ಅಭಿಪ್ರಾಯ / ಸಲಹೆಗಳು

ಸಿ.ಇ.ಎನ್‌ . ಪೊಲೀಸ್‌ ಠಾಣೆ :- ದಿನಾಂಕ: 03-11-2022  ರಂದು ೨೨:೦೦ ಗಂಟೆಗೆ ಶ್ರೀ ಅಮರನಾಥ ಸಿಪಿಸಿ: ೨೭೩ ಸಿ,ಇ,ಎನ್ ಪೊಲೀಸ್ ಠಾಣೆ ಕಲಬುರಗಿ ನಗರ. ಇವರು ಒಂದು ವರದಿ ಮತ್ತು ವ್ಯಧ್ಯಕೀಯ ಪ್ರಮಾಣ ಪತ್ರ ಹಾಗೂ ಆರೋಪಿತನೊಂದಿಗೆ ಹಾಜರಾಗಿ ಒಂದು ಕನ್ನಡದಲ್ಲಿ ಟೈಪ್ ಮಾಡಿದ ವರದಿ ಮತ್ತು ಆರೋಪಿಯನ್ನು ಹಾಜರುಪಡಿದ್ದರ ವರದಿಯ ಸಾರಾಂಶವೆನೆಂದರೆ, ಅಮರನಾಥ ಸಿಪಿಸಿ: ೨೭೩ ಹಾಗೂ ಹೊನ್ನೂರಸಾಬ್ ಸಿಪಿಸಿ-೨೭೯ ರವರು ಕೂಡಿಕೊಂಡು ಮಾನ್ಯರವರ ಆದೇಶದಂತೆ ಕಲಬುರಗಿ ನಗರದಲ್ಲಿ ಕಾನೂನು ಬಾಹಿರ ಚಟುವಟಿಕೆಗಳ ಮತ್ತು ಅಕ್ರಮ ಮಾದಕ ವಸ್ತುಗಳ ಮಾರಾಟ ಮಾಡುವವರ ಮತ್ತು ಗಾಂಜಾ  ಸೇವನೆ ಮಾಡುವÀವರ ಮಾಹಿತಿ ಸಂಗ್ರಹ ಮತ್ತು ಬೀಟ್ ಕರ್ತವ್ಯ ಕುರಿತು ಠಾಣೆಯಿಂದ ದಿನಾಂಕ: ೦೩/೧೧/೨೦೨೨ ರಂದು ೧೭-೦೦ ಗಂಟೆಗೆ ಹೊರಟು ಕಲಬುರಗಿ ನಗರದ ವಿವಿಧ ನಗರದ ಹಾಗೂ ಗಲ್ಲಿಗಳಲ್ಲಿ ಪೆಟ್ರೋಲಿಂಗ್ ಕರ್ತವ್ಯ ಮಾಡಿಕೊಂಡು ನಂತರ ಸಮಯ  ರಾತ್ರಿ ೮-೩೦ ಕೇಂದ್ರ ಬಸ್ಸ ನಿಲ್ದಾಣದ ಶೌಚಾಲಯದ ಹತ್ತಿರ ಹೋಗಿ ಪೆಟ್ರೋಲಿಂಗ್ ಕರ್ತವ್ಯದಲ್ಲಿ ಇದ್ದಾಗ ಒಬ್ಬ ವ್ಯಕ್ತಿ ಅನುಮಾನಸ್ಪದವಾಗಿ ಯಾವುದೋ ಮಾದಕ ವಸ್ತು ಸೇವನೆ ಮಾಡಿ ನಶೆಯಲ್ಲಿ ಇರುವುದನ್ನು ಕಂಡು ನಾವು ಹತ್ತಿರ ಹೋಗಿ ವಿಚಾರಿಸಲಾಗಿ ಆತನು ತನ್ನ  ಹೆಸರು ನಾಗೇಶ್ವರ ತಂದೆ ಪರಮೇಶ್ವರ ಆರ್ಯ ವಯ|| ೨೩ ವರ್ಷ ಜಾತಿ||  ಎಸ್.