ಅಭಿಪ್ರಾಯ / ಸಲಹೆಗಳು

ಸಂಚಾರಿ ಪೊಲೀಸ್‌ ಠಾಣೆ -2 :- ದಿನಾಂಕ 03-08-2022 ರಂದು ಬೆಳಿಗ್ಗೆ ೦೭-೩೦ ಗಂಟೆಗೆ ಫಿರ್ಯಾಧಿ ಶ್ರೀ ಸಂತೋಷಕುಮಾರ ತಂದೆ ಶಿವಾರೆಡ್ಡಿ ಹೊತಗಲ್ಲ ಇವರು ಠಾಣೆಗೆ ಹಾಜರಾಗಿ ಒಂದು  ಫಿರ್ಯಾಧಿ ಅರ್ಜಿ ಸಲ್ಲಿಸಿದೆನೆಂದರೆ, ಫಿರ್ಯಾಧಿಯ ದೊಡ್ಡಪ್ಪನ ಮಗನಾದ ಶರಣಬಸಪ್ಪಾ ತಂದೆ ರಾಮಣ್ಣಾ ವ; ೪೭ವರ್ಷ ಈತನಿದ್ದು ದಣ್ಣೂರ ತಾಂಡಾದಲ್ಲಿ ಸರಕಾರಿ ಶಾಲೆಯ ಸಹಶಿಕ್ಷಕನಾಗಿದ್ದು ನಿನ್ನೆ ದಿನಾಂಕ ೦೨/೦೮/೨೦೨೨ ರಂದು ರಾತ್ರಿ ತನ್ನ ಮೋಟಾರ ಸೈಕಲ ನಂ ಕೆಎ-೩೨ ಎಸ್-೮೮೫೩ ನೇದ್ದರ ಮೇಲೆ ಮರ‍್ಕೆಟಗೆ ಹೋಗಿ ಮರಳಿ ತನ್ನ ಮನೆಗೆ ಹೋಗುವಾಗ ರಾತ್ರಿ ೦೯-೪೫ ಗಂಟೆ ಸುಮಾರಿಗೆ ಬಾಳೆ ಲೇಔಟದ ಸರಸ್ವತಿ ವಿದ್ಯಾ ಮಂದಿರ ಶಾಲೆ ಹತ್ತಿರ ವೇಗದಲ್ಲಿ ಮತ್ತು ಮಳೆ ಬರುತ್ತಿರುವುದರಿಂದ ಅವಸರದಲ್ಲಿ ಹೋಗುವಾಗ ಮೋಟಾರ ಸೈಕಲ ನಿಯಂತ್ರಣ ಮಾಡಿಕೊಳ್ಳದೆ ರೋಡಿನ ಬದಿಯ ಕೆ.ಇ.ಬಿ. ಕಂಬಕ್ಕೆ ಡಿಕ್ಕಿ ಹೊಡೆದು ಹಾಗೆ ಕಂಪೌಂಡ ಗೊಡೆಗೆ ತಗಲಿ ತೆಲೆಯ ಭಾಗಕ್ಕೆ ಮತ್ತು ಹಣೆಯ ಭಾಗಕ್ಕೆ ಭಾರಿ ರಕ್ತಗಾಯವಾಗಿ ಕವಿಯಿಂದ, ಬಾಯಿಯಿಂದ, ಮೂಗಿನಿಂದ ರಕ್ತಗಾಯವಾಗಿ ಸ್ಥಳದಲ್ಲಿಯೇ ಮೃತ ಪಟ್ಟಿದ್ದು ಘಟನೆಯನ್ನು ಕಂಡವರು ಮಾಹಿತಿ ನೀಡಿದ್ದು ಶವವನ್ನು  ಜಿಲ್ಲಾ ಸರಕಾರಿ ಆಸ್ಪತ್ರೆಗೆ ಕಲಬುರಗಿಯಲ್ಲಿದ್ದು ಮುಂದಿನ ಕ್ರಮ ಕೈಕೊಳ್ಳಬೇಕೆಂದು ಕೊಟ್ಟ ಲಿಖಿತ ಫಿರ್ಯಾಧಿ ಅರ್ಜಿ  ಸಾರಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ. 

