ಅಭಿಪ್ರಾಯ / ಸಲಹೆಗಳು

ಚೌಕ ಪೊಲೀಸ ಠಾಣೆ :- ಅಮರೇಶ ತಂದೆ ಹಣಮಂತರಾಯ ಕಲ್ಮಣಿ ವ:36 ವರ್ಷ ಉ:ಆಹಾರ ನಿರೀಕ್ಷಕರು ಅನೌಪಚಾರಿಕ ಪಡಿತರ ಪ್ರದೇಶ ವಾರ್ಡ ನಂ.5 ರಿಂದ 8 ಜಾ: ಲಿಂಗಾಯತ ಸಾ:ಬಸವೇಶ್ವರ ಕಾಲನಿ ಕಲಬುರಗಿ ಹಾ:ವಾ: ಅನೌಪಚಾರಿಕ ಪಡಿತರ ಪ್ರದೇಶ ಮಿನಿ ವಿಧಾನಸೌಧ ಕಲಬುರಗಿ ಇದ್ದು ಈ ಮೂಲಕ ತಮ್ಮಲ್ಲಿ ದೂರು ಸಲ್ಲಿಸುವುದೇನೆಂದರೆ, ದಿನಾಂಕ:01.10.2022 ರಂದು ರಾತ್ರಿ 10-30 ಗಂಟೆಗೆ ಮನೆಯಲ್ಲಿ ಇದ್ದಾಗ ನನಗೆ ಕಲಬುರಗಿ ನಗರದ ಚೌಕ ಪೊಲೀಸ ಠಾಣೆ ವ್ಯಾಪ್ತಿಯಲ್ಲಿ ಬರುವ ರಾಜೀವಗಾಂಧಿ ನಗರದ ದಾದಾ ಪೀರ ದರ್ಗಾ ಪಕ್ಕದಲ್ಲಿ ಹಾಳು ಬಿದ್ದ ಮನೆಗಳಲ್ಲಿ ಸಾರ್ವಜನಿಕ ಪಡಿತರ ಅಡಿಯಲ್ಲಿ ಸರಬರಾಜು ಮಾಡುವ ಪಡಿತರ ಅಕ್ಕಿಯನ್ನು ಅಕ್ರಮವಾಗಿ ದಾಸ್ತಾನು ಮಾಡಿರುವುದಾಗಿ ಖಚಿತ ಮಾಹಿತಿ ಬಂದ ಮೇರೆಗೆ ಈ ವಿಷುಯವನ್ನು ನಮ್ಮ ಮೇಲಾಧಿಕಾರಿಯವರಾದ ಸಹಾಯಕ ನಿರ್ದೇಶಕರಾದ ಶ್ರೀ ಡಿ.ಬಿ. ಪಾಟೀಲ್ ರವರಿಗೆ ತಿಳಿಸಿದಾಗ ಅವರು ದಾಳಿಗೆ ನನ್ನ ಜೊತೆಯಲ್ಲಿ ಬರಲು ಒಪ್ಪಿಕೊಂಡಿದ್ದು, ಮತ್ತು ಇನ್ನೊಬ್ಬ ಸಹದ್ಯೋಗಿ ಶ್ರೀ ಶ್ರೀನಿವಾಸ ಆಹಾರ ನಿರೀಕ್ಷಕರು ಕಲಬುರಗಿ ಇವರಿಗೆ ಬಾತ್ಮಿ ವಿಷಯ ತಿಳಿಸಿ ಅವರಿಗೆ ದಾಳಿಗೆ ಬರುವಂತೆ ಕೇಳಿಕೊಂಡೆನು. ಇಬ್ಬರು ಪಂಚರಾದ  ಶ್ರೀ ಮುಸಾಪಟೇಲ್ ಮತ್ತು ಶ್ರೀ ಭೀಮರಾವ ರವರನ್ನು ರಾತ್ರಿ 11-00 ಗಂಟೆಗೆ ಚೌಕ ಪೊಲೀಸ ಠಾಣೆಗೆ ಬರುವಂತೆ ತಿಳಿಸಿದೆನು.  ಅವರೆಲ್ಲರನ್ನು ಬಂದ ನಂತರ ನಾನು,  ಚೌಕ ಪೊಲೀಸ ಠಾಣೆಯ ಇನ್ಸಪೆಕ್ಟರ ರವರಿಗೆ ಈ ಮೇಲಿನ ಬಾತ್ಮಿ ವಿಷಯ ತಿಳಿಸಿ, ಭದ್ರತೆಗಾಗಿ ತಮ್ಮ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಯವರಿಗೆ ಕಳುಹಿಸಿಕೊಡುವಂತೆ ಕೋರಿಕೊಂಡಾಗ ಅವರುಗಳು ತಮ್ಮ ಠಾಣೆಯ  ಶ್ರೀ ಗೌಸ ಮೊಹಿಯೋದ್ದಿನ ಪಿ.ಎಸ್.ಐ. ಶ್ರೀ ಅಶೋಕ ಸಿಪಿಸಿ 08. ಸಿದ್ರಾಮಯ್ಯ ಸಿಹೆಚಸಿ 226 ರವರನ್ನು ನಮ್ಮ ಜೊತೆಯಲ್ಲಿ ನೇಮಿಸಿ ಕಳುಹಿಸಿಕೊಟ್ಟರು.  ನಾನು ಈ ಮೇಲಿನ ನಮ್ಮ ಇಲಾಖೆ ಆಧಿಕಾರಿ ಮತ್ತು ಸಹದ್ಯೋಗಿ, ಹಾಗೂ ಪಂಚರಿಗೆ ಮತ್ತು ಪೊಲೀಸ  ಅಧಿಕಾರಿ ಮತ್ತು ಸಿಬ್ಬಂದಿಯವರಿಗೂ ಈ ಮೇಲಿನ ಬಾತ್ಮಿ ವಿಷಯ ತಿಳಿಸಿದೆನು. ನಾವೆಲ್ಲರೂ ಕೂಡಿಕೊಂಡು ರಾತ್ರಿ 11-30 ಗಂಟೆಗೆ ಚೌಕ ಪೊಲೀಸ ಠಾಣೆಯಿಂದ ನಮ್ಮ ಖಾಸಗಿ ವಾಹನಗಳಲ್ಲಿ ಹೊರಟು, ದಿನಾಂಕ 02/09/2022 ರಂದು ರಾತ್ರಿ 00-15 ಗಂಟೆಗೆ ಬಾತ್ಮಿ ಸ್ಥಳವಾದ ರಾಜೀವಗಾಂಧಿ ನಗರದ ದಾದಾ ಪೀರ ದರ್ಗಾ ಪಕ್ಕದಲ್ಲಿ ಹಾಳು ಬಿದ್ದ ಮನೆಗಳಿಗೆ ಹೋಗಿ ಬಾಟರಿ ಹಾಕಿ ನೋಡಲಾಗಿ ಎರಡು ಹಾಳು ಬಿದ್ದ ಮನೆಗಳಿಗೆ ಬೀಗ ಹಾಕಿದ್ದು, ಕಂಡು ಅಕ್ಕ ಪಕ್ಕ ನಿವಾಸಿಯವರಿಗೆ ಬೀಗ ಹಾಕಿದ ಮನೆಯ ಯಾರಿಗೂ ಸಂಬಂಧಿಸಿವೆ ಅಂತಾ ವಿಚಾರಿಸಲೂ  ಅವರುಗಳು ಮನೆಯ ಮಾಲೀಕರ ಹೆಸರು ವಿಳಾಸದ ಬಗ್ಗೆ ಯಾವುದೇ  ಮಾಹಿತಿ ಕೊಡಲಿಲ್ಲಾ. ಸದರಿ ಮನೆಯ ಮಾಲೀಕರು ಯಾರು ಮುಂದೆ ಬರದ ಕಾರಣ,  ಸದರ ಮನೆಗಳಿಗೆ ಹಾಕಿದ  ಬೀಗಗಳನ್ನು  ನಾನು, ನಮ್ಮ  ಇಲಾಖೆಯ ಶ್ರೀ ಡಿ.ಬಿ. ಪಾಟೀಲ ಸಹಾಯಕ ನಿರ್ದೇಶಕರು ರವರ ಸಮಕ್ಷಮದಲ್ಲಿ ಮತ್ತು ಪಂಚರ ಸಮಕ್ಷಮದಲ್ಲಿ ಎರಡು ಮನೆಗಳಿಗೆ ಹಾಕಿದ ಬೀಗವನ್ನು ಕಲ್ಲಿನಿಂದ ವಡೆದು ಒಳಗೆ ಹೋಗಿ  ಪರಿಶೀಲಿಸಲಾಗಿ ಮೊದಲನೆ ಮನೆಯಲ್ಲಿ ಅಂದಾಜ 50 ಕೆ.