ಸಿ ಉ|| ವಿಧ್ಯಾರ್ಥಿ ಸಾ|| ೧/೧೩೨, ಇಂದಿರಾ ನಗರ, ಎಮ್,ಪಿ ಗಲ್ಲಿ ಹುಮನಾಬಾದ, ಜಿಲ್ಲಾ|| ಬೀದರ ಸಧ್ಯ|| ಅಂಬೇಡ್ಕರ್ ಹಾಸ್ಟೇಲ್ ವಿಶ್ವ-ವಿಧ್ಯಾಲಯ ಕಲಬುರಗಿ ಅಂತಾ ತಿಳಿಸಿದ್ದು ಆತನ  ಬಾಯಿಂದ ಯಾವುದೋ ಮಾದಕ ವಸ್ತು ಸೇವನೆ ಮಾಡಿರುವ ಬಗ್ಗೆ ಕೆಟ್ಟ ವಾಸನೆ ಬರುತ್ತಿದ್ದರಿಂದ ಖಚಿತ ಪಡಿಸಿಕೊಂಡು ಸದರಿಯವನಿಗೆ ಸಿ,ಇ,ಎನ್ ಪೊಲೀಸ್ ಠಾಣೆಗೆ ಕರೆದುಕೊಂಡು ಬಂದು ವ್ಯೆಧ್ಯಕೀಯ ಪರೀಕ್ಷೆ ಕುರಿತು ಸಮಯ: ೨೧-೦೦ ಗಂಟೆಗೆ ಠಾಣೆಯ ಸಿಬ್ಬಂದಿಗಳಾದ, ಶ್ರೀ ಸುಮೀತ್ ಸಿಪಿಸಿ: ೨೨೭, ಶ್ರೀ ಪ್ರಶಾಂತ ಸಿಪಿಸಿ: ೨೯೦ ರವರ ಬೆಂಗಾವಲಿನಲ್ಲಿ ಸದರಿಯವನಿಗೆ  ಜಿಲ್ಲಾ ವೈಧ್ಯಾಧಿಕಾರಿಗಳು ಸರಕಾರಿ ಆಸ್ಪತ್ರೆ  ಕಲಬುರಗಿ ರವರಲ್ಲಿ ಕಳುಹಿಸಿದ್ದು ಸದರಿ ವ್ಯಕ್ತಿಯು ಮಾದಕ ವಸ್ತು ಸೇವನೆ  ಮಾಡಿರುವ ಬಗ್ಗೆ ಇಂದು ದಿನಾಂಕ: ೦೩-೧೧-೨೦೨೨ ರಂದು ೨೧:೪೫ ಗಂಟೆಗೆ POSITIVE FOR 1) THC: MARIJUANA (GANJA), 2) MOP (MORPHINE) 3) BZO: BENZODIAZEPINE ಅಂತಾ ವೈಧ್ಯರು ವರದಿ ನೀಡಿರುತ್ತಾರೆ. ಕಾರಣ ಸದರಿ ಆರೋಪಿತನ  ವಿರುದ್ದ ಕಾನೂನು ಕ್ರಮ ಕೈಗೊಳ್ಳಲು ವಿನಂತಿ.   ಕಾರಣ ಸದರಿ ಆರೋಪಿತನ  ವಿರುದ್ದ ಕಾನೂನು ಕ್ರಮ ಕೈಗೊಳ್ಳಲು ವಿನಂತಿ ಅಂತಾ ನೀಡಿದ ವರದಿ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಚೌಕ ಪೊಲೀಸ್‌ ಠಾಣೆ :-  ದಿನಾಂಕ 03.11.2022 ರಂದು ರಾತ್ರಿ 22:30 ಗಂಟೆಗೆ ಶ್ರೀ ಶಿವಪ್ಪಾ ಪಿ.ಎಸ್.ಐ. ಸಿ.ಸಿ.ಬಿ ಘಟಕ ಕಲಬುರಗಿ ನಗರ ಇವರು 7 ಜನ ಇಸ್ಪೆಟ ಜೂಜಾಟ ನಿರತ ಆರೋಪಿತರು ಮತ್ತು ಜಪ್ತಿ ಪಂಚನಾಮೆಯ ಮುದ್ದೆಮಾಲನೊಂದಿಗೆ ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಗಣಕೀಕೃತ ಮಾಡಿದ ವರದಿ ಫಿರ್ಯಾದಿ ದೂರು, ಹಾಜರು ಪಡಿಸಿದ್ದು ಸ್ವೀಕೃತ ಮಾಡಿಕೊಂಡಿದ್ದು ಸದರಿ ವರದಿಯ ಸಾರಂಶ ಈ ಕೆಳಗಿನಂತೆ ಇರುತ್ತದೆ.  