ಅಭಿಪ್ರಾಯ / ಸಲಹೆಗಳು

ಸಂಚಾರಿ ಪೊಲೀಸ್‌ ಠಾಣೆ-1 :- ದಿನಾಂಕ ೦೪-೧೦-೨೦೨೨ ರಂದು ಮದ್ಯಾಹ್ನ ೩-೦೦ ಗಂಟೆಗೆ ಮೃತ ಸಂತೋಷ ಇತನು ನಂದೂರು ಗ್ರಾಮಕ್ಕೆ ಕೂಲಿ ಕೆಲಸ ಕುರಿತು ಹೋಗಿ ವಾಪಸ್ಸ ಮನೆಗೆ ಹೋಗುವ ಕುರಿತು ಜಗತ ಸರ್ಕಲ ಕಲ್ಯಾಣಿ ಪೆಟ್ರೊಲ ಪಂಪ ಕಡೆಯಿಂದ ಲಾಲಗೀರಿ ಕ್ರಾಸ ರೋಡ ಕಡೆಗೆ ಹೋಗುವ ಕುರಿತು ಮೋಟಾರ ಸೈಕಲ ನಂಬರ ಕೆಎ-೩೨/ಇಡಿ-೨೭೨೦ ನೇದ್ದನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗುತ್ತಿದ್ದಾಗ ಅದೇ ರೀತಿ  ಶರಣಬಸಪ್ಪಾ ಇತನು ತಾನು ಚಲಾಯಿಸುತ್ತೀರುವ ಮೋಟಾರ ಸೈಕಲ ನಂಬರ ಕೆಎ-೩೨/ಇಎಲ್-೩೧೭೨ ನೇದ್ದರ ಹಿಂದುಗಡೆ ಮಿಲಿಂದ ಇತನನ್ನು ಕೂಡಿಸಿಕೊಂಡು ಸುಪರ ಮಾರ್ಕೆಟ ಕಡೆಯಿಂದ ಕಲ್ಯಾಣಿ ಪೆಟ್ರೊಲ ಪಂಪನಲ್ಲಿ ಪೆಟ್ರೊಲ ಹಾಕಿಸಿಕೊಳ್ಳುವ ಕುರಿತು ತನ್ನ ಮೋಟಾರ ಸೈಕಲನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಎದುರಿನಿಂದ ಸಂತೋಷ ಮತ್ತು ಶರಣಬಸಪ್ಪ ಇಬ್ಬರೂ ಒಂದಕ್ಕೊಂದು ವಾಹನಗಳನ್ನು ಡಿಕ್ಕಿಪಡಿಸಿ ಅಪಘಾತ ಮಾಡಿ ಸಂತೋಷ ಮತ್ತು ಶರಣಬಸಪ್ಪಾ ಇಬ್ಬರೂ ಗಾಯ ಹೊಂದಿ ಉಪಚಾರ ಕುರಿತು ಇಬ್ಬರೂ ಖಾಸಗಿ ದರ್ಶಾ ಆಸ್ಪತ್ರೆಗೆ ಸೇರಿಕೆಯಾಗಿ ಉಪಚಾರ ಪಡೆದು ಸಂತೋಷ ಇತನು ಹೆಚ್ಚಿನ ಉಪಚಾರ ಕುರಿತು ಬಸವೇಶ್ವರ ಆಸ್ಪತ್ರೆ ಹಾಗೂ ಸೋಲಾಪೂರದ ವಳಸಂಗಕರ್ ಆಸ್ಪತ್ರೆಗೆ ಸೇರಿಕೆಯಾಗಿ ಸೇರಿಯಾಗಿ ಉಪಚಾರ ಪಡೆದು ದಿನಾಂಕ; ೩೧-೧೦-೨೦೨೨ ರಂದು ಸೋಲಾಪೂರದಿಂದ ಕಲಬುರಗಿ ಸರ್ಕಾರಿ ಆಸ್ಪತ್ರೆಗೆ ಬಂದು ಸೇರಿಕೆಯಾಗಿ ಉಪಚಾರ ಪಡೆಯುತ್ತಾ ರಸ್ತೆ ಅಪಘಾತದಲ್ಲಿ ಆದ ಭಾರಿಗಾಯದ ಉಪಚಾರ ಫಲಕಾರಿಯಾಗದೆ ಇಂದು ದಿನಾಂಕ ೦೨-೧೧-೨೦೨೨ ರಂದು ಬೆಳಿಗ್ಗೆ ೫-೪೯ ಗಂಟೆಗೆ ಸಂತೋಷ ಇತನು ಸರ್ಕಾರಿ ಆಸ್ಪತ್ರೆಯಲ್ಲಿ ಮೃತ ಪಟ್ಟಿದ್ದು ಇರುತ್ತದೆ.

