ಅಭಿಪ್ರಾಯ / ಸಲಹೆಗಳು

ವಿಶ್ವವಿದ್ಯಾಲಯ ಪೊಲೀಸ ಠಾಣೆ : ದಿನಾಂಕ 02.09.2021 ರಂದು 1:30 ಎ.ಎಮ ಕ್ಕೆ ಆನಂದ ಆಸ್ಪತ್ರೆ ಕಲಬುರಗಿಯಲ್ಲಿ ಫೀರ್ಯಾದಿ ಶಿವಲಿಂಗಪ್ಪ ತಂದೆ ಆನಂದಪ್ಪ ಉಮ್ಮನ್ನಗೋಳ ವಯ: 55 ವರ್ಷ, ಉ: ಎ.ಎಸ್.ಐ ಜೇವರ್ಗಿ ಪೊಲೀಸ ಠಾಣೆ, ಜಾತಿ: ಕಬ್ಬಲೀಗ, ಸಾ: ಪ್ಲಾಟ ನಂ: 250 ಶಿವಶಕ್ತಿ ಲೇಔಟ ಕ್ರೀಸ್ಟಲ್ ಪ್ಯಾಲೇಸ ಹಿಂದುಗಡೆ ಜೇವರ್ಗಿ ರಸ್ತೆ ಕಲಬುರಗಿ ಇವರ ಹೇಳಿಕೆ ಪಡೆದುಕೊಂಡು ಮರಳಿ ಠಾಣೆಗೆ 2:00 ಎ.ಎಮ ಕ್ಕೆ ಬಂದಿದ್ದು ಹೇಳಿಕೆ ಸಾರಾಂಶವೆನೆಂದರೆ ನಾನು ಜೇವರ್ಗಿ ಪೊಲೀಸ ಠಾಣೆಯಲ್ಲಿ ಮಾರ್ಚ 2020 ನೇ ಸಾಲಿನಿಂದ ಎ.ಎಸ್.ಐ ಅಂತಾ ಕರ್ತವ್ಯ ನಿರ್ವಹಿಸುತ್ತೇನೆ. ನಮ್ಮ ಸ್ವಂತ ಮನೆ ಕಲಬುರಗಿಯ ಶಿವಶಕ್ತಿ ಲೇಔಟದಲ್ಲಿ ಇದ್ದು, ಆಗಾಗ ಬರುವುದು ಹೋಗುವುದು ಮಾಡುತ್ತೇನೆ ದಿನಾಂಕ: 01.09.2021 ರಂದು ಬೆಳಿಗ್ಗೆ ಕಲಬುರಗಿಯಿಂದ ಕರ್ತವ್ಯ ಕುರಿತು ಜೇವರ್ಗಿಗೆ ಹೋಗಿದ್ದು, ನನ್ನ ಕರ್ತವ್ಯ ಮುಗಿಸಿಕೊಂಡು ಮರಳಿ ಕಲಬುರಗಿಗೆ ಬರುವ ಕುರಿತು ಜೇವರ್ಗಿಯಿಂದ ಸಾಯಂಕಾಲ 9:00 ಗಂಟೆ ಸುಮಾರಿಗೆ ಸರಕಾರಿ ಬಸ್ ಹಿಡಿದು ಬಸ್ಸಿನಲ್ಲಿ ಕುಳಿತು ಕಲಬುರಗಿಯ ಕ್ರಿಸ್ಟಲ್ ಪ್ಯಾಲೇಸ ಹತ್ತಿರ ಬಸ್ಸ ನಿಲ್ಲಿಸಿ ಬಸ್ಸಿನಿಂದ ಕೆಳಗೆ ಇಳಿದು, ಕ್ರಿಸ್ಟಲ್ ಪ್ಯಾಲೇಸದಿಂದ ನಡೆಯುತ್ತಾ ಶಿವಶಕ್ತಿ ಲೇಔಟ ಕಡೆಗೆ ಹೋರಟಾಗ ಅಂದಾಜು 10:00 ಪಿ.