ಅಭಿಪ್ರಾಯ / ಸಲಹೆಗಳು

ಸ್ಟೇಷನ ಬಜಾರ ಪೊಲೀಸ ಠಾಣೆ :- ದಿನಾಂಕ:03-03-2022‌  ರಂದು ರಾತ್ರಿ ೧೧:೧೫ ಗಂಟೆಗೆ ಫಿರ್ಯಾದಿ ಶ್ರೀಮತಿ ಡೈಸಿ ರಾಣಿ ತಂದೆ ಪ್ರಮೋದ ಬನ್ನಿಕಟ್ಟಿ ವಯ:೪೦ ವರ್ಷ ಜಾ:ಕ್ರೀಶ್ಚಿಯನ್ ಉ:ಕ್ಯಾಂಬೆಲ್ ಶಾಲೆಯಲ್ಲಿ ಶಿಕ್ಷಕಿ ಸಾ:ಮನೆ ನಂ. ೧೦೩ ಗಣೇಶ ನಗರ ಹಳೆ ಜೇವರ್ಗಿ ರಸ್ತೆ ಕಲಬುರಗಿ ದೂರು ಸಲ್ಲಿಸುವದೇನಂದರೆ, ನಾನು ಮೃತ  ಪ್ರಿತಮ ತಂದೆ ಪ್ರಮೊದ ಬನ್ನಿಕಟ್ಟಿ ವಯ: ೩೮ ವರ್ಷ ಇತನ ಅಕ್ಕಳಿರುತ್ತೆನೆ, ನಮ್ಮ ತಮ್ಮನಾದ ಮೃತ ಪ್ರಿತಮ ಇತನು ತಾನು ಪ್ರೀತಿಸುವ ಸುಶ್ಮಾ ಡೆಂಕಿ ಇವಳನ್ನು ಬೀದರನಲ್ಲಿ ದಿನಾಂಕ: ೦೭/೦೧/೨೦೨೧ ರಂದು ರಜೀಶ್ಟರ್ ಮದುವೆ ಆಗಿರುತ್ತಾನೆ. ಈ ವಿಷಯವನ್ನು ನಮ್ಮ ಮನೆಯಲ್ಲಿ ಅಕ್ಟೊಬರ್ ತಿಂಗಳಲ್ಲಿ ಗೊತ್ತಾಗಿರುತ್ತದೆ, ಆಗ ನಮ್ಮ ತಮ್ಮ ನಮಗೆ ತಿಳಿಸಿದ್ದೆನಂದರೆ, ನಾನು ಸುಶ್ಮಾ ಇವಳನ್ನು ಮದುವೆಯಾಗಿದ್ದು ನಮ್ಮದು ಇಂಟರ್ ಕಾಸ್ಟ್ ಮದುವೆ ಇರುತ್ತದೆ. ಆದ್ದರಿಂದ ಸುಶ್ಮಾ ಇವಳನ್ನು ಅವರ ಮನೆಯಲ್ಲಿ ಬೇರೆ ಮದುವೆ ಮಾಡುತ್ತಿದ್ದಾರೆ ನಾವು ಇಲ್ಲಿ ಇರುವದಿಲ್ಲ ಬೆಂಗಳೂರಿಗೆ ಹೋಗುತ್ತೆವೆ ಅಂತ ಹೇಳಿ ಇಬ್ಬರು ಕೂಡಿಕೊಂಡು ಹೋಗಿರುತ್ತಾರೆ.  ಬೆಂಗಳೂರಿಗೆ ಹೋದ ಮೇಲೆ ಸುಶ್ಮಾಳ ಚಿಕ್ಕಪ್ಪ ಅರವಿಂದ ಡೆಂಕಿ, ಅಜ್ಜ ಶಿವಪುತ್ರಪ್ಪ ಡೆಂಕಿ ಇವರು ಮನೆಗೆ ಬಂದು ನಮ್ಮ ಮಗಳು ಸುಶ್ಮಾಳನ್ನು ಕರೆದುಕೊಂಡು ಬರದೆ ಹೋದೆ ಅವನಿಗೆ ಜೀವ ಸಹಿತ ಬಿಡುವದಿಲ್ಲ ಅಂತ ಬೆದರಿಕೆ ಹಾಕಿ ಹೋಗಿರುತ್ತಾರೆ. ನಮ್ಮ ತಮ್ಮನು ಸುಶ್ಮಾ ಇವಳನ್ನು ಪ್ರೀತಿಸಿ ಮದುವೆಯಾಗಿರುವದರಿಂದ ಇದೇ ವಿಷಯವನ್ನು ದ್ವೇಷ ಇಟ್ಟುಕೊಂಡಿದ್ದು ಇರುತ್ತದೆ. ಬೆಂಗಳೂರಿನಿಂದ ನಮ್ಮ ತಮ್ಮ ಪ್ರಿತಮ ಮತ್ತು ಸುಶ್ಮಾ ಇವರಿಬ್ಬರು ಕಲಬುರಗಿಗೆ ದಿನಾಂಕ:೦೧/೦೩/೨೦೨೨ ರಂದು ಬಂದಿರುತ್ತಾರೆ.         ಬೆಂಗಳೂರಿನಿಂದ ಬಂದ ದಿನದಿಂದ ಇವತ್ತಿನವರೆಗೆ ಮನೆಯಲ್ಲಿಯೇ ಇದ್ದಿರುತ್ತಾರೆ. ಇಂದು ದಿನಾಂಕ:೦೩/೦೩/೨೦೨೨ ರಂದು ಸಂಜೆ ೫:೩೦ ಗಂಟೆ ಸುಮಾರಿಗೆ ಗಂಡ ಹೆಂಡತಿ ಇಬ್ಬರು ಕೂಡಿಕೊಂಡು ನಮ್ಮ ಸಂಬಂದಿಕರಿಗೆ ರೇಲ್ವೆ ಸ್ಟೇಷನಗೆ ಬಿಡಲಿಕ್ಕೆ ಹೋಗಿ ಅಲ್ಲಿಂದಲೆ ಮೆಥೊಡಿಸ್ಟ್ ಚರ್ಚ್ ವಿಜಯ ವಿಧ್ಯಾಲಯಕ್ಕೆ ಹೋಗಿ ಮರಳಿ ಮನೆಗೆ ರಾತ್ರಿ ೮:೨೦ ಗಂಟೆ ಸುಮಾರಿಗೆ ಬಂದು ಕಾರನ್ನು ಮನೆಯ ಮುಂದೆ ನಿಲ್ಲಿಸುವಾಗ ನಮ್ಮ ಪರಿಚಯದವನಾದ ಮಹಿಬೂಬ ಸಾ:ರಹಿಮತ ನಗರ ಇತನು ಕೈ ಮಾಡಿ ಕರೆದಿದ್ದರಿಂದ ಮೋಟಾರ್ ಸೈಕಲ್ ತೆಗೆದುಕೊಂಡು ಇಲ್ಲೆ ಹೋಗಿ ಬರುತ್ತೆನೆ ಕರೆಯುತ್ತಿದ್ದಾನೆ ಮಾತನಾಡಿಸಿಕೊಂಡು ಬರುತ್ತೆನೆ ಅಂತ ಹೇಳಿ ಅವನೊಂದಿಗೆ ಹೋದ ವಿಷಯವನ್ನು ಸುಶ್ಮಾ ಇವಳು ನನಗೆ ತಿಳಿಸಿರುತ್ತಾಳೆ. ನಂತರ ರಾತ್ರಿ ೯:೩೦ ಗಂಟೆ ಸುಮಾರಿಗೆ ನಮಗೆ ಗೊತ್ತಾಗಿದ್ದೆನಂದರೆ ನಮ್ಮ ತಮ್ಮ ಪ್ರಿತಮ ಇತನಿಗೆ ಗಣೇಶ ನಗರದ ಕಾರ್ ವಾಶಿಂಗ್ ಸೆಂಟರ್ ಅಂಗಡಿ ಹತ್ತಿರ ಚಾಕು ಹೊಡೆದು ಕೊಲೆ ಮಾಡಿರುತ್ತಾರೆ ಎನ್ನುವ ವಿಷಯವನ್ನು ನಮಗೆ ಗೊತ್ತಾಗಿ ನಾನು ನಮ್ಮ ತಂಗಿ ಪ್ರಿಯಾಂಕ, ಅವಳ ಗಂಡ ರಿಚರ್ಡ ನವೀನಕುಮಾರ ಹೋಗಿ ನೋಡಲು ನಮ್ಮ ತಮ್ಮನ ಹೊಟ್ಟೆಯಲ್ಲಿ ಚಾಕು ಚುಚ್ಚಿದ್ದು, ಚಾಕು ಹಾಗೇ ಹೊಟ್ಟೆಯಲ್ಲಿ ಇದ್ದಿರುತ್ತದೆ ಮತ್ತು ಎದೆಯ ಮೇಲೆ, ಹೊಟ್ಟೆಯ ಮೇಲೆ ಹೊಟ್ಟೆಯ ಬಲಬಾಗದ ಮೇಲೆ ದೇಹದ ಭಾಗದ ಮೇಲೆ ಚಾಕುದಿಂದ ಚುಚ್ಚಿ ಭಾರಿ ರಕ್ತಗಾಯ ಮಾಡಿದ್ದರಿಂದ ಸ್ಥಳದಲ್ಲಿಯೇ ಮೃತ ಹೊಂದಿರುತ್ತಾನೆ. ನಮ್ಮ ತಮ್ಮನು ಸುಶ್ಮಾಳನ್ನು ಪ್ರೀತಿಸಿ ಮದುವೆಯಾಗಿದ್ದರಿಂದ ದ್ವೇಷ ಇಟ್ಟುಕೊಂಡು ಅವರ ಚಿಕ್ಕಪ್ಪ ಅರವಿಂದ ಡೆಂಕಿ, ಶಿವಪುತ್ರಪ್ಪಾ ಡೆಂಕಿ ಹಾಗೂ ಇತರರು ಕೂಡಿಕೊಂಡು ಮಹಿಬೂಬ ಸಾ:ರಹೆಮತ ನಗರ ಇತನ ಮುಖಾಂತರ ಕರೆಯಿಸಿಕೊಂಡು ಹೋಗಿ ಚಾಕುದಿಂದ ಚುಚ್ಚಿ ಭಾರಿ ರಕ್ತಗಾಯ ಮಾಡಿ ಕೊಲೆ ಮಾಡಿರುತ್ತಾರೆ. ಈ ಘಟನೆಯು ಇಂದು ದಿನಾಂಕ:೦೩/೦೩/೨೦೨೨ ರಂದು ರಾತ್ರಿ ೮:೨೦ ಗಂಟೆಯಿಂದ ೯:೩೦ ಗಂಟೆಯ ಅವದಿಯಲ್ಲಿ ನಡೆದಿರುತ್ತದೆ. ನಮ್ಮ ತಮ್ಮ ಪ್ರಿತಮ ಇತನು ಸುಶ್ಮಾಳನ್ನು ಪ್ರೀತಿಸಿ ಮದುವೆಯಾಗಿದ್ದ ದ್ವೇಶದಿಂದ ಇಂದು ಚಾಕುದಿಂದ ಹೊಟ್ಟೆಯಲ್ಲಿ ಚುಚ್ಚಿ ಭಾರಿ ರಕ್ತಗಾಯ ಮಾಡಿ ಕೊಲೆ ಮಾಡಿರುತ್ತಾರೆ. ಕಾರಣ ನಮ್ಮ ಪ್ರೀತಮ ಇತನಿಗೆ ಚಾಕುದಿಂದ ಹೊಟ್ಟೆಯಲ್ಲಿ ಚುಚ್ಚಿ ಭಾರಿ ರಕ್ತಗಾಯ ಮಾಡಿ ಕೊಲೆ ಮಾಡಿದವರ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತ ಇತ್ಯಾದಿಯಾಗಿ ನೀಡಿದ ದೂರಿನ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

ಇತ್ತೀಚಿನ ನವೀಕರಣ​ : 19-03-2022 02:34 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080