ವಾಸವಾಗಿರುತ್ತೇವೆ. ಹೀಗಿದ್ದು ನನ್ನ ಎರಡನೆ ಮಗಳು ಕಾವೇರಿ ವಯ;17 ವರ್ಷ ಇವಳು ಪಿ.ಯು.ಸಿ. ಸೈನ್ಸ  1 ನೇ ವರ್ಷದಲ್ಲಿ ವಿದ್ಯಾಬ್ಯಾಸ ಮಾಡಿಕೊಂಡಿದ್ದು , ಅವಳು ಕಲಬುರಗಿಯ ಮುಕ್ತಾಂಬಿಕ ಪಿ.ಯು.ಸಿ. ಸೈನ್ಸ ಕಾಲೇಜನಲ್ಲಿ ವಿದ್ಯಾಬ್ಯಾಸ ಮಾಡಿಕೊಂಡಿದ್ದುಕ , ದಿನಾಲು ಬಸ್ಸಿಗೆ ಕಾಲೇಜಿಗೆ ಹೋಗಿ ಬರುವದು ಮಾಡುತ್ತಾಳೆ. ಹೀಗಿದ್ದು ದಿನಾಂಕ.31.10.2023 ರಂದು ಮುಂಜಾನೆ 8-00 ಗಂಟೆಯ ಸುಮಾರಿಗೆ ನನ್ನ ಮಗಳು ಕಾಲೇಜಿಗೆ ಹೋಗಿ ಬರುತ್ತೇನೆ ಅಂತಾ ಹೇಳಿ ಮನೆಯಿಂದ ಹೋಗಿರುತ್ತಾಳೆ. ಸಂಜೆ.4-00 ಗಂಟೆಗೆ ಮರಳಿ ಮನೆಗೆ ಬರಬೇಕಾದವಳು ಮರಳಿ ಮನೆಗೆ ಬಂದಿರುವದಿಲ್ಲಾ, ನಂತರ ನಾನು ಮತ್ತು ನನ್ನ ಹೆಂಡತಿ ಸಕ್ಕೂಬಾಯಿ ನಮ್ಮ ಅಣ್ಣ ಬಾಬುರಾವ, ತಮ್ಮ ನಾಗೇಶ ಎಲ್ಲರೂ ಕೂಡಿಕೊಂಡು ಎಲ್ಲಾ ಕಡೆಗೂ ಹುಡುಕಾಡಿದರು ಸಿಕ್ಕಿರುವದಿಲ್ಲಾ, ಮತ್ತು ನಮ್ಮ ಸಮ್ಮಂದಿಕರಿಗೆ ಫೋನ ಮಾಡಿ ವಿಚಾರಿಸಲು ಬಂದಿರುವದಿಲ್ಲಾ ಅಂತಾ ತಿಳಿಸಿರುತ್ತಾರೆ. ಇವತ್ತಿನ ವರೆಗೆ ಎಲ್ಲಾ ಕಡೆಗೂ ಹುಡುಕಾಡಿದರೂ ಸಿಕ್ಕಿರುವದಿಲ್ಲಾಕಾಣೆಯಾಗಿರುತ್ತಾಳೆ ಅದರೆ  ನಿತೀಷ ತಂದೆ ಸೂರ್ಯಕಾಂತ ಜಮಖಂಡಿ ವಯ;25 ವರ್ಷ ವಿಳಾಸ; ಸಿದ್ದೇಶ್ವರ ಕಾಲೂನಿ ಕಲಬುರಗಿ ಇತನ ಮೇಲೆ ಸಂಶಯ ಇರುತ್ತದೆ. ಸದರಿ ನನ್ನ ಮಗಳನ್ನು ಎಲ್ಲಾ ಕಡೆಗೂ ಹುಡುಕಾಡಿದರು ಸಿಗದ ಕಾರಣ ಇಂದು ದಿನಾಂಕ.03-11-2023 ರಂದು ತಡವಾಗಿ ಬಂದು ದೂರು ಸಲ್ಲಿಸುತಿದ್ದೇನೆ. ಕಾಣೆಯಾದ ನನ್ನ ಮಗಳು ಕಾವೇರಿ ಕಿಳ್ಳಿ  ಚಹರ ಪಟ್ಟಿ ಈ ಕೆಳಗಿನಂತೆ ಇರುತ್ತದೆ. ಕಾಣೆಯಾದ ಮಗಳ ಹೆಸರು: ಕಾವೇರಿ ತಂದೆ  ಮಾರುತಿ ಕಿಳ್ಳಿ ವಯಸ್ಸು: 17 ವರ್ಷ, ಉದ್ಯೋಗ: ಪಿ.ಯು.ಸಿ ಸೈನ್ಸ 1 ನೇ ವರ್ಷದಲ್ಲಿ ವಿದ್ಯಾಬ್ಯಾಸ ಮೈಕಟ್ಟು: ಸಾಧಾರಣ ಮೈಕಟ್ಟು, ಮುಖ; ಉದ್ದನೇಯ ಮುಖ. ಬಣ್ಣ: ಗೋದಿ ಮೈಬಣ್ಣ. ಬಟ್ಟೆಗಳು: ಕಾಲೇಜ ಯುನಿಫಾರಂ 1] ತಿಳಿ ಹಸಿರು ಶರ್ಟ, 2] ಡಾರ್ಕ ಬ್ಲೂ ಕಲಬುರಗಿ ಸ್ಕರ್ಟ ಧರಿಸಿರುತ್ತಾಳೆ ಕಾರಣ ನನ್ನ ಮಗಳು ಕಾವೇರಿ ಇವಳನ್ನು ಹುಡುಕಿ ಕೊಡಬೇಕು ಅಂತಾ ವಗೈರೆ ದೂರಿನ ಸಾರಾಂಶದ ಮೇಲಿಂದ ನಮ್ಮ ಠಾಣೆ ಗುನ್ನೆ ನಂ.298/2023 ಕಲಂ. 363 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡ ಬಗ್ಗೆ ವರದಿ. 

ಇತ್ತೀಚಿನ ನವೀಕರಣ​ : 02-12-2023 07:07 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080