ಎಮ ಸುಮಾರಿಗೆ ಅಲೀಂಮಿ ಸ್ಕೂಲ ಹತ್ತಿರದ ಗೇಟ ಎದುರು ರಸ್ತೆಯ ಮೇಲೆ ಹೊರಟಾಗ ಆಗ ಹಿಂದಿನಿಂದ ಯಾರೋ ಒಬ್ಬನು ಬಂದು ಒಮ್ಮಿಂದೊಮ್ಮೇಲೆ ನನ್ನ ತಲೆಯ ಹಿಂದೆ ಯಾವುದೋ ವಸ್ತುವಿನಿಂದ ಹೊಡೆದಾಗ ನಾನು ಕೆಳಗೆ ಬಿದ್ದಾಗ, ಆಗ ಅವನು ನನ್ನ ಹತ್ತಿರ ಇದ್ದ ರೆಡ್ಮಿ ನೋಟ್ - 7 ಪ್ರೋ, ಮೊಬೈಲ ಕಸಿದುಕೊಂಡನು. ಮತ್ತೆ ಅವನು ನನ್ನ ಪ್ಯಾಂಟಿನ ಜೇಬಿಗೆ ಕೈ ಹಾಕುತ್ತಿದ್ದಾಗ ಆಗ ನಾನು ಅವನ ಎರಡು ಕಾಲುಗಳನ್ನು ಹಿಡಿದು ನೆಲಕ್ಕೆ ಕೆಡವಿದೇನು. ಆಗ ಅವನು ಮತ್ತೆ ನನಗೆ ನೂಕಿಸಿ ನನ್ನ ಪ್ಯಾಂಟಿನ ಹಿಂದಿನ ಜೇಬಿನಲ್ಲಿದ್ದ ಪರಸ್ ಅನ್ನು ಕಸಿದುಕೊಂಡು ಅಲ್ಲಿಂದ ಜೇವಗರ್ಿ ರೋಡ ಕಡೆ ಓಡಿ ಹೋದನು. ನನ್ನ ಪರ್ಸದಲ್ಲಿ ಇದ್ದ ನಗದು ಹಣ 2500=00, ಎಸ್.ಬಿ.ಐ ಎ.ಟಿ.ಎಮ್ ಕಾರ್ಡ, ಪೊಲೀಸ ಐ.ಡಿ ಕಾರ್ಡ ಇದ್ದವು. ನಂತರ ಸದರಿ ಅಪರಿಚಿತ ವ್ಯಕ್ತಿಗೆ & ನನಗೆ ತೆಕ್ಕಿ ಕುಸ್ತಿಯಿಂದ ನನಗೆ ತಲೆಗೆ ಗುಪ್ತಗಾಯ, ಮೂಗಿಗೆ ತರಚಿದ ಗಾಯ, ಬಲ ಕಪಾಳಕ್ಕೆ ಗುಪ್ತಗಾಯಗಳಾಗಿರುತ್ತವೆ. ನನಗೆ ಆದ ಗಾಯಗಳಿಂದ ನಾನು ಬೇವೂಸ್ ಆಗಿದ್ದು, ಆಗ ಯಾರೋ 112 ನಂಬರಗೆ ಕರೆ ಮಾಡಿ ಅದರಲ್ಲಿ ಹಾಕಿಕೊಂಡು ನನಗೆ ಉಪಚಾರಕ್ಕಾಗಿ ಕಲಬುರಗಿಯ ಆನಂದ ಆಸ್ಪತ್ರೆಗೆ ತಂದು ಸೇರಿಕೆ ಮಾಡಿರುತ್ತಾರೆ. ನಂತರ ನಾನು ಆಸ್ಪತ್ರೆಯಲ್ಲಿ ಚೇತರಿಸಿಕೊಂಡು ಇಂದು ತಮಗೆ ಕರೆಯಿಸಿ ನನ್ನ ಹೇಳಿಕೆ ನೀಡುತ್ತಿದ್ದು, ಕಾರಣ ನನಗೆ ತಲೆಯ ಹಿಂದೆ ಹೊಡೆದು, ನನ್ನ ರೆಡ್ಮಿ ನೋಟ್-7 ಪ್ರೋ ಅ:ಕಿ: 16000=00 ನಗದು ಹಣ 2500=00 ಎಸ್.ಬಿ.ಐ ಎ.ಟಿ.ಎಮ್ ಕಾರ್ಡ, ಪೊಲೀಸ ಐ.