Feedback / Suggestions

ಬಹ್ಮಪೂರ ಪೊಲೀಸ್‌ ಠಾಣೆ :- ದಿನಾಂಕ: 02-02-2023 ರಂದು ಸಾಯಂಕಾಲ 6:00 ಕ್ಕೆ  ಫಿರ್ಯಾದಿದಾರರಾದ ಶ್ರೀ ಸಂಗಮನಾಥ ತಂದೆ ಚನ್ನಬಸಪ್ಪ ಮಡಿವಾಳ ವಯ:36 ವರ್ಷ ಜಾ:ಮಡಿವಾಳ ಉ:ಇಸ್ತ್ರಿ ಮಡುವುದು ಸಾ|| ಸರ್ಕಾರಿ ಶಾಲೆ ಹತ್ತಿರ ನಂದಿಕೂರ ತಾಂಡಾ ಕಲಬುರಗಿ ನಗರ ರವರು ಠಾಣೆಗೆ ಹಾಜರಾಗಿ ಪಿರ್ಯಾದಿ ನೀಡಿದರ ಸಾರಾಂಶವೆನೆಂದರೆ, ನನ್ನದೊಂದು ಸ್ವಂತ ಪ್ಯಾಷನ್ ಪ್ರೋ ಮೋಟಾರ್ ಸೈಕಲ್ ನಂ. KA-32-EJ-8088 ನೇದ್ದು ಇದ್ದು ಸದರಿ ಮೋಟಾರ್ ಸೈಕಲ್‌ವು ನನ್ನ ಹೆಸರಿನಲ್ಲಿರುತ್ತದೆ. ದಿನಾಂಕ: 01-02-2023 ರಂದು ಕಲಬುರಗಿ ನಗರದ ಪಂಡಿತ ರಂಗ ಮಂದಿರದಲ್ಲಿ ಶ್ರೀ ಮಡಿವಾಳ ಮಾಚಿದೇವರ ಜಯಂತೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಸದರಿ ಕಾರ್ಯಕ್ರಮಕ್ಕೆ ನಾನು ನನ್ನ ಮೋಟಾರ್ ಸೈಕಲನ್ನು ತೆಗೆದುಕೊಂಡು ಹೋಗಿ ಮದ್ಯಾಹ್ನ 12:00 ಗಂಟೆ ಸುಮಾರಿಗೆ ಪಂಡಿತ ರಂಗ ಮಂದಿರದ ಎಡಭಾಗದಲ್ಲಿರುವ ವಾಹನ ನಿಲ್ಲಿಸುವು ಸ್ಥಳದಲ್ಲಿ ನಿಲ್ಲಿಸಿ ಪಂಡಿತರಂಗ ಮಂದಿರದಲ್ಲಿ ನೆಡೆಯುತ್ತಿರುವ ಜಯಂತೋತ್ಸವ ಕಾರ್ಯಕ್ರಮಕ್ಕೆ ಹೋಗಿ ಅಲ್ಲಿ ಬಹಳಷ್ಟು ಜನ ನೇರೆದಿದ್ದು ಸದರಿ ಕಾರ್ಯಕ್ರಮವನ್ನು ಮುಗಿಸಿಕೊಂಡು ಮರಳಿ ಅದೇ ದಿನ ಮದ್ಯಾಹ್ನ 1:30 ಗಂಟೆಗೆ ಬಂದು ನಾನು ನಿಲ್ಲಿಸಿದ ಸ್ಥಳದಲ್ಲಿ ಮೋಟಾರ್ ಸೈಕಲ್ ನೋಡಲಾಗಿ ನನ್ನ ಮೋಟಾರ್ ಸೈಕಲ್ ಇರಲಿಲ್ಲಾ, ಕಾರಣ ಕಳುವಾದ ನನ್ನ ಮೋಟಾರ್ ಸೈಕಲನ್ನು ಪತ್ತೆ ಹಚ್ಚಿ ಸೂಕ್ತ ಕಾನೂನು ಕ್ರಮ ಕೈಕೊಳ್ಳಬೇಕು ಎಂದು ಫಿರ್ಯಾದಿ ಕೊಟ್ಟ ಅರ್ಜಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

