ಅಭಿಪ್ರಾಯ / ಸಲಹೆಗಳು

ಗ್ರಾಮೀಣ ಪೊಲೀಸ ಠಾಣೆ:   ಫಿರ್ಯಾದಿಯ ತಂದೆಯಾದ ಅಂಬರಾಯ ಇತನು ಯಳವಂತಗಿ ಗ್ರಾಮದಲ್ಲಿಯ ಸರ್ವೆ ನಂ 63 ರಲ್ಲಿಯ 2ಎ15ಗುಂ ಜಮೀನು ಸಾಗುವಳಿ ಮಾಡುತ್ತಾ ಬರುತ್ತಿದ್ದು ಆರೋಪಿ ಸಿದ್ದಾರೂಡ  ಇತನು ಸದರಿ ಜಮೀನಿನಲ್ಲಿ ತನಗೆ 30*40 ಪ್ಲಾಟ ಜಾಗೆ ಬರುತ್ತದೆ ಅಂತ ತಕರಾರು ಮಾಡುತ್ತಿದ್ದು ಅದಕ್ಕೆ ಅಂಬರಾಯ ಇತನು ಸದರಿ ಜಾಗೆಗೆ ಸಂಬದಿಸಿದ ಕಾಗದ ಪತ್ರಗಳು ತೋರಿಸು ಜಾಗೆ ಕೋಡುತ್ತೇನೆ ಅಂದಿದ್ದಕ್ಕೆ ಅಂದಿನಿಂದ ದ್ವೇಷ ಸಾಧಿಸುತ್ತಾ ಬಂದು ದಿನಾಂಕ 30-05-2021 ರಂದು 03-00 ಪಿ.ಎಂ.ಕ್ಕೆ ಅಂಬಾರಾಯ ಯಳವಂತಗಿ ಗ್ರಾಮದ ಮರಗಮ್ಮ ಗುಡಿ ಹತ್ತಿರ ಕುಳಿತಾಗ ಸಿದ್ದಾರೂಡ ಇತನು ಬಂದವನೆ ನನ್ನ ಪ್ಲಾಟ ಜಾಗೆ ನನಗೆ ಕೊಡುವದಿಲ್ಲಾ ಅಂತ ಜಗಳ ತಗೆದು ಕಬ್ಬಿಣದ ರಾಡಿನಿಂದ ಹೊಡೆದು ಭಾರಿ ಗಾಯಗೊಳಿಸಿದ್ದು ಉಪಚಾರಕ್ಕಾಗಿ ಆಸ್ಪತ್ರೆಗೆ ಸಾಗಿಸಿದಾಗ ಉಪಚಾರ ಫಲಕಾರಿಯಾಗದೇ ದಿನಾಂಕ 31-05-2021 ರಂದು 09-20 ಎ.ಎಂ.ಕ್ಕೆ ಅಂಬರಾಯ ಮೃತಪಟ್ಟಿದ್ದು ಇರುತ್ತದೆ ಅಂತ ಗ್ರಾಮೀಣ ಪೊಲೀಸ ಠಾಣೆಯಲ್ಲಿ ಗುನ್ನೆ ದಾಖಲಾಗಿದ್ದು, ಇರುತ್ತದೆ.

ಚೌಕ ಪೊಲೀಸ ಠಾಣೆ :     ಪಿರ್ಯಾದಿ ಶ್ರೀ ಶಶಿ ತಂದೆ ವಸಂತ ಚವ್ಹಾಣ ವ|| 30 ವರ್ಷ ಉ|| ಕೂಲಿ ಕೆಲಸ  ಜಾ|| ಲಂಬಾಣಿ ಸಾ|| ಭರತ ನಗರ ತಾಂಡಾ ಹಾ|| ವ|| ಸೇವಾಲಾಲ ಗುಡಿ ಹಿಂದುಗಡೆ ಪಿಲ್ಟರ ಬೇಡ   ಆಶ್ರಯ ಕಾಲೋನಿ ಕಲಬುರಗಿ ಇವರು  ನೀಡಿದ ಸಾರಾಂಶವೆನಂದರೆ, ದಿನಾಂಕ 31-05-2021 ರಂದು 09-30 ಎ ಎಮ ಕೆಲಸಕ್ಕೆ ಪಿರ್ಯಾದಿ ಅಳಿಯ ಕೆಲಸಕ್ಕೆ ಹೋಗಲು ಆಶ್ರಯ ಕಾಲೋನಿ ಬಾತರೂಮ ಹತ್ತಿರದ ರೋಡಿನ ಮೇಲೆ ಕುಳಿತಾಗ  ಆರೋಪಿತಿರಾದ ವಿಶಾಲ ಮತ್ತು  ಶಹಬಜಾರ  ಅನೀಲ ದುಬೈ ಕಾಲೋನಿ ಹಾಗೂ ಸಂಗಡ 05 ಜನರೂ ಕೂಡಿಕೊಂಡು ಮೂರು ಮೋಟಾರ ಸೈಕಲ ಮೇಲೆ ಬಂದವರೆ ಪಿರ್ಯಾದಿಯ   ಅಳಿಯನಾದ ದೀಪಕ  ಇತನೊಂದಿಗೆ  ಜಗಳ ತೆಗೆದು ಹಳೆಯ ವೈಷಮ್ಯದಿಂದ ತಕರಾರು ಮಾಡುತ್ತಾ ಬಂದು ಪಿರ್ಯಾದಿಯ ಅಳಿಯನಿಗೆ ದುಬೈ ಕಾಲೋನಿ ಬಸವಣ್ಣ ದೇವರ ಗುಡಿಯ ಹತ್ತಿರ ಕರೆದುಕೊಂಡು ಹೋಗಿ  ಅವಾಚ್ಯವಾಗಿ ಬೈಯುತ್ತಾ ಕೊಲೆ ಮಾಡುವ ಉದ್ದೇಶದಿಂದ ತಲವಾರ ಮತ್ತು  ಬಿದರಿನ ಬಡಿಗೆಗಳಿಂದ ದೀಪಕ  ಇತನಿಗೆ ಹೊಡೆದು ಭಾರಿ ರಕ್ತಗಾಯಗೊಳಿಸಿದ್ದು ಇರುತ್ತದೆ. ಅಲ್ಲದೆ ಪಿರ್ಯಾದಿಗೆ ಹೆದರಿಸಿ ಅಲ್ಲಿಂದ ಓಡಿಸಿದ್ದು ಇರುತ್ತದೆ. ಅಂತ ಚೌಕ ಪೊಲೀಸ ಠಾಣೆಯಲ್ಲಿ ಗುನ್ನೆ ದಾಖಲಾಗಿದ್ದು, ಇರುತ್ತದೆ.

ಇತ್ತೀಚಿನ ನವೀಕರಣ​ : 02-06-2021 12:07 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080