ಅಭಿಪ್ರಾಯ / ಸಲಹೆಗಳು

ಸಬ್ ಅರ್ಬನ್ ಪೊಲೀಸ್ ಠಾಣೆ :-  ದಿನಾಂಕ ೦೨/೦೨/೨೦೨೨ ರಂದು  ಪಿರ್ಯಾದಿ‌ ಯುನೈಟೆಡ್ ಆಸ್ಪತ್ರೆಯಲ್ಲಿ ಕನ್ನಡದಲ್ಲಿ ಟೈಪ ಮಾಡಿದ ದೂರು ಸಲ್ಲಿಸಿದೆನೆಂದರೆ ಈ ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ನಾನು ಶ್ರೀ ಅಂಬರೀಶ ತಂದೆ ಶಾಂತಪ್ಪ ಬೀದನೂರ ಸಾ:ಇಂದಿರಾ ನಗರ, ಕಲಬುರಗಿ ತಮ್ಮಲ್ಲಿ ಈ ದೂರಿನ ಮೂಲಕ ಕೇಳಿಕೊಳ್ಳುವದೇನೆಂದರೆ, ನನ್ನ ತಾಯಿಯಾದ ಶ್ರೀಮತಿ ಮಲ್ಕಮ್ಮ ಗಂಡ ಶಾಂತಪ್ಪ ಬೀದನೂರ ಹೆಸರಿನಲ್ಲಿ ೧೯೮೮ ರಲ್ಲಿ ಕಪನೂರ ಗ್ರಾಮದ ರ‍್ವೆ ನಂ ೧೪೦ ರಲ್ಲಿ ಪ್ಲಾಟ ನಂ ೧೪೯ ಖರೀದಿಸಿದ್ದು, ಮಾಹಾನಗರ ಪಾಲಿಕೆ ಕಲಬುರಗಿಯಲ್ಲಿ ನನ್ನ ತಾಯಿಯ ಹೆಸರಿಗೆ ಮುಟೇಶನ್ ಕೂಡ ಆಗಿರುತ್ತದೆ. ಮತ್ತು ಸದರಿ ನಿವೇಶನ ಖರೀದಿ ಮಾಡಿದ್ದಾಗಿನಿಂದ ಕಬ್ಜೆಯಲಿಲ ನಾವೇ ಇದ್ದೇವೆ. ಸದರಿ ಜಾಗದಲ್ಲಿ ನನ್ನ ತಾಯಿಯ ಹೆಸರಿನಲ್ಲಿರುವ ಒಂದು ಬರ‍್ಡ ಕೂಡ ನೇಟ್ಟಿದ್ದು , ಸದರಿ ಬರ‍್ಡ ದಿನಾಂಕ ೨೪/೦೧/೨೦೨೨ ರಂದು ಯಾರೋ ಅಪರಿಚಿತರು ರಾತ್ರಿ ಸಮಯದಲ್ಲಿ ಬರ‍್ಡ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಇದೇ ನಿವೇಶನದಲ್ಲಿ ನಾವು ಒಂದು ೧೦ ಘಿ ೧೫ ವಿಸ್ತರ‍್ಣದ ಒಂದು ಟೀನ್ ಶೆಡ್ ರೂಮ್ ನರ‍್ಮಿಸಿದ್ದು, ಇದನ್ನು ಕೂಡ ದಿನಾಂಕ ೩೦/೦೧/೨೦೨೨ ರ ಮದ್ಯಾಹ್ನ ೧೨:೦೦ ಸುಮಾರಿಗೆ ಯಾರೋ ಅಪರಿಚಿತ ೧೫ ರಿಂದ ೨೦ ಜನ ಕೂಡಿಕೊಂಡು ನಾವು ಕಟ್ಟಿದ ಟೀನ್ ಶೆಡ್ನ್ನು ಕೆಡವುತಿದ್ದರು. ಆಗ ನಾನು ಅವರಿಗೆ ಹೆದರಿ ಗ್ರಾಮೀಣ ಪೊಲೀಸ ಠಾಣೆಗೆ ಬಂದು ಮೌಖಿಕವಾಗಿ ಸದರಿ ವಿಷಯ ತಿಳಿಸಿದಾಗ ಗ್ರಾಮೀಣ  ಪೊಲೀಸರು ಬಂದು ತಡೆದಿದ್ದಾರೆ. ಪೊಲೀರ‍್ರು ಬಂದು ನಂತರ ಅಲ್ಲಿಂದ ಎಲ್ಲರೂ ಓಡಿ ಹೋಗಿದ್ದಾರೆ. ದಿನಾಂಕ ೩೧/೦೧/೨೦೨೨ ರಂದು ಸಾಯಾಂಕಾಲ  ೭:೦೦ ಗಂಟೆ ಸುಮಾರಿಗೆ ನಾನು ಮತ್ತು ನನ್ನ ಗೆಳೆಯ ಹೆಮಂತ ಇಬ್ಬರೂ ಕೂಡಿ ಕಪನೂರಿನ ನಮ್ಮ ನಿವೇಶನದಲ್ಲಿದ್ದಾಗ ಒಂದು ಇನೋವಾ ವಾಹನ ಸಂ: ಕೆಎ ೩೨ ೭೮೭೮ ವಾಹನದಲ್ಲಿ ಜಗನ್ನಾಥ ಪಟ್ಟಣಶೇಟ್ಟಿ ಮತ್ತು ಅವನ ಜೋತೆ ೩ ಜನ ಸಹಚರರು ನಮ್ಮ ಜಾಗದಲ್ಲಿ ಬಂದು ಜಗನ್ನಾಥ ಪಟ್ಟಣಶೆಟ್ಟಿ ಇತನು ನನಗೆ ಏ ಅಂಬರಾಯ ಹೊಲೆಯ ಜಾತಿ ಸೂಳೆ ಮಗನೆ, ನಿಮ್ಮ ಟೀನ್ ಶೆಡ್ ಮನೆ ನಾನೇ ಕೆಡವಿ ಹಾಕಿದ್ದೇನೆ. ನೀನೂ ನನಗೆ ಏನು ಕಿತ್ತುಕೊಳ್ಳಲು ಆಗುವುದಿಲ್ಲ.  ನನ್ನ ವಿರುದ್ದ ಪೊಲೀಸ್ ಠಾಣೆಗೆ ದೂರು ಕೊಟ್ಟರು ನನಗೆ ಯಾರೂ ಏನು ಮಾಡುವುದಿಲ್ಲ ಎಂದು ಹೇಳಿ ನನ್ನ ಬಲ ಕಪಾಳಕ್ಕೆ ಹೊಡೆದು ನನ್ನ ಹತ್ತಿರ ಇರುವ ಹರಿತವಾದ ಚಾಕುವಿನಿಂದ ನನ್ನ ಎಡಗೈ ರಟ್ಟೆಗೆ ಚುಚ್ಚಿದನು ಆಗ ನನಗೆ ರಕ್ತಸ್ರಾವವಾಗತೊಡಗಿತು. ಮತ್ತು ಅವನ ಜೋತೆ ಬಂದ ೩ ಜನ ಸಹಚರರಿಗೆ ಈ ಹೊಲೆಯ ಸೂಳೆ ಮಗನಿಗೆ ಇವತ್ತು ಜೀವಂತ ಬಿಡಬಾರದು ಇವನನ್ನು ಹೊಡೆಯಿರಿ ಎಂದಾಗ ಅವರು ಮೂರು ಜನ ನನ್ನ ಎದೆಗೆ ಮತ್ತು ಬೆನ್ನಿಗೆ ಒದ್ದರು. ಇದರಿಂದ ನನಗೆ ಒಳಪೆಟ್ಟಾಗಿ ಗುಪ್ತಗಾಯಗಳಾಗಿವೆ. ಅಷ್ಟಕ್ಕೆ ಸುಮ್ಮನಿರದೆ ಅವರಲ್ಲೊಬ್ಬ ತನ್ನ ಹತ್ತಿರ ಇದ್ದ ಕಬ್ಬಿಣದ ರಾಡನಿಂದ ನನ್ನ ತಲೆ ಮೇಲೆ ಹೊಡೆಯಲಯ ಎತ್ತಿದ್ದಾಗ ನಾನು ಅದರಿಂದ ತಪ್ಪಿಸಿಕೊಂಡೆನು ನನಗೆ ಹೊಡೆಯುವುದುನ್ನು ನೋಡಿ ಭಯದಿಂದ ನನ್ನ ಗೆಳೆಯ ಹೇಮಂತನು ರಿಂಗ್ ರೋಡ ಮುಖ್ಯ ರಸ್ತೆಯಲ್ಲಿ ನಿಂತು ಯಾರಾದರೂ ಕಾಪಾಡಿ ಎಂದು ಚಿರಾಡುತ್ತಿದ್ದಾಗ ಮುಖ್ಯ ರಸ್ತೆಯಲ್ಲಿ ಹೋಗುತ್ತಿರುವಾಗ ರಾಜು ಲೇಂಗಟಿ ಮತ್ತು ನಿತೀನ ಇವರು ಬಂದು ನಮ್ಮ ಜಗಳ ಬಿಡಿಸಿದರು. ಆದರೂ ಕೂಡ ಜಗನ್ನಾಥ ಪಟ್ಟಣಶೆಟ್ಟಿ ಇತನು ಸುಮ್ಮನೆ ಹೋಗದೆ ಮಗನೇ ಇವತ್ತು ಬದುಕಿದೆ ಮುಂದೆ ನಿನಗೆ ಜೀವಂತ ಬಿಡುವುದಿಲ್ಲವೆದು ಜೀವಭಯ ಹಾಕಿ ಹೋಗಿರುತ್ತಾರೆ. ಆಗ ನಾನು ನನಗೆ ರಕ್ತಗಾಯವಾಗಿರುವುದರಿಂದ ರಾತ್ರಿ ೯:೦೦ ಗಂಟೆ ಸುಮಾರಿಗೆ ಯುನೈಟೆಡ್ ಆಸ್ಪತ್ರೆಕಲಬುರಗಿಯಲ್ಲಿ ಚಿಕಿತ್ಸೆ ಪಡೆಯಲು ದಾಖಲಾಗಿದ್ದೇನೆ.  ಆದ್ದರಿಂದ ಪರಿಶಿಷ್ಟ ಜಾತಿ ಹೊಲೆಯ ಜಾತಿಗೆ ಸೇರಿದ ನನಗೆ ಅವಾಚ್ಯ ಶೆಬ್ದಗಳೀಂದ ಬೈದು ಜಾತಿ ನಿಂದನೆ ಮಾಡಿ ಹರಿತವಾದ ಚಾಕು ಮತ್ತು ಕಬ್ಬಿಣದ ರಾಡಿನಿಂದ ಹೊಡೆದು ಹಲ್ಲೆ ಮಾಡಿ ಗಾಯಗೊಳಿಸಿ ಜೀವದ ಬೇದರಿಕೆ ಹಾಕಿದ ಜಗನ್ನಾಥ ಪಟ್ಟಣಶೇಟ್ಟಿ ಮತ್ತು ಇತನ ೩ ಜನ ಸಹಚರರ ವಿರುದ್ದ ಕಾನೂನು ಕ್ರಮಕೈಗೊಂಡು ನನಗೆ ರಕ್ಷಣೆ ನೀಡಿ ನ್ಯಾಯ ಒದಗಿಸಿಕೊಡಬೇಕೆಂದು ಈ ದೂರಿನ ಮೂಲಕ ತಮ್ಮಲ್ಲಿ ಕೇಳಿಕೊಳ್ಳುತ್ತೆನೆ ಅಂತಾ ಕೊಟ್ಟ ಸದರಿ ದೂರಿನ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

ಇತ್ತೀಚಿನ ನವೀಕರಣ​ : 03-02-2022 11:36 AM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080