ಅಭಿಪ್ರಾಯ / ಸಲಹೆಗಳು

ವಿಶ್ವವಿದ್ಯಾಲಯ ಪೊಲೀಸ್ ಠಾಣೆ :- ದಿನಾಂಕ 02-07-2022 ರಂದು ೫.೩೦ ಪಿಎಮ್ ದಿಂದ ೬.೩೦ ಪಿ.ಎಮ್  ಸುಮಾರಿಗೆ ಸದರಿ ಆರೋಪಿಯು ಮಾಲಗತ್ತಿ ಸೀಮೆಯ ಎಮ್.ಎ.ಎಮ್ ಗಾರ್ಡನ್ ಹತ್ತಿರದ ನ್ಯಾಶನಲ್ ಬಿ.ಎಡ್ ಕಾಲೇಜ್ ಎದುರು ಒಂದು ಶೆಡ್ ದಲ್ಲಿ ಅಕ್ರಮವಾಗಿ ಒಟ್ಟು ೨೯ ಅ.ಕಿ ೨,೫೯,೦೦೦/- ರೂ. ಕಿಮ್ಮತ್ತಿನ ವಿವಿಧ ಬಣ್ಣದ ಗೋವುಗಳನ್ನು ಸಾಗಾಟ ಮಾಡಲು ಕಟ್ಟಿದ ಬಗ್ಗೆ ಮಾಹಿತಿ ಅಂತಾ ಇತ್ಯದಿ ಅಪರಾಧ ಇರುತ್ತದೆ

 

ರಾಘವೇಂದ್ರ ನಗರ ಪೊಲೀಸ ಠಾಣೆ  :-   ದಿನಾಂಕಃ 02-07-2022  ರಂದು ೧.೦೦ ಪಿ.ಎಮ್ ಕ್ಕೆ ಶ್ರೀಮತಿ ಮಂಜುಳಾ ಗಂಡ ರವಿ ಪೂಜಾರಿ ವಯಃ ೨೯ ವರ್ಷ ಜಾಃ ಕುರುಬ ಉಃ ಅಡುಗೆ ಕೆಲಸ  ಸಾಃ ಬಾಳೆ ಲೇಔಟ ಕಲಬುರಗಿ ರವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಗಣಿಕೀಕೃತ ಮಾಡಿಸಿದ ದೂರು ನೀಡಿದರ ಸಾರಾಂಶವೆನೆಂದರೆ.ಬಾಳೆ ಲೇಔಟದ ನಿವಾಸಿತಳಿದ್ದು ನಾನು ತಿಮ್ಮಾಪೂರ ಸರ್ಕಲ್ ಹತ್ತಿರ ಇರುವ ಪಿಜಿಯಲ್ಲಿ ಅಡುಗೆ ಕೆಲಸ ಮಾಡಿಕೊಂಡು ವಾಸವಾಗಿರುತ್ತೇನೆ ನನಗೆ ಮೂರು ಜನ ಮಕ್ಕಳು ಇರುತ್ತಾರೆ ಅದರಲ್ಲಿ ಇಬ್ಬರು ಹುಡಗರು ಹಾಗೂ ಒಬ್ಬಳು ಹೆಣ್ಣು ಮಗಳು ಇರುತ್ತಾರೆ. ನನ್ನ ಎರಡನೆ ಮಗನಾದ ರಘು ಇತನು ಮಿಲಿನಿಯಂ ಕಾಲೇಜನಲ್ಲಿ ಪಿಯುಸಿ ಪ್ರಥಮ ವರ್ಗದಲ್ಲಿ ಅದ್ಯಾಯನ ಮಾಡುತ್ತಾ ಬಂದಿರುತ್ತಾನೆ. ಹೀಗೆ ಇರುವಾಗ ದಿನಾಂಕಃ ೦೧.೦೭.೨೦೨೨ ರಂದು ಬೆಳಿಗ್ಗೆ ೦೯.೦೦ ಗಂಟೆಯ ಸುಮಾರಿಗೆ ನಾನು ಕೆಲಸದ ನಿಮಿತ್ಯ ಹೋಗಿದ್ದು ನಂತರ ಮದ್ಯಾಹ್ನ ೧೨.೩೦ ಗಂಟೆಯ ಸುಮಾರಿಗೆ ನನ್ನ ಮಗಳಾದ ಪ್ರಿಯಾಂಕ ಇವಳು ಪೋನ್ ಮಾಡಿ ತಿಳಿಸಿದೆನೆಂದರೆ ರಘು ಇತನು ಬೆಳಿಗ್ಗೆ ೧೦.೩೦ ಗಂಟೆಯ ಸುಮಾರಿಗೆ ಮನೆ ಬಿಟ್ಟು ಹೋಗಿದ್ದು ಮರಳಿ ೧.