Feedback / Suggestions

ಸಂಚಾರಿ ಪೊಲೀಸ್‌ ಠಾಣೆ -2 :-  ದಿನಾಂಕ 02-08-2022 ರಂದು ಮಧ್ಯಾಹ್ನ ೨:೧೫ ಗಂಟೆಗೆ ಮೇಟ್ರೊಪ್ಲಸ್ ಆಸ್ಪತ್ರೆಯಿಂದ ಫೋನ್ ಮಾಡಿ ಮಾಹಿತಿ ತಿಳಿಸಿದ್ದೆನೆಂದರೆ, ಸಂತೋಷ ತಂದೆ ಗುರುಬಸಪ್ಪಾ,ಅಶ್ವಿನಿ ತಂದೆ ಸಂತೋಷಕುಮಾರ ನಾಗಾದಿ ಮತ್ತು ನಾಗವೇಣಿ ತಂದೆ ಸಂತೋಷಕುಮಾರ ,ಇವರುಗಳ ಆರ್.ಟಿ.ಎ ಎಮ್.ಎಲ್.ಸಿ ವಸೂಲಾಗಿರುತ್ತದೆ ಅಂತಾ ತಿಳಿಸಿದಕ್ಕೆ ನಾನು ಕೂಡಲೆ ಮೇಟ್ರೊಪ್ಲಸ್  ಆಸ್ಪತ್ರೆಗೆ ಭೆಟಿಕೊಟ್ಟು ಮೇಲಿನ ಗಾಯಾಳುದಾರರ ಎಮ್.ಎಲ್.ಸಿ ಪಡೆದುಕೊಂಡು ವಿಚಾರಿಸಿ ಇವರಲ್ಲಿ ಸಂತೋಷಕುಮಾರ ತಂದೆ ಗುರುಬಸಪ್ಪಾ ಇವರು ಹೇಳಿಕೆ ಫಿರ್ಯಾದಿ ನೀಡಿದ್ದೆನೆಂದರೆ, ಇಂದು ದಿನಾಂಕ ೦೨/೦೮/೨೦೨೨ ರಂದು ನಾಗರಪಂಚಮಿ ಹಬ್ಬ ಇರುವುದರಿಂದ ಮತ್ತು ಫಿರ್ಯಾದಿದಾರರ ಸ್ವಂತ ಊರು ಶರಣಸಿರಸಗಿ ಗ್ರಾಮವಿದ್ದು, ಗ್ರಾಮದ ಹೊಲದಲ್ಲಿ ದೇವರ ಗುಡಿ ಮತ್ತು ನಾಗದೇವತೆ ಮೂರ್ತಿ ಇರುವುದರಿಂದ ಪೂಜೆ ಮಾಡುವ ಕುರಿತು ತಮ್ಮ ತಮ್ಮನ ಮೋಟರ ಸೈಕಲ ನಂ. ಕೆಎ ೩೨ ಇ.ವಾಯಿ ೮೦೭೩ ಇದರ ಮೇಲೆ ಫಿರ್ಯಾದಿ, ಫಿರ್ಯಾದಿಯ ಇಬ್ಬರು ಮಕ್ಕಳಾದ ಅಶ್ವಿನಿ ಮತ್ತು ನಾಗವೇಣಿ ಕೂಡಿಕೊಂಡು ಹೋಗುವಾಗ ಬೆಳಿಗ್ಗೆ ೯:೪೫ ಗಂಟೆ ಸುಮಾರಿಗೆ ಶರಣಸಿರಸಗಿ ಗ್ರಾಮದ ಹಳ್ಳದ (ಬ್ರಿಡ್ಹದ) ಹತ್ತ ರ ರೋಡಿನ ಎಡಬದಿಯಿಂದ ಹೋಗುತ್ತಿರುವಾಗ ಅದೆ ವೇಳೆಗೆ ಎದುರುಗಡೆ ರೋಡಿನಿಂದ ಒಂದು ಸಿಟಿ ೧೦೦ ಮೋಟರ ಸೈಕಲ ನಂ. ಕೆಎ ೩೨ ಹೆಚ್.