ಅಭಿಪ್ರಾಯ / ಸಲಹೆಗಳು

ಚೌಕ ಪೊಲೀಸ್ ಠಾಣೆ:- ದಿನಾಂಕ:02.05.2022 ರಂದು ರಾತ್ರಿ 21.30 ಗಂಟೆಗೆ ನಮ್ಮ ಠಾಣೆಯ ಶ್ರೀ ರಾಜಶೇಖರ.ವಿ.ಹಳಗೋದಿ  ಪಿ.ಐ ರವರು ಠಾಣೆಗೆ ಹಾಜರಾಗಿ ತಮ್ಮದೊಂದು ಸರ್ಕಾರಿ ತರ್ಫೆ ಫಿರ್ಯಾದಿ ದೂರು ಮತ್ತು ಅಬಕಾರಿ ದಾಳಿ ಜಪ್ತಿ ಪಂಚನಾಮೆ ಹಾಗೂ ಮುದ್ದೆಮಾಲು ಹಾಜರಪಡಿಸಿದ್ದು, ಸದರಿ ದೂರು ಫಿರ್ಯಾದಿ ಸಾರಾಂಶವೆನೆಂದೆರೆ  ನಾನು ರಾಜಶೇಖರ.ವ್ಹಿ.ಹಳಗೋದಿ ಪಿ.ಐ. ಚೌಕ ಪೊಲೀಸ  ಠಾಣೆ ಕಲಬುರಗಿ ನಗರ ಕರ್ನಾಟಕ ರಾಜ್ಯ ಸರಕಾರಿ ತರ್ಫೆ ಫಿರ್ಯಾದಿ ಸಲ್ಲಿಸುವುದೆನೆಂದರೆ ಇಂದು ದಿನಾಂಕ:02/05/2022 ರಂದು ಸಂಜೆ 7-30 ಗಂಟೆಗೆ ನಾನು ಮತ್ತು ಠಾಣೆಯ ಸಿಬ್ಬಂದಿಯವರಾದ  ಶ್ರೀ ವೀರಮಹಾಂತಪ್ಪ ಎ.ಎಸ್.ಐ,  ಸಿಪಿಸಿ 111 ಉಮೇಶ, ಸಿಪಿಸಿ 10 ಅಶೋಕ ಚೌಕ ಪೊಲೀಸ ಠಾಣೆ ವ್ಯಾಪ್ತಿಯಲ್ಲಿ ಬರುವ ಚೌಕ ಸರ್ಕಲದಲ್ಲಿದ್ದಾಗ ನನಗೆ ಖಚಿತವಾದ ಬಾತ್ಮಿ ಬಂದಿದ್ದೆನೆಂದರೆ  ಇಂದು  ದಿನಾಂಕ:02/05/2022 ರಂದು ಸಂಜೆ 6-00 ಗಂಟೆಯಿಂದ ದಿನಾಂಕ:04/05/2022 ರಂದು ಬೆಳಗಿನ 06-00 ಗಂಟೆಯವರೆಗೆ ಬಸವೇಶ್ವರ ಜಯಂತಿ ನಿಮಿತ್ಯ ಎಲ್ಲಾ ತರಹದ ಮದ್ಯ ಮಾರಾಟ ನಿಷೇದಾಜ್ಞೆ  ಇದ್ದರೂ ನಮ್ಮ ಪೊಲೀಸ ಠಾಣೆ ವ್ಯಾಪ್ತಿಯಲ್ಲಿ ಬರುವ ಯಾಕೂಬ ಮನಿಯಾರ ಚಾಳ ಏರಿಯಾದಲ್ಲಿ ಇರುವ ಸ್ಮಿತಾ ವೈನ ಶಾಪ ಪಕ್ಕದಲ್ಲಿ ಇರುವ ಗೇಟ ಎದುರುಗಡೆ ಇರುವ ಖುಲ್ಲಾ ಜಾಗೆಯಲ್ಲಿ ಗೇಟ ಮೇಲೆ ಇರುವ ಮತ್ತು ಎದುರುಗಡೆ ಸಾರ್ವಜನಿಕ ಕೆ.ಇ.