ಅಭಿಪ್ರಾಯ / ಸಲಹೆಗಳು

ಸಂಚಾರಿ ಪೊಲೀಸ್‌ ಠಾಣೆ-1 :- ದಿನಾಂಕ: 03/01/2023 ರಂದು ರಾತ್ರಿ 8:30 ಗಂಟೆಗೆ ಸೆಂಟ್ರಲ ಜೈಲ ಹತ್ತೀರ ಅಪಘಾತ ಹೊಂದಿ ಮೃತಪಟ್ಟ ಅಪರಿಚಿತ ಹೆಣ್ಣುಮಗಳ ಶವ ಸರ್ಕಾರಿ ಆಸ್ಪತ್ರೆಗೆ ಬಂದಿರುವದಾಗಿ ಗೊತ್ತಾಗಿ ಸರ್ಕಾರಿ ಆಸ್ಪತ್ರೆಗೆ ಬೇಟಿಕೊಟ್ಟು ಶವದ ಜೊತೆಗಿದ್ದ ಶ್ರೀ ಅಂಬಾರಾಯ ತಂದೆ ಯಾದಣ್ಣಾ ಮೆಂಗಾ ಇವರನ್ನು ವಿಚಾರಿಸಲು ಅವರು ಕೊಟ್ಟ ಹೇಳಿಕೆ ಸಾರಂಶವೆನೆಂದರೆ ನಾನು 4 ವರ್ಷದಿಂದ ಸೆಂಟ್ರಲ ಜೈಲ ಸಮೀಪ ಖಾನಾವಳಿ ಇಟ್ಟುಕೊಂಡು ನನ್ನ ಕುಟುಂಬದೊಂದಿಗೆ ವಾಸವಾಗಿರುತ್ತೇನೆ. ಈಗ 3-4 ದಿವಸಗಳಿಂದ ಒಬ್ಬಳು 45 ರಿಂದ 50 ವರ್ಷದ ಅಪರಿಚಿತ ಹೆಣ್ಣು ಮಗಳು ಸೆಂಟ್ರಲ ಜೈಲ ಅಕ್ಕಪಕ್ಕದಲ್ಲಿ ತಿರುಗಾಡಿಕೊಂಡು ಬಸ್ಸ ನಿಲ್ದಾಣದಲ್ಲಿ ಕೂಡುತ್ತಾ ಅಪರ ತಪರ ಮಾತನಾಡುತ್ತಾ ಹುಚ್ಚು ಹುಚ್ಚಾಗಿ ತಿರುಗಾಡುತ್ತಾ ಇದ್ದಳು. ದಿನಾಂಕ 03/01/2023 ರಂದು ಸಾಯಂಕಾಲದ ಸಮಯದಲ್ಲಿ ನಾನು ನಮ್ಮ ಖಾನಾವಳಿಯಿಂದ ಸೆಂಟ್ರಲ ಜೈಲ ಸಮೀಪ ಬರುವ ಕಿರಾಣಿ ಅಂಗಡಿಗೆ ಸಾಮಾನು ತರುವ ಸಲುವಾಗಿ ನಡೆದುಕೊಂಡು ಹೋಗುತ್ತೀರುವಾಗ ಅದೇ ಅಪರಿಚಿತ ಹೆಣ್ಣು ಮಗಳು ಸೆಂಟ್ರಲ ಜೈಲ ಸಮೀಪ ಬರುವ ಬಸ್ಸ ನಿಲ್ದಾಣ ಹತ್ತೀರ ರೋಡ ಮೇಲೆ ಇರುವಾಗ ಜೇವರ್ಗಿ ಕಡೆಯಿಂದ ಕಲಬುರಗಿ ಕಡೆಗೆ ಹೋಗುವ ಕುರಿತು ಯಾವುದೋ ಒಂದು ಕಾರ ಚಾಲಕನು ತನ್ನ ವಾಹನವನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಅವಳಿಗೆ ಡಿಕ್ಕಿಪಡಿಸಿ ಅಪಘಾತ ಮಾಡಿ ಅವಳ ಮೈಮೇಲಿಂದ ವಾಹನವನ್ನು ಚಲಾಯಿಸಿಕೊಂಡು ಕಲಬುರಗಿ ಕಡೆಗೆ ತನ್ನ ವಾಹನ ಸಮೇತ ಓಡಿ ಹೋದನು. ನಾನು ಮತ್ತು ಅಲ್ಲಿನ ಅಂಗಡಿಯವರು ಹಾಗೂ ಆಟೊರಿಕ್ಷಾ ಚಾಲಕ ಮಹಿಬೂಬಸಾಬ @ ಬಾಬಾ ತಂದೆ ಸಿಲಾರಸಾಬ ಸಾ: ವಿದ್ಯಾ ನಗರ ಕಲಬುರಗಿ ರವರು ಹೋಗಿ ಅಪರಿಚಿತ ಹೆಣ್ಣು ಮಗಳಿಗೆ ನೋಡಲು ಅವಳ ತೆಲೆಗೆ ಭಾರಿ ರಕ್ತಗಾಯವಾಗಿ ಮೌಂಸ  ಹೊರಗೆ ಬಂದಿತ್ತು. ಬಲಗೈ ಮುಂಗೈಯಿಂದ ಹಸ್ತದವರಗೆ ಭಾರಿ ರಕ್ತಗಾಯವಾಗಿ ಮೌಂಸ ಹೊರೆಗೆ ಬಂದಿತ್ತು. ಎಡಗೈ ಮುಂಗೈ ಹತ್ತೀರ ಭಾರಿ ರಕ್ತಗಾಯ ಹೊಟ್ಟೆಗೆ ಭಾರಿ ಪೆಟ್ಟು ಬಿದ್ದು ಮೌಂಸ ಹೊರಗೆ ಬಂದಿತ್ತು. ಸೊಂಟ ಮತ್ತು ಕಾಲುಗಳಿಗೆ ಬಾರಿ ಪೆಟ್ಟು ಬಿದ್ದು ಕಾಲ ಕಟ್ಟಾಗಿ ಚಪ್ಪಟ್ಟೆ ಬಡಿದು ಮೌಂಸ ಹೊರಗೆ ಬಂದಿತ್ತು. ಮೈಮೇಲೆ ಯಾವುದೆ ಬಟ್ಟೆ ಇದ್ದಿರಲಿಲ್ಲ. ಸದರಿಯವಳಿ ಅಂದಾಜು 45- ರಿಂದ 50- ವರ್ಷದ ಹೆಣ್ಣುಮಗಳು ಇದ್ದು ಸಾದಾಗಪ್ಪು ಮೈಬಣ್ಣ ದುಂಡು ಮುಖ ಹೊಂದಿದ್ದಳು. ಸದರಿ ಘಟನೆ ಜರುಗಿದಾಗ ಸಾಯಂಕಾಲ ಅಂದಾಜು 7-15 ಗಂಟೆ ಸಮಯವಾಗಿತ್ತು. ಹೈ ವೇ ಪೆಟ್ರೊಲಿಂಗ ಪೊಲೀಸನವರು ಅಪಘಾತ ಸ್ಥಳಕ್ಕೆ ಬಂದು ನೋಡಿ ಅಂಬುಲೇನ್ಸ ವಾಹನ ಬಂದಾಗ ಅಪರಿಚಿತ ಹೆಣ್ಣು ಮಗಳ ಶವದ ಸುರಕ್ಷತೆಗಾಗಿ ಕಲಬುರಗಿ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿರುತ್ತಾರೆ. ನಾನು ಕೂಡಾ ಹಿಂದಿನಿಂದ ಸರ್ಕಾರಿ ಆಸ್ಪತ್ರೆಗೆ ಬಂದಿರುತ್ತೆನೆ. ಡಿಕ್ಕಿಪಡಿಸಿ ಅಪಘಾತ ಮಾಡಿದ ಕಾರ  ನಂಬರ ಮತ್ತು ಅದರ ಚಾಲಕನ ಹೆಸರು ವಿಳಾಸ ಗೋತ್ತಾಗಿರುವದಿಲ್ಲ. ಯಾವುದೋ ಒಂದು ಕಾರ ಚಾಲಕನು ತನ್ನ ವಾಹನವನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನಡೆದುಕೊಂಡು ಹೋಗುತ್ತೀರುವ ಅಪರಿಚಿತ ಹೆಣ್ಣು ಮಗಳಿಗೆ ಡಿಕ್ಕಿಪಡಿಸಿ ಅಪಘಾತ ಮಾಡಿ ಅವರಿಗೆ ಭಾರಿಗಾಯಗೊಳಿಸಿ ತನ್ನ ವಾಹನ ಸಮೇತ ಓಡಿ ಹೋಗಿದ್ದು ಅಪರಿಚಿತ ಹೆಣ್ಣು ಮಗಳು ಭಾರಿಗಾಯದಿಂದ ಅಪಘಾತ ಸ್ಥಳದಲ್ಲಿ ಮೃತ ಪಟ್ಟಿದ್ದು ಯಾವುದೋ ಒಂದು ಕಾರ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಎಂದು ಫಿರ್ಯಾದಿ ಕೊಟ್ಟ ಹೇಳಿಕೆ ಸಾರಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.     

 

 

 

ರಾಘವೇಂದ್ರ ನಗರ ಪೊಲೀಸ್‌ ಠಾಣೆ :- ದಿನಾಂಕ: 03/01/2023 ರಂದು 6:00 ಪಿ.ಎಮ್.ಕ್ಕೆ ಮಾನ್ಯ ಮಲ್ಲಿಕಾರ್ಜುನ ಜಾನೆ ಎಎಸ್ಐ ರಾಘವೇಂದ್ರ ನಗರ ಪೊಲೀಸ ಠಾಣೆ ಕಲಬುರಗಿ ನಗರರವರು ಒಬ್ಬ ಆರೋಪಿತ ಹಾಗೂ ಜಪ್ತಿ ಪಂಚನಾಮೆ, ಮುದ್ದೆಮಾಲು ನೊಂದಿಗೆ ಮಾನ್ಯ ನ್ಯಾಯಾಲಯದ ಪರವಾನಿಗೆ ಪಡೆದುಕೊಂಡು ಜ್ಞಾಪನ ಪತ್ರ ನೀಡಿದರ ಸಾರಾಂಶವೇನೆಂದರೆ. ನಾನು ಈ ಮೂಲಕ ಜ್ಞಾಪನ ಪತ್ರ ಕೊಡುವುದೇನೆಂದರೆ, ಇಂದು ದಿನಾಂಕ:03/01/2023 ರಂದು ಸಾಯಂಕಾಲ 4:00 ಗಂಟೆಯ ಸುಮಾರಿಗೆ ನಾನು ಮತ್ತು ನಮ್ಮ ಠಾಣೆಯ ಸಿಬ್ಬಂದಿಯವರಾದ ಶ್ರೀ ಸಿಕ್ರೇಶ್ವರ ಹೆಚ್ಸಿ 134, ಶ್ರೀ ಉಮೇಶ ಸಿಪಿಸಿ-109, ಶ್ರೀ ರಮೇಶ ಸಿಪಿಸಿ-445,  ಶ್ರೀ ಮುಜಾಹಿದ ಕೊತ್ವಾಲ ಪಿಸಿ 158, ಶ್ರೀ ಶರಣಬಸವ ಪಿಸಿ 511 ರವರನ್ನು ಸಂಗಡ ಕರೆದುಕೊಂಡು ಠಾಣಾ ವ್ಯಾಪ್ತಿಯಲ್ಲಿ ಪೆಟ್ರೋಲಿಂಗ್ ಕರ್ತವ್ಯ ನಿರ್ವಹಿಸುತ್ತಿರುವಾಗ ಖಚಿತ ಮಾಹಿತಿ ಬಂದಿದ್ದೆನೆಂದರೆ, ಠಾಣಾ ವ್ಯಾಪ್ತಿಯ ಲಾಲಗೇರಿ ಕ್ರಾಸ ಹತ್ತಿರ ಸಾರ್ವಜನಿಕ ರಸ್ತೆಯ ಮೇಲೆ ಒಬ್ಬ ವ್ಯಕ್ತಿ ಕುಳಿತುಕೊಂಡು ರಸ್ತೆಯ ಮೇಲೆ ಹೋಗಿ ಬರುವ ಜನರಿಗೆ ಇದು ಬಾಂಬೆ ಮಟಕಾ ಇದೆ 1 ರೂಪಾಯಿಗೆ 80 ರೂಪಾಯಿ ಬರುತ್ತದೆ ಅಂತ ಹೇಳಿ ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟಕಾ ಚೀಟಿ ಬರೆದು ಕೊಡುತ್ತಿದ್ದಾನೆ ಅಂತ ಖಚಿತ ಮಾಹಿತಿ ಬಂದಿರುತ್ತದೆ ಅಂತಾ ತಿಳಿಸಿರುವದರಿಂದ ಸದರಿ ಮಾಹಿತಿಯನ್ನು ಮಾನ್ಯ ಮೇಲಾಧಿಕಾರಿಯವರಿಗೆ ತಿಳಿಸಿ ಮಾನ್ಯ ಮೇಲಾಧಿಕಾರಿಯವರ ಮಾರ್ಗದರ್ಶನದಂತೆ ಖಚಿತವಾದ ಮಾಹಿತಿಯಂತೆ ಸದರಿಯವರ ಮೇಲೆ ದಾಳಿಮಾಡಿ ಕ್ರಮಕೈಕೊಳ್ಳುವ ಕುರಿತು ಇಬ್ಬರು ಪಂಚರನ್ನು ಶ್ರೀ ರಮೇಶ ಸಿಪಿಸಿ-445 ರವರ ಮುಖಾಂತರ ಬರಮಾಡಿಕೊಂಡು ಅವರಿಗೆ ತಿಳಿಹೇಳಿ ನಂತರ ಪಂಚರು ಮತ್ತು ನಾವು ಸಿಬ್ಬಂದಿಯವರು ನಮ್ಮ ನಮ್ಮ ಮೋಟಾರ ಸೈಕಲ್ಮೇಲೆ ಸಾಯಂಕಾಲ್ 4:15 ಗಂಟೆಗೆ ಹೊರಟು 4:30 ಗಂಟೆಗೆ ಸ್ಥಳಕ್ಕೆ ತಲುಪಿ ಮರೆಯಾಗಿ ನಿಂತುಕೊಂಡು ನೋಡಲಾಗಿ ಒಬ್ಬ ವ್ಯಕ್ತಿ ಸಾರ್ವಜನಿಕ ರಸ್ತೆಯ ಪಕ್ಕದಲ್ಲಿ ಕುಳಿತುಕೊಂಡು ರಸ್ತೆಯ ಮೇಲೆ ಹೋಗಿಬರುವವರಿಗೆ ಇದು ಬಾಂಬೆ ಕಲ್ಯಾಣ ಮಟಕಾ ಇದೆ 1 ರೂಪಾಯಿಗೆ 80 ರೂಪಾಯಿ ಬರುತ್ತದೆ ಅಂತ ಅವರಿಂದ ಹಣ ಪಡೆದುಕೊಂಡು ಮಟಕಾ ಚೀಟಿ ಬರೆದುಕೂಡುತ್ತಿರುವದನ್ನು ಖಚಿತ ಪಡಿಸಿಕೊಂಡು ನಾನು ಮತ್ತು ಸಿಬ್ಬಂದಿಯವರು ಕೂಡಿಕೊಂಡು ಪಂಚರ ಸಮಕ್ಷಮ ಸದರಿ ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದ ವ್ಯಕ್ತಿ ಮೇಲೆ ದಾಳಿಮಾಡಲು, ಮಟಕಾ ಬರೆಯಿಸಲು ಬಂದವರು ಓಡಿಹೋಗಿದ್ದು, ಮಟಕಾ ಚೀಟಿಯನ್ನು ಬರೆದುಕೊಳ್ಳುತ್ತಿದ್ದವನಿಗೆ ಸಿಬ್ಬಂದಿಯವರ ಸಹಾಯದಿಂದ ವ್ಯಕ್ತಿಗೆ ಹಿಡಿದಿದ್ದು ಅವನ ಹೆಸರು ವಿಳಾಸ ವಿಚಾರಿಸಲು ತನ್ನ ಹೆಸರು ಸಂಜಯಕುಮಾರ ತಂದೆ ನಾಗೇಂದ್ರಪ್ಪಾ ಜಿಡಗಿ ವಯಃ 33 ವರ್ಷ ಜಾಃಲಿಂಗಾಯತ ಉಃಪೈನಾನ್ಸ್ ಲಕಷೇ ನ್ಸಾಃಅಮರ ವೆಲ್ಡಿಂಗ್ ಹತ್ತಿರ ಜೆ.ಆರ್ನಗರ ಕಲಬುರಗಿ ಅಂತಾ ತಿಳಿಸಿದ್ದು ಸದರಿಯವನ ಅಂಗಶೋದನೆ ಮಾಡಲು ಅವನ ಹತ್ತಿರ ನಗದುಹಣ 2110 /-ರೂ ಸಿಕ್ಕಿದ್ದು ಮತ್ತು ಒಂದು ಬಾಲಪೆನಅಃಕಿಃ 00, ಒಂದು ಮಟಕಾ ಚೀಟಿಅಕಿ. 00/-ದೊರೆತಿದ್ದು, ಸದರಿ ಮಟಕಾ ಜೂಜಾಟಕ್ಕೆ ಸಂಬಂಧಪಟ್ಟ 2110/- ರೂಗಳು, ಬೆಲೆ ಬಾಳುವದನ್ನು ಸದರಿಯವನಿಂದ ಪಂಚರ ಸಮಕ್ಷಮ ಜಪ್ತಿಮಾಡಿಕೊಂಡು ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಫರಹತಾಬಾದ ಪೊಲೀಸ್‌ ಠಾಣೆ :- ದಿನಾಂಕ:- 03/01/2023 ರಂದು ರಾತ್ರಿ  9:20 ಪಿಎಮ್ ಕ್ಕೆ ಶ್ರೀ ಗಡ್ಡೆಪ್ಪ ಹೆಚ್.ಸಿ:165 ರವರು ಠಾಣೆಗೆ ಹಾಜರಾಗಿ ಮುದ್ದೆಮಾಲು, ಜಪ್ತಿ ಪಂಚನಾಮೆ 9 ಜನ ಆರೋಪಿತರೊಂದಿಗೆ ಮುಂದಿನ ಕ್ರಮಕ್ಕಾಗಿ ವರದಿ ಹಾಜರಪಡಿಸಿದ್ದರ ಸಾರಾಂಶವೇನೆಂದರೆ, ಇಂದು ದಿನಾಂಕ: 03-01-2023 ರಂದು ಸಾಯಂಕಾಲ 6:30 ಗಂಟೆಯ ಸುಮಾರಿಗೆ ನಾನು ಪೊಲೀಸ್ ಠಾಣೆಯಲ್ಲಿದ್ದಾಗ ಭಾತ್ಮಿ ಬಂದಿದ್ದೇನೆಂದರೆ, ನಮ್ಮ ಠಾಣೆಯ ವ್ಯಾಪ್ತಿಯ ಮಳನಿ ಗ್ರಾಮದ ಹನುಮಾನ ಗುಡಿಯ ಹತ್ತಿರ ಸಾರ್ವಜನಿಕ ಸ್ಥಳದ ಖುಲ್ಲಾ ಜಾಗೆಯಲ್ಲಿ ಕೆಲವು ಜನರು ಇಸ್ಪೀಟ ಜೂಜಾಟ ಆಡುತ್ತಿದ್ದಾರೆ ಅಂತಾ ಖಚಿತ ಮಾಹಿತಿ ಬಂದ ಮೇರೆಗೆ ನಮ್ಮ ಠಾಣಾ ಸಿಬ್ಬಂದಿ ಜನರಾದ ಸಾಜೀದ ಸಿಪಿಸಿ:292  ಮಹೇಬೂಬ ಸಿ.ಪಿ.