ಚೌಕ್‌ ಪೊಲೀಸ್‌ ಠಾಣೆ :- ದಿನಾಂಕ: 02-02-2023 ರಂದು ಮಧ್ಯಾಹ್ನ 2:00  ಗಂಟೆಗೆ ಶ್ರೀಮತಿ ಲಕ್ಷ್ಮೀ ಗಂಡ ಸುಭಾಷ ದರಗೊಂಡ ಇವಳು ಚೌಕ ಪೊಲೀಸ ಠಾಣೆಗೆ ಪೋನ ಮಾಡಿ ದೂರು ಕೊಡುವುದಾಗಿ ತಿಳಿಸಿದ್ದರಿಂದ, ನಾನು, ಮತ್ತೆ ಜಿಲ್ಲಾ ಸರಕಾರಿ ಆಸ್ಪತ್ರೆ ಕಲಬುರಗಿಗೆ ಹೋದಾಗ, ಶ್ರೀಮತಿ ಲಕ್ಷ್ಮೀ ಗಂಡ ಸುಭಾಷ ದರಗೊಂಡ ಸಾ: ಕಲ್ಲಹಂಗರಗಾ ಗ್ರಾಮ ತಾ:ಜಿ: ಕಲಬುರಗಿ  ಇವಳು ತನ್ನದೊಂದು ಕನ್ನಡದಲ್ಲಿ ಗಣಕೀಕೃತ ಮಾಡಿಸಿದ ದೂರು ಕೊಟ್ಟಿದ್ದನ್ನು ಮಧ್ಯಾಹ್ನ 2-30  ಜಿಲ್ಲಾ ಸರಕಾರಿ ಆಸ್ಪತ್ರೆ ಕಲಬುರಗಿಯಲ್ಲಿ ಸ್ವೀಕರಿಸಿಕೊಂಡೆನು. ಸದರಿ ದೂರಿನ ಸಾರಾಂಶವೆನೆಂದೆರೆ, ನಿನ್ನೆ ದಿನಾಂಕ 01/02/2023 ರಂದು ಸಂಜೆ ಸಮಯದಲ್ಲಿ ಸಬ್ ಅರ್ಬನ ಪೊಲೀಸ ಠಾಣೆಗೆ ಹೋಗಿ ನಮ್ಮ ಭಾವ ಶಿವಾನಂದ ದರಗೊಂಡ ಇತನು ನಮಗೆ ಬರಬೇಕಾದ ಆಸ್ತಿ ಹಂಚಿ ಕೊಡುತ್ತಿಲ್ಲಾ ಅವನಿಗೆ ನಮಗೆ ಬರಬೇಕಾದ ಆಸ್ತಿ ಹಂಚಿ ಕೊಡಲು ಹೇಳಬೇಕೆಂದು ಅರ್ಜಿ ಕೊಟ್ಟಿದ್ದು ಇರುತ್ತದೆ. ಪೊಲೀಸ ಠಾಣೆಯಲ್ಲಿ ರಾಜಿ ಪಂಚಾಯತಿ ಮಾಡಿ ಮನೆಗೆ ಹೋಗುವಂತೆ ತಿಳಿ ಹೇಳಿದ್ದು, ರಾತ್ರಿ 9-30 ಗಂಟೆ ಸುಮಾರಿಗೆ ನಾನು ಮತ್ತು ನನ್ನ ಗಂಡ ಸುಭಾಷ ಇಬ್ಬರು ಊರಿಗೆ ಹೋಗುವ ಕುರಿತು ಬಂಬೂ ಬಜಾರ ಬಸಸ್ಟ್ಯಾಂಡ ಇನ್ನೂ ಸ್ವಲ್ಪ ಮುಂದೆ ಇರುವಂತೆ ಸುಣ್ಣದ ದುಕಾನ ಹತ್ತಿರ ಬಂದಾಗ, ಆಗ ನಮ್ಮ ಎದುರುನಿಂದ ನಮ್ಮ ಭಾವ ಶಿವಾನಂದ ತಂದೆ ಪಂಡಿತ ದರಗೊಂಡ ಮತ್ತು ಅವನ ಹೆಂಡತಿ ಲಲಿತಾ ಗಂಡ ಶಿವಾನಂದ ದರಗೊಂಡ, ಅತ್ತೆ ಮಾಹಾದೇವಿ ಗಂಡ ಪಂಡಿತ ದರಗೊಂಡ, ಮಕ್ಕಳಾದ ಮಲ್ಲಪ್ಪ ತಂದೆ ಶಿವಾನಂದ ದರಗೊಂಡ,  ನಾಗಪ್ಪ ತಂದೆ ಶಿವಾನಂದ ದರಗೊಂಡ  ಎಲ್ಲರೂ ಕೂಡಿಕೊಂಡು ಬಂದರು. ಅವರಲ್ಲಿ ನಮ್ಮ ಭಾವ ಶಿವಾನಂದ ಮತ್ತು ನಾಗಪ್ಪ ಇವರಿಬ್ಬರ ಕೈಯಲ್ಲಿ ಬಡಿಗೆಗಳು ಹಿಡಿದುಕೊಂಡಿದ್ದರು. ಶಿವಾನಂದ ಮತ್ತು ನಾಗಪ್ಪ, ಮಲ್ಲಪ್ಪಾ ಮೂವರು ನನಗೆ ಎ ರಂಡಿ ಮಗಳೇ ಮತ್ತು ನನ್ನ ಗಂಡನಿಗೆ ರಂಡಿ ಭೋಸಡಿ ಮಗನೇ  ಆಸ್ತಿ ಬೇಕು ಅಂತಾ ಪೊಲೀಸ ಠಾಣೆಗೆ ಹೋಗಿ ಅರ್ಜಿ ಕೊಡುತ್ತೀ ಅಂತಾ ಬೈಯ್ಯುತ್ತಾ  ಶಿವಾನಂದ ಇತನು ಕೈಯಲ್ಲಿದ್ದ ಬಡಿಗೆಯಿಂದ ನನ್ನ ಗಂಡ ಎಡ ತೊಡೆಗೆ, ತಲೆಗೆ, ಎಡ ಹೊಟ್ಟೆ ಮೇಲೆ ಹೊಡೆದು ಗುಪ್ತಗಾಯಗೊಳಿಸಿದನು. ಇದನ್ನು ನೋಡಿ ಜಗಳಾ ಬಿಡಿಸಲು ಹೋದ ನನಗೆ ನಾಗಪ್ಪ ಇತನು ತನ್ನ ಕೈಯಲ್ಲಿದ್ದ ಬಡಿಗೆಯಿಂದ ನನ್ನ ಬಲಗೈ ಮುಂಗೈ ಮೇಲೆ ಹೊಡೆದು ರಕ್ತಗಾಯಗೊಳಿಸಿದನು.  ಲಲಿತಾ ಮತ್ತು ಅತ್ತೆ ಮಾಹಾದೇವಿ ಇಬ್ಬರು ಕೂಡಿಕೊಂಡು ಕೈ ಮುಷ್ಟಿ ಮಾಡಿ ಬೆನಿನ್ನ ಹಿಡಿಕಿನ ಮೇಲೆ ಹೊಡೆ ಬಡಿ ಮಾಡಿದರು. ಮಲ್ಲಪ್ಪ ಮತ್ತು ನಾಗಪ್ಪ ಇವರಿಬ್ಬರು ನನಗೆ ಅವಮಾನ ಮಾಡುವ ಉದ್ದೇಶದಿಂದ ನನ್ನ ಸೀರೆ ಹಿಡಿದು ಎಳೆದಾಡಿ ಅವಮಾನ ಮಾಡಿದರು. ನಾನು ಮತ್ತು ನನ್ನ ಗಂಡ ಇಬ್ಬರು ಚೀರಾಡಲು ನಮ್ಮಿಬ್ಬರಿಗೆ ಹೊಡೆಯುವುದನ್ನು ಬಿಟ್ಟರು. ತದನಂತರ ಶಿವಾನಂದ ಮತ್ತು ಅವನ ಮಕ್ಕಳಾದ ನಾಗಪ್ಪ ಮಲ್ಲಪ್ಪ ಲಲಿತಾ ಇವರುಗಳು ನನಗೆ ಮತ್ತು ನನ್ನ ಗಂಡನಿಗೆ ಇನ್ನೊಮ್ಮೆ ಆಸ್ತಿ ಪಾಲು ಕೊಡು ಅಂತಾ  ಕೇಳಿದರೆ ಜೀವ ಸಹಿತ ಬಿಡುವುದಿಲ್ಲ ಎಂದು ಜೀವ ಭಯ ಹಾಕಿದರು. ನಂತರ ನಾನು ಮತ್ತು ನನ್ನ ಗಂಡ ಇಬ್ಬರು ಉಪಚಾರ ಕುರಿತು ಜಿಲ್ಲಾ ಸರಕಾರಿ ಆಸ್ಪತ್ರೆ ಕಲಬುರಗಿ ಹೋಗಿ ಸೇರಿಕೆಯಾಗಿರುತ್ತೇವೆ. ರಾತ್ರಿ ಚೌಕ ಪೊಲೀಸರು ಎಂಎ.ಲ್.ಸಿ. ವಿಚಾರಣೆಗಾಗಿ ಬಂದಾಗ ಬೆಳಿಗ್ಗೆ  ದೂರು ಕೊಡುವುದಾಗಿ ತಿಳಿಸಿರುತ್ತೇವೆ. ಈ ಕಾರಣದಿಂದ ದೂರು ಕೊಡಲು ತಡವಾಗಿರುತ್ತದೆ. ಕಾರಣ ನನಗೆ ಮತ್ತು ನನ್ನ ಗಂಡನಿಗೆ ಹೊಡೆ ಬಡೆ ಮಾಡಿದ 1)ಶಿವಾನಂದ ತಂದೆ ಪಂಡಿತ ದರಗೊಂಡ 2)ಲಲಿತಾ ಗಂಡ ಶಿವಾನಂದ ದರಗೊಂಡ 3)ಮಾಹಾದೇವಿ ಗಂಡ ಪಂಡಿತ ದರಗೊಂಡ 4)ಮಲ್ಲಪ್ಪ ತಂದೆ ಶಿವಾನಂದ ದರಗೊಂಡ 5) ನಾಗಪ್ಪ ತಂದೆ ಶಿವಾನಂದ ದರಗೊಂಡ ಸಾ: ಎಲ್ಲರೂ ಕಲ್ಲಹಂಗರಗಾ ಗ್ರಾಮ ಇವರುಗಳ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಫಿರ್ಯಾದಿ ಕೊಟ್ಟ ಅರ್ಜಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

