ಅಭಿಪ್ರಾಯ / ಸಲಹೆಗಳು

ಸಂಚಾರಿ ಪೊಲೀಸ್‌ ಠಾಣೆ-2 :-  ದಿನಾಂಕ: 03/02/2023 ರಂದು ಬೆಳಿಗ್ಗೆ 10:30 ಗಂಟೆಗೆ ಶ್ರೀ. ಶಂಕರ ತಂದೆ ರುಕ್ಕಪ್ಪಾ ಮರತೂರಕರ ವಯಃ 60 ವರ್ಷ ಜಾತಿಃ ಪ.ಜಾತಿ(ಸಮಗಾರ) ಉಃ ಕೂಲಿ ಕೆಲಸ ಮುಕ್ಕಾಃ ಅವರಾದ(ಬಿ) ತಾ.ಜಿಃ ಕಲಬುರಗಿ ಇವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಟೈಪ ಮಾಡಿದ ಫಿರ್ಯಾದಿ ಅರ್ಜಿ ಹಾಜರು ಪಡಿಸಿದ್ದು ಸಾರಂಶವೆನೆಂದರೆ, ನನಗೆ ಅನೀತಾ ಎಂಬ ಮಗಳಿದ್ದು, ಇವಳಿಗೆ ಹಾಗರಗಾ ಗ್ರಾಮದ ಶ್ರೀ. ಸಂಜೀವ ತಂದೆ ಜಗನ್ನಾಥ ಭಾವಿಮನಿ ಇವರಿಗೆ ಕೊಟ್ಟು ಲಗ್ನ ಮಾಡಿದ್ದು, ಅವರಿಗೆ ಜಗದೀಶ ಎಂಬ ಮೂರುವರೆ ವರ್ಷದ ಹಾಗು ಇನ್ನೊಂದು ನಾಲ್ಕು ದಿವಸದ  ಗಂಡು ಮಗು ಇರುತ್ತವೆ. ನನ್ನ ಮಗಳು ಬಾಣತನದ ಗೋಸ್ಕರ ನಮ್ಮೂರಲ್ಲೆ ಇದ್ದಾಳೆ. ಹೀಗಿದ್ದು, ನಿನ್ನೆ ದಿನಾಂಕ 02/02/2023 ರಂದು ಹೊತ್ತು ಮುಳುಗುವೇಳೆಗೆ ಮಗಳಾದ ಅನೀತಾ ಇವಳಿಗೆ ಅಳಿಯನಾದ ಸಂಜೀವ ಭಾವಿಮನಿ ಈತನು ಫೋನ್ ಮಾಡಿ, ತಾನು ರಾತ್ರಿ ಅವರಾದಿಗೆ ಬರುವುದಾಗಿ ತಿಳಿಸಿರುವ ವಿಷಯವನ್ನು ಮಗಳು ನನಗೆ ತಿಳಿಸಿದ್ದು, ಮುಂದೆ ರಾತ್ರಿ 8:00 ಗಂಟೆ ಸುಮಾರಿಗೆ ನಮ್ಮೂರಿನ ರೆಹೆಮತ ತಂದೆ ಶಾವರಮಿಯಾ ಗುರುಮಿಠಕಲ ಹಾಗು ಜಾವೀದ ತಂದೆ ರುಕ್ಮೊದ್ದೀನ ಇವರು ನಮಗೆ ಫೋನ್ ಮಾಡಿ ಮಾಹಿತಿ ತಿಳಿಸಿದ್ದೆನೆಂದರೆ, ಈಗ ತಾನೆ ರಾತ್ರಿ 7:45 ಗಂಟೆ ಸುಮಾರಿಗೆ ಅವರಾದ ಕ್ರಾಸಿನ ಹತ್ತೀರ ಇರುವ ಬಶೀರ ದಾಭಾದ ಸಮೀಪದಲ್ಲಿ ಮೋಟರ ಸೈಕಲ ನಂ. ಕೆಎ 32 ಇ.ಹೆಚ್ 5930 ನೇದ್ದರ ಮೇಲೆ ನಿಮ್ಮ ಅಳಿಯನಾದ ಸಂಜೀವ ಭಾವಿಮನಿ ಈತನು ಬರುತ್ತಿರುವಾಗ ಹುಮ್ನಾಬಾದ ರೋಡಿನ ಕಡೆಯಿಂದ ಒಂದು ಕಾರಿನ ಚಾಲಕನು ಅತಿವೇಗದಿಂದ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಮೋಟರ ಸೈಕಲ ಬರುವ ಕಡೆಗೆ ಮೈಮೇಲೆ ಹೋಗಿ ಸಂಜೀವ ಭಾವಿಮನಿ ಈತನಿಗೆ ಮತ್ತು ಈತನ ಮೋಟರ ಸೈಕಲಗೆ ಡಿಕ್ಕಿ ಹೊಡೆದ ಪರಿಣಾಮ ಆತನ ಹಣೆಯ ಭಾಗಕ್ಕೆ, ತಲೆಯ ಭಾಗಕ್ಕೆ ಮತ್ತು ಎಡಗಾಲ ಮತ್ತು ಎಡಗೈಗೆ ಹಾಗು