ಬಿ. ಕಂಬದ ಲೈಟಿನ ಬೆಳಕಿನಲ್ಲಿ ಒಬ್ಬನು ಅಕ್ರಮವಾಗಿ ಮದ್ಯ ಬಾಟಲಿಗಳನ್ನು ಇಟ್ಟುಕೊಂಡು ಮಾರಾಟ ಮಾಡುತ್ತಿದ್ದಾನೆ ಎಂದು ಖಚಿತವಾದ ಬಾತ್ಮಿ ಬಂದ ಮೇರೆಗೆ ಇಬ್ಬರು ಪಂಚರಾದ 1) ಶ್ರೀ ಶ್ರೀನಿವಾಸ  ತಂದೆ ರವೀಂದ್ರ ಕಾಡ್ಲಾ ವ; 20 ವರ್ಷ ಉ:ಪಾನಪಾಶ ವ್ಯಾಪರ ಜಾತಿ ಲಿಂಗಾಯತ ಸಾ:ಜಗತ ಮೈಲಾರಲಿಂಗೇಶ್ವರ ಗುಡಿ ಹತ್ತಿರ ಕಲಬುರಗಿ 2) ಶ್ರೀ ಗೋಪಾಲ ತಂದೆ ನಾಗರಾಜ ರಡ್ಡಿ ವ:35 ವರ್ಷ ಉ:ಪೋಟೋ ಸ್ಟುಡಿಯೋ ಜಾತಿ:ರಡ್ಡಿ ಸಾ:ಯಾಕೂಬ ಮನಿಯಾರ ಚಾಳ ಕಲಬುರಗಿ ಇವರನ್ನು ಮತ್ತು ಈ  ಮೇಲಿನ ಸಿಬ್ಬಂದಿಯವರಿಗೆ ಬರಮಾಡಿಕೊಂಡು ಪಂಚರಿಗೆ ಮತ್ತು ಈ ಮೇಲಿನ ಸಿಬ್ಬಂದಿಯವರಿಗೆ ಬಾತ್ಮಿ ವಿಷಯ ತಿಳಿಸಿ ಪಂಚರಿಗೆ ನಾವು ಮಾಡುವ ದಾಳಿ ಜಪ್ತಿ ಪಂಚನಾಮೆಯ ಪಂಚರಾಗಿ ಪಂಚನಾಮೆ ಬರೆಯಿಸಿ ಕೊಡಲು ಪಂಚರಿಗೆ ಕೇಳಿಕೊಂಡಾಗ ಪಂಚರು ಒಪ್ಪಿಕೊಂಡರು. ಮತ್ತು ಈ ಮೇಲಿನ ಸಿಬ್ಬಂದಿಯವರಿಗೆ ದಾಳಿಗೆ ಬರಲು ಸೂಚಿಸಿದ ಪ್ರಕಾರ ಅವರೆಲ್ಲರೂ ದಾಳಿಗೆ ಬರಲು ಒಪ್ಪಿಕೊಂಡಾಗ, ನಾನು ಮತ್ತು ಪಂಚರು ಹಾಗೂ ಸಿಬ್ಬಂದಿಯವರು ಠಾಣೆಯ ಜೀಪ್ ನಂ. ಕೆಎ 32 ಜಿ  874 ರಲ್ಲಿ ಕುಳಿತುಕೊಂಡೇವು. ಜೀಪನು  ಸಿಪಿಸಿ 10 ಅಶೋಕ  ಇವರು ಚಾಲನೆ ಮಾಡುತ್ತಿದ್ದರು. ಮಾನ್ಯ ಎ.ಸಿ.ಪಿ. (ನಾರ್ಥ) ಉಪವಿಭಾಗ ಕಲಬುರಗಿ ರವರ ಮಾರ್ಗದರ್ಶನದಲ್ಲಿ ದಾಳಿ ಕುರಿತು ಚೌಕ ಸರ್ಕಲದಿಂದ ಇಂದು ದಿನಾಂಕ:02/05/2022 ರಂದು ಸಂಜೆ  7-45 ಗಂಟೆಗೆ ಪೋರ್ಟ ಮುಖಾಂತರವಾಗಿ ಪ್ರಕಾಶ ಮಾಲ ಹತ್ತಿರ ಜೀಪು ನಿಲ್ಲಿಸಿ, ಬಾತ್ಮಿ ಸ್ಥಳವಾದ  ಸ್ಮಿತಾ ವೈನ ಶಾಪ ಹತ್ತಿರ ಇರುವ ಪ್ರದೀಪ ತಿವಾರಿ ಕೂಲರ್ ಗೋದಾಮ ಗೋಡೆ ಮರೆಯಲ್ಲಿ ನಿಂತು ನೋಡಲಾಗಿ ಒಬ್ಬನು ಯಾಕೂಬ ಮನಿಯಾರ ಚಾಳ ಏರಿಯಾದಲ್ಲಿ ಇರುವ ಸ್ಮಿತಾ ವೈನ ಶಾಪ ಪಕ್ಕದಲ್ಲಿ ಇರುವ ಗೇಟ ಎದುರುಗಡೆ ಇರುವ ಖುಲ್ಲಾ ಜಾಗೆಯಲ್ಲಿ ಗೇಟ ಮುಂದುಗಡೆ ಖುಲ್ಲಾ ಜಾಗೆಯಲ್ಲಿ ಗೇಟ ಮೇಲೆ ಇರುವ ಮತ್ತು ಎದುರುಗಡೆ ಸಾರ್ವಜನಿಕ ಕೆ.ಇ.