ಸ್ಟೇಷನ್‌ ಬಜಾರ ಪೊಲೀಸ್‌ ಠಾಣೆ :- ದಿನಾಂಕ: 01-02-2023 ರಂದು ಸಂಜೆ 06:00 ಗಂಟೆಯಲ್ಲಿ ನಮ್ಮ ಕಛೇರಿಯ ಬೀಗವನ್ನು ಹಾಕಿಕೊಂಡು ನಾನು ಮತ್ತು ಜಗಜ್ಯೋತಿ ಗ್ರೂಪ್ ಡಿ ಇವರು ಇಬ್ಬರು ಕೂಡಿಕೊಂಡು ಮನೆಗೆ ಹೋಗಿರುತ್ತೇವೆ. ನಂತರ ದಿನಾಂಕ: 02-02-2023 ರಂದು ಬೆಳಿಗ್ಗೆ  09:30 ಗಂಟೆಯಲ್ಲಿ ನಮ್ಮ ಕಚೇರಿಗೆ ಜಗಜ್ಯೋತಿ ಗ್ರೂಪ್ ಡಿ ನೌಕರಳು ಬಂದು ನೋಡಿ ನನಗೆ ಪೋನ್ ಮಾಡಿ ಯಾರೋ ಕಳ್ಳರು ನಮ್ಮ ಕಛೇರಿ ಬೀಗವನ್ನು ಒಡೆದಿರುತ್ತಾರೆ ಎಂದು ಹೇಳಿದ್ದು. ನಂತರ ನಾನು ಮನೆಯಿಂದ ಕಛೇರಿಗೆ ಬಂದು ನೋಡಲಾಗಿ ಬಾಗೀಲ ಬೀಗ ಮುರುದಿದ್ದು, ನಂತರ ನಾನು ಕಛೇರಿ ಒಳಗಡೆ ಹೋಗಿ ನೋಡಿದಾಗ ನಮ್ಮ ಕಚೇರಿಯಲ್ಲಿ ಇಟ್ಟಿದ್ದ, ೧) ಒಂದು ಹೆಚ್.ಪಿ, ಕಂಪನಿಯ ಕಂಪ್ಯೂಟರ್ ಮತ್ತು ಸಿಪಿಯು ಅ,ಕಿ 18,000/-ರೂ ೨) 2.0 ಕೆ.ಬಿ ಯುಪಿಎಸ್, ಹಳೆ ಬ್ಯಾಟರಿಗಳು 8 ಅ.ಕಿ, 16,000/-ರೂ ೩) ಲ್ಯೂಮಿನಿಯಸ್ ಕಂಪನಿಯ ಯುಪಿಎಸ್ ಬ್ಯಾಟರಿ ಅ,ಕಿ 7812 ೪) ಲ್ಯೂಮಿನಿಯಸ್ ಕಂಪನಿಯ ಯುಪಿಎಸ್ ಮಷೀನ್ ಅ,ಕಿ 4500/-ರೂ ೫) ಎರಡು ಹಳೆ ಟೈಪ್ ಮಷೀನಗಳು ಅ,ಕಿ 8,000/-ರೂ ೬) ಏಲೆಕ್ಟ್ರಿಕಲ್ ಇಂಡಿಕ್ಸನ್ ಸ್ಟೋ ಅ,ಕಿ 4,000/-ರೂ  ಹೀಗೆ ಒಟ್ಟು 58,312/-ರೂ ಬೆಲೆ ಬಾಳೂವುದನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಎಂದು ಫಿರ್ಯಾದಿ ಕೊಟ್ಟ ಹೇಳಿಕೆ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

