ಅಭಿಪ್ರಾಯ / ಸಲಹೆಗಳು

 ಅಶೋಕ ನಗರ ಪೊಲೀಸ್‌ ಠಾಣೆ :- ದಿನಾಂಕ:02.10.2022 ರಂದು ರಾತ್ರಿ 08:30 ಗಂಟೆಗೆ ನಾನು ಹಾಗೂ ನಮ್ಮ ಗೆಳೆಯರಾದ ಅನೀಲ್ ಆಳಂದ ಮತ್ತು ಸಚೀನ್ ಸುಲ್ತಾನಪೂರ ಮೂರು ಜನರು ಕೂಡಿ ಉದನೂರು ಕ್ರಾಸ್ ಹತ್ತಿರ ಬರುತ್ತಿರುವಾಗ ಆಗ ಅಲ್ಲೇ ಕ್ರಾಸ್ ಹತ್ತಿರ ನಿಂತಿದ್ದ ಸುನೀಲ್ ಪೂಜಾರಿ, ಬಸ್ಸು ಪೂಜಾರಿ , ಪುನೀತ್ ಕೊರಳ್ಳಿ ಮತ್ತು ಪ್ರಕಾಶ ಚವ್ಹಾಣ ಇವರುಗಳು ನಿಂತಿದ್ದನ್ನು ನೋಡಿ ನಾನು ಅವರ ಹತ್ತಿರ ಹೋಗಿ ನೀವುಗಳು ಕಳೆದ ನಾಲ್ಕು ದಿವಸಗಳ ಹಿಂದೆ ನಮ್ಮ ಮಾವನ ಮಕ್ಕಳಾದ ಚೇತನ ಮತ್ತು ಕೇತನ ಇವರಿಗೆ ಹೆದರಿಸಿ “ ವಿನಾಕಾರಣ ಅವರೊಂದಿಗೆ ಏಕೆ ತಂಟೆ-ತಕರಾರು ಮಾಡುವಿರಿ” ಅಂತ ಕೇಳಿದ್ದಕ್ಕೆ ಸುನೀಲ್ ಪೂಜಾರಿ ಮತ್ತು ಬಸ್ಸು ಪೂಜಾರಿ ಇವರುಗಳು ನನಗೆ ಅವಾಚ್ಯ ಶಬ್ದಗಳಿಂದ ಬೈಯುತ್ತಾ “ ಏ ಭೋಸುಡಿ ಮಗನೇ, ನೀ ಯಾರು ನಮಗೆ ಕೇಳುವವ” ಅಂತ ಅನ್ನುತ್ತಾ ಇಬ್ಬರೂ ನನ್ನ ಎದೆಯ ಮೇಲಿನ ಅಂಗಿ ಹಿಡಿದು ಕೈಯಿಂದ ಮುಖದ ಮೇಲೆ ಹಾಗೂ ಹೊಟ್ಟೆಯ ಮೇಲೆ ಹೊಡೆದಿರುತ್ತಾರೆ. ಅಲ್ಲದೇ ಸುನೀಲ್ ಇತನು ತನ್ನ ಹತ್ತಿರ ಇದ್ದ ಚಾಕುವಿನಿಂದ ನನ್ನ ತಲೆಯ ಮೇಲೆ ಹೊಡೆದಿದ್ದು ಇದರಿಂದ ರಕ್ತದ ಗಾಯವಾಗಿದ್ದು ಇರುತ್ತದೆ. ಪ್ರಕಾಶ ಚವ್ಹಾಣ ಇತನು ಅಲ್ಲೇ ಬಿದ್ದ ಒಂದು ಹಿಡಿಗಲ್ಲಿನಿಂದ ನನ್ನ ಬಲಗಡೆ ಎದೆಯ ಮೇಲೆ ಹೊಡೆದಿದ್ದು ಇದರಿಂದ ಗುಪ್ತ ಪೆಟ್ಟಾಗಿದ್ದು ಇರುತ್ತದೆ. ಪುನೀತ್ ಕೊರಳ್ಳಿ ಇತನು ಇನ್ನೂ ಚೆನ್ನಾಗಿ ಹೊಡೆಯಿರಿ ಅಂತ ಅವರುಗಳಿಗೆ ಪ್ರಚೋದನೆ ಮಾಡುತ್ತಿದ್ದನು. ಆಗ ನಾನು ಚಿರಾಡುವುದನ್ನು ಕೇಳಿ ನನ್ನ ಗೆಳೆಯರಾದ ಅನೀಲ್ ಮತ್ತು ಸಚೀನ್ ಇವರುಗಳು ಜಗಳ ಬಿಡಿಸಿದ್ದು ಇರುತ್ತದೆ. ಒಂದು ವೇಳೆ ಇವರು ಜಗಳ ಬಿಡಿಸದೇ ಇದ್ದರೇ ನನಗೆ ಇನ್ನೂ ಹೊಡೆ-ಬಡೆ ಮಾಡುತ್ತಿದ್ದರು. ನಂತರ ಸದರಿಯವರು ಅಲ್ಲಿಂದ ಹೋಗುವಾಗ ನಿನಗೆ ಇವತ್ತು ಜೀವಂತ ಬಿಟ್ಟಿದ್ದೆವೆ ಇನ್ನೋಮ್ಮೆ ನಮ್ಮ ತಂಟೆಗೆ ಬಂದರೆ ನಿನಗೆ ಜೀವ ಸಹಿತ ಬಿಡುವುದಿಲ್ಲ ಅಂತ ಜೀವ ಬೆದರಿಕೆ ಹಾಕಿ ಹೋಗಿರುತ್ತಾರೆ. ಅವರು ಹೋದ ನಂತರ ನನ್ನ ಗೆಳೆಯರಾದ ಅನೀಲ್ ಮತ್ತು ಸಚೀನ್ ಇವರುಗಳು ನನಗೆ ಉಪಚಾರ ಕುರಿತು ಜಿಲ್ಲಾ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಸೇರಿಕೆ ಮಾಡಿದ್ದು ಸದ್ಯ ಆಸ್ಪತ್ರೆಯಲ್ಲಿ ಉಪಚಾರ ಪಡೆಯುತ್ತಿದ್ದೆನೆ.  ಕಾರಣ ನನಗೆ ಹೊಡೆ ಬಡೆ ಮಾಡಿ ಜೀವದ ಬೆದರಿಕೆ ಹಾಕಿದ ಸುನೀಲ್ ಪೂಜಾರ, ಬಸ್ಸು ಪೂಜಾರಿ , ಪುನೀತ್ ಕೊರಳ್ಳಿ ಮತ್ತು ಪ್ರಕಾಶ ಚವ್ಹಾಣ ಇವರುಗಳ ವಿರುದ್ಧ ಕಾನೂನು ರೀತಿ ಕ್ರಮ ಜರುಗಿಸಬೇಕು ಅಂತ ಇತ್ಯಾದಿಯಾಗಿ ನೀಡಿದ ಹೇಳಿಕೆ ಫಿರ್ಯಾದಿ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

ಇತ್ತೀಚಿನ ನವೀಕರಣ​ : 31-10-2022 06:42 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080