ಬಿ ೭೪೬೯ ನೇದ್ದರ ಸವಾರನು ಭಾರಿ ಅತಿವೇಗದಿಂದ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ತನ್ನ ಮುಂದೆ ಹೊಗುತ್ತಿರುವ ಯಾವುದೊ ಕಾರಿಗೆ ಓವರಟೇಕ ಮಾಡಲು ಹೋಗಿ ಫಿರ್ಯಾದಿಯ ರೋಡಿನ ಕಡೆಗೆ ಹೋಗಿ ಮೋಟರ ಸೈಕಲಗೆ ಡಿಕ್ಕಿ ಹೊಡೆದ ಪರಿಣಾಮ ಎರಡು ಮೋಟರ ಸೈಕಲದವರು ರೋಡಿಗೆ ಬಿದ್ದಿದ್ದರಿಂದ ಫಿರ್ಯಾದಿಗೆ ಮತ್ತು ನಾಗವೇಣಿಗೆ ಭಾರಿ ಪ್ರಮಾಣದ ಗಾಯ ಮತ್ತು ರಕ್ತಗಾಯವಾಗಿದ್ದು, ಅಶ್ವಿನಿ ಇವಳಿಗೆ ಅಲ್ಲಲ್ಲಿ ರಕ್ತಗಾಯವಾಗಿದ್ದು, ಅಪಘಾತ ಪಡಿಸಿದ ಮೋಟರ ಸೈಕಲ ಸವಾರನು ಅಪಘಾತದ ನಂತರ ಅಲ್ಲಿಂದ ಓಡಿ ಹೋಗಿರುತ್ತಾನೆ ಆತನ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು ಅಂತಾ ಇತ್ಯಾದಿ ಕೊಟ್ಟ ಫಿರ್ಯಾದಿ ಸಾರಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

ವಿಶ್ವವಿದ್ಯಾಲಯ ಪೊಲೀಸ್‌ ಠಾಣೆ :- ದಿನಾಂಕ:  02-08-2022  ರಂದು ೦೧:೩೦ ರಿಂದ ೦೩೦೦ ಎ. ಎಮ ಮಾಲಗತ್ತಿ ರೋಡ ಸೋನಿಯಾ ಗಾಂಧಿ ಕಾಲೋನಿಯ ಹತ್ತಿರ ಆರೋಪಿತರು ಎಚರ ಲಾರಿ ನಂ: ಎಮ.ಹೆಚ್ ೧೦ ಝಡ್ ೦೫೫೯  ಅ:ಕಿ: ೨,೦೦,೦೦೦/- ನೇದ್ದರಲ್ಲಿ ೧೫ ಆಕಳು ಅ:ಕಿ: ೩೦.೦೦೦/-, ೭ ಹೋರಿಗಳು ಅ:ಕಿ: ೨೧೦೦೦/- ಹಾಗೂ ೯ ಎಮ್ಮೆಗಳು ಅ:ಕಿ: ೧೮೦೦೦/- ನೇದ್ದವುಗಳನ್ನು ಅತ್ಯಂತ ಚಿತ್ರಹಿಂಸೆಯಿಂದ ಕ್ರೂರವಾಗಿ ಸಾಗಾಣಿಕೆ ಮಾಡುತ್ತಿದ್ದಾಗ ದಾಳಿ ಮಾಡಿ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ರೋಜಾ ಪೊಲೀಸ್‌ ಠಾಣೆ :- ನುಜಹತ್ ಸುಲ್ತಾನ್ ಗಂಡ ಮಹ್ದದ್ ಮುಬೀನ್ ವಯಾ: ೨೯, ದಿನಾಂಕ ೦೮/೦೧/೨೦೨೨ ಸಮಯ ೦೫:೦೦ ಪಿ ಎಮ್ ಗೆ ನನ್ನ ಮೋಟಾರ ಸೈಕಲಾದ್ ಟಿ ವಿ ಎಸ್ ಜುಪೀಟರ್ ಕೆ ಎ. ೩೨ ಇ ಡಬ್ಲು ೬೬೩೦ ಅ ಕಿ=೧೫೦೦೦ ಗಾಡಿಯನ್ನು ನಮ್ಮ ಎರಿಯಾದ ೧)ನದೀಮ್ ತಂದೆ ಮಹಿಬೂಬ್ ಅಲಿ ಹಾಗೂ೨)ನಯೀಮ್ ತಂದೆ ಮಹಿಬೂಬ್ ಅಲಿ ಇಬ್ಬರೂ ಕಳ್ಳತನ ಮಾಡಿದ್ದಾರೆ ಅಂತಾ ದಿನಾಂಕ ೦೨/೦೮/೨೦೨೨ ರಂದು ೧೮:೨೦ ಗಂಟೆಗೆ ಠಾಣೆಗೆ ಬಂದು ದೂರು ನೀಡಿದ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಚೌಕ ಪೊಲೀಸ್‌ ಠಾಣೆ :-  ದಿನಾಂಕ:02-08-2022  ರಂದು ಬೆಳಿಗ್ಗೆ ೬.೦೦ ಗಂಟೆಗೆ ಘಟನಾ ಸ್ಥಳವಾದ ಫಿರ್ಯಾದಿದಾರಳ ಮನೆಯಲ್ಲಿ ಲಿಖಿತ ದೂರು ಸ್ವೀಕೃತವಾಗಿರುತ್ತದೆ. ಸದರ ಲಿಖಿತ ದೂರಿನೊಂದಿಗೆ ಠಾಣೆಗೆ ಬೆಳಿಗ್ಗೆ ೬.೩೦ ಗಂಟೆಗೆ ಬಂದು ಲಿಖಿತ ದೂರಿನ ಸಾರಾಂಶ ಈ ಕೆಳಗಿನಂತೆ ಇರುತ್ತದೆ.  ನಾನು ಶಿಲ್ಪಾ ಗಂಡ ಶಿವಶರಣಪ್ಪಾ ತೋರಣಗಿ ವ:೨೩ ವರ್ಷ ಉ:ಮಹಾಲಕ್ಷ್ಮಿ ಡಿಸ್ಟ್ರಿಬ್ಯೂಟರ & ಮನೆಯ ಕೆಲಸ ಜಾ:ಲಿಂಗಾಯತ ಸಾ:ಮ.ನಂ.೯-೬೧೬/೧೦೯ ಪ್ಲಾಟ ನಂ.೯೭ ಗಂಧಿಗುಡಿ ಲೇಔಟ ಶಹಬಜಾರ ಕಲಬುರಗಿ ಈ ಮೂಲಕ ತಮಗೆ ದೂರು ಕೊಡುವುದೇನೆಂದರೆ ಶಿವಶರಣಪ್ಪಾ ತಂದೆ ನಾಗಪ್ಪಾ ತೋರಣಗಿ ವ:೩೨ ವರ್ಷ ಇವರು ನನ್ನ ಗಂಡನಾಗಿದ್ದಾರೆ. ನನಗೆ ದಿನಾಂಕ:೦೪-೦೫-೨೦೨೦ ರಂದು ಮದುವೆಯಾಗಿದ್ದು  ಸದ್ಯ ಮಕ್ಕಳಾಗಿರುವುದಿಲ್ಲಾ. ನನ್ನ ಗಂಡ ಈ ಮೊದಲು ಪೆಟ್ರೋಲ ಪಂಪನಲ್ಲಿ ಕೆಲಸ ಮಾಡುತ್ತಿದ್ದು, ಈಗ ೫-೬ ತಿಂಗಳು ಹಿಂದೆ ಕೆಲಸ ಬಿಟ್ಟು ಕುಡಿತ ಚಟಕ್ಕೆ ಬಲಿಯಾಗಿದ್ದರು. ನಮ್ಮ ಅತ್ತೆ ಮಾವನವರಿಗೆ ಕುಡಿಯುದ್ದಕ್ಕೆ ಹಣ ಕೊಡುವಂತೆ ಕೇಳುತ್ತಿದ್ದು ಅವರು ಕುಡಿಯಲ್ಲಿಕೆ ಹಣ ಕೊಡುವುದಿಲ್ಲ ಅಂತ ಹೇಳಿದಾಗ ಅವರೊಂದಿಗೆ ಆಗಾಗಾ ಜಗಳ ಮಾಡುತ್ತಾ ಬಂದಿರುತ್ತಾರೆ. ಕುಡಿಯಲಿಕೆ ಹಣ ಕೊಟ್ಟಾಗ ಸುಮ್ಮನಾಗುತ್ತಿದ್ದರು. ಈಗ ೬ ತಿಂಗಳ ಹಿಂದೆ ನನ್ನ ಗಂಡ ಕುಡಿದ ಅಮಲಿನಲ್ಲಿ ಎಕ್ಸಿಡೆಂಟ ಆಗಿ ಎಡಗೈ ಮುರಿದಿರುತ್ತದೆ. ಅಲ್ಲದೆ ಈಗ ಒಂದು ವಾರದ ಹಿಂದೆ ತವರು ಮನೆಯಲ್ಲಿದ್ದಾಗ ನನ್ನ ಗಂಡ ಶಿವಶರಣಪ್ಪ ಇವರು ಅವರ ತಂದೆ ತಾಯಿಗೆ ಸರಾಯಿ ಕುಡಿಯಲು ಹಣ ಕೇಳಿದ್ದು ಅವರು ಸರಾಯಿ ಕುಡಿಯಲು ಹಣ ಕೊಡುವುದಿಲ್ಲಾ ಅಂತ ಹೇಳಿದ್ದಕ್ಕೆ ಮನೆಯಲ್ಲಿದ್ದ ಹಾಸಿಗೆ & ಅವರ ಉಟ್ಟುಕೊಳ್ಳುವ ಬಟ್ಟೆಯನ್ನು ಬೆಂಕಿ ಹಚ್ಚಿ ಸುಟ್ಟಿರುತ್ತಾರೆ. ನನ್ನ ಮೈಯಲ್ಲಿ ಆರಾಮ ಇಲ್ಲದ ಕಾರಣ & ನಾಗರ ಪಂಚಮಿಯ ಹಬ್ಬದ ನಿಮಿತ್ಯವಾಗಿ ಈಗ ೧೫ ದಿವಸಗಳ ಹಿಂದೆ ಪಕ್ಕದಲ್ಲಿರುವ ಕಬಾಡಗಲ್ಲಿ ವಾಸವಿರುವ ನಮ್ಮ ತಾಯಿ ಜಗದೇವಿ ಹತ್ತಿರವೇ ಉಳಿದುಕೊಂಡಿರುತ್ತೇನೆ.ನಿನ್ನೆ ದಿನಾಂಕ:೦೧-೦೮-೨೦೨೨ ರಂದು ರಾತ್ರಿ ೧೧.೦೦ ಗಂಡೆ ಸುಮಾರಿಗೆ ನಾನು ಮತ್ತು ನಮ್ಮ ತಾಯಿ, ನಮ್ಮ ಅಕ್ಕ ಪುಷ್ಟಾ ಎಲ್ಲರೂ ಮನೆಯಲ್ಲಿದ್ದಾಗ ನಮ್ಮ ಅತ್ತೆ ಮಾವನವರ ಮನೆ ಹತ್ತಿರ ವಾಸವಿರುದ ಮಾಯಾದೇವಿ ಔಂಟಗಿ ಇವರು ನನ್ನ ಮೋಬೈಲಿಗೆ ಫೋನ ಮಾಡಿ ಗಂಡನ ಮನೆಗೆ ಬರುವಂತೆ ತಿಳಿಸಿದರು. ನಾನು & ನಮ್ಮ ತಾಯಿ ಅಕ್ಕ ಎಲ್ಲರೂ ಕೂಡಿಕೊಂಡು ಗಂಡನ ಮನೆಗೆ ಬಂದೇವು. ಆನರೂ ಜಮಾಯಿಸಿದರು. ವಿಚಾರಿಸಲಾಗಿ ನನ್ನ ಗಂಡ ಶಿವಶರಣಪ್ಪನವರು ನಾವು ವಾಸವಾಗಿರುವ ಮನೆಯಲ್ಲಿ ನೇಣು