ಅಭಿಪ್ರಾಯ / ಸಲಹೆಗಳು

ಸಂಚಾರಿ ಪೊಲೀಸ್‌ ಠಾಣೆ-2  :- ದಿನಾಂಕ 03/07/2022 ರಂದು ಸಾಯಂಕಾಲ 06:00 ಗಂಟೆಗೆ ಶ್ರೀ. ಸಿದ್ದಪ್ಪಾ ತಂದೆ ಶರಣಪ್ಪ ಸುಬೆದಾರ ವಯಃ 58 ವರ್ಷ ಜಾತಿಃ ಲಿಂಗಾಯತ ಉಃ ದಿನಪತ್ರಿಕೆಯ ಸಂಪಾದಕರು ಸಾಃ ಪ್ಲಾಟ ನಂ. 263 ಮಹಾವೀರ ನಗರ ರೈಲ್ವೆ ಪಟ್ರಿ ಎದುರುಗಡೆ ಕಲಬುರಗಿ  ಇವರು ಠಾಣೆಗೆ ಹಾಜರಾಗಿ ಹೇಳಿಕೆ ಫಿರ್ಯಾದಿ ನೀಡಿದ್ದು ಸಾರಂಶವೆನೆಂದರೆ, ಇಂದು ದಿನಾಂಕ 03/07/2022 ರಂದು ಸಾಯಂಕಾಲ 4:45 ಗಂಟೆಗೆ ನನ್ನ ತಮ್ಮ ದುಂಡೇಶ ಈತನು ನನಗೆ ಫೋನ್ ಮಾಡಿ ಮಾಹಿತಿ ತಿಳಿಸಿದ್ದೆನೆಂದರೆ, ಶಹಾಬಾದ ರೋಡಿನ ಶೇಟ್ಟಿ ಇಂಜೀನಿಯರ ಕಾಲೇಜದ ಸಮೀಪ ಈಶ್ವರಿ ನಗರದ ಕ್ರಾಸಿನ ಹತ್ತೀರ ಮಗ ಅಮೀತ ಮತ್ತು ಆತನ ಗೆಳೆಯರು ಕಾರಿನಲ್ಲಿ ಶಹಾಬಾದ ರೋಡಿನ ಕಡೆಗೆ ಹೋಗುವಾಗ ಎದುರುಗಡೆಯಿಂದ ಲಾರಿ ಟ್ಯಾಂಕರ ಚಾಲಕನು ಅಪಘಾತ ಪಡಿಸಿದ್ದರಿಂದ ಭಾರಿಗಾಯಗೊಂಡು ಸರಕಾರಿ ಆಸ್ಪತ್ರೆ ಕಡೆಗೆ ಕಳುಹಿಸಿಕೊಡುತ್ತಿರುತ್ತಾರೆ ಅಂತಾ ಮಾಹಿತಿ ತಿಳಿಸಿದ್ದಕ್ಕೆ ಕೂಡಲೆ ನಾನು ಮತ್ತು ನನ್ನ ಹೆಂಡತಿ ಸುನೀತಾ ಇಬ್ಬರೂ ಕಲಬುರಗಿ ಸರಕಾರಿ ಆಸ್ಪತ್ರೆಗೆ ಬಂದು ಖಾಸಗಿ ಅಂಬುಲೇನ್ಸದಲ್ಲಿ ಹಾಕಿರುವ ಮಗ ಅಮೀತನಿಗೆ ನೋಡಲಾಗಿ ಆತನ ಹಣೆಯ ಮತ್ತು ತಲೆಯ ಭಾಗಕ್ಕೆ ಹಾಗು ಇತರೆ ಕಡೆಗಳಲ್ಲಿ ಭಾರಿ ಪ್ರಮಾಣದ ಗಾಯವಾಗಿ ಮೃತ ಪಟ್ಟಿದನು. ಅಲ್ಲದೆ ಆತನ ಗೆಳೆಯ ಆದರ್ಶ ತಂದೆ ಬಸವಂತರಾಯ ಬಿರಾದಾರ ಈತನಿಗೂ ಕೂಡಾ ಹಣೆಯ ಭಾಗಕ್ಕೆ, ತಲೆಯ ಭಾಗಕ್ಕೆ ಇತರೆ ಕಡೆಗಳಲ್ಲಿ ಭಾರಿಗಾಯವಾಗಿ ಆತನು ಕೂಡಾ ಮೃತ ಪಟ್ಟಿದನು.  