ಇತರೆ ಕಡೆಗಳಲ್ಲಿ ಭಾರಿಗಾಯಗಳಾಗಿ ಮೃತ ಪಟ್ಟಿರುತ್ತಾನೆ. ಕಾರಿನ ನಂಬರ ನೋಡಿರುತ್ತೆವೆ ಅಂತಾ ತಿಳಿಸಿದಕ್ಕೆ, ನಾನು ಗಾಬರಿಗೊಂಡು ನಾನು ಮತ್ತು ನನ್ನ ಹಿರಿಯ ಮಗಳ ಗಂಡನಾದ ಶರಣಬಸಪ್ಪಾ ತಂದೆ ಶಿವರಾಯ ಹರಳಯ್ಯ ಕೂಡಿಕೊಂಡು ಸ್ಧಳಕ್ಕೆ ಬಂದು ನೋಡಲಾಗಿ ಅಳಿಯ ಸಂಜೀವ ಕುಮಾರ ಭಾವಿಮನಿ ಈತನು ಮೇಲಿನಂತೆ ಗಾಯಗಳಾಗಿ ಭಾರಿ ರಕ್ತಸ್ರಾವದಿಂದ ಸ್ಧಳದಲ್ಲಿಯೇ ಮೃತ ಪಟ್ಟಿದ್ದು, ಏನು ಗೊತ್ತಾಗದಕ್ಕೆ ಅಳಿಯನ ಶವವನ್ನು ಸರಕಾರಿ ಆಸ್ಪತ್ರೆ ಕಲಬುರಗಿಗೆ ರಾತ್ರಿಯೇ ತೆಗೆದುಕೊಂಡು ಬಂದಿರುತ್ತೆವೆ. ನಾನು ದುಖಃದಲ್ಲಿರುವುದರಿಂದ ಈ ಘಟನೆ ನೋಡಿದ ಜಾವೀದ ಮತ್ತು ರೆಹೆಮತ ಇವರು ನನಗೆ ಮತ್ತೆ ಸಿಗಲಿಲ್ಲಾ. ನನ್ನ ಅಳಿಯನು ತೀರಿಕೊಂಡಿದ್ದರಿಂದ ಆ ದುಖಃದಲ್ಲಿ ಮನೆಯಲ್ಲಿಯೇ ಉಳಿದುಕೊಂಡು ತಡವಾಗಿ ಈ ಫಿರ್ಯಾದಿಯೊಂದಿಗೆ ಹಾಜರಾಗಿರುತ್ತೆನೆ. ಕಾರಣ ನನ್ನ ಅಳಿಯ ಸಂಜೀವ ಕುಮಾರಿಗೆ ಈತನಿಗೆ ಅಪಘಾತ ಪಡಿಸಿದ ಕಾರು ಮತ್ತು ಅದರ ಚಾಲಕನನ್ನು ಪತ್ತೆ ಮಾಡಿ ಆತನ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು ಮತ್ತು ನಮಗೆ ನ್ಯಾಯ ದೊರಕಿಸಿಕೊಡಬೇಕೆಂದು ಫಿರ್ಯಾದಿ ಕೊಟ್ಟ ಅರ್ಜಿ ಸಾರಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

ಚೌಕ ಪೊಲೀಸ್‌ ಠಾಣೆ :- ದಿನಾಂಕ: 03/02/2023 ರಂದು ಸಾಯಂಕಾಲ 05:30 ಗಂಟೆಗೆ  ಫಿರ್ಯಾದಿದಾರರಾದ ಸೂರಜಸಿಂಗ್ ತಂದೆ ಸುಂದರಸಿಂಗ್ ಗುಣಕಿ ವ:52ವರ್ಷ ಉ:ಪುಸ್ತಕ ಅಂಗಡಿ  ಜ್ಯಾ:ರಜಪೂತ ಸಾ:ಪ್ಲಾಟ ನಂ.169 ಶಹಬಜಾರ ಶೇಕರೋಜಾ ಜಿ.ಡಿ.ಎ ಕಾಲೋನಿ ಕಲಬುರಗಿ ರವರು ಠಾಣೆಗೆ ಹಾಜರಾಗಿ ಗಣಕೀಕೃತದಲ್ಲಿ ಮಾಡಿದ ದೂರು ಸಲ್ಲಿಸಿದ ಸಾರಾಂಶವೇನೆಂದರೆ, ನಾನು ಸೂರಜಸಿಂಗ್ ತಂದೆ ಸುಂದರಸಿಂಗ್ ಗುಣಕಿ ವ:52ವರ್ಷ ಉ:ಪುಸ್ತಕ ಅಂಗಡಿ  ಜ್ಯಾ:ರಜಪೂತ ಸಾ:ಪ್ಲಾಟ ನಂ.169 ಶಹಬಜಾರ ಶೇಕರೋಜಾ ಜಿ.ಡಿ.ಎ ಕಾಲೋನಿ ಕಲಬುರಗಿ ಆಗಿದ್ದು ತಮ್ಮಲ್ಲಿ ದೂರು ಸಲ್ಲಿಸುವದೇನೆಂದರೆ, ಈ ಹಿಂದೆ  ಈ ನನ್ನ ಮನೆಯನ್ನು ಬಾಡಿಗೆಗೆ ಕೊಟ್ಟಿದ್ದು ಇತ್ತೀಚಿಗೆ ಸುಮಾರು 05 ತಿಂಗಳಿಂದ ನನ್ನ ಮನೆಯಲ್ಲಿ ನನ್ನ ಹೆಂಡತಿ, ಮಗ ಮತ್ತು ಸೊಸೆಯೊಂದಿಗೆ ವಾಸವಾಗಿದ್ದು ಇರುತ್ತದೆ. ಹೀಗಿದ್ದು, ದಿನಾಂಕ: 29/01/2023 ರಂದು ಹೈದ್ರಾಬಾದನಲ್ಲಿ ನನ್ನ ಹೆಂಡತಿಯ ಸಹೋದರ ಮಾವನ ಮಗಳ ಮಗನ ಮದುವೆಯ ಕಾರ್ಯಕ್ರಮ  ಇರುವುದರಿಂದ ದಿನಾಂಕ: 27/01/2023 ರಂದು ಬೆಳಿಗ್ಗೆ 08.00 ಗಂಟೆಗೆ ನನ್ನ ಮನೆಯ ಬಾಗಿಲ ಮತ್ತು ಗೇಟಿಗೆ ಕೀಲಿ ಹಾಕಿಕೊಂಡು ಬಾಡಿಗೆ ಕಾರನಲ್ಲಿ ಹೈದ್ರಾಬಾದಕ್ಕೆ ಹೋಗಿದ್ದು ಇರುತ್ತದೆ. ಸದರಿ ಮದುವೆ ಕಾರ್ಯಕ್ರಮ ಮುಗಿಸಿಕೊಂಡು ಇಂದು ದಿನಾಂಕ:03/02/2023 ರಂದು ಬೆಳಿಗ್ಗೆ 11.30 ಗಂಟೆಗೆ ಬಂದು ಮನೆಯ ಗೇಟಿನ ಬೀಗ ತೆಗೆದು ನಾನು ಮತ್ತು ನನ್ನ ಹೆಂಡತಿ ಒಳಗಡೆ ಹೋದಾಗ ಮನೆಯ ಮುಖ್ಯದ್ವಾರದ ಬಾಗಿಲು ತೆರೆದಿದ್ದು ಬಾಗಿಲಿನ ಕೀಲಿಕೊಂಡಿ ಮುರಿದಿದ್ದರಿಂದ ನಾವು ಇಬ್ಬರು ಗಾಬರಿಗೊಂಡು ಮನೆಯೊಳಗಡೆ ಹೋದಾಗ ಮನೆಯಲ್ಲಿನ ಸೋಫಾದ ಮೇಲೆ ನನ್ನ ಮಗನ ಮುದವೆಯಲ್ಲಿ ಉಡುಗೊರೆ ಕೊಟ್ಟಿದ ಬಂಗಾರದ ಸುತ್ತುಂಗುರ ಮತ್ತು ಹಳೆಯ ಬಂಗಾರ ಆಭರಣ ಇಟ್ಟಿದ ಸಣ್ಣ ಸಣ್ಣ ಡಬ್ಬಿಗಳು ಚಲ್ಲಾಪಿಲ್ಲಿಯಾಗಿ ಬಿದ್ದಿದ್ದು ಮತ್ತು ಎರಡೂ ಮಲಗುವ ಕೋಣೆಯಲ್ಲಿದ್ದ 2 ಅಲಮಾರಿಗಳು ಬಾಗಿಲುಗಳು ತೆರೆದಿರುದಿರುವುದನ್ನು ಕಂಡ ನನ್ನ ಹೆಂಡತಿ ಶ್ರೀ ಸಂಗೀತಾ ರವರು ಅಳುತ್ತಿರುವುದನ್ನು ಕಂಡು ಹೈದ್ರಾಬಾದನಿಂದ ನಮ್ಮ ಜೊತೆಯಲ್ಲಿಯೇ ಬಂದಿದ್ದ ನನ್ನ  ಸಹೋದರ ಮತ್ತು ಸಹೋದರರ ಹೆಂಡತಿಯರಾದ 1) ಸಂತೋಷ ತಂದೆ ಶಂಕರ ಸಿಂಗ ಠಾಕೂರ 2) ಸಪ್ನಾ ಗಂಡ ಸಂಜಯ ಸಿಂಗ್ ಠಾಕೂರ 3) ಸವಿತಾ ಗಂಡ ಸಂತೋಷ ಠಾಕೂರ 4)ಸುಷ್ಮಾ ಗಂಡ ಗಂಡ ಸಂಗ್ರಾಮ ಸಿಂಗ ಇವರೆಲ್ಲರೂ ಒಳಗಡೆ  ಬಂದಾಗ ನಾವೆಲ್ಲರೂ ಸೇರಿಕೊಂಡಿ ನೋಡಿದಾಗ ಅಲಮಾರಿಯಲ್ಲಿಟ್ಟಿದ 1) ಬಂಗಾರದ 5 ಗ್ರಾಂ ನ 5 ಸುತ್ತುಂಗುರ ಅ.ಕಿ 1,50,000/- 2) ಬಂಗಾರದ 5 ಗ್ರಾಂ ಹೆಣ್ಣು ಮಕ್ಕಳ ಝುಮಕಿ ಅ.ಕಿ.25,000/-ರೂ 3) ಹೆಣ್ಣು ಮಕ್ಕಳ  ಬಂಗಾರದ 1 ಗ್ರಾಂ ನ  6 ಉಂಗುರ ಅ.ಕಿ 15,000/-ರೂ, ಹೀಗೆ ಒಟ್ಟು 36 ಗ್ರಾಂ ಬಂಗಾರದ ಆಭರಣಗಳು ಎಲ್ಲವೂ ಸೇರಿ ಒಟ್ಟು1,90,000 /- ರೂಗಳ ಕಿಮ್ಮತ್ತಿನ ಬೆಲೆ ಬಾಳುವ ವಸ್ತುಗಳು ಮತ್ತು ನಗದು ಹಣ 5,47,000/-ರೂ ಎಲ್ಲವೂ ಸೇರಿ ಒಟ್ಟು 7,37,000/-ರೂ ನೇದ್ದು ಕಳ್ಳತನವಾಗಿದ್ದು ಕಂಡು ಬಂದಿದ್ದು ಇರುತ್ತದೆ. ಈ ಘಟನೆಯ ದಿನಾಂಕ: 27/01/2023 ರಂದು ಬೆಳಿಗ್ಗೆ 08.00 ಗಂಟೆಯಿಂದ  ದಿನಾಂಕ: 03/02/2023 ರಂದು ಮುಂಜಾನೆ 11.00 ಗಂಟೆಯ ಮಧ್ಯದಲ್ಲಿ ಅವಧಿಯಲ್ಲಿ ನಾವು ಮನೆಯಲ್ಲಿ ಇಲ್ಲದ ಸಮಯದಲ್ಲಿ ಯಾರೋ ಕಳ್ಳರು ನಮ್ಮ ಮನೆಯ ಕೀಲಿ ಕೊಂಡಿ ಮುರಿದು ಮನೆಯ ಒಳಗಡೆ  ಪ್ರವೇಶ ಮಾಡಿ  ಅಲಮಾರಿ ಮೇಲೆ ಪ್ಲಾಸ್ಟಿಕ್ ಬುಟ್ಟಿಯಲ್ಲಿಟ್ಟ  ಕೀಲಿಯನ್ನು ತೆಗೆದುಕೊಂಡು ಅಲಮಾರಿ ತೆರೆದು ಅಲಮಾರಿಯಲ್ಲಿಟ್ಟಿದ್ದ  ಈ ಮೇಲ್ಕಂಡ ಬಂಗಾರದ ಆಭರಣ ಮತ್ತು ನಗದು ಹಣ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು ಕಂಡು ಬಂದಿರುತ್ತದೆ. ಕಾರಣ ಮನೆಯ ಬಾಗಿಲಿನ ಕೀಲಿಕೊಂಡು ಮುರಿದು ಮನೆಗೆ ಒಳಗೆ ಪ್ರವೇಶ ಮಾಡಿ ಮನೆಯ ಅಲಮಾರಿಯಲ್ಲಿಟ್ಟಿದ ಹಣ ಮತ್ತು ಬಂಗಾರ ಸಾಮಾನುಗಳು ಕಳ್ಳತನ ಮಾಡಿಕೊಂಡು ಹೋದ ಕಳ್ಳರನ್ನು ಪತ್ತೆ ಹಚ್ಚಿ ಅವರ ಮೇಲೆ ಕಾನೂನು ಕ್ರಮ ಜರುಗಿಸಿ ಕಳುವಾದ ಹಣ ಮತ್ತು ಬಂಗಾರ ಸಾಮಾನುಗಳು ಮರಳಿ ಕೊಡಿಸಬೇಕೆಂದು ಎಂದು ಫಿರ್ಯಾದಿ ಕೊಟ್ಟ ಹೇಳಿಕೆ ಸಾರಾಂಶ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

ಸಂಚಾರಿ ಪೊಲೀಸ್‌ ಠಾಣೆ-2 :- ದಿನಾಂಕ: 03-02-2023 ರಂದು ಖಮರೊದ್ದೀನ ಇವರು ತಾವರಗೇರಾ ಸಾತಪೀರ ದರ್ಗಾ ಹತ್ತೀರ ರಸ್ತೆ ಅಪಘಾತ ಹೊಂದಿ ಉಪಚಾರ ಕುರಿತು ಸರ್ಕಾರಿ ಆಸ್ಪತ್ರೆಗೆ ಬಂದಿರುತ್ತಾರೆ ಅಂತಾ ಆಸ್ಪತ್ರೆಯ ಓಪಿ ಪಿಸಿ ರವರು ಠಾಣೆಗೆ ಪೋನ ಮಾಡಿ ತಿಳಿಸಿದ್ದಾರೆ ಅಂತಾ ನನಗೆ ತಿಳಿಸಿದ್ದರಿಂದ ನಾನು ನೇರವಾಗಿ ಆಸ್ಪತ್ರೆಗೆ ಬೇಟಿಕೊಟ್ಟು ಗಾಯಾಳು ಶ್ರೀ ಖಮರೊದ್ದೀನ ತಂದೆ ನಯೀಮಸಾಬ ಇವರನ್ನು ವಿಚಾರಿಸಿ ಬೆಳಿಗ್ಗೆ 11-15 ಗಂಟೆಯಿಂದ ಮದ್ಯಾಹ್ನ 12-15 ಗಂಟೆಯವರೆಗೆ ಹೇಳಿಕೆಯನ್ನು ಪಡೆದುಕೊಂಡು ಮರಳಿ ಮದ್ಯಾಹ್ನ 12-30 ಗಂಟೆಗೆ ಠಾಣೆಗೆ ಬಂದು ಫಿರ್ಯಾದಿ ಹೇಳಿಕೆ ಸಾರಂಶವೆನೆಂದರೆ ದಿನಾಂಕ 02-02-2023 ರಂದು ಮದ್ಯಾಹ್ನ 3-30 ಗಂಟೆ ಸುಮಾರಿಗೆ ನಾನು ಕಲಬುರಗಿಯಲ್ಲಿ ನನ್ನ ಕೆಲಸ ಮುಗಿಸಿಕೊಂಡು ಕಲ್ಲ ಹಿಪ್ಪರ್ಗಾ ಗ್ರಾಮದಲ್ಲಿರುವ ನನ್ನ ದೊಡ್ಡಮ್ಮನ ಮನೆಗೆ ಹೋಗುವ ಸಲುವಾಗಿ ನೆಹರು ಗಂಜ್ ಬಸ್ಸ ನಿಲ್ದಾಣ ಹತ್ತೀರ ಮ್ಯಾಕ್ಸಿಕ್ಯಾಬ ನಂಬರ ಕೆಎ-32/6429 ನೇದ್ದು ಚಿಂಚೋಳಿ (ಹೆಚ್.) ಗ್ರಾಮಕ್ಕೆ ಹೋಗುವ ಸಲುವಾಗಿ ನಿಂತಿದ್ದು ನಾನು ಕಲ್ಲ ಹಿಪ್ಪರ್ಗಾ ಗ್ರಾಮಕ್ಕೆ ಹೋಗುವ ಕುರಿತು ಸದರ ಮ್ಯಾಕ್ಷಿಕ್ಯಾಬನಲ್ಲಿ ಸೀಟ ಇರದ ಕಾರಣ ಮ್ಯಾಕ್ಷಿಕ್ಯಾಬ ಬಾಗಿಲಿನಲ್ಲಿ ಹಿಡಿದುಕೊಂಡು ನಿಂತಿದ್ದು ಮ್ಯಾಕ್ಷಿಕ್ಯಾಬ ಚಾಲಕ ಸಂಜೀವಕುಮಾರ ಇತನು ತಾವರಗೇರಾ ಕ್ರಾಸದಿಂದ ಮ್ಯಾಕ್ಷಿಕ್ಯಾಬನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ರೋಡ ಎಡ ಬಲ ಕಟ್ ಹೊಡೆಯುತ್ತಾ ಚಲಾಯಿಸಿಕೊಂಡು ಹೋಗಿ ತಾವರಗೇರಾ ಗ್ರಾಮದ ಸಿಮಾಂತರದ ಸಾತಪೀರ ದರ್ಗಾ ಹತ್ತೀರ ರೋಡ ಮೇಲೆ ಒಮ್ಮಲೇ ಬ್ರೇಕ ಹಾಕಿದಾಗ ಮ್ಯಾಕ್ಷಿಕ್ಯಾಬ ವಾಹನ ಮೇಲೆ ಕೆಳಗೆ ಎತ್ತಿ ಬಡೆದಾಗ ಬಾಗಿಲನಲ್ಲಿ ನಿಂತಿದ್ದ ನಾನು ಕೆಳಗಡೆ ಬಿದ್ದು ಅಪಘಾತ ಹೊಂದಿ ಗಾಯ ಹೊಂದಿದ್ದು ಮ್ಯಾಕ್ಷಿಕ್ಯಾಬ ಚಾಲಕನ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಫಿರ್ಯಾದಿ ಕೊಟ್ಟ ಹೇಳಿಕೆ ಸಾರಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

ಚೌಕ ಪೊಲೀಸ್‌ ಠಾಣೆ :- ದಿನಾಂಕ 03/02/2023 ರಂದು ಮಧ್ಯಾಹ್ನ 3-30 ಗಂಟೆಗೆ   ಶ್ರೀ ಎ.ವಾಜೀದ ಪಟೇಲ, ಪಿ.ಐ., ಸಿ.ಸಿ.ಬಿ. ಘಟಕ ಕಲಬುರಗಿ ನಗರ ರವರು ಅಬಕಾರಿ ದಾಳಿ ಜಪ್ತಿ ಪಂಚನಾಮೆ ಮತ್ತು ಮತ್ತು ದಸ್ತಗಿರಿ ಮಾಡಿದ ಎರಡು  ಜನ ಆರೋಪಿತರು ಮತ್ತು ಮುದ್ದೆಮಾಲುನೊಂದಿಗೆ ಠಾಣೆಗೆ ಹಾಜರಾಗಿ ಸರ್ಕಾರಿ ತರ್ಫೇ ದೂರು ಕೊಟ್ಟಿದ್ದರ ಸಾರಾಂಶವೆನೆಂದೆರೆ, ಇಂದು ದಿನಾಂಕ 03/02/2023 ರಂದು ಬೆಳಿಗ್ಗೆ 08-00 ಗಂಟೆಗೆ ನಾನು ಕಛೇರಿಯಲ್ಲಿದ್ದಾಗ ನನಗೆ  ಕಲಬುರಗಿ ನಗರದ ಹಳೆಯ ಪ್ರಕಾಶ ಟಾಕೀಜ್ ದಿಂದ ಸಂಗಮ ಥೇಟರ ಕಡೆಗೆ ಬರುವ ಗಲ್ಲಿಯಲ್ಲಿ ಮಾರುತಿ ವೈನಶಾಪ ಹತ್ತಿರ ಸಾರ್ವಜನಿಕ ರಸ್ತೆಯ ಮೇಲೆ ಕೆಲವು ಜನರು ಅನಧಿಕೃತವಾಗಿ ಮದ್ಯದ ಬಾಟಲಿಗಳನ್ನು ಮಾರಾಟ ಮಾಡುತ್ತಿದ್ದಾರೆ ಅಂತಾ ಖಚಿತ ಮಾಹಿತಿ ಬಂದ ಮೇರೆಗೆ ಸದರಿ ವಿಷಯವನ್ನು ಮೇಲಾಧಿಕಾರಿಗಳಿಗೆ ತಿಳಿಸಿ ಅವರ ಮಾರ್ಗದರ್ಶನದಲ್ಲಿ ದಾಳಿ ಮಾಡುವ ಕುರಿತು ಇಬ್ಬರೂ ಪಂಚರಾದ 1) ಅಶೋಕ ತಂದೆ ಮಸಾಜಿ ಸಿಂಧೆ, ವ:59 ವರ್ಷ, ಜಾತಿ:ಎಸ್.ಸಿ. ಢೋರ, ಉ:ಕಾಂಟ್ರಾಕ್ಟರ್, ಸಾ:ಸುಂದರ ನಗರ ಕಲಬುರಗಿ ಮೊ.ನಂ.8105407824, 2) ಶ್ರೀ ಶೇಖ ಕರೀಮ ತಂದೆ ಶೇಖ ಹಾಜಿ ಅರಬ, ವ:25 ವರ್ಷ, ಜಾತಿ:ಮುಸ್ಲಿಂ, ಉ:ಹೊಟೇಲ ಕೆಲಸ, ಸಾ:ಎಂ.ಎಸ್.ಕೆ. ಮಿಲ್, ಕಲಬುರಗಿ ಮೊ.ನಂ.7022641390, ರವರನ್ನು ಸಿ.ಸಿ.ಬಿ ಕಛೇರಿಗೆ 8-20 ಗಂಟೆಗೆ ಬರಮಾಡಿಕೊಂಡು ಕಛೇರಿಯಲ್ಲಿ ಹಾಜರಿದ್ದ ಸಿಬ್ಬಂದಿಯವರಾದ 1) ಯಲ್ಲಪ್ಪ ಸಿಪಿಸಿ-220, 2) ಶ್ರೀಶೈಲ ಸಿಪಿಸಿ-692, 3) ಶಿವಕುಮಾರ ಸಿಪಿಸಿ-16715, 4) ಅಶೋಕ ಸಿಪಿಸಿ-647, 5) ನಾಗರಾಜ ಸಿಪಿಸಿ-1257 6) ಸುನೀಲಕುಮಾರ ಸಿ.ಹೆಚ್.ಸಿ-167 ರವರುಗಳಿಗೆ ಪರಿಚಯಿಸಿ ಸದರಿ ಪಂಚರಿಗೆ ವಿಷಯ ತಿಳಿ ಹೇಳಿ ದಾಳಿ ಕಾಲಕ್ಕೆ ಹಾಜರಿದ್ದು, ಪಂಚನಾಮೆ ಬರೆಯಿಸಿಕೊಂಡುವಂತೆ ಕೋರಿಕೊಂಡಾಗ ಉಭಯ ಪಂಚರು ಒಪ್ಪಿಕೊಂಡಿರುತ್ತಾರೆ. ನಂತರ ನಾನು, ಪಂಚರು, ಮತ್ತು ಸಿ.ಸಿ.ಬಿ ಘಟಕ ಸಿಬ್ಬಂದಿಯವರಾದ 1) ಯಲ್ಲಪ್ಪ ಸಿಪಿಸಿ-220, 2) ಶ್ರೀಶೈಲ ಸಿಪಿಸಿ-692, 3) ಶಿವಕುಮಾರ ಸಿಪಿಸಿ-16715, 4) ಅಶೋಕ ಸಿಪಿಸಿ-647, 5) ನಾಗರಾಜ ಸಿಪಿಸಿ-1257 6) ಸುನೀಲಕುಮಾರ ಸಿ.ಹೆಚ್.ಸಿ-167 ಎಲ್ಲರೂ ಕೂಡಿ ಸರ್ಕಾರಿ ಜೀಪ ನಂ.ಕೆಎ-32-ಜಿ-1249 ನೇದ್ದರಲ್ಲಿ ಹಾಗೂ ಕೆಲವು ಸಿಬ್ಬಂದಿಯವರು ತಮ್ಮ ತಮ್ಮ ಮೋಟಾರಸೈಕಲಗಳ ಮೇಲೆ ಬೆಳಿಗ್ಗೆ 8-30 ಗಂಟೆಗೆ ಸಿ.ಸಿ.