ಸಂಚಾರಿ ಪೊಲೀಸ್‌ ಠಾಣೆ-2 :- ದಿನಾಂಕ: 02-02-2023 ರಂದು ಬೆಳಿಗ್ಗೆ 11:30 ಗಂಟೆಗೆ ಶ್ರೀಮತಿ ರಾಣಮ್ಮ ಗಂಡ ದಿ.ಶರಣಪ್ಪಾ ಕಪನೂರ ವಯಃ 75 ವರ್ಷ ಜಾತಿಃ ಪ.ಜಾತಿ(ಹೊಲೆಯ) ಉಃ ಮನೆ ಕೆಲಸ ಮುಕ್ಕಾಃ ರಾಮಜೀ ನಗರ ನೂರಾನಿ ಮೊಹಲ್ಲಾ ಮಜ್ಜೀದ ಹತ್ತೀರ ರೋಜಾ(ಕೆ) ಕಲಬುರಗಿ ನಗರ ಇವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಕಂಪ್ಯೂಟರನಲ್ಲಿ ಟೈಪ್ ಮಾಡಿದ ಫಿರ್ಯಾದಿ ಅರ್ಜಿ ಹಾಜರು ಪಡಿಸಿದ್ದು ಸಾರಂಶವೆನೆಂದರೆ, ನನಗೆ ಸತೀಶ ಎಂಬ 35 ವರ್ಷದ ಮಗನಿದ್ದು, ಆತನು ಮನೆಗೆ ಛತ ಹಾಕುವ ಕಂಕರ ಮಶೀನ ಇಟ್ಟಿಕೊಂಡು ಕೆಲಸ ಮಾಡಿಕೊಂಡಿರುತ್ತಾನೆ. ಆತನಿಗೆ ಮೊದಲು ಆಶಾ ಎಂಬ ಹೆಂಡತಿ ಇದ್ದು, ಅವಳ ಹೊಟ್ಟೆಯಿಂದ ರಾಣೋಜಿ ಎಂಬ ಮಗನಿದ್ದು, ಅವಳು ತೀರಿಕೊಂಡ ನಂತರ ವರ್ಷಾ ಎಂಬುವಳನ್ನು ಲಗ್ನವಾಗಿದ್ದು, ಅವಳ ಹೊಟ್ಟೆಯಿಂದ ಐಶ್ವರ್ಯ 3 ವರ್ಷ, ಇನ್ನೊಂದು ನಾಲ್ಕು ತಿಂಗಳ ಹೆಣ್ಣು ಮಗು ಇದ್ದು, ಮಗನ ಹೆಸರಿನಿಂದ ಹಿರೊ ಸ್ಪ್ಲೆಂಡರ ಪ್ಲಸ್ ಮೋಟರ ಸೈಕಲ ನಂ. ಕೆಎ 32 ಇ.ಕ್ಯೂ 0233 ನೇದ್ದು ಇರುತ್ತದೆ. ನನಗು ಕೂಡಾ ಆರಾಮ ಇದರಕ್ಕೆ ಅನಾರೋಗ್ಯದಲ್ಲಿಯೇ ಇರುತ್ತಿರುತ್ತೆನೆ. ಹೀಗಿದ್ದು, ದಿನಾಂಕ 29/01/2023 ರಂದು ರವಿವಾರ ದಿವಸ ಮಗ ಸತೀಶ ಈತನು ಹೊರಗಡೆ ಕೆಲಸವಿರುತ್ತದೆಂದು ಈ ಮೋಟರ ಸೈಕಲ ತೆಗೆದುಕೊಂಡು ಹೋದನು. ಸಾಯಂಕಾಲ 4:00 ಗಂಟೆ ಸುಮಾರಿಗೆ ನಮ್ಮ ಪರಿಚಯದ ಪಾಂಡುರಂಗ ತಂದೆ ಕಲ್ಲಪ್ಪಾ ಮತ್ತು ಮಹೇಶ ತಂದೆ ಕಲ್ಯಾಣಿ ರವರು ನಮಗೆ ಫೋನ್ ಮಾಡಿ ಮಾಹಿತಿ ತಿಳಿಸಿದ್ದೆನೆಂದರೆ, ಈಗ ಮಧ್ಯಾಹ್ನ 3:00 ಗಂಟೆ ಸುಮಾರಿಗೆ ಸತೀಶ ಇವರು ಮೋಟರ ಸೈಕಲ ನಂ. ಕೆಎ 32 ಇ.ಕ್ಯೂ 0233 ಇದರ ಮೇಲೆ ಗಂಜ ರೋಡಿನ ಕಡೆಯಿಂದ ಹುಮ್ನಾಬಾದ ರಿಂಗರೋಡ ಕಡೆಗೆ ಬರುತ್ತಿರುವಾಗ ಆತನ ಹಿಂದಿನಿಂದ ವ್ಯಾಗನರ ಕಾರ ನಂ. ಕೆಎ 32 ಎನ್ 7206 ಇದರ ಚಾಲಕನು ಭಾರಿ ಅತಿವೇಗದಿಂದ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ಡಿ ಮಾರ್ಟದ ಎದುರುಗಡೆ ಮುಖ್ಯ ರಸ್ತೆಯ ಮೇಲೆ ಕಾರ ಚಾಲಕನು ಅಲಕ್ಷತನದಿಂದ ಮತ್ತು ಯಾವುದೆ ಸಿಗ್ನಲ್ ತೊರಿಸದೆ ಡಿ ಮಾರ್ಟಿನ ಒಳಗೆ ತಿರುಗಿಸಿಕೊಳ್ಳುವಾಗ ಸತೀಶನ ಮೋಟರ ಸೈಕಲಗೆ ಡಿಕ್ಕಿ ಹೊಡೆದಿದ್ದರಿಂದ ಆತನು ತಲೆಯ ಭಾಗಕ್ಕೆ ಭಾರಿಗಾಯವಾಗಿ, ಎರಡು ಕಿವಿಯಿಂದ, ಮೂಗಿನಿಂದ ರಕ್ತ ಬಂದು, ಬಲಭುಜಕ್ಕೆ ಭಾರಿಗಾಯವಾಗಿ ಬೆಹೋಶ ಸ್ಧಿತಿಯಲ್ಲಿ ಬಿದ್ದಿರುತ್ತಾನೆ. ಈತನಿಗೆ ಮಣ್ಣೂರ ಆಸ್ಪತ್ರೆಗೆ ತರುತ್ತಿರುತ್ತೆವೆ ಮತ್ತು ಕಾರ ಚಾಲಕನು ಕಾರನ್ನು ಬಿಟ್ಟು ಓಡಿ ಹೋಗಿರುತ್ತಾನೆ ಅಂತಾ ತಿಳಿಸಿದಕ್ಕೆ, ನಾನು ಗಾಬರಿಗೊಂಡು ನನ್ನ ಮೊಮ್ಮಗನಾದ ರಾಣೋಜಿ ಈತನೊಂದಿಗೆ ಮಣ್ಣೂರ ಆಸ್ಪತ್ರೆಗೆ ಹೋಗಿ ಮಗ ಸತೀಶನಿಗೆ ನೋಡಲಾಗಿ ಆತನಿಗೆ ಮೇಲಿನಂತೆ ಗಾಯವಾಗಿ ಬೆಹೋಶ ಸ್ಧಿತಿಯಲ್ಲಿದ್ದನು. ಕಳೆದ 2-3 ದಿವಸಗಳಿಂದ ನಾನು ಮತ್ತು ನನ್ನ ಮೊಮ್ಮಗ ರಾಣೋಜಿ ಮಗನ ಉಪಚಾರದಲ್ಲಿಯೇ ಆಸ್ಪತ್ರೆಯಲ್ಲಿ ಉಳಿದುಕೊಂಡಿದ್ದು, ಅಪಘಾತದ ಬಗ್ಗೆ ಕೇಸು ಮಾಡುವ ವಿಚಾರ ನಮಗೆ ಗೊತ್ತಿರದಕ್ಕೆ ಈಗ ತಡಮಾಡಿ ಈ ಅರ್ಜಿಯೊಂದಿಗೆ ಬಂದಿದ್ದು, ಅಪಘಾತ ಪಡಿಸಿದ ವ್ಯಾಗನರ ಕಾರ ನಂ. ಕೆಎ 32 ಎನ್ 7206 ನೇದ್ದರ ಚಾಲಕನ ಮೇಲೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು ಮತ್ತು ನನ್ನ ಮಗ ಆಸ್ಪತ್ರೆಯಲ್ಲಿ ಸಾವು ಮತ್ತು ಬದುಕಿನ ಮಧ್ಯೆ ತೀವ್ರ ತರದಲ್ಲಿ ಹೋರಾಟ ಮಾಡುತ್ತಿದ್ದು, ಕ್ರಮ ಕೈಗೊಂಡು ನ್ಯಾಯ ಕೊಡಿಸಲು ವಿನಂತಿ ಎಂದು ಫಿರ್ಯಾದಿ ಕೊಟ್ಟ ಅರ್ಜಿ ಸಾರಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಸಂಚಾರಿ ಪೊಲೀಸ್‌ ಠಾಣೆ-2 :- ದಿನಾಂಕ: 02/02/2023 ರಂದು ಮಧ್ಯಾಹ್ನ 12:40  ಗಂಟೆಗೆ ಶ್ರೀ.ವಿಶ್ವನಾಥ ತಂದೆ ಭೀಮಶ್ಯಾ ಇವರು ಖುದ್ದಾಗಿ ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಗಣೀಕಿಕೃತ ಮಾಡಿದ ದೂರು ಅರ್ಜಿ ಹಾಜರಪಡಿಸಿದ್ದು ಸದರಿ ಅರ್ಜಿಯ ಸಾರಂಶವೆನೆಂದರೆ, ದಿನಾಂಕ 01-02-2023 ರಂದು ಬೆಳಿಗ್ಗೆ ನಾನು ಮತ್ತು ನಮ್ಮೂರಿನ ಆನಂದ ತಂದೆ ಬಸವರಾಜ ಗದ್ದಿ ಇಬ್ಬರೂ ಕಲಬುರಗಿ ನೆಹರು ಗಂಜನಲ್ಲಿ ಸೆಂಟ್ರಿಂಗ ಕೆಲಸ ಕುರಿತು ನಮ್ಮೂರಿನಿಂದ ಮೋಟಾರ ಸೈಕಲ ಮೇಲೆ ಬಂದು ಸಾಯಂಕಾಲವರೆಗೆ ಕೆಲಸ ಮಾಡಿ ಕುಸನೂರ ಗ್ರಾಮದಲ್ಲಿ ನಮ್ಮಿಬ್ಬರ ಕೆಲಸ ಇರುವದರಿಂದ ನಾನು ಚಲಾಯಿಸುತ್ತಿರುವ ನನ್ನ ಮೋಟಾರ ಸೈಕಲ ನಂಬರ ಕೆಎ-32 ಇಎ-1644 ನೇದ್ದರ ಹಿಂದುಗಡೆ ಆನಂದ ಇತನನ್ನು ಕೂಡಿಸಿಕೊಂಡು ಹೊಸ ಆರ.ಟಿ.ಓ ಕ್ರಾಸ ಮುಖಾಂತರ ಹೋಗುವಾಗ ದಾರಿ ಮದ್ಯ ರೇಶ್ಮಿ ಕಾಲೇಜ ಎದುರಿನ ರೋಡ ಮೇಲೆ ಒಬ್ಬ ಮೋಟಾರ ಸೈಕಲ ಸವಾರನು ಕುಸನೂರ ಗ್ರಾಮದ ಕಡೆಯಿಂದ ಹೊ ಸ ಆರ.ಟಿ.ಓ ಕ್ರಾಸ ಕಡೆಗೆ ಹೋಗುವ ಕುರಿತು ತನ್ನ ಮೋಟಾರ ಸೈಕಲನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನನ್ನ ಮೋಟಾರ ಸೈಕಲಕ್ಕೆ ಎದುರಿನಿಂದ ಡಿಕ್ಕಿಪಡಿಸಿ ಅಪಘಾತ ಮಾಡಿದಾಗ ನಾನು ಮತ್ತು ಆನಂದ ಇಬ್ಬರೂ ಮೋಟಾರ ಸೈಕಲದೊಂದಿಗೆ ಕೆಳಗಡೆ ಬಿದ್ದೆವು. ಅಪಘಾತ ಪಡಿಸಿದ ಮೋಟಾರ ಸೈಕಲ ಸವಾರ ಕೂಡಾ ತನ್ನ ಮೋಟಾರ ಸೈಕಲದೊಂದಿಗೆ ಕೆಳಗಡೆ ಬಿದ್ದನ್ನು ಸದರ ಘಟನೆ ನೋಡಿದ ನಮ್ಮೂರಿನ ಸುನೀಲ ತಂದೆ ಭೀಮಶಾ ಗದ್ದಿ ಇತನು ಬಂದು ನನಗೆ ಮತ್ತು ಆನಂದ ಇಬ್ಬರನ್ನು ಎಬ್ಬಿಸಿ ರೋಡ ಪಕ್ಕದಲ್ಲಿ ಕೂಡಿಸಿದನು ನಾನು ಅಪಘಾತ ಪಡಿಸಿದ ಮೋಟಾರ ಸೈಕಲ ನಂಬರ ನೋಡಲು ಸದರಿ ವಾಹನಕ್ಕೆ ನಂಬರ ಇರಲಿಲ್ಲ ಸುನೀಲ ಮತ್ತು ನಾನು ಅದರ ಇಂಜಿನ ನಂಬರ ನೋಡಲು JLZCGH78251 ಹಳದಿ ಬಣ್ಣದ ಪಲ್ಸರ ಮೋಟಾರ ಸೈಕಲ ಇದ್ದಿತ್ತು. ಸದರ ಘಟನೆ ಜರುಗಿದಾಗ ರಾತ್ರಿ ಅಂದಾಜು 8-00 ಗಂಟೆ ಸಮಯವಾಗಿತ್ತು. ಸದರ ಘಟನೆಯಿಂದ ನನ್ನ ಎಡ ಗಾಲು ಮೊಳಕಾಲ ಕೆಳೆಗೆ ರಕ್ತಗಾಯ, ಎಡ ತೊಡೆಗೆ ರಕ್ತಗಾಯ ಹಾಗೂ ಬಲಗಾಲು ಮೊಳಕಾಲಿಗೆ ತರಚಿದಗಾಯವಾಗಿತ್ತು. ಆನಂದ ಇತನ ಬಲ ಹಣೆಗೆ ರಕ್ತಗಾಯ, ಎಡ ಹಣೆಗೆ ರಕ್ತಗಾಯ ಬಲಗೈ ಹೆಬ್ಬರಳಿಗೆ ಗುಪ್ತಗಾಯ, ಎಡಗಾಲು ಮೊಳಕಾಲ ಕೆಳೆಗೆ ರಕ್ತಗಾಯವಾಗಿತ್ತು. ಅಪಘಾತ ಪಡಿಸಿದ ಮೋಟಾರ ಸೈಕಲ ಸವಾರ ತನ್ನ ಮೋಟಾರ ಸೈಕಲ ಅಲ್ಲೇ ಬಿಟ್ಟು ಓಡಿ ಹೋದನು   ಅಪಘಾತ ಪಡಿಸಿದ ಮೋಟಾರ ಸೈಕಲ ಸವಾರನ ಹೆಸರು ಗೋತ್ತಾಗಿರುವುದಿಲ್ಲ ಅವರನ್ನು ನೋಡಿದ್ದು ಮುಂದೆ ನೋಡಿದ್ದಲ್ಲಿ ಗುರುತಿಸುತ್ತೇನೆ. ಹಳದಿ ಬಣ್ಣದ ಪಲ್ಸರ ಮೋಟಾರ ಸೈಕಲ ಇಂಜನ ನಂಬರ  JLZCGH78251  ನೇದ್ದರ ಸವಾರನು ತನ್ನ ವಾಹನವನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನಾನು ಚಲಾಯಿಸಿಕೊಂಡು ಹೋಗುತ್ತಿರುವ ನನ್ನ ಮೋಟಾರ್ ಸೈಕಲ್ ನಂಬರ ಕೆಎ-32/ಇಎ-1644 ನೇದ್ದಕ್ಕೆ ಡಿಕ್ಕಿಪಡಿಸಿ ಅಪಘಾತ ಮಾಡಿ ನನಗೆ ಸಾಧಾಗಾಯ ಹಾಗೂ ಆನಂದ ಇತನಿಗೆ ಭಾರಿ ಗೊಳಿಸಿ ತನ್ನ ಮೋಟಾರ ಸೈಕಲ ಸಮೇತ ಓಡಿಹೋಗಿದ್ದು ಆತನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಎಂದು ಫಿರ್ಯಾದಿ ಕೊಟ್ಟ ಹೇಳಿಕೆ  ಸಾರಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

