ಅಭಿಪ್ರಾಯ / ಸಲಹೆಗಳು

ಚೌಕ ಪೊಲೀಸ ಠಾಣೆ :- ದಿನಾಂಕ 02/12/2022 ರಂದು ಮಧ್ಯಾಹ್ನ 3-00 ಗಂಟೆಗೆ ಪೊಲೀಸ ಠಾಣೆಯಲ್ಲಿದ್ದಾಗ , ನಮ್ಮ ಚೌಕ ಪೊಲೀಸ ಠಾಣೆ ವ್ಯಾಪ್ತಿಯಲ್ಲಿ ಬರುವ ಮೋಮಿನಪೂರ ಖುರೇಷಿ ಮಜೀದ ಪಕ್ಕದಲ್ಲಿ ಒಂದು ಬುಲೋರೋ ವಾಹನದಲ್ಲಿ ಅಕ್ರಮವಾಗಿ ಜಾನುವಾರುಗಳು ಎಲ್ಲಿಂದಲೋ ಖರೀದಿ ಮಾಡಿಕೊಂಡು ಅವುಗಳ ಹತ್ಯೆ ಮಾಡಿ ಮೌಂಸ ಮಾರಾಟ ಮಾಡುವಗೋಸ್ಕರ ತಂದು ಇಳಿಸುತ್ತಿದ್ದಾರೆ ಎಂದು ಖಚಿತವಾದ ಬಾತ್ಮಿ ಬಂದ ಮೇರೆಗೆ ಇಬ್ಬರು ಪಂಚರಾದ  1) ಶ್ರೀ ಪ್ರಶಾಂತ ತಂದೆ ಅಶೋಕ ಬಗಲಿ ವ:32 ವರ್ಷ ಉ:ಖಾಸಗಿ ಕೆಲಸ ಜಾತಿ ಲಿಂಗಾಯತ ಸಾ:ಶಿವಶಕ್ತಿ ನಗರ ಕಲಬುರಗಿ 2) ಶ್ರೀ ಮಾರುತಿ ತಂದೆ ರಾಮು ರಾಠೋಡ ವ:26 ವರ್ಷ ಉ:ಕೂಲಿಕೆಲಸ ಜಾತಿ ಲಂಬಾಣಿ ಸಾ: ಆಶ್ರಯ ಕಾಲನಿ ಸೈಯ್ಯದ ಚಿಂಚೋಳಿ ಕ್ರಾಸ ಕಲಬುರಗಿ ಮತ್ತು ಠಾಣೆ ಸಿಬ್ಬಂದಿಯವರಾದ  ಸಿಹೆಚಸಿ 211 ಸಿದ್ಧು ಪರೀಟ್. ಸಿಪಿಸಿ 166 ಜಗನಾಥ, ಸಿಪಿಸಿ 136 ಸುರೇಶ, ಸಿಪಿಸಿ 08 ಅಶೋಕ ಇವರುಗಳನ್ನು ಬರಮಾಡಿಕೊಂಡು, ಅವರಲ್ಲರಿಗೆ  ಬಾತ್ಮಿ ವಿಷಯ ತಿಳಿಸಿ, ಪಂಚರಿಗೆ  ನಾವು ಮಾಡುವ ದಾಳಿ ಜಪ್ತಿ ಪಂಚನಾಮೆಯ ಪಂಚರಾಗಿ, ಪಂಚನಾಮೆ ಬರೆಯಿಸಿ ಕೊಡಲು ಕೇಳಿಕೊಂಡಾಗ ಅದಕ್ಕೆ ನಾವು ಪಂಚರು ಒಪ್ಪಿಕೊಂಡರು. ಮತ್ತು ಸಿಬ್ಬಂದಿಯವರಿಗೆ ನನ್ನ ಜೊತೆಯಲ್ಲಿ ದಾಳಿಗೆ ಬರಲು ಸೂಚಿಸಿದಾಗ ಅವರು ಕೂಡಾ ಒಪ್ಪಿಕೊಂಡರು.   ತದನಂತರ ನಾನು ಠಾಣೆಗೆ ಒದಗಿಸಿದ ಠಾಣೆ ಜೀಪು ಕೆಎ 32 ಜಿ 874 ರಲ್ಲಿ  ನಾನು ಮತ್ತು  ಪಂಚರು ಹಾಗೂ ಈ ಮೇಲಿನ ಸಿಬ್ಬಂದಿಯವರು ಕುಳಿತುಕೊಂಡೇವು. ಶ್ರೀ ಸುರೇಶ ಸಿಪಿಸಿ 136 ಸುರೇಶ ಇವರು ಜೀಪು ಚಾಲನೆ ಮಾಡುತ್ತಿದ್ದು, ಆಗ ನಾನು ನಮ್ಮ ಮೇಲಾಧಿಕಾರಿಯವರಿಗೆ ಬಾತ್ಮಿ ತಿಳಿಸಿ ಅವರ ಮಾರ್ಗದರ್ಶನದಲ್ಲಿ ದಾಳಿ ಕುರಿತು ಠಾಣೆಯಿಂದ ಮಧ್ಯಾಹ್ನ 3-15 ಗಂಟೆಗೆ ಹೊರಟು, ಬಾತ್ಮಿ ಸ್ಥಳವಾದ ಮೋಮಿನಪೂರ ಖುರೇಷಿ ಮಜೀದ ಹತ್ತಿರ ಹೋಗಿ ನಾನು ಮತ್ತು ಪಂಚರು ಹಾಗೂ ಈ ಮೇಲಿನ ಸಿಬ್ಬಂದಿಯವರು ಮಧ್ಯಾಹ್ನ 3-30 ಗಂಟೆಗೆ ನೋಡಲಾಗಿ ಮೋಮಿನಪೂರ ಖುರೇಷಿ ಮಜೀದ ಹತ್ತಿರ ಒಂದು ಬಿಳಿ ಬಣ್ಣದ ಬುಲೋರೋ ಪಿಕ್ಕಪ್ಪ ಎಫಬಿ. ಕೆಎ 32 ಸಿ 7124 ನಿಂತಿದಿದ್ದನ್ನು ನೋಡಿ ವಾಹನ ಹತ್ತಿರ ಹೋಗಿ ನೋಡಲಾಗಿ ವಾಹನದಲ್ಲಿ ಕುಳಿತ  ಚಾಲಕ ನಮ್ಮ ಪೊಲೀಸ ಸಮವಸ್ತ್ರ ನೋಡಿ ವಾಹನದಿಂದ ಇಳಿದು ಅಲ್ಲಿಂದ ಓಡಿ ಹೋದನು. ಚಾಲಕನ ಪಕ್ಕದಲ್ಲಿ ಇನ್ನೊಬ್ಬ ಹುಡುಗ ಕುಳಿತಿದಿದ್ದನ್ನು ನೋಡಿ ಅವನಿಗೆ ನಾನು ಮತ್ತು ಸಿಬ್ಬಂದಿಯವರು ಹಿಡಿದುಕೊಂಡೇವು. ಅವನ ಹೆಸರು ವಿಳಾಸ ವಿಚಾರಿಸಲು ಅವನು ತನ್ನ ಹೆಸರು ಮಹ್ಮದ ಸೋಹೇಬ್  ತಂದೆ ಸುಲೇಮಾನ ಪಟೇಲ್ ವ: 17 ವರ್ಷ ಉ:ಬೇಕಾರ ಕೆಲಸ ಜಾತಿ ಮುಸ್ಲಿಂ ಸಾ: ಖುರೇಷಿ ಮಜೀದ ಹತ್ತಿರ ಖಾಜಾಕಾಲನಿ ಕಲಬುರಗಿ ಅಂತಾ ತಿಳಿಸಿದನು. ನಾನು ಅವನಿಗೆ ಬುಲೋರೋ ವಾಹನದಲ್ಲಿ ಎನಿದೆ ಅಂತಾ ವಿಚಾರಿಸಲೂ ಅವನು ಜಾನುವಾರುಗಳು ಇರುತ್ತವೆ ಅಂತಾ ತಿಳಿಸಿದನು. ನಂತರ ನಾನು ಅವನಿಗೆ ಜಾನುವಾರು ಖರೀದಿಸಿದ ದಾಖಲಾತಿ ಹಾಜರಪಡಿಸಲು ಕೇಳಿದಾಗ ನನ್ನ ಹತ್ತಿರ ಯಾವುದೇ ದಾಖಲಾತಿಗಳು ಇರುವುದಿಲ್ಲಾ ಅಂತಾ ತಿಳಿಸಿದನು. ನಂತರ ನಾನು ಬುಲೋರೋ ವಾಹನದ ಹಿಂಬದಿಯಲ್ಲಿ ಹೋಗಿ ನೋಡಲಾಗಿ ಫಳಿಗಳಿಂದ ಮುಚ್ಚಿದ್ದು ನೋಡಿ  ಹಿಂಬದಿಯ ಫಳಿಗಳನ್ನು ತೆಗೆಯಿಸಿ ನೋಡಲಾಗಿ ಅದರಲ್ಲಿ 10 ಜಾನುವಾರುಗಳನ್ನು ಒಂದರ ಮೇಲೆ ಒಂದು ಹಾಕಿ ಹಗ್ಗ ಸಹಾಯದಿಂದ ಕೈ ಕಾಲುಗಳು, ಮುಖ ಕಟ್ಟಿ ಅವುಗಳಿಗೆ ಪ್ರಾಣ ಹಿಂಸೆ ಮತ್ತು ಊಸಿರಾಟ ತೊಂದರೆಯಾಗುವಂತೆ ಕೂಡಿ ಹಾಕಿದ್ದು ಕಂಡು ಬಂತು.  ನಾನು ಸದರಿ ಜಾನುವಾರಗಳಿಗೆ ಕಟ್ಟಿದ ಹಗ್ಗಗಳನ್ನು ಬಿಚ್ಚಿಸಿ ಪಂಚರ ಸಮಕ್ಷಮದಲ್ಲಿ ಪರಿಶೀಲಿಸಿ ನೋಡಲಾಗಿ 1)ಒಂದು ಕಪ್ಪು ಬಣ್ಣದ ಹೋರಿ ಕರು ಅಂದಾಜ 1 ವರ್ಷ  ಅ:ಕಿ: 10,000/- ರೂ. 2)ಒಂದು ಕಂದು ಕಪ್ಪು ಮಿಶ್ರಿತ ಬಣ್ಣದ ಆಕಳು  ಅಂದಾಜ  ವ;8 ವರ್ಷ ಅ:ಕಿ: 30,000/-ರೂ. 3)ಒಂದು ಕಪ್ಪು ಬಿಳಿ ಬಣ್ಣದ ಹಂಡಾ ಬಂಡಾ  ಹೋರಿ ಕರು ಅಂದಾಜ ವ:2ರ್ಷ ಅ:ಕಿ: 11, 000/- ರೂ. 4)ಒಂದು ಬಿಳಿ ಬಣ್ಣದ ಆಕಳು  ಕರು ಅಂದಾಜ 1 1/2 ವರ್ಷ ಅ:ಕಿ: 5000/-ರೂ. 5)ಒಂದು ಕಪ್ಪು ಬಿಳಿ ಬಣ್ಣದ ಹಂಡಾ ಬಂಡಾ ಆಕಳು ಅಂದಾಜ 5 ವರ್ಷ ಅ:ಕಿ: 28,000/-ರೂ. 6)ಒಂದು ಕಪ್ಪು ಬಣ್ಣದ ಆಕಳು ಅಂದಾಜ 7 ವರ್ಷ ಅ:ಕಿ: 35,000/-ರೂ. 7) ಒಂದು ಎಮ್ಮೆ ಕರು ಅಂದಾಜ 15 ತಿಂಗಳು ಅ;ಕಿ: 5000/- ರೂ. 8)  ಒಂದು ಎಮ್ಮೆ ಕರು ಅಂದಾಜ 15 ತಿಂಗಳು ಅ;ಕಿ: 5000/- 9)ಒಂದು ಮಾಸ ಬಣ್ಣದ ಹೋರಿ ಅಂದಾಜ 2 ವರ್ಷ ಅ:ಕಿ: 10,000/-ರೂ. 10)ಒಂದು ಕೆಂಪು ಬಣ್ಣದ ಆಕಳು ಕರ ಅಂದಾಜ 2 ವರ್ಷ ಅ:ಕಿ: 10,000/- ರೂ. ಹೀಗೆ ಎಲ್ಲಾ ಜಾನುವಾರು  ಒಟ್ಟು ಅಂದಾಜ ಕಿಮ್ಮತ್ತ  1,49,000/-ರೂ. ಆಗುತ್ತಿದ್ದನ್ನು ಮತ್ತು ಕೃತ್ಯಕ್ಕೆ ಉಪಯೋಗಿಸಿದ ಬುಲೋರೋ ಪಿಕ್ಕಪ್ಪ ಎಫಬಿ ಕೆಎ 32 ಸಿ 7124 ಅ:ಕಿ: 2,00,000/-ರೂ. ನೇದ್ದವುಗಳನ್ನು ನಾನು ಕೇಸಿನ ಪುರಾವೆಗೋಸ್ಕರ ವಶಕ್ಕೆ ತೆಗೆದುಕೊಂಡು ಮತ್ತು ಬುಲೋರೋ ವಾಹನಕ್ಕೆ ಪಂಚರು ಸಹಿಸಿದ ಚೀಟಿ ಅಂಟಿಸಿ ನನ್ನ  ವಶಕ್ಕೆ ತೆಗೆದುಕೊಂಡು ಜಪ್ತ ಪಡಿಸಿಕೊಂಡೆನು. ನಂತರ ಜಪ್ತಿ ಪಡಿಸಿಕೊಂಡ ಈ ಮೇಲಿನ ಎಲ್ಲಾ ಜಾನುವಾರುಗಳ ಲಾಲನೆ ಪೋಷಣೆ ಮತ್ತು ಸುರಕ್ಷತೆ ಕುರಿತು ನಂದಿ ಗೋಶಾಲೆ ಕಳುಹಿಸಿಕೊಡಲಾಯಿತು.  ನಂತರ  ನಾನು ಸಿಕ್ಕಿ ಬಿದ್ದ ಮಹ್ಮದ ಸೋಹೇಬ್ ಇತನಿಗೆ ಓಡಿ ಹೋದ ಚಾಲಕನ ಹೆಸರು ವಿಳಾಸ ಮತ್ತು ಬುಲೋರೋ ವಾಹನ ಮಾಲೀಕನ ಹೆಸರು ವಿಳಾಸ ವಿಚಾರಿಸಲೂ ಮಹ್ಮದ ಸೋಹೇಬ್ ಇತನು ಬುಲೋರೋ  ಚಾಲಕನ ಹೆಸರು ವಸೀಮ ಸಾ: ಖಾಜಾ ಕಾಲನಿ ಕಲಬುರಗಿ ಅಂತಾ ತಿಳಿಸಿದನು. ಸದರಿ ಬುಲೋರೋ ವಾಹನ ಮಾಲೀಕನ ಹೆಸರು ಸೈಯ್ಯದ ಸಲೀಮ ಅಂತಾ ಇರುತ್ತಾನೆ ಎಂದು ತಿಳಿಸಿದನು. ನಂತರ ನಾನು ಮಹ್ಮದ ಸೋಹೇಬ ಇತನಿಗೆ ಜಾನುವಾರುಗಳು ಖರೀದಿಸಿದ ಮಾಲೀಕನ ಹೆಸರು ವಿಳಾಸ ಮಹ್ಮದ ಸೋಹೇಬ್ ಇತನು ತನಗೆ ಅವನ ಹೆಸರು ವಿಳಾಸ ಗೊತ್ತಿರುವುದಿಲ್ಲಾ. ಚಾಲಕ ವಸೀಮ ಮತ್ತು ವಾಹನ ಸೈಯ್ಯದ ಸಲೀಮ ಇವರಿಗೆ ಕೇಳಿದರೆ ಗೊತ್ತಾಗುತ್ತದೆ ಎಂದು ತಿಳಿಸಿದನು. ನಂತರ ನಾನು  ಮಹ್ಮದ ಸೋಹೇಬ್ ಎಲ್ಲಾ ಜಾನುವಾರುಗಳು ಎಲ್ಲಿಂದ ಖರೀದಿ ಮಾಡಿಕೊಂಡು ಬಂದಿರುವಿರಿ ಅಂತಾ ವಿಚಾರಿಸಿದಾಗ ಇಂದು ಮಾಹಾಗಾಂವ ದನದ ಬಜಾರದಲ್ಲಿ ಖರೀದಿ ಮಾಡಿಕೊಂಡು ಅವುಗಳನ್ನು ಹತ್ಯೆ ಮಾಡಿ ಮೌಂಸ ಮಾರಾಟ ಮಾಡುವ ಸಲುವಾಗಿ ತಂದಿರುವುದಾಗಿ ತಿಳಿಸಿದೆನು. ಸದರ 1)ಮಹ್ಮದ ಸೋಹೇಬ್ ತಂದೆ  ಸುಲೇಮಾನ ಪಟೇಲ್ ಸಾ:ಖುರೇಷಿ ಮಜೀದ ಹತ್ತಿರ ಖಾಜಾ ಕಾಲನಿ ಕಲಬುರಗಿ ಮತ್ತು ವಾಹನ ಚಾಲಕ 2)ವಸೀಮ ಸಾ:ಖಾಜಾ ಕಾಲನಿ ಕಲಬುರಗಿ  3)ಬುಲೋರೋ ವಾಹನ ಮಾಲೀಕ ಸೈಯ್ಯದ ಸಲೀಮ  ಮತ್ತು 4)ಜಾನುವಾರುಗಳ ಖರೀದಿಸಿದ ಮಾಲೀಕ ಹೆಸರು ವಿಳಾಸ ಗೊತ್ತಿಲ್ಲಾ ಇವರುಗಳು ಅಕ್ರಮವಾಗಿ ಮಾಹಾಗಾಂವ ದನದ ಬಜಾರದಲ್ಲಿ ಈ ಮೇಲಿನ ಜಾನುವಾರುಗಳು ಖರೀದಿ ಮಾಡಿಕೊಂಡು ಬುಲೋರೋ ವಾಹನದಲ್ಲಿ ಒಂದರ ಮೇಲೆ ಒಂದು ಹಾಕಿ ಹಗ್ಗ ಸಹಾಯದಿಂದ ಕೈ ಕಾಲುಗಳು, ಮುಖ ಕಟ್ಟಿ ಅವುಗಳಿಗೆ ಪ್ರಾಣ ಹಿಂಸೆ ಮತ್ತು ಊಸಿರಾಟ ತೊಂದರೆಯಾಗುವಂತೆ ಹಾಕಿಕೊಂಡು, ಅವುಗಳನ್ನು ಹತ್ಯೆ ಮಾಡಿ ಮೌಂಸ ಮಾರಾಟ ಮಾಡುವ ಸಲುವಾಗಿ ತಂದಿರುವ ಬಗ್ಗೆ ಖಚಿತಪಟ್ಟಿದ್ದರಿಂದ ನಾನು  ಮತ್ತು ಅವರ ಸಿಬ್ಬಂದಿಯವರು ಮಹ್ಮದ ಸೋಹೇಬ್ ಇತನಿಗೆ ಸ್ಥಳದಲ್ಲಿ ವಶಕ್ಕೆ ತೆಗೆದುಕೊಂಡೇವು. ಸದರ ಜಪ್ತಿ ಪಂಚನಾಮೆ ಇಂದು ದಿನಾಂಕ 02/12/2022 ರಂದು ಮಧ್ಯಾಹ್ನ 3-30 ಗಂಟೆಯಿಂದ ಮಧ್ಯಾಹ್ನ 4-30 ಗಂಟೆಯವರೆಗೆ ಸದರ ಸ್ಥಳದಲ್ಲಿ ಕುಳಿತು ಪಂಚರ ಸಮಕ್ಷಮಲ್ಲಿ ಲ್ಯಾಪಟ್ಯಾಪನಲ್ಲಿ ಸಿಪಿಸಿ 08 ಅಶೋಕ ಇವರ ಕಡೆಯಿಂದ ಗಣಕೀಕೃತ ಮಾಡಿ ಮುಗಿಸಲಾಯಿತು. 