ಬಿ. ಕಂಬದ ಲೈಟಿನ ಬೆಳಕಿನಲ್ಲಿ  06 ರಟ್ಟಿನ ಬಾಕ್ಸನಲ್ಲಿ ಅಕ್ರಮವಾಗಿ ಮದ್ಯದ ಬಾಟಲಿಗಳನ್ನು ಸಂಗ್ರಹಿಸಿ ಇಟ್ಟುಕೊಂಡು, ಹೋಗು-ಬರುವ ಸಾರ್ವಜನಿಕರಿಗೆ ಮದ್ಯ ಮಾರಾಟ ಮಾಡುತ್ತಿದ್ದನ್ನು ನಾನು ಮತ್ತು ಜೊತೆಯಲ್ಲಿದ್ದ ಬಂದಿದ್ದ ಪಂಚರಿಗೆ ಹಾಗೂ ಸಿಬ್ಬಂದಿಯವರಿಗೆ ತೋರಿಸಿ ನೋಡಿ ಖಚಿತಪಡಿಸಿಕೊಂಡು ನಾನು ಮತ್ತು ಈ ಮೇಲಿನ  ಸಿಬ್ಬಂದಿಯವರು ರಾತ್ರಿ 8-10 ಗಂಟೆಗೆ ಪಂಚರ ಸಮಕ್ಷಮದಲ್ಲಿ ದಾಳಿ ಮಾಡಿದಾಗ ಮದ್ಯ ಮಾರಾಟದಲ್ಲಿ ತೊಡಗಿದ ಒಬ್ಬ ವ್ಯಕ್ತಿ ಹಿಡಿದಾಗ ಮಧ್ಯ ಖರೀದಿ ಮಾಡಲು ಬಂದ ಸಾರ್ವಜನಿಕರು ಕೂಡಾ ನಮ್ಮ ಪೊಲೀಸ ಸಮವಸ್ತ್ರ ನೋಡಿ  ಅಲ್ಲಿಂದ ಓಡಿ ಹೋದರು. ಸಿಕ್ಕಿ ಬಿದ್ದ ವ್ಯಕ್ತಿಗೆ ಅವನ ಹೆಸರು ವಿಳಾಸ ವಿಚಾರಿಸಲೂ ಅವನು ತನ್ನ ಹೆಸರು ರವಿ ತಂದೆ ವಿಠಲ ಪಾಳಾ ವ:28 ವರ್ಷ ಉ: ಸ್ಮಿತಾ ವೈನಶಾಪನಲ್ಲಿ ವೇಟರ ಕೆಲಸ  ಜಾತಿ:ಕಬ್ಬಲೀಗ ಸಾ:ಕೆ.ಇ.ಬಿ. ಖಜಾನ ಹತ್ತಿರ ರಾಜೀವ ಗಾಂಧಿ ನಗರ ಕಲಬುರಗಿ ಅಂತಾ ತಿಳಿಸಿದನು. ಗುನ್ನೆ ಸ್ಥಳದಲ್ಲಿ ಇದ್ದ 06 ಮದ್ಯದ ರಟ್ಟಿನ ಬಾಕ್ಸಗಳು ಪರಿಶೀಲಿಸಿ ನೋಡಲಾಗಿ 1) ಒಂದು ರಟ್ಟಿನ ಬಾಕ್ಸನಲ್ಲಿ Mcdowells whisky No1 180 Mlದ 14 ಬಾಟಲಿಗಳಿದ್ದು, ಪ್ರತಿಯೊಂದು ಬಾಟಲಿ ಮೇಲೆ 198.23ಪೈಸೆ ಬೆಲೆ ನಮೂದು ಮಾಡಿದ್ದು ಅ:ಕಿ: 2775.22 ಪೈಸೆ  ಆಗುತ್ತದೆ. 2) ಒಂದು ರಟ್ಟಿನ ಬಾಕ್ಸನಲ್ಲಿ Officer choice special whisky 180 Mlದ 45 ಟೆರಿಫಿಕ ಬಾಟಲಿಗಳಿದ್ದು, ಪ್ರತಿಯೊಂದು ಬಾಟಲಿ ಮೇಲೆ 107.23 ಪೈಸೆ ಬೆಲೆ ನಮೂದು ಮಾಡಿದ್ದು ಅ:ಕಿ: 4825.35 ಪೈಸೆ  ಆಗುತ್ತದೆ. 3) ಒಂದು ರಟ್ಟಿನ ಬಾಕ್ಸನಲ್ಲಿ Old Tavern  whisky 180 Mlದ 46 ಟೆರಿಫಿಕ ಬಾಟಲಿಗಳಿದ್ದು, ಪ್ರತಿಯೊಂದು ಬಾಟಲಿ ಮೇಲೆ  86.75 ಪೈಸೆ ಬೆಲೆ ನಮೂದು ಮಾಡಿದ್ದು ಅ:ಕಿ: 3990.5 ಪೈಸೆ  ಆಗುತ್ತದೆ. 4) ಒಂದು ರಟ್ಟಿನ ಬಾಕ್ಸನಲ್ಲಿ Bag PiPer whisky 180 Mlದ 31 ಟೆರಿಫಿಕ ಬಾಟಲಿಗಳಿದ್ದು, ಪ್ರತಿಯೊಂದು ಬಾಟಲಿ ಮೇಲೆ  106.23 ಪೈಸೆ ಬೆಲೆ ನಮೂದು ಮಾಡಿದ್ದು ಅ:ಕಿ: 3283.13 ಪೈಸೆ  ಆಗುತ್ತದೆ. 5) ಒಂದು ರಟ್ಟಿನ ಬಾಕ್ಸನಲ್ಲಿ  Imperial Blue whisky 180 Mlದ 40 ಬಾಟಲಿಗಳಿದ್ದು, ಪ್ರತಿಯೊಂದು ಬಾಟಲಿ ಮೇಲೆ  198.21 ಪೈಸೆ ಬೆಲೆ ನಮೂದು ಮಾಡಿದ್ದು ಅ:ಕಿ: 7928.40 ಪೈಸೆ  ಆಗುತ್ತದೆ. 6) ಒಂದು ರಟ್ಟಿನ ಬಾಕ್ಸನಲ್ಲಿ  Mcdowells No.1 Celebration Deluxe XXX Rum 180 Mlದ 47 ಟೆರಿಫಿಕ ಬಾಟಲಿಗಳಿದ್ದು, ಪ್ರತಿಯೊಂದು ಬಾಟಲಿ ಮೇಲೆ 106.23 ಪೈಸೆ ಬೆಲೆ ನಮೂದು ಮಾಡಿದ್ದು ಅ:ಕಿ: 4992.81 ಪೈಸೆ ಆಗುತ್ತದೆ. ಆಗ ಪಿ.ಐ. ರವರು ಕೇಸಿನ ಪುರಾವೆಗೋಸ್ಕರ ಈ ಮೇಲಿನ ಮದ್ಯದ ಬಾಟಲಿಗಳಿರುವ 06 ಬಾಕ್ಸಗಳಿಗೆ ನಾವು ಪಂಚರು ಸಹಿ ಮಾಡಿದ ಚೀಟಿ ಅಂಟಿಸಿ ತಮ್ಮ ವಶಕ್ಕೆ ತೆಗೆದುಕೊಂಡು ಜಪ್ತಿ ಪಂಚನಾಮೆ ಮೂಲಕ ಜಪ್ತಿ ಪಡಿಸಿಕೊಂಡೆನು. ಮತ್ತು ಈ ಮೇಲಿನ ಆರು ರಟ್ಟಿನ ಬಾಕ್ಸನಲ್ಲಿ  ಒಂದೊಂದು ಬಾಟಲಿ ಮತ್ತು ಟೆರಿಫಿಕ ಬಾಟಲಿ ತೆಗೆದು ಅವುಗಳನ್ನು ತಜ್ಞರ ಪರಿಕ್ಷೇ ಕುರಿತು ಪ್ರತ್ಯೇಕವಾಗಿ ಒಂದೊಂದು  ಬಿಳಿ ಅರಿವೆಯಲ್ಲಿ ಹಾಕಿ ಹೊಲಿದು “ ASN ” ಎಂಬ ಇಂಗ್ಲೀಷ ಅಕ್ಷರದಿಂದ ಅರಗಿನಿಂದ ಶೀಲ ಮಾಡಿ  ಪಂಚರ ಸಹಿ ಚೀಟಿ ಅಂಟಿಸಿ ಜಪ್ತ ಪಡಿಸಿಕೊಂಡೆನು. ಸದರಿ ರವಿ ಇತನು ಮದ್ಯ ಎಲ್ಲಿಂದ ತಂದಿರುವೀ ಅಂತಾ ವಿಚಾರಿಸಲಾಗಿ ತಾನು ಸ್ಮಿತಾ ವೈನಶಾಪನಲ್ಲಿ ವೇಟರ ಕೆಲಸ ಮಾಡುತ್ತಿದ್ದು, ಕ್ಲೋಸಿಂಗ ಸಮಯಕ್ಕಿಂತ ಮುಂಚೆ ಸ್ಮಿತಾ ವೈನಶಾಪದಿಂದ  ಈ ಮೇಲಿನ ಮದ್ಯ ಖರೀದಿಸಿ ಹೆಚ್ಚಿನ ಬೆಲೆಗೆ ಮಾರಾಟ ಉದ್ದೇಶದಿಂದ ಅಕ್ರಮಾಗಿ ಸಂಗ್ರಹಿಸಿ ಇಟ್ಟು ಮಾರಾಟ ಮಾಡದಲ್ಲಿ ತೊಡಗಿರುವುದಾಗಿ ತಿಳಿಸಿದನು. ಸದರಿ ರವಿ ತಂದೆ  ವಿಠಲ ಪಾಳಾ ವ:28 ವರ್ಷ ಉ: ಸ್ಮಿತಾ ವೈನಶಾಪನಲ್ಲಿ ವೇಟರ ಕೆಲಸ  ಜಾತಿ ಕಬ್ಬಲೀಗ ಸಾ: ಕೆ.ಇ.ಬಿ. ಖಜಾನ ಹತ್ತಿರ ರಾಜೀವ ಗಾಂಧಿ ನಗರ ಕಲಬುರಗಿ ಇತನು ಇಂದು  ದಿನಾಂಕ: 02/05/2022 ರಂದು ಸಂಜೆ 6-00 ಗಂಟೆಯಿಂದ ದಿನಾಂಕ:04/05/2022 ರಂದು ಬೆಳಗಿನ 06-00 ಗಂಟೆಯವರೆಗೆ ಬಸವೇಶ್ವರ ಜಯಂತಿ ನಿಮಿತ್ಯ ಎಲ್ಲಾ ತರಹದ ಮದ್ಯ ಮಾರಾಟ ನಿಷೇದಾಜ್ಞೆ  ಇದಿದ್ದು ಗೊತ್ತಿದ್ದರೂ ಸಹಾ ಅಕ್ರಮವಾಗಿ ಮದ್ಯ ಸಂಗ್ರಹಿಸಿಕೊಂಡು ಇಟ್ಟುಕೊಂಡು ಮದ್ಯ ಮಾರಾಟದಲ್ಲಿ ತೊಡಗಿದ್ದು ಖಚಿತಪಟ್ಟಿದ್ದು ಇರುತ್ತದೆ. ಸದರ ಜಪ್ತಿ ಪಂಚನಾಮೆ ರಾತ್ರಿ 8-10  ಗಂಟೆಯಿಂದ ರಾತ್ರಿ 9-10 ಗಂಟೆಯವರೆಗೆ ಸದರ ಸ್ಥಳದಲ್ಲಿ ಕುಳಿತು ಲೈಟಿನ ಬೆಳಕಿನಲ್ಲಿ ಪಂಚರ ಸಮಕ್ಷಮದಲ್ಲಿ ಬರೆದು ಮುಗಿಸಲಾಯಿತು. ಸದರಿ ರವಿ ತಂದೆ  ವಿಠಲ ಪಾಳಾ ವ:28 ವರ್ಷ ಉ: ಸ್ಮಿತಾ ವೈನಶಾಪನಲ್ಲಿ ವೇಟರ ಕೆಲಸ  ಜಾತಿ:ಕಬ್ಬಲೀಗ ಸಾ:ಕೆ.ಇ.ಬಿ. ಖಜಾನ ಹತ್ತಿರ ರಾಜೀವ ಗಾಂಧಿ ನಗರ ಕಲಬುರಗಿ ಇತನ  ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಮುದ್ದೆ ಮಾಲನೊಂದಿಗೆ ಠಾಣೆಗೆ ಬಂದು ಫಿರ್ಯಾದಿ ಕೊಟ್ಟಿರುತ್ತೇನೆ ಅಂತ ಕೊಟ್ಟ ಸದರ ಫಿರ್ಯಾದಿ ಮತ್ತು ಜಪ್ತಿ ಪಂಚನಾಮೆ ಆಧಾರದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

ಇತ್ತೀಚಿನ ನವೀಕರಣ​ : 04-05-2022 01:54 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080