ಅಭಿಪ್ರಾಯ / ಸಲಹೆಗಳು

ಚೌಕ ಪೊಲೀಸ್ ಠಾಣೆ :- ದಿನಾಂಕ;- 02-04-2022 ರಂದು ೦೯.೧೫ ಗಂಟೆಗೆ ಶ್ರೀ ಹುಸೇನ ಬಾಷಾ ಎ.ಎಸ್.ಐ ರವರು ಠಾಣೆಗೆ ಹಾಜರಾಗಿ ಗಣಕೀಕೃತದ ಒಂದು ಕನ್ನಡದಲ್ಲಿ ವರದಿ ಸಲ್ಲಿಸಿದೇನೆಂದರೆ, ನಾನು ಹುಸೇನ ಬಾಷಾ  ಚೌಕ ಪೊಲೀಸ್ ಠಾಣೆ ಕಲಬುರಗಿ ಈ ಮೂಲಕ ಮಾನ್ಯರವರಲ್ಲಿ ವಿನಂತಿ ವರದಿ ಸಲ್ಲಿಸುವುದೇನೆಂದರೆ, ನಾನು ಮತ್ತು ನಾಗೇಂದ್ರ ಸಿಪಿಸಿ-೭೯ ಇಬ್ಬರೂ ಕೂಡಿಕೊಂಡು ಇಂದು ದಿನಾಂಕ ೦೨/೦೪/೨೦೨೨ ರಂದು ಸ್ವತ್ತಿನ ಅಪರಾಧಗಳನ್ನು ತಡೆಗಟ್ಟು ಪ್ರಯುಕ್ತ ಠಾಣೆಯಿಂದ ೬.೩೦ ಗಂಟೆಗೆ ಹೊರಟು ಠಾಣಾ ವ್ಯಾಪ್ತಿಯ ಶಹಾಬಜಾರ ನಾಕಾ, ಶಿವಾಜಿ ನಗರ, ಕಾಕಡೆ ಚೌಕ ಮುಸ್ಲಿಂ ಸಂಘ  ಹತ್ತಿರ ೭.೨೦ ಪಿ.ಎಂಕ್ಕೆ ಸುಮಾರಿಗೆ ಬಂದಾಗ ಅಲ್ಲಿ ಒಬ್ಬ ಹುಡುಗ ತನ್ನ ಕೈಯಲ್ಲಿ ಒಂದು ಕಬ್ಬಿಣದ ರಾಡ್, ಸಣ್ಣ ಚಾಕು ಹಿಡಿದುಕೊಂಡು ಕತ್ತಲಲ್ಲಿ ಮರೆಯಾಗಿ ಕುಳಿತಿರುವವನಿಗೆ ನಾವಿಬ್ಬರು ಗಮನಿಸಿ ಆ ಹುಡುಗನ ಸಮೀಪ ಹೋಗುವಷ್ಠರಲ್ಲಿಯೇ ಆ ಹುಡುಗ ಸಮವಸ್ತ್ರದಲ್ಲಿದ್ದ ನಮ್ಮನ್ನು ನೋಡಿ ಅಲ್ಲಿಂದ ತನ್ನ ಮುಖ ಮರೆಮಾಚಿಕೊಂಡು ಓಡಿಹೋಗಲು ಪ್ರಯತ್ನಿಸಿದ್ದು ಆಗ ನಾವು ಸದರಿಯವನಿಗೆ ಬೆನ್ನು ಹತ್ತಿ ಹಿಡಿದು ಅವನ ಹೆಸರು ವಿಳಾಸ ವಿಚಾರಿಸಲಾಗಿ ತನ್ನ ಹೆಸರು ಉತ್ತಮ ತಂದೆ ಮನೋಹರ ಬುಟ್ಟಿ ವ:30ವರ್ಷ ಉ:ಗೌಂಡಿ ಕೆಲಸ ಜ್ಯಾ: ಪ.ಜ್ಯಾ ಸಾ:ಟೆಂಗಳಿ ತಾ:ಚಿತ್ತಾಪೂರ ಜಿ:ಕಲಬುರಗಿ  ಹಾ.