ಸಂಚಾರಿ ಪೊಲೀಸ್‌ ಠಾಣೆ-2 :- ದಿನಾಂಕ: 02/02/2023 ರಂದು ಮದ್ಯಾಹ್ನ 2:05 ಗಂಟೆಗೆ ಖಾಸಗಿ ಮಣ್ಣೂರ ಆಸ್ಪತ್ರೆಯ ಸಿಬ್ಬಂದಿಯವರು ಠಾಣೆಗೆ ಪೋನ ಮಾಡಿ ಈರಪ್ಪಾ ಮತ್ತು ಈರಣ್ಣಾ ಇವರು ರಸ್ತೆ ಅಪಘಾತ ಹೊಂದಿ ಉಪಚಾರ ಕುರಿತು ಬಂದು ಸೇರಿಕೆಯಾಗಿರುತ್ತಾರೆ ಅಂತಾ ತಿಳಿಸಿದ್ದರಿಂದ ನಾನು ಆಸ್ಪತ್ರೆಗೆ ಬೇಟಿಕೊಟ್ಟು ಗಾಯಾಳು ಶ್ರೀ ಈರಪ್ಪಾ ಇವರನ್ನು ವಿಚಾರಿಸಲು ಅವರು ಕೊಟ್ಟ ಹೇಳಿಕೆ ಸಾರಂಶವೆನೆಂದರೆ ದಿನಾಂಕ 02-02-2023 ರಂದು ಬೆಳಿಗ್ಗೆ 9-15 ಗಂಟೆ ಸುಮಾರಿಗೆ ಹೊಳಕುಂದಾ ಗ್ರಾಮದಲ್ಲಿರುವ ಈರಣ್ಣಾ ಇವರ ಜಮೀನಿನಲ್ಲಿರುವ ಕುಸಬಿ ಬೆಳೆಗೆ ಎಣ್ಣೆ ಹೊಡೆಯುವ ಸಂಬಂದ ಈರಣ್ಣಾ ಇತನು ಚಲಾಯಿಸುತ್ತೀರುವ ಮೋಟಾರ ಸೈಕಲ ನಂಬರ ಕೆಎ-32/ಇವಾಯ್-6647 ನೇದ್ದರ ಹಿಂದುಗಡೆ ನಾನು ಕುಳಿತು ಕಲಬುರಗಿ ಹುಮನಾಬಾದ ವೃತ್ತದ ಮುಖಾಂತರವಾಗಿ ಹೊಳಕುಂದಾ ಗ್ರಾಮದ ಕಡೆಗೆ ಹೊಗುವಾಗ ದಾರಿ ಮದ್ಯ ಸ್ವಾಮಿ ಸಮಥ್ ದೇವಸ್ಥಾನದ ಎದುರಿನ ರೋಡ ಮೇಲೆ ಹಿಂದಿನಿಂದ ಜಗದೇವಪ್ಪಾ ಇತನು ಪ್ರತೀಭಾ ಇಂಟರ ನ್ಯಾಷನಲ ಶಾಲೆಯ ಬಸ್ಸ ನಂಬರ ಕೆಎ-32/ಸಿ-6815 ನೇದ್ದನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನಮ್ಮ ಮೋಟಾರ ಸೈಕಲಕ್ಕೆ ಡಿಕ್ಕಿಪಡಿಸಿ ಅಪಘಾತ ಮಾಡಿ ನನಗೆ ಸಾಧಾಗಾಯ ಹಾಗೂ ಈರಣ್ಣಾ ಇತನಿಗೆ ಭಾರಿಗಾಯಗೊಳಿಸಿದ್ದು ಶಾಲಾ ಬಸ್ ಚಾಲಕ ಜಗದೇವಪ್ಪಾ ಇತನ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಫಿರ್ಯಾದಿ ಕೊಟ್ಟ ಹೇಳಿಕೆ ಸಾರಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

ಸಂಚಾರಿ ಪೊಲೀಸ್‌ ಠಾಣೆ-2 :- ದಿನಾಂಕ: 02/02/2023 ರಂದು ಸಾಯಂಕಾಲ 5-00 ಗಂಟೆಗೆ ನಾನು ಸುಪರ ಮಾರ್ಕೆಟನಲ್ಲಿ ಪೆಟ್ರೊಲಿಂಗ ಕರ್ತವ್ಯದ ಮೇಲೆ ಇರುವಾಗ ಠಾಣಾ ಎಸ.ಹೆಚ್.ಓ ರವರು ನನಗೆ ಪೋನ ಮಾಡಿ ಅಸ್ಲಮ  ಮತ್ತು ಮಹ್ಮದ ಇಬ್ರಾಹಿಂ ಇವರು ರಸ್ತೆ ಅಪಘಾತ ಹೊಂದಿ ಉಪಚಾರ ಕುರಿತು ಖಾಸಗಿ ಪ್ರೈಮ ಆಸ್ಪತ್ರೆಗೆ ಬಂದು ಸೇರಿಕೆಯಾಗಿರುತ್ತಾರೆ ಅಂತಾ ನನಗೆ ತಿಳಿಸಿದ್ದರಿಂದ ನಾನು ನೇರವಾಗಿ ಆಸ್ಪತ್ರೆಗೆ ಬೇಟಿಕೊಟ್ಟು ಗಾಯಾಳು ಶ್ರೀ ಅಸ್ಲಮ ಇವರನ್ನು ವಿಚಾರಿಸಿ ಸಾಯಂಕಾಲ 5-15 ಗಂಟೆಯಿಂದ 6-15 ಗಂಟೆಯವರೆಗೆ ಹೇಳಿಕೆ ಪಡೆದುಕೊಂಡು ಮರಳಿ ಸಾಯಂಕಾಲ 6-30 ಗಂಟೆಗೆ ಠಾಣೆಗೆ ಬಂದು ಫಿರ್ಯಾದಿ ಹೇಳಿಕೆ ಸಾರಂಶವೆನೆಂದರೆ ದಿನಾಂಕ 01-02-2023 ರಂದು ರಾತ್ರಿ ಅಂದಾಜು 11-30 ಗಂಟೆ ಸುಮಾರಿಗೆ ನಾನು ಮತ್ತು ನನ್ನ ಗೆಳೆಯ ಮಹ್ಮದ ಇಬ್ರಾಹಿಂ ತಂದೆ ಗುಡುಸಾಬ ಇಬ್ಬರೂ ಹುಮನಾಬಾದ ರಿಂಗ ರೋಡ ಮತ್ತು ಸೇಡಂ ರಿಂಗ ರೋಡ ಮದ್ಯದಲ್ಲಿ ಬರುವ ಮಜಬಾನ ರೆಸ್ಟೊರೆಂಟ ಎದುರು ರೋಡ ಪಕ್ಕದಲ್ಲಿ ಮಾತನಾಡುತ್ತಾ ನಿಂತಿರುವಾಗ ಆಟೋರಿಕ್ಷಾ ನಂಬರ ಕೆಎ-32/ಡಿ-5096 ನೇದ್ದರ ಚಾಲಕ ಹುಮನಾಬಾದ ರಿಂಗ ರೋಡ ಕಡೆಯಿಂದ ಸೇಡಂ ರೋಡ ಕಡೆಗೆ ಹೋಗುವ ಕುರಿತು ತನ್ನ ವಾಹನವನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು  ರೋಡ ಪಕ್ಕದಲ್ಲಿ ನಿಂತಿರುವ ನನಗೆ ಮತ್ತು ಇಬ್ರಾಹಿಂ ಇವರಿಗೆ ಡಿಕ್ಕಿಪಡಿಸಿ ಅಪಘಾತ ಮಾಡಿ ನನಗೆ ಭಾರಿಗಾಯ ಹಾಗೂ ಇಬ್ರಾಹಿಂ ಇತನಿಗೆ ಸಾಧಾಗಾಯಗೊಳಿಸಿ ತನ್ನ ವಾಹನ  ಅಲ್ಲೆ ಬಿಟ್ಟು ಓಡಿ ಹೋಗಿದ್ದು ಆಟೋರಿಕ್ಷಾ ಚಾಲಕನ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಫಿರ್ಯಾದಿ ಕೊಟ್ಟ ಹೇಳಿಕೆ ಸಾರಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

 

ಸಂಚಾರಿ ಪೊಲೀಸ್‌ ಠಾಣೆ-2 :- ದಿನಾಂಕ: 02/02/2023 ರಂದು 05:45 ಪಿ.ಎಮ್ ಕ್ಕೆ ನಾನು ಸರಫ್ ಬಜಾರ ಏರಿಯಾದಲ್ಲಿ ಪೆಟ್ರೊಲಿಂಗನಲ್ಲಿದ್ದಾಗ ಠಾಣೆಯ SHO ಹೆಚ್.ಸಿ-123 ರವರು ನನಗೆ ಕಾಲ ಮಾಡಿ QP ಆಸ್ಪತ್ರೆಯಲ್ಲಿ ಫಾರುಕ್ ಖುರೇಶಿ ಮತ್ತು ಮಹಮ್ಮದ ಇಮ್ರಾನ್ ಎಂಬುವರ RTA MLC ವಸೂಲಾಗಿರುವುದೆಂಬುದಾಗಿ ಮತ್ತು ಆಸ್ಪತ್ರೆಗೆ ಹೋಗಿ ಕ್ರಮ ಕೈಕೊಳ್ಳುವಂತೆ ತಿಳಿಸಿದಕ್ಕೆ ನಾನು QP ಆಸ್ಪತ್ರೆಗೆ ಭೇಟಿ ಕೊಟ್ಟು ಗಾಯಾಳುದಾರರನ್ನು ನೋಡಿ MLC ಪಡೆದುಕೊಂಡು ವಿಚಾರಣೆ ಕಾಲಕ್ಕೆ ಶ್ರೀ  ಮಹಮ್ಮದ ಇಮ್ರಾನ ತಂದೆ ಮಹಮ್ಮದ ಅನ್ವರ ಮಿಯಾ ಶೇಖ ವಯಃ 28 ವರ್ಷ ಜಾತಿಃ ಮುಸ್ಲಿಂ ಉಃ ಪಿ.ಓ.ಪಿ ಕೆಲಸ ಸಾಃ ದೇವಲಗಲ್ಲಿ ಎಮ್.ಎಸ್.ಕೆ ಮಿಲ್ ಕಲಬುರಗಿ ಫೀರ್ಯಾದಿ ಅರ್ಜಿ ಸಲ್ಲಿಸಿದ್ದು ಸಾರಾಂಶವೆನೆಂದರೆ, ನಾನು ಬಿಲ್ಡಿಂಗದ ಪಿ.ಓ.ಪಿ ಕೆಲಸ ಮಾಡಿಕೊಂಡಿರುತ್ತೆನೆ. ನನ್ನಂತೆ ನನ್ನ ಗೆಳೆಯನಾದ ಫಾರುಕ ತಂದೆ ಮೆಹೆಬೂಬ ಖುರೇಷಿ ವಯಃ 23 ವರ್ಷ ಈತನು ಕೂಡಾ ನನ್ನ ಜೊತೆಯಲ್ಲಿ ಇದೆ ಕೆಲಸ ಮಾಡಿಕೊಂಡಿರುತ್ತಾನೆ. ಹೀಗಿದ್ದು, ಇಂದು ದಿನಾಂಕ 02/02/2023 ರಂದು ನಾನು ಮತ್ತು ನನ್ನ ಗೆಳೆಯ ಫಾರೂಕ ಇಬ್ಬರು ಕೂಡಿಕೊಂಡು ಆಳಂದ ಚಕ್ ಪೋಸ್ಟ ಹತ್ತೀರ ಇರುವ ರಾಮತೀರ್ಥ ಹತ್ತೀರದ ಏರಿಯಾದಲ್ಲಿ ಪಿ.ಓ.ಪಿ ಕೆಲಸಕ್ಕೆ ಹೋಗುವಾಗ ನನ್ನ ಪಲ್ಸರ ಮೋಟರ ಸೈಕಲ ನಂ. ಕೆಎ 32 ಇ.ವಾಯಿ 1052 ಇದರ ಮೇಲೆ ಮುಂಜಾನೆ ಹೋಗಿ ಮಧ್ಯಾಹ್ನದ ವರೆಗೆ ಕೆಲಸ ಮಾಡಿ ಮಧ್ಯಾಹ್ನ ಮರಳಿ ಮನಗೆ ಊಟಕ್ಕೆ ಹೋಗಬೇಕೆಂದು ಈ ಮೋಟರ ಸೈಕಲದ ಮೇಲೆ ನಾವಿಬ್ಬರು ಹೋಗುವಾಗ ನಾನೆ ಮೋಟರ ಸೈಕಲನ್ನು ನಡೆಸುತ್ತಿದ್ದೆ. ನನ್ನ ಹಿಂದೆ ಫಾರೂಕ ಖುರೇಷಿ ಈತನು ಕುಳಿತಿದ್ದು, ಮಧ್ಯಾಹ್ನ 2:00 ಗಂಟೆ ಆಗಿರಬಹುದು ರಾಮತೀರ್ಥ ಗುಡಿ ಕ್ರಾಸ್ ದಿಂದ ತಾಜ ಕಾಲೇಜದ ಮಧ್ಯದಲ್ಲಿ ರಿಂಗರೋಡ ಮೇಲೆ ಹೋಗುತ್ತಿದ್ದಾಗ, ನಮ್ಮ ಹಿಂದುಗಡೆ ರಿಂಗರೋಡಿನಿಂದ ಅಂದರೆ ಆಳಂದ ಚಕ್ ಪೋಸ್ಟ ಕಡೆಯಿಂದ ಒಂದು ಟಿಪ್ಪರ ನಂ. ಕೆಎ 50-0082 ನೇದ್ದರ ಚಾಲಕನು ಭಾರಿ ಅತಿವೇಗದಿಂದ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ನನಗೆ ಹಾರ್ನ ಹಾಕದೆ ನಮಗೆ ಸೈಡು ಹೊಡೆಯಲು ಹೋಗಿ ನಮ್ಮ ಮೋಟರ ಸೈಕಲಗೆ ಡಿಕ್ಕಿ ಹೊಡೆದ ಪರಿಣಾಮ ನಾವಿಬ್ಬರು ಮೋಟರ ಸೈಕಲ ಸಮೇತವಾಗಿ ಹಾರಿ ಬಿದ್ದಿದ್ದರಿಂದ ಇದರಿಂದ ನನಗೆ ಎಡಕೈ ಮಣಿಕಟ್ಟಿನ ಹತ್ತೀರ, ಎಡಗಾಲಿನ ಪಾದದ ಹತ್ತೀರ ಮತ್ತು ಬಲಬೆನ್ನಿಗೆ ಗುಪ್ತಗಾಯವಾಗಿದ್ದು, ಬಿದ್ದಿರುವ ಗೆಳೆಯ ಫಾರೂಕ ಖುರೇಷಿ ಈತನಿಗೆ ಬೆನ್ನಿನ ಛಪೆ ಮುರದಿದ್ದು, ಟೊಂಕಕ್ಕೆ ಭಾರಿಗಾಯವಾಗಿದ್ದು, ಬಲಗೈ ಬೆರಳುಗಳಿಗೆ ಭಾರಿಗಾಯವಾಗಿದ್ದು ಮತ್ತು ಪಕ್ಕೆಲುಬಿಗೆ ಕೂಡಾ ಗಾಯಗಳಾಗಿ, ತೊಡೆಯ ಭಾಗಕ್ಕೆ ರಕ್ತಗಾಯವಾಗಿದ್ದು, ಆತನು ಬೆಹೋಶ ಸ್ಧಿತಿಯಲ್ಲಿದ್ದು, ರೋಡಿನಿಂದ ಬರುವ ಮಹಮ್ಮದ ಯುನುಸ ತಂದೆ ಮಹಮ್ಮದ ಯುಸುಫ ಕಾರಪೆಂಟರ ಮತ್ತು ಸೈಯದ ಆತೀಫ ತಂದೆ ಸೈಯದ ಜಲಾಲ ಸುಬೆದಾರ ಇವರು ನೋಡಿದ್ದು, ಟಿಪ್ಪರ ಚಾಲಕನು ಇದನ್ನೆಲ್ಲಾ ಕಂಡು ಟಿಪ್ಪರ ಬಿಟ್ಟು ಓಡಿ ಹೊಗಿರುತ್ತಾನೆ. ಮುಂದೆ ನಮಗೆ ಸಹಾಯ ಮಾಡಿದ ಮಹಮ್ಮದ ಯುನುಸ ಮತ್ತು ಸೈಯದ ಆತೀಫ ಇವರು ಈ ಕ್ಯೂಪಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿರುತ್ತಾರೆ. ಫಾರೂಕ ಈತನಿಗೆ ಗಂಭೀರ ಸ್ಧಿತಿಯಲ್ಲಿ ಉಪಚಾರ ಪಡೆಯುತ್ತಿರುತ್ತಾನೆ. ಟಿಪ್ಪರ ಚಾಲಕನ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕೆಂದು ಫಿರ್ಯಾದಿ ಕೊಟ್ಟ ಅರ್ಜಿಯ ಸಾರಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