 

ಬ್ರಹ್ಮಪೂರ ಪೊಲೀಸ್‌ ಠಾಣೆ :-  ದಿನಾಂಕ: 03-08-2022  ರಂದು ೧೧:೩೦ ಎಎಮ್ ಕ್ಕೆ ಫಿರ್ಯಾದಿದಾರರಾದ ಶ್ರೀಮತಿ ರೇಖಾ ಗಂಡ ವೀರಯ್ಯ ಮಠಪತಿ ವಯ:೪೦ವರ್ಷ ಜಾ:ಜಂಗಮ ಉ:ಶಿಕ್ಷಕಿ ಸಾ//ಜಿಡಿಎ ಕಾಲೋನಿ ಫಿಲ್ಟರ್ ಬೆಡ್ಡ್ ಕಲಬುರಗಿ ನಗರ ಈ ಮೂಲಕ ವಿನಂತಿ ದೂರು ಅರ್ಜಿ ಸಲ್ಲಿಸುವುದೆನೆಂದರೆ, ನನ್ನದೊಂದು ಸ್ವಂತ ಹೋಂಡಾ ಆಕ್ಟೀವಾ ಮೋಟಾರ್ ಸೈಕಲ್ ನಂ: ಏಂ-೩೨-ಇಖ-೦೪೨೮ ನೇದ್ದು ಇದ್ದು ಸದರಿ ಮೋಟಾರ್ ಸೈಕಲ್‌ವು ನನ್ನ ಹೆಸರಿನಲ್ಲಿರುತ್ತದೆ. ಸದರಿ ಮೋಟಾರ್ ಸೈಕಲವು ದಿನಾಂಕ: ೨೩/೦೭/೨೦೨೧ ರಂದು ಬೆಳಿಗ್ಗೆ ೧೦:೩೦ ಎ.ಎಮ್ ಗಂಟೆಗೆ ಕಲಬುರಗಿ ನಗರದ ಶರಣಬಸವೇಶ್ವರ ದೇವಸ್ಥಾನದ ಎದುರುಗಡೆ ಇರುವ ಜಾತ್ರಾ ಮೈದಾನದಲ್ಲಿ ನಿಲ್ಲಿಸಿ ಶರಣಬಸವೇಶ್ವರ ದೇವಸ್ಥಾನಕ್ಕೆ ಹೋಗಿ ಕೆಲಸ ಮುಗಿಸಿಕೊಂಡು ಮರಳಿ ಅದೆ ದಿನ ಬೆಳಿಗ್ಗೆ ೧೧:೦೦ ಎ.ಎಮ್ ಗಂಟೆಗೆ ಬಂದು ನಾನು ನಿಲ್ಲಿಸಿದ ಸ್ಥಳದಲ್ಲಿ ಮೋಟಾರ್ ಸೈಕಲ್ ನೋಡಲಾಗಿ ನನ್ನ ಮೋಟಾರ್ ಸೈಕಲ್ ಇರಲಿಲ್ಲಾ, ಮೋಟಾರ್ ಸೈಕಲ್ ಪತ್ತೆ ಕುರಿತು ಎಲ್ಲಾ ಕಡೆ ಹುಡುಕಾಡಿದರೂ ಮೋಟಾರ್ ಸೈಕಲ್ ಸಿಕ್ಕಿರುವುದಿಲ್ಲಾ ಆದರಿಂದ ಠಾಣೆಗೆ ಬಂದು ಅರ್ಜಿ ಕೊಡಲು ತಡವಾಗಿರುತ್ತದೆ. ಕಾರಣ ಕಳುವಾದ ನನ್ನ ಮೋಟಾರ್ ಸೈಕಲನ್ನು ಪತ್ತೆ ಹಚ್ಚಿ ಸೂಕ್ತ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಕೊಟ್ಟ ದೂರು ಅರ್ಜಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ. 

 

 

ಸ್ಟೇಷನ್‌ ಬಜಾರ ಪೊಲೀಸ್‌ ಠಾಣೆ :- ದಿನಾಂಕ:02-08-2022 ರಂದು ಮದ್ಯಾಹ್ನ ೦೩-೩೦ ಗಂಟೆಯಲ್ಲಿ ಡಾ! ಭಾಗ್ಯಶ್ರೀ ಪಾಟೀಲ್ ಆಸ್ಪತ್ರೆ ಗೇಟ್ ಹತ್ತಿರ ಯುನೋವಾ ಕಾರ್ ನಂ, ಕೆಎ-೩೨ಎನ್ ೪೮೩೫- ನಿಲ್ಲಿಸಿರುತ್ತೇನೆ. ಡಾ! ಭಾಗ್ಯಶ್ರೀ ಪಾಟೀಲ ರವರು ಯುನೋವಾ ಕಾರ್ ನಂ, ಕೆಎ-೩೨ಎನ್ ೪೮೩೫-ನಡುವಿನ ಶೀಟ್‌ನಲ್ಲಿ ತಮ್ಮ ವ್ಯಾನಿಟಿ ಬ್ಯಾಗ್ ಇಟ್ಟು ಸದರಿ ಆಸ್ಪತ್ರೆಯ ಒಳಗಡೆ ಹೋಗಿರುತ್ತಾರೆ. ನಂತರ ಇದೆ ದಿನ ೦೪-೦೦ ಗಂಟೆಗೆ ಡಾ! ಭಾಗ್ಯಶ್ರೀ ಪಾಟೀಲ ರವರು ಬಂದು ನೋಡಿದಾಗ ಸದರಿ ಶೀಟ್‌ನಲ್ಲಿ ಇಟ್ಟಿದ್ದ ವ್ಯಾನಿಟಿ ಬ್ಯಾಗ ಇರಲಿಲ್ಲ. ಸದರಿ ಬ್ಯಾಗ್‌ನಲ್ಲಿ ಇಟ್ಟಿದ್ದ ೧) ೪ ವಿವಿಧ ಬ್ಯಾಂಕಗಳ ಪಾಸ್ ಬುಕಗಳು ಅ.ಕಿ ೦೦-೦೦/ರೂ ೨) ಎಸ್.ಬಿ.ಐ ಬ್ಯಾಂಕ್ ಚೆಕ್ಕ ಬುಕ್ ಅ.ಕಿ೦೦-೦೦ರೂ/ ೩) ನಗದು ಹಣ ೫೦೦೦೦/-ರೂ ಹೀಗೆ ಒಟ್ಟು ೫೦೦೦೦/-ರೂ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಎಂದು ಕೊಟ್ಟ ದೂರು ಅರ್ಜಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ. 

 

 

ವಿಶ್ವವಿದ್ಯಾಲಯ ಪೊಲೀಸ್‌ ಠಾಣೆ :- ದಿನಾಂಕ 03-08-2022  ರಂದು ೩.೩೦ ಪಿ.ಎಮ್ ಕ್ಕೆ ಸದರಿ ಆರೋಪಿಯು ತಮ್ಮ ಮಾವನಾದ ಫಿರ್ಯಾದಿಗೆ ಹೊಡೆಬಡೆ ಮಾಡಿ ಅವಾಚ್ಯವಾಗಿ ಬೈದು ಜೀದವ ಭಯ ಹಾಕಿದ ಬಗ್ಗೆ ದೂರು ಇರುತ್ತದೆ.

 

 

ರೋಜಾ ಪೊಲೀಸ್‌ ಠಾಣೆ :- ದಿನಾಂಕ:03-08-2022 ರಂದು ಸಾಯಾಂಕಾಲ ೧೬:೪೫  ಗಂಟೆಗೆ ನಂದಿನಿ ಹಾಲಿನ ಡೈರಿಯ ಕಂಪೌಂಡ ಹತ್ತಿರ ಸಾರ್ವಜನಿಕ ರಸ್ತೆಯ ಮೇಲೆ ಒಬ್ಬ ವ್ಯಕ್ತಿ ತನ್ನ ಲಾಭಗೋಸ್ಕರ ಸಾರ್ವಜನಿಕರಿಂದ ಹಣ ಪಡೆದು ೦೧ ರೂಪಾಯಿಗೆ ೮೦ ರೂಪಾಯಿ ಕೊಡುವುದಾಗಿ ಹೇಳಿ ಕಲ್ಯಾಣ ಮತ್ತು ಬಾಂಬೆ ಮಟಕಾ ಅಂಕಿ ಸಂಖ್ಯೆಗಳ ಚೀಟಿಯನ್ನು ಮಟಕಾ ಬರೆದುಕೊಳ್ಳುತ್ತಿದ್ದ ವ್ಯಕ್ತಿಯನ್ನು ಪಂಚರ ಸಮಕ್ಷಮ ಹಿಡಿದು ವಿಚಾರಿಸಲು ಅವನ ಹೆಸರು: ಶೇಖ ನಿಸಾರ ಅಹ್ಮದ ತಂದೆ ಮಹ್ಮದ ಅಫ್ಜಲ ವಯಾ: ೩೩ ವರ್ಷ, ಜಾತಿ: ಮುಸ್ಲಿಂ, ಉದ್ಯೋಗ: ಹಳೇ ಕಾರು ಮಾರಾಟ ವಾಸ: ಮನೆ ನಂ: ೭-೨೦೭೮ ಜವಾರಿನ ಶಾಲೆ ಹತ್ತಿರ ನಯಾ ಮೋಹಲ್ಲಾ  ಹಾ/ ವ: ಅಲಿ ಮಸೀದಿ ಹತ್ತಿರ ಇಸ್ಲಾಮಾಬಾದ ಕಾಲೋನಿ ಕಲಬುರಗಿ ಮೋನಂ ೮೮೮೦೬೮೨೭೭೩ ಅಂತಾ ತಿಳಿಸಿದನು . ನಂತರ ಅವನ  ಅಂಗ ಶೋಧನೆ ಮಾಡಲಾಗಿ, ನಗದು ಹಣ ೧೬೨೧-೦೦/-ರೂ ಮತ್ತು  ಒಂದು ಮಟಕಾ ಚೀಟಿ ಒಂದು ಬಾಲ ಪೆನ್ ದೊರೆತಿದ್ದು ಇರುತ್ತದೆ. ಜಪ್ತಿ ಪಡಿಸಿಕೊಂಡ ಮುದ್ದೇಮಾಲುಗಳನ್ನು ೧೬.೪೫ ಗಂಟೆಯಿಂದ ೧೭.೪೫ ಗಂಟೆಯವರೆಗೆ ಜಪ್ತಿ ಪಂಚನಾಮೆಯನ್ನು ಮಾಡಿ  ಪಂಚರು ಸಹಿ ಮಾಡಿದ ಚೀಟಿಯನ್ನು ಅಂಟಿಸಿ ಸ್ಥಳದಲ್ಲಿ ಕುಳಿತು ಪಂಚರ ಸಮಕ್ಷಮದಲ್ಲಿ ಜಪ್ತಿ ಪಂಚನಾಮೆಯನ್ನು ಬರೆದು ಮಾನ್ಯ ಪಿ ಐ ಸಾಹೇಬರು ೧೮:೧೦ ಒಬ್ಬ ಆರೋಪಿ ಹಾಗು ಮುದ್ದೆಮಾಲ ಸಹಿತ ಠಾಣೆಗೆ ವರದಿ ನೀಡಿದ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ. 

