ಅಭಿಪ್ರಾಯ / ಸಲಹೆಗಳು

 ಚೌಕ ಪೊಲೀಸ್ ಠಾಣೆ :-  ದಿನಾಂಕ 03-06-2022 ರಂದು ಮಧ್ಯಾಹ್ನ ೩-೦೦  ಗಂಟೆಗೆ ಶ್ರೀ ಜಿತೇಂದ್ರ ತಂದೆ ಆಶಾರಾಮಜಿ ಪ್ರಜಾಪ್ರತಿ ವ;೨೭ ವರ್ಷ ಉ: ಫ್ಯಾನ್ಸಿ ವ್ಯಾಪರ ಜಾತಿ ಪ್ರಜಾಪತಿ  ಸಾ: ಜಾಲೂರ ಗ್ರಾಮ ಜಿಲ್ಲಾ ಜಾಲೂರ ರಾಜಸ್ಥಾನ ರಾಜ್ಯ ಹಾ:ವ:ಆಯುರವಾಡಿ ಹುಮನಾಬಾದ ಬೇಸ ಕಲಬುರಗಿ ರವರು ಠಾಣೆಗೆ ಹಾಜರಾಗಿ ತಮ್ಮದೊಂದು ಕನ್ನಡದಲ್ಲಿ ಕಂಪ್ಯೂಟರನಲ್ಲಿ ಟೈಪ ಮಾಡಿದ ದೂರು ಕೊಟ್ಟಿದ್ದರ ಸಾರಾಂಶವೆನೆಂದೆರೆ, ಈ ಮೂಲಕ ತಮಗೆ ದೂರು ಕೊಡುವದೆನೆಂದೆರೆ, ಸುಪರ ಮಾರ್ಕೇಟದ ಚೈನಾ ಕಾಂಪ್ಲೆಕ್ಸದಲ್ಲಿ  ಜಿ-೧೭ ಶೆಟರ ಅಂಗಡಿಯಲ್ಲಿ ರೀಯಾನಸಿ ಫ್ಯಾನಸಿ ಎಂಬ ಹೆಸರಿನಿಂದ ಲೇಡಿಜ ಐಟಂ ಸಾಮಾನುಗಳು ಇಟ್ಟುಕೊಂಡು ಕಳೆದ ೦೬ ತಿಂಗಳಿಂದ  ವ್ಯಾಪರ ಮಾಡಿಕೊಂಡು ಉಪಜೀವಿಸುತ್ತೇನೆ.  ಹೀಗಿದ್ದು ದಿನಾಂಕ ೨೫/೦೫/೨೦೨೨ ರಂದು ಮಧ್ಯಾಹ್ನ ೧೨-೩೦ ಗಂಟೆ ಸುಮಾರಿಗೆ ಚೈನಾ ಕಾಂಪ್ಲೆಕ್ಸನಲ್ಲಿ ಇರುವ ನಮ್ಮ ಅಂಗಡಿಯಲ್ಲಿ ಇದ್ದಾಗ ಮೋಬಾಯಿಲ್ ಸಂಖ್ಯೆ 9686426984 ನೇದ್ದರಿಂದ ನನ್ನ ಮೋಬಾಯಿಲ್ ಸಂಖ್ಯೆ 8074321463 ನೇದ್ದರಿಂದ  ಇಬ್ಬರು ಅಪರಿಚಿತ ವ್ಯಕ್ತಿಗಳು ನನಗೆ ಕರೆ ಮಾಡಿ ಮಾರ್ಕೇಟ್ ಸತೀಷ ಮಾತನಾಡುತ್ತಿದ್ದೆನೆ ನನಗೆ ಅರ್ಜೇಂಟಾಗಿ ೧೦,೦೦೦/- ರೂ. ಹಣ ಬೇಕಾಗಿದೆ ಸೆಂಟ್ರಲ್ ಜೇಲಿಗೆ ಕಳುಹಿಸಬೇಕಾಗಿದೆ  ಪೋನ ಪೇ ನಂಬರ ಕೊಡುತ್ತೇನೆ ಅದಕ್ಕೆ ೧೦,೦೦೦/- ರೂ. ಹಾಕು ಅಂತಾ ಕೇಳಿದನು. ಅದಕ್ಕೆ ನನ್ನ ಹತ್ತಿರ ಹಣವಿಲ್ಲಾ ನಾನೇ ಕಷ್ಟದಲ್ಲಿ ಇದ್ದೇನೆ ನಿಮಗೆ ಹಣ ಕೊಡುವುದು ಆಗುವುದಿಲ್ಲಾ ಅಂತಾ ಹೇಳಿದಾಗ ಅವನು ನನಗೆ ನಿನಗೆ ಬಹಳಷ್ಟು ಸಲ ಕೆಲಸಕ್ಕೆ ಬರುತ್ತೇವೆ ಅಂತಾ ಹೇಳಿ ಹಣ ಕೊಡಲು ಕೇಳಿದಾಗ ನಾನು ಅವನಿಗೆ ೧೦,೦೦೦/- ರೂ. ಹಣ ಕೊಡಲು ನಿರಾಕರಿಸಿದಾಗ ಅವನು ನನಗೆ ಹೊರಗಡೆ ಸಿಕ್ಕರೆ ನಿನಗೆ ಕೈ ಕಾಲು ಕತ್ತರಿಸಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿರುತ್ತಾನೆ. ಈ ಬಗ್ಗೆ ಮನೆಯಲ್ಲಿ ವಿಚಾರಿಸಿಕೊಂಡು ಇಂದು ಠಾಣೆಗೆ ಬಂದು ದೂರು ಕೊಡುತ್ತಿದ್ದು, ಈ ಕಾರಣದಿಂದ ದೂರು ಕೊಡಲು ತಡವಾಗಿರುತ್ತದೆ. ನನ್ನ ಮೋಬಾಯಿಲನಲ್ಲಿ ಮಾತನಾಡಿದ ಸಂಭಾಷಣೆ ರೆಕಾರ್ಡಿಂಗ್  ಆಗಿರುತ್ತದೆ. ಕಾರಣ ನನ್ನ ಮೋಬಾಯಿಲ್ ಸಂಖ್ಯೆ 9686426984 ನೇದ್ದರಿಂದ ನನ್ನ ಮೋಬಾಯಿಲ್ ಸಂಖ್ಯೆ 8074321463 ನೇದ್ದಕ್ಕೆ ಮಾರ್ಕೇಟ್  ಸತೀಷ ಎಂಬ ಹೆಸರಿನಿಂದ ಇಬ್ಬರು ಅಪರಿಚಿತ ವ್ಯಕ್ತಿಗಳು ಕರೆ ಮಾಡಿ ೧೦,೦೦೦/- ರೂ. ಕೊಡು ಅಂತಾ ಕೇಳಿದ್ದು, ನಿರಾಕರಿಸಿದ್ದಕ್ಕೆ  ಕೈ ಕಾಲು ಕತ್ತರಿಸಿ ಜೀವ ಹೊಡೆಯುವ ಜೀವ ಬೆದರಿಕೆ ಹಾಕಿದ ಇಬ್ಬರು ಅಪರಿಚಿತ ವ್ಯಕ್ತಿಗಳನ್ನು ಪತ್ತೆ ಹಚ್ಚಿ ಅವರ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ತಮ್ಮಲ್ಲಿ ಪ್ರಾರ್ಥಿಸಿಕೊಳ್ಳುತ್ತೇನೆ. ಎಂದು ಕೊಟ್ಟ ದೂರಿನ ಆಧಾರದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

ಸಂಚಾರಿ ಪೊಲೀಸ್ ಠಾಣೆ-೨ :-  ದಿನಾಂಕ-03-06-2022  ರಂದು ಬೆಳಿಗ್ಗೆ ೦೯:೩೦ ಗಂಟೆಗೆ ಶ್ರೀ   ಶ್ರೀ ಸರುಬಾಯಿ ಗಂಡ ಸಂತೋಷ ಬಮ್ಮನಳ್ಳಿ  ಮು: ಆಶ್ರಯ ಕಾಲೋನಿ ಚಿತ್ತಾಪೂರ ಎಂಬುವವರು ಪೊಲೀಸ್ ಠಾಣೆಗೆ ಹಾಜರಾಗಿ   ಈ ಲಿಖಿತ ಫಿರ್ಯಾಧಿಯನ್ನು ಹಾಜರುಪಡಿಸಿದ್ದು ಸದರಿ ಫಿರ್ಯಾಧಿಯ ಸಾರಾಂಶವೆನೆಂದರೆ, ಇಂದು ದಿನಾಂಕ-೦೩/೦೬/೨೦೨೨ ರಂದು ಬೆಳಿಗ್ಗೆ ನಾನು ನಮ್ಮೋರಿಗೆ ಹೋಗಲು ತಯಾರಾದಾಗ. ನನ್ನ ಮಗಳ ಮಾವನಾದ ಪಂಡಿತರಾಯ ಮೂಲಗೆ ಇವರು ನನಗೆ ಸೇಡಂ ರಿಂಗ್ ರೋಡ ದವರೆಗೆ ಬಸ್ಸಿಗೆ ಕೂಡಿಸುವ ಕುರಿತು ಅವರ ಮೋಟಾರ ಸೈಕಲ ನಂ ಕೆಎ-೩೨ ವಿ-೫೧೫೩ ನೇದ್ದರ ಮೇಲೆ ನನ್ನನು ಕೂಡಿಸಿಕೊಂಡು ಹೊಸ ಆರ್.