ಅಭಿಪ್ರಾಯ / ಸಲಹೆಗಳು

ಸ್ಟೇಷನ್‌ ಬಜಾರ ಪೊಲೀಸ ಠಾಣೆ :-  ದಿನಾಂಕ. 03.09.2022 ರಂದು ಬೆಳಿಗ್ಗೆ 06:30 ಗಂಟೆಗೆ ಫಿರ್ಯಾದಿ ಶ್ರೀಮತಿ ವಂದನಾ ಪಿ,ಎಸ್,ಐ (ಕಾ & ಸು) ಸ್ಟೇಷನ್ ಬಜಾರ ಪೊಲೀಸ್ ಠಾಣೆರವರು ಠಾಣೆಗೆ ಬಂದು ಒಬ್ಬ ಆರೋಪಿತನನ್ನು ಮತ್ತು ಮುದ್ದೆ ಮಾಲು ಜಪ್ತಿ ಪಂಚನಾಮೆ ಹಾಗೂ ಜ್ಞಾಪನಾ ಪತ್ರ ಕೊಟ್ಟು ಕಾನೂನು ಕ್ರಮಕ್ಕಾಗಿ ಸೂಚಿಸಿದ್ದು, ಜ್ಞಾಪನಾ ಪತ್ರದ ಸಾರಾಂಶವೇನಂದರೆ, ಇಂದು ದಿನಾಂಕ:02.09.2022 ರಂದು ರಾತ್ರಿ 11.00 ಗಂಟೆಯಿಂದ ಠಾಣಾ ವ್ಯಾಪ್ತಿಯಲ್ಲಿ ರಾತ್ರಿ ಗಸ್ತು ಸುಪ್ರೈಸಿಂಗ್ ಕರ್ತವ್ಯ ನಿರ್ವಹಿಸುತ್ತಾ ಇಂದು ದಿನಾಂಕ: 03.09.2022 ರಂದು ಬೆಳಿಗ್ಗೆ 04.30 ಗಂಟೆಗೆ ನಾನು ಮತ್ತು ಜೊತೆಯಲ್ಲಿ ಸುಜಾತಾ ಮಪಿಸಿ 58 ಇಬ್ಬರು ಹಳೇ ಜೇವರ್ಗಿ ರಸ್ತೆಯ ಅಂಡರ್ ಬ್ರಿಡ್ಜ ಹತ್ತಿರ ಇದ್ದಾಗ ಮಾಹಿತಿ ತಿಳಿದುಬಂದಿದ್ದೆನೆಂದರೆ, ತಾರಫೈಲ್ ಬಡಾವಣೆಯ 13 ನೇ ಕ್ರಾಸ್ ಹತ್ತಿರದ ಖರ್ಗೇ ಶಾಲೆಯ ಹತ್ತಿರ ಒಂದು ಮನೆಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಯಾರೋ ಒಬ್ಬ ವ್ಯಕ್ತಿ ಸರಾಯಿ ಮಾರಾಟ ಮಾಡುತ್ತಿದ್ದಾನೆ ಅಂತಾ ಮಾಹಿತಿ ತಿಳಿದು ಬಂದ ಮೇರೆಗೆ ರಾತ್ರಿ ಗಸ್ತು ಕರ್ತವ್ಯದಲ್ಲಿದ್ದ ಸಿಬ್ಬಂದಿಗಳಾದ ಸಂಗಣ್ಣಾ ಸಿಪಿಸಿ 257 ಶಾಂತಲಿಂಗ ಸಿಪಿಸಿ 313 ಇವರನ್ನು ಕರೆಯಿಸಿ ಇಬ್ಬರು ಪಂಚರನ್ನು ಬರಮಾಡಿಕೊಂಡು ನಾನು ಮತ್ತು ಸಿಬ್ಬಂದಿ  ರವರೊಂದಿಗೆ ಹೋಗಿ ಬೆಳಿಗ್ಗೆ 05.00 ಗಂಟೆಗೆ ನೋಡಲು ಸಾರಾಯಿ ಪಾಕೇಟಗಳನ್ನು ಮಾರಾಟ ಮಾಡುತ್ತಿರುವುದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿ  ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಹಿಡಿದು ಅವನ ಹೆಸರು, ವಿಳಾಸ ವಿಚಾರಿಸಲು ತನ್ನ ಹೆಸರು 1) ಸುರೇಶ ತಂದೆ ಮಲ್ಲೇಶಪ್ಪಾ ಹಳೇಮನಿ ವಯ|| 35 ವರ್ಷ ಜಾ|| ಮಾದಿಗ ಉ|| ಕೂಲಿಕೆಲಸ ಸಾ|| 13ನೇ ಕ್ರಾಸ್ ತಾರಫೈಲ್ ಕಲಬುರಗಿ ಅಂತಾ ತಿಳಿಸಿದ್ದು, ಒಂದು ಪಕ್ಕದಲ್ಲಿರುವ ಒಂದು ಕೈಚೀಲವನ್ನು ಪರಿಶೀಲಿಸಿ ನೋಡಲು ಅದರಲ್ಲಿ 90 ಎಮ್,ಎಲ್ ನ 40 ಓರಿಜಿನಲ್ ಚಾಯೀಸ್ ವಿಸ್ಕೀ ಟೇಟ್ರಾ ಪ್ಯಾಕೇಟಗಳಿದ್ದು ಪ್ರತಿಯೊಂದು ಪಾಕೇಟನ ಬೆಲೆ 35 ರೈ. 13 ಪೈಸೆ ಗಳಿದ್ದು ಒಟ್ಟು ಕಿಮ್ಮತ್ತು 1,405 ರೂ. 02 ಪೈಸೆ ಇರುತ್ತವೆ. ಮಾರಾಟ ಮಾಡುತ್ತಿರುವ ಬಗ್ಗೆ ವಿಚಾರಿಸಲು ಅನಧೀಕೃತವಾಗಿ ಯಾವುದೆ ಪರವಾನಿಗೆ ಇಲ್ಲದೇ ಮಾರಾಟ ಮಾಡುತ್ತಿದ್ದೆನೆ ಅಂತಾ ಹೇಳಿ ಒಪ್ಪಿಕೊಂಡಿದ್ದು ಅವುಗಳನ್ನು ಪಂಚರ ಸಮಕ್ಷಮ ಕೇಸಿನ ಮುಂದಿನ ಪುರಾವೆಗಾಗಿ ಜಪ್ತಿ ಮಾಡಿಕೊಂಡು ಒಂದು ಬಿಳಿ ಬಟ್ಟೆಯ ಚಿಲದಲ್ಲಿ ಹಾಕಿ ಮೂತಿ ಹೊಲೆದು ಅದಕ್ಕೆ ಅರಗಿನಿಂದ “ಎಸ್” ಎಂಬ ಇಂಗ್ಲೀಷ ಅಕ್ಷರದಿಂದ ಶೀಲ ಮಾಡಿ ಪರೀಕ್ಷೆ ಕುರಿತು ತೆಗೆದುಕೊಂಡಿದ್ದು ಇರುತ್ತದೆ. ಸರಾಯಿ ಖರೀದಿ ಮಾಡಿಕೊಂಡ ಬಗ್ಗೆ ವಿಚಾರಿಸಲು ಮೋಹನ ಬಾರ್ ನಿಂದ ಖರೀದಿಸಿಕೊಂಡು ಬಂದಿರುವುದಾಗಿ ತಿಳಿಸಿರುತ್ತಾನೆ.  