ಡಿ ಕಾರ್ಡ ಕಸಿದುಕೊಂಡು ಹೋದ ಅಪರಿಚಿತ ಅಂದಾಜು 25 ರಿಂದ 30 ವರ್ಷ ವಯಸ್ಸಿನ ವ್ಯಕ್ತಿಯನ್ನು ಪತ್ತೆ ಹಚ್ಚಿ ಕಾನೂನು ರೀತಿಯ ಕ್ರಮ ಕೈಕೊಳ್ಳಬೇಕು. ಸದರಿ ಅಪರಿಚಿತ ವ್ಯಕ್ತಿಯನ್ನು ನೋಡಿದರೆ ಗುರುತಿಸುತ್ತೇನೆ ಅಂತಾ ಇತ್ಯಾದಿ ಕೊಟ್ಟ ಹೇಳಿಕೆ ಸಾರಾಂಶದ ಮೆಲಿಂದ ಗುನ್ನೆ ವರದಿಯಾದ ಬಗ್ಗೆ,

ಸಂಚಾರಿ ಪೊಲೀಸ್ ಠಾಣೆ-2 : ದಿನಾಂಕ 02/09/2021 ರಂದು ಮಧ್ಯ ರಾತ್ರಿ 00:30 ಗಂಟೆಗೆ ಶ್ರೀ. ವೆಂಕಟೇಶ ತಂದೆ ಸಣ್ಣಮಲ್ಲಪ್ಪಾ ಹೂಗಾರ ವಯಃ 50 ವರ್ಷ ಜಾತಿಃ ಹೂಗಾರ ಉಃ ಖಾಸಗಿ ಕೆಲಸ ಸಾಃ ಮಲ್ಲಯ್ಯ ಕಟ್ಟಾ ಗುರುಮಿಠಕಲ ತಾಃ ಗುರುಮಿಠಕಲ ಜಿಲ್ಲಾಃ ಯಾದಗೀರ ಇವರು ಪೊಲೀಸ್ ಠಾಣೆಗೆ ಹಾಜರಾಗಿ ಹೇಳಿಕೆ ಫಿರ್ಯಾದಿ ನೀಡಿದ್ದು ಸಾರಂಶವೆನೆಂದರೆ, ನನಗೆ ಶರತ ಮತ್ತು ಮೆಘನಾ ಎಂಬ ಎರಡು ಜನ ಮಕ್ಕಳಿದ್ದು, ಮಗ ಶರತ ಈತನು ಕಲಬುರಗಿಯ ಅಪ್ಪಾ ಇಂಜಿನಿಯರ ಕಾಲೇಜದಲ್ಲಿ ಬಿ.ಇ ಕೊನೆಯ ವರ್ಷದಲ್ಲಿ ಓದಿಕೊಂಡಿದ್ದನು. ಆತನಿಗೆ ಕಾಲೇಜಿಗೆ ಹೋಗಿ ಬರಲು ಪಲ್ಸರ ಮೋಟರ ಸೈಕಲ ನಂ. ಕೆಎ 33 ಡಬ್ಲೂ 4664 ನೇದ್ದು ಇರುತ್ತದೆ. ಹೀಗಿದ್ದು, ನಿನ್ನೆ ದಿನಾಂಕ 01/09/2021 ರಂದು ರಾತ್ರಿ 9:45 ಗಂಟೆ ಸುಮಾರಿಗೆ ನಮ್ಮ ಅಣ್ಣತಮ್ಮಕೀಯ ಅಳಿಯನಾದ ಕಲ್ಮೇಶ ಪೂಜಾರಿ ಈತನು ಫೋನ್ ಮಾಡಿ ಮಾಹಿತಿ ತಿಳಿಸಿದ್ದೆನೆಂದರೆ, ಈಗ ರಾತ್ರಿ 9:00 ಗಂಟೆ ಸುಮಾರಿಗೆ ಶರತ ಮತ್ತು ಆತನ ಗೆಳೆಯ ಶ್ರವಣ ತಂದೆ ಸಿದ್ದಲಿಂಗಯ್ಯ ಇವರಿಬ್ಬರೂ ಕೂಡಿಕೊಂಡು ತಮ್ಮ ಮೋಟರ ಸೈಕಲ ನಂ. ಕೆಎ 33 ಡಬ್ಲೂ 4664 ನೇದ್ದರ ಮೇಲೆ ಕಲಬುರಗಿ ನಗರದಿಂದ ಯುನಿವರ್ಸಿಟಿ ಹತ್ತೀರ ತಮ್ಮ ಗೆಳೆಯರ ಕಡೆಗೆ ಭೇಟಿಯಾಗಲು ಹೋಗುವ ಕುರಿತು ಶರತ ಈತನೆ ಮೋಟರ ಸೈಕಲ ನಡೆಯಿಸಿಕೊಂಡು ಹೋಗುವಾಗ ಯುನಿವರ್ಸಿಟಿ ಮೊದಲನೆ ಗೇಟಿನ ಹತ್ತೀರ ಒಂದು ಲಾರಿ ನಂ. ಟಿ.