ವಿಚಾರಣೆಯಲ್ಲಿ ವಿಷಯಗೊತ್ತಾಗಿದ್ದೆನೆಂದರೆ, ನಮ್ಮ ತಮ್ಮನ ಮಗ ಅಮೀತ ಹಾಗು ಆತನ ಗೆಳೆಯರಾದ ಆದರ್ಶ ತಂದೆ ಬಸವಂತರಾಯ ಬಿರಾದಾರ ಹಾಗು ಇನ್ನೊಬ್ಬ ಗೆಳೆಯ ಮಹಾಂತೇಶ ತಂದೆ ಮಲ್ಲಿಕಾರ್ಜುನ ಬಿಲಗುಂದಿ ಮೂವರು ಕೂಡಿ ಸ್ವಿಪ್ಟ ಡಿಜೈರ ಕಾರ ನಂ. ಕೆಎ 53 ಎ 9033 ನೇದ್ದರಲ್ಲಿ ಕಲಬುರಗಿಯಿಂದ ಶಹಾಬಾದ ರೋಡಿನ ಕಡೆಗೆ ಹೋಗುವಾಗ ಅಮೀತನು ಕಾರನ್ನು ನಡೆಯಿಸಿಕೊಂಡು ಹೋಗುವಾಗ ಮಧ್ಯಾಹ್ನ 3:45 ಗಂಟೆ ಆಗಿರಬಹುದು ಶಹಾಬಾದ ರೋಡಿನ ಶೇಟ್ಟಿ ಕಾಲೇಜಿನ ಈಶ್ವರಿ ನಗರದ ಕ್ರಾಸಿನ ಹತ್ತೀರ ಹೊಗುತ್ತಿರುವಾಗ ಎದುರುಗಡೆ ರೋಡಿನಿಂದ ಲಾರಿ ಟ್ಯಾಂಕರ ನಂ. ಕೆಎ 33-7809 ನೇದ್ದರ ಚಾಲಕನು ಅತಿವೇಗದಿಂದ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ರೋಡಿನ ಮಧ್ಯದಲ್ಲಿ ಕಾರಿಗೆ ಅಪಘಾತ ಪಡಿಸಿದ್ದಕ್ಕೆ ಕಾರು ಲಾರಿಯಲ್ಲಿ ಸಿಲುಕಿಕೊಂಡಿದ್ದರಿಂದ ಮುಂದೆ ಕುಳಿತ ಅಮೀತ ಮತ್ತು ಆದರ್ಶ ಇವರಿಬ್ಬರಿಗೆ ಮೇಲಿನಂತೆ ಗಾಯವಾಗಿ ಸ್ಧಳದಲ್ಲಿ ಮೃತ ಪಟ್ಟಿದ್ದು ಮತ್ತು ಕಾರಿನ ಹಿಂಭಾಗದ ಸಿಟಿನಲ್ಲಿ ಕುಳಿತ ಮಹಾಂತೇಶ ತಂದೆ ಮಲ್ಲಿಕಾರ್ಜುನ ಬಿಲಗುಂದಿ ಈತನಿಗು ಕೂಡಾ ಹಣೆಯ ಭಾಗಕ್ಕೆ, ತಲೆಯ ಭಾಗಕ್ಕೆ ಹಾಗು ಇತರೆ ಕಡೆಗಳಲ್ಲಿ ಭಾರಿಗಾಯವಾಗಿ ಎ.ಎಸ್.ಎಮ್ ಆಸ್ಪತ್ರೆಯಲ್ಲಿ ಉಪಚಾರ ಪಡೆಯುತ್ತಿರುವ ಬಗ್ಗೆ ತಿಳಿದು ಬಂದಿರುತ್ತದೆ. ಈ ವಿಷಯದ ಬಗ್ಗೆ ಕಾನೂನು ಪ್ರಕಾರ ಕ್ರಮ  ಕೈಗೊಳ್ಳಬೇಕೆಂದು ಕೊಟ್ಟ ಹೇಳಿಕೆ ಫಿರ್ಯಾದಿ ಸಾರಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