೦೦ ಗಂಟೆಯ ಸುಮಾರಿಗೆ ಮನೆಗೆ ಬರುತ್ತೇನೆ ಅಂತ ಹೇಳಿ ಹೋಗಿರುತ್ತಾನೆ ಮಮ್ಮಿ ಅಂತ ಹೇಳಿದ್ದು ಇರುತ್ತದೆ.  ನಂತರ ನಾನು ಸಾಯಾಂಕಾಲ ೬.೩೦ ಗಂಟೆಯ ಸುಮಾರಿಗೆ ಮನೆಗೆ ಬಂದಿದ್ದು ಆದ್ದರೂ ಕೂಡ ನನ್ನ ಮಗನ ಮನೆಗೆ ಬಂದಿರುವದಿಲ್ಲ ನಾನು ಗಾಬರಿಗೊಂಡು ನಾನು ಹಾಗೂ ನನ್ನ ಮಗಳು ಕೂಡಿಕೊಂಡು ಕಲಬುರಗಿ ನಗರದ ತುಂಬಾ ಹಾಗೂ ನಮ್ಮ ಸಂಬಂದಿಕರ ಕಡೆ ಹುಡಕಾಡಿದ್ದು ಇಲ್ಲಿಯವರೆಗೆ ಸಿಕ್ಕಿರುವದಿಲ್ಲ.  ದಿನಾಂಕಃ ೦೧.೦೭.೨೦೨೨ ರಂದು ಬೆಳಿಗ್ಗೆ ೧೦.೩೦ ಗಂಟೆಯ ಸುಮಾರಿಗೆ ನನ್ನ ಮಗನಾದ ರಘ ತಂದೆ ರವಿ ಪೂಜಾರಿ ಈತನು ಮನೆಯಿಂದ ಹೊರಗಡೆ  ಹೋದ ಸಮಯದಲ್ಲಿ ಯಾರೂ ಅಪರಿಚಿತರು ಯಾವುದೂ ಉದ್ದೇಶದಿಂದ ಅಪಹರಣ ಮಾಡಿಕೊಂಡು ಹೋಗಿರುತ್ತಾರೆ. ಕಾರಣ ನನ್ನ ಮಗನಾದ ರಘು ತಂದೆ ರವಿ ಪೂಜಾರಿ ಈತನಿಗೆ ಅಪಹರಣ ಮಾಡಿಕೊಂಡು ಹೋದವರ ವಿರುದ್ಧ ಕಾನೂನು ಕ್ರಮ ಜರಗಿಸಿ ನಮಗೆ ನ್ಯಾಯಾ ದೊರಕಿಸಿ ಕೊಡಲು ಮಾನ್ಯರವರಲ್ಲಿ ವಿನಂತಿ  ಅಂತ ಇತ್ಯಾದಿಯಾಗಿ ದೂರು ನೀಡಿದರ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

ರಾಘವೇಂದ್ರ ನಗರ ಪೊಲೀಸ ಠಾಣೆ :-  ದಿನಾಂಕಃ 02-07-2022  ರಂದು ೩.೦೦ ಪಿ.ಎಮ್ ಕ್ಕೆ ಶ್ರೀ ಶಿವಕುಮಾರ ತಂದೆ ಚಿದಾನಂದ ಹೀರೆಮಠ ವಯಃ ೨೨ ವರ್ಷ ಜಾಃ ಜಂಗಮ ಉಃ ಖಾಸಗಿ ಕೆಲಸ ಸಾಃ ಸಂತೋಷ ಕಾಲೋನಿ ಕಲಬುರಗಿ ರವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಗಣಿಕೀಕೃತ ಮಾಡಿಸಿದ ದೂರು ನೀಡಿದರ ಸಾರಾಂಶವೆನೆಂದರೆ. ನಾನು ಸಂತೋಷ ಕಾಲೋನಿ ಕಲಬುರಗಿ ನಿವಾಸಿತನಿದ್ದು ನಮ್ಮ ತಂದೆ ತಾಯಿಗೆ ನಾವು ಮೂರು ಜನ  ಮಕ್ಕಳು ಅದರಲ್ಲಿ ನಾನು ಮೊದಲನೆ ಮಗನಾಗಿರುತ್ತೇನೆ. ನನ್ನ ತಮ್ಮನಾದ ಪ್ರಶಾಂತ ಈತನು ಸರಸ್ವತಿ ವಿದ್ಯಾಮಂದಿರ ಶಾಲೆಯಲ್ಲಿ ೧೦ ನೇ ತರಗತಿಯಲ್ಲಿ ವಿದ್ಯಾಬ್ಯಾಸ ಮಾಡುತ್ತಾ ಬಂದಿರುತ್ತಾನೆ.  ಹೀಗೆ ಇರುವಾಗ ದಿನಾಂಕಃ ೦೧.೦೭.೨೦೨೨ ರಂದು ಬೆಳಿಗ್ಗೆ ೧೧.೦೦ ಗಂಟೆಯ ಸುಮಾರಿಗೆ ನನ್ನ ತಮ್ಮನಾದ ಪ್ರಶಾಂತ ಇತನು ಶಾಲೆಗೆ ಹೋಗುವದಿಲ್ಲಾ ನಾನು ಹೊರಗಡೆ ನನ್ನ ಗೆಳೆಯರ ಹತ್ತಿರ ಹೋಗಿ ಬರುತ್ತೇನೆ ಅಂತ ಪೋನ್ ಮಾಡಿ ಹೋದವನು ಮರಳಿ ತಡರಾತ್ರಿ ಆದರು ಮನೆಗೆ ಬರದೆ ಇರುವದರಿಂದ ನನ್ನ ತಾಯಿ ತಮ್ಮ ಇನ್ನು ಮನೆ ಬಂದಿರುವದಿಲ್ಲ ಎಲ್ಲಿ ಹೋಗಿದ್ದಾನೆ ನೋಡಿ ಅಂತ ಪೋನ್ ಮಾಡಿ ಹೇಳಿದ್ದಾಗ ನಾನು ನೇರಾಗಿ ಮನೆ ಬಂದು ನೋಡಿದ್ದು ನಮ್ಮ  ತಮ್ಮ ಮನೆಯಲ್ಲಿ ಇರಲ್ಲಿಲ್ಲ. ನನ್ನ ತಮ್ಮನ ನಂಬರ ೯೮೪೪೪೯೨೬೧೪ ಗೆ ಪೋನ್ ಮಾಡಿದ್ದಾಗ ಸ್ವೀಚಾಪ್ ಅಂತ ಬಂದಿರುವದರಿಂದ ಗಾಬರಿಗೊಂಡು ನಾನು ನಮ್ಮ ತಂದೆ ತಾಯಿರವರು ಕೂಡಿಕೊಂಡು ಕಲಬುರಗಿ ನಗರದ ತುಂಬಾ ಹಾಗೂ ನಮ್ಮ ಸಂಬಂದಿಕರ ಕಡೆ ಹುಡಕಾಡಿದ್ದು ಇಲ್ಲಿಯವರೆಗೆ ಸಿಕ್ಕಿರುವದಿಲ್ಲ. ದಿನಾಂಕಃ ೦೧.೦೭.೨೦೨೨ ರಂದು ಬೆಳಿಗ್ಗೆ ೧೦.೩೦ ಗಂಟೆಯ ಸುಮಾರಿಗೆ ನನ್ನ ತಮ್ಮನಾದ ಪ್ರಶಾಂತ ತಂದೆ ಚಿದಾನಂದ ಹೀರೆಮಠ ವಯಃ ೧೫ ರ‍್ಷ ಜಾಃ ಜಂಗಮ ಉಃ ವಿದ್ಯಾರ್ಥಿ ಸಾಃ ಸಂತೋಷ ಕಾಲೋನಿ ಕಲಬುರಗಿ ಮೊ ನಂ.೯೮೪೪೪೯೨೬೧೪ ಇತನು ಮನೆಯಿಂದ ಹೊರಗಡೆ  ಹೋದ ಸಮಯದಲ್ಲಿ ಯಾರೂ ಅಪರಿಚಿತರು ಯಾವುದೂ ಉದ್ದೇಶದಿಂದ ಅಪಹರಣ ಮಾಡಿಕೊಂಡು ಹೋಗಿರುತ್ತಾರೆ. ಕಾರಣ ನನ್ನ ಮಗನಿಗೆ ಅಪಹರಣ ಮಾಡಿಕೊಂಡು ಹೋದವರ ವಿರುದ್ಧ ಕಾನೂನು ಕ್ರಮ ಜರಗಿಸಿ ನಮಗೆ ನ್ಯಾಯಾ ದೊರಕಿಸಿ ಕೊಡಲು ಮಾನ್ಯರವರಲ್ಲಿ ವಿನಂತಿ. ಅಂತ ಇತ್ಯಾದಿಯಾಗಿ ದೂರು ನೀಡಿದರ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಇತ್ತೀಚಿನ ನವೀಕರಣ​ : 16-07-2022 06:27 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080