ಸಿ 271, ಶಿವರಾಜ ಸಿಪಿಸಿ 475 ರವರಿಗೆ ಜೂಜಾಟದ ಬಗ್ಗೆ ಮಾಹಿತಿ ತಿಳಿಸಿ ನಂತರ ನಮ್ಮ ಪಿಐ ಸಾಹೇಬರಿಗೆ ಮಾಹಿತಿ ತಿಳಿಸಿ ಅವರ ಮಾರ್ಗದರ್ಶನದಲ್ಲಿ ಸಿಬ್ಬಂದಿ ಜನರಿಗೆ ಖಾಸಗಿ ವಾಹನದಲ್ಲಿ ಕರೆದುಕೊಂಡು ಠಾಣೆಯಿಂದ ಸಾಯಂಕಾಲ 6:45 ಗಂಟೆಗೆ ಹೊರಟ್ಟು, ಮಾಹಿತಿ ಸ್ಥಳಕ್ಕೆ ಹೊರಡುವಾಗ ಮಾರ್ಗಮಧ್ಯೆ ದಾರಿ ಹೊಕ್ಕ ಇಬ್ಬರೂ ಪಂಚರನ್ನು ಬರಮಾಡಿಕೊಂಡು ಅವರಿಗೂ ಮಾಹಿತಿ ಬಂದ ವಿಷಯ ತಿಳಿಸಿ ಅವರು ನಮ್ಮೊಂದಿಗೆ ದಾಳಿ ಕಾಲಕ್ಕೆ ಹಾಜರಿರಲು ಒಪ್ಪಿದ ಮೇರೆಗೆ ಅವರನ್ನು ನಮ್ಮೊಂದಿಗೆ ಖಾಸಗಿ ವಾಹನದಲ್ಲಿ ಕರೆದುಕೊಂಡು ಹೊರಟು ಮಾಹಿತಿ ಸ್ಥಳದ ಹತ್ತಿರ ರಾತ್ರಿ 7.15 ಗಂಟೆಗೆ ಗಿಡಗಳ ಮರೆಯಲ್ಲಿ ನಿಂತು ನೋಡಲು ಸಾರ್ವಜನಿಕ ಸ್ಥಳದಲ್ಲಿ ಲೈಟಿನ ಕಂಬದ ಕೆಳಗೆ ಬೆಳಕಿನಲ್ಲಿ ಕುಳಿತು ಕೆಲವು ಜನರು ದುಂಡಾಗಿ ಇಸ್ಪೇಟ ಎಲೆಗಳ ಸಹಾಯದಿಂದ ಅಂದರ ಬಾಹರ ಜೂಜಾಟ ಆಡುತ್ತಿರುವದನ್ನು ನೋಡಿ ಖಚಿತ ಪಡಿಸಿಕೊಂಡು ರಾತ್ರಿ 7.20 ಗಂಟೆಗೆ ಏಕಕಾಲಕ್ಕೆ ಪಂಚರ ಸಮಕ್ಷಮದಲ್ಲಿ ದಾಳಿ ಮಾಡಲಾಗಿ ಜನರಿಗೆ ಹಿಡಿದು ಅವರಿಗೆ ಅಂಗಶೋಧ ಮಾಡಿ ಹೆಸರು ವಿಳಾಸ ಕೇಳಲು 1) ನಾಗರಾಜ ತಂದೆ ಈರಣ್ಣ ರೇವೂರ ವಯ: 40 ವರ್ಷ ಉ: ಖಾಸಗಿ ಕೆಲಸ ಜಾತಿ: ಕಬ್ಬಲಿಗ ಸಾ: ಮಳನಿ ತಾಜಿ: ಕಲಬುರಗಿ 2) ರವೀಂದ್ರಕುಮಾರ  ತಂದೆ ಸುಬ್ಬಣ್ಣ ಬಿರಾದಾರ ವಯ: 40 ವರ್ಷ ಉ: ಹೋಟೆಲ ಕೆಲಸ ಜಾತಿ: ಲಿಂಗಾಯತ ಸಾ: ಗೊಬ್ಬೂರ (ಕೆ) ತಾ: ಅಫಜಲಪೂರ 3) ಸಚಿನ ತಂದೆ ಗುಂಡು ಕೂಡಿ ವಯ: 25 ವರ್ಷ ಉ: ಹೋಟೆಲ ಕೆಲಸ ಜಾತಿ: ಲಿಂಗಾಯತ ಸಾ: ಗೊಬ್ಬೂರ(ಕೆ) ತಾ: ಅಫಜಲಪೂರ ಜಿ: ಕಲಬುರಗಿ 4) ರಾಹುಲ ತಂದೆ ಸುಭಾಸ ಕಿಳ್ಳಿ ವಯ: 23 ವರ್ಷ ಉ: ಅಡುಗೆ ಕೆಲಸ ಜಾತಿ: ಹೊಲೆಯ ಸಾ: ಶೇಖ ರೋಜಾ ಆಶ್ರಯ ಕಾಲೋನಿ ಕಲಬುರಗಿ 5) ರೇವಣಸಿದ್ದ ತಂದೆ ಅಶೋಕರೆಡ್ಡಿ ವಯ: 28 ವರ್ಷ ಉ: ಅಡುಗೆ ಕೆಲಸ ಜಾತಿ: ರೆಡ್ಡಿ  ಸಾ: ಸುಭಾಷ ಚೌಕ ಬ್ರಹ್ಮಪೂರ ಕಲಬುರಗಿ 6) ಗುರುಮೀತಸಿಂಗ ತಂದೆ ಬೀರಸಿಂಗ ಸರದಾರಜೀ ವಯ: 25 ವರ್ಷ ಉ: ವ್ಯಾಪಾರ ಕೆಲಸ ಜಾತಿ: ಸರದಾರಜಿ ಸಾ: ಆರ.ಟಿ.ಓ ನಗರ ಚಿಂಚೋಳಿ ಕ್ರಾಸ ಶಹಬಾದ ತಾಂಡಾ 7) ಶಿವಕುಮಾರ ತಂದೆ ಜಗನ್ನಾಥ ತೇಗನೂರ ವಯ: 34 ವರ್ಷ ಉ: ಅಟೋ ಚಾಲಕ ಜಾತಿ: ಕುರುಬ ಸಾ: ಕೋರಿ ಮಠದ ಹತ್ತಿರ ಕಲಬುರಗಿ 8) ಉಸ್ಮಾನ ತಂದೆ ಮೈಬೂಬಲಿ ಶೇಖ ವಯ: 40 ವರ್ಷ ಉ: ಹೂವಿನ ವ್ಯಾಪಾರ ಜಾ: ಮುಸ್ಲಿಂ ಸಾ: ಆಳಂದ ಚೆಕ್ ಪೋಸ್ಟ ಹತ್ತಿರ ಕಲಬುರಗಿ 9) ಭೀಮಾಶಂಕರ ತಂದೆ ಬಸವರಾಜ ನಾಟಿಕಾರ  ವಯ: 24 ವರ್ಷ ಉ: ಅಡುಗೆ ಕೆಲಸ ಜಾತಿ: ಹೊಲೆಯ ಸಾ: ಶೇಖ ರೋಜಾ ಆಸ್ರಯ ಕಾಲೋನಿ ಕಲಬುರಗಿ  ಅಂತ ತಿಳಿಸಿರುತ್ತಾರೆ. ಅವರ ಅಂಗಶೋಧನೆ ಕಾಲಕ್ಕೆ 12510/-  ರೂ ಸಿಕ್ಕಿದ್ದು ಸದರಿ ಸ್ಥಳದಲ್ಲಿ 52 ಇಸ್ಪೇಟ ಎಲೆಗಳು ಹಾಗೂ ನಗದು ಹಣ 2300/- ರೂ. ಸಿಕ್ಕಿದ್ದು,  ಒಟ್ಟು ಹಣ 14810/- ರೂ ಇವುಗಳನ್ನು ಜಪ್ತಿಪಡಿಸಿಕೊಂಡು ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

ಇತ್ತೀಚಿನ ನವೀಕರಣ​ : 06-01-2023 01:41 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080