ವಿಶ್ವವಿದ್ಯಾಲಯ ಪೊಲೀಸ್‌ ಠಾಣೆ :- ೦೧-೦೭-೨೦೨೨ ರಂದು ೧೦:೫೦ ಪಿ.ಎಮ್ ಕ್ಕೆ    ಯಾರೋ ಅಪರಿಚಿತ ವ್ಯಕ್ತಿಯು ರಾತ್ರಿ ಊಟ ಮಾಡಿಕೊಂಡು  ನಮ್ಮ ಮನೆಯ ಮುಂದೆ ರೋಡಿನ ಸೈಡಿನಲ್ಲಿ ವಾಕಿಂಗ ಮಾಡುತ್ತಿದ್ದೇನು. ಆಗ ರಾತ್ರಿ ೧೦:೫೦ ಗಂಟೆ ಆಗಿರ ಬಹುವುದು.  ಅದೆ ವೇಳೆ ನನ್ನ ಎದರುಗಡೆಯಿಂದ ಒಂದು ಬಿಳಿ ಬಣ್ಣದ ಹೊಂಡಾ ಆಕ್ಟಿವ ಮೊಟಾರ ಸೈಕಲದ ಮೇಲಿದ್ದ ಅಪರಿಚಿತ ಮೂರು ಜನರು ಬಂದವರೆ ನನ್ನ ಹತ್ತಿರ ತಮ್ಮ ಮೊಟಾರ ಸೈಕಲ ಸ್ಲೋ ಮಾಡಿದನು. ಆಗ ಮೊಟಾರ ಸೈಕಲದ ಮದ್ಯದಲ್ಲಿ ಕುಳಿತ ವ್ಯಕ್ತಿ ನನ್ನ ಕೊರಳಲ್ಲಿ ಕೈ ಹಾಕಿ ನನ್ನ ಕೊರಳ್ಳಲ್ಲಿನ ಹಾಕಿಕೊಂಡ ೮ ಗ್ರಾಂ ಬಂಗಾರದ ಲಾಕೇಟ ಅ.ಕಿ ೪೫,೦೦೦/-ರೂ ಕಿಮ್ಮತಿನದು ಕಿತ್ತುಕೊಂಡು ಹೋದ ಬಗ್ಗೆ ಅಪರಾಧ ಇರುತ್ತದೆ.

 

ಬ್ರಹ್ಮಪೂರ ಪೊಲೀಸ್‌ ಠಾಣೆ :-  ದಿನಾಂಕ 03-07-2022   ರಂದು ೬-೩೦ ಪಿ.ಎಂಕ್ಕೆ ಸರಕಾರಿ ತರ್ಪೇ ಪಿರ್ಯಾದಿದಾರರಾಗಿ ಶ್ರೀ ರಾಘವೇಂದ್ರ ಹೆಚ್.ಎಸ್.  ಪಿ.ಐ  ರವರು ವರದಿ ಮತ್ತು ಜಪ್ತಿ ಪಂಚನಾಮೆ ಆರೋಪಿ ಹಾಗೂ ಮುದ್ದೇಮಾಲಿನೊಂದಿಗೆ ಠಾಣೆಗೆ ಬಂದು ಪಿರ್ಯಾದಿ ಸಲ್ಲಿಸಿದ ಸಾರಾಂಶವೆನೆAದರೆ, ಇಂದು ದಿನಾಂಕ: ೦೩/೦೭/೨೦೨೨  ರಂದು ಮದ್ಯಾಹ್ನ ೪-೦೦ ಗಂಟೆಯ ಸುಮಾರಿಗೆ ನಾನು ಠಾಣೆಯಲ್ಲಿದ್ದಾಗ ಖಚಿತ ಬಾತ್ಮೀ ಬಂದಿದ್ದೇನೆಂದರೆ, ಸುಪರ್ ಮಾರ್ಕೇಟ್‌ದ ಹಳೇ ಕೆ.ಎಸ್.ಆರ್.