ಎನ್ 01 ಎ.ಎಕ್ಸ 3279 ನೇದ್ದರ ಚಾಲಕನು ತನ್ನ ಲಾರಿಯನ್ನು ಅತಿವೇಗದಿಂದ ನಡೆಯಿಸಿಕೊಂಡು ಹೋಗುತ್ತಾ ಒಮ್ಮೇಲೆ ಯಾವುದೆ ಸಿಗ್ನಲ ಹಾಕದೆ ಮತ್ತು ಸೂಚನೆಗಳು ತೊರಿಸದೆ ರೋಡಿನ ಬಲಕ್ಕೆ ತೆಗೆದುಕೊಂಡಿದಕ್ಕೆ ಶರತ ಮತ್ತು ಶ್ರವಣ ಇವರಿಬ್ಬರು ಆ ಲಾರಿಗೆ ತಾಗಿದ್ದರಿಂದ ಇಬ್ಬರ ತಲೆಯ ಭಾಗಕ್ಕೆ ಹಾಗು ಹಣೆಯ ಭಾಗಕ್ಕೆ ಭಾರಿ ಪ್ರಮಾಣದ ಗಾಯವಾಗಿ ಸ್ಧಳದಲ್ಲಿ ಶರತ ಈತನು ಮೃತ ಪಟ್ಟಿರುತ್ತಾನೆ ಎಂದು ತಮ್ಮ ಪರಿಚಯದವರಾದ ಅನೀಲ ಮೇತ್ರೆ ಮತ್ತು ಶರಣು ಚಿತಪಳ್ಳಿ ಇವರು ತಿಳಿಸಿ ಹಾಗೆ ಲಾರಿ ಚಾಲಕ ಫಿರೋಜಖಾನ ಕೂಡಾ ಇಲ್ಲಿಯೆ ಇದ್ದು ಸಹಾಯ ಮಾಡಿರುತ್ತಾನೆಂದು ತಿಳಿಸಿದ್ದು, ನಾನು ಕೂಡಾ ಸ್ಧಳಕ್ಕೆ ಬಂದು ನೋಡಿರುತ್ತೆನೆ. ಶರತ ಮತ್ತು ಶ್ರವಣ ಇವರಿಬ್ಬರನ್ನು ಕಲಬುರಗಿ ಸರಕಾರಿ ಆಸ್ಪತ್ರೆ ಕಡೆಗೆ ತೆಗೆದುಕೊಂಡು ಹೋಗುತ್ತಿರುತ್ತೆನೆ. ಶರತ ಈತನು ಮೃತ ಪಟ್ಟಿರುತ್ತಾನೆ ಬೇಗನೆ ಬರುವಂತೆ ಅಳಿಯ ಕಲ್ಮೇಶ ಈತನು ತಿಳಿಸಿದಕ್ಕೆ ನಾನು ಗಾಬರಿಗೊಂಡು ನಾನು ಮತ್ತು ನನ್ನ ಅಣ್ಣನ ಮಗನಾದ ಲಕ್ಷ್ಮಿಕಾಂತ ತಂದೆ ಮಲ್ಲಪ್ಪಾ ಇಬ್ಬರೂ ಕೂಡಿಕೊಂಡು ರಾತ್ರಿಯೆ ಕಲಬುರಗಿ ಸರಕಾರಿ ಆಸ್ಪತ್ರೆಗೆ ಬಂದು ಮಗ ಶರತ ಈತನಿಗೆ ನೋಡಲಾಗಿ ಆತನ ಹಣೆಗೆ ಮತ್ತು ತಲೆಗೆ ಭಾರಿ ರಕ್ತಗಾಯವಾಗಿ ಮೃತ ಪಟ್ಟಿದನು ಮತ್ತು ಶ್ರವಣ ಈತನು ಭಾರಿಗಾಯದಿಂದ ಬೆಹೋಶ ಸ್ಧೀತಿಯಲ್ಲಿ ಇದ್ದು, ಅಲ್ಲಿಯೆ ಇರುವ ಅಳಿಯ ಕಲ್ಮೇಶ ಹಾಗು ಘಟನೆ ಕಂಡಿರುವ ಅನೀಲ ಮೇತ್ರೆ ಮತ್ತು ಶರಣು ಚಿತಪಳ್ಳಿ ಇವರಿಗೆ ವಿಚಾರಿಸಲು ಈ ಮೇಲಿನ ವಿಷಯವನ್ನೆ ತಿಳಿಸಿ, ಅಪಘಾತ ಪಡಿಸಿದ ಲಾರಿ ಚಾಲಕನ ಹೆಸರು ಫಿರೋಜ ಖಾನ ತಂದೆ ಮೆಹೆಬೂಬಸಾಬ ಸಾಃ ಮಳಖೇಡ ಹಾ.ವಃ ಸಂತ್ರಾಸವಾಡಿ ಕಲಬುರಗಿ ಅಂತಾ ತಿಳಿಸಿದರು. ಕಾರಣ ನನ್ನ ಮಗ ಶರತ ಹಾಗು ಆತನ ಗೆಳೆಯ ಶ್ರವಣ ಇಬ್ಬರೂ ಕೂಡಿಕೊಂಡು ನಮ್ಮ ಮೋಟರ ಸೈಕಲ ನಂ. ಕೆಎ 33 ಡಬ್ಲೂ 4664 ನೇದ್ದರ ಮೇಲೆ ತನ್ನ ಗೆಳೆಯರಿಗೆ ಭೇಟಿಯಾಗುವ ಕುರಿತು ಹೋಗುತ್ತಿರುವಾಗ ರಾತ್ರಿ 9:00 ಗಂಟೆ ಸುಮಾರಿಗೆ ಸೇಡಂ ರೋಡಿನ ವಿ.ವಿ ಮೊದಲನೆ ಗೇಟ ಹತ್ತೀರ ಲಾರಿ ನಂ. ಟಿ.ಎನ್ 01 ಎ.ಎಕ್ಸ 3279 ನೇದ್ದರ ಚಾಲಕ ಫಿರೋಜ ಖಾನ ತಂದೆ ಮೆಹಬೂಬಸಾಬ ಈತನು ಅತಿವೇಗದಿಂದ ತನ್ನ ಲಾರಿಯನ್ನು ನಡೆಯಿಸಿ ಅಲಕ್ಷತನದಿಂದ ಒಮ್ಮೇಲೆ ಸೂಚನೆ ನೀಡದೆ ಬಲಕ್ಕೆ ಲಾರಿಯನ್ನು ತಿರುಗಿಸಿದಕ್ಕೆ ಮಗ ಶರತ ಮತ್ತು ಶ್ರವಣ ಇವರು ಮೋಟರ ಸೈಕಲ ಸಮೇತ ಲಾರಿಗೆ ತಾಗಿದಕ್ಕೆ ಇಬ್ಬರು ಭಾರಿಗಾಯಗೊಂಡು ನನ್ನ ಮಗನು ಮೃತ ಪಟ್ಟಿದ್ದು, ಈ ಘಟನೆಗೆ ಕಾರಣಿಭೂತನಾದ ಲಾರಿ ಚಾಲಕ ಫಿರೋಜ ಖಾನ ಈತನ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು ವಿಷಯವನ್ನು ತಿಳಿದುಕೊಂಡು ಫಿರ್ಯಾದಿ ನೀಡಲು ಸ್ವಲ್ಪ ವಿಳಂಬವಾಗಿದ್ದು ಇರುತ್ತದೆ ಅಂತಾ ಫಿರ್ಯಾದಿ ಹೇಳಿಕೆ ಸಾರಂಶದ ಮೇಲಿಂದ ಗುನ್ನೆ ವರದಿ ಬಗ್ಗೆ,

ಇತ್ತೀಚಿನ ನವೀಕರಣ​ : 02-09-2021 01:37 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080