ಈ ಮೂಲಕ ನಾನು ಶಿವಪ್ಪ ಪಿ.ಎಸ್.ಐ., ಸಿ.ಸಿ.ಬಿ. ಘಟಕ ಕಲಬುರಗಿ ನಗರ ವರದಿ ಸಲ್ಲಿಸುವುದೇನಂದರೆ, ಇಂದು ದಿನಾಂಕ:03/11/2022 ರಂದು ಸಾಯಂಕಾಲ 7-30 ಗಂಟೆಗೆ ನಾನು ಕಛೇರಿಯಲ್ಲಿದ್ದಾಗ ಕಲಬುರಗಿ ನಗರದ ಗಂಜ ಹನುಮಾನ ಟೇಂಪಲ್ ಪಕ್ಕದಲ್ಲಿ ಶಾಮರಾವ ರೋಣದ ಇವರ ಮನೆಯ 3ನೇ ಮಹಡಿಯಲ್ಲಿ ಒಂದು ರೂಮಿನಲ್ಲಿ ಅಕ್ರಮವಾಗಿ ಅಂದರ ಬಾಹರ ಜೂಜಾಟ ನಡೆದಿದೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ಸದರಿ ವಿಷಯವನ್ನು ನಾನು ಮೇಲಾಧಿಕಾರಿಗಳಿಗೆ ಮಾಹಿತಿ ತಿಳಿಸಿ, ಮಾನ್ಯ ಉಪ ಪೊಲೀಸ್ ಆಯುಕ್ತರು (ಕಾ&ಸು) ಕಲಬುರಗಿ ನಗರ ರವರಿಗೆ ದಾಳಿ ಮಾಡಲು (ಸರ್ಚ ವಾರೆಂಟ್) ಅನುಮತಿ ನೀಡುವಂತೆ ಕೋರಿ ಪತ್ರ ಮೂಲಕ ನಿವೇದಿಸಿಕೊಂಡಿದ್ದು,  ಅದರಂತೆ ಮಾನ್ಯ ಉಪ ಪೊಲೀಸ್ ಆಯುಕ್ತರು, ಕಾನೂನು ಮತ್ತು ಸುವ್ಯವಸ್ಥೆ, ಕಲಬುರಗಿ ರವರು ಅನುಮತಿ (ಸರ್ಚ ವಾರೆಂಟ್) ನೀಡಿದ್ದು ಇರುತ್ತದೆ.  ನಂತರ ನಾನು ದಾಳಿ ಕುರಿತು ಇಬ್ಬರೂ ಪಂಚರಾದ 1) ಶ್ರೀ ಸಮದ ಪಾಶಾ ತಂದೆ ಅಹೆಮದ ಅಲಿ, ವ:26 ವರ್ಷ, ಜಾತಿ:ಮುಸ್ಲಿಂ, ಉ:ಖಾಸಗಿ ಕೆಲಸ, ಸಾ:ಆಜಾದಪೂರ ರೋಡ, ಕಲಬುರಗಿ ಮೊ.ನಂ.9731590773, 2) ಶ್ರೀ ಮಹ್ಮದ ಮದರ ತಂದೆ ಖಾಜಾಹುಸೇನ ಸಾಬ, ವ:42 ವರ್ಷ, ಜಾತಿ:ಮುಸ್ಲಿಂ, ಉ:ಡ್ರೈವರ್, ಸಾ:ಆಜಾದಪೂರ ರೋಡ, ಅಹೆಮದ ನಗರ ಕಲಬುರಗಿ ಮೊ.ನಂ.9945821736 ರವರಿಗೆ ರಾತ್ರಿ 8-00 ಗಂಟೆಗೆ ಸಿ.ಸಿ.ಬಿ. ಕಛೇರಿಗೆ ಬರಮಾಡಿಕೊಂಡು ಅವರಿಗೆ ವಿಷಯ ತಿಳಿಸಿ ದಾಳಿ ಪಂಚನಾಮೆ ಸಹಕರಿಸಲು ಕೇಳಿಕೊಂಡ ಮೇರೆಗೆ ಉಭಯ ಪಂಚರು ಒಪ್ಪಿಕೊಂಡಿರುತ್ತಾರೆ. ನಂತರ ನಾನು, ಪಂಚರು, ಮತ್ತು ಸಿ.