 

 

ಸಬ್‌ ಅರ್ಬನ್‌ ಪೊಲೀಸ ಠಾಣೆ :- ದಿನಾಂಕ ೧೨-೦೨-೨೦೨೨ ರಂದು ಬೆಳಿಗ್ಗೆ ೬-೦೦ ಎ.ಎಮ್ ಗಂಟೆಗೆ ಹೈದ್ರಾಬಾದನಿಂದ ವಾಪಾಸು ಮನೆ ಬಂದು ನೋಡಲು ಯಾರೋ ಕಳ್ಳರು ಮನೆ ಕೀಲಿ ಮುರಿದು ಮನೆಯಲ್ಲಿದ್ದು ೦೧] ೧೦ ಗ್ರಾಂ ಬಂಗಾರದ ಒಂದು ಕೊವಿಯೊಲೆಗೆಳು ಅ.ಕಿ ೫೦,೦೦೦/- ರೂ ೦೨] ೧೦ ಗ್ರಾಂ ಬಂಗಾರದ ಕೈ ಬಳೆ ಅ.ಕಿ ೫೦೦೦೦/- ರೂ ೦೩] ೨೦೦ ಗ್ರಾಂ ಬೆಳ್ಳಿಯ ಕಾಲು ಚೈನುಗಳ ೧೨,೦೦೦/- ರೂ ೦೪] ೦೨ ಸ್ಮಾಟ ð ಫೋನ ಮೋಬೈಲ್ಗಳು ಅ.ಕಿ ೧೦,೦೦೦/- ರೂ ಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಕೊಟ್ಟ ದೂರು ಅರ್ಜಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ. 

 

 

 ಸಬ್‌ ಅರ್ಬನ್‌ ಪೊಲೀಸ ಠಾಣೆ  :- ದಿನಾಂಕ ೨೫-೦೭-೨೦೨೨ ರಂದು ಸಾಯಂಕಾಲ ೭-೦೦ ಪಿ.ಎಮ್ ಕ್ಕೆ ನಮ್ಮ ಮನೆ ಮುಂದೆ ನಿಲ್ಲಿಸಿದ ಮೊಟಾರ್ ಸೈಕಲ್ ನಂ ಕೆಎ೩೬ ಇಎಲ್೧೫೧೫ ಅ.ಕಿ ೩೦೦೦೦/- ರು ನೇದ್ದನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಕೊಟ್ಟ ದೂರು ಅರ್ಜಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ. 

 

 

ಇತ್ತೀಚಿನ ನವೀಕರಣ​ : 05-08-2022 06:46 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080