ಹಾಕಿಕೊಂಡು ಸತ್ತಿರುತ್ತಾರೆ ಎಂದು ಗೊತ್ತಾಗಿ ಮನೆಯಲ್ಲಿ ಬಂದು ನೋಡಲಾಗಿ ನನ್ನ ಗಂಡ ಗಂಡನಿಗೆ ನೆಲದ ಮೇಲೆ ಅಂಗಾತವಾಗಿ ಮಲಗಿಸಿದ್ದು ನನ್ನಗಂಡನ ಶವದ ಹತ್ತಿರ ನಮ್ಮ ಮಾವ ನಾಗಪ್ಪಾ ಅತ್ತೆ ವಿಜಯಲಕ್ಷ್ಮಿ ಮತ್ತು ಮಾಯಾದೇವಿ, ಓಣಿಯ ಇತರೆ ಜನರೂ ಇದ್ದರು. ನನ್ನ ಗಂಡನ ಕುತ್ತಿಗೆ ನೋಡಲಾಗಿ ಕುತ್ತಿಗೆಯ ಕೆಳಭಾಗದಲ್ಲಿ ಕಂದು ಗಟ್ಟಿದ ಗಾಯಗಳು ಕಂಡು ಬಂದವು. ನನ್ನ ಗಂಡ ಹೇಗೆ ನೇಣು ಹಾಕಿಕೊಂಡು ವಿಚಾರಿಸಿದಾಗ ನನ್ನ ಮಾವ ನಾಗಪ್ಪನವರು ನನಗೆ & ನನ್ನ ತಾಯಿ, ಅಕ್ಕ ಎಲ್ಲರ ಸಮಕ್ಷಮ ತಿಳಿಸಿದೇನೆಂದರೆ ನನ್ನ ಗಂಡ ಶಿವಶರಣಪ್ಪನವರು ರಾತ್ರಿ ೯-೪೫ ಗಂಟೆ ಸುಮಾರಿಗೆ ಕುಡಿದ ಅಮಲಿನಲ್ಲಿ ಮನೆಗೆ ಬಂದು ಮನೆಯ ಎದುರುಗಡೆ ನಿಶೆಯಲ್ಲಿ ಚಿರಾಡಿ ಮನೆಯ ಒಳಗಡೆ ಬಂದು ಮನೆ ಬಾಗಿಲು ಮುಂದಕ್ಕೆ ಮಾಡಿದ್ದು ಮಗನಿಗೆ ಊಟ ಕೊಡಬೇಕೆಂದು ಅಂದಾಜು ೧೦ ನಿಮಿಷದ ನಂತರ ಅವನ ರೂಮಿಗೆ ಹೋದಾಗ ಅವನು ಫ್ಯಾನಿನ ಕೊಂಡಿಗೆ ಹಗ್ಗದ ಸಹಾಯದಿಂದ ನೇಣು ಹಾಕಿಕೊಂಡು ನೇತಾಡುತ್ತಿದ್ದನು. ನೋಡಿ ಮನೆಯಲ್ಲಿ ಹೋಗಿ ಚಾಕು ತೆಗೆದುಕೊಂಡು ಒಂದು ಹಗ್ಗ ಕತ್ತರಿಸಿ ನೆಲಕ್ಕೆ ಮಲಗಿಸಿದಾಗ ಇನ್ನು ಸ್ವಲ್ಪ ಜೀವಂತವಿದನು., ಅವನಿಗೆ ಆಸ್ಪತ್ರೆಗೆ ಒಯ್ಯಬೆಕೆಂದು ಮನೆಯ ಹತ್ತಿರ ವಾಸವಿರುವ ಸ್ವಾಮಿ ಆಟೋ ಚಾಲಕನಿಗೆ ಕರಿಯಬೇಕೆಂದು ಅವನ ಮನೆಯ ಹತ್ತಿರ ಹೋದಾಗ ಅವನು ಮನೆಯಲ್ಲಿ ಇರದ ಕಾರಣ ನಮ್ಮ ಪರಿಚಯದ ಮಾಂತಪ್ಪ ಇವರಿಗೆ ಫೋನ ಮಾಡಿ ಮನೆಗೆ ಬರಲು ತಿಳಿಸಿ ಮನೆಗೆ ಬಂದು ನೋಡಲಾಗಿ ನನ್ನ ಮಗ ಉಸಿರು ನೋಡಲಾಗಿ & ಕೈ ಕಾಲು ಬಡೆಯದೆ ಹಾಗೇ ಮಲಗಿದ್ದು ನೋಡಿ ಅವನು ಸತ್ತಿರುತ್ತಾನೆ ಎಂದು ಗೊತ್ತಾಯ್ತು ಎಂದು ತಿಳಿಸಿದರು. ನನ್ನ ಗಂಡ ಹೇಗೆ ಸತ್ತಿರುತ್ತಾನೆ ಎಂದು ನನಗೆ ಗೊತ್ತಿಲ್ಲಾ. ನನ್ನ ಗಂಡ ಶಿವಶರಣಪ್ಪ ಇವರು ಕುಡಿತ ಚಟಕ್ಕೆ ಬಲಿಯಾಗಿ ಏನು ಕೆಲಸ ಮಾಡದೇ ಕುಡಿದ ಅಮಲಿನಲ್ಲಿ ತಿರುಗಾಡುತ್ತಿದ್ದು ಕುಡಿದ ನಶೆಯಲ್ಲಿ ನನ್ನ ಗಂಡ ನೇಣು ಹಾಕಿಕೊಂಡು ಮೃತಪಟ್ಟಿರುತ್ತಾರೆ. ನನ್ನ ಗಂಡನ ಸಾವಿನಲ್ಲಿ ಸಂಶಯ ಇರುತ್ತದೆ. ಈ ಬಗ್ಗೆ ಮುಂದಿನ ಕಾನೂನು ಕ್ರಮ ಜರೂಗಿಸಿ ಅಂತ್ಯಕ್ರಿಯೆ ಕುರಿತು ನನ್ನ ಗಂಡನ ಶವ ನನಗೆ ಒಪ್ಪಿಸಲು ಕೋರುತ್ತೇನೆ ಅಂತಾ ಕೊಟ್ಟ ಕನ್ನಡದಲ್ಲಿ ಬರೆದ ಲಿಖಿತ ಫಿರ್ಯಾದಿ ದೂರು ಅರ್ಜಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಬ್ರಹ್ಮಪೂರ ಪೊಲೀಸ್‌ ಠಾಣೆ :-  ದಿನಾಂಕ 02-08-2022   ರಂದು ೧-೩೦   ಪಿ.ಎಂಕ್ಕೆ ಶ್ರೀ ಪಿರ್ಯಾದಿದಾರರಾದ ಶ್ರೀ ಮಹ್ಮದ ಫಯಾಜ್ ತಂದೆ ಮಹ್ಮದ ಇಕ್ಬಾಲ ಹಮೀದ್ ವಯಸ್ಸು ೩೪ ವರ್ಷ  ಜಾತಿ;ಮುಸ್ಲಿಂ  ಉ; ಸೈಟ್ ಇಂಜನಿಯರ್ ಸಾ; ಆಸರ ಮೊಹಲ್ಲಾ ಯಾದಗೀರ ಹಾ;ವ; ಪ್ಲಾಟ ನಂ-೭ ಹನುಮಾನ ಟೆಂಪಲ್ ರೋಡ ಬಸವ ಪಿ.ಯು ಕಾಲೇಜ್ ಹಿಂದುಗಡೆ ಜಯ ನಗರ ಸೇಡಂ ರೋಡ ಕಲಬುರಗಿ ರವರು ಠಾಣೆಗೆ ಹಾಜರಾಗಿ ಫಿರ್ಯಾದಿ ಸಲ್ಲಿಸಿದ್ದ ಸಾರಾಂಶವೆನೆಂದರೆ, ೨೦೧೯ ನೇ ಸಾಲಿನಿಂದ ಸಿಟಿ ಬಸ್ಸ ಸ್ಟ್ಯಾಂಡ್ ಕಟ್ಟಡದ ಕಾಮಗಾರಿ ಕೆಲಸ ನಡೆದಿದ್ದು, ನಾನು ಅಲ್ಲಿ ಸೈಟ್ ಇಂಜನಿಯರ್ ನಾಗಿ ಕೆಲಸ ಮಾಡುತ್ತೇನೆ. ಅಲ್ಲಿ  ಕಾರ್ಮಿಕರು