ಸಿ.ಬಿ. ಘಟಕದ ಸಿಬ್ಬಂದಿಯವರಾದ 1) ರವೀಂದ್ರಕುಮಾರ ಹೆಚ್.ಸಿ-48, 2) ಮಲ್ಲಿಕಾರ್ಜುನ ಹೆಚ್.ಸಿ-79, 3) ಶರಣಬಸಪ್ಪ ಹೆಚ್.ಸಿ-94, 4) ಕೇಸುರಾಯ ಹೆಚ್.ಸಿ-223, 5) ಸುನೀಲಕುಮಾರ ಹೆಚ್.ಸಿ-167, 6) ಅಶೋಕ ಸಿಪಿಸಿ-647, 7) ನಾಗರಾಜ ಪಿಸಿ-1257, ರವರು ಕೂಡಿ ಎಲ್ಲರೂ ತಮ್ಮ ತಮ್ಮ ಮೋಟಾರಸೈಕಲಗಳ ಮೇಲೆ ರಾತ್ರಿ 8-15 ಗಂಟೆಗೆ ಹೊರಟು ಕಲಬುರಗಿ ನಗರದ ಗಂಜ ಹನುಮಾನ ಟೇಂಪಲ್ ಪಕ್ಕದಲ್ಲಿ ಶಾಮರಾವ ರೋಣದ ಇವರ ಮನೆಯ ಹತ್ತಿರ ರಾತ್ರಿ 8-45 ಗಂಟೆಗೆ ತಲುಪಿ ಮೋಟಾರಸೈಕಲಗಳನ್ನು ಸ್ವಲ್ಪ ದೂರದಲ್ಲಿ ನಿಲ್ಲಿಸಿ ಸಿಬ್ಬಂದಿ ಹಾಗೂ ಪಂಚರೊಂದಿಗೆ ಎಲ್ಲರೂ ಕೂಡಿ ರಾತ್ರಿ 9-00 ಗಂಟೆಗೆ ಸದರಿ ಶಾಮರಾವ ರೋಣದ ಇವರ ಮನೆಯ 3ನೇ ಮಹಡಿಯಲ್ಲಿ ಮೇಲೆ ಹೋಗಿ ರೂಮಿನಲ್ಲಿ ನೋಡಲಾಗಿ ಸದರಿ ರೂಮಿನ ಒಳಗೆ 07 ಜನರು ದುಂಡಾಗಿ ಕೆಳಗಡೆ ನೆಲದ ಮೇಲೆ ಕುಳಿತುಕೊಂಡು ಅಂದರ್ 500 ರೂ ಮತ್ತು ಬಾಹರ್ 500 ರೂಪಾಯಿಯಂತೆ ಅಂದರ ಬಾಹರ ಎನ್ನುವ ಇಸ್ಪೀಟ್ ಜೂಜಾಟ ಆಡುವುದನ್ನು ಪಂಚರ ಸಮಕ್ಷಮ ಖಚಿತಪಡಿಸಿಕೊಂಡು ಸಿಬ್ಬಂದಿಯವರೊಂದಿಗೆ ದಾಳಿ ಮಾಡಿ ಆಪಾದಿತರಿಗೆ ಹಿಡಿದು ವಿಚಾರಿಸಲು ಅವರು ಹಣ ಪಣಕ್ಕೆ ಹಚ್ಚಿ ಇಸ್ಪೇಟ್ ಎಲೆಗಳ ಸಹಾಯದಿಂದ ಅಂದರಬಾಹರ ಎಂಬ ಜೂಜಾಟ ಆಡುವ ಬಗ್ಗೆ ತಪ್ಪೊಪ್ಪಿಕೊಂಡ ಬಳಿಕ ಸ್ವಾಧೀನಕ್ಕೆ ಪಡೆದುಕೊಂಡು ಅವರ ಹೆಸರು ವಿಳಾಸ ವಿಚಾರಿಸಿ ಅಂಗ ಶೋಧನೆ ಮಾಡಲಾಗಿ   1) ಅಂಬಾರಾಯ ತಂದೆ ಶಿವಪುತ್ರಪ್ಪ ಪಾಟೀಲ, ವ:42 ವರ್ಷ, ಜಾತಿ:ಲಿಂಗಾಯತ, ಉ:ಒಕ್ಕಲುತನ, ಸಾ:ಭವಾನಿನಗರ, ಕಲಬುರಗಿ ಅಂತಾ ತಿಳಿಸಿದ್ದು, ಸದರಿಯವನಿಗೆ ಅಂಗ ಶೋಧನೆ ಮಾಡಲು ನಗದು ಹಣ 3,200/- ರೂ.