ಜಿ. ತೂಕವುಳ್ಳ ಅಂದಾಜ 50 ಪ್ಲಾಸ್ಟಿಕ ಚೀಲಗಳಿದ್ದು. ಅದರಲ್ಲಿ ಅಕ್ಕಿ ತುಂಬಿ ಇಟ್ಟಿದ್ದು ಕಂಡು ಬಂತು. ತದನಂತರ ಎರಡನೇ ಮನೆಯಲ್ಲಿ ಕೂಡಾ ಅಂದಾಜ 50 ಕೆ.ಜಿ.ತೂಕವುಳ್ಳ 43 ಪ್ಲಾಸ್ಟಿಕ ಚೀಲಗಳು. ಮತ್ತು 50 ಕೆ.ಜಿ. ತೂಕವುಳ್ಳ 07 ಗೋಣಿ ಚೀಲಗಳಲ್ಲಿ ಅಕ್ಕಿ ತುಂಬಿ ಇಟ್ಟಿದ್ದು ಕಂಡು ಬಂತು.ಸದರಿ ಅಕ್ಕಿಗಳು ಪರಿಶೀಲಿಸಲಾಗಿ ಸದರಿ ಚೀಲಗಳಲ್ಲಿ ಇದ್ದ ಅಕ್ಕಿಗಳು ಸಾರ್ವಜನಿಕ ವಿತರಣೆಗೆ ಸಂಬಂಧಿಸಿದ ಪಡಿತರ ಅಕ್ಕಿ ಹಾಗೂ ಸರ್ಕಾರ ಇತರೇ ಯೋಜನೆ ಅಡಿಯಲ್ಲಿ ಬಿಡುಗಡೆಯಾದ ಅಕ್ಕಿ ಇರುವುದು ಕಂಡು ಬಂದಿರುತ್ತದೆ. ಸದರ ಚೀಲಗಳನ್ನು ಕೇಸಿನ ಪುರಾವೆಗೋಸ್ಕರ  ಪಂಚರ ಸಮಕ್ಷಮದಲ್ಲಿ ಜಪ್ತ ಪಡಿಸಿಕೊಂಡು, ಆಹಾರ ಇಲಾಖೆಯ ತಾಬೆಗೆ ಪಡೆಯಲಾಯಿತು.ಇದರ ಬಗ್ಗೆ ಪಂಚನಾಮೆ ಕೂಡಾ ಮಾಡಲಾಗಿರುತ್ತದೆ.  ನಂತರ ಜಪ್ತಿಪಡಿಸಿಕೊಂಡ ಈ ಮೇಲಿನ ನಮೂದಿಸಿದ ಪಡಿತರ ಅಕ್ಕಿ ಸರಕಾರದ ಇತರೆ ಯೋಜನೆಯಡಿಯಲ್ಲಿ ಬಿಡುಗಡೆಯಾದ ಅಕ್ಕಿಯನ್ನು ಸುರಕ್ಷತಾ ಹಿತದೃಷ್ಟಿಯಿಂದ ಹಾಗೂ ಹಾಳಾಗಿ ಅನುಪಯುಕ್ತವಾಗುವ ಉದ್ದೇಶದಿಂದ ವಾಹನ ಸಂಖ್ಯೆ ಎಂಎಚ 16 ಎಇ 8365 ರ ಮುಖಾಂತರ ಕಲಬುರಗಿ ಪಡಿತರ ಪ್ರದೇಶದ ಕೆ.ಎಫ.ಸಿ.ಎಸ.ಸಿ ಗೋದಾಮಿನಲ್ಲಿ ಅನಲೋಡ ಮಾಡಲಾಯಿತು. ರಶೀದಿ ಸಂಖ್ಯೆ ಎಸ್ಅರ್ 911 ದಿನಾಂಕ:02.10.2022 ರಲ್ಲಿ 71.39 ಕ್ವಿಂಟಲ್ ಅಕ್ಕಿ ದಾಸ್ತಾನಿಕರಿಸಿದ ಪಡೆದಿರುವ ಬಿಲ್ಲು ಲಗತ್ತಿಸಿದೆ. ದಾಸ್ತಾನುಕರಿಸಿದ ಅಕ್ಕಿಯ ಮಾರುಕಟ್ಟೆಯ ಬೆಲೆ ಅಂದಾಜು ಕಿಮ್ಮತ್ತು ರೂ.1,77,500/- ರೂ. ಆಗಿರುತ್ತದೆ. ಈ ಹಿನ್ನಲೆಯಲ್ಲಿ ಸಾರ್ವಜನಿಕ ವಿತರಣಾ ವ್ಯವಸ್ಥೆಗೆ ಸೇರಿದ ಹಾಗೂ ಸರ್ಕಾರದ ಇತರೆ ಯೋಜನೆಗಳಿಗೆ ಬಿಡುಗಡೆಯಾದ ಅಕ್ಕಿಯನ್ನು ಅಕ್ರಮವಾಗಿ ಖರೀದಿಸಿ ಕಾಳಸಂತೆಯಲ್ಲಿ ಮಾರಾಟ ಮಾಡಲು ಶೇಖರಿಸಿಟ್ಟಿರುವುದು, ಪತ್ತೆಯಾದ ಹಿನ್ನಲೆಯಲ್ಲಿ ಅಗತ್ಯ ವಸ್ತುಗಳ ಕಾಯ್ದೆ 1955 ರ 3 ಮತ್ತು 7 ರ ಅಡಿಯಲ್ಲಿ ಅಕ್ರಮವಾಗಿ ಪಡಿತರ ಅಕ್ಕಿ ಚೀಲಗಳನ್ನು ಯಾರೋ ಅಪರಿಚಿತರು ದಾಸ್ತಾನಿಕರಿಸಿರುತ್ತಾರೆ ಎಂದು ತಿಳಿದು ಬಂದಿರುತ್ತದೆ. ಜಪ್ತಿ ಪಡಿಸಿಕೊಂಡ ಅಹಾರ ಧ್ಯಾನವನ್ನು ಮಧ್ಯರಾತ್ರಿಯಲ್ಲಿ ವೇ ಬ್ರೀಡ್ಜ ಮಾಡಲು ಅನಾನೂಕೂಲವಾಗಿರುವುದಿಂದ, ಯಾಥಾ ಸ್ಥಿತಿಯಲ್ಲಿ ಆಹಾರ ಧ್ಯಾನವನ್ನು ಸಂಗ್ರಹಿಸಿಟ್ಟಿರುತ್ತದೆ. ಇಂದು ಗೋದಾಮನಲ್ಲಿ ತೂಕ ಮಾಡಿಸಲು ಮತ್ತು ಶೇಖರಿಸಿಟ್ಟ ಅಪರಿಚಿತರ ವ್ಯಕ್ತಿಯ ಮಾಹಿತಿ ಸಂಗ್ರಹಣೆ ಮಾಡಲು ಯಾವುದೇ ಮಾಹಿತಿ ಸಿಗದ ಕಾರಣ ದೂರು ಕೊಡಲು ತಡವಾಗಿರುತ್ತದೆ. ಸದರಿ ಪಡಿತರ ಅಕ್ಕಿ ಚೀಲಗಳನ್ನು ದಾಸ್ತಾನಿಕರಿಸಿಟ್ಟಿರುವ ಯಾರೋ ಅಪರಿಚಿತರನ್ನು ಪತ್ತೆ ಹಚ್ಚಿ ಅವರ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಫಿರ್ಯದಿ ಕೊಟ್ಟ ಹೇಳಿಕೆ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಅಶೋಕ ನಗರ ಪೊಲೀಸ್‌ ಠಾಣೆ :- ದಿನಾಂಕ:02.10.2022 ರಂದು 09:00 ಎ.ಎಂ ಕ್ಕೆ ಅಬ್ದುಲ್ ಜಬ್ಬಾರ್ ಪಿ.ಎಸ್.ಐ(ಕಾ&ಸು) ರವರು ಒಬ್ಬ  ಆಪಾದಿತನನ್ನು  ಹಾಗೂ ಮುದ್ದೆಮಾಲಿನೊಂದಿಗೆ ಠಾಣೆಗೆ ಬಂದು ವರದಿ ಜೊತೆ ಜಪ್ತಿ ಪಂಚನಾಮೆ ಹಾಜರ ಪಡಿಸಿದ್ದು,  ವರದಿಯ ಸಂಕ್ಷೀಪ್ತ ಸಾರಾಂಶವೆನೆಂದರೆ, ಇಂದು ದಿನಾಂಕ:02.10.2022 ರಂದು ಬೆಳಿಗ್ಗೆ 06:00 ಗಂಟೆಗೆ ಗಾಂಧಿ ಜಯಂತಿ  ಪ್ರಯುಕ್ತ ಠಾಣಾ ವ್ಯಾಪ್ತಿಯಲ್ಲಿ ಸಿಬ್ಬಂದಿ ಜನರಾದ ಸಾಯಿಬಣ್ಣಾ ಸಿ.