ಸದರಿ ಪಂಚನಾಮೆಯನ್ನು ಬೆಳಿಗ್ಗೆ 05.00 ಗಂಟೆಯಿಂದ 06.00 ಗಂಟೆಯವರೆಗೆ ಕೈಕೊಳ್ಳಲಾಯಿತು. ಈ ಜಪ್ತಿ ಪಂಚನಾಮೆ, ಆರೋಪಿ ಮತ್ತು ಮುದ್ದೆ ಮಾಲು ಸಮೇತ ಬೆಳಿಗ್ಗೆ 06.30 ಗಂಟೆಗೆ ಠಾಣೆಗೆ ತಂದು ಸದರಿಯವರ ಮೇಲೆ ಮುಂದಿನ ಕ್ರಮ ಕೈಕೊಳ್ಳಲು ಸೂಚಿಸಿದ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಬ್ರಹ್ಮಪೂರ ಪೊಲೀಸ್‌ ಠಾಣೆ :-  ದಿನಾಂಕ:03-09-2022  ರಂದು ಬೆಳಿಗ್ಗೆ ೧೧:೩೦ ಎಎಮ್ ಕ್ಕೆ ಫಿರ್ಯಾದಿದಾರರಾದ ಅಮೃತ ತಂದೆ ಪರಬಣ್ಣಾ ಕಣ್ಣಿ ವಯ:೩೯ ವರ್ಷ ಜಾ:ಲಿಂಗಾಯತ ಉ:ಖಾಸಗಿ ಕೆಲಸ ಸಾ//ಮನೆ ನಂ ೯-೫೮೬-೨೩/೩೦/೩೬/೨ ಆಳಂದ ಚೆಕ್ ಪೋಸ್ಟ ಹತ್ತಿರ ಸಿದ್ರಾಮೇಶ್ವರ ನಗರ ಕಲಬುರಗಿ ನಗರ. ಈ ಮೂಲಕ ವಿನಂತಿ ದೂರು ಅರ್ಜಿ ಸಲ್ಲಿಸುವುದೆನೆಂದರೆ, ನನ್ನದೊಂದು ಸ್ವಂತ ಹಿರೋ ಹೊಂಡಾ ಪ್ಯಾಷನ್ ಮೋಟರ್ ಸೈಕಲ್ ನಂ ಏಂ-೩೬-ಎ-೯೨೪೬ ನೇದ್ದು ಇದ್ದು ಸದರಿ ಮೋಟಾರ್ ಸೈಕಲ್‌ವು ನನ್ನ ಹೆಸರಿನಲ್ಲಿರುತ್ತದೆ. ಸದರಿ ಮೋಟಾರ್ ಸೈಕಲವು ದಿನಾಂಕ:೨೨/೦೮/೨೦೨೨ ರಂದು ಬೆಳಿಗ್ಗೆ ೧೦:೦೦ ಎ.ಎಮ್ ಗಂಟೆಗೆ ಕಲಬುರಗಿ ನಗರದ ವಿಠ್ಠಲ್ ನಗರದ ಬಿ ಗುರುವಿನಾಯಕ ಬಾಳಿಗ ರವರ ಮನೆಯ ಮುಂದೆ ನಿಲ್ಲಿಸಿ ಕೆಲಸದ ನಿಮಿತ್ಯ ಹೋಗಿದ್ದು ಕೆಲಸ ಮುಗಿಸಿಕೊಂಡು ಮರಳಿ ಅದೆ ದಿನ ಮದ್ಯಾಹ್ನ ೦೧:೩೦ ಪಿಎಮ್ ಗಂಟೆಗೆ ಬಂದು ನಾನು ನಿಲ್ಲಿಸಿದ ಸ್ಥಳದಲ್ಲಿ ಮೋಟಾರ್ ಸೈಕಲ್ ನೋಡಲಾಗಿ ನನ್ನ ಮೋಟಾರ್ ಸೈಕಲ್ ಇರಲಿಲ್ಲಾ, ಮೋಟಾರ್ ಸೈಕಲ್ ಪತ್ತೆ ಕುರಿತು ಎಲ್ಲಾ ಕಡೆ ಹುಡುಕಾಡಿದರೂ ಮೋಟಾರ್ ಸೈಕಲ್ ಸಿಕ್ಕಿರುವುದಿಲ್ಲಾ ಆದ್ದರಿಂದ ಠಾಣೆಗೆ ಬಂದು ಅರ್ಜಿ ಕೊಡಲು ತಡವಾಗಿರುತ್ತದೆ. ಕಾರಣ ಕಳುವಾದ ನನ್ನ ಮೋಟಾರ್ ಸೈಕಲನ್ನು ಪತ್ತೆ ಹಚ್ಚಿ ಸೂಕ್ತ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಕೊಟ್ಟ ದೂರು ಅರ್ಜಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಸಂಚಾರಿ ಪೊಲೀಸ್‌ ಠಾಣೆ -2 :-  ದಿನಾಂಕ 03/09/2022 ರಂದು ಮಧ್ಯಾಹ್ನ 12:30 ಗಂಟೆ ಸುಮಾರಿಗೆ ಕುಮಾರಿ ಶಿವಲೀಲಾ ತಂದೆ ವೀರಭದ್ರಪ್ಪಾ ಧುತ್ತರಗಾ ಇವರು ನೀಡಿರುವ ಫಿರ್ಯಾದಿಯನ್ನು ಅವರ ಅಣ್ಣ ಠಾಣೆಗೆ ತಂದು ಹಾಜರು ಪಡಿಸಿದ್ದು ಸಾರಂಶವೆನೆಂದರೆ, ತಾನು ಕಲಬುರಗಿಯಲ್ಲಿ ಕಾಲೇಜ ಕಲೆಯುತ್ತಿದ್ದು, ದಿನಾಂಕ 31/08/2022 ರಂದು ಬೆಳಿಗ್ಗೆ 10:30 ಗಂಟೆ ಸುಮಾರಿಗೆ ಮೋಟರ ಸೈಕಲ ನಂ. ಕೆಎ 32 ಇ.ಕೆ 7532 ನೇದ್ದರ ಹಿಂದೆ ತಮ್ಮ ಸಹೋದರ ಸುರೇಶ ತಂದೆ ರೇವಣಸಿದ್ದಪ್ಪಾ ಈತನು ಕೂಡಿಸಿಕೊಂಡು ಸುಪರ ಮಾರ್ಕೆಟಿನ ದತ್ತ ಮಂದಿರದ ಹತ್ತೀರ ಬರುತ್ತಿರುವಾಗ ತನ್ನ ಅಣ್ಣನ ನಿಸ್ಕಾಳಜಿತನದಿಂದ ನಡೆಯಿಸಿ ಬ್ರೇಕ ಹಾಕಿದಕ್ಕೆ ಫಿರ್ಯಾದಿದಾರಳು ಮೋಟರ ಸೈಕಲದ ಹಿಂದುಗಡೆ ಬಿದ್ದಿದ್ದು ಇರುತ್ತದೆ. ಇದರಿಂದ ಫಿರ್ಯಾದಿಯ ಎಡಗೈ ಮುಳೆ ಮುರದಿದ್ದು, ಎರಡು ಕಾಲುಗಳಿಗೆ ಗಾಯವಾಗಿದ್ದು ಮತ್ತು ಬಲಗೈ ಅಂಗಗೈಗೆ ಗಾಯವಾಗಿರುತ್ತದೆ. ಅಣ್ಣ ಈತನು ವಿನಾಯಕ ಪಾಟೀಲ ಆಸ್ಪತ್ರೆಯಲ್ಲಿ ಉಪಚಾರಕ್ಕಾಗಿ ಸೇರಿಕೆ ಮಾಡಿರುತ್ತಾನೆ. ಈ ವಿಷಯದಲ್ಲಿ ಸುರೇಶ ತಂದೆ ರೇವಣಸಿದ್ದಪ್ಪಾ ಈತನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಇತ್ಯಾದಿ ಕೊಟ್ಟ ಫಿರ್ಯಾದಿ ಸಾರಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಫರಹತಾಬಾದ ಪೊಲೀಸ ಠಾಣೆ :- ನಾನು ನವೀನ್ ಎಂ ತಂದೆ ಮಾಣಿಕರಾವ ಪಸಾರ, ವ:33 ವರ್ಷ, ಜಾತಿ:ಲಿಂಗಾಯತ, ಉ:ಆಹಾರ ನಿರೀಕ್ಷಕರು, ತಹಸೀಲ ಕಾರ್ಯಾಲಯ, ಕಲಬುರಗಿ ಸರ್ಕಾರಿ ತರ್ಫೆ ಈ ಮೂಲಕ ಫಿರ್ಯಾದು ಸಲ್ಲಿಸುವುದೇನೆಂದರೆ,  ಇಂದು ದಿನಾಂಕ:03-09-2022 ರಂದು ತಹಸೀಲ್ ಕಛೇರಿಯಲ್ಲಿ ಕೆಲಸ ಮಾಡುತ್ತಿದ್ದಾಗ ಅಂದಾಜು ಸಮಯ 1.00 ಗಂಟೆಗೆ  ಹಾಗರಗುಂಡಗಿ ಕಡೆಯಿಂದ ಫರಹತಾಬಾದ ಮಾರ್ಗವಾಗಿ ಪಡಿತರ ಆಹಾರಧಾನ್ಯವನ್ನು ಟಂಟಂ ವಾಹನಗಳಲ್ಲಿ ಅಕ್ರಮವಾಗಿ ಸಂಗ್ರಹಿಸಿಕೊಂಡು ಕಲಬುರಗಿ ಕಡೆಗೆ ಬರುತ್ತಿರುವ ಬಗ್ಗೆ ಬಾತ್ಮಿ ಬಂದ ಮೇರೆಗೆ  ಸದರಿ ವಿಷಯವನ್ನು ಮೇಲಾಧಿಕಾರಿಗಳಿಗೆ ತಿಳಿಸಿ ದಾಳಿ ಮಾಡಲು ಫರಹತಾಬಾದ್ ಠಾಣೆಗೆ ಹಾಜರಾಗಿ ಠಾಣೆಯ ಪೊಲೀಸ್ ನಿರೀಕ್ಷಕರಿಗೆ ಪೊಲೀಸ್ ಸಿಬ್ಬಂದಿಗಳನ್ನು ಒಸಗಿಸಲು ಕೇಳಿದರ ಮೇರೆಗೆ  ಇಬ್ಬರು ಪಂಚರೊಂದಿಗೆ ನಾನು ಹಾಗೂ ಪೊಲೀಸ್ ಸಿಬ್ಬಂದಿಗಳಾದ  ಶ್ರೀ ಗಡ್ಡೆಪ್ಪ  ಸಿ.ಎಚ್.ಸಿ. 165, ರಾಮು ರಾಠೋಡ ಸಿ.ಹೆಚ್.ಸಿ 26, ತಿರುಪತಿ ಸಿಪಿಸಿ 291, ಆನಂದ್ ಸಿಪಿಸಿ 296, ರವರುಗಳು ಕೂಡಿಕೊಂಡು ದಾಳಿ ಕಾಲಕ್ಕೆ ಹಾಜರಿದ್ದು           ನಂತರ ನಾವುಗಳೆಲ್ಲಾ ಫರಹತಾಬಾದ ಪೊಲೀಸ ಠಾಣೆಯ ಮುಂದಿನ ರಸ್ತೆಯ ಮೇಲೆ ನಿಂತು ಕಾಯುತ್ತಿರುವಾಗ ಫರಹತಾಬಾದ ಬಜಾರ ಕಡೆಯಿಂದ ಮದ್ಯಾಹ್ನ 2.45 ಗಂಟೆಯ ಸುಮಾರಿಗೆ ಒಂದರ ಹಿಂದೆ ಒಂದರಂತೆ ಎರಡು ಟಂಟಂ ಗಳು ಹಾಗೂ ಒಂದು ಟಾಟಾ ಎಸಿ ಬರುತ್ತಿರುವುದನ್ನು ನೋಡಿ ಅವುಗಳನ್ನು ನಮ್ಮಗೆ ತೋರಿಸಿ ಎಲ್ಲರೂ ಕೂಡಿಕೊಂಡು ನಮ್ಮ ಸಮಕ್ಷಮದಲ್ಲಿ ದಾಳಿ ಮಾಡಿ ವಾಹನಗಳನ್ನು ನಿಲ್ಲಿಸುವಂತೆ ಸೂಚಿಸಿದರಿಂದ ಸದರಿ ವಾಹನಗಳ ಚಾಲಕರು ತಮ್ಮ ತಮ್ಮ ವಾಹನಗಳನ್ನು ಒಂದರ ಹಿಂದೆ ಒಂದು ನಿಲ್ಲಿಸಿದರು. ಆಗ ನವೀನ್.ಸರ್ ಹಾಗೂ ಪೊಲೀಸ ಸಿಬ್ಬಂದಿಯವರು ಸದರಿ ವಾಹನಗಳನ್ನು ನಮ್ಮ ಸಮಕ್ಷಮದಲ್ಲಿ ಪರೀಶೀಲನೆ ಮಾಡಲಾಗಿ ಟಂಟಂ ನಂ ಕೆಎ-32/ಬಿ-3281 , ಟಂಟಂ ನಂ ಕೆಎ-28/ಸಿ-5443 ಹಾಗೂ ಟಾಟಾ ಎಸಿ ನಂ ಕೆಎ-32/ಬಿ-5127 ಅಂತಾ ಇರುತ್ತವೆ. ಟಂಟಂ ನಂ ಕೆಎ-32/ಬಿ-3281 ನೆದ್ದರ ಚಾಲಕನ ಹೆಸರು ಮತ್ತು ವಿಳಾಸ ವಿಚಾರಿಸಲಾಗಿ ಅವನು ತನ್ನ ಹೆಸರು ವಿಜಯ ತಂದೆ ಬಲಭೀಮ ಬಂಢಾರಿ ವಯ: 19 ವರ್ಷ  ಉ: ಟಂಟಂ ಚಾಲಕ ಜಾತಿ: ಮಾದಿಗ (ಎಸ್.ಸಿ) ಸಾ: ಸೇವಾಲಾಲ ಚೌಕ ಹತ್ತಿರ ಫಿಲ್ಟರ ಬೆಡ ಹತ್ತಿರ ಕಲಬುರಗಿ ಅಂತಾ ತಿಳಿಸಿದ್ದು, ಅದರಲ್ಲಿ ಇನ್ನೊಬ್ಬ ವ್ಯಕ್ತಿಯಿದ್ದು ಅವನ ಹೆಸರು ವಿಚಾರಿಸಲಾಗಿ ಅವನು ತನ್ನ ಹೆಸರು ರೇವಣಸಿದ್ದ ತಂದೆ ಮಲ್ಲೇಶ ವಯ: 20 ವರ್ಷ ಉ: ಕೂಲಿಕೆಲಸ ಜಾತಿ: ಮೇದಾ (ಎಸ್ ಟಿ) ಸಾ: ಜೋಡ ಹನುಮಾನ ಗುಡಿ ಹತ್ತಿರ ಶಹಾಬಜಾರ ಕಲಬುರಗಿ ಅಂತಾ ತಿಳಿಸಿದ್ದು, ಸದರಿ ಟಂಟಂ ನಂ ಕೆಎ-32/ಬಿ-3281 ವಾಹನದಲ್ಲಿದ್ದ ಮಾಲನ್ನು ಚೆಕ್ಕ ಮಾಡಲಾಗಿ ಅಂದಾಜು 40-45 ಕೆಜಿಯ ಒಟ್ಟು 26 ಅಕ್ಕಿ ಚೀಲಗಳಿದ್ದು ಅವುಗಳ ಅ:ಕಿ; 30,000/- ಇರುತ್ತದೆ. ಮತ್ತೊಂದು ಟಂಟಂ ನಂ ಕೆಎ-28/ಸಿ-5443 ಅಂತಾ ಇದ್ದು, ಅದರ ವಾಹನ ಚಾಲಕ ಫಕೀರಪ್ಪ ಅಲಿಯಾಸ್ ಪ್ರಕಾಶ್ ತಂದೆ ದುರ್ಗಪ್ಪ ಜಾಧವ್ ವಯ: 22 ವರ್ಷ ಉ:ಚಾಲಕ ಜಾತಿ:ವಡ್ಡರ ಸಾ: ಫರಹತಾಬಾದ ಅಂತಾ ತಿಳಿಸಿದ್ದು, ಸದರಿ ಟಂಟಂ ದಲ್ಲಿ ಅಂದಾಜು 40-45 ಕೆಜಿಯುಳ್ಳ ಒಟ್ಟು 12 ಅಕ್ಕಿ ಚೀಲಗಳಿದ್ದು ಅವುಗಳ ಅ:ಕಿ; 13500/- ರೂ ಮತ್ತು ಅಂದಾಜು 40-45 ಕೆಜಿಯುಳ್ಳ ಒಟ್ಟು 4 ಜೋಳದ ಚೀಲಗಳಿದ್ದು ಅವುಗಳ ಅ:ಕಿ; 4500/- ಇರುತ್ತದೆ. ನಂತರ ಟಾಟಾ ಎಸಿ ನಂ ಕೆಎ-32/ಬಿ-5127 ಅಂತಾ ಇದ್ದು ಅದರ ವಾಹನ ಚಾಲಕನ ಹೆಸರು ವಿಚಾರಿಸಲಾಗಿ ವಿಶ್ವರಾಜ ತಂದೆ ಬಾಬುರಾಯ ಪಟ್ಟಣ ವಯ:25 ವರ್ಷ : ಚಾಲಕ ಜಾತಿ: ಲಿಂಗಾಯಿತ ಸಾ: ಮಂದರವಾಡ ತಾ:ಜೇವರ್ಗಿ ಅಂತಾ ತಿಳಿಸಿದ್ದು , ಸದರಿ ವಾಹನದಲ್ಲಿ ಅಂದಾಜು 40-45 ಕೆಜಿಯುಳ್ಳ ಒಟ್ಟು 19 ಅಕ್ಕಿ ಚೀಲಗಳಿದ್ದು ಅವುಗಳ ಅ:ಕಿ; 20,000/- ರೂ.  ಇದ್ದು,  ಸದರಿ ವಾಹನಗಳಲ್ಲಿದ್ದ ಮಾಲಿನ ಬಗ್ಗೆ ದಾಖಲಾತಿಗಳನ್ನು ಚಾಲಕರಿಗೆ ವಿಚಾರಿಸಲಾಗಿ ಯಾವುದೇ ದಾಖಲಾತಿಗಳು ಇರುವುದಿಲ್ಲಾ ಕಾಳಸಂತೆಯಲ್ಲಿ ಮಾರಾಟ ಮಾಡುವ ಉದ್ದೇಶದಿಂದ ಪಡಿತರ ಚೀಟಿದಾರರಿಂದ ಕಡಿಮೆ ದರದಲ್ಲಿ ಖರೀದಿ ಮಾಡಿ ಕಾಳಸಂತೆಯಲ್ಲಿ ಹೆಚ್ಚಿನ ದರದಲ್ಲಿ ಮಾರಾಟ ಮಾಡುವ ಉದ್ದೇಶಕ್ಕಾಗಿ ಸಾಗಾಟ ಮಾಡುತ್ತಿದ್ದೆವೆ ಅಂತಾ ತಿಳಿಸಿರುತ್ತಾರೆ.  ಹೀಗೆ ಒಟ್ಟು ಅ.ಕಿ.