Feedback / Suggestions

ಚೌಕ ಪೊಲೀಸ್ ಠಾಣೆ :- ದಿನಾಂಕ;- 02-04-2022 ರಂದು ೦೯.೧೫ ಗಂಟೆಗೆ ಶ್ರೀ ಹುಸೇನ ಬಾಷಾ ಎ.ಎಸ್.ಐ ರವರು ಠಾಣೆಗೆ ಹಾಜರಾಗಿ ಗಣಕೀಕೃತದ ಒಂದು ಕನ್ನಡದಲ್ಲಿ ವರದಿ ಸಲ್ಲಿಸಿದೇನೆಂದರೆ, ನಾನು ಹುಸೇನ ಬಾಷಾ  ಚೌಕ ಪೊಲೀಸ್ ಠಾಣೆ ಕಲಬುರಗಿ ಈ ಮೂಲಕ ಮಾನ್ಯರವರಲ್ಲಿ ವಿನಂತಿ ವರದಿ ಸಲ್ಲಿಸುವುದೇನೆಂದರೆ, ನಾನು ಮತ್ತು ನಾಗೇಂದ್ರ ಸಿಪಿಸಿ-೭೯ ಇಬ್ಬರೂ ಕೂಡಿಕೊಂಡು ಇಂದು ದಿನಾಂಕ ೦೨/೦೪/೨೦೨೨ ರಂದು ಸ್ವತ್ತಿನ ಅಪರಾಧಗಳನ್ನು ತಡೆಗಟ್ಟು ಪ್ರಯುಕ್ತ ಠಾಣೆಯಿಂದ ೬.೩೦ ಗಂಟೆಗೆ ಹೊರಟು ಠಾಣಾ ವ್ಯಾಪ್ತಿಯ ಶಹಾಬಜಾರ ನಾಕಾ, ಶಿವಾಜಿ ನಗರ, ಕಾಕಡೆ ಚೌಕ ಮುಸ್ಲಿಂ ಸಂಘ  ಹತ್ತಿರ ೭.೨೦ ಪಿ.ಎಂಕ್ಕೆ ಸುಮಾರಿಗೆ ಬಂದಾಗ ಅಲ್ಲಿ ಒಬ್ಬ ಹುಡುಗ ತನ್ನ ಕೈಯಲ್ಲಿ ಒಂದು ಕಬ್ಬಿಣದ ರಾಡ್, ಸಣ್ಣ ಚಾಕು ಹಿಡಿದುಕೊಂಡು ಕತ್ತಲಲ್ಲಿ ಮರೆಯಾಗಿ ಕುಳಿತಿರುವವನಿಗೆ ನಾವಿಬ್ಬರು ಗಮನಿಸಿ ಆ ಹುಡುಗನ ಸಮೀಪ ಹೋಗುವಷ್ಠರಲ್ಲಿಯೇ ಆ ಹುಡುಗ ಸಮವಸ್ತ್ರದಲ್ಲಿದ್ದ ನಮ್ಮನ್ನು ನೋಡಿ ಅಲ್ಲಿಂದ ತನ್ನ ಮುಖ ಮರೆಮಾಚಿಕೊಂಡು ಓಡಿಹೋಗಲು ಪ್ರಯತ್ನಿಸಿದ್ದು ಆಗ ನಾವು ಸದರಿಯವನಿಗೆ ಬೆನ್ನು ಹತ್ತಿ ಹಿಡಿದು ಅವನ ಹೆಸರು ವಿಳಾಸ ವಿಚಾರಿಸಲಾಗಿ ತನ್ನ ಹೆಸರು ಉತ್ತಮ ತಂದೆ ಮನೋಹರ ಬುಟ್ಟಿ ವ:30ವರ್ಷ ಉ:ಗೌಂಡಿ ಕೆಲಸ ಜ್ಯಾ: ಪ.ಜ್ಯಾ ಸಾ:ಟೆಂಗಳಿ ತಾ:ಚಿತ್ತಾಪೂರ ಜಿ:ಕಲಬುರಗಿ  ಹಾ.ವ:ಕಾಶಿನಾಥ ಇಟ್ಟಂಗಿ ಭಟ್ಟಿ ಸುಲ್ತಾನಪೂರ ರೋಡ ಕಲಬುರಗಿ ಅಂತಾ ಹೇಳಿದ್ದು, ಸದರಿಯವನ ಅಂಗಶೋಧನೆ ಮಾಡಿದಾಗ ಸದರಿಯವನ ಹತ್ತಿರ ಒಂದು ಕಬ್ಬಿಣದ ರಾಡು, ಸಣ್ಣ ಚಾಕು ಸಿಕ್ಕಿದ್ದು ಸದರಿ ವಸ್ತಗಳ ಬಗ್ಗೆ ಹಾಗೂ ಈ ಸ್ಥಳಕ್ಕೆ ಬಂದ ಬಗ್ಗೆ ಸದರಿಯವನಿಗೆ ವಿಚಾರಿಸಲಾಗಿ ಅವನು ಯಾವುದೇ ರೀತಿಯ ಸರ‍್ಪಕವಾದ ಉತ್ತರ ನೀಡದೆ ಇದುದ್ದುರಿಂದ ಸದರಿಯವನಿಗೆ ಹಾಗೆ ಬಿಟ್ಟಲ್ಲಿ ಅವನು ಯಾವುದಾದರೂ ಸ್ವತ್ತಿನ ಅಪರಾಧ ಮಾಡಬಹುದು ಅಂತಾ ಅವನ ಮೇಲೆ ಬಲವಾದ ಸಂಶಯ ಕಂಡು ಬಂದಿದ್ದರಿಂದ ಆಗ ಸಿಬ್ಬಂದಿ ಸಹಾಯದಿಂದ ಇಬ್ಬರೂ ಪಂಚರಿಗೆ ಸ್ಥಳಕ್ಕೆ ಬರಮಾಡಿಕೊಂಡು  ಪಂಚರಾದ ೧) ಶರಣಪ್ಪ ತಂದೆ ಹಣಮಂತಪ್ಪ ಡೋರನಳ್ಳಿ ವ:೫೨ ವರ್ಷ ಉ:ಗೌಂಡಿ ಕೆಲಸ ಜ್ಯಾ:ಕಬ್ಬಲಿಗ ಸಾ:ಯಲ್ಲಮ್ಮ ಗುಡಿ ಹತ್ತಿರ ಗಂಗಾ ನಗರ ಕಲಬುರಗಿ ೨) ಮಹಾದೇವ ತಂದೆ ಶ್ರಿಪತ್ತರಾವ ಮೇತ್ರಿ ವ:೩೨ ವರ್ಷ  ಉ:ಕುಂಬಾರ ಕೆಲಸ ಜ್ಯಾ:ಇಸಾಡಿ ಸಾ:ಸಿಟಿ ಬಸ್ ಸ್ಟ್ಯಾಂಡ ಎದುರುಗಡೆ ಝೋಪಡಪಟ್ಟಿ ಕಲಬುರಗಿ  ಇವರನ್ನು ಬರಮಾಡಿಕೊಂಡು ಸದರಿ ರಾಡು ಮತ್ತು ಚಾಕುವನ್ನು ರಾತ್ರಿ ರಿಂದ ೭.೪೫ ಗಂಟೆಯಿಂದ ೮.೪೫ ಗಂಟೆಯವರೆಗೆ ರವೆಗೆ ಪಂಚರ ಸಮಕ್ಷಮದಲ್ಲಿ ಜಪ್ತಿ ಪಡಿಸಿಕೊಂಡಿದ್ದು, ಸದರಿಯವನ ವಿರುದ್ದ ಸೂಕ್ತ ಕ್ರಮಕ್ಕಾಗಿ ವರದಿ, ಜಪ್ತಿ ಪಂಚನಾಮೆಯೊಂದಿಗೆ ಮರಳಿ ಠಾಣೆಗೆ ಆರೋಪಿಯೊಂದಿಗೆ ೯.೧೫ ಪಿ.ಎಂಕ್ಕೆ ಠಾಣೆಗೆ ಬಂದು ಸದರಿ ಆರೋಪಿತನ ವಿರುದ್ದ ಮುಂದಿನ ಕಾನೂನು ಕ್ರಮಕ್ಕಾಗಿ ವರದಿ ನೀಡಿರುತ್ತೇನೆ. ಸದರಿ ವರದಿ ಮತ್ತು ಜಪ್ತಿ ಪಂಚನಾಮೆ ಹಾಗೂ ಆರೋಪಿಯೊಂದಿಗೆ ವರದಿ ಹಾಜರಪಡಿಸಿದ್ದನ್ನು ಸ್ವೀಕರಿಸಿಕೊಂಡು ಅದರ ಸಾರಾಂಶ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

Last Updated: 08-04-2022 02:03 PM Updated By: ADMIN


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

  • Copyright Policy
  • Hyperlinking Policy
  • Security Policy
  • Terms & Conditions
  • Privacy Policy
  • Help
  • Screen Reader Access
  • Guidelines

Visitors

  • Last Updated​ :
  • Visitors Counter :
  • Version :
CONTENT OWNED AND MAINTAINED BY : Kalaburagi City Police
Designed, Developed and Hosted by: Center for e-Governance - Web Portal, Government of Karnataka © 2022, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080