ಹೆಚ್.ಸಿ.-03, ನೀಲಕಂಠರಾಯ ಪಾಟೀಲ್ ಸಿ.ಪಿ.ಸಿ-537 ಹಾಗೂ ದೇವರಾಜ ಸಿ.ಪಿ.ಸಿ-282 ರವರುಗಳನ್ನು ಸಂಗಡ ಕರೆದುಕೊಂಡು ಠಾಣಾ ವ್ಯಾಪ್ತಿಯಲ್ಲಿ ಪೆಟ್ರೋಲಿಂಗ್ ಕರ್ತವ್ಯ ನಿರ್ವಹಿಸುತ್ತಾ  ಅಫಜಪೂರ ಚೆಕ್ ಪೋಸ್ಟ್ ಹತ್ತಿರ ಬಂದಾಗ ಒಬ್ಬ ವ್ಯಕ್ತಿ ಅನಧಿಕೃತವಾಗಿ ಮದ್ಯವನ್ನು ಸಾರ್ವಜನಿಕರೆಗೆ, ಮಾರಾಟ ಮಾಡುತ್ತಿದ್ದಾನೆ ಅಂತ ಖಚಿತ ಬಾತ್ಮಿ ಬಂದ ಮೆರೆಗೆ ದಾಳಿಯ ಬಗ್ಗೆ ಯೋಜನೆ ರೂಪಿಸಿ ಇಬ್ಬರು ಪಂಚರಾದ 1) ಆನಂದ ತಂದೆ ಮಾಣಿಕಪ್ರಭು ಕಾಂಬಳೆ ವಯ: 26 ವರ್ಷ ಜಾ: ಎಸ್.ಸಿ.(ಹೊಲೆಯ) ಉ: ಕಾರ ಚಾಲಕ ಸಾ|| ಸಿದ್ದಾರ್ಥ ನಗರ, ಕಲಬುರಗಿ ಮತ್ತು 2) ರಾಜಶೇಖರ ತಂದೆ ಶಿವಶರಣಪ್ಪ ಮುದನಾಳ ವಯ: 32 ವರ್ಷ ಜಾ: ಎಸ್.ಸಿ.(ಹೊಲೆಯ) ಉ: ತರಕಾರಿ ವ್ಯಾಪಾರ ಸಾ|| ಸಿದ್ದಾರ್ಥ ನಗರ, ಕಲಬುರಗಿ ರವರನ್ನು ಅಫಜಪೂರ ಚೆಕ್ ಪೋಸ್ಟ್ ಹತ್ತಿರ  ಬರಮಾಡಿಕೊಂಡು ಅವರಿಗೆ ವಿಷಯವನ್ನು ತಿಳಿಸಿ  ನಾನು ಮತ್ತು  ಸಿಬ್ಬಂದಿ ಹಾಗೂ ಪಂಚರನ್ನು ಕರೆದುಕೊಂಡು ಬೆಳಿಗ್ಗೆ 06:30 ಗಂಟೆಗೆ ನಿಸರ್ಗಾ ಕಾಲೋನಿ ಕಮಾನ ಹತ್ತಿರ ಹೋಗಿ ಮರೆಯಾಗಿ ನಿಂತು  ನೋಡಲಾಗಿ ಒಬ್ಬ ವ್ಯಕ್ತಿಯು ಒಂದು ಪ್ಲಾಸ್ಟಿಕ್ ಚೀಲದಲ್ಲಿ ಮದ್ಯದ ಟೇಟ್ರಾ ಪಾಕೆಟಗಳನ್ನು ಹಾಗೂ ಬೀಯರ್ ಬಾಟಲಗಳನ್ನು ಸಂಗ್ರಹಿಸಿಟ್ಟುಕೊಂಡು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿರುವುದನ್ನು ಗಮನಿಸಿ ಪಂಚರ ಸಮಕ್ಷಮ ದಾಳಿಮಾಡಿ ಹಿಡಿದು ವಿಚಾರಿಸಲಾಗಿ ಅವನು ತನ್ನ ಹೆಸರು