 

 

ಎಂ.ಬಿ.ನಗರ ಪೊಲೀಸ್‌ ಠಾಣೆ :- ದಿನಾಂಕ-02-11-2022  ರಂದು ಬೆಳಿಗ್ಗೆ ೦೬:೨೦ ರ ಸುಮಾರಿಗೆ ವಾಕಿಂಗ ಮಾಡುತ್ತಾ ಇದ್ದಾಗ ಯರೋ ಇಬ್ಬರು ಅಪರಿಚಿತ ವ್ಯಕ್ತಿಗಳು ಕಪ್ಪು ಕೆಂಪು ಬಣ್ಣದ ಪಲ್ಸರ ಮೋಟರ ಸೈಕಲ ಮೇಲೆ ಹಿಂದಿನಿಂದ ಬಂದು ಅವರಲ್ಲಿ ಹಿಂದೆ ಕುಳಿತ ವ್ಯಕ್ತಿ ಫಿರ್ಯಾಧಿದಾರರ ಕೈಲ್ಲಿದ್ದ ಕಪ್ಪು ಬಣ್ಣದ ಸ್ಯಾಮಸಂಗ ಮೋಬೈಲ ಅ.ಕಿ. ೧೬೫೦೦/- ರೂಪಾಯಿ. ನೆದ್ದು ಜಬರದಸ್ತಿಯಿಂದ ಕಸಿದುಕೊಂಡು ನಂತರ ನುಕಿಸಿಕೊಟ್ಟು ಹೋಗಿದಾರೆ ಎಂದು ಫಿರ್ಯಾದಿ ಕೊಟ್ಟ ಹೇಳಿಕೆ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಅಶೋಕ ನಗರ ಪೊಲೀಸ್‌ ಠಾಣೆ :- ದಿನಾಂಕ:02.11.2022 ರಂದು 06:30 ಪಿ.ಎಂ.ಕ್ಕೆ ಫಿರ್ಯಾದಿ ಶ್ರೀ ದತ್ತಾತ್ರೆಯಾ ತಂದೆ ಚಂದ್ರಕಾಂತ ಕರಂಜೆ ವಯ: 21 ವರ್ಷ ಜಾ: ಲಿಂಗಾಯತ ಉ: ಫೈನಾನ್ಸನ್ಲಿ ಮ್ಯಾನೇಜರ ಸಾ|| ಕೋಟಗಿಯಾಳ ತಾ|| ಭಾಲ್ಕಿ ಜಿ|| ಬಿದರ ಹಾ|| ವ|| ಊದನೂರ ಕ್ರಾಸ್ ಹತ್ತಿರ ಕಲಬುರಗಿ ಇವರು ಠಾಣೆಗೆ ಹಾಜರಾಗಿ ಲಿಖಿತ ಫಿರ್ಯಾದಿ ದೂರು ಸಲ್ಲಿಸಿದ್ದರ ಸಾರಾಂಶವೆನೆಂದರೆ, ನಾನು ನನ್ನ ದಿನ ನಿತ್ಯದ ಕೆಲಸಕ್ಕೆ ಓಡಾಡುವ ಸಲುವಾಗಿ 2015 ನೇ ಸಾಲಿನಲ್ಲಿ ಕಪ್ಪು ಬಣ್ಣದು ಒಂದು ಹೀರೊ ಸ್ಪ್ಲೆಂಡರ್ ಪ್ರೋ ಮೋಟಾರ ಸೈಕಲ್ ನಂ ಕೆ.ಎ-39 ಎಲ್-9965 ಚೆಸ್ಸಿ ನಂ MBLHA10BFFHJ76839 ಇಂಜಿನ್ ನಂ MA10ERFHJ91428 ಅ. ಕಿ. 35000/-  ರೂಪಾಯಿ ನೇದ್ದು  ನನ್ನ ಹೆಸರಿನಿಂದ ಖರೀದಿಸಿದ್ದು ಇರುತ್ತದೆ.  ದಿನಾಂಕ:26.10.2022 ರಂದು 11:45 ಎ.ಎಂಕ್ಕೆ ನಾನು ಕೇಂದ್ರ ಬಸ್ ನಿಲ್ದಾಣಕ್ಕೆ ನಮ್ಮ ಗ್ರಾಮಿಣ ಕೋಟಾ ಫೈನಾನ್ಸನ ಒಂದು ಕೋರಿಯರ್ ಪಾರ್ಸಲ್ ತರಲು ಕೇಂದ್ರ ಬಸ್ ನಿಲ್ದಾಣಕ್ಕೆ ಬಂದು ನನ್ನ ದ್ವಿಚಕ್ರ ವಾಹನವನ್ನು 7 ನಂಬರ ಪ್ಲಾಟ ಫಾರ್ಮ ಹತ್ತಿರ ನಿಲ್ಲಿಸಿ ಕೊರಿಯರ್ ಪಾರ್ಸಲ್ ತರಲು ಹೋಗಿ ಮತ್ತೆ 12:00 ಗಂಟೆಗೆ ಬಂದು ನೋಡಲಾಗಿ ನನ್ನ ವಾಹನ ನಾನು ನಿಲ್ಲಿಸಿದ ನನ್ನ ಹೀರೊ ಸ್ಪ್ಲೆಂಡರ್ ಪ್ರೋ ಮೋಟಾರ ಸೈಕಲ್ ನಂ ಕೆ.