ವ:ಕಾಶಿನಾಥ ಇಟ್ಟಂಗಿ ಭಟ್ಟಿ ಸುಲ್ತಾನಪೂರ ರೋಡ ಕಲಬುರಗಿ ಅಂತಾ ಹೇಳಿದ್ದು, ಸದರಿಯವನ ಅಂಗಶೋಧನೆ ಮಾಡಿದಾಗ ಸದರಿಯವನ ಹತ್ತಿರ ಒಂದು ಕಬ್ಬಿಣದ ರಾಡು, ಸಣ್ಣ ಚಾಕು ಸಿಕ್ಕಿದ್ದು ಸದರಿ ವಸ್ತಗಳ ಬಗ್ಗೆ ಹಾಗೂ ಈ ಸ್ಥಳಕ್ಕೆ ಬಂದ ಬಗ್ಗೆ ಸದರಿಯವನಿಗೆ ವಿಚಾರಿಸಲಾಗಿ ಅವನು ಯಾವುದೇ ರೀತಿಯ ಸರ‍್ಪಕವಾದ ಉತ್ತರ ನೀಡದೆ ಇದುದ್ದುರಿಂದ ಸದರಿಯವನಿಗೆ ಹಾಗೆ ಬಿಟ್ಟಲ್ಲಿ ಅವನು ಯಾವುದಾದರೂ ಸ್ವತ್ತಿನ ಅಪರಾಧ ಮಾಡಬಹುದು ಅಂತಾ ಅವನ ಮೇಲೆ ಬಲವಾದ ಸಂಶಯ ಕಂಡು ಬಂದಿದ್ದರಿಂದ ಆಗ ಸಿಬ್ಬಂದಿ ಸಹಾಯದಿಂದ ಇಬ್ಬರೂ ಪಂಚರಿಗೆ ಸ್ಥಳಕ್ಕೆ ಬರಮಾಡಿಕೊಂಡು  ಪಂಚರಾದ ೧) ಶರಣಪ್ಪ ತಂದೆ ಹಣಮಂತಪ್ಪ ಡೋರನಳ್ಳಿ ವ:೫೨ ವರ್ಷ ಉ:ಗೌಂಡಿ ಕೆಲಸ ಜ್ಯಾ:ಕಬ್ಬಲಿಗ ಸಾ:ಯಲ್ಲಮ್ಮ ಗುಡಿ ಹತ್ತಿರ ಗಂಗಾ ನಗರ ಕಲಬುರಗಿ ೨) ಮಹಾದೇವ ತಂದೆ ಶ್ರಿಪತ್ತರಾವ ಮೇತ್ರಿ ವ:೩೨ ವರ್ಷ  ಉ:ಕುಂಬಾರ ಕೆಲಸ ಜ್ಯಾ:ಇಸಾಡಿ ಸಾ:ಸಿಟಿ ಬಸ್ ಸ್ಟ್ಯಾಂಡ ಎದುರುಗಡೆ ಝೋಪಡಪಟ್ಟಿ ಕಲಬುರಗಿ  ಇವರನ್ನು ಬರಮಾಡಿಕೊಂಡು ಸದರಿ ರಾಡು ಮತ್ತು ಚಾಕುವನ್ನು ರಾತ್ರಿ ರಿಂದ ೭.೪೫ ಗಂಟೆಯಿಂದ ೮.೪೫ ಗಂಟೆಯವರೆಗೆ ರವೆಗೆ ಪಂಚರ ಸಮಕ್ಷಮದಲ್ಲಿ ಜಪ್ತಿ ಪಡಿಸಿಕೊಂಡಿದ್ದು, ಸದರಿಯವನ ವಿರುದ್ದ ಸೂಕ್ತ ಕ್ರಮಕ್ಕಾಗಿ ವರದಿ, ಜಪ್ತಿ ಪಂಚನಾಮೆಯೊಂದಿಗೆ ಮರಳಿ ಠಾಣೆಗೆ ಆರೋಪಿಯೊಂದಿಗೆ ೯.೧೫ ಪಿ.ಎಂಕ್ಕೆ ಠಾಣೆಗೆ ಬಂದು ಸದರಿ ಆರೋಪಿತನ ವಿರುದ್ದ ಮುಂದಿನ ಕಾನೂನು ಕ್ರಮಕ್ಕಾಗಿ ವರದಿ ನೀಡಿರುತ್ತೇನೆ. ಸದರಿ ವರದಿ ಮತ್ತು ಜಪ್ತಿ ಪಂಚನಾಮೆ ಹಾಗೂ ಆರೋಪಿಯೊಂದಿಗೆ ವರದಿ ಹಾಜರಪಡಿಸಿದ್ದನ್ನು ಸ್ವೀಕರಿಸಿಕೊಂಡು ಅದರ ಸಾರಾಂಶ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

ಇತ್ತೀಚಿನ ನವೀಕರಣ​ : 08-04-2022 02:03 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080