ಸಿ.ಇ.ಎನ್.‌ ಪೊಲೀಸ್‌ ಠಾಣೆ :- ದಿನಾಂಕ: 02-02-2023 ರಂದು 21:00 ಗಂಟೆಗೆ ಫಿರ್ಯಾದಿ ಕುಮಾರಿ ಪ್ರೀಯಾಂಕ ತಂದೆ ಹನಮಪ್ಪಾ ಮೋಖಾಶಿ ವಯ|| ೨೬ ವರ್ಷ ಜಾತಿ|| ಹಿಂದು ಗಾಣಿಗಾ ಉ|| ಇ,ಎಸ್,ಐ,ಸಿ ಎಮ್,ಟಿ,ಎಸ್‌ನಲ್ಲಿ ಕೆಲಸ ಸಾ|| ಕಟಗೇರಿ ತಾ|| ಬಾದಾಮಿ ಜಿಲ್ಲೆ|| ಬಾಗಲಕೋಟೆ ಸದ್ಯ|| ಆರ್ಶೀವಾದ ಪಿ,ಜಿ, ಕುಸನೂರ ರಸ್ತೆ, ಓಂ ನಗರ ಗೇಟ್, ಕಲಬುರಗಿ ಇದ್ದು. ನಾನು ದಿನಾಂಕ: ೦೪/೧೧/೨೦೨೨ ರಂದು ಬೆಳ್ಳಗ್ಗೆ ೭:೪೪ ಗಂಟೆಗೆ ಪಿ,ಜಿ,ಯ ರೂಮನಲ್ಲಿ ಇದ್ದಾಗ ನನ್ನ ಮೋಬೈಲ್‌ಗೆ ನನ್ನ ಇನಸ್ಟಾಗ್ರಾಂ ಖಾತೆಗೆ, ಪ್ರೀಯಾಂಕಾ ಎನ್ನುವ ಇನ್‌ಸ್ಟಾಗ್ರಾಂ ಖಾತೆಯಿಂದ ರೇಫರಲ್ ಮೇಸೇಜನಲ್ಲಿ 3 ತಾಸಿನಲ್ಲಿ ಹಣ ಹೂಡಿದರೆ ನಿಮಗೆ ಮರಳಿ ಹೆಚ್ಚು ಹಣವನ್ನು ಗಳಿಸಬಹುದು ಅಂತಾ ಇದ್ದ ಮೇಸೆಜನನ್ನು ನಾನು ನೋಡಿ ಇದರ ಬಗ್ಗೆ ಕೂತುಲಹವಾಗಿ ನಾನು ಮೇಸೆಜ್ ಮಾಡಿಕೊಂಡು ಮಾಹಿತಿಯನ್ನು ಪಡೆದುಕೊಂಡಿರುತ್ತೇನೆ. ಸ್ವಲ್ಪ ಸಮಯದ ನಂತರ natasha_kim07 ಈ ಇನ್‌ಸ್ಟಾಗ್ರಾಂ ಖಾತೆಯಿಂದ ಒಂದು ಮೇಸೆಜ್ ಬಂದಿದ್ದು 30,000/- ಸಾವಿರ ರೂಪಾಯಿಗಳನ್ನು ಕಳುಹಿಸಿದರೆ, ಅದಕ್ಕೆ ಮರಳಿ 2,90,000/- ನಿಮಗೆ ಮರಳಿ ನೀಡುವುದಾಗಿ ಮೇಸೆಜನಲ್ಲಿ ಇರುತ್ತದೆ.  ಇದನ್ನು ನಾನು ನೋಡಿ ನಾನು ಕೂಡ ಹಣವನ್ನು ಹೂಡಿದರೆ ಹಣವನ್ನು ಗಳಿಸಬಹುದು ಅಂತಾ ತಿಳಿದುಕೊಂಡು ನಂತರ ಅದೆ ಇನ್‌ಸ್ಟಾಗ್ರಾಂ ಖಾತೆಯಿಂದ ಒಂದು ICICI BANK ಖಾತೆ ಸಂಖ್ಯೆ: 130101510467 IFSC CODE NO: ICIC0000392 BRACH NAME : ಅಲಿಪೂರ ಕಲ್ಕತ್ತಾ ಅಂತಾ ಇದ್ದ ಖಾತೆಗೆ ಹಣ ಜಮಾ ಮಾಡಲು ತಿಳಿಸಿದ ಮೇರೆಗೆ ನಾನು ನನ್ನ ಗೋಗಲ್ ಪೇ ನಂ: 8884730658 ನೇದ್ದರಿಂದ ನನ್ನ ಬ್ಯಾಂಕ್ ಆಫ್ ಬರೋಡಾ ಬ್ಯಾಂಕ ಖಾತೆ ಸಂಖ್ಯೆ: 37550100003936 ನೇದ್ದರಿಂದ 30,000/- ರೂಪಾಯಿ ಹಣವನ್ನು ನಾನು ಮೊದಲು ಜಮಾ ಮಾಡಿರುತ್ತೇನೆ ನಂತರ ಅವರಿಗೆ ಲಾಭದ ಹಣವನ್ನು ಕೇಳಲು ಅವರು ಇನ್ನೂ ನೀನು 60,000/-ರೂಪಾಯಿಗಳನ್ನು ಹಾಕಿದರೆ ನಿಮಗೆ ಒಟ್ಟು 2,90,000/- ಹಣವನ್ನು ಹಾಕುತ್ತೇವೆ ಅಂತಾ ಮೇಸೆಜನಲ್ಲಿ ಹೇಳಿದಾಗ ನಾನು ಮತ್ತೆ ಅದೇ ಖಾತೆಗೆ 60,000/-ಹಣವನ್ನು ಜಮಾ ಮಾಡಿರುತ್ತೇನೆ. ನಂತರ ನಾನು ನನ್ನ ಲಾಭದ ಹಣವನ್ನು ಕೇಳಲು ಅವರು ಪದೆ ಪದೆ ಇನ್ನೂ ಹಣ ಹಾಕು ಅಂತಾ ಹೇಳಿಕೊಂಡು ನನ್ನ ಹಣವನ್ನು ಮರಳಿ ನೀಡಲು ವಿಳಂಬ ಮಾಡುತ್ತಿದ್ದದ್ದನ್ನು ಕಂಡು ನನಗೆ ಸಂಶೆಯ ಬಂದು  ನಾನು ಸೈಬರ್ ಹೆಲ್ಪ ಲೈನ್ ನಂ: 1930 ನೇದಕ್ಕೆ ಸಮಯ ೯-೩೩ ಗಂಟೆಗೆ ಪೋನ್ ಮಾಡಿ ನನಗೆ ಆದ ಫ್ರಾಡ್ ಬಗ್ಗೆ ಹೇಳಿ ಕಂಪ್ಲೇಂಟ್ ಮಾಡಿರುತ್ತೇನೆ. ಅದರ ಕಂಪ್ಲೇಂಟ್ ನಂ: 31611220017345 ಅಂತಾ ನನಗೆ ಕಂಪ್ಲೇಂಟನ ಪಿ,ಡಿ,ಎಫ್‌ನ್ನು ಕಳುಹಿಸಿರುತ್ತಾರೆ. ನಂತರ ನಾನು ಸೈಬರ್ ಪೊಲೀಸ್ ಠಾಣೆಗೆ ಹೋಗಿ ಅಂತಾ ಮೇಸೆಜ್ ಬಂದಿದ್ದು ಅದನ್ನು ನೋಡಿ ನಾನು ಪೊಲೀಸ್ ಠಾಣೆಗೆ ಹೋಗಿ ನನಗೆ ಆದ ಮೊಸದ ಬಗ್ಗೆ ತಿಳಿಸಿದಾಗ ಅವರು ಕೂಡಾ ಕಂಪ್ಲೇಂಟ್ ಎಲ್,ಪಿ,ಟಿ ನಂ: 226/2022 ಅಂತಾ ನೀಡಿರುತ್ತಾರೆ. ಕಾರಣ ಇಂದು ದಿನಾಂಕ: ೦೨/೦೨/೨೦೨೩ ರಂದು ಸಿ,ಇ,ಎನ್ ಠಾಣೆಗೆ ಬಂದು ಪ್ರದೀಪ್ ದಾಸ ಬ್ಯಾಂಕ ಖಾತೆಗೆ 90,000/- ರೂಪಾಯಿಗಳನ್ನು ನನಗೆ ಮೋಸದಿಂದ ನಂಬಿಸಿ ಹಣ ಜಮಾ ಮಾಡಿಸಿಕೊಂಡು ನನಗೆ ಮರಳಿ ನೀಡದೆ ಮೋಸ ಮಾಡಿದವನ ವಿರುದ್ದ ಕಾನೂನು ಕ್ರಮ ಕೈಗೊಳ್ಳುಬೇಕೆಂದು ಫಿರ್ಯಾದಿ ಕೊಟ್ಟ ಅರ್ಜಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

ವಿಶ್ವವಿದ್ಯಾಲಯ ಪೊಲೀಸ ಠಾಣೆ :- ದಿನಾಂಕ: 01-02-2023 ರಂದು ರಾತ್ರಿ 10:30 ರಿಂದ ರಾತ್ರಿ 11:00 ಗಂಟೆಯ ಅವಧಿಯಲ್ಲಿ ನಾನು ನಮ್ಮ ಮನೆಯ ಮುಂದೆ ಇದ್ದಾಗ ಆಗ ನನ್ನ ಮಗ ಮಲ್ಲಿಕಾರ್ಜುನ ಈತನು ನಮ್ಮ ಮನೆಯ ಮುಂದೆ ಬಂದು ಏ ಬೋಸಡಿ ಮಗನೇ ಅಣ್ಣಾಯ್ಯ ಬ್ಯಾಂಕಿಗೆ ಸಾಲ ಕಟ್ಟುವುದಿದೆ ನನಗೆ ಹಣ ಕೊಡು ಅಂತಾ ಬಯ್ಯುತ್ತಿದ್ದಾಗ ನಾನು ಅವನಿಗೆ ಯಾಕೇ ಬಯ್ಯುತ್ತಿದ್ದಿಯಾ ಅಂತಾ ಅಂದಿದ್ದಕ್ಕೆ ಅಲ್ಲಿಯೇ ಬಿದ್ದ ಕಲ್ಲಿನಿಂದ ಹೊಡೆದು ಗಾಯ ಮಾಡಿರುತ್ತಾರೆ ಎಂದು ಫಿರ್ಯಾದಿ ಕೊಟ್ಟ ಹೇಳಿಕೆ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

ವಿಶ್ವವಿದ್ಯಾಲಯ ಪೊಲೀಸ ಠಾಣೆ :- ದಿನಾಂಕ: 02-02-2023 ರಂದು 12:45 ಪಿ.ಎಮ್  ಸುಮಾರಿಗ ಸದರಿ ಆರೋಪಿತನು ತನಗೆ ನೀಡಿದ ಹಿಡಿದು ಕೊಂಡು ಗೋಪಾಲ ಫ್ಯಾಕ್ಟರಿ ಹತ್ತಿರ ತನಗೆ ನೀಡಿದ ಲೈಸನ್ಸ ಹೊಂದಿದ ಗನ್ನನ್ನು ಹಿಡಿದ ತಮ್ಮ ಫ್ಯಾಕ್ಟರಿಯ ಮಾಲಿಕರ ಜೊತೆ ಗಾರ್ಡ ಕರ್ತವ್ಯ ನಿರ್ವಹಿಸುತ್ತಿದ್ದಾಗ ನಂತರ ಲೈಸನ್ಸ ನೀಡಲು ಹೇಳಿದಾಗ ಆತನು ಯಾದಗಿರಿಯಲ್ಲಿ ಇರುತ್ತದೆ ಮತ್ತು ಲೈಸನ್ಸ ಅನ್ನು ವ್ಯಾಪ್ತಿಯ ಮೀರಿ ಉಪಯೋಗಿಸಿದ ಕಾರಣ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

Last Updated: 04-02-2023 12:31 PM Updated By: ADMIN


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

 • Copyright Policy
 • Hyperlinking Policy
 • Security Policy
 • Terms & Conditions
 • Privacy Policy
 • Help
 • Screen Reader Access
 • Guidelines

Visitors

 • Last Updated​ :
 • Visitors Counter :
 • Version :
CONTENT OWNED AND MAINTAINED BY : Kalaburagi City Police
Designed, Developed and Hosted by: Center for e-Governance - Web Portal, Government of Karnataka © 2024, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080