ಎ-39 ಎಲ್-9965 ನೇದ್ದು ಇದ್ದಿರುವುದಿಲ್ಲ. ಯಾರೋ ಕಳ್ಳರು ನನ್ನ ಮೋಟಾರ ಸೈಕಲ ಕಳವು ಮಾಡಿಕೊಂಡು ಹೋಗಿದ್ದು ಇರುತ್ತದೆ. ಇಲ್ಲಿಯವರಗೆ ನಾನು ಕಲಬುರಗಿ ನಗರದಲ್ಲಿ ಎಲ್ಲಾ ಕಡೆಯಲ್ಲಿ ತಿರುಗಾಡಿ ಕಳ್ಳತನವಾದ ನನ್ನ ವಾಹನ ಹುಡುಕಾಡಿ ಇಂದು ತಡವಾಗಿ ಠಾಣೆಗೆ ಬಂದು ದೂರು ಸಲ್ಲಿಸುತ್ತಿದ್ದು, ಕಳವುವಾದ ನನ್ನ ಮೋಟಾರ ಸೈಕಲನ್ನು ಪತ್ತೆ ಮಾಡಿ ಕಳ್ಳತನ ಮಾಡಿದವರ ವಿರುದ್ದ ಕಾನೂನು ರೀತಿ ಕ್ರಮ ಜರುಗಿಸಿ ನನ್ನ ವಾಹನ ನನಗೆ ದೊರಕಿಸಿ ಕೊಡಲು ವಿನಂತಿ ಅಂತ ವಗೈರೆಯಾಗಿ ಇದ್ದ ಅರ್ಜಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ವಿಶ್ವವಿದ್ಯಾಲಯ ಪೊಲೀಸ್‌ ಠಾಣೆ :- ದಿನಾಂಕ ೪:೫೫ ಪಿ.ಎಮ್ ದಿಂದ ೫:೫೫ ಪಿ.ಎಮ್ ದ ವರೆಗೆ ಸದರಿ ಆರೋಪಿಯು ಸೇಡಂ ರೋಡಿನ ಆಜಾದಪೂರ ಕ್ರಾಸ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ೧ ರೂ ಗೆ ೮೦ ರೂ ಅಂತಾ ಹೇಳಿ ಮಟಕಾ ಚೀಟಿ ಕೊಡುತ್ತಿದ್ದ ಸಮಯದಲ್ಲಿ ಸದರಿ ಆರೋಪಿತನಿಗೆ ದಸ್ತಗಿರಿ ಮಾಡಿ ಆತನಿಂದ ನಗದು ಹಣ ೧೦೪೦/- ರೂ ಮತ್ತು ಒಂದು ಮಟಕಾ ಚಿಟ್ಟಿ ಅ.ಕಿ ೦೦-೦೦ ರೂ. ಹಾಗೂ ಒಂದು ಬಾಲ ಪೆನ್  ಅ.ಕಿ ೦೦-೦೦ ರೂ. ಅನ್ನು ಜಪ್ತಿ ಪಡಿಸಿಕೊಂಡು ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಸಬ್‌ ಅರ್ಬನ್‌ ಪೊಲೀಸ್‌ ಠಾಣೆ :- ದಿನಾಂಕಃ-02-11-2022 ರಂದು ಸರಕಾರಿ ತರಫೆ ಫಿರ್ಯಾದಿಯು ಠಾಣೆಗೆ ಹಾಜಾರಾಗಿ ನೀಡಿದ ಫರ‍್ಯದಿಯೇನೆಂದರೆ ಸದರಿಯವರು ಏರಿಯಾದಲ್ಲಿ ಪೆಟ್ರೋಲಿಂಣ್ ಕರ್ತವ್ಯದ್ಲಲಿದ್ದಾಗ ಸದರಿ ಆರೋಪಿತನು ರಾಮನಗರ ಖಾಜಲ ವೈನ್ ಶಾಪ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಜೂಜಾಟವನ್ಮ್ನ ಕುಳಿತು ೧ ರೂಪಾಯಿಗೆ ೮೦ ರೂ ಗೆಲ್ಲಿರಿ ಎಂದು ಹೇಳುತ್ತಾ ಮಟಕಾ ಬರೆದು ಕೊಳ್ಳುತ್ತಿದ್ದಾನೆಂದು ಮಾಹಿತಿ ಬಂದ ಮೇರೆಗೆ ಇಬ್ಬರು ಪಂಚರ ಸಮಕ್ಷಮದಲ್ಲಿ ದಾಳಿ ಮಾಡಲಾಗಿ ಮಟಕಾ ಚೀಟಿ,ಒಂದು ಬಾಲ್ ಪೆನ್ನು,ನಗದು ಹಣವನ್ನು ಜಪ್ತಿ ಪಡಿಸಿಕೊಂಡು ಸದರಿ ಆರೊಪಿತನ ವಿರುದ್ದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

ಇತ್ತೀಚಿನ ನವೀಕರಣ​ : 14-11-2022 04:28 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080