ಗಳು ದೊರೆತಿದ್ದು, ಸದರಿ ಆಪಾದಿತನ ಕೈಯಲ್ಲಿ ಒಟ್ಟು 23 ಇಸ್ಪಿಟ್ ಎಲೆಗಳು ದೊರೆತಿದ್ದು,  2) ಶಬ್ಬೀರ ತಂದೆ ಫ್ರಕೋದ್ದಿನ, ವ:54 ವರ್ಷ, ಜಾತಿ:ಮುಸ್ಲಿಂ, ಉ:ವ್ಯಾಪಾರ, ಸಾ:ರೋಜಾ ಕಲಬುರಗಿ ಅಂತಾ ತಿಳಿಸಿದ್ದು ಸದರಿಯವನಿಗೆ ಅಂಗ ಶೋಧನೆ ಮಾಡಲು ನಗದು ಹಣ 3,000/- ರೂ.ಗಳು ದೊರೆತಿರುತ್ತವೆ. 3) ಜಾಕೀರ ಪಟೇಲ ತಂದೆ ಖಾಜಾಮಿಯಾ ಪಟೇಲ, ವ:36 ವರ್ಷ, ಉ:ಖಾಸಗಿ ಕೆಲಸ, ಸಾ:ಬ್ಯಾಂಕ ಕಾಲೋನಿ, ನೆಹರು ಗಂಜ ಕಲಬುರಗಿ ಅಂತಾ ತಿಳಿಸಿದ್ದು ಸದರಿಯವನಿಗೆ ಅಂಗ ಶೋಧನೆ ಮಾಡಲು ನಗದು ಹಣ 2,800/-ರೂಗಳು ದೊರೆತಿರುತ್ತವೆ. 4) ಅಶೋಕ ತಂದೆ ನಾಗೇಂದ್ರಪ್ಪ ಮುಲಗೆ, ವ:48 ವರ್ಷ, ಜಾತಿ:ಲಿಂಗಾಯತ, ಉ:ಒಕ್ಕಲುತನ, ಸಾ:ನಾವದಗಿ, ತಾ:ಆಳಂದ, ಜಿ:ಕಲಬುರಗಿ ಅಂತಾ ತಿಳಿಸಿದ್ದು ಸದರಿಯವನಿಗೆ ಅಂಗ ಶೋಧನೆ ಮಾಡಲು ನಗದು ಹಣ 2,400/-ರೂಗಳು ದೊರೆತಿರುತ್ತವೆ. 5) ಮೆಹಮೂದ ಅಲಿ ತಂದೆ ಮಕದೂಮ ಅಲಿ, ವ:49 ವರ್ಷ, ಜಾತಿ:ಮುಸ್ಲಿಂ, ಉ:ವೆಲ್ಡಿಂಗ್ ಕೆಲಸ, ಸಾ:ಛೋಟಾರೋಜಾ, ಕಲಬುರಗಿ ಅಂತಾ ತಿಳಿಸಿದ್ದು ಸದರಿಯವನಿಗೆ ಅಂಗ ಶೋಧನೆ ಮಾಡಲು ನಗದು ಹಣ 2,900/- ರೂ.ಗಳು ದೊರೆತಿರುತ್ತವೆ. 6) ಸೈಫನ ತಂದೆ ದಾವಲಸಾಬ, ವ:38 ವರ್ಷ, ಜಾತಿ:ಮುಸ್ಲಿಂ, ಉ:ವ್ಯಾಪಾರ, ಸಾ:ಬ್ಯಾಂಕ ಕಾಲೋನಿ ನೆಹರು ಗಂಜ, ಕಲಬುರಗಿ ಅಂತಾ ತಿಳಿಸಿದ್ದು ಸದರಿಯವನಿಗೆ ಅಂಗ ಶೋಧನೆ ಮಾಡಲು ನಗದು ಹಣ 2,700/-ರೂ.ಗಳು ದೊರೆತಿರುತ್ತವೆ. 