ಪಿ ಕ್ವಾಟರ್ಸ್ದ ಕಾರ್ ಪಾರ್ಕಿಂಗ್‌ದ ಸಾರ್ವಜನಿಕರ ಸ್ಥಳದಲ್ಲಿ  ೧೦-೧೨   ಜನರು ದುಂಡಾಗಿ ಕುಳಿತು ಹಣವನ್ನು ಪಣಕ್ಕೆ ಹಚ್ಚಿ ಅಂದರ ಬಾಹರ ಎಂಬ ಇಸ್ಪೇಟ್ ಜೂಜಾಟ ಆಡುತ್ತಿದ್ದಾರೆ. ಅಂತಾ ಖಚಿತವಾದ ಬಾತ್ಮಿ ಬಂದ ಮೇರೆಗೆ ಪಂಚರಾದ ೧) ಶ್ರೀ. ಶಾಂತಲಿಂಗ ತಂದೆ ಮನೋಹರ ಗೌಳಿ ವಯಸ್ಸು ೨೩ವರ್ಷ ಜಾತಿ; ಲಿಂಗಾಯತ ಉ; ಹೋಟಲ ಕೆಲಸ ಸಾ; ಮಿಲನ ಚೌಕ ಕಲಬುರಗಿ  ೨) ಶ್ರೀ. ಅಕ್ಷಯಕುಮಾರ ತಂದೆ ಭರತ ಚಿಲ್ಲಾಳ ವಯಸ್ಸು ೨೭ ವರ್ಷ ಜಾತಿ; ಮರಾಠಿ ಉ; ಖಾಸಗಿ ಕೆಲಸ ಸಾ; ಹೋಳಿ ಕಟ್ಟಾ ಮಕ್ತಂಪೂರ ಕಲಬುರಗಿ ಇವರಿಗೆ ಬರಮಾಡಿಕೊಂಡು ಪಂಚರಿಗೆ ವಿಷಯ ತಿಳಿಸಿ  ನಾನು ಮತ್ತು ಸಿಬ್ಬಂದಿಯವರಾದ ಶಿವಪ್ರಕಾಶ ಹೆಚ್.ಸಿ ೧೫೬, ರಾಮು ಪವಾರ ಪಿ.ಸಿ ೭೬೧, ಸುರೇಶ ಪಿ.ಸಿ ೯೫೯, ಸಂತೋಷಕುಮಾರ ಪಿ.ಸಿ ೯೦೦, ಉತ್ತಮ್ ಪಿ.ಸಿ ೨೬೮,  ಮತ್ತು ಶಿವಶರಣಪ್ಪ ಪಿ.ಸಿ ೬೮  ರವರೊಂದಿಗೆ ಮಧ್ಯಾಹ್ನ ೪-೩೦  ಗಂಟೆಗೆ ಠಾಣೆಯಿಂದ ಸರಕಾರಿ ಜೀಪನಲ್ಲಿ  ಹೊರಟು  ಹಳೆ ಕೆ.ಎಸ್.ಆರ್.ಪಿ ಕ್ವಾಟರ್ಸದ ಕಾರ್ ಪಾರ್ಕಿಂಗ್ ಹತ್ತಿರ ೪-೪೫ ಪಿ.ಎಂಕ್ಕೆ ಹೋಗಿ ಅಲ್ಲಿ ಗೋಡೆ ಪಕ್ಕ ಮರೆಯಾಗಿ ನಿಂತು ನೋಡಲು ಸಾರ್ವಜನಿಕ ಸ್ಥಳದಲ್ಲಿ ೧೪-೧೫  ಜನರು ದುಂಡಾಗಿ ಕುಳಿತು ಹಣವನ್ನು ಪಣಕ್ಕೆ ಹಚ್ಚಿ ಇಸ್ಪೇಟ ಎಲೆಗಳ ಸಹಾಯದಿಂದ ಅಂದರ ೧೦೦ ರೂಪಾಯಿ ಬಾಹರ ೧೦೦ ರೂಪಾಯಿ ಅಂತಾ ಇಸ್ಪೇಟ ಜೂಜಾಟ ಆಡುತ್ತಿರುವದನ್ನು ನೋಡಿ ಖಾತ್ರಿ ಪಡಿಸಿಕೊಂಡು ಪಿಐ ರವರು ಸಿಬ್ಬಂದಿಯವರ ಸಹಾಯದಿಂದ ಪಂಚರ  ಸಮಕ್ಷಮದಲ್ಲಿ ಅವರ ಮೇಲೆ ದಾಳಿ ಮಾಡಿ ಇಸ್ಪೀಟ ಜೂಜಾಟ ಆಡುತ್ತಿದ್ದ ೧೫ ಜನರನ್ನು ಹಿಡಿದುಕೊಂಡಿದ್ದು ಅವರಲ್ಲಿ ಒಬ್ಬನು ಓಡಿ ಹೋಗಿದ್ದು ಇರುತ್ತದೆ. ಸಿಕ್ಕಿ ಬಿದ್ದವರ  ಹೆಸರು ವಿಳಾಸ ವಿಚಾರಿಸಿ ಅಂಗ ಜಡ್ತಿ ಮಾಡಲು ಅವರು ತಮ್ಮ ಹೆಸರುಗಳು ೧) ಸಾಗರ ತಂದೆ ವಿಠಲ ತಗಡಗರ್ ವಯಸ್ಸು ೨೨ ವರ್ಷ ಜಾತಿ; ಮರಾಠಾ ಉ; ವ್ಯಾಪಾರ ಸಾ; ಹೋಳಿಕಟ್ಟಾ ಮಕ್ತಂಪೂರ ಕಲಬುರಗಿ ಇತನ ಅಂಗ ಜಡ್ತಿ  ಮಾಡಲು ಅವನ ಹತ್ತಿರ ೧೬೦೦/- ರೂ ನಗದು ಹಣ ಮತ್ತು ೧೫ ಇಸ್ಪೇಟ್ ಎಲೆಗಳು ೨) ರವಿ ತಂದೆ ವಿಜಯಕುಮಾರ ಶಹಾಬಾದಿ ವಯಸ್ಸು ೪೧ ವರ್ಷ ಜಾತಿ; ಈಳಿಗ ಉ; ಖಾಸಗಿ ಕೆಲಸ ಸಾ; ಬಸವೇಶ್ವರ ನಗರ ಕಲಬುರಗಿ ಇತನ ಅಂಗ ಜಡ್ತಿ  ಮಾಡಲು ಅವನ ಹತ್ತಿರ ೧೭೫೦ ನಗದು ಹಣ ದೊರೆತವು. ೩) ಸಿದ್ದು ತಂದೆ ನಾಗಣ್ಣ ಶಿವಣಗಿ ವಯಸ್ಸು ೩೨ ವರ್ಷ ಜಾತಿ; ಲಿಂಗಾಯತ ಉ; ಚಾಲಕ ಸಾ; ಶಹಾಬಜಾರ ಕಲಬುರಗಿ ಇತನ ಅಂಗ ಜಡ್ತಿ ಮಾಡಲು ೧೫೦೦/- ರೂ ನಗದು ಹಣ ೧೭ ಇಸ್ಪೇಟ್ ಎಲೆಗಳು  ೪) ಯಾಕುಬ್ ತಂದೆ ಇಸ್ಮಾಯಿಲ್ ಮಾಢ್ಯಾಳ ವಯಸ್ಸು ೨೩ ವರ್ಷ ಜಾತಿ; ಮುಸ್ಲಿಂ ಉ; ವ್ಯಪಾರ ಸಾ; ಸ್ಟೇಷನ ಗಾಣಗಾಪೂರ ತಾ; ಅಪ್ಜಲಪೂರ ಜಿ. ಕಲಬುರಗಿ ಇತನ ಅಂಗ ಜಡ್ತಿ ಮಾಡಲು ಇತನ ಹತ್ತಿರ ೧೬೦೦/-  ರೂ ೫) ಕುಶಾಲ ತಂದೆ ಮಾರುತಿ ಕಾಡವಾದ್ ವಯಸ್ಸು ೨೧ ವರ್ಷ ಜಾತಿ; ಲಿಂಗಾಯತ ಉ; ಖಾಸಗಿ ಕೆಲಸ ಸಾ; ಶಹಾಬಜಾರ ಕಲಬುರಗಿ  ಇತನ ಅಂಗ ಜಡ್ತಿ ಮಾಡಲು ನಗದು ಹಣ ೧೩೦೦/- ರೂ ೬) ಆರೀಫ್ ತಂದೆ ಅಬ್ದುಲ ರಜಾಕ್ ಪುಲವಾಲೆ ವಯಸ್ಸು ೨೬ ವರ್ಷ ಜಾತಿ; ಮುಸ್ಲಿಂ ಉ; ಹೂವಿನ ವ್ಯಾಪಾರ ಸಾ; ಶಹಾಬಜಾರ ಕಲಬುರಗಿ ಇತನ ಅಂಗ ಜಡ್ತಿ ಮಾಡಲು ನಗದು ಹಣ ೧೫೦೦/- ರೂ ೭) ಪ್ರಮೋದ ತಂದೆ ಪ್ರಕಾಶ ಅಂಬರಖಾನೆ ವಯಸ್ಸು ೪೧ ವರ್ಷ ಜಾತಿ; ಲಿಂಗಾಯತ ಉ; ಖಾಸಗಿ ಕೆಲಸ ಸಾ; ಗಾಜಿಪೂರ ಕಲಬುರಗಿ ಇತನ ಅಂಗ ಜಡ್ತ ಮಾಡಲು ನಗದು ಹಣ ೧೦೦೦/- ರೂಪಾಯಿ ೮) ಪ್ರಕಾಶ ತಂದೆ ಸುಭಾಷ ಗೌಳಿ ವಯಸ್ಸು ೩೧ ವರ್ಷ ಜಾತಿ; ಲಿಂಗಾಯತ ಉ; ವ್ಯಾಪಾರ ಸಾ; ಗಾಜಿಪೂರ ಕಲಬುರಗಿ ಇತನ ಅಂಗ ಜಡ್ತಿ ಮಾಡಲು ೨೮೫೦/- ರೂಪಾಯಿ ೯) ಸಂತೋಷ ತಂದೆ ಶರಣಪ್ಪ ಮಾಳಿ ವಯಸ್ಸು ೨೪ ವರ್ಷ ಜಾತಿ; ಲಿಂಗಾಯತ ಉ; ವಿದ್ಯಾರ್ಥೀ ಸಾ; ಸ್ಟೇಷನ ಗಾಣಗಾಪೂರ ತಾ;  ಅಫ್ಜಲಪೂರ ಜಿ. ಕಲಬುರಗಿ ಇತನ ಅಂಗ ಜಡ್ತ ಮಾಡಲು ನಗದು ಹಣ ೨೦೫೦/- ರೂಪಾಯಿ ೧೦) ಅನೀಲ ತಂದೆ ಅರುಣಕುಮಾರ ಗುಜಾಡೆ ವಯಸ್ಸು ೩೩ ವರ್ಷ ಜಾತಿ; ಸಾಳೆ ಉ; ಖಾಸಗಿ ಕೆಲಸ ಸಾ; ಮಕ್ತಂಪೂರ ಕಲಬುರಗಿ ಇತನ ಅಂಗ ಜಡ್ತಿ ಮಾಡದಲು ನಗದು ಹಣ ೧೭೦೦/- ರೂಪಾಯಿ ೧೧) ಪ್ರಬಾಕರ ತಂದೆ ರಾಚಪ್ಪ ಅಂಬರಖಾನೆ ವಯಸ್ಸು ೩೩ ವರ್ಷ ಜಾತಿ; ಲಿಂಗಾಯತ ಉ; ವ್ಯಾಪಾರ ಸಾ; ದರ್ಗಾ ರಸ್ತೆ ಜಲಾಲ ವಾಡಿ ಕಲಬುರಗಿ ಇತನ ಅಂಗ ಜಡ್ತಿ ಮಾಡಲು ನಗದು ಹಣ ೧೫೫೦/- ರೂಪಾಯಿ ೧೨) ಅಬ್ದುಲ ಅಜೀಜ ತಂದೆ ಉಸ್ಮಾನ ಗುಲ್‌ಫರೋಸ್ ವಯಸ್ಸು ೩೪ ವರ್ಷ ಜಾತಿ; ಮುಸ್ಲಿಂ ಉ; ಹೂವಿನ ವ್ಯಾಪಾರ ಸಾ; ಮಿಜಗುರಿ  ಕಲಬುರಗಿ ಇತನ ಅಂಗ ಜಡ್ತಿ ಮಾಡಲು ನಗದು ಹಣ ೧೨೦೦/- ರೂಪಾಯಿ ೧೩) ಸಿದ್ದಾರಾಮ ತಂದೆ ಚಂದ್ರಕಾಂತ ಪಾಟೀಲ ವಯಸ್ಸು ೩೮ ವರ್ಷ ಜಾತಿ; ಲಿಂಗಾಯತ ಉ; ಖಾಸಗಿ ಕೆಲಸ ಸಾ; ಶಹಾಬಜಾರ ನಾಕಾ ಕಲಬುರಗಿ ಇತನ ಅಂಗ ಜಡ್ತಿ ಮಾಡಲು ನಗದು ಹಣ ೫೦೦/- ರೂಪಾಯಿ ೧೪) ಗಣೇಶ ತಂದೆ ರೇವಣಸಿದ್ದಪ್ಪ ಗೌಳಿ ವಯಸ್ಸು ೩೫ ವರ್ಷ ಜಾತಿ; ಲಿಂಗಾಯತ ಉ; ವ್ಯವಸಾಯ ಸಾ; ಮಕ್ತಂಪೂರ ಕಲಬುರಗಿ  ಇತನ ಅಂಗ ಜಡ್ತಿ ಮಾಡಲು ನಗದು ಹಣ ೩೩೫೦/- ರೂಪಾಯಿ ದೊರೆತಿದ್ದು ಇರುತ್ತದೆ. ಸ್ಥಳದಲ್ಲಿ ೨೦ ಇಸ್ಪೆಟ್ ಎಲೆಗಳು ಹೀಗೆ ಒಟ್ಟು ೨೩,೪೫೦/-ರೂ ನಗದು ಹಣ ೫೨ ಇಸ್ಪೇಟ್ ಎಲೆಗಳು ದೊರೆತವು. ಅವುಗಳನ್ನು ಕೇಸಿನ ಮುಂದಿನ ಪುರಾವೆಗಾಗಿ ಜಪ್ತಿ ಮಾಡಿಕೊಂಡು  ವಶಕ್ಕೆ ತೆಗೆದುಕೊಂಡೆನು.  ಓಡಿ ಹೋದವನ ಬಗ್ಗೆ ವಿಚಾರಿಸಲು ಅವನ ಹೆಸರು ೧೫) ಸುಪ್ರೀತ ನವಲೆ ವಯಸ್ಸು ೩೦ ವರ್ಷ ಜಾತಿ; ಮರಾಠಾ ಸಾ; ಹೋಳಿ ಕಟ್ಟಾ ಕಲಬುರಗಿ ಅಂತಾ ತಿಳಿಸಿದ್ದು,ಇರುತ್ತದೆ.ಸದರಿ ಜಪ್ತಿ ಪಂಚನಾಮೆ ಕಾಲಕ್ಕೆ ಸಿಕ್ಕ ನಗದು ಹಣ ೨೩.೪೫೦/- ರೂಪಾಯಿ ೫೨ ಇಸ್ಪೇಟ್ ಎಲೆಗಳು  ಪಂಚರ ಸಮಕ್ಷಮ ಕೇಸಿನ ಮುಂದಿನ ಪುರಾವೆಗಾಗಿ ಜಪ್ತಿ ಮಾಡಿಕೊಂಡು ಪಂಚರ ಸಮಕ್ಷಮ ಪಂಚನಾಮೆಯನ್ನು ಬರೆದು ಪಂಚನಾಮೆ, ಮುದ್ದೆಮಾಲು ಹಾಗೂ ೧೪ ಜನ ಆರೋಪಿತರನ್ನು ಈ ವರದಿಯೊಂದಿಗೆ ಹಾಜರು ಪಡಿಸಿದ್ದು ಮುಂದಿನ ಕಾನೂನು ಕ್ರಮ  ಕೈಕೊಳ್ಳಬೇಕು ಅಂತಾ ಕೊಟ್ಟ ಪಿರ್ಯಾದಿ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

ಇತ್ತೀಚಿನ ನವೀಕರಣ​ : 16-07-2022 06:49 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080