1)ಮಹ್ಮದ ಸೋಹೇಬ್  ತಂದೆ  ಸುಲೇಮಾನ ಪಟೇಲ್ ಸಾ:ಖುರೇಷಿ ಮಜೀದ ಹತ್ತಿರ ಖಾಜಾ ಕಾಲನಿ ಕಲಬುರಗಿ ಮತ್ತು ವಾಹನ ಚಾಲಕ 2)ವಸೀಮ ಸಾ:ಖಾಜಾ ಕಾಲನಿ ಕಲಬುರಗಿ 3)ಬುಲೋರೋ ವಾಹನ ಮಾಲೀಕ ಸೈಯ್ಯದ ಸಲೀಮ  ಮತ್ತು 4)ಜಾನುವಾರುಗಳ ಖರೀದಿಸಿದ ಮಾಲೀಕ ಹೆಸರು ವಿಳಾಸ ಗೊತ್ತಿಲ್ಲಾ ಇವರುಗಳು ಅಕ್ರಮವಾಗಿ ಮಾಹಾಗಾಂವ ದನದ ಬಜಾರದಲ್ಲಿ ಈ ಮೇಲಿನ ಜಾನುವಾರುಗಳು ಖರೀದಿ ಮಾಡಿಕೊಂಡು ಬುಲೋರೋ ವಾಹನದಲ್ಲಿ ಒಂದರ ಮೇಲೆ ಒಂದು ಹಾಕಿ ಹಗ್ಗ ಸಹಾಯದಿಂದ ಕೈ ಕಾಲುಗಳು, ಮುಖ ಕಟ್ಟಿ ಅವುಗಳಿಗೆ ಪ್ರಾಣ ಹಿಂಸೆ ಮತ್ತು ಊಸಿರಾಟ ತೊಂದರೆಯಾಗುವಂತೆ ಹಾಕಿಕೊಂಡು, ಅವುಗಳನ್ನು ಹತ್ಯೆ ಮಾಡಿ ಮೌಂಸ ಮಾರಾಟ ಮಾಡುವ ಸಲುವಾಗಿ ತಂದಿರುವುದರಿಂದ ಇವರುಗಳು ಮೇಲೆ ಕಾನೂನು ಕ್ರಮ ಜರೂಗಿಸಬೇಕೆಂದು ಸಿಕ್ಕಿ ಬಿದ್ದ ಆರೋಪಿ ಮಹ್ಮದ ಸೋಹೇಬ್ ಇತನಿಗೆ ಹಾಜರಪಡಿಸಿ,  ಜಪ್ತಿ ಪಂಚನಾಮೆಯೊಂದಿಗೆ ಸರಕಾರ ತರ್ಫೇ ದೂರು ಕೊಟ್ಟಿರುತ್ತೇನೆ.ಎಂದು ಕೊಟ್ಟ ಸರ್ಕಾರಿ ತರ್ಫೇ ದೂರು ಮತ್ತು ಜಪ್ತಿ ಪಂಚನಾಮೆ ಆಧಾರದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಚೌಕ ಪೊಲೀಸ ಠಾಣೆ :-  ದಿನಾಂಕ 02/12/2022 ರಂದು ಮಧ್ಯಾಹ್ನ 3-30 ಗಂಟೆಗೆ ಪೊಲೀಸ ಠಾಣೆಯಲ್ಲಿದ್ದಾಗ , ನಮ್ಮ ಚೌಕ ಪೊಲೀಸ ಠಾಣೆ ವ್ಯಾಪ್ತಿಯಲ್ಲಿ ಬರುವ ಕಲಬುರಗಿ ನಗರದ ಸದರ ಮೊಹಲ್ಲಾ ಓಲ್ಡ್ ಗಡಂಗ ಜಿಲಾನಿ ಹೋಟಲ ಎದುರುಗಡೆ ಮೋಮಿನಪೂರ ಕಲಬುರಗಿಯಲ್ಲಿ ಒಂದು ಐಚೆರ ವಾಹನದಲ್ಲಿ ಅಕ್ರಮವಾಗಿ ಜಾನುವಾರುಗಳು ಎಲ್ಲಿಂದಲೋ ಖರೀದಿ ಮಾಡಿಕೊಂಡು ಅವುಗಳ ಹತ್ಯೆ ಮಾಡಿ ಮೌಂಸ ಮಾರಾಟ ಮಾಡುವಗೋಸ್ಕರ ತಂದು ಇಳಿಸುತ್ತಿದ್ದಾರೆ ಎಂದು ಖಚಿತವಾದ ಬಾತ್ಮಿ ಬಂದ ಮೇರೆಗೆ ಇಬ್ಬರು ಪಂಚರಾದ 1) ಶ್ರೀ ಚಂದ್ರಶೇಖರ ತಂದೆ ಶ್ರೀಪತಿ ಕ್ಷತ್ರಿಯ ವ:31 ವರ್ಷ ಉ:ಅಡುಗೆ ಕೆಲಸ ಜಾತಿ ಮರಾಠಾ ಸಾ: ಶಿವಶಕ್ತಿ ನಗರ ಕಲಬುರಗಿ 2) ಶ್ರೀ ರಾಜು ತಂದೆ ರೇವಣಸಿದ್ಧಪ್ಪ ಪೂಜಾರಿ ವ:32 ವರ್ಷ ಉ:ಕಾರ ಚಾಲಕ ಜಾತಿ ಹಿಂದು ಕುರುಬ ಸಾ: ಶೇಖ ರೋಜಾ ಆಶ್ರಯ ಕಾಲನಿ ಕಲಬುರಗಿ ಮತ್ತು ನಮ್ಮ ಠಾಣೆ ಸಿಬ್ಬಂದಿಯವರಾದ  ಸಿಪಿಸಿ 328 ಫಿರೋಜ, ಸಿಪಿಸಿ 299 ಮೋಸಿನ, ಸಿಪಿಸಿ 318 ಶಿವಪ್ಪ ಇವರುಗಳನ್ನು ಬರಮಾಡಿಕೊಂಡು, ಅವರಲ್ಲರಿಗೆ ಬಾತ್ಮಿ ವಿಷಯ ತಿಳಿಸಿ, ಪಂಚರಿಗೆ  ನಾವು ಮಾಡುವ ದಾಳಿ ಜಪ್ತಿ ಪಂಚನಾಮೆಯ ಪಂಚರಾಗಿ, ಪಂಚನಾಮೆ ಬರೆಯಿಸಿ ಕೊಡಲು ಕೇಳಿಕೊಂಡಾಗ ಅದಕ್ಕೆ ನಾವು ಪಂಚರು ಒಪ್ಪಿಕೊಂಡರು. ಮತ್ತು ಸಿಬ್ಬಂದಿಯವರಿಗೆ ನನ್ನ ಜೊತೆಯಲ್ಲಿ ದಾಳಿಗೆ ಬರಲು ಸೂಚಿಸಿದಾಗ ಅವರು ಕೂಡಾ ಒಪ್ಪಿಕೊಂಡರು. ತದನಂತರ ನಾನು  ಒಂದು ಖಾಸಗಿ ವಾಹನದಲ್ಲಿ ನಾನು ಮತ್ತು  ಪಂಚರು ಹಾಗೂ ಈ ಮೇಲಿನ ಸಿಬ್ಬಂದಿಯವರು ಕುಳಿತುಕೊಂಡೇವು. ಶ್ರೀ ಫಿರೋಜ ಸಿಪಿಸಿ 328 ಇವರು ಖಾಸಗಿ ಜೀಪು ಚಾಲನೆ ಮಾಡುತ್ತಿದ್ದು, ಆಗ ನಾನು ನಮ್ಮ ಮೇಲಾಧಿಕಾರಿಯವರಿಗೆ ಮಾಹಿತಿ ತಿಳಿಸಿ ಅವರ ಮಾರ್ಗದರ್ಶನದಲ್ಲಿ ದಾಳಿ ಕುರಿತು ಠಾಣೆಯಿಂದ ಮಧ್ಯಾಹ್ನ 04-00 ಗಂಟೆಗೆ ಹೊರಟು, ಬಾತ್ಮಿ ಸ್ಥಳವಾದ ಕಲಬುರಗಿ ನಗರದ  ಸದರ ಮೊಹಲ್ಲಾ ಓಲ್ಡ್ ಗಡಂಗ ಜಿಲಾನಿ ಹೋಟಲ ಎದುರುಗಡೆ ಮೋಮಿನಪೂರ ಕಲಬುರಗಿ ಹತ್ತಿರ ಹೋದಾಗ ಮಧ್ಯಾಹ್ನ 4-15 ಗಂಟೆಗೆ ಒಂದು ಐಚೆರ ವಾಹನ ಸಂಖ್ಯೆ ಕೆಎ 32 ಸಿ 5017 ನಿಂತಿದಿದ್ದನ್ನು ನೋಡಿ ಐಚೆರ ವಾಹನ ಹತ್ತಿರ ಹೋಗಿ ಹೋದಾಗ ವಾಹನದಲ್ಲಿ ಕುಳಿತ  ಚಾಲಕ ಮತ್ತು ಇತರರು ನಮ್ಮ ಪೊಲೀಸ ಸಮವಸ್ತ್ರ ನೋಡಿ ಐಚೆರ ವಾಹನದಿಂದ ಇಳಿದು ಅಲ್ಲಿಂದ ಓಡಿ ಹೋದರು. ನಂತರ ನಾನು ಐಚೆರ ವಾಹನದ ಹಿಂಬದಿಯಲ್ಲಿ ಹೋಗಿ ನೋಡಲಾಗಿ ವಾಹನದಿಂದ ಮುಚ್ಚಲ್ಪಟ್ಟ ತಾಡಪ್ರತಿಯನ್ನು ತೆಗೆಯಿಸಿ ನೋಡಲಾಗಿ ಅದರಲ್ಲಿ 05 (ಐದು) ಜಾನುವಾರುಗಳನ್ನು ಒಂದರ ಮೇಲೆ ಒಂದು ಹಾಕಿ ಹಗ್ಗ ಸಹಾಯದಿಂದ ಕೈ ಕಾಲುಗಳು, ಮುಖ ಕಟ್ಟಿ ಅವುಗಳಿಗೆ ಪ್ರಾಣ ಹಿಂಸೆ ಮತ್ತು ಊಸಿರಾಟ ತೊಂದರೆಯಾಗುವಂತೆ ಕೂಡಿ ಹಾಕಿದ್ದು ಕಂಡು ಬಂತು. ನಾನು ಸದರಿ ಜಾನುವಾರಗಳಿಗೆ  ಕಟ್ಟಿದ ಹಗ್ಗಗಳನ್ನು ಬಿಚ್ಚಿಸಿ ಪಂಚರ ಸಮಕ್ಷಮದಲ್ಲಿ ಪರಿಶೀಲಿಸಿ ನೋಡಲಾಗಿ 1)ಒಂದು ಬಿಳಿ ಕಪ್ಪು ಬಣ್ಣದ ಆಕಳು ಕರು ಅಂದಾಜ 1 ವರ್ಷ ಅ:ಕಿ:5000/- ರೂ. 2)ಒಂದು ಬಿಳಿ ಬಣ್ಣದ ಆಕಳು ಕರು ಅಂದಾಜ 1 ವರೆ ವರ್ಷ ಅ:ಕಿ: 5000/-ರೂ. 3) ಒಂದು ಕೋಣ ಅಂದಾಜ 2 ವರ್ಷ ಅ:ಕಿ:5000/-ರೂ. 4) ಒಂದು ಕೋಣ ಅಂದಾಜ 2 ವರ್ಷ ಅ:ಕಿ:5000/-ರೂ 5) ಒಂದು ಕೋಣ ಅಂದಾಜ 2 ವರ್ಷ ಅ:ಕಿ:5000/-ರೂ ಹೀಗೆ ಎಲ್ಲಾ ಜಾನುವಾರು  ಒಟ್ಟು ಅಂದಾಜ ಕಿಮ್ಮತ್ತ  25,000/-ರೂ. ಆಗುತ್ತಿದ್ದನ್ನು ಮತ್ತು ಕೃತ್ಯಕ್ಕೆ ಉಪಯೋಗಿಸಿದ ಐಚೆರ ಕೆಎ 32 ಸಿ 5017 ಪ್ರೋ 1100 ಎಕ್ಸಪಿ ಅ:ಕಿ: 4,00,000/-ರೂ. ನೇದ್ದವುಗಳನ್ನು ನಾನು  ಕೇಸಿನ ಪುರಾವೆಗೋಸ್ಕರ ತಮ್ಮ ವಶಕ್ಕೆ ತೆಗೆದುಕೊಂಡು ಮತ್ತು ಐಚೆರ ವಾಹನಕ್ಕೆ ಪಂಚರು ಸಹಿಸಿದ ಚೀಟಿ ಅಂಟಿಸಿ ನನ್ನ  ವಶಕ್ಕೆ ತೆಗೆದುಕೊಂಡು ಜಪ್ತ ಪಡಿಸಿಕೊಂಡೆನು.  ನಂತರ ನಾನು  ಜಪ್ತಿ ಪಡಿಸಿಕೊಂಡ ಈ ಮೇಲಿನ ಎಲ್ಲಾ ಜಾನುವಾರುಗಳ ಲಾಲನೆ ಪೋಷಣೆ ಮತ್ತು ಸುರಕ್ಷತೆ ಕುರಿತು ನಂದಿ ಗೋಶಾಲೆ ಕಳುಹಿಸಿಕೊಟ್ಟೆನು. ತದನಂತರ ನಾನು ಈ ಮೇಲಿನ ಜಾನುವಾರುಗಳನ್ನು ಐಚೆರ ವಾಹನ ಚಾಲಕ, ಐಚೆರ ವಾಹನ ಮಾಲೀಕ, ಜಾನುವಾರು ಖರೀದಿ ಮಾಲೀಕರು ಕೂಡಿಕೊಂಡು ಸದರಿ ಜಾನುವಾರುಗಳನ್ನು ಎಲ್ಲಿಯೋ ಖರೀದಿ ಮಾಡಿಕೊಂಡು ಅವುಗಳನ್ನು ಹತ್ಯೆ ಮಾಡಿ ಮೌಂಸ ಮಾರಾಟ ಮಾಡುವ ಸಲುವಾಗಿ ತಂದಿರುವುದಾಗಿ ಸ್ಥಳೀಯವಾಗಿ ವಿಚಾರಣೆಯಿಂದ ತಿಳಿದು ಬಂದಿರುತ್ತದೆ ಎಂದು ಪಂಚರಿಗೆ  ಮತ್ತು ದಾಳಿಗೆ ನಮ್ಮ ಸಿಬ್ಬಂದಿಯವರಿಗೆ ತಿಳಿಸಿದೆನು. ಸದರಿ ಐಚೆರ ವಾಹನ ಕೆಎ 32 ಸಿ 5017 ಮಾಲೀಕ ಹೆಸರು ಕೇಳಿ ಗೊತ್ತಾದ ಮಹ್ಮದ ಖಾಸೀಂ ತಂದೆ ಮಹ್ಮದ ಮಾಜೀದ ಸಾ: ನೂರಾನಿ ಮೊಹಲ್ಲಾ ಕಲಬುರಗಿ ಇತನು ಮತ್ತು ಐಚೆರ ವಾಹನ ಚಾಲಕ ಜಾನುವಾರು ಖರೀದಿ ಮಾಲೀಕರು ಇತರರು ಕೂಡಿಕೊಂಡು ಈ ಮೇಲಿನ ಜಾನುವಾರು ಎಲ್ಲಿಯೋ ಖರೀದಿ ಮಾಡಿಕೊಂಡು ಐಚೆರ ವಾಹನದಲ್ಲಿ ಒಂದರ ಮೇಲೆ ಒಂದು ಹಾಕಿ ಹಗ್ಗ ಸಹಾಯದಿಂದ ನಾಲ್ಕು ಕಾಲುಗಳು, ಮುಖ ಕಟ್ಟಿ ಅವುಗಳಿಗೆ ಪ್ರಾಣ ಹಿಂಸೆ ಮತ್ತು ಊಸಿರಾಟ ತೊಂದರೆಯಾಗುವಂತೆ ಹಾಕಿಕೊಂಡು, ಅವುಗಳನ್ನು ಹತ್ಯೆ ಮಾಡಿ ಮೌಂಸ ಮಾರಾಟ ಮಾಡುವ ಸಲುವಾಗಿ ತಂದಿರುವ ಬಗ್ಗೆ ಖಚಿತಪಟ್ಟಿದ್ದು ಇರುತ್ತದೆ. ಈ ಬಗ್ಗೆ ಸದರ ಜಪ್ತಿ ಪಂಚನಾಮೆ ಇಂದು ದಿನಾಂಕ 02/12/2022 ರಂದು ಮಧ್ಯಾಹ್ನ 4-15 ಗಂಟೆಯಿಂದ ಸಂಜೆ 5-15 ಗಂಟೆಯವರೆಗೆ ಸದರ ಸ್ಥಳದಲ್ಲಿ ಕುಳಿತು ಪಂಚರ ಸಮಕ್ಷಮಲ್ಲಿ ಲ್ಯಾಪಟ್ಯಾಪನಲ್ಲಿ ಸಿಪಿಸಿ 318 ಶಿವಪ್ಪ  ಇವರ ಕಡೆಯಿಂದ ಗಣಕೀಕೃತ ಮಾಡಿ ಮುಗಿಸಲಾಯಿತು. ಸದರಿ ಐಚೆರ ವಾಹನ ಕೆಎ 32 ಸಿ 5017 ಮಾಲೀಕ ಹೆಸರು ಕೇಳಿ ಗೊತ್ತಾದ ಮಹ್ಮದ ಖಾಸೀಂ ತಂದೆ ಮಹ್ಮದ ಮಾಜೀದ ಸಾ: ನೂರಾನಿ ಮೊಹಲ್ಲಾ ಕಲಬುರಗಿ ಇತನು ಮತ್ತು ಐಚೆರ ವಾಹನ ಚಾಲಕ ಜಾನುವಾರು ಖರೀದಿ ಮಾಲೀಕರು ಇತರರು ಕೂಡಿಕೊಂಡು ಈ ಮೇಲಿನ ಜಾನುವಾರು ಎಲ್ಲಿಯೋ ಖರೀದಿ ಮಾಡಿಕೊಂಡು ಐಚೆರ ವಾಹನದಲ್ಲಿ ಒಂದರ ಮೇಲೆ ಒಂದು ಹಾಕಿ ಹಗ್ಗ ಸಹಾಯದಿಂದ ನಾಲ್ಕು ಕಾಲುಗಳು, ಮುಖ ಕಟ್ಟಿ ಅವುಗಳಿಗೆ ಪ್ರಾಣ ಹಿಂಸೆ ಮತ್ತು ಊಸಿರಾಟ ತೊಂದರೆಯಾಗುವಂತೆ ಹಾಕಿಕೊಂಡು, ಅವುಗಳನ್ನು ಹತ್ಯೆ ಮಾಡಿ ಮೌಂಸ ಮಾರಾಟ ಮಾಡುವ ಸಲುವಾಗಿ ತಂದಿರುವುದರಿಂದ ಈ ಮೇಲಿನವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಜಪ್ತಿ ಪಂಚನಾಮೆಯೊಂದಿಗೆ ಸರಕಾರಿ ತಫರ್ೇ ದೂರು ಕೊಟ್ಟಿರುತ್ತೇನೆ. ಎಂದು ಕೊಟ್ಟ ಸರ್ಕಾರಿ ತರ್ಫೇ ದೂರು ಮತ್ತು ಜಪ್ತಿ ಪಂಚನಾಮೆ ಆಧಾರದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಸ್ಟೇಷನ್‌ ಬಜಾರ ಪೊಲೀಸ್‌ ಠಾಣೆ :- ದಿನಾಂಕ:25/11/2022 ರಂದು ಬೆಳಿಗ್ಗೆ 11:30 ರಿಂದ 12:30 ರ ಆಸು ಪಾಸಿನಲ್ಲಿ ಎರಡನೇ ಸೇಷನ್ಸ ನ್ಯಾಯಲಕ್ಕೆ ಹಾಜರಾತಿಯನ್ನು ಮುಗಿಸಿಕೊಂಡು ಬರುವಾಗ ಕೋರ್ಟ ಆವರಣದಲ್ಲಿ ನಾನು ಅಂದರೆ ಸಿದ್ದಯ್ಯ ತಂದೆ ಶೇದಖಯ್ಯ ಮತ್ತು ಸಂಗಯ್ಯ ತಂದೆ ತಾಜಯ್ಯ ಇಬ್ಬರೇ ಇರುವಾಗ ನಮ್ಮ ಜೊತೆಗೆ ಕೋರ್ಟಗೆ ಬಂದಿದ್ದ ನಾಗಲಿಂಗಯ್ಯ, ಪ್ರಭುಲಿಂಗಯ್ಯ ತಿಪ್ಪಯ್ಯ ಇವರು ಕೋರ್ಟ ಮುಗಿಸಿಕೊಂಡು ಹೋದ ಸಮಯ ನೋಡಿ ಮೈಲಾರಿ ತಂದೆ ಹಣಮಂತು ಹಾಗೂ ಲಕ್ಷ್ಮಾರೆಡ್ಡಿ ತಂದೆ ಭೀಮರೆಡ್ಡಿ ಹಾಗೂ ಸರಸ್ವತಿ ಗಂಡ ಮೈಲಾರಿ ಇವರು ಹೊರಗಿನಿಂದ 3-4 ಜನ ರೌಡಿಗಳನ್ನು ಕರೆಯಿಸಿ ನಮಗೆ ಸುಖ ಸುಮ್ಮನೆ ತಡೆದು ನಿಲ್ಲಿಸಿ ಜಗಳಕ್ಕೆ ಪ್ರಚೋದಿಸಿ, ಏ ಬೊಸುಡಿ ಸೂಳೆಮಕ್ಕಳೇ ಬೇಡಜಂಗಮ ರಂಡಿ ಮಕ್ಕಳೆ ನಿಮಗೆ ಸೊಕ್ಕು ಜಾಸ್ತಿ ಆಗ್ಯಾದ ನಿಮಗ ಯಾರಿಗೂ ಬಿಡಲ್ಲ ನಾವು ಕಾಕುವಿನಿಂದ ತಿವಿದು ಸಾಯಿಸುತ್ತೇವೆ ಮುಂದಿನ ದಿನಾಂಕದಂದು ಕೋರ್ಟ ಹೇರಿಂಗ್ ಗೆ (ಕೋರ್ಟ ಹಾಜರಾತಿಗೆ) ಬರದ ಹಾಗೇ ನಿಮ್ಮ ಮೇಲೆ ಇನ್ನೊಂದು ಸುಳ್ಳು ಕೇಸು ಹಾಕುತ್ತೇವೆ. ಇದಕ್ಕು ಮೊದಲು ಸೇಡಂನಲ್ಲಿ 2-3 ಸಲ ಸುಳ್ಳು ಕೇಸು ಮಾಡಿದರು ಸಹ ನಮ್ಮನ್ನು ಕಂಡರೆ ನಿಮಗೆ ಭಯ ಇಲ್ಲ, ನಾವು ದಲಿತರು ಜಾತಿ ಹಿಡಿದು ಬೈದಿರುತ್ತಿರಿ ಎಂದು ಮತ್ತೊಂದು ಸುಳ್ಳು ಕೇಸು ಹಾಕಿಸುತ್ತೆವೆ, ನಿಮಗೆ ಮುಂದಿನ ಕೊರ್ಟ ದಿನಾಂಕದಂದು ಹಾಜರಾಗದ ಹಾಗೇ ಮಾಡುತ್ತೇವೆ ಗುಲಬರ್ಗಾದಲ್ಲಿ ತಿರುಗಾಡದ ಹಾಗೆ ಮಾಡುತ್ತೇವೆ ಎಂದು ಬೆದರಿಸಿದ್ದು ನಿವೇನಾದರೂ ಪೊಲೀಸ್ ಸ್ಟೇಷನ್ ಗೆ ಹೋಗಿ ನಮ್ಮ ಮೇಲೆ ಫೀಯರ್ಾದು ಕೊಟ್ಟರೆ ನಾವು ನಿಮ್ಮ ಕುಟುಂಬದ ಯಾರನ್ನು ಬಿಡುವುದಿಲ್ಲ ಎಲ್ಲರನ್ನು ಕೊಂದು ಹಾಕುತ್ತೇವೆ. ಪೊಲೀಸ್ ಸ್ಟೇಷನ್ಗೆ ಹೋಗಿದ್ದು ಗೊತ್ತಾದರೆ ನಿಮ್ಮ ಕಥಿ ಮುಗಿಸುತ್ತೇವೆ ಎಂದು ಬೆದರಿಕೆ ಹಾಕಿದರು ನಾವು ಅಲ್ಲಿ ನೆರೆದಿಂದ ಜನರನ್ನು ವಿಚಾರಿಸಿದಾಗ ಅಲ್ಲಿ ಇದ್ದ 3-4 ಜನ ರೌಡಿಗಳ ಪೈಕಿ ಇಬ್ಬರ ಹೆಸರು ಗುರುರಾಜ ಮತ್ತು ಮಂಜುನಾಥ ಎಂದು ತಿಳಿದುಬಂದಿದ್ದು ಅವರ ಹೆಸರನ್ನು ಪ್ರಥಮ ವರ್ತಮಾನ ವರದಿಯಲ್ಲಿ ಸೇರಿಸಬೇಕು ಮತ್ತು ಉಳಿದವರನ್ನು ಸಿ ಸಿ ಕ್ಯಾಮಾರದಲ್ಲಿ ಚೆಕ್ ಮಾಡಿ ಸೇರಿಸಬೇಕು ನಮಗೆ ಆ ರೌಡಿಗಳು ಹಾಕಿದ ಬೆದರಿಕೆಯಿಂದ ಏನುಮಾಡಬೇಕು ಎಂದು ತೋಚದೆ ಭಯ ಪಟ್ಟು ಊರಿಗೆ ಬಂದೆವು. ಮನೆಯಲ್ಲಿ ತಿಳಿಸಿದಾಗ ನನ್ನ ಅಮ್ಮ ಅವರು ರೌಡಿಗಳು ಏನಾದರು ಮಾಡಬಹುದು ನಮ್ಮನ್ನು ಕೊಂದರು ಕೊಲ್ಲಬಹುದು ಊರು ಜನರಿಗೆ ತಿಳಿಸಿದ ಮೇಲೆ ಮುಂದಿನದರ ಬಗ್ಗೆ ಯೋಚಿಸೋಣ ಎಂದರು ಊರ ಜನರಿಗೆ ಈ ಘಟನೆ ಬಗ್ಗೆ ತಿಳಿಸಿದಾಗ ಅವರು ನೀವೇನು ಭಯಪಡಬೇಡಿ ಕಾನೂನು ರೀತಿಯಿಂದ ನೀವು ಸ್ಟೇಷನಗೆ ಹೋಗಿ ಕಂಪ್ಲೇಂಟ್ ಕೊಡಿ ಕಾನೂನು ಕ್ರಮ ಕೈಗೊಳ್ಳುತ್ತದೆ ಎಂದು ಧೈರ್ಯ ಹೇಳಿದರು ಆದರು ಆ ರೌಡಿಗಳ ಭಯದಿಂದ ಏನು ಮಾಡಬೇಕೆಂದು ತೋಚಲಿಲ್ಲ ಆದರೂ ಧೈರ್ಯಮಾಡಿ ಘಟನೆ ನಡೆದ ಸ್ಥಳದ ಸಮೀಪವಿರುವ ಸ್ಟೇಷನ್ ಬಜಾರ ಪೊಲೀಸ್ ಠಾಣೆಯಲ್ಲಿ ಇಂದು ಅರ್ಜಿಯನ್ನು ನೀಡುತ್ತಿದ್ದೇವೆ, ಅವರು ನಮಗೆ ಏನು ಬೇಕಾದರು ಮಾಡಬಹುದು ಆದ್ದರಿಂದ ಮೈಲಾರಿ ತಂದೆ ಹಣಮಂತ ಲಕ್ಷ್ಮರೆಡ್ಡಿ ತಂದೆ ಭೀಮರೆಡ್ಡಿ ಹಾಗೂ ಸರಸ್ವತಿ ಗಂಡ ಮೈಲಾರಿ ಮತ್ತು ರೌಡಿಗಳಾದ ಮಂಜುನಾಥ ಹಾಗೂ ಗುರುರಾಜ ಇತರ ರೌಡಿಗಳನ್ನು ಸಿಸಿ ಕ್ಯಾಮರಾಗಳಲ್ಲಿ ಚೆಕ್ ಮಾಡಿ ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಂಡು ನಮ್ಮನ್ನು ಜೀವ ಅಪಾಯದಿಂದ ಪಾರು ಮಾಡಬೇಕು ಮತ್ತು ಮುಂದಿನ ಕೋರ್ಟ ದಿನಾಂಕದಂದು ನಮಗೆ ಕೋರ್ಟ ಹೇರಿಂಗ್ ಗೆ ಹಾಜರಾಗುವಾಗ ಆ ರೌಡಿಗಳು ಬಂದು ಏನಾದರು ಮಾಡಬಹುದು ಆದ್ದರಿಂದ ನಮಗೆ ಅವರಿಂದ ನಮಗೆ ಏನು ಆಗದಂತೆ ರಕ್ಷಣೆ ನೀಡಬೇಕಾಗಿ ಮಾನ್ಯರಲ್ಲಿ ವಿನಂತಿಸಿಕೋಳ್ಳುತ್ತೇನೆ ಅಂತ ನೀಡಿದ ದೂರಿನ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ರೋಜಾ ಪೊಲೀಸ್‌ ಠಾಣೆ :- ದಿನಾಂಕ: 02-12-2022 ರಂದು ಮದ್ಯಾಹ್ನ 16:30 ಗಂಟೆಗೆ ಪಿ ಐ ರೋಜಾ ರವರು  ಠಾಣೆಯಲ್ಲಿದ್ದಾಗನ ಯಾದುಲ್ಲಾ ಕಾಲೋನಿ ನೀರಿನ ಟಾಕಿ ಹತ್ತಿರ ಸಾರ್ವಜನಿಕರಿಂದ ಹಣ ಪಡೆದು 01 ರೂಪಾಯಿಗೆ 80 ರೂಪಾಯಿ ಕೊಡುವುದಾಗಿ ಹೇಳಿ ಕಲ್ಯಾಣ ಡೇ ಮತ್ತು ಕಲ್ಯಾಣ ನೈಟ ಮಟಕಾ ಅಂಕಿ ಸಂಖ್ಯೆಗಳ ಚೀಟಿಯನ್ನು ಬರೆದು ಕೊಳ್ಳುತ್ತಿದ್ದಾನೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ  ದಾಳಿ ಮಾಡುವ ಕುರಿತು ಮಾನ್ಯ ನ್ಯಾಯಾಲಯಕ್ಕೆ ಪತ್ರ ಬರೆದು ಅನುಮತಿ ಪಡೆದುಕೊಂಡು ದಾಳಿ ಮಾಡುವ ಕುರಿತು ಇಬ್ಬರೂ ಪಂಚರಾದ ಇವರನ್ನು ಪೋಲಿಸ ಠಾಣೆಯ ಹತ್ತಿರ ಬರ ಮಾಡಿಕೊಂಡು ಸದರಿ ಪಂಚರಿಗೆ ವಿಷಯ ತಿಳಿ ಹೇಳಿ ಪಂಚನಾಮೆಗೆ ಸಹಕರಿಸುವಂತೆ ಕೇಳಿಕೊಂಡ ಮೇರೆಗೆ ಉಭಯ ಪಂಚರು ಸಮಕ್ಷಮಸಿಬ್ಬಂದಿಯವರಾದ ವೈಜನಾಥ ಎಚ್.ಸಿ 42 ನಿತ್ಯಾನಂದ ಪಿ.ಸಿ-157, ಶರಣಬಸಪ್ಪ ಪಿ.ಸಿ 78 ಎಲ್ಲರೂ ಕೂಡಿ ಕೂಂಡು ಸರ್ಕಾರಿ ಜೀಪ್ ನಂ.KA.32 G.1252 ನೇದ್ದರಲ್ಲಿ 17:20 ಗಂಟೆಗೆ ಸಿಬ್ಬಂದಿಯವರ ಸಹಾಯದಿಂದ ಅವನನ್ನು ಸುತ್ತುವರೆದು ಮಟಕಾ ಬರೆದು ಕೊಳ್ಳುತ್ತಿದ್ದ ವ್ಯಕ್ತಿಯನ್ನು  ಪಂಚರ ಸಮಕ್ಷಮ ಹಿಡಿದು ವಿಚಾರಿಸಲು ಆವರು ತಮ್ಮ ಹೆಸರು 01) ಖುದುಸ್ ತಂದೆ ಅಲಿಮೊದ್ದಿನ್ ವಯ: 35 ವರ್ಷ, ಉ: ಬಟ್ಟೆ ವ್ಯಾಪಾರದ ಕೆಲಸ, ಸಾ: ಯಾದುಲ್ಲಾ ಕಾಲೋನಿ  ರೋಜಾ ಕಲಬುರಗಿ  ಅಂತಾ ತಿಳಿಸಿದನು.  ನಂತರ ಆವನ  ಅಂಗ ಶೋಧನೆ ಮಾಡಲಾಗಿ ಮಟಕಾ ಜೂಜಾಟಕ್ಕೆ ಸಂಬಂದಪಟ್ಟ  ನಗದು ಹಣ 1130-00 ರೂ ಹಾಗೂ ಒಂದು ಮಟಕಾ ಚೀಟಿ ಒಂದು ಬಾಲ ಪೆನ್ ದೊರೆತಿದ್ದು ಇರುತ್ತದೆ. ಅವುಗಳನ್ನು ಜಪ್ತಿ ಪಡಿಸಿಕೊಂಡು ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

ಇತ್ತೀಚಿನ ನವೀಕರಣ​ : 06-12-2022 04:27 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080