ಟಿ.ಓ ಆಫೀಸ್ ಕಡೆಯಿಂದ ಸೇಡಂ ರಿಂಗ್ ರೋಡನ ಡೆಂಟಲ್ ಕಾಲೇಜ ಮುಂಭಾಗದ ಸರವಿಸ್ ಕಡೆಗೆ ವೇಗವಾಗಿ ನಡೆಸಿಕೊಂಡು ಹೋಗುವಾಗ ಅದೆ ವೇಳೆಗೆ ನಮ್ಮ ಹಿಂದಿನ ರೋಡಿನಿಂದ ಕೆ.ಎಸ್.ಆರ್.ಟಿ.ಸಿ ಚಿಂಚೋಳ್ಳಿ ಡಿಪೋ ಬಸ್ಸ ನಂ ಕೆಎ-೩೨ ಎಫ್-೨೪೧೦ ನೇದ್ದರ ಚಾಲಕನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದವನೇ ನಮಗೆ ಸೈಡ್ ಹೊಡೆದು ಹೋಗುವಾಗ ನಮ್ಮ ಬಿಗ ಪಂಡಿತರಾಯ ಇವರಿಗೆ ಮೋಟಾರ ಸೈಕಲ ಸಂಭಾಳಿಸಿ ಕೊಳ್ಳದೆ ಇರುವಾಗ ಒಮ್ಮೆಲೆ ಸ್ಕಿಡ ಆಗಿ ನಾನು ಎಡಕ್ಕೆ ಮತ್ತು ಬಿಗ ಪಂಡಿತರಾಯ ಇವರು ಬಲಭಾಗಕ್ಕೆ ಬಿದ್ದಾಗ ಬಸ್ಸಿನ ಎಡಭಾಗದ ಹಿಂದಿನ ಟೈರನಲ್ಲಿ ಪಂಡಿತರಾಯ ಇವರ ತೆಲೆಯ ಮತ್ತು ಮುಖದ ಬಖ್ಪತ್ಪಿ ಸಿಲಿಕ್ಕಿದಕ್ಕೆ ಟೈರ ಹಾಯಿದಿದ್ದರಿಂದ ತೆಲೆಯ ಭಾಗ ಮತ್ತು ಮುಖದ ಭಾಗ ಚಪ್ಪೆಟೆ ಆಗಿ ಭಾರಿ ರಕ್ತಸ್ರಾವವಾಗಿ ಸ್ಥಳದಲ್ಲಿಯೇ ಮೃತ ಪಟ್ಟಿದ್ದು ಆಗ ಸಮಯ ಬೆಳಿಗ್ಗೆ ೦೭:೩೦ ಗಂಟೆ ಆಗಿತ್ತು ನನಗೆ ಬೆನ್ನಿಗೆ ತರಚಿದ ಗಾಯ ಹಾಗೂ ಬಲಗೈಗೆ ತರಚಿದ ಗಾಯವಾಗಿದ್ದು ರೋಡಿನಿಂದ ಹೋಗುತ್ತಿರುವ ಗುಂಡಪ್ಪಾ ಮಾಹಾಂತಗೊಳ ಮತ್ತು ಶಿವರಾಜ ಹಂಗರಗಿ ಎಂಬುವರು ಘಟನೆಯನ್ನು ನೋಡಿ ನಮ್ಮಗೆಲ್ಲಾ ಬದಿಗೆ ಹಾಕಿದ್ದು ಕೆ.ಎಸ್.ಆರ್.ಟಿ.ಸಿ ಬಸ್ಸಿನ ಚಾಲಕನ ಹೆಸರು ಶಾಂತಪ್ಪಾ ತಂದೆ ಹುಚ್ಚಪ್ಪಾ ಚಲುವಾದಿ ಚಿಂಚೋಳ್ಳಿ ಡಿಪೋ ಅಂತಾ ತಿಳಿಸಿದನು. ಮುಂದೆ ನಾನು ಸರಕಾರಿ ಆಸ್ಪತ್ರೆಗೆ ಬಂದು ಉಪಚಾರಕ್ಕಾಗಿ ಸೇರಿಕೆ ಆಗಿರುತ್ತೇನೆ. ಕಾರಣ ಈ ವಿಷಯದಲ್ಲಿ ಘಟನೆ ಬಗ್ಗೆ ಕಾನೂನು ಪ್ರಕಾರ ಕ್ರಮ ಕೈಕೊಳ್ಳಬೇಕೆಂದು ಕೊಟ್ಟ ಫಿರ್ಯಾಧಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

ಇತ್ತೀಚಿನ ನವೀಕರಣ​ : 17-06-2022 11:42 AM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080