ಅಭಿಪ್ರಾಯ / ಸಲಹೆಗಳು

ರಾಘವೇಂದ್ರ ನಗರ ಪೊಲೀಸ್ ಠಾಣೆ:-ದಿನಾಂಕ:02/07/2021 ರಂದು 12.10 ಪಿ.ಎಂಕ್ಕೆ ಶ್ರೀಮತಿ ಕಸ್ತೂರಿಬಾಯಿ ಗಂಡ ಶಂಕರ ಸಣ್ಣಮನಿ ವಯಃ 58 ವರ್ಷ ಜಾಃ ಕುರುಬ ಉಃ ಮನೆ ಕೆಲಸ ಸಾಃ ಸಂಗಮತಾಯಿ ಕಾಲೋನಿ ಕಲಬುರಗಿ ರವರು ಠಾಣೆಗೆ ಹಾಜರಾಗಿ ಕೈಯಿಂದ ಕನ್ನಡದಲ್ಲಿ ಬರೆದ ದೂರು ಹಾಜರಪಡಿಸಿದ ಸಾರಾಂಶವೆನೆಂದರೆ ನನಗೆ ಅಶ್ವೀನಿ, ಅರುಣ, ಅಂಜಾನಾ, ಅಪ್ಪಾಸಾಹೇಬ ಅಂತಾ ನಾಲ್ಕು ಜನ ಮಕ್ಕಳು ಇರುತ್ತಾರೆ. ಮೋದಲನೆ ಮಗಳಿಗೆ ಮದುವೆ ಮಾಡಿದ್ದು ಅವಳು ಗಂಡನ ಮನೆಯಲ್ಲಿ ಇರುತ್ತಾಳೆ. ಸದ್ಯ ನಮ್ಮ ಮನೆಯಲ್ಲಿ ನಾನು ಮತ್ತು ನನ್ನ ಎರಡು ಗಂಡು ಮಕ್ಕಳು ಹಾಗೂ ನನ್ನ ಸಣ್ಣ ಮಗಳು ಕುಡಿಕೊಂಡು ಇರುತ್ತೇವೆ. ನನ್ನ ಮಗನಾದ ಅಪ್ಪಾಸಾಹೇಬ @ ಅಪ್ಪು ಇತನು ಕಡಗಂಚಿ ಗ್ರಾಮದ ಹತ್ತಿರ ಇರುವ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಲ್ಯಾಬ ಟೆಕನೇಷನ ಅಂತಾ ಸುಮಾರು 6-7 ತಿಂಗಳಿಂದ ಕೆಲಸ ಮಾಡಿಕೊಂಡು ಬಂದಿರುತ್ತಾನೆ. ಹೀಗೆ ಇರುವಾಗ ದಿನಾಂಕಃ 01.07.2021 ರಂದು ಬೆಳಿಗ್ಗೆ ಕೆಲಸಕ್ಕೆ ಹೋಗಿ ಸಾಯಾಂಕಾಲ ಮನೆಗೆ ಬಂದಿರುತ್ತಾನೆ. ನಂತರ ನನ್ನ ಮಗನಾದ  ಅಪ್ಪಾಸಾಹೇಬ @ ಅಪ್ಪು  ಇತನು ನನಗೆ ತಿಳಿಸಿದೆನೆಂದರೆ ನಾನು ನನ್ನ ಗೆಳೆಯರಿಗೆ ಅಕ್ಕಳ ಮದುವೆ ಹೇಳಿ ಬರುತ್ತೇನೆ ಅಂತಾ ಮನೆಯಲ್ಲಿ ಹೇಳಿ ಹೋದವನು ರಾತ್ರಿ 10.00 ಗಂಟೆಯ ಆದರು ಮನೆಗೆ ಬರದೆ ಇರುವದಕ್ಕೆ ನಾನು ನನ್ನ ಮಗನಾದ ಅಪ್ಪಾಸಾಹೇಬ @ ಅಪ್ಪು  ಇತನಿಗೆ ಪೋನ್ ಮಾಡಿದ್ದು ಆಗ ನನ್ನ ಮಗನಾದ ಅಪ್ಪಾಸಾಹೇಬ @ ಅಪ್ಪು  ಇತನು ಇಲ್ಲಾ ಇಲ್ಲೇ ಇದ್ದೇನೆ ಬರುತ್ತೇನೆ ಅಂತಾ ಹೇಳಿರುತ್ತಾನೆ. ನಂತರ ತಡರಾತ್ರಿ ಆದರೂ ನನ್ನ ಮಗನಾದ ಅಪ್ಪಾಸಾಹೇಬ @ ಅಪ್ಪು  ಈತನು ಮನೆಗೆ ಬರಲ್ಲೇ ಇಲ್ಲಾ ಗಾಬರಿಗೊಂಡು ನನ್ನ ಮಗನ ನಂಬರಕ್ಕೆ ಸುಮಾರು ಸಾರಿ ಪೋನ್ ಮಾಡಿದ್ದು ಆತನು ಪೋನ್ ಕಾಲ್ ರೀಸಿವ್ ಮಾಡಲ್ಲೇ ಇಲ್ಲಾ ಗಾಬಾರಿಗೊಂಡು ಅವರ ಗೆಳೆಯನಾದ ಅಪ್ಪಣ್ಣಾ ಎಂಬುವನಿಗೂ ಪೋನ್ ಮಾಡಿದರು ಇಲ್ಲ ಅಮ್ಮಾ ಮನೆಗೆ ಹೋಗುತ್ತೇನೆ ಅಂತಾ ಹೇಳಿ ನಮ್ಮ ಹತ್ತಿರದಿಂದ ಹೋಗಿರುತ್ತಾನೆ. ಅಂತಾ ಹೇಳಿದ್ದಾಗ ನನ್ನ ಮಗ ಈಗ ಆಗ ಬರುತ್ತಾನೆ ಅಂತಾ ನನ್ನ ಮಗನ ಬರುವ ದಾರಿ ಕಾಯುತ್ತಾ ಕುಳಿತು ಕೊಂಡಿರುತ್ತೇನೆ. ನಂತರ ನಸುಕಿನ ಜಾವ 4.00 ಗಂಟೆಯ ಸುಮಾರಿಗೆ ಚೇತಾನ ಕುಲಕರ್ಣಿ ಇತನು ನಮ್ಮ ಮನೆಗೆ ಬಂದು ಅಪ್ಪಾಸಾಹೇಬ @ ಅಪ್ಪು  ಇತನು ಆಸ್ಪತ್ರೆಯಲ್ಲಿ ಇರುತ್ತಾನೆ ಹೋಗಿ ನೋಡಿಕೊಂಡು ಬರಣೋ ಬನ್ನಿರಿ ಅಮ್ಮಾ ಅಂತಾ ಹೇಳಿದಾಗ ನಾನು ಮತ್ತು ನನ್ನ ಮಕ್ಕಳಾದ ಅಂಜನಾ, ಅರುಣ ಕೊಡಿಕೊಂಡು ಬಸವೇಶ್ವರ ಆಸ್ಪತ್ರಗೆ ಹೋಗಿ ನೋಡಿದ್ದು ಆಸ್ಪತ್ರೆಯಲ್ಲಿ ನನ್ನ ಮಗನ ಗೆಳೆಯಾರದ ರಘು , ಶರಣು, ರವಿ, ಶಿವು, ಶ್ರೀಕಾಂತ ಇವರೆಲ್ಲರು ಇದ್ದರು ನಂತರ ನನ್ನ ಮಗನು ಅಂಗಾತವಾಗಿ ಮಲಗಿಕೊಂಡಿದ್ದು ಯಾವುದೇ ರೀತಿ ಸ್ವಾಸ ಆಡದೆ ಮತ್ತು ನನ್ನ ಮಗನ ದೇಹ ತಣ್ಣಗಾಗಿತ್ತು. ಅದನು