ಬಿ ಕಛೇರಿಯಿಂದ ಹೊರಟು ಮಾಹಿತಿ ಬಂದ ಸ್ಥಳವಾದ ಕಲಬುರಗಿ ನಗರದ ಹಳೆಯ ಪ್ರಕಾಶ ಟಾಕೀಜ್ ದಿಂದ ಸಂಗಮ ಥೇಟರ ಕಡೆಗೆ ಬರುವ ಗಲ್ಲಿಯಲ್ಲಿ ಮಾರುತಿ ವೈನಶಾಪ ಹತ್ತಿರ ಬೆಳಿಗ್ಗೆ 8-55 ಗಂಟೆಗೆ ತಲುಪಿ ಅಲ್ಲಿಯೇ ಮರೆಯಲ್ಲಿ ನಿಂತು ನೋಡಲಾಗಿ ಇಬ್ಬರೂ ವ್ಯಕ್ತಿಗಳು ಅನಧೀಕೃವಾಗಿ ಮಧ್ಯದ ಬಾಟಲಿಗಳನ್ನು ಮಾರಾಟ ಮಾಡುತ್ತಿರುವುದನ್ನು ನೋಡಿ ಖಚಿತಪಡಿಸಿಕೊಂಡು ಸಿಬ್ಬಂದಿಯವರ ಸಹಾಯದಿಂದ ಒಮ್ಮಲ್ಲೇ ಎಲ್ಲರೂ ಕೂಡಿ ಸದರಿ ವ್ಯಕ್ತಿಗಳನ್ನು ಹಿಡಿಯಲು ಹೋದಾಗ ಮದ್ಯ ಖರೀದಿಸುತ್ತಿದ್ದ ವ್ಯಕ್ತಿಗಳು ಓಡಿ ಹೋಗಿದ್ದು, ಮದ್ಯ ಮಾರಾಟ ಮಾಡುತ್ತಿದ್ದ ಇಬ್ಬರೂ ಜನರಿಗೆ ಬೆಳಿಗ್ಗೆ 9-00 ಗಂಟೆಗೆ ಹಿಡಿದು ಅವರ ಹೆಸರು ವಿಳಾಸ ವಿಚಾರಿಸಲು 1) ಪ್ರವೀಣ ತಂದೆ ಕಲ್ಯಾಣಿ ದಯಣ್ಣನೂರ, ವ:35 ವರ್ಷ, ಜಾತಿ:ಲಿಂಗಾಯತ, ಉ:ಸ್ಮೀತಾ ವೈನಶಾಪ ಪಕ್ಕದಲ್ಲಿ ಪಾನಶಾಪ ಕೆಲಸ, ಸಾ:ರಾಜೀವಗಾಂಧಿ ನಗರ ಫಿಲ್ಟರಬೆಡ್ ಹತ್ತಿರ ಕಲಬುರಗಿ, 2) ಚನ್ನಬಸಪ್ಪ ತಂದೆ ರಾಮಣ್ಣಾ ಬ್ಯಾಕೋಡ, ವ:45 ವರ್ಷ, ಜಾತಿ:ಕುರುಬ, ಉ:ಮಾರುತಿ ಬಾರನಲ್ಲಿ ವೇಟರ ಕೆಲಸ, ಸಾ:ಐಯ್ಯರವಾಡಿ ಹುಮನಾಬಾದ ಬೇಸ್ ಹತ್ತಿರ ಕಲಬುರಗಿ ಅಂತಾ ತಿಳಿಸಿದರು. ಸದರಿಯವರಿಗೆ ಮದ್ಯವನ್ನು ಮಾರಾಟ ಮಾಡುವುದಕ್ಕೆ ತಮ್ಮ ಹತ್ತಿರ ಯಾವುದಾದರೂ ಪರವಾನಿಗೆ ಇದ್ದರೇ ಹಾಜರಪಡಿಸಿ ಎಂದು ತಿಳಿಸಿದಾಗ ತಮ್ಮ ಹತ್ತಿರ ಯಾವುದೇ ಪರವಾನಿಗೆ ಇರುವುದಿಲ್ಲ ಅಂತಾ ತಿಳಿಸಿದರು.  ಅವರ ಹತ್ತಿರ ದೊರೆತ ಮದ್ಯದ ಬಾಟಲಿ/ಟೆಟ್ರಾ ಪಾಕೇಟಗಳನ್ನು ಪರಿಶೀಲಿಸಿ ನೋಡಲಾಗಿ ಓರಿಜನಲ್ ಚಾಯ್ಸ್ 90 ಎಂ.ಎಲ್.ನ 2 ಕಾಟನ ಬಾಕ್ಸಗಳು ಮತ್ತು ಓರಿಜನಲ್ ಚಾಯ್ಸ್ 90 ಎಂ.ಎಲ್.ನ 19 ಟೆಟ್ರಾ ಪಾಕೇಟಗಳು ದೊರೆತಿದ್ದು, ಪ್ರತಿ ಕಾಟನ ಬಾಕ್ಸನಲ್ಲಿ 96 ಟೆಟ್ರಾ ಪಾಕೇಟಗಳು ಇದ್ದು, ಹೀಗೆ ಒಟ್ಟು 211 ಟೆಟ್ರಾ ಪಾಕೇಟಗಳು  ದೊರೆತಿದ್ದು, ಪ್ರತಿಯೊಂದಕ್ಕೆ ರೂ.35/- ರಂತೆ ಒಟ್ಟು 211 ಟೆಟ್ರಾ ಪಾಕೇಟಗಳಿಗೆ ರೂ.7385/- ಮೌಲ್ಯದ ಮದ್ಯದ ಟೆಟ್ರಾ ಪಾಕೇಟಗಳನ್ನು ಜಪ್ತುಪಡಿಸಿಕೊಂಡು,  ನಂತರ  1) ಪ್ರವೀಣ ತಂದೆ ಕಲ್ಯಾಣಿ ದಯಣ್ಣನೂರ ಈತನ ಅಂಗ ಶೋಧನೆ ಮಾಡಲು ಅವನ ಹತ್ತಿರ ಮದ್ಯ ಮಾರಾಟ ಮಾಡಿದ ನಗದು ಹಣ ರೂ.2100/- ದೊರೆತಿದ್ದು, ನಂತರ 2) ಚನ್ನಬಸಪ್ಪ ತಂದೆ ರಾಮಣ್ಣಾ ಬ್ಯಾಕೋಡ ಈತನ ಅಂಗ ಶೋಧನೆ ಮಾಡಲು ಅವನ ಹತ್ತಿರ ಮದ್ಯ ಮಾರಾಟ ಮಾಡಿದ ನಗದು ಹಣ ರೂ.1700/- ಗಳು ದೊರೆತಿದ್ದು, ಹೀಗೆ ಒಟ್ಟು ನಗದು ಹಣ ರೂ.3800/- ದೊರೆತಿದ್ದು ಇರುತ್ತದೆ.  