ಅಭಿಪ್ರಾಯ / ಸಲಹೆಗಳು

ಸಬ್‌ ಅರ್ಬನ್‌ ಪೊಲೀಸ್‌ ಠಾಣೆ :- ದಿನಾಂಕ 02-09-2022  ರಂದು ಫಿರ್ಯಾಧಿದಾರನು ನೀಡಿದ ಫಿರ್ಯಾಧಿಯೇನೆಂದರೆ ಫಿರ್ಯಾಧಿದಾರರು  ತಮ್ಮ ಹೆಂಡತಿಯ ತಾಯಿಗೆ ಹುಷಾರಿಲ್ಲದ ಕಾರಣ ಅವರನ್ನು ನೋಡಿಕೊಂಡು ಬರಲು ಕೊಡ್ಲು ಗ್ರಾಮಕ್ಕೆ ಹೋಗಿದ್ದು ದಿನಾಂಕಃ-೧೯/೦೮/೨೦೨೨ ರಂದು ಬೆಳಗ್ಗೆ ೧೦.೦೦ ಗಂಟೆಗೆ ಹೋಗಿದ್ದು ದಿನಾಂಕಃ-೨೦/೦೮/೨೦೨೨ ರಂದು ನನ್ನ ತಮ್ಮ ನನಗೆ ಬೆಳಗ್ಗೆ ೭.೦೦ ಸುಮಾರಿಗೆ ನಮ್ಮ ಮನೆ ಕಳ್ಳತನವಾಗಿರುವುದನ್ನು ತಿಳಿಸಿದನು ಆಗ ನಾವು ಬಂದು ನೋಡಲು ನಮ್ಮ ಮನೆಯ ಬಾಗಿಲು ಮುರಿದಿದ್ದು ಆಲ್ಮರಿಯಲ್ಲಿರುವ ಬಂಗಾರದ ಆಭರಣಗಳು ಕಳುವಾಗಿದ್ದು ಒಟ್ಟು ಅಂದಾಜು ೯೧,೩೫೦/- ರೂ ಮೌಲ್ಯದ ಸಾಮಾನುಗಳನ್ನು ಯಾರೋ ಕಳ್ಳರು ಕದ್ದಿದ್ದು ಅವುಗಳನ್ನು ಪತ್ತೆ ಹಚ್ಚಿ ಕೊಡಬೇಕೆಂದು ಫಿರ್ಯಾದಿ ಕೊಟ್ಟ ಹೇಳಿಕೆ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಸಂಚಾರಿ ಪೊಲೀಸ್‌ ಠಾಣೆ -2 :-  ದಿನಾಂಕ 02/09/2022 ರಂದು 5:30 ಪಿ.ಎಮ್ ಕ್ಕೆ ಸಂತೋಷ ತಂದೆ ದೌಲಪ್ಪಾ ತಳವಾರ ವಯಃ 38 ವರ್ಷ ಜಾತಿಃ ಕಬ್ಬಲಿಗೇರ ಉಃ ಹೊಟೇಲದಲ್ಲಿ ಅಡುಗೆ ಮಾಡುವ ಕೆಲಸ ಮುಕ್ಕಾಃ ಬಿದನೂರ ತಾಃ ಅಫಜಲಪೂರ ಜಿಲ್ಲಾಃಕಲಬುರಗಿ ಇವರು ಸಹಿ ಮಾಡಿದ ಫಿರ್ಯಾದಿ ಅರ್ಜಿಯನ್ನು ಆತನ ಹೆಂಡತ್ತಿ ಚನ್ನಮ್ಮ ಇವರು ಠಾಣೆಗೆ ಹಾಜರಾಗಿ ದೂರು ಅರ್ಜಿ ನೀಡಿದ್ದು  ಸಾರಂಶವೆನೆಂದರೆ, ನಿನ್ನೆ ದಿನಾಂಕ 01/09/2022 ರಂದು ನಾನು ಮುಂಜಾನೆಯಿಂದ ರಾತ್ರಿ ವರೆಗೆ ಗೊಬ್ಬುರದ ಪ್ರೀತಿ ಹೊಟೇಲದಲ್ಲಿ ಅಡುಗೆ ಕೆಲಸ ಮಾಡಿಕೊಂಡು ರಾತ್ರಿ ಮನೆಗೆ ಹೋಗಬೇಕೆನ್ನುವಾಗ ನನ್ನ ಹೆಂಡತಿ ಚನ್ನಮ್ಮ ಇವಳು ತನಗೆ ಮೆಡಿಕಲದಿಂದ ಗುಳಿಗೆಗಳನ್ನು ಕಲಬುರಗಿಯಿಂದ ತರುವಂತೆ ತಿಳಿಸಿದಕ್ಕೆ ನಾನು ಮೋಟರ ಸೈಕಲ ನಂ. ಕೆಎ 04 ಇ.