ರೂ.68000/- ಕಿಮ್ಮತ್ತಿನ ಪಡಿತರ ಆಹಾರ ಧಾನ್ಯಗಳು ದೊರೆತಿದ್ದು, ನವೀನ್ ಎಮ್ ಆಹಾರ ನಿರೀಕ್ಷಕರು ನಮ್ಮ ಸಮಕ್ಷಮ ಜಪ್ತು ಮಾಡಿಕೊಂಡಿದ್ದು ಇರುತ್ತದೆ. ಫರತಾಬಾದ ಪೊಲೀಸ್ ಠಾಣೆಗೆ ಬಂದು ಜಪ್ತಿ ಪಡಿಸಲಾದ ಆಹಾರಧಾನ್ಯ, ವಾಹನಗಳನ್ನು ಹಾಗೂ ಸದರಿ ವಾಹನಗಳ ಚಾಲಕರನ್ನು ತಮ್ಮ ತಾಬೆಗೆ ಒಪ್ಪಿಸಿದ್ದು ಇರುತ್ತದೆ.  ನಂತರ ನನ್ನ ವರದಿಯನ್ನು ತಯಾರಿಸಿ ಸದರಿ ಆರೋಪಿತರ ವಿರುದ್ದಅಗತ್ಯ ವಸ್ತುಗಳ ಕಾಯ್ದೆ 1955, 3&7 ಆಕ್ಟ್ ಅಡಿಯಲ್ಲಿ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಸಬ್‌ ಅರ್ಬನ್‌ ಪೊಲೀಸ ಠಾಣೆ :- ದಿನಾಂಕ 03-09-2022 ರಂದು ಫಿರ್ಯಾದಿ  ಆಸ್ಪತ್ರೆಯಲ್ಲಿ ನೀಡಿದ ಫಿರ್ಯಾದಿಯೇನೆಂದರೆ ನನ್ನ ಸದರಿ ಆರೋಪಿತನೊಂದಿಗೆ ಫಿರ್ಯಾದಿಗೆ ೧೧ ವರ್ಷ ಗಳ ಹಿಂದೆ ಮಧುವೆಯಾಗಿದ್ದು ಸದರಿ ಆತ ತುಂಬಾ ಕುಡುಕನಾಗಿದ್ದರಿಂದ ಯಾವಾಗಲು ಜಗಳತೆಗೆಯುವುದು ಮತ್ತು ನನಗೆ ಹೊಡೆ ಬಡೆ ಮಾಡುತ್ತಿದ್ದನು ಹಾಗಾಗಿ ನಾನು ಅವನಿಂದ ವಿವಾಹ ವಿಚ್ಚೇಧನವನ್ನು ಪಡೆದುಕೊಂಡಿದ್ದು ಸದರಿ ಆರೋಪಿತನು ನಾನು ನನ್ನ ತಂದೆಯ ಮನೆಯಲ್ಲಿದ್ದ ಸಂದರ್ಭದಲ್ಲಿ ಬಂದು ನನಗೆ ಹೊಡೆ ಬಡೆ ಮಾಡಿರುವುದಲ್ಲದೆ ನನಗೆ ಅವಾಚ್ಯವಾಗಿ ಬೈದು ಮಾನ ನಿಂದನೆ ಮಾಡಿದ್ದಾರೆ ಎಂದು ಫಿರ್ಯಾದಿ ಕೊಟ್ಟ ಹೇಳಿಕೆ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

ಇತ್ತೀಚಿನ ನವೀಕರಣ​ : 16-09-2022 06:45 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080