7) ರಾಜಶೇಖರ ತಂದೆ ಬಸವಣಪ್ಪ ಗನಶೇರಿ, ವ:64 ವರ್ಷ, ಜಾತಿ:ಲಿಂಗಾಯತ, ಉ:ಒಕ್ಕಲುತನ, ಸಾ:ಗಂಜ ಕಲಬುರಗಿ ಅಂತಾ ತಿಳಿಸಿದ್ದು, ಸದರಿಯವನ ಅಂಗ ಶೋಧನೆ ಮಾಡಲು ನಗದು ಹಣ ರೂ.3,000/- ಗಳು ದೊರೆತಿರುತ್ತವೆ. ಕೆಳಗಡೆ ನೆಲದ ಮೇಲೆ 14 ಎಲೆಗಳು ಇನ್ನೊಂದು ಗುಂಪೆಯಲ್ಲಿ 13 ಎಲೆಗಳು ಪಕ್ಕದಲ್ಲಿ ಎತ್ತಿ ಇಟ್ಟಿದ 2 ಎಲೆಗಳು ಇದ್ದು, ಮತ್ತು ನಗದು ಹಣ ರೂ.21,230/- ಗಳು ದೊರಕಿರುತ್ತವೆ.  ಸದರಿ ಸ್ಥಳವು ಕಲಬುರಗಿ ನಗರದ ಗಂಜ ಹನುಮಾನ ಟೇಂಪಲ ಪಕ್ಕದಲ್ಲಿರುವ ಶಾಮರಾವ ರೋಣದ ಎಂಬುವವರ ಮನೆಯ 3ನೇ ಮಹಡಿಯಲ್ಲಿರುವ ಒಂದು ಕೋಣೆಯಲ್ಲಿ ಜೂಜಾಟ ಆಡುತ್ತಿದ್ದು ಇರುತ್ತದೆ. ಹೀಗೆ ಒಟ್ಟು ನಗದು ಹಣ 41,230/- ರೂ ಗಳು ಮತ್ತು 52 ಇಸ್ಪಿಟ್ ಎಲೆಗಳು ದೊರಕಿರುತ್ತವೆ.  ಈ ಬಗ್ಗೆ ಜಪ್ತಿ ಪಂಚನಾಮೆಯನ್ನು ಇಂದು ದಿನಾಂಕ:03/11/2022 ರಂದು ರಾತ್ರಿ 9-00 ಗಂಟೆಯಿಂದ 10-00 ಗಂಟೆಯವರೆಗೆ ಕಲಬುರಗಿ ನಗರದ ಗಂಜ ಹನುಮಾನ ಟೇಂಪಲ ಪಕ್ಕದಲ್ಲಿರುವ ಶಾಮರಾವ ರೋಣದ ಎಂಬುವವರ ಮನೆಯ 3ನೇ ಮಹಡಿಯಲ್ಲಿರುವ ಒಂದು ಕೋಣೆಯಲ್ಲಿ ಪಂಚರ ಸಮಕ್ಷಮದಲ್ಲಿ ಲ್ಯಾಪಟ್ಯಾಪನಲ್ಲಿ ಲೈಟಿನ ಬೆಳಕಿನಲ್ಲಿ ಟೈಪ ಮಾಡಿಸಿ ಜಪ್ತಿ ಮಾಡಿದ ಮುದ್ದೇಮಾಲುಗಳನ್ನು ಪಂಚರು ಸಹಿ ಮಾಡಿದ ಚೀಟಿಯನ್ನು ಅಂಟಿಸಿ ತಾಭೆಗೆ ತೆಗೆದುಕೊಂಡಿದ್ದು ಇರುತ್ತದೆ.  ನಂತರ ಸದರಿ ಒಟ್ಟು 07 ಆಪಾದಿತರನ್ನು ಚೌಕ ಪೊಲೀಸ್ ಠಾಣೆಗೆ ಬಂದು ಜಪ್ತಿ ಪಂಚನಾಮೆ ಮತ್ತು ಮುದ್ದೆಮಾಲಿನೊಂದಿಗೆ ತಂದು ಹಾಜರುಪಡಿಸಿದ್ದು ಅವರ ವಿರುದ್ದ ಮುಂದಿನ ಕಾನೂನು ಕ್ರಮ ಕೈಕೊಳ್ಳಲು ವಿನಂತಿ ಅಂತಾ ನೀಡಿದ ದೂರಿನ ಸಾರಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಸಂಚಾರಿ ಪೊಲೀಸ್‌ ಠಾಣೆ -2 :-  ದಿನಾಂಕ 03/11/2022 ರಂದು 05:15 ಪಿ.