ಎಮ್ 1369 ಇದರ ಮೇಲೆ ಕಲಬುರಗಿಗೆ ಬರುವಾಗ ರಾತ್ರಿ 8:20 ಗಂಟೆ ಆಗಿರಬಹುದು ಶರಣಸಿರಸಗಿ ಗ್ರಾಮದ ಸಮೀಪ ತೊಗರೆ ನಾಡು ಬೋರ್ಡನ ಹತ್ತೀರ ಬರುತ್ತಿದ್ದಾಗ ಕಲಬುರಗಿ ಕಡೆಯಿಂದ ಒಂದು ಕೆ.ಎಸ್.ಆರ್.ಟಿ.ಸಿ ಬಸ್ ನಂ. ಕೆಎ 32 ಎಫ್ 2169 ನೇದ್ದರ ಚಾಲಕನು ಭಾರಿ ಅತಿವೇಗದಿಂದ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ನನ್ನ ರೋಡಿನ ಕಡೆಗೆ ಬಂದವನೆ, ನನ್ನ ಮೋಟರ ಸೈಕಲಗೆ & ನನ್ನ ಬಲಭಾಗಕ್ಕೆ ಡಿಕ್ಕಿ ಹೊಡೆದಿದ್ದು, ಇದರಿಂದ ನಾನು ಬಿದ್ದಾಗ ರೋಡಿನಿಂದ ಹೋಗುತ್ತಿರುವ ಮೆಹೆಬೂಬ ತಂದೆ ಚಾಂದ ಪಟೇಲ ಮತ್ತು ಶಿವಕುಮಾರ ಗಂಗಾನಗರ ಕಲಬುರಗಿ ಇವರು ನೋಡಿ ನನಗೆ ಎಬ್ಬಿಸಿದ್ದು, ಕೆ.ಎಸ್.ಆರ್.ಟಿ.ಸಿ ಬಸ್ಸಿನ ಚಾಲಕನು ಘಟನೆಯನ್ನು ಕಂಡು ಹತ್ತೀರ ಬಂದಿದ್ದು, ಆತನ ಹೆಸರು ಸಿದ್ದಯ್ಯ ಹಿರೆಮಠ ಅಫಜಲಪೂರ ಡಿಪೊ ಅಂತಾ ತಿಳಿಸಿರುತ್ತಾನೆ. ನಂತರ ಮೆಹೆಬೂಬ ಪಟೇಲ ಮತ್ತು ಶಿವಕುಮಾರ ಇವರು ನನಗೆ ಯಾವುದೊ ಒಂದು ಖಾಸಗಿ ಅಂಬುಲೇನ್ಸದಲ್ಲಿ ಕಲಬುರಗಿಯ ಮೆಟ್ರೊ ಪ್ಲಸ್ ಆಸ್ಪತ್ರೆಗೆ ತಂದು ಸೇರಿಕೆ ಮಾಡಿರುತ್ತಾರೆ. ಈ ವಿಷಯವನ್ನು ನನ್ನ ಹೆಂಡತಿ ಚನ್ನಮ್ಮ ಮತ್ತು ತಮ್ಮ ಭಾಗೇಶ ಇವರಿಗೆ ಮಾಹಿತಿ ತಿಳಿಸಿದ್ದು, ಅವರು ರಾತ್ರಿಯೇ ಆಸ್ಪತ್ರೆಗೆ ಬಂದಿದ್ದು, ಇಂದು ನನ್ನ ಬಲಗಾಲಿನ ಮತ್ತು ಬಲಗೈಗೆ ಆಪರೇಷನ್ ಆಗಿದ್ದು, ನಂತರ ಕೆಸು ಮಾಡುವ ಬಗ್ಗೆ ವಿಚಾರಿಸಿಕೊಂಡು ಈಗ ತಡಮಾಡಿ ಈ ಫಿರ್ಯಾದಿಯನ್ನು ನನ್ನ ಹೆಂಡತಿ ಚನ್ನಮ್ಮ ಇವಳ ಕಡೆಯಿಂದ ಕಳುಹಿಸಿಕೊಟ್ಟಿರುತ್ತೆನೆ. ಕಾರಣ ಕೆ.ಎಸ್.ಆರ್.ಟಿ.ಸಿ ಬಸ್ ನಂ. ಕೆಎ 32 ಎಫ್ 2169 ನೇದ್ದರ ಚಾಲಕ ಸಿದ್ದಯ್ಯ ಹಿರೆಮಠ ಅಫಜಲಪೂರ ಡಿಪೊ ಈತನ ವಿರುದ್ಧ ಕಾನೂನು ಪ್ರಕಾರ  ಕ್ರಮ  ಕೈಗೊಳ್ಳಬೇಕು ಅಂತಾ ಕೊಟ್ಟ ಫಿರ್ಯಾಧಿ ಅರ್ಜಿ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

ಇತ್ತೀಚಿನ ನವೀಕರಣ​ : 06-09-2022 06:30 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080