ಕೆಲಸ ಮಾಡುವ ಸಂದರ್ಭದಲ್ಲಿ ನಾನು ಸ್ಥಳದಲ್ಲಿ ಇರುತ್ತೇನೆ. ನಿನ್ನೆ ದಿನಾಂಕ ೦೧/೦೮/೨೦೨೨ ರಂದು ಬೆಳಗ್ಗೆ ೧೦-೦೦ ಗಂಟೆಯಿಂದ ೧-೦೦ ಗಂಟೆಯವರೆಗೆ ನಾನು ಸಿಟಿ ಬಸ್ಸ್ ಸ್ಟ್ಯಾಂಡ್ ದಲ್ಲಿ ಇದ್ದು, ಮದ್ಯಾಹ್ನದ ನಂತರ ನಾನು ಬೇರೆ ಕೆಲಸಕ್ಕೆ ಜೇವರ್ಗಿಗೆ ಹೋಗಿ ರಾತ್ರಿ ೮-೦೦ ಗಂಟೆಯ ಸುಮಾರಿಗೆ ಮರಳಿ ಕಲಬುರಗಿಗೆ ಬಂದು ಮನೆಯಲ್ಲಿ ಉಳಿದುಕೊಂಡೆನು. ಇಂದು ದಿನಾಂಕ ೦೨/೦೮/೨೦೨೨  ರಂದು ಬೆಳಗ್ಗೆ ೮-೦೦ ಗಂಟೆಯ ಸುಮಾರಿಗೆ ನಾನು ಮನೆಯಲ್ಲಿದ್ದಾಗ ನಮ್ಮ ಕಟ್ಟಡದ ಕಾಮಗಾರಿ ಕೆಲಸ ಮಾಡುವ ಸೆಂಟ್ರಿಂಗ್ ಕಾಂಟ್ಯಾಕ್ಟರ್‌ನಾದ ಜಗನ್ ಇವರು ನನಗೆ ಪೋನ ಮಾಡಿ ಸಿಟಿ ಬಸ್ಸ್ ಸ್ಟ್ಯಾಂಡ್ ಹತ್ತಿರ ಎಸ್.ಬಿ.ಐ ಬ್ಯಾಂಕಿನ ಎದುರುಗಡೆ ಗೋಡೆಯ ಮೇಲಿಂದ ಯಾವುದೋ ಒಬ್ಬ ವ್ಯಕ್ತಿ ಬಿದ್ದು, ಮೃತಪಟ್ಟಿರುತ್ತಾನೆ. ಅಂತಾ ತಿಳಿಸಿದನು. ನಾನು ಕೂಡಲೇ ಸ್ಥಳಕ್ಕೆ ಬಂದು ನೋಡಲಾಗಿ ಅಲ್ಲಿ ಒಬ್ಬ ಅಪರಿಚಿತ ವ್ಯಕ್ತಿಯ ಮೃತ ದೇಹವಿದ್ದು, ನೋಡಲಾಗಿ ಎಸ್.ಬಿ.ಐ ಬ್ಯಾಂಕ್ ಎದುರುಗಡೆ ಇರುವ ಗೋಡೆಯ ಮೇಲಿಂದ ಬಿದ್ದು ಮೃತಪಟ್ಟಂತೆ ಕಂಡು ಬರುತ್ತದೆ. ಸದರಿ ವ್ಯಕ್ತಿಯು ಸುಮಾರು ಅಂದಾಜು ೪೦ ರಿಂದ ೪೫ ವರ್ಷ ವಯಸ್ಸಿನವನಿದ್ದು, ಸದೃಡವಾದ ಮೈಕಟ್ಟು ದುಂಡು ಮುಖ, ಗೋದಿ ಮೈಬಣ್ಣ, ತಲೆಯಲ್ಲಿ ಕಪ್ಪು ಕೂದಲು, ದಪ್ಪ ಮೂಗು, ಹೊಂದಿರುತ್ತಾನೆ. ಸದರಿಯವನ ಮೈಮೆಲೆ ೧) ಒಂದು ಬಿಳಿ ಬಣ್ಣದ ಲೈನಿಂಗ್ ಉಳ್ಳ ಪುಲ್ ಶರ್ಟ, ೨) ಲೈಟ್ ಗ್ರೇ ಕಲರ್ ಪ್ಯಾಂಟ್ ೩) /ಚಾಕಲೇಟ್ ಬಣ್ಣದ ಹಾಪ್ ಬನಿಯಾನ್ ೪) ಚಾಕಲೇಟ್ ಬಣ್ಣದ ಅಂಡರವೀಯರ್ ಇರುತ್ತದೆ. ಸದರಿ ವ್ಯಕ್ತಿ ದಿನಾಂಕ ೦೧/೦೮/೨೦೨೨ ರ ರಾತ್ರಿ ೮-೦೦ ಗಂಟೆಯಿಂದ ದಿನಾಂಕ ೦೨/೦೮/೨೦೨೨ ರ ಬೆಳಗಿನ ಜಾವ ೫-೦೦ ಗಂಟೆಯ ಮದ್ಯದ ಅವಧಿಯಲ್ಲಿ ಜರುಗಿರಬಹುದು. ಸದರಿ ಮೃತ ವ್ಯಕ್ತಿಯ ಮೇಲುಗಡೆಯಿಂದ ಆಕಸ್ಮಾತ ಆಗಿ ಬಿದ್ದಿದ್ದರಿಂದ, ತಲೆಯ ಹಿಂಬಾಗ ಭಾರಿ  ರಕ್ತಗಾಯವಾಗಿರುತ್ತದೆ. ಸದರಿ ವ್ಯಕ್ತಿಯು ಎಸ್.ಬಿ.ಐ ಬ್ಯಾಂಕ್ ಎದುರುಗಡೆ ಗೋಡೆಯ ಮೇಲಿಂದ ಬಿದ್ದು, ಮೃತಪಟ್ಟಿದ್ದು, ಇರುತ್ತದೆ.  ಈ ಬಗ್ಗೆ ಸೂಕ್ತ ಕಾನೂನು ಕ್ರಮ  ಜರುಗಿಸಬೇಕು. ಅಂತಾ ಕೊಟ್ಟ ಲಿಖಿತ ಪಿರ್ಯಾದಿ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

Last Updated: 05-08-2022 06:31 PM Updated By: ADMIN


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

 • Copyright Policy
 • Hyperlinking Policy
 • Security Policy
 • Terms & Conditions
 • Privacy Policy
 • Help
 • Screen Reader Access
 • Guidelines

Visitors

 • Last Updated​ :
 • Visitors Counter :
 • Version :
CONTENT OWNED AND MAINTAINED BY : Kalaburagi City Police
Designed, Developed and Hosted by: Center for e-Governance - Web Portal, Government of Karnataka © 2024, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080