ಎಮ್ ಕ್ಕೆ ಡಕ್ಕನಕೇರ ಆಸ್ಪತ್ರೆಯಿಂದ ಬಾಬಾಖಾನ್ ತಂದೆ ಬಷೀರಖಾನ ಪಠಾಣ ಈತನ ಆರ್.ಟಿ.ಎ ಎಮ್.ಎಲ್.ಸಿ ಮಾಹಿತಿ ಬಂದ ಮೇರೆಗೆ ನಾನು ಡಕ್ಕನಕೇರ ಆಸ್ಪತ್ರೆಗೆ ಭೇಟಿ ನೀಡಿ ಎಮ್.ಎಲ್.ಸಿ ಪತ್ರ ವಸೂಲ ಮಾಡಿಕೊಂಡು ಗಾಯಾಳು ಬಾಬಾಖಾನ್ ತಂದೆ ಬಷೀರಖಾನ ಪಠಾಣ ಇವರಿಗೆ ವಿಚಾರಿಸಲು ಹೇಳಿದ ಸಾರಾಂಶವೆನೆಂದರೆ, ದಿನಾಂಕ-03/11/2022 ರಂದು ಬೆಳಿಗ್ಗೆ 10:30 ಗಂಟೆ ಸುಮಾರಿಗೆ ಫಿರ್ಯಾಧಿಯು ತನ್ನ ವೈಯಕ್ತಿಕ ಕೆಲಸದ ಕುರಿತು ತನ್ನ ಮೋಟಾರ ಸೈಕಲ ನಂ ಕೆಎ-32 ಎಬಿ-0175 ನೇದ್ದರ ಮೇಲೆ ಲಾಲಗೇರಿ ಕ್ರಾಸ್ ಹತ್ತಿರ ಎಡಕ್ಕೆ ಟರ್ನ್ ಮಾಡಿ ರಸ್ತೆಯ ಬದಿಯಿಂದ ಹೋಗುವಾಗ ಗ್ಯಾರೇಜ ಹತ್ತಿರ ಒಂದು ಕಾರ ನಂ KA32 Z-6123 ನೇದ್ದರ ಚಾಲಕ ತನ್ನ ಕಾರನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾಧಿ ಮೋಟಾರ ಸೈಕಲಕ್ಕೆ ಓವರ ಟೆಕ್ ಮಾಡಲು ಹೋಗಿ ಬಲಭಾಗಕ್ಕೆ  ಡಿಕ್ಕಿ ಪಡಿಸಿ ಭಾರಿಗಾಯಗೊಳಿಸಿ ಫಿರ್ಯಾದಿಗೆ ಡೆಕ್ಕನಕೇರ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಕೆ ಮಾಡಿ ಹೇಳದೆ ಕೇಳದೆ ಅಲ್ಲಿಂದ ಓಡಿ ಹೋಗಿದ್ದು ಇರುತ್ತದೆ,  ಕಾರಣ ಕಾರ ನಂ ಕೆಎ-25 ಝಡ್-6123 ನೇದ್ದರ ಚಾಲಕ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಅಂತಾ ಇತ್ಯಾದಿ ಕೊಟ್ಟ ಹೇಳಿಕೆಯನ್ನು ಪಡೆದುಕೊಂಡು ಮರಳಿ ಠಾಣೆಗೆ 6:45 ಪಿ.ಎಮ್ ಕ್ಕೆ ಬಂದು ಈ ಹೇಳಿಕೆ ಫಿರ್ಯಾದಿಯ ಸಾರಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

ಇತ್ತೀಚಿನ ನವೀಕರಣ​ : 14-11-2022 04:43 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080