ಗುಂಡಪ್ಪ ತಂದೆ ಚಂದ್ರಶ್ಯಾ ಪೂಜಾರಿ ವಯ: 60 ವರ್ಷ ಜಾ: ಪೂಜಾರಿ ಉ: ಪೇಪರ್ ಗ್ಲಾಸ್ ಮಾರುವ ವ್ಯಾಪಾರ ಸಾ|| ನಿಸರ್ಗಾ ಕಾಲೋನಿ, ಅಫಜಲಪೂರ ರಸ್ತೆ, ಕಲಬುರಗಿ ಅಂತ ತಿಳಿಸಿದ್ದು, ಸದರಿಯವನಿಗೆ ಅಂಗಜಡ್ತಿ ಮಾಡಲಾಗಿ ಅವನ ಹತ್ತಿರ ಮದ್ಯ ಮಾರಾಟದಿಂದ ಬಂದ ನಗದು ಹಣ ರೂ. 1050/- ಮತ್ತು  ಅಕ್ರಮವಾಗಿ ಮಾರಾಟ ಮಾಡಲು ಒಂದು ಪ್ಲಾಸ್ಟಿಕ್ ಚೀಲದಲ್ಲಿ ಸಂಗ್ರಹಿಸಿದ 1) 90 ಎಂ.ಎಲ್.ನ ಓರಿಜಿನಲ್ ಚಾಯಿಸ್ ಒಟ್ಟು 192 ಟೇಟ್ರಾ ಪಾಕೇಟಗಳು ದೊರೆತಿದ್ದು ಒಂದು ಟೇಟ್ರಾ ಪಾಕೇಟ್ ಅ.ಕಿ.40/-ರೂ ಹೀಗೆ ಒಟ್ಟು ಅವುಗಳ ಅ.ಕಿ. 7,680/-ರೂ 2) 650 ಎಮ್.ಎಲ್.ನ ಕಿಂಗ್ ಫಿಶರ್ ಸ್ಟ್ರಾಂಗ್ ಬಿಯರ್ ದೊರೆತಿದ್ದು ಒಂದು ಬೀಯರ್ ಬಾಟಲಿಗೆ ಅ.ಕಿ.160/-ರೂ ಹೀಗೆ ಒಟ್ಟು 09 ಬಿಯರ್ ಬಾಟಲಿಗಳು ದೊರೆತಿದ್ದು ಅವುಗಳ ಅ.ಕಿ.1,440/-ರೂ ಮತ್ತು 3) 650 ಎಮ್.ಎಲ್.ನ ಕಿಂಗ್ ಫಶರ್ ಪ್ರಿಮೀಯಮ್ ಬಿಯರ್ ಒಟ್ಟು 11 ಬಿಯರ್ ಬಾಟಲಿಗಳು ದೊರೆತಿದ್ದು ಒಂದು ಬಾಟಲಿಗೆ ಅ.ಕಿ.160/-ರೂ ಹೀಗೆ ಒಟ್ಟು ಅವುಗಳ ಅ.ಕಿ.1,760/-ರೂ ಇರುತ್ತದೆ. ನಂತರ ಸದರಿಯವನಿಗೆ ಗಾಂಧಿ ಜಯಂತಿ ಪ್ರಯುಕ್ತ  ಮಾನ್ಯ ಪೊಲೀಸ್ ಆಯುಕ್ತರು, ಕಲಬುರಗಿ ರವರು ಮದ್ಯ ಮಾರಾಟ ನಿಷೇಧಿಸಿದ್ದರು ಕೂಡ ಯಾಕೆ ಮದ್ಯ ಮಾರಾಟ ಮಾಡುತ್ತಿರುವಿ ಅಂತ ವಿಚಾರಿಸಿದಾಗ ಆರೋಪಿತ ಗುಂಡಪ್ಪ ಇತನು ತಾನು ವೈಯಕ್ತಿಕ ಲಾಭಕ್ಕಾಗಿ ಸದರಿ ಮದ್ಯದ ಟೇಟ್ರಾ ಪ್ಯಾಕೇಟಗಳನ್ನು ಮತ್ತು ಬಿಯರ್ ಬಾಟಲಿಗಳು ತೆಗೆದುಕೊಂಡು ಬಂದು ಬ್ಲ್ಯಾಕನಲ್ಲಿ ಮಾರಾಟ ಮಾಡುತ್ತಿರುವುದಾಗಿ ತಪ್ಪೊಪ್ಪಿಕೊಂಡಿದ್ದು, ನಂತರ ಸದರಿ ಮದ್ಯದ 192 ಟೆಟ್ರಾ ಪಾಕೇಟಗಳನ್ನು ಮತ್ತು 20 ಬಿಯರ್ ಬಾಟಲಿಗಳನ್ನು ಪಂಚರ ಸಮಕ್ಷಮ ಜಪ್ತಿ ಪಡಿಸಿಕೊಂಡ ಒಂದು ಬಿಳಿ ಪ್ಲಾಸ್ಟಿಕ್ ಚೀಲದಲ್ಲಿ ಹಾಕಿ ಬಾಯಿ ಹೊಲೆದು ಅರಗಿನಿಂದ “A” ಎಂಬ ಶೀಲ್ ಮಾಡಿ ರಸಾಯನ ತಜ್ಞರ ಪರೀಕ್ಷೆಗಾಗಿ ಪಂಚರ ಸಮಕ್ಷಮ ಜಪ್ತಿ ಮಾಡಿಕೊಳ್ಳಲಾಯಿತು. ಸದರಿ ಪಂಚನಾಮೆಯನ್ನು ಇಂದು ದಿನಾಂಕ:02.10.2022 ರಂದು ಬೆಳಿಗ್ಗೆ 07:00 ಗಂಟೆಯಿಂದ 08:00 ಗಂಟೆಯ ವರೆಗೆ ಕೈಕೊಂಡಿದ್ದು ಇರುತ್ತದೆ.           ಕಾರಣ ಅಕ್ರಮವಾಗಿ ಮದ್ಯ ಮಾರಾಟಮಾಡುತ್ತಿದ್ದ ಗುಂಡಪ್ಪ ತಂದೆ ಚಂದ್ರಶ್ಯಾ ಪೂಜಾರಿ ವಯ: 60 ವರ್ಷ ಜಾ: ಪೂಜಾರಿ ಉ: ಪೇಪರ್ ಗ್ಲಾಸ್ ಮಾರುವ ವ್ಯಾಪಾರ ಸಾ|| ನಿಸರ್ಗಾ ಕಾಲೋನಿ, ಅಫಜಲಪೂರ ರಸ್ತೆ, ಕಲಬುರಗಿ ಇತನಿಗೆ ಗಾಂಧಿ ಜಯಂತಿ ಹಬ್ಬದ ಪ್ರಯುಕ್ತ ಮದ್ಯ ಮಾರಾಟ ನಿಷೇದಿಸಿದ್ದು ಗೊತ್ತಿದ್ದರು ಸಹ ತನ್ನ ವೈಯಕ್ತಿಕ ಲಾಭಕ್ಕಾಗಿ ಅಕ್ರಮವಾಗಿ ಮದ್ಯದ ಪಾಕೆಟಗಳನ್ನು ಮತ್ತು ಬೀಯರ ಬಾಟಲಿಗಳನ್ನು ಸಂಗ್ರಹಿಸಿ ಇಟ್ಟುಕೊಂಡು ಮಾರಾಟ ಮಾಡಿ ಕಲಂ 32, 34 ಕೆ.ಇ. ಎಕ್ಟ ಮತ್ತು 188 ಐ.ಪಿ.ಸಿ.ಅಡಿಯಲಲ್ಲಿ ಅಪರಾಧ ಎಸಗಿದ್ದು ಅಕ್ರಮವಾಗಿ ಮದ್ಯ ಮಾರಾಟದಲ್ಲಿ ತೊಡಗಿದ್ದ ಆರೋಪಿ ಗುಂಡಪ್ಪ ಇತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಕೊಳ್ಳಲು ಸೂಚಿಸಿದ ವರದಿಯ ಸಾರಾಂಶದ ಮೇಲಿಂದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

ಇತ್ತೀಚಿನ ನವೀಕರಣ​ : 31-10-2022 06:38 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080