ನೋಡಿದ್ದಾಗ ನನ್ನ ಮಗನ ಕೈಗೆ ಹೋಡೆದು ಕೈ ಮುರಿದಿದ್ದು, ಸೊಂಟಕ್ಕೆ, ಕಾಲಿಗೆ  ಹಾಗೂ ಇತರೆ ಕಡೆಗಳೆಲ್ಲ ಹೋಡೆದ ಗಾಯಾಗಳು ಇದ್ದವು ಆಗ ಅಲ್ಲೆ ಇರುವ ಅವರ ಗೆಳೆಯರಿಗೆ ವಿಚಾರಿಸಿದ್ದು ಅವರು ಯಾವುದೇ ರೀತಿ ಉತ್ತರ ನೀಡಿರುವದಿಲ್ಲ. ನನ್ನ ಮಗನಿಗೆ ಯಾರೋ ಯಾವದೊಂದು ವಿಷಯಕ್ಕೆ ನನ್ನ ಮಗನಿಗೆ ಕರೆದುಕೊಂಡು ಹೋಗಿ ಯಾವುದೋ ಒಂದು ಆಯುಧದಿಂದ ಹೊಡೆದು ಬಾರಿ ಗುಪ್ತಗಾಯ ಪಡಿಸಿ ಕೊಲೆ ಮಾಡಿರುತ್ತಾರೆ. ದಿನಾಂಕಃ 01.07.2021 ರಂದು ರಾತ್ರಿ 10.00 ಗಂಟೆಯಿಂದ ದಿನಾಂಕಃ 02.07.2021 ರಂದು ಬೆಳಿಗ್ಗೆ 4.00 ಗಂಟೆಯ ಮದ್ಯದ ಅವದಿಯಲ್ಲಿ ಯಾರೋ ದುಷ್ಕರ್ಮಿಗಳು ಯಾವುದೋ ಒಂದು ಹಳೆಯ ವೈಮನಸಿನಿಂದ ಕನಕ ನಗರ ಹತ್ತಿರ ಹೊಡೆದು ನನ್ನ  ಮಗನಾದ ಅಪ್ಪಸಾಹೇಬ @ ಅಪ್ಪು ತಂದೆ ಶಂಕರ ಸಣ್ಣಮನಿ ವಯಃ 30 ವರ್ಷ ಜಾಃ ಕುರುಬ ಉಃ ಲ್ಯಾಬ್ ಟೇಕನೆಷ್ನ ಸಾಃ ಸಂಗಮ ತಾಯಿ ಕಾಲೋನಿ ಕಲಬುರಗಿ ಇತನಿಗೆ  ಕೈಗೆ ಹೋಡೆದು ಕೈ ಮುರಿದಿದ್ದು, ಸೊಂಟಕ್ಕೆ, ಕಾಲಿಗೆ ಹಾಗೂ ಇತರೆ ಕಡೆಗಳೆಲ್ಲ ಹೊಡೆದ ಭಾರಿ ಗುಪ್ತಗಾಯಪಡಿಸಿ ಕೊಲೆ ಮಾಡಿ ಓಡಿ ಹೋದವರ ವಿರುದ್ದ ಕಾನೂನು ಕ್ರಮ ಜರುಗಿಸಬೇಕು ಅಂತ ಮಾನ್ಯರವರಲ್ಲಿ ವಿನಂತಿ. ಅಂತಾ ಇತ್ಯಾದಿಯಾಗಿ ದೂರು ನೀಡಿದ್ದರ ಸಾರಾಂಶದ ಮೇಲಿಂದ ಪ್ರಕಾರ ಪ್ರಕರಣ ವರದಿಯಾದ ಬಗ್ಗೆ.

ಇತ್ತೀಚಿನ ನವೀಕರಣ​ : 03-07-2021 12:08 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080