ನಂತರ ಸದರಿಯವರಿಗೆ ಮದ್ಯದ ಬಾಟಲಿಗಳನ್ನು ಏಲ್ಲಿಂದ ತಂದು ಮಾರಾಟ ಮಾಡುತ್ತಿರುವೀರಿ ಅಂತಾ  ವಿಚಾರಿಸಿದಾಗ ಅವರು ನಿನ್ನೆ ರಾತ್ರಿ ಎಮ್.ಆರ್.ಪಿ. ರೇಟ್ ನಲ್ಲಿ ಬೇರೆ ಬೇರೆ ಕಡೆಯಿಂದ ಸ್ವಲ್ಪ, ಸ್ವಲ್ಪ ಖರೀದಿಸಿ ತಂದು ಮಾರಾಟ ಮಾಡುತ್ತಿದ್ದೆವೆ ಅಂತಾ ತಿಳಿಸಿದರು.ಹೀಗೆ ಒಟ್ಟು ಜಪ್ತಾದ ಮದ್ಯದ ಟೆಟ್ರಾ ಪಾಕೇಟಗಳನ್ನು ಮೂರು  ಪ್ರತ್ಯೇಕ ಬಿಳಿ ಬಟ್ಟೆಯಿಂದ ಪ್ಯಾಕ ಮಾಡಿ ಹೊಲೆದು ಅದಕ್ಕೆ “ಎಎಸ್ಎನ್” ಅಂತ ಇಂಗ್ಲೀಷ ಅಕ್ಷರದ ಸೀಲ್ ದಿಂದ ಸೀಲ್ ಮಾಡಿ ಪಂಚರ ಹಾಗೂ ನನ್ನ ಸಹಿ ಚೀಟಿಯನ್ನು ಅಂಟಿಸಿ ಕೇಸಿನ ಪುರಾವೆ ಕುರಿತು ನಮ್ಮ ತಾಬಾಕ್ಕೆ ತೆಗೆದುಕೊಂಡು ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

ಸಬ್‌ ಅರ್ಬನ್‌ ಪೊಲೀಸ್‌ ಠಾಣೆ :- ದಿನಾಂಕ 01-02-2023  ರಂದು ಸಾಯಂಕಾಲ ೦೫-೦೦ ಗಂಟೆಯ ಸುಮಾರಿಗೆ ಅಷ್ಟಗಾ ಗ್ರಾಮದ ಕನಕದಾಸ ಚೌಕ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಸದರಿ ಆರೋಪಿತರು ಅಕ್ರಮವಾಗಿ ಮದ್ಯ ಸಂಗ್ರಹಿಸಿ ಇಟ್ಟುಕೊಂಡು ಮಾರಾಟ ಮಾಡುತ್ತಿದ್ದಾರೆ ಅಂತಾ ಬಾತ್ಮಿ ಮೇರೆಗೆ ಪಿರ್ಯಾದಿಯು ಠಾಣಾ ಸಿಬ್ಬಂದಿಗಳು ಮತ್ತು ಪಂಚರೊಂದಿಗೆ ಸದರಿ ಸ್ಥಳಕ್ಕೆ ಹೋಗಿ ದಾಳಿ ಮಾಡಿ ಪಂಚರ ಸಮಕ್ಷಮ ೧) ಒರಿಜನಲ್ ಚಾಯ್ಸ್ ೯೦ಎಮ್ ಎಲ್ ಒಟ್ಟು ೬೦ ಟೆಟ್ರಾ ಪಾಕೇಟಗಳು ಪ್ರತಿಯೊಂದಕ್ಕೆ ೩೫ ರೂ ನಂತೆ ಒಟ್ಟು ಅ:ಕಿ: ೨೧೦೦/- ರೂ ಹಾಗೂ ನಗದು ಹಣ ೮೯೦/- ರೂ ನೇದ್ದವನ್ನು ಜಪ್ತಿ ಪಡಿಸಿಕೊಂಡು ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

ಇತ್ತೀಚಿನ ನವೀಕರಣ​ : 04-02-2023 12:36 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080